ಅವರು ಹೀಗಿದ್ದರು - 9

ಅವರು ಹೀಗಿದ್ದರು – 9

ಚಂದ್ರಶೇಖರ ಭಂಡಾರಿ - 0 Comment
Issue Date : 04.02.2014

ಅರಕಲಿ ನಾರಾಯಣ ‘ಮಿಸ್ಟರ್ ನಾರಾಯಣ್, ಒಂದ್ನಿಮಿಷ. ನೀವು ಆರೆಸ್ಸೆಸ್‌ನವರೇನ್ರಿ?’‘ಹೌದ್ಸರ್’‘ಸರಿ ಮತ್ತೆ. ನನ್ನ ಅಂದಾಜು ಕರೆಕ್ಟಾಯ್ತು.’‘ಯಾಕ್ಸರ್? ಏನಂದಾಜು?’‘ನೋಡಿ, ಇದನ್ನೇ ನಾನು ತುಂಬ ದಿನದಿಂದ ನಿಮ್ಮನ್ನು ಕೇಳ್ಬೇಕೆಂದಿದ್ದೆ. ನೀವು ಒಮ್ಮೆಯೂ ಹೇಳಿದ್ದ ಸಮಯದಲ್ಲಿ ತಪ್ಪಿಲ್ಲ. ನಿಮ್ಮ ಕೆಲಸದ ರೀತಿ, ನಿಮ್ಮ ರಿಪೋರ್ಟು, ನಿಮ್ಮ ಅಕೌಂಟ್ಸ್ ಎಲ್ಲವನ್ನೂ ಅಬ್ಸರ್ವ್ ಮಾಡ್ತಾ ಇದ್ದೆ. ನನಗನಿಸ್ತಿತ್ತು. ನೀವು ಆರೆಸ್ಸೆಸ್‌ನವರೇ ಇರ್ಬೇಕು ಎಂದು. ನನ್ನ ಊಹೆ ಸರಿಯಾಯ್ತು. ಅದಕ್ಕಾಗಿ ಮಾತು ಕೇಳ್ದೆ.’ಈ ಸಂವಾದ (ಇದೇ ಶಬ್ದಗಳೆಂದಲ್ಲ. ಆದರೆ ಸುಮಾರಾಗಿ ಇದೇ ರೀತೀ ನಡೆದಿದ್ದುದು ಸುಮಾರು ಐದು […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ – 9

ಚಂದ್ರಶೇಖರ ಭಂಡಾರಿ - 0 Comment
Issue Date : 31.01.2014

ನೂತನ ವಿಭಾಗ ವ್ಯವಸ್ಥೆ40ರ ದಶಕದಲ್ಲಿ ಕರ್ನಾಟಕದಲ್ಲಿ ಸಂಘದ ಕಾರ್ಯ ಆರಂಭವಾದಾಗಿನಿಂದ ಇಸವಿ 1952ರ ವರೆಗೆ ಕೆಲಸ ಬೆಳೆದು ಬಂದುದು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ. 1953ರ ಸಂಘ ಶಿಕ್ಷಾ ವರ್ಗದ ನಂತರ ಸಂಘದ ಕಾರ್ಯರಚನೆಯಲ್ಲಿ ನಿಜಾಮನ ಸಂಸ್ಥಾನವು ಭಾಷೆಗನುಗುಣವಾಗಿ ವಿಭಜಿತವಾಯಿತು. ಅದರಲ್ಲಿ ಬೀದರ, ಗುಲಬರ್ಗ ಮತ್ತು ರಾಯಚೂರು ಈ ಮೂರು ಕನ್ನಡದ ಜಿಲ್ಲೆಗಳು ಕರ್ನಾಟಕದ ಭಾಗವಾದವು. ಈಗಿರುವಂತಹ ಉತ್ತರ ಮತ್ತು ದಕ್ಷಿಣ ಇವೆರಡೂ ಪ್ರಾಂತಗಳು ಕೂಡಿರುವಂತಹ ಏಕೀಕೃತ ಕರ್ನಾಟಕ ಆಗ ರಚಿತವಾಯಿತು. ಅದರ ಜತೆಯಲ್ಲೇ ಮೊದಲ ಬಾರಿಗೆ […]

ಅವರು ಹೀಗಿದ್ದರು - 8

ಅವರು ಹೀಗಿದ್ದರು – 8

ಚಂದ್ರಶೇಖರ ಭಂಡಾರಿ - 0 Comment
Issue Date : 30.01.2014

   ಕಾಕಾಸಾಹೇಬ ಕುಲಕರ್ಣಿ 1956ರಲ್ಲಿ ಅಪ್ಪಾಸಾಹೇಬ ಜಿಗಜಿನ್ನಿಯವರ ದೇಹಾವಸಾನದ ನಂತರ ರಿಕ್ತಗೊಂಡ ಕರ್ನಾಟಕ ಪ್ರಾಂತ ಸಂಘಚಾಲಕ ಸ್ಥಾನವನ್ನು ವಹಿಸಿದವರು – ತಮ್ಮ ಆಪ್ತ ವಲಯದಲ್ಲಿ ಕಾಕಾಸಾಹೇಬ ಎಂದು ಸುಪರಿಚಿತರಾಗಿದ್ದ- ಡಾ.ಕೃಷ್ಣಾಜಿ ರಾಮಚಂದ್ರ (ಕೃ.ರಾ.) ಕುಲಕರ್ಣಿಯವರು. ಧಾರವಾಡ ಜಿಲ್ಲೆಯ ಉಮಚಗಿಯವರಾದ ಅವರು ಎಲ್.ಎಂ.ಎಂಡ್.ಎಸ್. ಪದವಿ ಪ್ರಾಪ್ತಿಯ ನಂತರ ರೋಣ ತಾಲೂಕಿನ ಗಜೇಂದ್ರಗಡದಲ್ಲಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದವರು. ಒಮ್ಮೆ ಅಲ್ಲಿನ ಸಂಘಶಾಖೆಯ ಸಮಾರಂಭದ ಅಧ್ಯಕ್ಷತೆ ವಹಿಸಿದ ಅವರಿಗೆ ಆ ಸಂದರ್ಭದಲ್ಲೇ ಸಂಘ ಮನಸೆರೆ ಹಿಡಿಯಿತು. ಮುಂದೆ ಆಗಿನ ಪ್ರಾಂತ ಪ್ರಚಾರಕ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-8

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-8

ಚಂದ್ರಶೇಖರ ಭಂಡಾರಿ - 0 Comment
Issue Date : 17.01.2014

ಸರಕಾರದ ವೆಚ್ಚದಲ್ಲಿ ಸಂಘದ ಶಿಬಿರ ಸೆರೆಮನೆಯ ನಾಲ್ಕು ಗೋಡೆಗಳ ನಡುವೆ ಸತ್ಯಾಗ್ರಹಿಗಳು ಶಾರೀರಿಕವಾಗಿ ಬಂಧಿತರಾಗಿದ್ದುದೇನೋ ನಿಜವೇ.  ಆದರೆ ಮನಸ್ಸಿನ ಭಾವನೆಗಳನ್ನು ಬಂಧಿಸುವ ಸಾಮರ್ಥ್ಯ ಯಾವ ಗೋಡೆಗಳಿಗೆ ಇದೆ? ಸಂಘದ ಮೇಲೆ ನಿಷೇಧವಿದ್ದುದು ಹೊರಗಡೆ ಮಾತ್ರ.  ಆದರೆ ಸೆರೆಮನೆಗಳ ಒಳಗೆ ಇದ್ದುದು ಸಂಘಮಯ ವಾತಾವರಣವೇ.  ಅಲ್ಲಿ ಯಾರೂ ಭೂಗತರಲ್ಲವಲ್ಲ.  ಹೀಗಾಗಿ ‘ದಕ್ಷ’ , ‘ಆರಮ’, ‘ನಮಸ್ತೇ ಸದಾ ವತ್ಸಲೇ’ ಮೊದಲಾದ ಸಂಘಶಾಖೆಯ ಗರ್ಜನೆಗಳು ನಿಷೇಧದ ದಿನಗಳಲ್ಲಿ ಕಾರಾಗೃಹಗಳ ಆವರಣಗಳಲ್ಲೆ ಮೊಳಗಿದವು.  ನಾನಾ ವಿಧ ಸಾಮಾಜಿಕ, ರಾಜಕೀಯ ವಿಷಯಗಳ ಕುರಿತು […]

ಅವರು ಹೀಗಿದ್ದರು - 7

ಅವರು ಹೀಗಿದ್ದರು – 7

ಚಂದ್ರಶೇಖರ ಭಂಡಾರಿ - 0 Comment
Issue Date : 15.01.2014

ಪ್ರಭಾಕರ ಘಾಟೆ ಕಾರ್ಮಿಕ ಕ್ಷೇತ್ರದಲ್ಲಿ ಸಂಘದ ವಿಚಾರದಿಂದ ಪ್ರೇರಿತವಾಗಿ ನಡೆಯುತ್ತಿರುವಂತಹ ಸಂಘಟನೆ ಭಾರತೀಯ ಮಜದೂರ ಸಂಘ (ಭಾಮಸಂ). ಅದು ಆರಂಭವಾದುದು 1955ರಲ್ಲಿ ಭೋಪಾಲದಲ್ಲಿ. ಆದರೆ ಮಂಗಳೂರಲ್ಲಿ 1945ರಲ್ಲಿ ಸ್ವಯಂಸೇವಕರು ಗೇರುಬೀಜ ಶ್ರಮಿಕ ಸಂಘವನ್ನು ಆರಂಭಿಸಿದ್ದರು. ಅದನ್ನು ಹುಟ್ಟು ಹಾಕಿದವರು. ಪ್ರಕಾರ ಘಾಟೆಯವರು. ಹೀಗಾಗಿ ಸಂಘದ ಹಿನ್ನೆಲೆಯವರಾಗಿ ಶ್ರಮಿಕ ರಂಗದಲ್ಲಿ ಪಾದಾರ್ಪಣೆ ಮಾಡಿದವರಲ್ಲಿ ಪ್ರಭಾಕರ ಘಾಟೆಯವರೇ ಮೊದಲಿಗರೆಂದಲ್ಲಿ ಖಂಡಿತಕ್ಕೂ ತಪ್ಪಲ್ಲ.1927ರಲ್ಲಿ ಸೂರತ್‌ನಲ್ಲಿ ಜನಿಸಿದ ಅವರು ಮನೆತನದ ಏಕಮಾತ್ರ ಪುತ್ರ. ವಯಸ್ಸು ಇನ್ನೂ ಎರಡು ವರ್ಷ ಆಗಿರುವಾಗಲೇ ಪಿತೃವಿಯೋಗದ ಆಘಾತ […]

ಕರ್ನಾಟಕದ ರಾಷ್ಟ್ರೀಯ ಸ್ವಯಂಸೇವಕ ಸಂಘ – 7

ಚಂದ್ರಶೇಖರ ಭಂಡಾರಿ - 0 Comment
Issue Date : 10.01.2013

ಹೊಸ ರೂಪ ತಾಳಿದ ಸಂಘಕಾರ್ಯ  ನಿಷೇಧದ ಕಾರಣ ಸಂಘವನ್ನು ವಿಸರ್ಜಿಸಿರುವುದಾಗಿ ಶ್ರೀ ಗುರೂಜಿಯವರು ಆದೇಶ ಹೊರಡಿಸಿದ್ದ ಕಾರಣ, ಆಗ ಶಾಖಾರೂಪದ ಚಟುವಟಿಕೆಗಳನ್ನು ನಡೆಸಲಾಗುತ್ತಿರಲಿಲ್ಲ.  ಆದರೆ ಸಂಘದ ಶಕ್ತಿಯು ವಿಶೇಷತೆಯಾಗಿರುವ ನಿತ್ಯ ಸೇರುವಿಕೆಯನ್ನು ಸ್ವಯಂಸೇವಕರು ಬಿಡುವುದಾದರೂ ಹೇಗೆ ಸಾಧ್ಯ?  ಅದಕ್ಕಾಗಿ ಕ್ರಿಕೆಟ್, ವಾಲಿಬಾಲ್‍ನಂತಹ ಶಾರೀರಿಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ವಾಚನಾಲಯದಂತಹ ಬೌದ್ಧಿಕ  ಚಟುವಟಿಕೆಗಳು ಹುಟ್ಟಿಕೊಂಡವು. ಅವಂತೂ ಕಾನೂನಿನ ಚೌಕಟ್ಟಿನೊಳಗೆ ಬಹಿರಂಗವಾಗಿಯೇ ನಡೆಸಬಹುದಾದ ಚಟುವಟಿಕೆಗಳು.  ಹೀಗಾಗಿ ಆಕ್ಷೇಪಿಸುವಂತಿರಲಿಲ್ಲ.  ದೊಡ್ಡ ನಗರಗಳಲ್ಲಿ ಸಾಪ್ತಾಹಿಕ ಏಕತ್ರಿಕರಣಗಳು (ಅನೇಕ ಉಪಶಾಖೆಗಳ ಒಟ್ಟುಕೂಡುವಿಕೆ) ವಾರಕ್ಕೊಮ್ಮೆ ಅಲ್ಲಲ್ಲಿನ […]

ಹೀಗಿದ್ದರು ಅವರು - 6

ಹೀಗಿದ್ದರು ಅವರು – 6

ಚಂದ್ರಶೇಖರ ಭಂಡಾರಿ - 0 Comment
Issue Date : 08.01.2014

ಅಪ್ಪಾಸಾಹೇಬ ಜಿಗಜಿನ್ನಿ  ಬೆಳಗಾವಿಯ ಖ್ಯಾತಿವೆತ್ತ ವಕೀಲ ಆದರಣೀಯ ಶ್ರೀ ವಿರೂಪಾಕ್ಷಪ್ಪ ಗುರುಬಸಪ್ಪ ಜಿಗಜಿನ್ನಿ ಅವರು – ಅಪ್ಪಾಸಾಹೇಬ ಎಂಬ ಹೆಸರಲ್ಲಿ ಹೆಚ್ಚು ಪರಿಚಿತರು – ಕರ್ನಾಟಕದ ಮೊತ್ತ ಮೊದಲ ಪ್ರಾಂತ ಸಂಘಚಾಲಕರಾಗಿದ್ದವರು. ಸ್ವಾತಂತ್ರ್ಯಪೂರ್ವದಲ್ಲಿ ಬೆಳಗಾವಿ ನಗರದ ಒಂದು ಪ್ರದೇಶ ಶಾಸಕೀಯವಾಗಿ ಸಾಂಗಲಿ ಸಂಸ್ಥಾನಕ್ಕೆ ಸೇರಿತ್ತು. ಅಪ್ಪಾ ಸಾಹೇಬರು ಈ ಸಂಸ್ಥಾನದ ಅಂದಿನ ಶಾಸನ ಸಭೆಯ ಅಧ್ಯಕ್ಷರೂ ಆಗಿದ್ದರು. ಅವರು ಸಂಘದ ಕರ್ನಾಟಕ ಪ್ರಾಂತ ಸಂಘಚಾಲಕರೂ ಆಗಿ ಹೊಣೆ ವಹಿಸಿದುದು ವ್ಯಕ್ತಿಗತವಾಗಿ ಅವರ ವರ್ಚಸ್ಸಿನ ತೂಕ ವರ್ಧಿಸಿದಲ್ಲಿ, ಆಗ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-6

ಚಂದ್ರಶೇಖರ ಭಂಡಾರಿ - 0 Comment
Issue Date : 03.01.2014

ಮೊದಲ ನಿಷೇಧದ ರಾಹುಗ್ರಹಣ ಅದೇ ವರ್ಷ ಜನವರಿ 30ರಂದು ದೆಹಲಿಯಲ್ಲಿನ ತಮ್ಮ ನಿತ್ಯದ ಪ್ರಾರ್ಥನಾ ಸಭೆಯಲ್ಲಿ ಮಹಾತ್ಮಾ ಗಾಂಧೀಜಿಯವರು ಹಂತಕನೊಬ್ಬನ ಗುಂಡಿಗೆ ಬಲಿಯಾದರು.  ಇಡೀ ದೇಶಕ್ಕೆ ಸಿಡಿಲೆರಗಿದಂತಹ ಆಘಾತ ಅದು.  ಯಶವಂತಪುರದ ತರುಣ ಮತ್ತು ಬಾಲ ಶಿಬಿರಗಳು ಮುಗಿದು ಹತ್ತು ದಿನಗಳು ಸಹ ಆಗಿರಲಿಲ್ಲ.  ಡೇರಿಗಳನ್ನು ಕಳಚುವ ಕೆಲಸ ಇನ್ನೂ ಪೂರ್ಣಗೊಂಡಿರಲಿಲ್ಲ.  ಆ ಕೆಲಸವನ್ನು ತ್ವರಿತಗೊಳಿಸುವುದರಲ್ಲಿ ಸೂರ್ಯನಾರಾಯಣರಾಯರು ಪೂರಾ ಮಗ್ನರಾಗಿದ್ದರು.  ಫೆಬ್ರವರಿ 3 ರಂದು ಅವರು ಆ ಕೆಲಸದಲ್ಲಿ ತೊಡಗಿದ್ದಾಗಲೇ ಪೊಲೀಸ್ ಅಧಿಕಾರಿಗಳಿಂದ ಅವರಿಗೆ  ‘ಬುಲಾವ್ ‘ […]

ಅವರು ಹೀಗಿದ್ದರು – 5

ಚಂದ್ರಶೇಖರ ಭಂಡಾರಿ - 0 Comment
Issue Date : 03.01.2014

ಅಜಿತಕುಮಾರ ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ಜನಿಸಿದ ಅಜಿತಕುಮಾರರ ವ್ಯಕ್ತಿತ್ವ ಬಹುಮುಖ ಪ್ರತಿಭೆಯದು. ಇಲೆಕ್ಟ್ರಿಕಲ್‌ ಮತ್ತು ಮೆಕ್ಯಾನಿಕಲ್‌ ವಿಷಯಗಳಲ್ಲಿ ಚಿನ್ನದ ಪದಕ ಸಹಿತ ಬಿ.ಇ. ಪದವಿ ಪ್ರಾ ಪ್ತಿಸಿಕೊಂಡವರು ಅವರು. ಅಪೇಕ್ಷೆ ಪಟ್ಟಿದ್ದಲ್ಲಿ ಕೈತುಂಬ ಸಂಪಾದನೆಯ ಉಚ್ಚಸಾಕರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅವರಿಗೆ ಕಷ್ಟವೇನಿರಲಿಲ್ಲ. ಆದರೆ 1957ರಲ್ಲಿ ಆಗ ಅವರ ವಯಸ್ಸು ಇನ್ನೂ 23 ಮಾತ್ರ – ಸಂಘದ ಪ್ರಚಾರಕರಾಗಿ ರಾಷ್ಟ್ರಸಮರ್ಪಿತ ಬದುಕಿನಲ್ಲಿ ಸಾರ್ಥಕ್ಯ ಕಂಡರು. ಸತತ ಮೂವತ್ತಮೂರು ವರ್ಷಗಳ ಕಾಲ ಈ ದಾರಿಯಲ್ಲಿ ನಡೆದ ಅವರು ಬೆಂಗಳೂರು ನಗರ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-5

ಚಂದ್ರಶೇಖರ ಭಂಡಾರಿ - 0 Comment
Issue Date : 27.12.2013

ಇನ್ನಿತರ ಪ್ರಚಾರಕರು1941ರಲ್ಲಿ ಕರ್ನಾಟಕದಲ್ಲಿ ಇದ್ದ ಪ್ರಚಾರಕರು ಇಬ್ಬರೇ. ಯಾದವರಾಯರು ಮತ್ತು ಅಣ್ಣಾಶೇಷರು ಮಾತ್ರ. 1942ರ ನಂತರ ನಾಗಪುರ ಮತ್ತು ಮಹಾರಾಷ್ಟ್ರದ ಇತರ ಕಡೆಗಳಿಂದ ಇನ್ನೂ ಅನೇಕ ಕಾರ್ಯಕರ್ತರು ಪ್ರಚಾರಕರಾಗಿ ಕರ್ನಾಟಕಕ್ಕೆ ಬಂದರು. ಡಾ. ಮನೋಹರ್ ಸಾಲ್ಪೇಕರ್, ವಸಂತರಾವ್ ಸಿರ್ಸೀಕರ್, ಹಣಮಂತರಾವ್ ಗದ್ರೆ, ಮನೋಹರ್ ಗುರ್ಜರ್, ದತ್ತಾ ಪಾಂಡೆ, ಮಾಧವರಾವ್ ನಾತು, ನೀಲಕಂಠ ಜಾಮದಾರ್, ಬಾಳು ಗೋರ್ವಾಡ್ ಕರ್, ಗೋಪಾಲ ಬಾಕ್ರೆ, ನಾರಾಯಣ ಹೊನ್ನಪ್ ಮೊದಲಾದವರು, ಮುಂದಿನ 2-3 ವರ್ಷಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರಕರಾಗಿ ದುಡಿದರು. ಇವರೆಲ್ಲರ […]