ಅವರು ಹೀಗಿದ್ದರು – 4

ಚಂದ್ರಶೇಖರ ಭಂಡಾರಿ - 0 Comment
Issue Date : 27.12.2013

ಗೋಪಾಲ ಬಾಕ್ರೆ ಸಂಘಕಾರ್ಯದ ವಿಸ್ತಾರಕ್ಕೆ ಹೆಚ್ಚಿನ ರಭಸ ನೀಡುವ ಸಲುವಾಗಿ ನೂರಾರು ಪ್ರಚಾರಕರು ಬೇಕಾಗಿದ್ದಾರೆಂಬ ಶ್ರೀ ಗುರೂಜಿಯವರ ಕರೆಗೆ ಸ್ಪಂದಿಸಿ 40ರ ದಶಕದ ಆರಂಭದಲ್ಲಿ ನಾಗಪುರದಿಂದ ಹೊರಟಿದ್ದ ಕಾರ್ಯಕರ್ತರ ತಂಡದಲ್ಲಿದ್ದವರಲ್ಲಿ ಗೋಪಾಲ ಬಾಕ್ರೆ ಸಹ ಒಬ್ಬರು. ಮೆಟ್ರಿಕ್ ಮುಗಿದ ನಂತರ ಎಲ್.ಎಂ.ಪಿ.ಗಾಗಿ ವ್ಯಾಸಂಗ ಮಾಡುತ್ತಿದ್ದ ಅವರ ವಯಸ್ಸು ಆಗ ಇನ್ನೂ ಇಪ್ಪತ್ತರ ಆಜೂಬಾಜು. ಶಿಕ್ಷಣಕ್ಕೆ ಅರ್ಧದಲ್ಲೆ ವಿದಾಯ ಬಯಸಿ ಸಂಘದ ಪ್ರಚಾರಕರಾದ ಬಗ್ಗೆ ಮನೆಯವರಿಂದ ತೀವ್ರ ವಿರೋಧವಿದ್ದುದು ಸಹಜ. ಆದರೆ ಮನದಲ್ಲಿನ ಧ್ಯೇಯವಾದದ ಪ್ರಖರ ತುಡಿತ ಆ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-4

ಚಂದ್ರಶೇಖರ ಭಂಡಾರಿ - 0 Comment
Issue Date : 20.12.2013

ಕಾರ್ಯದ ದೃಢತೆಗಾಗಿ ಹಿರಿಯರು ಆದರೆ ವಿದೇಶಿ ಆಳರಸರು ಸಂಘದ ಚಟುವಟಿಕೆಗಳ ಮೇಲೆ ಹದ್ದುಗಣ್ಣಿರಿಸಿದ್ದ ಎರಡನೇ ವಿಶ್ವಯುದ್ಧದ ದಿನಗಳು ಅವು.  ಆಗ ಸಂಘವು ಸರ್ವಸಾಮಾನ್ಯ ಜನರಿಗೂ ಅಪರಿಚಿತ.  ಹೀಗಾಗಿ ಸಮಾಜದಲ್ಲಿನ ಗೌರವಾನ್ವಿತ ಹಿರಿಯರ ಶ್ರೀರಕ್ಷೆಯೂ ಸಂಘಕಾರ್ಯಕ್ಕೆ ಅತ್ಯಗತ್ಯವಾಇತ್ತು.  ಅದಕ್ಕಾಗಿ ಗದಗಿನ ಮಾಮಾ ಖರೆ, ಡಾ. ಜೋಗಳೇಕರ, ಕುಂದಗೋಳದ ತಾತ್ಯಾ ಸಾಹೇಬ ಕಾಳೆ, ಹುಬ್ಬಳ್ಳಿಯ ಡಾ. ಗಣಪತಿ ರಾವ್ ವಝೆ, ಧಾರವಾಡದ ಹರಭಾವು ಫಡ್ಕೆ, ಗಜೇಂದ್ರಗಢದ ಡಾ. ಕಾಕಾ ಸಾಹೇಬ ಕುಲಕರ್ಣಿ, ಜಮಖಂಡಿಯ ದಾದಾಸಾಹೇಬ ಪೇಂಡ್ಸೆ ಮೊದಲಾದವರನ್ನು ತನ್ನ ಮಾರ್ಗದರ್ಶಕರೆಂಬಂತೆ […]

ಅವರು ಹೀಗಿದ್ದರು – 3

ಚಂದ್ರಶೇಖರ ಭಂಡಾರಿ - 0 Comment
Issue Date : 13.11.2013

  ಜಗನ್ನಾಥ ರಾವ್ ಜೋಶಿ  ಕನ್ನಡ, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ಈ ನಾಲ್ಕೂ ಭಾಷೆಗಳಲ್ಲಿ – ಭಾಷಣ ಮತ್ತು ಸಂಭಾಷಣದಲ್ಲೂ – ನಿರರ್ಗಳ ವಾಗ್ಮಿಯಾಗಿದ್ದು ರಾಜಕೀಯ ವಲಯದಲ್ಲಿ ‘ಕರ್ನಾಟಕ ಕೇಸರಿ’ ಎಂದು ಸುಪರಿಚಿತರಾಗಿದ್ದವರು ಜಗನ್ನಾಥ ರಾವ್ ಜೋಶಿಯವರು. ಧಾರವಾಡ ಜಿಲ್ಲೆಯ ನರಗುಂದ ಅವರ ಹುಟ್ಟೂರು. ಅಲ್ಲಿ ಪ್ರಾಥಮಿಕ ಶಿಕ್ಷಣದ ನಂತರ ಮುಂದೆ ಬಿ.ಎ. (ಆನರ್ಸ್‌)ವರೆಗೆ ವಿದ್ಯಾಭ್ಯಾಸ ಪುಣೆಯಲ್ಲಿ. ಅಲ್ಲಿರುವಾಗಲೇ ಸಂಘದಲ್ಲಿ ಪ್ರವೇಶ. ತುಸು ಕಾಲ ಮಿಲಿಟರಿ ಅಕೌಂಟ್ಸ್ ವಿಭಾಗದಲ್ಲಿ ನೌಕರಿ. ಬೆಳಗಾವಿಗೆ ವರ್ಗಾವಣೆಯಾದಾಗ ಅಲ್ಲಿ ಯಾದವರಾವ್‌ಜಿ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-3

ಚಂದ್ರಶೇಖರ ಭಂಡಾರಿ - 0 Comment
Issue Date : 12.12.2013

ಹೈದರಾಬಾದ್ ಸಂಸ್ಥಾನದಲ್ಲಿ ನಿಜಾಮನ ರಾಜ್ಯವಾಗಿದ್ದ ಹೈದರಾಬಾದ್ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸಂಘ ಕಾರ್ಯಕ್ಕೆ ಪೂರಾ ಪ್ರತಿಕೂಲವಾದ ವಾತಾವರಣವಿತ್ತು.  ಆ ದಿನಗಳ ಕಾರ್ಯದ ವ್ಯವಸ್ಥೆಯಲ್ಲಿ ಕರ್ನಾಟಕದ ಜತೆ ಹೈದರಾಬಾದ್ ಸಂಸ್ಥಾನವೂ ಯಾದವರಾವ್ ಜೋಶಿ ಅವರ ಜವಾಬ್ದಾರಿಗೆ ಒಳಗಾಗಿತ್ತು.  ಸಂಘ ಕಾರ್ಯವಿರಲಿ, ಯಾವುದೇ ವಿಧದ ಹಿಂದೂ ಕಾರ್ಯವೂ ಸಂಸ್ಥಾನದಲ್ಲಿ ಆಗ ತಲೆ ಎತ್ತುವಂತಿರಲಿಲ್ಲ.  ಅಂತಹ ವಾತಾವರಣದಲ್ಲೂ ಆಡಳಿತದ ಮುಂದೆ ಆಗ ತೊಡೆ ತಟ್ಟಿ ನಿಂತಿದ್ದ ಹಿಂದೂ ಕಾರ್ಯವೆಂದರೆ ಆರ್ಯ ಸಮಾಜವೊಂದೇ. ಸಂಘದ ಕೆಲಸಕ್ಕೆ ಅಷ್ಟಿಷ್ಟು ನೆರವು ಮತ್ತು ಪ್ರೋತ್ಸಾಹ ದೊರೆಯುತ್ತಿದ್ದುದು […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ-2

ಚಂದ್ರಶೇಖರ ಭಂಡಾರಿ - 0 Comment
Issue Date : 05.12.2013

ಕರಾವಳಿ ಜಿಲ್ಲೆಯಲ್ಲಿ ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಸಂಘದ ಕಾರ್ಯವಾರಂಭವಾದುದು ಬೇರೊಂದು ಕತೆ.  ಆಗ  ಆ ಜಿಲ್ಲೆ ರಾಜಕೀಯವಾಗಿ ಮದ್ರಾಸ ಪ್ರಾಂತದ ಭಾಗವಾಗಿತ್ತು.  ಮೂಲತಃ ಈ ಜಿಲ್ಲೆಯವರಾಗಿದ್ದ ಶ್ರೀ ಸಂಜೀವ ಕಾಮತ್ ಎಂಬ ಮಹನೀಯರೊಬ್ಬರು ಆ ದಿನಗಳಲ್ಲಿ  ಮದ್ರಾಸ್ ನಲ್ಲಿ ವಕೀಲವೃತ್ತಿ ನಡೆಸುತ್ತಿದ್ದರು.  ಅಲ್ಲಿ ಅವರೊಂದಿಗೆ ಸಂಪರ್ಕ ಹೊಂದಿದ್ದ ಪ್ರಾಂತ ಪ್ರಚಾರಕ ದಾದಾ ಪರಮಾರ್ಥ ಅವರು, 1940ರ ಬೇಸಗೆಯಲ್ಲಿ ನಾಗಪುರದಲ್ಲಿ ನಡೆಯುತ್ತಿದ್ದ ಸಂಘ ಶಿಕ್ಷಾ ವರ್ಗದ ಸಂದರ್ಶನಕ್ಕಾಗಿ ಅವರನ್ನು ಕರೆದೊಯ್ದಿದ್ದರು.  ಕೆಲವು ದಿನಗಳ ಕಾಲ ಸಂಘ […]

ಅವರು ಹೀಗಿದ್ದರು - 2

ಅವರು ಹೀಗಿದ್ದರು – 2

ಚಂದ್ರಶೇಖರ ಭಂಡಾರಿ - 0 Comment
Issue Date : 03.12.2013

ಹೊ.ವೆ.ಶೇಷಾದ್ರಿರಸಾಯನಶಾಸ್ತ್ರದಲ್ಲಿ ಚಿನ್ನದ ಪದಕ ಸಹಿತ ಎಂ.ಎಸ್ಸಿ.ಪದವಿ ಗಳಿಸಿದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ (ಹೊ.ವೆ.ಶೇಷಾದ್ರಿ) ಅವರು 1946ರಲ್ಲಿ ರಾ.ಸ್ವ.ಸಂಘದ ಪ್ರಚಾರಕರಾಗಿ ಹೊರಟಾಗ ಅವರ ವಯಸ್ಸು ಇನ್ನೂ 20 ಮಾತ್ರ. ಶಿಕ್ಷಣದಲ್ಲಿ ಸದಾ ಅಗ್ರಪಂಕ್ತಿಯಲ್ಲಿದ್ದ ಪ್ರತಿಭಾವಂತರು. ಕಾಲೇಜಿನಲ್ಲಿ ಅವರಿಗೆ ಸಹಪಾಠಿಯಾಗಿದ್ದವರು ಮುಂದೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾದ ಗಾಂಧಿವಾದಿ ಹೆಚ್‌.ನರಸಿಂಹಯ್ಯ ಅವರು. ಸ್ವಂತದ ನಂಬಿಕೆ, ಜೀವನನಿಷ್ಠೆಗಳಲ್ಲಿ ಇಬ್ಬರದೂ ಧ್ರುವಾಂತರವೆನಿಸುವಷ್ಟು ವಿಭಿನ್ನ. ಆದರೆ ಪರಸ್ಪರ ಸ್ನೇಹ, ಗೌರವದಲ್ಲಿ ಕೊನೆಯವರೆಗೂ ಪೂರಾ ಅಭಿನ್ನ.ಬೆಂಗಳೂರಿನ ಶಂಕರ ಶಾಖೆಯಲ್ಲಿ ಸಾಮಾನ್ಯ ಸ್ವಯಂಸೇವಕನಾಗಿ ಸಂಘ ಜೀವನದ ಆರಂಭ. ಸ್ವೀಕೃತ […]

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ -1

ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ -1

ಚಂದ್ರಶೇಖರ ಭಂಡಾರಿ - 0 Comment
Issue Date : 28.11.2013

ಕರ್ನಾಟಕದಲ್ಲಿ ಸಂಘ ಕರ್ನಾಟಕದ ವರಕವಿ ದ.ರಾ.ಬೇಂದ್ರೆಯವರ ಮನೆ.  ಅವರನ್ನು ಕಾಣಲು ಓರ್ವ ತರುಣ ಬಂದಿದ್ದಾನೆ.  ವಯಸ್ಸು ಸುಮಾರು 28 ವರ್ಷ.  ಜತೆಯಲ್ಲಿ ಬಂದಿರುವ ಗದಗಿನ ಮಾಮಾ ಖರೆಯವರು ಬೇಂದ್ರೆಯವರಿಗೆ ತರುಣನನ್ನು ಪರಿಚಯಿಸಿದ್ದಾರೆ.  ಆತ ನಾಗಪುರದವನು.  ಹೆಸರು ಯಾದವ ಕೃಷ್ಣ ಜೋಶಿ.  ಎಂ.ಎ., ಎಲ್.ಎಲ್.ಬಿ., ಪದವೀಧರ.  ದರೆ ವೃತ್ತಿಜೀವನ ನಡೆಸದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಸಂಘ) ಪ್ರಚಾರಕನಾಗಿ ಕರ್ನಾಟಕಕ್ಕೆ ಬಂದಿದ್ದಾನೆ.  ಆತನಿಗೆ ಕನ್ನಡ ಭಾಷೆ ತಿಳಿದವರ ಕಾರಣ ಮಾತುಕತೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಡೆದಿದೆ.   ಉತ್ತರ ಕರ್ನಾಟಕದಲ್ಲಿ […]

ಅವರು ಹೀಗಿದ್ದರು

ಅವರು ಹೀಗಿದ್ದರು

ಚಂದ್ರಶೇಖರ ಭಂಡಾರಿ - 0 Comment
Issue Date : 27.11.2013

ಸ್ವನಾಮ ಧನ್ಯರು ಯಾದವರಾವ್ ಜೋಶಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರಕರಾಗಿ ನಾಗಪುರದಿಂದ 1941ರಲ್ಲಿ ಬಂದವರು ಯಾದವರಾವ್‌ಜೀ ಜೋಶಿಯವರು. ಪೌರೋಹಿತ್ಯದಿಂದ ಮಾನಧನ ಬದುಕು ನಡೆಸುತ್ತಿದ್ದ ತಮ್ಮ ಮನೆತನದ ಏಕಮಾತ್ರ ಪುತ್ರ. ಎಂ.ಎ., ಎಲ್.ಎಲ್.ಬಿ. ಪದವೀಧರ. ಕಿಶೋರನಾಗಿರುವಾಗಲೇ ತನ್ನ ಮಧುರ ಕಂಠಶ್ರೀಯಿಂದ ಸಂಗೀತದಲ್ಲಿ ಮೇರು ಸಾಧನೆ ನಡೆಸಿ ‘ಸಂಗೀತ ಬಾಲಭಾಸ್ಕರ’ ಎಂಬ ಉಪಾದಿಗಳಿಂದ ಪ್ರತಿಭಾವಂತ. ಆದರೆ ಸಂಘ ಸಂಸ್ಥಾಪಕ ಡಾಕ್ಟರ್ ಹೆಡಗೆವಾರರ ಅಯಸ್ಕಾಂತೀಯ ವ್ಯಕ್ತಿತ್ವ ಮತ್ತು ಪ್ರಖರ ರಾಷ್ಟ್ರೀಯ ವಿಚಾರದಿಂದ ಪ್ರಭಾವಿತರಾಗಿ ಸಾಧನೆಯ ಕೀರ್ತಿಶಿಖರದಲ್ಲಿದ್ದಾಗಲೇ ನಿರಾಳ ಮನದಿಂದ […]