ದತ್ತ ಜಯಂತಿ ಆಚರಣೆ

ದತ್ತ ಜಯಂತಿ ಆಚರಣೆ

ಚಿಕ್ಕಮಂಗಳೂರು - 0 Comment
Issue Date : 16.12.2013

ದತ್ತಜಯಂತಿ ಅಂಗವಾಗಿ ಭಾನುವಾರ ನಡೆದ ಬೃಹತ್ ಶೋಭಾಯಾತ್ರೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಕೃತಿಗಳು ವಿಜೃಂಭಿಸಿದವು.  ದತ್ತಪೀಠದ ಮುಕ್ತಿಯ ಹೋರಾಟಕ್ಕೆ ಧಾರ್ಮಿಕತೆಯ ಲೇಪನವಾಯಿತು.  ಸಹಸ್ರಾರು ಮಾಲಾಧಾರಿಗಳ ಘೋಷಣೆಗಳು ಮುಗಿಲು ಮುಟ್ಟಿದವು.  ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಪರಂಪರೆಯ ಅನಾವರಣವಾಯಿತು.  ಸಂಕೀರ್ತನೆ ಜಯಘೋಷಗಳೊಂದಿಗೆ, ಮಂಗಳವಾದ್ಯದೊಂದಿಗೆ ವಿವಿಧ ವಾದ್ಯಮೇಳಗಳು ಅಲಂಕೃತ ಪ್ರಭಾವಳಿಯಲ್ಲಿ ದತ್ತಾತ್ರೇಯ ಮೂರ್ತಿಯನ್ನು ಹೊತ್ತ ವಾಹನವು ಮೆರವಣಿಗೆಯಲ್ಲಿ ಸಾಗಿಬಂದವು. ದೃಷ್ಟಿ ಹಾಯಿಸಿದಷ್ಟು ದೂರಕ್ಕೂ ಕೇಸರಿ ಬಾವುಟಗಳೆ ಕಾಣುತ್ತಿದ್ದವು.  ಪುಟ್ಟ ಮಕ್ಕಳು ದತ್ತಾತ್ರೇಯ ಸೇರಿದಂತೆ ವಿವಿಧ ಋಷಿಗಳ ವೇಷ ಧರಿಸಿ ಗಮನ ಸೆಳೆದರು.  […]

ಶೃಂಗೇರಿ ಫಾರೆಸ್ಟ್ ಚೆಕ್‌ಪೋಸ್ಟ್ ಮೇಲೆ ನಕ್ಸಲ್ ದಾಳಿ

ಚಿಕ್ಕಮಂಗಳೂರು ; ಜಿಲ್ಲೆಗಳು - 0 Comment
Issue Date : 25.11.2013

ಚಿಕ್ಕಮಗಳೂರು: ರಾಜ್ಯದಲ್ಲಿ ನಕ್ಸಲ್ ಉಪಟಳ ಮತ್ತೆ ಹೆಚ್ಚಾಗತೊಡಗಿದೆ. ಈ ತಿಂಗಳ ಮೊದಲ ವಾರದಲ್ಲಿ ಬೆಳ್ತಂಗಡಿ ಬಳಿ ದಾಳಿ ನಡೆಸಿದ ನಕ್ಸಲರು ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಶೃಂಗೇರಿ ತಾಲ್ಲೂಕು ತನಿಕೋಡು ಅರಣ್ಯ ತನಿಖಾ ಠಾಣೆ ಮೇಲೆ ನ.18ರಂದು ನಸುಕಿನ ವೇಳೆ ನಕ್ಸಲರು ದಾಳಿ ಮಾಡಿ ಪೀಠೋಪಕರಣ ಧ್ವಂಸಗೊಳಿಸಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂವರು ಮಹಿಳೆಯರು ಸೇರಿ ಹತ್ತು ಜನರಿದ್ದ ತಂಡ ರಾತ್ರಿ 2.30 ಸಮಯದಲ್ಲಿ ದಾಳಿ ಮಾಡಿದ್ದು, […]

ಕಡೂರು-ಚಿಕ್ಕಮಗಳೂರು ರೈಲಿಗೆ ನ.19 ರಂದು ಚಾಲನೆ

ಚಿಕ್ಕಮಂಗಳೂರು - 0 Comment
Issue Date : 19.11.2013

ಕಡೂರಿನಿಂದ ಚಿಕ್ಕಮಗಳೂರಿಗೆ ನೂತನವಾಗಿ ನಿರ್ಮಾಣಗೋಮಡಿರುವ ರೈಲು ಮಾರ್ಗದಲ್ಲಿ ನ.19ರಿಂದ ರೈಲು ಸಂಚಾರ ಪ್ರಾರಂಭವಾಗಲಿದೆ.  ಮೂರು ದಶಕಕ್ಕೂ ಹೆಚ್ಚಿನ ಸಮಯದಿಂದ ಚಿಕ್ಕಮಗಳೂರಿನ ಜನತೆಯು ಈ   ಸುಸಂದರ್ಭವನ್ನು ನಿರೀಕ್ಷಿಸುತ್ತಿದ್ದರು. ಕೇಂದ್ರ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ನೂತನ ಮಾರ್ಗ ಹಾಗೂ ರೈಲು ಸೇವೆಗೆ ನ.19ರಂದು ಚಾಲನೆ ನೀಡುವರು.  ಮುಖ್ಯಮಂತ್ರೆ ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸುವರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹುಸಂಖ್ಯಾತ ವಿರೋಧಿ ನಿಲುವು ತಳೆದಿದ್ದಾರೆ – ಸದಾನಂದಗೌಡ

ಚಿಕ್ಕಮಂಗಳೂರು - 0 Comment
Issue Date : 29.10.2013

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುವುತ್ತಿರುವ ಬೇರೆ ಬೇರೆ ವಿದ್ಯಾಮಾನಗಳಿಂದ ಜನರು ಆತಂಕಕ್ಕೀಡಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆರೋಪಿಸಿದರು. ಅವರು ಅ.3ರಂದು ಆಲ್ದೂರ್ ಪ್ರಕರಣದಲ್ಲಿ ಪೆಟ್ಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಯೋಗ ಕ್ಷೇಮವನ್ನು ವಿಚಾರಿಸಿ ಬಳಿಕ  ಪಾಂಚಜನ್ಯದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚಿಕ್ಕಮಗಳೂರು ಬಳಿಯ ಆಲ್ದೂರಿನಲ್ಲಿ ನಡೆದಿರುವ ಲಾಠಿ ಚಾರ್ಚ್ ಪ್ರಕರಣಗಳನ್ನು ನೋಡಿದರೆ ಕರ್ನಾಟಕದಾದ್ಯಂತ ಪೊಲೀಸ್ ರಾಜ್ಯ ತಾಂಡವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದಾರೂ ತಿಂಗಳಿನಿಂದ ಬಹುಸಂಖ್ಯಾತ ವಿರೋಧಿ ನಿಲುವು ತಳೆದಿರುವುದಲ್ಲದೆ, ಹಸ್ತಕ್ಷೇಪ, […]