ಗ್ರಾಮ ಪಂಚಾಯತ್‍ : ಬಿಜೆಪಿ ಗುರಿ

ಗ್ರಾಮ ಪಂಚಾಯತ್‍ : ಬಿಜೆಪಿ ಗುರಿ

ಚುನಾವಣೆಗಳು - 0 Comment
Issue Date : 29.05.2015

ಅಧಿಕಾರ ವಿಕೇಂದ್ರೀಕರಣ ಆದರೆ ಸಾಲದು. ಪ್ರಜಾವರ್ಗವು ರಾಜಕೀಯ ಪ್ರಣಾಳಿಕೆಯ ಒಳಮರ್ಮ ಮತ್ತು ತಿರುಳನ್ನು ಅರಿಯುವಂತಾದಾಗ ಅಧಿಕಾರ ವಿಕೇಂದ್ರೀಕರಣದ ಮಹತ್ವ, ಔಚಿತ್ಯ ಹಾಗೂ ಅಭಿವೃದ್ಧಿಯ ‘ಗತಿ’ ಪ್ರಭಾವ ಬೀರುವುದು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಪಕ್ಷ ಜಯ ಸಾಧಿಸಿದೆ. ರಾಜ್ಯ ಸರ್ಕಾರದ ಹಿಡಿತವೂ ಇತ್ತು. ಕರ್ನಾಟಕದಲ್ಲಿ ಅಧಿಕಾರ ಚಲಾಯಿಸುವ ಕಾಂಗ್ರೆಸ್ ಪಕ್ಷವು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಹಿನ್ನಡೆ ಅಥವಾ ಸೋಲನ್ನನುಭವಿಸಲು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಅಧಿಕಾರ ವಿಕೇಂದ್ರೀಕರಣದ ನೈಜ ಲಾಭವನ್ನು ಕರ್ನಾಟಕದ ಮತದಾರರು ಮೂರು […]

ಬಿಜೆಪಿಗೆ ಶಕ್ತಿವರ್ಧಕವಾದ ಫಲಿತಾಂಶ

ಚುನಾವಣೆಗಳು - 0 Comment
Issue Date : 17.12.2013

ದೇಶದ ರಾಜಧಾನಿ ದಿಲ್ಲಿ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ನಿರೀಕ್ಷಿಸಿದಂತೆಯೇ ಪ್ರಕಟವಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ, ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹೀನಾಯವಾಗಿ ಸೋತು ನೆಲಕಚ್ಚಿದೆ. ರಾಜಧಾನಿ ದಿಲ್ಲಿಯಲ್ಲೂ ಕಾಂಗ್ರೆಸ್‌ನದು ಅದೇ ಕಥೆ. ಆ ಪಕ್ಷಕ್ಕೆ ಸಮಾಧಾನ ತಂದುಕೊಟ್ಟ ಒಂದೇ ಒಂದು ಫಲಿತಾಂಶವೆಂದರೆ ಮಿಜೋರಾಂನದು. ಅಲ್ಲಿ ಕಾಂಗ್ರೆಸ್ ಮತ್ತೆ ಬಹುಮತ ಪಡೆದು ಅಧಿಕಾರಕ್ಕೇರಿದೆ. ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ನ ಪರಾಭವ ಆ ಪಕ್ಷಕ್ಕೆ ಸದ್ಯಕ್ಕಂತೂ ಸಹಿಸಲಾಗದ ಭಾರೀ […]

ಮಧ್ಯಂತರ ಚುನಾವಣೆ -  ಅರಳಿದ ಕಮಲ ಅಸ್ತಮಿಸಿದ ಹಸ್ತ

ಮಧ್ಯಂತರ ಚುನಾವಣೆ – ಅರಳಿದ ಕಮಲ ಅಸ್ತಮಿಸಿದ ಹಸ್ತ

ಚುನಾವಣೆಗಳು - 0 Comment
Issue Date : 09.12.2013

2014 ಮಹಾಸಮರದ ಸೆಮಿಫೈನಲ್ ಎಂದೇ ಕರೆಯಲಾಗುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ನಾಲ್ಕೂ ರಾಜ್ಯಗಳಲ್ಲಿ ಹೀನಾಯ ಸೋಲುಗಂಡಿದ್ದು, ಬಿಜೆಪಿ ರಣೋತ್ಸಾಹದಲ್ಲಿದೆ. ಈ ನಡುವೆ ಆಮ್ ಆದ್ಮಿ ಪಕ್ಷವೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ.  ಮಧ್ಯಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ. ಮಧ್ಯ ಪ್ರದೇಶ (230/230)ಪಕ್ಷ         ಗೆಲುವು               […]

ಮತದಾರನ ಕೈಯಲ್ಲಿ ಬ್ರಹ್ಮಾಸ್ತ್ರ

ಚುನಾವಣೆಗಳು - 0 Comment
Issue Date : 26.11.2013

ಪ್ರಜಾಪ್ರಭುತ್ವದ ಪ್ರಧಾನ ಅಸ್ತ್ರವಾದ ಮತದಾನದ ಬಗ್ಗೆ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮತದಾರ ಎಲ್ಲ ಅಭ್ಯರ್ಥಿಗಳನ್ನು ನಿರಾಕರಿಸುವ ಅವಕಾಶದ ಬಗ್ಗೆ ಸೋಮವಾರ ಮಹತ್ವದ ತೀರ್ಪೊಂದನ್ನು  ನೀಡಿದೆ. ಮತದಾನದ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿರಾಕರಿಸಿದ್ದೇ ಆದರೆ, ಅಂದರೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಯೂ ಬೇಡವೆನ್ನುವುದು ಬಹುಮತದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಮರು ಚುಣಾವಣೆ ನಡೆಸುವ ಪ್ರಮೇಯ ಬರುವುದಿಲ್ಲ ಎಂದು  ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದ ‘ನೋಟಾ’ ಗೆ ಬಲ ಬಂದಂತಾಗಿದೆ. (ನನ್ ಆಫ್ ದ ಅಬೌವ್)ಮತದಾರರ ತೀರ್ಮಾನಕ್ಕೆ ಗೌರವ […]

ಬೆಂಗಳೂರಿನಲ್ಲಿ ನಮೋ ಮಂತ್ರ

ಚುನಾವಣೆಗಳು ; ಭಾರತ - 0 Comment
Issue Date : 18.11.2013

ಬೆಂಗಳೂರಿನಲ್ಲಿ ನ.17 ರಂದು ಐತಿಹಾಸಿಕ ‘ಭಾರತ ಗೆಲ್ಲಿಸಿ’ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ಲಕ್ಷೋಪಲಕ್ಷ ಜನರನ್ನು ನೋಡಿದ ಶ್ರೀ ನರೇಂದ್ರ ಮೋದಿಯವರು ಪುಳಕಿತರಾದರು. ” ಬೆಂಗಳೂರಿನ ಬಂಧು, ಭಗಿನಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಸಂತ ಬಸವೇಶ್ವರ, ಕನಕದಾಸ, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ನನ್ನ ಸತ್ಪ್ರಮಾಣಗಳು” ಎಂದು ತಮ್ಮ ಭಾಷಣವನ್ನು ಆರಂಭಿಸಿದ ಮೋದಿಯವರು  ದೇಶದ ವಿಕಾಸಯಾತ್ರೆಯ ಹಾದಿಯಲ್ಲಿ ಬೆಂಗಳೂರು ಮೈಲಿಗಲ್ಲು ಸಾಧಿಸಿದ್ದು, ಕರ್ನಾಟಕ ಮತ್ತು ಬೆಂಗಳೂರಿನ ಹೆಸರನ್ನಷ್ಟೇ ಅಲ್ಲದೆ ಇಡೀ ದೇಶದ ಹೆಸರನ್ನು ಜಗದ್ವಿಖ್ಯಾತಗೊಳಿಸಿದೆ […]

ಅಂತರ್ಜಾಲ ತಾಣಗಳಲ್ಲಿನ ಪ್ರಚಾರಕ್ಕೂ ಲೆಕ್ಕದ ನಂಟು

ಚುನಾವಣೆಗಳು - 0 Comment
Issue Date : 26.10.2013

ಟ್ವಿಟ್ಟರ್, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟವಾಗುವ ವಿಷಯಗಳಿಗೂ ಚುನಾವಣೆ ನೀತಿ ಸಂಹಿತೆಯನ್ನು ಆಯೋಗ ವಿಸ್ತರಿಸಿದೆ. ಛತ್ತೀಸ್‌ಗಢ, ದಿಲ್ಲಿ, ಮಧ್ಯಪ್ರದೇಶ, ಮಿಜೊರಾಂ ಹಾಗೂ ರಾಜಸ್ಥಾನ  ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಕಾರ್ಯ ಆರಂಭಿಸಿದ್ದ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ಕೈಗೊಂಡಿದೆ. ”ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಜಾಹೀರಾತು, ಲೇಖನ ಮುಂತಾದವುಕ್ಕೂ ನೀತಿ ಸಂಹಿತೆ ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಭ್ಯರ್ಥಿಗಳು ತಮ್ಮ ಇ-ಮೇಲ್ ಹಾಗೂ […]

ಕಳಂಕಿತ ರಾಜಕಾರಣಿಗಳನ್ನು ರಕ್ಷಿಸುವ ಸುಗ್ರೀವಾಜ್ಞೆ ವಾಪಸ್

ಚುನಾವಣೆಗಳು - 0 Comment
Issue Date :

ಕಳಂಕಿತ ಜನಪ್ರತಿನಿಧಿಗಳನ್ನು ರಕ್ಷಿಸುವ ಸುಗ್ರೀವಾಜ್ಞೆಯನ್ನು ತಡವಾಗಿಯಾದರೂ ರಾಷ್ಟ್ರಪತಿಗಳಿಂದ ಹಿಂಪಡೆಯುವ ನಿರ್ಧಾರದ ಮೂಲಕ ಜನಾಭಿಪ್ರಾಯಕ್ಕೆ ಮನ್ನಣೆ ದೊರೆತಂತಾಗಿದೆ.  ಇದರಿಂದ ಕ್ರೀಮಿನಲ್ ಪ್ರಕರಣಗಳಲ್ಲಿ 2 ಅಥಾವ 2ಕ್ಕಿಂತ ಹೆಚ್ಚಿನ ವರ್ಷಗಳಲ್ಲಿ ಶಿಕ್ಷೆಗೆ ಒಳಗಾದ ಶಾಸಕ ಸಂಸದರಿಗೆ ತಕ್ಷಣವೇ ಹುದ್ದೆ ನಷ್ಟ. ಶಿಕ್ಷೆ ಪೂರ್ಣಗೊಂಡ ಬಳಿಕ 6 ವರ್ಷಗಳ ವರೆಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಮನ್ನಣೆ ದೊರೆತಿದೆ. ಇದರಿಂದ ಇನ್ನು ಮುಂದೆ ಕಳಂಕಿತ ಸಂಸದರಿಂದ  ಆಡಳಿತ ಯಂತ್ರ ಮುಕ್ತವಾಗಿದೆ, ‘ಯಥಾ ರಾಜ ತಥಾ ಪ್ರಜಾ’ ಎಂಬ […]

ಮೋದಿಯ ಘೋಷಣೆ ಆಯ್ತು ಈಗ ಹೊಣೆ ನಮ್ಮದು

ಚುನಾವಣೆಗಳು - 0 Comment
Issue Date :

ರಮೇಶ ಪತಂಗೆ ಒಬ್ಬ ಸಾಂಸದರೊಂದಿಗೆ ಹರಟೆ ಹೊಡೆಯುತ್ತಿದ್ದಂತೆ ಅವರು ಹೇಳಿದರು, ‘‘ರಮೇಶ್‌ಜಿ, ಮಗಳಿಗೆ ಒಳ್ಳೆಯ ಗಂಡ, ಸೈನ್ಯಕ್ಕೆ ಉತ್ತಮ ಸೇನಾಪತಿ ಮತ್ತು ದೇಶಕ್ಕೆ ಒಳ್ಳೆಯ ಪ್ರಧಾನಿಯು ಭಾಗ್ಯವಿದ್ದರೇನೇ ಸಿಗುವರು. ಈ ಮೂರೂ ಸಂಗತಿಗಳು ಮಗಳ, ಸೈನ್ಯದ ಮತ್ತು ದೇಶದ ಭಾಗ್ಯವನ್ನು ಅವಲಂಬಿಸಿವೆ.’’ ಶ್ರೀಕೃಷ್ಣ ಪರಮಾತ್ಮನು ಇದೇ ವಿಷಯವನ್ನು ಭಗವದ್ಗೀತೆಯಲ್ಲಿ ಕೊಂಚ ಬೇರೆಯೇ ಮಾತಿನಲ್ಲಿ ಹೇಳಿದ್ದಾನೆ. ಶ್ರೀಕೃಷ್ಣನ ಶಬ್ದಗಳು ಹೀಗಿವೆ, ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್‌? ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಮ್‌॥ ಎಂದರೆ ಕಾರ್ಯ ಯಶಸ್ವಿಯಾಗಲು ಕಾರ್ಯದ ಅಧಿಷ್ಠಾನ ಚೆನ್ನಾಗಿರಬೇಕು, […]