ನರಸಿಂಹನ ನೆಲೆಗಳು

ನರಸಿಂಹನ ನೆಲೆಗಳು

ಧಾರ್ಮಿಕ - 0 Comment
Issue Date : 29.04.2015

ಪ್ರಹ್ಲಾದ ನಾರದ ಪರಾಶರ ಪುಂಡರೀಕ ವ್ಯಾಸಾದಿ ಭಾಗವತ ಪುಂಗವಹೃನ್ನಿವಾಸ ಭಕ್ತಾನುರಕ್ತ ಪರಿಪಾಲನ ಪಾರಿಜಾತ ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ॥ ಪ್ರಹ್ಲಾದ, ನಾರದ, ಪರಾಶರ, ಪುಂಡರೀಕ, ವ್ಯಾಸ ಮೊದಲಾದ ಭಾಗವತೋತ್ತಮರ ಹೃದಯದಲ್ಲಿ ವಾಸಿಸುವವನೆ, ಅನುರಾಗ ಯುಕ್ತರಾದ ಭಕ್ತರನ್ನು ಕಾಪಾಡುವುದರಲ್ಲಿ ಕಲ್ಪವೃಕ್ಷದಂತೆ ಇರುವವನೇ, ಹೇ ಲಕ್ಷ್ಮೀನೃಸಿಂಹ, ನಿನ್ನ ಕರಗಳ ಆಶ್ರಯ ಆಸರೆಯನ್ನು ದಯಪಾಲಿಸು – ಶ್ರೀ ಶಂಕರಾಚಾರ್ಯವಿರಚಿತ. – (ಸ್ತವಕುಸುಮಾಂಜಲಿ)ವೈಶಾಖ ಶುದ್ಧ, ಚತುರ್ದಶಿಯಂದು ನರಸಿಂಹ ಜಯಂತಿ ನರಸಿಂಹಾರಾಧನೆಯ ಬಗ್ಗೆ ಸ್ಪಷ್ಟ ಚಿತ್ರವನ್ನು ಮನದಲ್ಲಿ ಮೂಡಿಸಿಕೊಳ್ಳುವ ಹಂತದಲ್ಲಿ ಕರ್ನಾಟಕದಲ್ಲಿರುವ ಶಿಲ್ಪಗಳಿಗೆ ಸಿಂಹಪಾಲು ದೊರೆತಿದೆ. […]

ಅಧಮಾ ಧನಮಿಚ್ಛಂತಿ

ಧಾರ್ಮಿಕ - 0 Comment
Issue Date : 06.04.2015

ದೇಶ ಮತ್ತು ಕಾಲಗಳ ವ್ಯತ್ಯಾಸವಿಲ್ಲದೆ ಎಲ್ಲ ಸಮಾಜದಲ್ಲೂ ಅಧಮರು, ಮಧ್ಯಮರು ಮತ್ತು ಉತ್ತಮರು ಯಾವಾಗಲೂ ಕಾಣಸಿಗುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಈ ಮೂರು ವರ್ಗಗಳ ನಡುವೆ ಸಾಕಷ್ಟು ತಾರತಮ್ಯಗಳಿರುತ್ತವೆ. ಆದರೆ ಎಲ್ಲದರಲ್ಲೂ ಮೇಲುಗೈ ಸಾಧಿಸಿ ಎತ್ತರದ ಸ್ಥಾನವನ್ನು ಅಲಂಕರಿಸುವವರು ಉತ್ತಮರೇ ಎನ್ನುವುದು ಗಮನಾರ್ಹ. ಹೀಗಾಗಿಯೇ ಅವರನ್ನು ಶ್ರೇಷ್ಠರೆಂದು ಗುರುತಿಸಲಾಗುತ್ತದೆ. ಚಾಣಕ್ಯನು ಹೇಳುವ ಪ್ರಕಾರ “Aಧಮಾ ಧನಮಿಚ್ಛಂತಿ, ಧನಂ ಮಾನಂಚ ಮಧ್ಯಮಾಃ ಉತ್ತಮಾ ಮಾನಮಿಚ್ಛಂತಿ ಮಾನೋ ಹಿ ಮಹತಾಂ ಧನಮ್’॥(ಅಧಮರು ಧನವನ್ನಷ್ಟೇ ಇಚ್ಛಿಸುತ್ತಾರೆ. ಮಧ್ಯಮರಿಗೆ ಧನವೂ ಬೇಕು, ಮಾನವೂ ಬೇಕು. ಉತ್ತಮರು […]

ಹೆಣ್ಣು: ಜಗದ ಕಣ್ಣು

ಧಾರ್ಮಿಕ - 0 Comment
Issue Date : 06.04.2015

ಕೌಟುಂಬಿಕ ಜೀವನ ಮತ್ತು ಆಧ್ಯಾತ್ಮಿಕತೆ ಇವೆರಡೂ ಹೊಂದಾಣಿಕೆ ಆಗಲಾರದ ಸಂಗತಿಗಳು ಎಂದು ಹಲವರು (ಈಚಿನ ‘ವಿದ್ಯಾವಂತರು’) ಭಾವಿಸಿರುವುದುಂಟು. ಆದರೆ ಭಾರತೀಯ ವೇದ ಸಂಪತ್ತು ಇದನ್ನು ಒಪ್ಪದು. ಕೌಟುಂಬಿಕ ಜೀವನದಲ್ಲಿರುವ ‘ಸದ್ಯೋವಧು’ ಸಂಸಾರಿ ನಿಜ. ಹಾಗೆಯೇ ತಪಸ್ವಿನಿಯಾದ ‘ಬ್ರಹ್ಮವಾದಿನಿ’ಯ ಸಂಸಾರ ಕೇವಲ ಒಂದು ಮನೆ ಮಾತ್ರವಲ್ಲ. ಆಕೆಯ ಆದರ್ಶ ಸತ್ಯ – ಬ್ರಹ್ಮಜ್ಞಾನ ಪ್ರಾಪ್ತಿ. ಆಕೆಯ ಜೀವನದ ಗುರಿ ಆಧ್ಯಾತ್ಮಿಕ ಕಲ್ಯಾಣ ಪ್ರಾಪ್ತಿ. ಸದ್ಯೋವಧು ತನ್ನ ಕುಟುಂಬ (ಆಕೆಗೆ ಅದೇ ಸಮಗ್ರ ಸಂಸಾರ. ಸಂಸಾರ ಎಂದರೆ ವಿಶ್ವ!)ವನ್ನು ಈ ನೆಲೆಯಲ್ಲಿ […]

ಹೆಣ್ಣು: ಸಂಸ್ಕೃತಿ ಸಾಕ್ಷಾತ್ಕಾರದ ಕಣ್ಣು

ಧಾರ್ಮಿಕ - 0 Comment
Issue Date : 06.04.2015

 ಪರಮಸುಂದರ ಮಾತ್ರವಲ್ಲ ಪರಮ ಗೌರವಾಸ್ಪದವಾದ ಹೆಣ್ಣಿನ ಸ್ವರೂಪ ಎಂದರೆ ‘ಪತ್ನಿ’. ಈ ಶಬ್ದದ ಮೂಲ ಅರ್ಥ ಎಂದರೆ ಪತಿಯ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವವಳು. ಅಷ್ಟೇ ಅದಕ್ಕೆ ಪ್ರೇರಣೆ ಮತ್ತು ಒತ್ತಾಸೆ ನೀಡುವವಳು. ಈ ಮಾತನ್ನು ಹೇಳಿದವನು ಪ್ರಸಿದ್ಧ ವೈಯಾಕರಣಿ ಪಾಣಿನಿ. ಹಾಗೆಂದೇ ಪತ್ನಿಯನ್ನು ‘ಸಹಧರ್ಮಿಣಿ’ ಎಂದು ಕರೆದರು ನಮ್ಮ ಋಷಿಗಳು. ಆಕೆಯ ಗೌರವವನ್ನು ಇಮ್ಮಡಿಗೊಳಿಸಲೆಂದೇ ನಮ್ಮ ಋಷಿಗಳು ‘ಮಾತೃವತ್ ಪರದಾರೇಷು..’ ಆಕೆಯನ್ನು ‘ತಾಯಿ’ಯಂತೆ ಕಂಡು ಆದರಿಸಿ ಎಂದು ಆದೇಶಿಸಿದರು. ಮನುವಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಒಬ್ಬ ಆಚಾರ್ಯ […]

ಅಂಗವೆಂದಡೆ ಅಜ್ಞಾನ

ಧಾರ್ಮಿಕ - 0 Comment
Issue Date : 06.04.2015

 ಸಿದ್ಧರಾಮನ ವಚನವೊಂದರ ಪ್ರಕಾರ ‘ಅಂಗವೆಂದಡೆ ಅಜ್ಞಾನ, ಲಿಂಗವೆಂದಡೆ ಸುಜ್ಞಾನ.’ ಇದೊಂದು ಅರ್ಥಪೂರ್ಣವಾದ ನುಡಿ. ಅಂಗ ಮತ್ತು ಲಿಂಗ ಎಂಬ ಎರಡೇ ಶಬ್ದಗಳಲ್ಲಿ ವಚನಕಾರರು ಐಹಿಕ ಮತ್ತು ಪಾರಲೌಕಿಕ ಸಂಗತಿಗಳನ್ನು ಅಡಕವಾಗಿರಿಸಿರುವುದು ನಿಜಕ್ಕೂ ಸ್ಮರಣೀಯ. ಅಂಗವೆಂದರೆ ಮನುಷ್ಯ ಶರೀರ ಮತ್ತು ಅದಕ್ಕೆ ಸಂಬಂಧ ಪಟ್ಟ ವಿಷಯಗಳು. ನರಜನ್ಮ ಎನ್ನುವುದು ನಶ್ವರವಾದದ್ದು. ಆದ್ದರಿಂದ ಶಾರೀರಿಕವಾದ ಸೌಂದರ್ಯವಾಗಲಿ, ಸಾಮರ್ಥ್ಯ ವಾಗಲಿ ಯಾವುದೂ ಶಾಶ್ವತವಲ್ಲ. ಮಾನವನು ತನ್ನ ಕಾಮನೆಗಳನ್ನು ಈಡೇರಿಸಲು ಪ್ರಯತ್ನ ಪೂರ್ವಕವಾಗಿ ಸಂಪಾದಿಸುವ ಧನ – ಕನಕಗಳು, ವಸ್ತು ವಾಹನಗಳು, ಒಡವೆ ತೊಡುಗೆಗಳು […]

ದೈನಂದಿನ ಜೀವನದಲ್ಲಿ ಭಗವದ್ಗೀತೆಯ ಅನುಷ್ಠಾನ

ಧಾರ್ಮಿಕ - 0 Comment
Issue Date : 13.10.2014

ಈವಿಷಯದಲ್ಲಿಯೇ ಒಟ್ಟು ಮೂರು ವಿಷಯಗಳು ಸೇರಿದೆ.ಹಾಗಾಗಿ ಬಲು ವಿಸ್ತಾರವಾಗಿಯೇ ವಿಚಾರಮಾಡಬೇಕಾಗುತ್ತದೆ. ಮೊದಲನೆಯದು ದೈನಂದಿನ ಜೀವನ, ಎರಡನೆಯದು ಭಗವದ್ಗೀತೆ, ಮೂರನೆಯದು ಜೀವನಕ್ಕೆ ಗೀತೆಯ ಅನುಷ್ಠಾನ. ಒಂದೊಂದೂ ವಿಷಯಗಳು ನಮಗೆ ಸರಿಯಾಗಿ ತಿಳಿದಿದ್ದರೆ ಈ ವಿಷಯವು ನಮಗೆ ಪೂರ್ಣವಾಗಿ ಅರ್ಥವಾಗಲು ಸಾಧ್ಯ. ಕರಾಗ್ರೇವಸತೇ ಲಕ್ಷ್ಮೀ: ಈಗ ಒಂದೊಂದೂ ವಿಷಯವನ್ನು ಸ್ಪರ್ಶಿಸುತ್ತಾ ಹೋಗೋಣ. ಮೊದಲನೆಯದಾಗಿ ನಿತ್ಯ ಜೀವನದ ಬಗ್ಗೆ ವಿಚಾರ ಮಾಡೋಣ. ನಮ್ಮ ಜೀವನವು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಆರಂಭವಾಗುತ್ತದೆ. ಸಂಸ್ಕಾರವಂತ ಮನೆಗಳಲ್ಲಿ ಸಾಮಾನ್ಯವಾಗಿ ಹಾಸಿಗೆಯಿಂದ ಏಳುವಾಗಲೇ ‘ಕರಾಗ್ರೇವಸತೇ ಲಕ್ಷ್ಮ್ಮೀ, ಕರಮಧ್ಯೇ […]

ಸಮಾಜದ ಸೇವೆ ಮಾಡುತ್ತಾ ಅತ್ಮೋನ್ನತಿ ಹೊಂದೋಣ

ಧಾರ್ಮಿಕ - 0 Comment
Issue Date : 06.10.2014

ಆತ್ಮೋನ್ನತಿ ಮಾತು ಬಂದಾಗ ತನ್ನ ಸ್ವಂತ ಪ್ರಯತ್ನದಿಂದಲೇ ಆತ್ಮೋನ್ನತಿಯನ್ನು ಗಳಿಸಿಕೊಳ್ಳಬೇಕೆನ್ನುವುದು ಸಾಮಾನ್ಯ ಅಭಿಪ್ರಾಯ. ಆತ್ಮೋನ್ನತಿಯ ಹೆಸರಲ್ಲಿ ಒಬ್ಬರೇ ಏಕಾಂಗಿಯಾಗಿ ಸಾಧನೆಮಾಡಬೇಕು ಎನ್ನು ವವರೂ ಇದ್ದಾರೆ. ಸಮಾಜದ ಸಂಪರ್ಕವಿಲ್ಲದೆ, ಅದರ ಆಶ್ರಯವಿಲ್ಲದೆ ಯಾವನೇ ಒಬ್ಬ ವ್ಯಕ್ತಿಯು ಬದುಕುವುದಾದರೂ ಹೇಗೆ? ಸಮಾಜವನ್ನು ಆಶ್ರಯಿಸಿಯೇ ಬದುಕಬೇಕಲ್ಲವೇ? ತನ್ನ ಎಲ್ಲಾ ಅಗತ್ಯಗಳಿಗೂ ಸಮಾಜವನ್ನೇ ಆಶ್ರಯಿಸಬೇಕು, ಅಲ್ಲವೇ? ಹೀಗಿದ್ದಾಗ ಸಮಾಜವನ್ನು ಬಿಟ್ಟು ಏಕಾಂಗಿಯಾಗಿ ತಾನು ಸಾಧನೆಮಾಡುತ್ತೇನೆಂದರೆ ಅದು ಒಪ್ಪುವ ವಿಚಾರವೇ? ಸಾಮಾಜಿಕ ಜೀವನವು ವ್ಯಕ್ತಿಯ ಇಹ-ಪರ ಎರಡರ ಏಳಿಗೆಗೂ ನೆರವಾಗುತ್ತದೆ. ಈ ಬಗ್ಗೆ ಒಂದು […]

ಭಕ್ತಿ ಜ್ಞಾನ ಸಮನ್ವಯ

ಧಾರ್ಮಿಕ - 3 Comments
Issue Date : 23.09.2014

ಆಧ್ಯಾತ್ಮಿಕತೆಯೇ ಭಾರತದ  ಆದರ್ಶವೆಂದು ವಿಶ‍್ವವಿಖ್ಯಾತ  ಸ್ವಾಮಿ ವಿವೇಕಾನಂದರು ಹೇಳಿದ್ದರು.  ಆ ಆದರ್ಶವನ್ನು ಭಾರತೀಯರು ಮರೆತಾಗಲ್ಲೆಲ್ಲ ಆಧ್ಯಾತ್ಮಿಕತೆಯ ಪತಾಕೆಯನ್ನು ಬಾರಿ ಬಾರಿಗೂ ಎತ್ತರವಾಗಿ  ಎತ್ತಿ ಹಿಡಿಯಲು ಅವತಾರಪುರುಷರು ಬಹು ಬಾರಿ ಜನ್ಮವೆತ್ತಿದ್ದಾರೆ. ಆದ್ದರಿಂದ  ಭಾರತವು  ಆಧ್ಯಾತ್ಮಿಕತೆಯ ಒಂದು ವಿಗ್ರಹ ಸ್ವರೂಪವೇ ಆಗಿದೆ.  ಈ ಆಧ್ಯಾತ್ಮಿಕತೆಯ ಆಧಾರವೇ  ಜ್ಞಾನ ಮತ್ತು ಭಕ್ತಿ. ಜ್ಞಾನ ಭಕ್ತಿಗಳ ಪ್ರಚಾರಕ್ಕಾಗಿಯೇ ಶ್ರೀ ಪರಮಾತ್ಮನು ಸ್ವತಃ ಗುರುರೂಪವನ್ನು  ತಾಳಿ ಬರುತ್ತಾನೆ. ಆತನೇ ಆಧ್ಯಾತ್ಮಿಕತೆಯ ಅಧಿಪತಿ. ಆತನ ಉಪದೇಶವನ್ನು  ಜೀವನದಲ್ಲಿ ಅನುಸರಿಸಿ  ಜನರು  ಈ ಭವಬಂಧನದಿಂದ  ಮುಕ್ತರಾಗುತ್ತಾರೆ. […]

ಸುಗಂಧ ಪತ್ರೆಗಳು

ಧಾರ್ಮಿಕ - 1 Comment
Issue Date : 19.09.2014

ಶ್ರಾವಣಭಾದ್ರಪದ ಬಂತೆಂದರೆ ಹಬ್ಬಗಳ ಸಾಲು. ಮಂಗಳ ಗೌರಿ, ವರಮಹಾಲಕ್ಷ್ಮಿ, ಗೌರಿ ಗಣಪತಿ ಹಬ್ಬಗಳು ಹೀಗೆ ದಿನಕ್ಕೊಂದು ವಿಶೇಷ. ಪರಮಾತ್ಮನಿಗೆ ನಾವು ಬೆಳೆದುದನ್ನು ಅಥವ ನಮಗೆ ದೊರೆತುದನ್ನು ನಿವೇದಿಸಿ, ನಂತರ ನಾವು ಉಪಯೋಗಿಸುವುದು ನಮ್ಮಲ್ಲಿ ಮೊದಲಿನಿಂದ ಬಂದ ಸಂಪ್ರದಾಯ. ಎಲ್ಲ ಉತ್ತಮವಾದ ವಸ್ತುಗಳು ಮೊದಲು ಅವನಿಗೆ ಅರ್ಪಿಸಲ್ಪಡಬೇಕು. ಪರಮಾತ್ಮನೇ ಗೀತೆಯಲ್ಲಿ ಹೇಳಿರುವಂತೆ, ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ ತದಹಂ ಭಕ್ತ್ವುಪಹೃತಮಶ್ನಾಮಿ ಪ್ರಿಯತಾತ್ಮನಃ॥ ಭಕ್ತಿಯಿಂದ ಕೊಡಲ್ಪಟ್ಟ ಪತ್ರೆ, ಪುಷ್ಪ, ಹಣ್ಣು, ನೀರು ಎಲ್ಲವನ್ನೂ ಅವನ್ನು […]

ಮೇಲುಕೋಟೆ ವೈರಮುಡಿ ಉತ್ಸವ

ಮೇಲುಕೋಟೆ ವೈರಮುಡಿ ಉತ್ಸವ

ಧಾರ್ಮಿಕ - 0 Comment
Issue Date : 13.03.2014

ವಿಶ್ವವಿಖ್ಯಾತ ಮೇಲುಕೋಟೆಯ ಶ್ರೀ ಚಲುವನಾರಾಯಣ ಸ್ವಾಮಿ  ವೈರಮುಡಿ ಉತ್ಸವ ಇಂದು( ಮಾ.13) ವಿಜೃಂಭಣೆಯಿಂದ ನಡೆಯಲಿದೆ. ಮೇಲುಕೋಟೆ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಕಸಬೆಯಿಂದ ಉತ್ತರಕ್ಕೆ 29 ಕಿ.ಮೀ ದೂರದಲ್ಲಿರುವ ಪಟ್ಟಣ, ಹೋಬಳಿಕೇಂದ್ರ. ಪ್ರಸಿದ್ಧ ಯಾತ್ರಾಸ್ಥಳ. ದಕ್ಷಿಣ ಭಾರತದ ಶ್ರೀವೈಷ್ಣವ ಕ್ಷೇತ್ರಗಳೆಂದು ಖ್ಯಾತವಾಗಿರುವ ನಾಲ್ಕು ಕ್ಷೇತ್ರಗಳಲ್ಲಿ ಇದೂ ಒಂದು (ಇತರ ಮೂರು- ಕಂಚಿ, ತಿರುಪತಿ, ಮತ್ತು ಶ್ರೀರಂಗಂ). ಇದಕ್ಕೆ ನಾರಾಯಣಾದ್ರಿ, ವೇದಾದ್ರಿ, ಯಾದವಾದ್ರಿ, ಯತಿಶೈಲ ಮುಂತಾದ ಹೆಸರುಗಳುಂಟು. ಶಾಸನಗಳಲ್ಲಿ ವೈಕುಂಠ ವರ್ಧನಕ್ಷೇತ್ರ, ದಕ್ಷಿಣ ಬದರಿಕಾಶ್ರಮ, ಯಾದವಗಿರಿ, […]