ನ್ಯಾಯದಾನ ಮಾಡಬೇಕಾದವರೇ ಕಟಕಟೆಯಲ್ಲಿ !

ನ್ಯಾಯದಾನ ಮಾಡಬೇಕಾದವರೇ ಕಟಕಟೆಯಲ್ಲಿ !

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 06.07.2015

ಬೇರೆ ಯಾರೇ ಆಗಿದ್ದರೂ ಈ ವೇಳೆಗೆ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಎಸೆದು ಮನೆಗೆ ಹೋಗುತ್ತಿದ್ದರು. ಜನಪರ ಸಂಘಟನೆಗಳ ಪ್ರತಿಭಟನೆ, ರಾಜ್ಯ ವಕೀಲರ ಪರಿಷತ್‌ನ ತೀವ್ರ ಆಂದೋಲನ, ಅತ್ತ ವಿಧಾನಸಭೆಯ ಉಭಯ ಸದನಗಳಲ್ಲೂ ಸದಸ್ಯರಿಂದ ರಾಜೀನಾಮೆಗೆ ಆಗ್ರಹ, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ಗಳಿಂದ ರಾಜೀನಾಮೆಗೆ ಆಗ್ರಹಿಸಿ 57ಕ್ಕೂ ಹೆಚ್ಚು ಶಾಸಕರಿಂದ ಸಹಿ ಸಂಗ್ರಹ, ವಿಧಾನಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆಗೆ ಅನುಮತಿ ನೀಡಬೇಕೆಂದು ಸ್ಪೀಕರ್‌ಗೆ ಮನವಿ… ಹೀಗೆ ಕಳೆದ ಒಂದು ವಾರದಿಂದ ಸತತವಾಗಿ ಕರ್ನಾಟಕ ಲೋಕಾಯುಕ್ತ ನ್ಯಾ. ಭಾಸ್ಕರ […]

 ಅನ್ನದಾತನಿಗೆ ಇದಕ್ಕಿಂತ ಘೋರ ಅವಮಾನ ಯಾವುದು?

ಅನ್ನದಾತನಿಗೆ ಇದಕ್ಕಿಂತ ಘೋರ ಅವಮಾನ ಯಾವುದು?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 30.06.2015

 ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಈಗ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಮಾನ ಅತ್ಯಂತ ಹೃದಯವಿದ್ರಾವಕ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ರೈತ ರತನ್ ಚಂದ್ ಕಿಶನ್ ಸಿಂಗ್ ಪಾಗಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜೇವರ್ಗಿಯ ಇನ್ನೊಬ್ಬ ರೈತ ಮಹಿಳೆ ಸಾಲದ ಬವಣೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕು ಗಾಣದಹೊಸೂರಿನ ಕಬ್ಬು ಬೆಳೆಗಾರ ನಿಂಗೇಗೌಡ ತನ್ನ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚಿ, ಉರಿಯುವ ಬೆಂಕಿಯೊಳಗೆ ನೆಗೆದು ಬೂದಿಯಾಗಿದ್ದಾನೆ. ನಂಜನಗೂಡು ತಾಲ್ಲೂಕು ಸಿದ್ದೇಗೌಡನ ಹುಂಡಿಯ ಶಿವಲಿಂಗೇಗೌಡನ ಶವ […]

ಆ ಕರಾಳ ದಿನಗಳಿಗೀಗ ನಲವತ್ತು ವರ್ಷ

ಆ ಕರಾಳ ದಿನಗಳಿಗೀಗ ನಲವತ್ತು ವರ್ಷ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

ದಾನಪ್ಪ ಒಣರೊಟ್ಟಿ, ಅಯ್ಯಪ್ಪ ಅರಕಾಲಚೆಟ್ಟಿ, ನಾರಾಯಣಪ್ಪ ಉಣಚಗಿ, ಶಂಕರ ರೂಡಗಿ, ಬಸೆಟ್ಟೆಪ್ಪಾ ಮುರನಾಳ, ಡೀಕಣ್ಣ ಕಂಠಿ, ರಂಗಪ್ಪ ಶೇಬಿನಕಟ್ಟಿ , ಹನಮಂತ ಕಂದಗಲ್ಲ… ಇವರೆಲ್ಲ ಯಾರೋ ಶ್ರೀಸಾಮಾನ್ಯರಿರಬಹುದೆಂದು ನಿಮಗನಿಸಬಹುದು. ಆದರೆ ಇವರೆಲ್ಲ 1975ರ ತುರ್ತುಪರಿಸ್ಥಿತಿಯಲ್ಲಿ ಪ್ರಜಾತಂತ್ರದ ರಕ್ಷಣೆಗಾಗಿ ಹೋರಾಡಿ ಜೈಲು ಸೇರಿದವರು ಎಂದರೆ ನಿಮಗೆ ಅಚ್ಚರಿಯಾಗಬಹುದು. ಹೌದು, ಮೊನ್ನೆ ಜೂ. 8ರಂದು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ತುರ್ತುಪರಿಸ್ಥಿತಿ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದ ಇಂತಹ 16 ಮಂದಿಗೆ ಅಪರೂಪದ ಸನ್ಮಾನ ಏರ್ಪಡಿಸಲಾಗಿತ್ತು. ಅದನ್ನು ಏರ್ಪಡಿಸಿದವರು ಅಲ್ಲಿನ ನಿವೃತ್ತ […]

ಯೋಗಕ್ಕೀಗ ಯೋಗ, ಎಲ್ಲವೂ ಯೋಗಾಯೋಗ !

ಯೋಗಕ್ಕೀಗ ಯೋಗ, ಎಲ್ಲವೂ ಯೋಗಾಯೋಗ !

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

 ಹಿಂದು ಸಂಸ್ಕೃತಿಯ ಕೊಡುಗೆಯಾಗಿರುವ ಭಾರತೀಯ ಮೂಲದ ಯೋಗಕ್ಕೆ ಈಗ ಶುಕ್ರದೆಸೆ. ಜೂ.21 ರಂದು ‘ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ಹಿನ್ನೆಲೆ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು ಶ್ರಮಿಸಿದವರು ಸಾಕಷ್ಟು ಮಂದಿ. ಈ ಹಿಂದೆ ಕೂಡ ಯೋಗದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘೋಷಿತವಾಗಬೇಕೆಂದು ಹಲವರು ಪ್ರಯತ್ನಪಟ್ಟಿದ್ದುಂಟು. ಆದರೆ ಅದು ನೆರವೇರಿರಲಿಲ್ಲ. ಈಗ ಮಾತ್ರ ಕಾಲ ಕೂಡಿಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಯೋಗದಿನ ಘೋಷಣೆ ಕುರಿತು ಪ್ರಸ್ತಾಪಿಸಿದಾಗ ವಿಶ್ವಸಂಸ್ಥೆ ಅದನ್ನು ಗಂಭೀರವಾಗಿ ಸ್ವೀಕರಿಸಿತ್ತು. ಒಟ್ಟು […]

ಅಹಿಂದ ಅಂಧಪ್ರೇಮದ ಪರಾಕಾಷ್ಠೆ - ದೇಶದ್ರೋಹಿಗಳಿಗೆ ಬಿಡುಗಡೆಯ ಭಾಗ್ಯ!

ಅಹಿಂದ ಅಂಧಪ್ರೇಮದ ಪರಾಕಾಷ್ಠೆ – ದೇಶದ್ರೋಹಿಗಳಿಗೆ ಬಿಡುಗಡೆಯ ಭಾಗ್ಯ!

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 09.06.2015

ಅಹಿಂದ ಪ್ರೇಮದ ಹಿಡನ್ ಅಜೆಂಡಾ ಇಟ್ಟುಕೊಂಡೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗ ಅಹಿಂದ ಅಂಧಪ್ರೇಮದ ಪರಾಕಾಷ್ಠೆಗೆ ತಲುಪಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಕಡುಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿಯನ್ನು ಒಂದು ರೂ. ದರದಲ್ಲಿ ಹಂಚಿದರು. ತನ್ಮೂಲಕ ದುಡಿದು ತಿನ್ನುವ ಮಂದಿಯನ್ನು ಶುದ್ಧ ಸೋಮಾರಿಗಳಾಗುವಂತೆ ಉತ್ತೇಜಿಸಿದರು. ಕಿಲೋಗೆ ಒಂದು ರೂ.ನಂತೆ ಅಕ್ಕಿ ವಿತರಿಸಿದರೆ ಕಡುಬಡವರ ಉದ್ಧಾರ ಆಗಿಬಿಡುತ್ತದೆ ಎಂದು ಸಿದ್ಧರಾಮಯ್ಯನವರಿಗೆ ಅದ್ಯಾವ ಬುದ್ಧಿಜೀವಿ ಸಲಹೆ ನೀಡಿದರೋ ಗೊತ್ತಿಲ್ಲ. ಈಗೇನಾಗಿದೆಯೆಂದರೆ, ಒಂದು ರೂ.ಗೆ ಕಿಲೋ ಅಕ್ಕಿ ಪಡೆದವರ ಆರ್ಥಿಕ […]

ಬಿಜೆಪಿಗೂ ಬೇಡವಾದ ತಬ್ಬಲಿ ಗೋಮಾತೆ!

ಬಿಜೆಪಿಗೂ ಬೇಡವಾದ ತಬ್ಬಲಿ ಗೋಮಾತೆ!

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 01.06.2015

ನಮ್ಮ ನಂಬಿಕೆಗಳೇ ತಲೆಕೆಳಗಾದರೆ, ನಾವು ನಂಬಿದವರೇ ನಮಗೆ ಕೈಕೊಟ್ಟರೆ ಏನಾಗಬಹುದು? ಈಗ ಆಗಿರುವುದು ಅದೇ. ಈಚೆಗೆ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೆಕರ್ ಒಂದು ಹೇಳಿಕೆ ನೀಡಿದ್ದರು: `ಗೋವಾದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೊಳಿಸುವುದಿಲ್ಲ. ಏಕೆಂದರೆ ಈ ರಾಜ್ಯದಲ್ಲಿ ಶೇ. 40 ಮಂದಿಯ ಆಹಾರ ಗೋಮಾಂಸ. ಶೇ. 40 ರಷ್ಟು ಮಂದಿ ಪ್ರತಿನಿತ್ಯ ಗೋಮಾಂಸ ಬಳಸುತ್ತಿರುವುದರಿಂದ ಅವರ ಆಹಾರದ ಹಕ್ಕನ್ನು ನಾನು ಹೇಗೆ ಕಸಿದುಕೊಳ್ಳಲಿ?’ ಗೋವಾ ಮುಖ್ಯಮಂತ್ರಿಯ ಈ ಮಾತನ್ನು ಒಪ್ಪೋಣ. ಆ ರಾಜ್ಯದಲ್ಲಿ ಶೇ. 40 ಮಂದಿ ಗೋಮಾಂಸ […]

ಹಾಗಿದ್ದರೆ ಸಲ್ಮಾನ್‌ಖಾನ್ ಕಾನೂನಿಗೆ ಅತೀತನೆ?

ಹಾಗಿದ್ದರೆ ಸಲ್ಮಾನ್‌ಖಾನ್ ಕಾನೂನಿಗೆ ಅತೀತನೆ?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 11.05.2015

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಈಗ ಸಾಕಷ್ಟು ಸವಕಲಾಗಿ ಹೋಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಮಾತು ಕೂಡ ಅಷ್ಟೇ ಕ್ಲೀಷೆಯಾಗಿದೆ. ಈ ಗಾದೆಯ ಜಾಗದಲ್ಲಿ ಹೊಸ ಗಾದೆ ಸೃಷ್ಟಿಸಬೇಕಾಗಿದೆ. ಉಪ್ಪು ತಿಂದವರು ನೀರು ಕುಡಿಯಬೇಕಿಲ್ಲ, ಹಾಲನ್ನೋ ಅಥವಾ ಆಲ್ಕೋಹಾಲನ್ನೋ ಕುಡಿಯಬಹುದು. ಅದೇರೀತಿ ತಪ್ಪು ಮಾಡಿದರೆ ಶಿಕ್ಷೆಯಿಂದ ನುಣುಚಿಕೊಳ್ಳಲೂಬಹುದು! ಬಾಲಿವುಡ್ ನಟ ಸಲ್ಮಾನ್‌ಖಾನ್ ವಿಷಯದಲ್ಲಿ ಇಂತಹ ಅಭಿಪ್ರಾಯ ವ್ಯಕ್ತವಾಗಿದ್ದರೆ ಅದು ಉತ್ಪ್ರೇಕ್ಷೆಯಲ್ಲ. 13 ವರ್ಷಗಳ ಹಿಂದೆ ಒಂದು ರಾತ್ರಿ ಕಂಠಮುಟ್ಟ […]

ಭಾರತ ವಿಶ್ವ ಗುರುವಾಗುವ ಪರಿ ಹೀಗೆ!

ಭಾರತ ವಿಶ್ವ ಗುರುವಾಗುವ ಪರಿ ಹೀಗೆ!

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 04.05.2015

ಆಪರೇಷನ್ ರಾಹತ್ ಅದೊಂದು ಅತೀ ಕ್ಲಿಷ್ಟಕರ ಸವಾಲಾಗಿತ್ತು. ಯುದ್ಧಪೀಡಿತ ಯೆಮೆನ್ ದೇಶದಿಂದ ಸಾವಿರಾರು ಜನ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಬೇಕಾಗಿತ್ತು. ಯೆಮೆನ್‌ನಲ್ಲಾದರೋ ಹಿಂಸಾಚಾರದ ರುದ್ರನರ್ತನ. ಇರಾನ್ ಬೆಂಬಲಿತ ಶಿಯಾ ಬಂಡುಕೋರರು ಹಾಗೂ ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳ ನಡುವಣ ಭಾರೀ ಯುದ್ಧ ಶಾಂತಿ, ನೆಮ್ಮದಿಯನ್ನು ಹೊಸಕಿಹಾಕಿತ್ತು. ಅಂತಹ ಸಂದರ್ಭದಲ್ಲಿ ಅಲ್ಲಿರುವ ಭಾರತೀಯರ ರಕ್ಷಣೆಗೆ ಕಟಿಬದ್ಧವಾಗಿತ್ತು ಭಾರತ ಸರ್ಕಾರ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೆಹಲಿಯಲ್ಲಿ ಒಂದು ಮೀಟಿಂಗ್ ಕರೆದು ಯುದ್ಧಪೀಡಿತ ಯೆಮೆನ್‌ನಿಂದ ಭಾರತೀಯರ ರಕ್ಷಣೆಯ ಕುರಿತು ಪ್ರಸ್ತಾಪಿಸಿದರು. ಕಾರ್ಯಾಚರಣೆ […]

ಒತ್ತುವರಿ ತೆರವು ಓಕೆ, ಆದರೆ ಯಾರಿಗೋ ಶಿಕ್ಷೆ ಏಕೆ?

ಒತ್ತುವರಿ ತೆರವು ಓಕೆ, ಆದರೆ ಯಾರಿಗೋ ಶಿಕ್ಷೆ ಏಕೆ?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 28.04.2015

ಬೆಂಗಳೂರಿನ ಸಾರಕ್ಕಿ ಕೆರೆಯ ಹೆಸರನ್ನು ಬೆಂಗಳೂರಿನ ನಿವಾಸಿಗಳೇ ನೆಟ್ಟಗೆ ಕೇಳಿರಲಿಲ್ಲ. ಆದರೆ ಈಗ ಅವರಷ್ಟೇ ಅಲ್ಲ, ಇಡೀ ರಾಜ್ಯದ ಜನತೆಯ ಕಿವಿಗಳಿಗೆ ಆ ಹೆಸರು ತಲುಪಿದೆ. ಸಾರಕ್ಕಿ ಕೆರೆಯ ಹೆಸರು ಮಾತ್ರವಲ್ಲ, ಸಾರಕ್ಕಿ ಕೆರೆ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಈಗ ಬೀದಿಪಾಲಾಗಿರುವ ಅದೆಷ್ಟೋ ಅಮಾಯಕರ ಆಕ್ರಂದನ ಕೂಡ ರಾಜ್ಯದ ಜನತೆಯ ಕಿವಿಗಳಿಗೆ ಕೇಳಿಸಿದೆ. ಸಾರಕ್ಕಿ ಕೆರೆಯ ಏರಿಯ ಮೇಲೆ ತೆರಳುವಾಗ ಈಗ ಕೆೇಳಿಬರುತ್ತಿರುವುದು – ಮನೆ ಕಳೆದುಕೊಂಡ ಅಮಾಯಕರ ದೀರ್ಘ ನಿಟ್ಟುಸಿರು, ಹತಾಶೆಯ ಕೂಗು, ಮುಂದೇನು […]

ದಿವು ಎಂಬ ನಿಷ್ಕಾಮ ಕರ್ಮಯೋಗಿ

ದು ಗು ಲಕ್ಷ್ಮಣ್ - 0 Comment
Issue Date : 15.04.2015

ವಿಕ್ರಮ ಪತ್ರಿಕೆಯ 50 ವರ್ಷಗಳ ಹಳೆಯ ಸಂಚಿಕೆಗಳನ್ನು ತಿರುವಿ ಹಾಕುತ್ತಿದ್ದೆ. 08.04.1965ರ ಸಂಚಿಕೆಯ ಕೊನೆಯ ಪುಟದಲ್ಲೊಂದು ಸುದ್ದಿ ಕಣ್ಸೆಳೆಯಿತು. ಶಿವಮೊಗ್ಗದಲ್ಲಿ ನಡೆದ ಸಂತಾಪ ಸೂಚಕ ಸಭೆಯ ಸುದ್ದಿ ಅದು. ಆ ಸುದ್ದಿ ಹೀಗಿತ್ತು: ಶಿವಮೊಗ್ಗ ಶಾಖೆಯ ಅ.ಭಾ. ವಿದ್ಯಾರ್ಥಿ ಪರಿಷತ್ತಿನ ಕಾರ್ಯಕಾರಿ ಸಮಿತಿಯು ಶ್ರೀ ದಿವಾಕರ ಭಾಗವತರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಭಕ್ತ ಶಿರೋಮಣಿ ಶ್ರೀ ಅನಂತರಾಮಯ್ಯಂಗಾರ್‌ರ ನಿಧನದ ಬಗ್ಗೆ ಸಂತಾಪ ಸೂಚಿಸಿ ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿತು. ಯಾರು ಈ ದಿವಾಕರ ಭಾಗವತ್? ಈಗ್ಗೆ 50 […]