ನೇತಾಜಿ ಈಗಲೂ ಬದುಕಿದ್ದಾರೆ ಎಂಬ ವಾದ

ನೇತಾಜಿ ಈಗಲೂ ಬದುಕಿದ್ದಾರೆ ಎಂಬ ವಾದ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 19.04.2015

‘ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದ ಆ ಮಹಾಪುರುಷ ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತ ಕಂಡ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ನೇತಾಜಿಯವರ ಅಕಾಲಿಕ ಸಾವು ಇಂದಿಗೂ ನಿಗೂಢ. ಅವರ ಸಾವಿನ ಕುರಿತು ಒಬ್ಬೊಬ್ಬರು ಒಂದೊಂದು ಕತೆ ಹೇಳುತ್ತಾರೆ. ಅವರು 1945ರ ಆಗಸ್ಟ್ 18ರಂದು ವಿಮಾನ ದುರ್ಘಟನೆಯಲ್ಲಿ ಮೃತರಾದರು ಎಂಬುದು ಒಂದು ವಾದ. ಆದರೆ ಆ ದುರ್ಘಟನೆಯಲ್ಲಿ ಅವರ ಜೊತೆಗಿದ್ದವರು ಸಾವಿಗೀಡಾಗಲಿಲ್ಲ. 9 ಸೀಟಿನ ಆ ವಿಮಾನದಲ್ಲಿ ಚಾಲಕರು ಸೇರಿ ಒಟ್ಟು […]

ಆರೆಸ್ಸೆಸ್ ವೇದಿಕೆಗೆ ಅಜೀಂ ಪ್ರೇಮ್‌ಜೀ ಆಗಮಿಸಿದಾಗ....

ಆರೆಸ್ಸೆಸ್ ವೇದಿಕೆಗೆ ಅಜೀಂ ಪ್ರೇಮ್‌ಜೀ ಆಗಮಿಸಿದಾಗ….

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 14.04.2015

ಹೊಸದಿಲ್ಲಿಯಲ್ಲಿ ಏ.4 ರಿಂದ ಏ.6 ರವರೆಗೆ ಸೇವಾಭಾರತಿ ಆಶ್ರಯದಲ್ಲಿ ರಾಷ್ಟ್ರೀಯ ಸೇವಾಸಂಗಮ ಎಂಬ 3 ದಿನಗಳ ಬೃಹತ್ ಸಮಾವೇಶ ಜರುಗಿತು. ಸೇವಾಭಾರತಿ ಆರೆಸ್ಸೆಸ್ ಪ್ರೇರಿತ ಸೇವಾ ಚಟುವಟಿಕೆಗಳ ಒಂದು ಒಕ್ಕೂಟ ಸಂಸ್ಥೆ. ಆರೆಸ್ಸೆಸ್ ಬೇರೆ ಬೇರೆ ಹೆಸರಿನಲ್ಲಿ ದೇಶದಾದ್ಯಂತ ನಡೆಸುತ್ತಿರುವ ಸಾವಿರಾರು ಸೇವಾ ಚಟುವಟಿಕೆಗಳಿಗೆ ಸಂಬಂಧಿಸಿದ 3 ಸಹಸ್ರಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಮಾವೇಶವನ್ನು ಉದ್ಘಾಟಿಸಿದವರು ಮಾತಾ ಅಮೃತಾನಂದಮಯಿ. ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಈ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ್ದರು. […]

ಬೇಕಾಗಿದೆ : ಸ್ವಚ್ಛ ನಾಲಿಗೆ ಆಂದೋಲನ !

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 06.04.2015

    ಕೆಳಗಿನ ಈ ಹೇಳಿಕೆಗಳನ್ನು ಸುಮ್ಮನೆ ಗಮನಿಸುತ್ತಾ ಹೋಗಿ.       *    ಮುಸ್ಲಿಮರೆಲ್ಲರೂ ಜಾತ್ಯತೀತರೆಂದು ನಾನು ಹೇಳುತ್ತೇನೆ. ಮುಸ್ಲಿಮರು ಕೋಮುವಾದಿಗಳಾಗಬೇಕಾದ ಅಗತ್ಯವಿದೆ. ಒಬ್ಬ ಮುಸ್ಲಿಂ ಕೋಮುವಾದಿಯಲ್ಲ. ತನಗಾಗಿ ಅವನು ಮತ ಹಾಕುವುದಿಲ್ಲ.            – ಶಾಜಿಯಾ ಇಲ್ಮಿ ಆಗ ಎಎಪಿ, ಈಗ ಬಿಜೆಪಿ.   *    ಬಡತನವೆನ್ನುವುದು ಒಂದು ಮನಸ್ಸಿನ ಸ್ಥಿತಿ, ಅಷ್ಟೆ. ಆಹಾರ, ಹಣ ಅಥವಾ ಸಾಮಗ್ರಿಗಳ ಕೊರತೆ ಇದೆ ಎಂದು ಇದರ ಅರ್ಥವಲ್ಲ. ಆತ್ಮವಿಶ್ವಾಸ ಇದ್ದರೆ, ಬಡತನವನ್ನು ಮೆಟ್ಟಿ ನಿಲ್ಲಬಹುದು.      […]

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಳರಸರ ಅಂಕುಶವೇಕೆ?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 31.03.2015

ಭಾರತದ ಸಂವಿಧಾನ ಜನತೆಗೆ ಕೊಡಮಾಡಿರುವ ಸ್ವಾತಂತ್ರ್ಯಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಒಂದು. ತಮ್ಮ ಭಾವನೆಗಳನ್ನು ಮುಕ್ತವಾಗಿ ಇತರರೊಂದಿಗೆ ಹಂಚಿಕೊಳ್ಳುವ ಈ ಸ್ವಾತಂತ್ರ್ಯ ಸ್ವಚ್ಛಂಧತೆಗೆ ತಿರುಗಬಾರದು ಎಂಬ ಎಚ್ಚರದ ಆಶಯವೂ ಈ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿದೆ ಎಂಬುದನ್ನು ಯಾರೂ ಮರೆಯಬಾರದು. ಸ್ವಚ್ಛಂಧತೆಗೆ ತಿರುಗದ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾತಂತ್ರ ವ್ಯವಸ್ಥೆಯ ರಕ್ಷಣೆಯಲ್ಲಿ  ಮಹತ್ವದ ಪಾತ್ರವಹಿಸಿದೆ. ಮುಂದೆಯೂ ವಹಿಸಲಿದೆ.  ಈಚೆಗೆ ಸುಪ್ರೀಂಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಒಂದು ಐತಿಹಾಸಿಕ ತೀರ್ಪನ್ನು ನೀಡಿರುವುದನ್ನು ಪ್ರಜ್ಞಾವಂತರೆಲ್ಲರೂ ಸ್ವಾಗತಿಸಿದ್ದಾರೆ.  ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗೆ ಯುಪಿಎ […]

ಮಾಧ್ಯಮಗಳಿಗೆ ಅರ್ಥವಾಗಬೇಕಾದ ಆರೆಸ್ಸೆಸ್

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 24.03.2015

 ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗುಹೋಗುಗಳ ಕುರಿತು ಕೆಲವು ಮಾಧ್ಯಮಗಳು ತಮ್ಮದೇ ಊಹೆಗಳನ್ನು ಆಗಾಗ ಪ್ರಕಟಿಸುತ್ತಲೇ ಇರುತ್ತವೆ. ತಮ್ಮ ತಾಳಕ್ಕೆ ತಕ್ಕಂತೆ ಸಂಘ ಹೆಜ್ಜೆ ಹಾಕಬೇಕು ಎಂದೂ ನಿರೀಕ್ಷಿಸುತ್ತವೆ. ಆದರೆ ಮಾಧ್ಯಮಗಳ ನಿರೀಕ್ಷೆಯಂತೆ ಅಥವಾ ಅವುಗಳ ಅಭಿಪ್ರಾಯಕ್ಕೆ ತಕ್ಕಂತೆ  ಸಂಘ ತನ್ನ ಯೋಜನೆ ರೂಪಿಸುವುದಿಲ್ಲ. ಸಂಘಕಾರ್ಯದ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಸಂಘದ ವರಿಷ್ಠರ ಸಾಮೂಹಿಕ ಚಿಂತನೆಗೆ ಅನುಸಾರವಾಗಿ ಕಾರ್ಯಯೋಜನೆ, ಹುದ್ದೆಗಳ ಬದಲಾವಣೆ ನಡೆಯುತ್ತದೆ ಎನ್ನುವುದು ವಾಸ್ತವ.ಇತ್ತೀಚೆಗೆ ಮಾ. 13, 14 ಮತ್ತು 15ರಂದು ನಾಗ್ಪುರದಲ್ಲಿ ಆರೆಸ್ಸೆಸ್‌ನ ನೀತಿ ನಿರ್ಧಾರಗಳನ್ನು […]

ಹೆತ್ತು ಹೊತ್ತವರು ಲಗೇಜ್‌ಗಳಾಗಿಬಿಟ್ಟರಲ್ಲಯ್ಯಾ!

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 20.03.2015

 ಅದೊಂದು ಮದುವೆ ಮಾತುಕತೆ. ಹೆಣ್ಣು ಹಾಗೂ ಗಂಡಿನ ಕಡೆಯ ಹಿರಿಯರು, ಕಿರಿಯರು, ಮದುವೆಯಾಗಲಿರುವ ವಧು ಹಾಗೂ ವರ ಆ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಹೆಣ್ಣು – ಗಂಡಿನ ಅಪೇಕ್ಷೆಗಳು, ನಿರೀಕ್ಷೆಗಳ ಕುರಿತು ಚರ್ಚೆ ನಡೆದಿತ್ತು. ಇದೆಲ್ಲ ಇಂದಿನ ಕಾಲದಲ್ಲಿ ತೀರಾ ಸಹಜ. ಹಿಂದಾದರೆ ಗಂಡು – ಹೆಣ್ಣಿನ ಅಪೇಕ್ಷೆ, ನಿರೀಕ್ಷೆಗಳ ಕುರಿತು ಯಾವ ಚರ್ಚೆಯೂ ನಡೆಯುತ್ತಿರಲಿಲ್ಲ. ಮದುವೆಯಾಗಲಿರುವ ಯುವತಿ ಹುಡುಗನ ಕಡೆಯವರಿಗೆ ನೇರವಾಗಿ ಪ್ರಶ್ನೆ ಎಸೆದಳು: ‘ನಿಮ್ಮ ಮನೆಯಲ್ಲಿ ಹಳೆಯ ಲಗೇಜ್‌ಗಳು ಇವೆಯೆ?’ ಹುಡುಗನ ಕಡೆಯವರಿಗೆ ತಕ್ಷಣ ಈ […]

ಸಾವು ತರುವ ಸಂಕಟ ಅದೆಷ್ಟು ಯಾತನಾಮಯ!

ದು ಗು ಲಕ್ಷ್ಮಣ್ - 0 Comment
Issue Date : 04.03.2015

   ಹುಟ್ಟು ಆಕಸ್ಮಿಕ, ಆದರೆ ಸಾವು ನಿಶ್ಚಿತ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಿದ್ದರೂ ಅನಿರೀಕ್ಷಿತ ಸಾವು ಉಂಟಾದಾಗ ಆಗುವ ಮಾನಸಿಕ ತುಮುಲ, ಆಘಾತ ಬಣ್ಣನೆಗೆ ನಿಲುಕದ್ದು. ಅದರಲ್ಲೂ ಚಿಕ್ಕವಯಸ್ಸಿನವರು ಸಾವಿಗೀಡಾದಾಗ ಉಂಟಾಗುವ ಶೋಕ ಅತ್ಯಂತ ಯಾತನಾಮಯ. ಅದನ್ನು ಅನುಭವಿಸಿದವರಿಗೇ ಗೊತ್ತು.  ಬೆಂಗಳೂರಿನಲ್ಲಿ ಪ್ರತಿನಿತ್ಯ ಒಂದಲ್ಲೊಂದು ದಾರುಣ ಸಾವು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತದೆ. ಸಾವಿಗೀಡಾದ ಕುಟುಂಬ, ಅವರ ಬಂಧು – ಬಳಗ ಆ ಸಂದರ್ಭದಲ್ಲಿ ಪಡುವ ಯಾತನೆ ಶಬ್ದಗಳಿಗೆ ಮೀರಿದ್ದು. ಫೆ. 26ರಂದು ಬೆಂಗಳೂರಿನ ಕೆಂಪಾಪುರ ಅಗ್ರಹಾರದ […]

ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ನಮೋ ನಮೋ

ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ನಮೋ ನಮೋ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 05.01.2015

ಬದುಕಿನಲ್ಲಿ ಅದೆಷ್ಟೇ ನೋವು-ನಲಿವುಗಳಿರಲಿ, ಕಷ್ಟ-ಸಂಕಟಗಳು ಎದುರಾಗಲಿ, ಸಿರಿತನ-ಬಡತನಗಳೇ ಇರಲಿ ನಂಬಿಕೆಯನ್ನೇ ನೆಚ್ಚಿಕೊಂಡು ಜೀವಿಸುವುದು ಬಹುತೇಕ ಭಾರತೀಯ ಪ್ರಜೆಗಳ ಲಾಗಾಯ್ತಿನ ಮನೋಭಾವ. ನಂಬಿಕೆಯನ್ನೇ ನೆಚ್ಚಿ ಬದುಕುವವರು ಆಸ್ತಿಕರಷ್ಟೇ ಅಲ್ಲ, ನಾಸ್ತಿಕರು ಇದ್ದಾರೆ ಎಂದರೆ ಅದು ಅತಿಶಯೋಕ್ತಿಯಲ್ಲ. ದೇವರಿದ್ದಾನೆ ಎಂಬ ನಂಬಿಕೆಯೋ, ದೇವರಿಲ್ಲ ಎಂಬ ವಿಶ್ವಾಸವೋ ಅಥವಾ ದೇವರಿದ್ದಾನೆಯೋ ಇಲ್ಲವೋ ಎಂಬ ಜಿಜ್ಞಾಸೆಯೋ ಒಂದಲ್ಲ ಒಂದು ರೀತಿಯಲ್ಲಿ ಭಾರತೀಯರನ್ನು ಆವರಿಸಿರುವುದು ಗುಟ್ಟೇನಲ್ಲ. ನಾಸ್ತಿಕರೆಂದು ಕೊಚ್ಚಿಕೊಳ್ಳುವ ಕೆಲವರು ಬಹಿರಂಗವಾಗಿ ‘ದೇವರಿಲ್ಲ, ಅದೆಲ್ಲ ಮಿಥ್ಯ’ ಎಂದು ವಾದಿಸಿದರೂ ‘ಅಕಸ್ಮಾತ್ ದೇವರೇನಾದರೂ ಇದ್ದರೆ ನನಗೆ […]

ಮಕ್ಕಳ ಕಗ್ಗೊಲೆ: ಅಲ್ಲಾಹು ಮೆಚ್ತಾನಾ?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 22.12.2014

ಮಕ್ಕಳನ್ನು ಹೂವಿಗೆ ಹೋಲಿಸುವವರಿದ್ದಾರೆ. ಮಕ್ಕಳು ಹೂವಿನಷ್ಟೇ ಕೋಮಲ ಸ್ವಭಾವದವರು, ನಿರ್ಮಲ ಮನಸ್ಸಿನವರು ಎಂಬುದಕ್ಕೆ ಈ ವಿಶೇಷಣ ಇರಬಹುದು. ಇನ್ನು ಕೆಲವರು ಮಕ್ಕಳನ್ನು ದೇವರಿಗೆ ಸಮಾನ ಎನ್ನುತ್ತಾರೆ. ಏಕೆಂದರೆ ಆಗಷ್ಟೇ ಅರಳುತ್ತಿರುವ ಮಕ್ಕಳ ಮನಸ್ಸು ನಿಷ್ಕಲ್ಮಶ ಹಾಗೂ ಪವಿತ್ರವಾದುದು. ಆ ಮುಗ್ಧ ಮನಸ್ಸುಗಳಲ್ಲಿ ಯಾವುದೇ ಬಗೆಯ ಕೆಟ್ಟ ಯೋಚನೆಗಳಿರುವುದಿಲ್ಲ. ಎಲ್ಲರನ್ನೂ ಆ ಮನಸ್ಸುಗಳು ಪ್ರೀತಿಯಿಂದ ಕಾಣುತ್ತವೆ. ಇದೇ ಕಾರಣಕ್ಕಾಗಿ ಮಕ್ಕಳನ್ನು ನೋಯಿಸಬಾರದು, ಅವರಿಗೆ ಹೊಡೆಯಬಾರದು ಎಂದು ಹಿರಿಯರು ಹೇಳುತ್ತಾರೆ. ಈಗೀಗ ಶಾಲೆಗಳಲ್ಲಿ ಮಕ್ಕಳು ತಪ್ಪು ಮಾಡಿದರೂ ಹೊಡೆಯಕೂಡದು, ನಿಧಾನವಾಗಿ […]

ಒಲಿಂಪಿಕ್‌ಕೂಟ: ಭಾರತದ್ದೇಕೆ ಕಳಪೆ ಸಾಧನೆ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 20.12.2014

139 ಕೋಟಿ ಜನ ಸಂಖ್ಯೆಯ ಚೀನಾ ಈಚೆಗೆ ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಗಳಿಸಿದ ಪದಕಗಳು: 151 ಚಿನ್ನ, 108 ಬೆಳ್ಳಿ ಹಾಗೂ 83 ಕಂಚು- ಒಟ್ಟು 342 ಪದಕಗಳು. ಕೇವಲ 17 ಕೋಟಿ ಜನ ಸಂಖ್ಯೆಯ ಕಝಕಸ್ಥಾನ ಗಳಿಸಿದ ಪದಕಗಳು: 28 ಚಿನ್ನ, 23 ಬೆಳ್ಳಿ ಹಾಗೂ 33 ಕಂಚು- ಒಟ್ಟು 84 ಪದಕಗಳು. ಆದರೆ 127 ಕೋಟಿ ಜನಸಂಖ್ಯೆಯ ಭಾರತ ಗಳಿಸಿದ ಪದಕಗಳು ಕೇವಲ 11 ಚಿನ್ನ, 10 ಬೆಳ್ಳಿ […]