ಸಾಧ್ವಿಗೆ ಗುರಾಣಿ; ಓವೈಸಿ, ಅಜಂಗೆ ಮೆಹರ್ಬಾನಿ!

ದು ಗು ಲಕ್ಷ್ಮಣ್ ; ಲೇಖನಗಳು - 1 Comment
Issue Date : 09.12.2014

ಕಳೆದ ನಾಲ್ಕು ದಿನಗಳಿಂದ ಸಂಸತ್ತಿನಲ್ಲಿ ವಿರೋಧ ಪಕ್ಷಗಳದ್ದು ಒಂದೇ ಪ್ರಲಾಪ: ಆಹಾರ ಸಂಸ್ಕರಣ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ರಾಜೀನಾಮೆ ನೀಡಬೇಕು. ಅದಕ್ಕೆ ಕಾರಣ – ಡಿ. 1ರಂದು ದಿಲ್ಲಿಯಲ್ಲಿ ನಡೆದ ಬಿಜೆಪಿ ರ್ಯಾಲಿಯೊಂದರಲ್ಲಿ ಆಕೆ ಭಾಷಣದ ಸಂದರ್ಭದಲ್ಲಿ ಆಡಿದ ನಿಂದನೀಯ ಮಾತು. ಆಕೆ ಆಡಿದ್ದಾದರೂ ಏನು? ‘ಆಪ್ ಕೋ ತಯ್‌ಕರ್‌ನಾ ಹೈ ಕಿ ದಿಲ್ಲಿ ಮೇ ಸರಕಾರ್ ರಾಮ್‌ಜಾದೋಂಕಿ ಬನೇಗಿ ಯಾ ಹರಾಮ್‌ಜಾದೋಂಕಿ’. ಸಾಧ್ವಿ ನಿರಂಜನ ಜ್ಯೋತಿ ಕೇಂದ್ರ ಸರ್ಕಾರದ ಒಬ್ಬ ಸಚಿವೆಯಾಗಿ […]

ಸ್ವಚ್ಛ ಭಾರತ: ಬೇಕಾಗಿದೆ ಉಚ್ಚ ಇಚ್ಛಾಶಕ್ತಿ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date : 01.12.2014

ಅವರು ಕತ್ತಲಾಗುವುದನ್ನೇ ಕಾಯುತ್ತಿರುತ್ತಾರೆ. ಈ ಸೂರ್ಯನೆಂಬ ಬೆಳಕಿನುಂಡೆ ಯಾವಾಗ ಮುಳುಗಿ ಸಾಯುತ್ತಾನೋ ಎಂದು ಹಿಡಿಶಾಪ ಹಾಕುತ್ತಿರುತ್ತಾರೆ. ಒಮ್ಮೆ ಸೂರ್ಯ ಮುಳುಗಿ ಕತ್ತಲಾವರಿಸಿತೆಂದರೆ ಇವರಿಗೆ ಎಲ್ಲಿಲ್ಲದ ಆನಂದ. ಬ್ರಹ್ಮಾಂಡದಷ್ಟು ಸಂತಸ! ಇದೇ ಮಂದಿಗೆ ಬೆಳಿಗ್ಗೆ ಸೂರ್ಯ ಬೇಗನೆ ಉದಯಿಸುವ ಬಗ್ಗೆಯೂ ತಕರಾರಿದೆ. ಇಡೀ ಜಗತ್ತು ಸೂರ್ಯೋದಯಕ್ಕೆ ಹಪಹಪಿಸಿದರೆ ಇವರು ಇಷ್ಟು ಬೇಗ ಸೂರ್ಯೋದಯ ಯಾಕಾದರೂ ಆಯ್ತಪ್ಪ್ಪಾ ಎಂದು ಮಮ್ಮಲ ಮರುಗುತ್ತಾರೆ. ಸೂರ್ಯೋದಯ ಇವರಿಗೆ ತರುವ ಕಷ್ಟಸಂಕಟಗಳು ಅಷ್ಟಿಷ್ಟಲ್ಲ. ಅಂದ ಹಾಗೆ ಕತ್ತಲಿಗಾಗಿ ಕಾಯುವ, ಬೆಳಕನ್ನು ದ್ವೇಷಿಸುವ ಇವರು ಖಂಡಿತ […]

ಇದು ಸಮಾಜವಾದವಲ್ಲ , ಸ’ಮಜಾವಾದ’ !

ದು ಗು ಲಕ್ಷ್ಮಣ್ - 0 Comment
Issue Date : 24.112014

ಉತ್ತರಪ್ರದೇಶದ ರಾಂಪುರದಲ್ಲಿ ಕಳೆದ ನವೆಂಬರ್ 21, 22- 2 ದಿನಗಳ ಕಾಲ ಅದ್ದೂರಿಯಾಗಿ ನಡೆದ ಸಮಾಜವಾದಿ ನೇತಾರ ಮುಲಾಯಂ ಸಿಂಗ್ ಯಾದವ್ ಅವರ 75ನೇ ಹುಟ್ಟುಹಬ್ಬದ ವೈಖರಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮುಲಾಯಂ ಸಿಂಗ್ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ಯಾರದ್ದೂ ಆಕ್ಷೇಪವಿಲ್ಲ. ಪ್ರತಿಯೊಬ್ಬರಿಗೂ ಅವರವರ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸ್ವಾತಂತ್ರ್ಯ ಇದ್ದೇ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಆದರೆ ಆ ಹುಟ್ಟುಹಬ್ಬದ ಆಚರಣೆಗೆ ಸರ್ಕಾರಿ ಹಣ, ಆಡಳಿತ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸಮಂಜಸ? ಅದು […]

 ಏಕನಾಥ ರಾನಡೆ ಎಂಬ ಅಸಾಮಾನ್ಯ ಧ್ಯೇಯಜೀವಿ

ಏಕನಾಥ ರಾನಡೆ ಎಂಬ ಅಸಾಮಾನ್ಯ ಧ್ಯೇಯಜೀವಿ

ದು ಗು ಲಕ್ಷ್ಮಣ್ - 0 Comment
Issue Date : 17.11.2014

ಸ್ವಾಮಿ ವಿವೇಕಾನಂದರು ವಿದೇಶಗಳಿಗೆ ಹೋಗಿ ಹಿಂದು ಧರ್ಮದ ಮಹತ್ವವನ್ನು ಸಾರುವ ಮೊದಲು, ಭಾರತದಾದ್ಯಂತ ಸಂಚರಿಸಿ, ಕೊನೆಗೆ ಅವರು ತಲುಪಿದ್ದು ದಕ್ಷಿಣದ ತುತ್ತತುದಿಯಲ್ಲಿರುವ ಕನ್ಯಾಕುಮಾರಿಗೆ. ಅಲ್ಲಿರುವ ಸಾಗರದ ಮಧ್ಯದ ಬಂಡೆಯ ಮೇಲೆ ಕುಳಿತು ಅವರು ಮೂರು ದಿನಗಳ ಕಾಲ ಧ್ಯಾನಸ್ಥರಾಗಿದ್ದರು. ಸಾಗರದ ಅಲೆಗಳು ಆ ಬಂಡೆಯನ್ನು ಅಪ್ಪಳಿಸಿದಂತೆಯೇ ದೇಶದಲ್ಲಿ ತುಂಬಿದ್ದ ಮೌಢ್ಯ, ದಾರಿದ್ರ್ಯ, ವಿದೇಶಗಳಲ್ಲಿ ಹಿಂದು ಧರ್ಮದ ವಿರುದ್ಧದ ಅಪಪ್ರಚಾರ… ಮೊದಲಾದ ಸಮಸ್ಯೆಗಳು ಅವರ ಮನದ ಬಂಡೆಯ ಮೇಲೆ ಅಪ್ಪಳಿಸುತ್ತಿದ್ದವು.ಅವೆಲ್ಲಕ್ಕೂ ಒಂದು ತಾರ್ಕಿಕ ಅಂತ್ಯ ಕಂಡುಕೊಳ್ಳಲೆಂದೇ ಆ ಬಂಡೆಯ […]

ಅರುಣ್ ಎಂಬ ಕಪಟ ವಿಜ್ಞಾನಿಯ ಕಥೆ

ಅರುಣ್ ಎಂಬ ಕಪಟ ವಿಜ್ಞಾನಿಯ ಕಥೆ

ದು ಗು ಲಕ್ಷ್ಮಣ್ - 0 Comment
Issue Date : 10.11.2014

 ನೇರ ನೋಟ 10-11-2014 ಅರುಣ್.ಪಿ.ವಿ ಕೇರಳದ ಮಣಿಮಲ ಎಂಬ ಊರಿನ ಪ್ರತಿಭಾವಂತ ಪದವೀಧರ. ಆತನಿಗೆ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ನಾಸಾದಿಂದ ವಿಜ್ಞಾನಿಯಾಗಿ ಕೆಲಸ ನಿರ್ವಹಿಸಲು ಕರೆಬಂದಿತು. ಆತ ಭೋಪಾಲ್‌ನ ಎನ್‌ಐಟಿಯಲ್ಲಿ ತನ್ನ ಎಂ.ಟೆಕ್ ಪದವಿಯನ್ನು ಮುಗಿಸಿದ್ದ. ಅದಾದ ಬಳಿಕ ಪ್ರತಿಷ್ಠಿತ ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ಕೊಂಚ ಕಾಲ ಉದ್ಯೋಗ ನಿರ್ವಹಿಸಿದ್ದ. ಅರುಣ್ ತನ್ನ ಪಿಹೆಚ್‌ಡಿ ಪದವಿಯನ್ನು ಮುಗಿಸಿದ್ದು ಮೆಸಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ). ಆತ ಅಲ್ಲಿದ್ದಾಗಲೇ ವಿಜ್ಞಾನಿಯಾಗಿ ಉದ್ಯೋಗ ನಿರ್ವಹಿಸಲು ನಾಸಾದಿಂದ […]

ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾದ ಸದಾಸ್ಫೂರ್ತಿದಾತ ನಮ್ಮ ಸೂರೂಜಿ

ದು ಗು ಲಕ್ಷ್ಮಣ್ - 0 Comment
Issue Date : 06.11.2014

ಸೂರೂಜಿ, ಸೂರು ಅವರು…  ಈ ಹೆಸರು ಕೇಳಿದಾಕ್ಷಣ ಆರೆಸ್ಸೆಸ್ ವಲಯದಲ್ಲಿ  ತಕ್ಷಣ ಒಂದು ಗೌರವ ಭಾವನೆ, ಒಂದು ಆಪ್ತತೆ, ಒಂದು ಅನಿರ್ವಚನೀಯ ಆತ್ಮೀಯ ಭಾವ ಸುಳಿಯುತ್ತದೆ. ಹಿರಿ-ಕಿರಿಯರೆನ್ನದೆ ಎಲ್ಲರೂ ಈ ಹೆಸರಿನ ವ್ಯಕ್ತಿಯ ಮುಂದೆ ನತಮಸ್ತಕರಾಗುತ್ತಾರೆ. ಅವರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ಹೃದಯ ತೆರೆದಿಡುತ್ತಾರೆ.  ಸೂರೂಜಿ ಅಥವಾ ಸೂರು ಎಂದು ಪ್ರೀತಿಯಿಂದ ಕರೆಯಲಾಗುವ  ಆ ವ್ಯಕ್ತಿಯೇ ಶ್ರೀ ಕೃ.ಸೂರ್ಯನಾರಾಯಣ ರಾವ್. ಈಗ 90ರ ಹರೆಯಕ್ಕೆ ತಲುಪಿರುವ (ಹುಟ್ಟಿದ್ದು 20.08.1924) ಅವರು ಸಂಘದ ವರಿಷ್ಠ ಪ್ರಚಾರಕರು. 1946ರಲ್ಲಿ ಸಂಘದ ಪ್ರಚಾರಕರಾಗಿ […]

ಇಂಡಿಯಾ ಭಾರತ ಆಗೋದು ಯಾವಾಗ ?

ದು ಗು ಲಕ್ಷ್ಮಣ್ - 0 Comment
Issue Date : 27.10.2014

ಆ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅರ್ಥಪೂರ್ಣ ಕೊಡುಗೆ. ರಾಜಧಾನಿ ಬೆಂಗಳೂರು, ಗಡಿಭಾಗದ ಬೆಳಗಾವಿ ಸೇರಿದಂತೆ 12 ಪ್ರಮುಖ ನಗರಗಳ ಹೆಸರನ್ನು ಕನ್ನಡದ ಉಚ್ಚಾರಣೆಗೆ ಅನುಗುಣವಾಗಿ ಬದಲಾಯಿಸಲು ಈಗ ಉಭಯ ಸರ್ಕಾರಗಳಿಂದ ಹಸಿರು ನಿಶಾನೆ ಕೊನೆಗೂ ದೊರೆತಿದೆ. ಈ ಹಿಂದೆ ಕೂರ್ಗ್, ಧಾರ್ವಾರ್, ನಾರ್ತ್ ಮತ್ತು ಸೌತ್ ಕೆನರಾಗಳನ್ನು ಕ್ರಮವಾಗಿ ಕೊಡಗು, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ ಎಂದು ಬದಲಾಯಿಸಲಾಗಿತ್ತು. ಅಷ್ಟೇಕೆ, ಮೈಸೂರು ಎಂದಿದ್ದ ನಮ್ಮ ರಾಜ್ಯದ ಹೆಸರನ್ನು ಕರ್ನಾಟಕವೆಂದೂ ಬದಲಾಯಿಸಲಾಗಿತ್ತು. […]

ಹಾಗಿದ್ದರೆ ಇವರೆಲ್ಲ ಕಾನೂನಿಗೆ ಅತೀತರೆ?

ದು ಗು ಲಕ್ಷ್ಮಣ್ - 0 Comment
Issue Date : 20.10.2014

 ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ 4 ವರ್ಷ ಶಿಕ್ಷೆ ಮತ್ತು 100 ಕೋಟಿ ರೂ. ದಂಡ ತೆರಬೇಕಾಗಿ ಬಂದು ಜೈಲು ಪಾಲಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕೊನೆಗೂ ಸುಪ್ರಿಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಇನ್ನೆರಡು ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆ ಸಲ್ಲಿಸಬೇಕು. 3 ತಿಂಗಳಲ್ಲಿ ಮೇಲ್ಮನವಿ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ಜಾಮೀನು ಕರುಣಿಸಿದ ಸುಪ್ರಿಂಕೋರ್ಟ್ ಪೀಠದ ಷರತ್ತು. ಜಯಾಗೆ ಜಾಮೀನು ದೊರಕಿದ್ದರೂ ಬೆಂಗಳೂರಿನ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದ ಶಿಕ್ಷೆ ರದ್ದಾಗಿಲ್ಲ. […]

ಪದಕ ಬೇಟೆ: ಚೀನಾದ ಪಾರಮ್ಯ ಮುರಿಯೋದು ಹೇಗೆ?

ಪದಕ ಬೇಟೆ: ಚೀನಾದ ಪಾರಮ್ಯ ಮುರಿಯೋದು ಹೇಗೆ?

ದು ಗು ಲಕ್ಷ್ಮಣ್ - 0 Comment
Issue Date : 13.10.2014

 ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟ ಭಾರತದ ಪಾಲಿಗೆ ಒಂದಿಷ್ಟು ಸಿಹಿ, ಮತ್ತೆ ಒಂದಿಷ್ಟು ಕಹಿ. ಒಟ್ಟಾರೆ ಗಳಿಸಿದ ಪದಕಗಳಿಗೆ ಹೋಲಿಸಿದರೆ, ಭಾರತ 2010ರ ಏಷ್ಯನ್ ಕ್ರೀಡಾಕೂಟಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲಲಿಲ್ಲ. ಆದರೆ ಕೆಲವು ಸಕಾರಾತ್ಮಕ ಅಂಶಗಳು ಇಂಚೆನ್‌ನಲ್ಲಿ ಹೊರಹೊಮ್ಮಿವೆ. ಸತತ 3ನೇ ವರ್ಷ ಪದಕ ಗಳಿಕೆಯಲ್ಲಿ ‘ ಅರ್ಧ ಶತಕ’ ಬಾರಿಸಿದೆ. 2006ರ ದೋಹಾ ಕೂಟದಲ್ಲಿ 53 ಮತ್ತು 2010ರ ಗುವಾಂಗ್ ಜೌ ಕೂಟದಲ್ಲಿ ಭಾರತಕ್ಕೆ 65 ಪದಕಗಳು ಲಭಿಸಿದ್ದರೆ ಈ ಬಾರಿ […]

ವೈಜ್ಞಾನಿಕ ಸಾಧನೆಗಳಿಗೆ ಏಕಿಲ್ಲ ಆದ್ಯತೆ?

ವೈಜ್ಞಾನಿಕ ಸಾಧನೆಗಳಿಗೆ ಏಕಿಲ್ಲ ಆದ್ಯತೆ?

ದು ಗು ಲಕ್ಷ್ಮಣ್ - 0 Comment
Issue Date : 06.10.2014

ಈ ಬಾರಿಯ ದಸರಾ ಉತ್ಸವ ಭಾರತೀಯರೆಲ್ಲರಿಗೂ ಅತ್ಯಂತ ಸಂಭ್ರಮ ಉಂಟುಮಾಡಿರಲೇಬೇಕು. ಅದಕ್ಕೆ ಕಾರಣ, ಭಾರತ ಜಾಗತಿಕವಾಗಿ ವಿಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಗೆಲುವನ್ನು ಸಾಧಿಸಿದ್ದು. ಭಾರತದ ವಿಜ್ಞಾನಿಗಳು ಅಸಾಧ್ಯವಾದುದನ್ನು ಸಾಧ್ಯ ಎಂದು ಸಾಬೀತುಪಡಿಸಿದ್ದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಈಗ ಇತಿಹಾಸವನ್ನೇ ನಿರ್ಮಿಸಿ ಬಿಟ್ಟಿದೆ. ಮಂಗಳ ಗ್ರಹಕ್ಕೆ ನೌಕೆ ಕಳುಹಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ವಿಜ್ಞಾನಿಗಳು ಕಳುಹಿಸಿದ ನೌಕೆ ಮಂಗಳ ಕಕ್ಷೆಗೆ ಯಶಸ್ವಿಯಾಗಿ ಸೇರಿ ತನ್ನ ಕಾರ್ಯ ಆರಂಭಿಸಿದೆ. ವಿಜ್ಞಾನಿಗಳ ಈ ಅದ್ಭುತ ಸಾಹಸವನ್ನು ಕೊಂಡಾಡಲು ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಸ್ವತಃ […]