ಭಾರತದ ಪ್ರಾತಃಸ್ಮರಣೀಯರ ಮಾನ ಹರಾಜು ಹಾಕುತ್ತಿರುವ ವಿದೇಶಿ ಸಾಂಸ್ಕೃತಿಕ ಭಯೋತ್ಪಾದಕರು!

ಭಾರತದ ಪ್ರಾತಃಸ್ಮರಣೀಯರ ಮಾನ ಹರಾಜು ಹಾಕುತ್ತಿರುವ ವಿದೇಶಿ ಸಾಂಸ್ಕೃತಿಕ ಭಯೋತ್ಪಾದಕರು!

ದು ಗು ಲಕ್ಷ್ಮಣ್ - 0 Comment
Issue Date : 29.09.2014

ಭಾರತದ ಆಧ್ಯಾತ್ಮಿಕತೆ, ಇಲ್ಲಿನ ಮಹಾನ್ ಪುರುಷರ ವಿರುದ್ಧ ಹೀನಾಮಾನವಾಗಿ ತೆಗಳುವುದು, ಆ ಚೇತನಗಳ ನೆನಪಿಗೆ ಮಸಿ ಬಳಿಯುವುದೆಂದರೆ ಕೆಲವು ವಿದೇಶಿ ಲೇಖಕರಿಗೆ ಅದೇನೋ ಈಗಲೂ ವಿಕೃತ ಸಂತೋಷ. ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಮಾಹಿತಿಗಳನ್ನು ತುರುಕಿ ನಮ್ಮ ದೇಶದ ಪ್ರಾತಃಸ್ಮರಣೀಯರ ವ್ಯಕ್ತಿತ್ವಕ್ಕೆ ಕುಂದು ತರುವ ಪ್ರಯತ್ನಗಳನ್ನು ಈ ವಿಘ್ನಸಂತೋಷಿಗಳು ಮಾಡುತ್ತಲೇ ಇರುತ್ತಾರೆ. ಇಂಥವರಲ್ಲಿ ವೆಂಡಿ ಡೊನಿಗರ್, ಜಫ್ರಿ ಕೃಪಾಲ್ ಹಾಗೂ ಪೀಟರ್ ಹೀಸ್ ಪ್ರಮುಖರು. ವೆಂಡಿ ಡೊನಿಗರ್ ತನ್ನ The Hindus : An Alternative […]

ಪರಿಹಾರ ಕಾರ‍್ಯದಲ್ಲಿ ಸರ್ಕಾರ, ಸೇನೆ, ಆರೆಸ್ಸೆಸ್ ಗೀಲಾನಿ, ಯಾಸಿನ್ ಮಲಿಕ್ ಮಾತ್ರ ನಾಪತ್ತೆ !

ಪರಿಹಾರ ಕಾರ‍್ಯದಲ್ಲಿ ಸರ್ಕಾರ, ಸೇನೆ, ಆರೆಸ್ಸೆಸ್ ಗೀಲಾನಿ, ಯಾಸಿನ್ ಮಲಿಕ್ ಮಾತ್ರ ನಾಪತ್ತೆ !

ದು ಗು ಲಕ್ಷ್ಮಣ್ - 0 Comment
Issue Date : 22.09.2014

ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದ್ದ ಕಾಶ್ಮೀರ ಕಣಿವೆ ಇಂದು ನರಕಸದೃಶ ಸ್ಥಿತಿಗೆ ತಲುಪಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅಲ್ಲಿ ಸಂಭವಿಸಿದ ಭೀಕರ ಪ್ರಳಯದಾಟ. ಈ ಶತಮಾನದವಧಿಯಲ್ಲೆ ಕಂಡು ಕೇಳರಿಯದ ಭಾರಿ ಮಳೆ ಹಾಗೂ ಭೀಕರ ಪ್ರವಾಹ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಕೊಚ್ಚಿ ಹಾಕಿದೆ. ಇನ್ನೂರಕ್ಕೂ ಹೆಚ್ಚು ಮಂದಿ ಈ ಭೀಕರ ಪ್ರವಾಹದಿಂದ ಸಾವಿಗೀಡಾಗಿದ್ದಾರೆ. ಆದರೆ ವಾಸ್ತವವಾಗಿ ಸಾವಿಗೀಡಾದವರ ನಿಖರ ಸಂಖ್ಯೆ ಇನ್ನೂ ಹೆಚ್ಚಿರಬಹುದು. 1500 ಹಳ್ಳಿಗಳು ಪ್ರವಾಹದಿಂದ ನಲುಗಿ ಹೋಗಿವೆ. 390 ಹಳ್ಳಿಗಳು ಪ್ರವಾಹದಲ್ಲಿ ಅಕ್ಷರಶಃ ಮುಳುಗಿವೆ. […]

125 ಕೋಟಿ ಜನರೂ ಒಂದು ಹೆಜ್ಜೆ ಮುಂದಿಟ್ಟರೆ...!

125 ಕೋಟಿ ಜನರೂ ಒಂದು ಹೆಜ್ಜೆ ಮುಂದಿಟ್ಟರೆ…!

ದು ಗು ಲಕ್ಷ್ಮಣ್ - 0 Comment
Issue Date : 18.08.2014

ಸ್ವಾತಂತ್ರ್ಯದ ದಿನ ದೆಹಲಿಯ ಕೆಂಪುಕೋಟೆಯ ಮೇಲಿನಿಂದ ಪ್ರಧಾನ ಮಂತ್ರಿ ಮಾಡುವ ಭಾಷಣಕ್ಕೆ ಅದರದ್ದೇ ಆದ ಮಹತ್ವವಿದೆ. ಇಡೀ ದೇಶ ಈ ಭಾಷಣವನ್ನು ಆಲಿಸಲು ಕಾತರದಿಂದ ಕಿವಿ ಅರಳಿಸಿ ಕುಳಿತಿರುತ್ತದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಭಾಷಣ ಅನಿವಾರ್ಯವಾಗಿ ಪೂರೈಸಬೇಕಾದ ವಿಧಿಯ ಮಟ್ಟಕ್ಕೆ ಇಳಿದಿತ್ತು. ಕಾಟಾಚಾರದ ಭಾಷಣ ಆದಾಗಿತ್ತು. ಪ್ರಧಾನಿಯ ಭಾಷಣವೆಂದರೆ ಪ್ರಚಲಿತ ವಿಷಯಗಳ ಬಗ್ಗೆ ಒಂದಿಷ್ಟು ಮಾತುಗಳು, ಕೆಲವು ಹೊಸ ಸ್ಕೀಮ್‌ಗಳ ಮತ್ತು ಕಾರ್ಯಕ್ರಮಗಳ ಘೋಷಣೆ, ಜಿಡಿಪಿ ಏರಿಳಿತ ಲೆಕ್ಕಾಚಾರ, ಇದುವರೆಗೆ ಮಾಡಿದ ಸಾಧನೆಗಳ ಅದೇ ಸವಕಲು […]

ನ್ಯಾಯದೇವತೆ ಮೇಲೂ ಲೈಂಗಿಕ ದೌರ್ಜನ್ಯವೆ?

ನ್ಯಾಯದೇವತೆ ಮೇಲೂ ಲೈಂಗಿಕ ದೌರ್ಜನ್ಯವೆ?

ದು ಗು ಲಕ್ಷ್ಮಣ್ - 0 Comment
Issue Date : 11.08.2014

ದೆಹಲಿಯ ನಿರ್ಭಯಾ ಎಂಬ ಅಮಾಯಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಅಂತಹ ಹಲವಾರು ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ ನಿರ್ಭಯಾ ಪ್ರಕರಣಕ್ಕೆ ಸಿಕ್ಕಿದಷ್ಟು ಪ್ರಚಾರ ಉಳಿದ ಪ್ರಕರಣಗಳಿಗೆ ದೊರಕಿಲ್ಲ. ಇತ್ತೀಚೆಗೆ ಬೆಂಗಳೂರಿನ ವಿಬ್‌ಗಯಾರ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದ ಪುಟ್ಟ ಕಂದಮ್ಮನ ಮೇಲೆ ಅಲ್ಲಿನ ಸಿಬ್ಬಂದಿ ವರ್ಗ ನಡೆಸಿದ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣ ಬೆಂಗಳೂರು ನಗರದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಆ ಖಾಸಗಿ ಶಾಲೆಗೆ ನೀಡಿದ ಅನುಮತಿಯನ್ನೇ ರದ್ದುಗೊಳಿಸಬೇಕೆಂಬಷ್ಟರಮಟ್ಟಿಗೆ ಪ್ರತಿಭಟನೆ ಕಾವೇರಿತ್ತು. […]

‘ಮಿಷನ್ 44 ಪ್ಲಸ್’ ಗುರಿಯತ್ತ ಬಿಜೆಪಿ ಚಿತ್ತ

‘ಮಿಷನ್ 44 ಪ್ಲಸ್’ ಗುರಿಯತ್ತ ಬಿಜೆಪಿ ಚಿತ್ತ

ದು ಗು ಲಕ್ಷ್ಮಣ್ - 0 Comment
Issue Date : 04.08.2014

ಕಳೆದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ಈ ಬೃಹತ್ ಗೆಲುವಿಗೆ ಕಾರಣವಾದದ್ದು ಉತ್ತರ ಪ್ರದೇಶದ 72 ಸ್ಥಾನಗಳ ಗೆಲುವು ಎಂದೇ ಎಲ್ಲ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. ಅದು ನಿಜ ಕೂಡ ಆಗಿತ್ತು. ಆದರೆ ಅದೊಂದೇ ಅಂಶ ಬಿಜೆಪಿಯ 282 ಸ್ಥಾನಗಳ ಗೆಲುವಿಗೆ ಕಾರಣವಾಗಿರಲಿಲ್ಲ. ದೇಶದ ಉಳಿದ ರಾಜ್ಯಗಳಲ್ಲಿ ಪಡೆದ ನಿರ್ಣಾಯಕ ಗೆಲುವು ಕೂಡ ಮುಖ್ಯ ಪಾತ್ರವಹಿಸಿತ್ತು. ಅಂತಹ ಗೆಲುವಿನಲ್ಲಿ ಜಮ್ಮು-ಕಾಶ್ಮೀರ ಪ್ರಾಂತದಲ್ಲಿ ಪಡೆದ ಗೆಲುವು ಕೂಡ ಪ್ರಮುಖವಾಗಿತ್ತು. […]

ಅವರಂತೆಯೇ ನಾವೂ ದೇಶಕ್ಕಾಗಿ ಬದುಕೋಣ

ಅವರಂತೆಯೇ ನಾವೂ ದೇಶಕ್ಕಾಗಿ ಬದುಕೋಣ

ದು ಗು ಲಕ್ಷ್ಮಣ್ - 0 Comment
Issue Date : 28.07.2014

ಆ ನಾಳೆ ಬರಲೇ ಇಲ್ಲ ಮದುವೆಯಾಗಿ ಇನ್ನೂ ಹತ್ತು ತಿಂಗಳು ಕೂಡ ಕಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೆಚ್ಚಿನ ಮಡದಿಯಿಂದ ಪತ್ರವೊಂದು ಬಂದರೆ ಅದನ್ನು ತತ್‌ಕ್ಷಣ ತೆರೆದೋದಬೇಕೆಂಬ ಕಾತರ ಯಾರಿಗೆ ತಾನೆ ಇರುವುದಿಲ್ಲ? 29ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ 16 ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಲ್ಲಿದ್ದ. ಒಂದು ಕೈಯಲ್ಲಿ ಭೂಪಟ, ಇನ್ನೊಂದರಲ್ಲಿ ಎ.ಕೆ. 47 ರೈಫಲ್. ತೊಲೊಲಿಂಗ್ ಪರ್ವತದೆತ್ತರದಲ್ಲಿ ಪಾಕ್ ಅತಿಕ್ರಮಣಕಾರರು ಕಟ್ಟಿಕೊಂಡಿದ್ದ ಬಂಕರ್ ಧ್ವಂಸ […]

ಇದು ಪಂಚೆಗಾದ ಅವಮಾನವಷ್ಟೇ ಅಲ್ಲ...!

ಇದು ಪಂಚೆಗಾದ ಅವಮಾನವಷ್ಟೇ ಅಲ್ಲ…!

ದು ಗು ಲಕ್ಷ್ಮಣ್ - 0 Comment
Issue Date : 21.07.2014

ತಮಿಳುನಾಡಿನಾದ್ಯಂತ ಈಗ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಕಾವೇರಿ ನದಿನೀರಿನ ವಿವಾದವಲ್ಲ. ಆದರೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿಗೆ ಪಂಚೆಯುಟ್ಟ ಕಾರಣಕ್ಕೆ ಕ್ಲಬ್‌ವೊಂದರಲ್ಲಿ ಪ್ರವೇಶ ನಿರಾಕರಿಸಿದ ವಿಷಯ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ವಿಧಾನಸಭೆಯಲ್ಲೂ ಪಂಚೆ ಗದ್ದಲ ಜೋರಾಗಿ ಕೇಳಿಬಂದಿದೆ. ಆ ಘಟನೆ ನಡೆದಿದ್ದು ಹೀಗೆ: ಕಳೆದ ಜು. 11ರಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್‌ಸಿಎ) ಕ್ಲಬ್‌ನಲ್ಲಿ ಜರುಗಿದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದಕ್ಕೆ ಮದರಾಸ್ ಹೈಕೋರ್ಟ್ ನ್ಯಾಯಮೂರ್ತಿ ಡಿ. ಹರಿ ಪರಂಧಾಮನ್ ಹಾಗೂ ಇಬ್ಬರು ಹಿರಿಯ ವಕೀಲರು ಹೋಗಿದ್ದಾಗ ಅವರಿಗೆ […]

ಫತ್ವಾ ವಿರುದ್ಧ ಸುಪ್ರೀಂಕೋರ್ಟ್ ಪ್ರಹಾರ

ಫತ್ವಾ ವಿರುದ್ಧ ಸುಪ್ರೀಂಕೋರ್ಟ್ ಪ್ರಹಾರ

ದು ಗು ಲಕ್ಷ್ಮಣ್ - 0 Comment
Issue Date : 14.07.2014

ಉದ್ಯೋಗಸ್ಥ ಮಹಿಳೆಯರು ಪುರುಷ ಸಹೋದ್ಯೋಗಿಗಳೊಂದಿಗೆ ಬೆರೆಯುವಂತಿಲ್ಲ. ಸ್ತ್ರೀಯರು ಬುರ್ಖಾ ಧರಿಸಲೇಬೇಕು. ಮೊಬೈಲ್ ಫೋನ್ ಮೂಲಕ ಮೂರು ಬಾರಿ ತಲಾಖ್ ಹೇಳಿದರೂ ವಿವಾಹ ವಿಚ್ಛೇದನ ಸಿಂಧು ಆಗುತ್ತದೆ. ಮಹಿಳೆಯರು ಖಾಜಿ ಅಥವಾ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಭಾವೀ ಪತ್ನಿ (ಪತಿ)ಯೊಂದಿಗೆ ಫೋನ್‌ನಲ್ಲಿ ಮಾತನಾಡುವುದು ನಿಷಿದ್ಧ. 13 ವರ್ಷ ದಾಟಿದ ಹರಿಹರೆಯದ ಬಾಲಕಿಯರು ಸೈಕಲ್ ಸವಾರಿ ಮಾಡುವಂತಿಲ್ಲ. ಮಹಿಳೆಯರು ಕಾರು ಚಲಾಯಿಸುವಂತಿಲ್ಲ. ಮಹಿಳೆಯರು ಚುನಾವಣೆಗೆ ಸ್ಪರ್ಧಿಸಕೂಡದು. ಸಹ ಶಿಕ್ಷಣಕ್ಕೆ ಅನುಮತಿ ಇಲ್ಲ. ಟಿವಿಯಲ್ಲಿ ವ್ಯಂಗ್ಯಚಿತ್ರ ನೋಡುವುದು ಕಾನೂನುಬಾಹಿರ. ಮಾಡೆಲಿಂಗ್ ಮತ್ತು ಅಭಿನಯಗಳು […]

 ಅಧಿಕಾರಸ್ಥರು ಹುಟ್ಟುಹಾಕಿದ ಅಪಾಯಕಾರಿ ‘ಸಂಸ್ಕೃತಿ’!

ಅಧಿಕಾರಸ್ಥರು ಹುಟ್ಟುಹಾಕಿದ ಅಪಾಯಕಾರಿ ‘ಸಂಸ್ಕೃತಿ’!

ದು ಗು ಲಕ್ಷ್ಮಣ್ - 0 Comment
Issue Date : 07.07.2014

ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಗಳೂರಿನ ಬಾರ್ ಒಂದರಲ್ಲಿ ಪೊಲೀಸ್ ಪೇದೆಗಳನ್ನು ನಿಂದಿಸಿ, ದಾಂಧಲೆ ನಡೆಸಿ, ಅನಂತರ ನಾಪತ್ತೆಯಾದ ಪ್ರಕರಣ ವಿಧಾನಮಂಡಲದ ಉಭಯ ಸದನಗಳ ಕಾರ್ಯಕಲಾಪವನ್ನು ಬಲಿ ತೆಗೆದುಕೊಂಡಿದೆ. ಶಾಸಕರನ್ನು ತಕ್ಷಣ ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದರೆ, ಕಾಶಪ್ಪನವರ್ ಎಲ್ಲಿದ್ದಾರೆಂಬುದೇ ಗೊತ್ತಿಲ್ಲ, ಅದೂ ಅಲ್ಲದೆ ಇದೇನೂ ಅಂತಹ ದೊಡ್ಡ ಪ್ರಕರಣವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಪ್ಪೆ ಸಾರಿಸಿರುವುದು ಇನ್ನಷ್ಟು ವಿವಾದಗಳಿಗೆ ಎಡೆಗೊಟ್ಟಿದೆ. ಕಾಂಗ್ರೆಸ್‌ನ ಹಿರಿಯ ಶಾಸಕ ರಮೇಶ್ ಕುಮಾರ್ ಅವರಂತೂ ‘ಇವೆಲ್ಲ […]

ಹಂಸರಾಜರ ಹಂಸಕ್ಷೀರ ನ್ಯಾಯ!

ಹಂಸರಾಜರ ಹಂಸಕ್ಷೀರ ನ್ಯಾಯ!

ದು ಗು ಲಕ್ಷ್ಮಣ್ - 0 Comment
Issue Date : 30.06.2014

ಕರ್ನಾಟಕದ ಅತ್ಯಂತ ವಿವಾದಿತ ರಾಜ್ಯಪಾಲ ಡಾ. ಹಂಸರಾಜ ಭಾರದ್ವಾಜ ಅವರು ಕೊನೆಗೂ ನಿವೃತ್ತರಾಗಿ ದೆಹಲಿಗೆ ತೆರಳಿದ್ದಾರೆ. ಅವಧಿಪೂರ್ತಿ ಮುಗಿಸಿದ ರಾಜ್ಯಪಾಲ ಎಂಬ ಹೆಗ್ಗಳಿಕೆ ಅವರದು. ಆದರೆ ಅತ್ಯಂತ ವಿವಾದಿತ ರಾಜ್ಯಪಾಲ ಎಂಬ ‘ಕೀರ್ತಿ’ಗೂ ಭಾಜನರು! ಹಂಸರಾಜರು ರಾಜ್ಯಪಾಲರಾದ ಬಳಿಕ ಮಾಡಿದ ಉತ್ತಮ ಕೆಲಸಗಳತ್ತ ಮೊದಲು ಗಮನಹರಿಸೋಣ. ಏಕೆಂದರೆ ಅವರ ವಿವಾದಿತ ಕೆಲಸಗಳನ್ನಷ್ಟೇ ಚರ್ಚಿಸಿದರೆ, ಅವರು ಮಾಡಿರಬಹುದಾದ ಉತ್ತಮ ಕೆಲಸಗಳಿಗೆ ಅಪಚಾರವೆಸಗಿದಂತಾಗುತ್ತದೆ. ಹಂಸರಾಜರು ರಾಜ್ಯಪಾಲರಾದ ಬಳಿಕ ರಾಜಭವನದ ಬಾಗಿಲುಗಳು ಸಾರ್ವಜನಿಕರಿಗಾಗಿ ಮುಕ್ತವಾಗಿ ತೆರೆದಿದ್ದನ್ನು ಪ್ರಜ್ಞಾವಂತರು ಯಾರೂ ಮರೆಯುವಂತಿಲ್ಲ. ಅದುವರೆಗೆ […]