ಬಿಸಿಸಿಐಗೆ ಕಾಯಕಲ್ಪ: ಗಾವಸ್ಕರ್‌ಗೆ ಗುರುತರ ಸವಾಲು

ಬಿಸಿಸಿಐಗೆ ಕಾಯಕಲ್ಪ: ಗಾವಸ್ಕರ್‌ಗೆ ಗುರುತರ ಸವಾಲು

ದು ಗು ಲಕ್ಷ್ಮಣ್ - 0 Comment
Issue Date : 09.04.2014

ಲೋಕಸಭೆಗೆ ಚುನಾವಣೆ ಎಂಬ ಮಹಾ ಕುರುಕ್ಷೇತ್ರ ಕಾಳಗ ದೇಶದಾದ್ಯಂತ ಕಾವು ಪಡೆದಿರುವ ಸನ್ನಿವೇಶದಲ್ಲಿ ಒಂದು ಪ್ರಮುಖ ಘಟನೆ ಅಷ್ಟಾಗಿ ಯಾರ ಗಮನವನ್ನೂ ಸೆಳೆಯಲಿಲ್ಲ. ಅದು ರಾಜಕೀಯಕ್ಕೆ ಸಂಬಂಧಪಟ್ಟಿದ್ದಲ್ಲ. ಆದರೆ ರಾಜಕೀಯ, ಭ್ರಷ್ಟಾಚಾರ ಬೆರೆತ ವಿದ್ಯಮಾನವದು. ಸುಪ್ರೀಂಕೋರ್ಟ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮೇಜರ್ ಸರ್ಜರಿ ಮಾಡಿದ ಪ್ರಸಂಗ ಅದು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮೋಸದಾಟ, ಮ್ಯಾಚ್‌ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮುಂತಾದ ಹತ್ತುಹಲವು ಹಗರಣ, ವಿವಾದಗಳಲ್ಲಿ ಮುಳುಗಿದ್ದ ಬಿಸಿಸಿಐಗೆ ಸುಪ್ರೀಂಕೋರ್ಟ್ ಈಗ ಸೂಕ್ತ ಕಾಯಕಲ್ಪವನ್ನೇ ಮಾಡಿದೆ ಎನ್ನಬಹುದು. ಅಧಿಕಾರದಿಂದ ಯಾರೇ […]

ಹೆಡಗೇವಾರ್ ಚಿಂತನೆಗಳ ಪ್ರಸ್ತುತತೆ

ಹೆಡಗೇವಾರ್ ಚಿಂತನೆಗಳ ಪ್ರಸ್ತುತತೆ

ದು ಗು ಲಕ್ಷ್ಮಣ್ - 0 Comment
Issue Date : 01.04.2014

ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಂದರೆ ಆರೆಸ್ಸೆಸ್ ಎಂದು ಜನಪ್ರಿಯತೆ ಪಡೆದಿರುವ ಹಿಂದು ಸಂಘಟನೆಯ ಹೆಸರು ಪ್ರಸ್ತಾಪವಾದಾಗಲೆಲ್ಲ ಅಲ್ಲಿ ವಿಜೃಂಭಿಸುವುದು ಕೋಮುವಾದ, ಮುಸ್ಲಿಂ ವಿರೋಧ, ಹಿಂಸೆ ಇತ್ಯಾದಿ ಋಣಾತ್ಮಕ ಸಂಗತಿಗಳು ಮಾತ್ರ.  ಆರೆಸ್ಸೆಸ್‌ನ ಮೂಲ ಉದ್ದೇಶವಾಗಲಿ, ಅದರ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರ ಚಿಂತನೆಗಳಾಗಲೀ ಚರ್ಚೆಗೆ ಒಳಗಾಗುವುದೇ ಇಲ್ಲ.  ಇದೊಂದು ವಿಪರ್ಯಾಸವೇ ಸರಿ.  ಆರೆಸ್ಸೆಸ್‌ ಅನ್ನು ಡಾ. ಹೆಡಗೇವಾರ್ ಸ್ಥಾಪಿಸಿದ್ದು ಈಗ ವಿರೋಧಿಗಳು ಟೀಕಿಸುತ್ತಿರುವ ಯಾವುದೇ ಉದ್ದೇಶಗಳಿಗಾಗಿ ಆಗಿರಲಿಲ್ಲ.  ಹಿಂದೂ ಸಮಾಜದ ಸಂಘಟನೆಗಾಗಿ ಸಂಘವನ್ನು ಹೆಡಗೇವಾರ್ ಪ್ರಾರಂಭಿಸಿದ್ದರೂ […]

ವೆಂಡಿ ಡೊನಿಗರ್ ಅಪಲಾಪಕ್ಕೆ ಕೊನೆಯೇ ಇಲ್ಲ

ವೆಂಡಿ ಡೊನಿಗರ್ ಅಪಲಾಪಕ್ಕೆ ಕೊನೆಯೇ ಇಲ್ಲ

ದು ಗು ಲಕ್ಷ್ಮಣ್ - 0 Comment
Issue Date : 24.03.2014

ಹಿಂದುತ್ವ, ಹಿಂದು ದೇವ-ದೇವತೆಗಳು, ಹಿಂದು ಧರ್ಮಗಳ ಮೇಲಾದಷ್ಟು ಅವ್ಯಾಹತ ಆಕ್ರಮಣ, ಟೀಕೆ, ನಿಂದನೆ, ಭರ್ತ್ಸನೆಗಳು ಜಗತ್ತಿನ ಇನ್ನಾವುದೇ ಧರ್ಮದ ಮೇಲೂ ಖಂಡಿತ ಆಗಿರಲಿಕ್ಕಿಲ್ಲ. ಈಗಲೂ ಈ ಅಪಸವ್ಯ ಮುಂದುವರಿಯುತ್ತಲೇ ಇದೆ. ಸ್ವಯಂಘೋಷಿತ ಬುದ್ಧಿಜೀವಿಗಳೆನಿಸಿಕೊಂಡ ಕೆಲವು ಎಡಪಂಥೀಯ ವಿಚಾರವಾದಿಗಳು ಆಗಾಗ, ಬೇರೆ ಏನೂ ವಿಷಯ ಹೊಳೆಯದಿದ್ದಾಗ ಹಿಂದು ಧರ್ಮ ಟೀಕಿಸುವ ಕಾಯಕಕ್ಕೆ ಕೈ ಹಚ್ಚುತ್ತಾರೆ. ತನ್ಮೂಲಕ ಸಾಕಷ್ಟು ಪ್ರಸಿದ್ಧಿ, ಪ್ರಚಾರವನ್ನು ಗಿಟ್ಟಿಸುತ್ತಾರೆ. ಅವರ ಜಾಯಮಾನವೇ ಅಂತಹುದು. ಇಲ್ಲಷ್ಟೇ ಅಲ್ಲ, ವಿದೇಶಗಳ ಕೆಲವು ಬುದ್ಧಿಜೀವಿಗಳೆನಿಸಿಕೊಂಡವರಿಗೂ ಟೀಕಿಸಲು ಸುಲಭವಾಗಿ ಸಿಗುವ ಅಗ್ಗದ […]

ಅನುಕೂಲಸಿಂಧು ರಾಜಕಾರಣದ್ದೇ ಪಾರುಪತ್ಯ!

ಅನುಕೂಲಸಿಂಧು ರಾಜಕಾರಣದ್ದೇ ಪಾರುಪತ್ಯ!

ದು ಗು ಲಕ್ಷ್ಮಣ್ - 0 Comment
Issue Date : 17.03.2014

ಚುನಾವಣೆಗಳು ಸಮೀಪಿಸಿದಾಗಲೆಲ್ಲ ಶತ್ರುಗಳು ಮಿತ್ರರಾಗುತ್ತಾರೆ. ಮಿತ್ರರು ಶತ್ರುಗಳಾಗುತ್ತಾರೆ. ಇದುವರೆಗೆ ಕೋಮುವಾದಿಗಳು ಎನಿಸಿಕೊಂಡವರು ಒಮ್ಮೆಲೆ ಸೆಕ್ಯುಲರ್ ಆಗುತ್ತಾರೆ. ಸೆಕ್ಯುಲರ್ ಎನಿಸಿಕೊಂಡವರು ಕೋಮುವಾದಿಗಳಾಗುವ ವಿದ್ಯಮಾನವೂ ನಡೆಯುತ್ತದೆ. ನಾವೆಲ್ಲ ಒಂದು, ಒಂದಾಗಿ ರಾಷ್ಟ್ರಹಿತ ಸಾಧಿಸಬೇಕು ಎಂದು ಅದುವರೆಗೆ ವೇದಿಕೆಗಳ ಮೇಲಿನಿಂದ ಪುಂಖಾನುಪುಂಖವಾಗಿ ಕರೆಕೊಟ್ಟ ನಾಯಕರೇ ಚುನಾವಣೆ ಎದುರಾದ ಕೂಡಲೇ ಜಾತಿ, ಮತ, ಪಂಥಗಳೆಂದು ಹರಿದು ಹಂಚಿಹೋಗುವ ವಿದ್ಯಮಾನವಂತೂ ಇನ್ನಷ್ಟು ಸೋಜಿಗ. ಪಾಸ್ವಾನ್ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದಾಗ ಅದರ ಪಾಲುದಾರ ಪಕ್ಷವಾಗಿದ್ದ ರಾಮ್‌ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಗೋಧ್ರೋತ್ತರ ಹಿಂಸಾಚಾರದ […]

ಅಡಿಗಲ್ಲಾಗುವವರಿಗೆ ಗೋಪುರದ ಗೀಳೇಕೆ?

ಅಡಿಗಲ್ಲಾಗುವವರಿಗೆ ಗೋಪುರದ ಗೀಳೇಕೆ?

ದು ಗು ಲಕ್ಷ್ಮಣ್ - 0 Comment
Issue Date : 11.03.2014

 ಇನ್ನು ಎರಡೂವರೆ ತಿಂಗಳು ದೇಶಕ್ಕೆ ಚುನಾವಣಾ ಜ್ವರ. ಮುಂದಿನ ಮೇ 16ರಂದು ಹೊಸ ಸರ್ಕಾರದ ನೊಗಕ್ಕೆ ಯಾರು ಹೆಗಲು ಕೊಡುತ್ತಾರೆ ಎಂಬುದು ಗೊತ್ತಾಗುವವರೆಗೆ ಈ ಜ್ವರಕ್ಕೆ ಪರಿಹಾರವಿಲ್ಲ. ಅದಾದ ಬಳಿಕ ಹೊಸ ಸರ್ಕಾರ ರಚನೆಯ ಇನ್ನೊಂದು ಕಸರತ್ತು ಆರಂಭ. ಯಾವುದೇ ಒಂದು ನಿರ್ದಿಷ್ಟ ಪಕ್ಷಕ್ಕೆ ಅಥವಾ ಒಕ್ಕೂಟಕ್ಕೆ ಪೂರ್ಣ ಬಹುಮತ ಪ್ರಾಪ್ತವಾಗದಿದ್ದರೆ ಆ ಕಸರತ್ತು ನಾನಾ ಆಯಾಮಗಳನ್ನು ಪಡೆಯುವುದೂ ಎಲ್ಲರಿಗೂ ತಿಳಿದಿರುವ ಸಂಗತಿಯೇ. ಹೀಗಾಗಿ ಹೆಚ್ಚುಕಮ್ಮಿ ಇನ್ನು ಮೂರು ತಿಂಗಳು ದೇಶದೆಲ್ಲೆಡೆ ರಾಜಕೀಯದ್ದೇ ಕಾರುಬಾರು.  ಈ ಬಾರಿ […]

ಆರೆಸ್ಸೆಸ್ ವಿರುದ್ಧ ಅಪಪ್ರಚಾರ ನಿರಂತರ

ಆರೆಸ್ಸೆಸ್ ವಿರುದ್ಧ ಅಪಪ್ರಚಾರ ನಿರಂತರ

ದು ಗು ಲಕ್ಷ್ಮಣ್ - 0 Comment
Issue Date : 03.03.2014

ದೆಹಲಿಯಿಂದ ಪ್ರಕಟವಾಗುವ ‘ಕಾರವಾನ್’ ಪತ್ರಿಕೆಯ ಫೆಬ್ರವರಿ 1ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ಸಂದರ್ಶನ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಆ ಸಂದರ್ಶನ, ಈಗ ಹರ್ಯಾಣದ ಅಂಬಾಲ ಜೈಲಿನಲ್ಲಿರುವ ಸ್ವಾಮಿ ಅಸೀಮಾನಂದ ಅವರ ಕುರಿತಾದದ್ದು. ಸಂದರ್ಶಿಸಿದವರು ಲೀನಾ ಗೀತಾ ರಘುನಾಥ್ ಎಂಬ ಪತ್ರಕರ್ತೆ-ಕಂ-ನ್ಯಾಯವಾದಿ. ಈ ಸಂದರ್ಶನವನ್ನು 2 ವರ್ಷಗಳ ಹಿಂದೆಯೇ ಮಾಡಲಾಗಿದ್ದು ಈಗ ಅದನ್ನು ಪ್ರಕಟಿಸಲಾಗುತ್ತಿದೆ ಎಂದು ಪತ್ರಿಕೆ ಹೇಳಿಕೊಂಡಿದೆ. ಈಗ ಅಂಬಾಲಾ ಜೈಲಿನಲ್ಲಿರುವ ಸ್ವಾಮಿ ಅಸೀಮಾನಂದ ಸಂಝೌತಾ ಎಕ್ಸ್‌ಪ್ರೆಸ್ (ಫೆಬ್ರವರಿ 2007), ಹೈದರಾಬಾದ್ ಮೆಕ್ಕಾ ಮಸೀದ್ ಪ್ರಕರಣ […]

ಕಳಚಿಬಿತ್ತು ತೀಸ್ತಾ ಸೆಟಲ್‌ವಾಡ್ ಮುಖವಾಡ!

ಕಳಚಿಬಿತ್ತು ತೀಸ್ತಾ ಸೆಟಲ್‌ವಾಡ್ ಮುಖವಾಡ!

ದು ಗು ಲಕ್ಷ್ಮಣ್ - 0 Comment
Issue Date : 24.02.2014

ಹಣ ಗಳಿಸುವುದು ಅಥವಾ ಶ್ರೀಮಂತರಾಗುವುದು ಖಂಡಿತ ಅಪರಾಧವಲ್ಲ. ಆದರೆ ಹಣ ಗಳಿಕೆಗೆ ಹಿಡಿದ ಮಾರ್ಗ ಯಾವುದು ಎಂಬುದು ಬಲು ಮುಖ್ಯ. ಪ್ರಾಮಾಣಿಕ ದುಡಿಮೆ ಮೂಲಕ ಹಣ ಗಳಿಸಿದರೆ ಅದನ್ನು ಯಾರೂ ತಪ್ಪು ಎನ್ನಲಾರರು. ಅಡ್ಡ ಹಾದಿಯ ಮೂಲಕ ಹಣ ಗಳಿಸಿದರೆ ಅದು ಖಂಡಿತ ಅಪರಾಧವೇ. ಅದರಲ್ಲೂ ಸೇವೆಯ ಸೋಗಿನಲ್ಲಿ ಸತ್ತವರ ಹೆಸರಲ್ಲಿ ಹಣ ಸಂಗ್ರಹಿಸಿ ಅದನ್ನು ಸ್ವಂತದ ಖಾತೆಗೆ ವರ್ಗಾಯಿಸಿಕೊಂಡು ಮಜಾಮಾಡಿದರೆ ಅದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ. ಮಾನವಹಕ್ಕು ಹೋರಾಟಗಾರ್ತಿ ಎಂಬ ಸ್ವಯಂಘೋಷಿತ ಸಾಮಾಜಿಕ ಕಾರ್ಯಕರ್ತೆ ತೀಸ್ತಾ […]

ಪೂಜೆಗೆ ಮುನ್ನವೇ 'ಪೊರಕೆ' ಪೂಜಾರಿ ಪಲಾಯನ!

ಪೂಜೆಗೆ ಮುನ್ನವೇ ‘ಪೊರಕೆ’ ಪೂಜಾರಿ ಪಲಾಯನ!

ದು ಗು ಲಕ್ಷ್ಮಣ್ - 0 Comment
Issue Date : 17.02.2014

ಹೊಸದಿಲ್ಲಿ ಹಾಗೂ ದೇಶದ ಇತರ ಜನತೆಯ ಪಾಲಿಗೆ ಆಮ್ ಆದ್ಮಿ ಪಕ್ಷದ ವಿದ್ಯಮಾನಗಳೆಲ್ಲವೂ ಅನಿರೀಕ್ಷಿತವೇ ಆಗಿತ್ತು. ಅಣ್ಣಾ ಹಜಾರೆಯವರ ಜನಲೋಕಪಾಲ್ ಕುರಿತ ಸಾಮಾಜಿಕ ಆಂದೋಲನದ ಬೆಂಕಿಯಲ್ಲಿ ಅರಳಿದ ಆಮ್‌ಆದ್ಮಿ ಪಕ್ಷ ಅಷ್ಟೇ ಬೇಗ ದಿಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಭರ್ಜರಿ 28 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ನ 8 ಸದಸ್ಯರ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದು, ಸರ್ಕಾರ ರಚಿಸಿ 48 ದಿನದೊಳಗೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದು… ಎಲ್ಲವೂ ಅನಿರೀಕ್ಷಿತವೇ. ದೇಶದ ಇತಿಹಾಸದಲ್ಲಿ […]

ಭಾರತದ ಭವಿಷ್ಯ ಖಂಡಿತ ಉಜ್ವಲವಾಗಿದೆ ಸಾರ್!

ಭಾರತದ ಭವಿಷ್ಯ ಖಂಡಿತ ಉಜ್ವಲವಾಗಿದೆ ಸಾರ್!

ದು ಗು ಲಕ್ಷ್ಮಣ್ - 0 Comment
Issue Date : 10.02.2014

ಕಳೆದ ವಾರದ ಎರಡು ಮಹತ್ವದ ವಿದ್ಯಮಾನಗಳು ದೇಶದ ಭವಿಷ್ಯದ ಕುರಿತು ನಿರಾಶೆಯ ಪ್ರಪಾತಕ್ಕೆ ತಲುಪಿದವರಿಗೂ ವಿಶ್ವಾಸ, ಭರವಸೆ ಮೂಡಿಸಿವೆ. ಒಂದು-ಜಗತ್ತಿನ ನಂಬರ್ ಒನ್ ಐಟಿ ಕಂಪೆನಿ ಮೈಕ್ರೋಸಾಫ್ಟ್ ಕಾರ್ಪೊರೇಷನ್‌ಗೆ ಭಾರತೀಯ ಮೂಲದ ಸತ್ಯ ನಾದೆಲ್ಲಾ ಸಿಇಓ ಆಗಿ ನೇಮಕಗೊಂಡಿದ್ದು. ಎರಡು-ಕಾನ್ಪುರ ನಗರದ ಪಟೇಲ್ ನಗರ ನಿವಾಸಿಗಳು ತಮ್ಮ ಬಡಾವಣೆ ನೈರ್ಮಲ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ ಕಾರ್ಪೊರೇಟರ್‌ನನ್ನು ಅನಾಮತ್ತಾಗಿ ತಿಪ್ಪೆಗೆಸೆದು ಬುದ್ಧಿ ಕಲಿಸಿದ್ದು. ಭಾರತಕ್ಕೆ ಭವಿಷ್ಯವೇ ಇಲ್ಲವೆಂದು ಹತಾಶೆಗೊಂಡ ಮಂದಿಗೆ ಈ ವಿದ್ಯಮಾನಗಳು ಭರವಸೆಯ ಆಶಾಕಿರಣವಾಗಿ ಖಂಡಿತ […]

ಗೋಡಂಬಿ ತಿಂದವರು ಯಾರೋ! ಎಂಡೋಪೀಡಿತರು ಮಾತ್ರ ಈ ನತದೃಷ್ಟರು!

ಗೋಡಂಬಿ ತಿಂದವರು ಯಾರೋ! ಎಂಡೋಪೀಡಿತರು ಮಾತ್ರ ಈ ನತದೃಷ್ಟರು!

ದು ಗು ಲಕ್ಷ್ಮಣ್ - 0 Comment
Issue Date : 04.02.2014

ಅವರಿಗೆ ಕೈಗಳಿವೆ. ಆದರೂ ಎತ್ತಲಾಗುತ್ತಿಲ್ಲ. ನಮ್ಮ – ನಿಮ್ಮ ಹಾಗೆ ಕಾಲುಗಳಿವೆ. ಆದರೆ ನಡೆಯಲಾಗುತ್ತಿಲ್ಲ. ತಾರುಣ್ಯದ ವಯಸ್ಸಿದೆ. ಆದರೂ ಚುರುಕಾಗಿ ಎದ್ದೇಳಲಾಗುತ್ತಿಲ್ಲ. ಸಂತಾನೋತ್ಪತ್ತಿಯಂತೂ ಸಾಧ್ಯವೇ ಇಲ್ಲ. ಅಸ್ತಮಾ, ಕ್ಯಾನ್ಸರ್, ಮಿದುಳಿಗೆ ಆಘಾತ ಮುಂತಾದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಜೀವಂತವಾಗಿದ್ದರೂ ಜೀವಚ್ಛವದಂತೆ ಬದುಕಬೇಕಾದ ದಯನೀಯ ಸ್ಥಿತಿ. ಆದರೆ ಈ ಸ್ಥಿತಿ ಅವರಿಗೆ ಹುಟ್ಟಿನಿಂದ ಬಂದಿದ್ದಲ್ಲ. ಹುಟ್ಟುವಾಗ ಅವರೆಲ್ಲ ಆರೋಗ್ಯವಂತರಾಗಿಯೇ ಇದ್ದರು. ನಮ್ಮ-ನಿಮ್ಮಂತೆ ಚೈತನ್ಯಪೂರ್ಣ ಶರೀರ ಅವರದಾಗಿತ್ತು. ಆದರೆ ಬರಬರುತ್ತ ವಿಕಲಾಂಗರಾಗಿ ಪರಾವಲಂಬಿಗಳಾಗಬೇಕಾದ ಶೋಚನೀಯ ಸ್ಥಿತಿ. ಅಂದ ಹಾಗೆ ಅದೇನೂ ವಂಶೀಯ […]