ಅಮೆರಿಕದಲ್ಲಿ ಭಾರತೀಯರ ಪಾರುಪತ್ಯ

ಅಮೆರಿಕದಲ್ಲಿ ಭಾರತೀಯರ ಪಾರುಪತ್ಯ

ದು ಗು ಲಕ್ಷ್ಮಣ್ - 0 Comment
Issue Date : 28.01.2014

ಇಡೀ ಜಗತ್ತಿನಲ್ಲಿ, ಅದು ಒಳ್ಳೆಯದಿರಲಿ ಅಥವಾ ಕೆಟ್ಟದ್ದೇ ಆಗಿರಲಿ, ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ದೇಶವೆಂದರೆ ಅಮೆರಿಕ. ಅಮೆರಿಕದ ಸುದ್ದಿಗೆ ಪ್ರಚಾರ ಸಿಕ್ಕಿದಷ್ಟು ಇನ್ನಾವ ದೇಶದ ಸುದ್ದಿಗೂ ಮಾಧ್ಯಮಗಳಲ್ಲಿ ಪ್ರಚಾರ ಸಿಗುವುದಿಲ್ಲ. ಅಮೆರಿಕ ಜಗತ್ತಿನ ‘ದೊಡ್ಡಣ್ಣ’ ದೇಶ ಎಂಬ ಹೆಗ್ಗಳಿಕೆ ಪಡೆದಿರುವುದು ಇದಕ್ಕೊಂದು ಕಾರಣವಿರಬಹುದು. ಅದು ಅಮೆರಿಕ ದೇವಯಾನಿ ಖೋಬ್ರಗಡೆ ಬಂಧಿಸಿದ ಸುದ್ದಿ ಇರಲಿ, ಇರಾಕ್‌ಮೇಲೆ ಅಮೆರಿಕ ನಡೆಸಿದ ದಾಳಿಯಿರಲಿ ಅಥವಾ ಪಾಕಿಸ್ಥಾನದ ಅಬೊಟಾಬಾದ್‌ ಗೆ ನುಗ್ಗಿ ಅಲ್ಲಡಗಿದ್ದ ಒಸಾಮಾ ಬಿನ್ ಲಾಡೆನ್ ಎಂಬ ನರ ರಾಕ್ಷಸನನ್ನು […]

ಸ್ವದೇಶಿ ಕ್ರಯೋಜೆನಿಕ್ ರೂವಾರಿಯ ಕಥೆ - ವ್ಯಥೆ

ಸ್ವದೇಶಿ ಕ್ರಯೋಜೆನಿಕ್ ರೂವಾರಿಯ ಕಥೆ – ವ್ಯಥೆ

ದು ಗು ಲಕ್ಷ್ಮಣ್ - 0 Comment
Issue Date : 21.01.2014

ಮೊನ್ನೆ ಜನವರಿ 5ರಂದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಿದ್ದ ಜಿಎಸ್‌ಎಲ್‌ವಿ – ಡಿ5 ಶ್ರೀಹರಿ ಕೋಟಾದಿಂದ ಗಗನಕ್ಕೆ ಜಿಗಿದಾಗ ಸ್ವಾಭಿಮಾನಿ ದೇಶವಾಸಿಗಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಕ್ರಯೋಜೆನಿಕ್ ತಂತ್ರಜ್ಞಾನದಲ್ಲೂ ಸ್ವಾವಲಂಬನೆ ಸಾಧಿಸಿದ್ದೇವೆಂಬ ಹೆಮ್ಮೆಯೇ ಇದಕ್ಕೆ ಕಾರಣ. ಇದೇ ಸಂದರ್ಭದಲ್ಲಿ, ಅತ್ತ ಗಗನಕ್ಕೆ ಜಿಎಸ್‌ಎಲ್‌ವಿ – ಡಿ5 ರಾಕೆಟ್ ಜಿಗಿದಾಗ ಇತ್ತ ತಿರುವನಂತಪುರದ ಮಲೆಯಾಳಿ ಟಿವಿ ಚಾನೆಲ್ ಒಂದರ ಸ್ಟುಡಿಯೊದಲ್ಲಿ ಕುಳಿತಿದ್ದ ವೃದ್ಧರೊಬ್ಬರ ಕಣ್ಣಲ್ಲಿ ಮಾತ್ರ ದಳದಳ ನೀರು. ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಭಾರತದ ಬಗ್ಗೆ […]

ಚುನಾವಣೆ ಸನ್ನಿಹಿತವಾದಾಗ ಸಾಧ್ವಿಗೆ ಬಿಡುಗಡೆಯ ಭಾಗ್ಯವೆ?

ಚುನಾವಣೆ ಸನ್ನಿಹಿತವಾದಾಗ ಸಾಧ್ವಿಗೆ ಬಿಡುಗಡೆಯ ಭಾಗ್ಯವೆ?

ದು ಗು ಲಕ್ಷ್ಮಣ್ - 0 Comment
Issue Date : 14.01.2014

2008ರ ಮಾಲೆಗಾಂವ್‌ ಬಾಂಬ್‌ಸ್ಪೋಟ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿ ಈಗಲೂ ಜೈಲಿನಲ್ಲಿರುವ ಸಾಧ್ವಿ ಪ್ರಜ್ಞಾಸಿಂಗ್‌ ಠಾಕುರ್‌ ಎಂಬ ಮಹಿಳೆಯ ಹೃದಯ ಕರಗುವ ಕಥೆ ನಿಮಗಿನ್ನೂ ನೆನಪಿರಬಹುದಲ್ಲವೆ? ಸಾಧ್ವಿ ಪ್ರಜ್ಞಾ ಸಿಂಗ್‌ ಮೊದಲು ಮಾಲೆಗಾಂವ್‌ ಸ್ಪೋಟ ಪ್ರಕರಣ, ಅನಂತರ ಸುನೀಲ್‌ ಜೋಶಿ ಎಂಬ ಆರೆಸ್ಸೆಸ್‌ ಕಾರ್ಯಕರ್ತನ ಹತ್ಯಾಪ್ರಕರಣದ ಹಿನ್ನೆಲೆಯಲ್ಲಿ ಸಾಧ್ವಿ ಪ್ರಜ್ಞಾಸಿಂಗ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಇವೆರಡೂ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವೇ ವಹಿಸಿಕೊಂಡಿತ್ತು. ಈ ಪ್ರಕರಣಗಳಲ್ಲಿ ಆಕೆಯನ್ನು ಹೇಗಾದರೂ ಮಾಡಿ ಸಿಲುಕಿಸಬೇಕೆಂಬುದು ಕೇಂದ್ರ ಸರ್ಕಾರದ ಹುನ್ನಾರವಾಗಿತ್ತು. […]

ಆಗ ಅವರು ಕೇಜ್ರಿವಾಲ್; ಈಗ ಮಾತ್ರ 'ಕೈ'ಜ್ರಿವಾಲ್!

ಆಗ ಅವರು ಕೇಜ್ರಿವಾಲ್; ಈಗ ಮಾತ್ರ ‘ಕೈ’ಜ್ರಿವಾಲ್!

ದು ಗು ಲಕ್ಷ್ಮಣ್ - 0 Comment
Issue Date : 07.01.2014

ಮಾಧ್ಯಮಗಳಲ್ಲಿ ಈಗ ಕೇಜ್ರಿವಾಲ್ ಅವರದ್ದೇ ಪ್ರಚಾರ ಭರಾಟೆ. ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇಜ್ರಿವಾಲ್ ಭಾರತಕ್ಕೊಂದು ಆಶಾಕಿರಣ, ಭಾರತವನ್ನು ಉದ್ಧರಿಸಲೆಂದೇ ಧರೆಗಿಳಿದು ಬಂದ ದೇವತೆ ಎಂಬಂತೆ ಕೇಜ್ರಿವಾಲರನ್ನು ಚಿತ್ರಿಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕೇಜ್ರಿವಾಲ್ ಮ್ಯಾಜಿಕ್ ನಡೆಯಲಿದೆ ಎಂದು ಮಾಧ್ಯಮಗಳು ಭವಿಷ್ಯ ನುಡಿದಿವೆ! ಆದರೆ ಈ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗಲಿದೆ ಅಥವಾ ಠುಸ್ ಆಗಲಿದೆ ಎಂಬುದು ಚುನಾವಣೆ ಸನ್ನಿಹಿತವಾದಾಗಲಷ್ಟೇ ಗೊತ್ತಾಗಬಹುದು. ನಿಜ, ಸತತ 10 ವರ್ಷಗಳ ಕಾಂಗ್ರೆಸ್‌ನ ದುರಾಡಳಿತ, ಭ್ರಷ್ಟಾಚಾರದಿಂದ ಬೇಸತ್ತ ದಿಲ್ಲಿ ಜನತೆ ಈ ಬಾರಿ […]

'ಪವಾಡಪುರುಷ' ಬೆನ್ನಿಹಿನ್ ಮತ್ತೆ ಬೆಂಗಳೂರಿಗೆ! ಎಚ್ಚರ!!

‘ಪವಾಡಪುರುಷ’ ಬೆನ್ನಿಹಿನ್ ಮತ್ತೆ ಬೆಂಗಳೂರಿಗೆ! ಎಚ್ಚರ!!

ದು ಗು ಲಕ್ಷ್ಮಣ್ - 0 Comment
Issue Date : 30.12.2013

ಜನರಿಂದ ಕಿಕ್ಕಿರಿದು ತುಂಬಿದ ಸಭೆ. ಮಂದದೀಪ, ಮಾದಕ ಹಾಗೂ ಕಿವಿಗಡಚಿಕ್ಕುವ ಅಬ್ಬರದ ಸಂಗೀತ. ಜಗತ್ತಿಗೆ ಅಪಾಯವಿದೆ ಎಂಬ ಘೋಷಣೆ ತೆರೆಯ ಹಿಂದಿನಿಂದ. ಆಗ ಇದ್ದಕ್ಕಿದ್ದಂತೆ ವೇದಿಕೆಗೆ ದಿಢೀರನೆ ಒಬ್ಬ ವ್ಯಕ್ತಿ ಮೈಮೇಲೆ ದೆವ್ವ ಬಂದವನಂತೆ ಆವೇಶದಿಂದ ಬಂದು ತನ್ನ ಕೈಯೆತ್ತಿ ‘ಇಲ್ಲಿದೆ ಶಕ್ತಿ. ನೀವೆಲ್ಲ ಮುಕ್ತರು’ ಎಂದು ಘೋಷಿಸುತ್ತಾನೆ. ಜೊತೆಗೆ ಇನ್ನಷ್ಟು ಜೋರಾಗಿ ‘ಅಲ್ಲಿ ನೋಡಿ ದೆವ್ವಗಳು ಓಡಿ ಹೋಗುತ್ತಿವೆ. ಇಲ್ಲಿ ನೋಡಿ ಏಸುವಿನ ಆಗಮನ’ ಎಂದು ಚೀರುತ್ತಾ ನೆರಳು ಬೆಳಕಿನ ಮರೆಯಾಟದಲ್ಲಿ ಭ್ರಾಂತಿಯ ಲೋಕವನ್ನೇ ಸೃಷ್ಟಿಸುತ್ತಾನೆ. […]

ವನವಾಸಿಗಳ ಬದುಕಲ್ಲಿ ಬೆಳಕು ಚಿಮ್ಮಿಸಿದ ವನಯೋಗಿ

ವನವಾಸಿಗಳ ಬದುಕಲ್ಲಿ ಬೆಳಕು ಚಿಮ್ಮಿಸಿದ ವನಯೋಗಿ

ದು ಗು ಲಕ್ಷ್ಮಣ್ ; ಭಾರತ - 0 Comment
Issue Date : 25.12.2013

ಅವರು ನಮ್ಮದೇ ಜನಾಂಗ. ದೇಶದ ಜನಸಂಖ್ಯೆಯಲ್ಲಿ ಹತ್ತು ಕೋಟಿಯಷ್ಟು ಅವರದೇ ಪಾಲು.  ಆದರೆ ಅವರು ಎಲ್ಲಾ ಸೌಲಭ್ಯಗಳಿಂದ ವಂಚಿತರು.  ಅವರು ಅಲ್ಪಸಂಖ್ಯಾತರೂ ಅಲ್ಲ.  ಅಲ್ಪಸಂಖ್ಯಾತರಿಗಿರುವ ಯಾವ ವಿಶೇಷ ಸೌಲಭ್ಯ, ಹಕ್ಕುಗಳೂ ಅವರಿಗಿಲ್ಲ.  ಆದರೆ ನಿಜವಾಗಿಯೂ ಅವರು ಈ ನೆಲದ ಮಕ್ಕಳು.  ನಮ್ಮ ಸಂಸ್ಕೃತಿಯ ಪರಂಪರಾನುಗತ ರಕ್ಷಕರು.  ಹಾಗೆಂದ ಮಾತ್ರಕ್ಕೆ ಅವರು ಎಲ್ಲರಂತೆ ಈ ಸಮಾಜದಲ್ಲಿ ಬೆರೆತವರಲ್ಲ.  ನಮ್ಮ ಮಧ್ಯೆ ಇದ್ದರೂ ಅವರು ನಮ್ಮಿಂದ ದೂರ ದೂರ.  ನಮ್ಮ ಸಂಸ್ಕೃತಿಯ ರಕ್ಷಕರಾಗಿದ್ದರೂ ನಮಗೆ ತೀರಾ ಅಪರಿಚಿತರು.  ಮಣ್ಣಿನ ಮಕ್ಕಳಾದರೂ […]

ಕುಟುಂಬ ವ್ಯವಸ್ಥೆಗೆ ಕಾಯಕಲ್ಪದ ಅಗತ್ಯ ಸಾರಿದ ಆ ತೀರ್ಪು

ಕುಟುಂಬ ವ್ಯವಸ್ಥೆಗೆ ಕಾಯಕಲ್ಪದ ಅಗತ್ಯ ಸಾರಿದ ಆ ತೀರ್ಪು

ದು ಗು ಲಕ್ಷ್ಮಣ್ - 0 Comment
Issue Date : 09.12.2013

 ನಿನ್ನೊಲುಮೆ ನಮಗಿರಲಿ ತಂದೆ ಕೈ ಹಿಡಿದು ನಿ ನಡೆಸು ಮುಂದೆ  70ರ ದಶಕದಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಒಂದರಲ್ಲಿ ಇಬ್ಬರು ಮಕ್ಕಳು ತಮ್ಮ ತಂದೆಯನ್ನು ಕುರಿತು ಕೈ ಮುಗಿದು ದೀನರಾಗಿ ಪ್ರಾರ್ಥಿಸುವ ಹಾಡಿದು. ಆ ಹಾಡು ಕೇಳುತ್ತಿದ್ದರೆ ಎಂತಹ ಒರಟು ಮಾನಸಿಕತೆಯ ವ್ಯಕ್ತಿಯೂ ಒಂದು ಕ್ಷಣ ಕರಗಿ ಹೋಗದೆ ಇರಲು ಸಾಧ್ಯವಿಲ್ಲ. ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಜನನಿಯೇ ಮೊದಲ ಗುರು ಎಂಬ ನಮ್ಮ ಪ್ರಾಚೀನ ನಂಬಿಕೆಯೂ ಪ್ರತಿಪಾದಿಸುವುದು ಇದೇ ಅಂಶವನ್ನು. ತಂದೆತಾಯಂದಿರ ಬೆಚ್ಚನೆಯ ಪ್ರೀತಿ, ವಿಶ್ವಾಸ, ಆತ್ಮೀಯತೆಯ […]

 ಕೊನೆಗೂ ಗೆದ್ದಿದ್ದು ಸತ್ಯ, ಧರ್ಮ; ಪಿತೂರಿ, ಷಡ್ಯಂತ್ರಗಳಲ್ಲ!

ಕೊನೆಗೂ ಗೆದ್ದಿದ್ದು ಸತ್ಯ, ಧರ್ಮ; ಪಿತೂರಿ, ಷಡ್ಯಂತ್ರಗಳಲ್ಲ!

ದು ಗು ಲಕ್ಷ್ಮಣ್ - 0 Comment
Issue Date : 02.12.2013

2500 ವರ್ಷಗಳ ಸುದೀರ್ಘ ಪರಂಪರೆ ಹೊಂದಿರುವ ತಮಿಳುನಾಡಿನ ಕಂಚಿಕಾಮಕೋಟಿ ಪೀಠದ ಮೇಲೆ ಕಳಂಕ ಹೊರಿಸುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರ ಕೊನೆಗೂ ವಿಫಲವಾಗಿದೆ. ನವೆಂಬರ್ 27ರಂದು ಪುದುಚೆರಿ ಸೆಶನ್ಸ್ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಕಂಚಿಕಾಮಕೋಟಿ ಪೀಠದ ಹಿರಿಯ ಸ್ವಾಮೀಜಿ ಜಯೇಂದ್ರ ಸರಸ್ವತಿ, ಕಿರಿಯ ಸ್ವಾಮೀಜಿ ವಿಜಯೇಂದ್ರ ಸರಸ್ವತಿ ಸೇರಿದಂತೆ ಎಲ್ಲಾ 23 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಕಲೆ ಹಾಕಿದ ಬೆಟ್ಟದಷ್ಟು ಗಾತ್ರದ ಸಾಕ್ಷ್ಯಾಧಾರಗಳಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಕಂಚಿ […]

ಗಾಜಿನ ಮನೆಯಲ್ಲಿರುವವರು ಹೇಗಿರಬೇಕು?

ಗಾಜಿನ ಮನೆಯಲ್ಲಿರುವವರು ಹೇಗಿರಬೇಕು?

ದು ಗು ಲಕ್ಷ್ಮಣ್ - 0 Comment
Issue Date : 25.11.2013

ರಾಜಕಾರಣಿಗಳ, ಪ್ರಭಾವೀ ವ್ಯಕ್ತಿಗಳ, ಅಧಿಕಾರಸ್ಥರ ಹುಳುಕುಗಳನ್ನು `ಕುಟುಕು ಕಾರ್ಯಾಚರಣೆ’ ಮೂಲಕ ಬಯಲಿಗೆಳೆದು ಪ್ರಸಿದ್ಧಿಗೆ ಬಂದಿದ್ದ ‘ತೆಹಲ್ಕಾ’ ಇಂಗ್ಲಿಷ್ ವಾರಪತ್ರಿಕೆ ಇದೀಗ ತಾನೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿದೆ. ಎಂಥೆಂಥ ಜಗಜಟ್ಟಿಗಳನ್ನೇ ಬಯಲಿಗೆಳೆದು ಮಣ್ಣು ಮುಕ್ಕಿಸಿದ್ದೇವೆ ಎಂದು ಬೀಗುತ್ತಿದ್ದ ಆ ಪತ್ರಿಕೆಯ ಪ್ರಧಾನ ಸಂಪಾದಕ ತರುಣ್ ತೇಜ್ ಪಾಲ್ ತಾನೇ ನೆಲಕ್ಕೆ ಬಿದ್ದು ಮಣ್ಣು ಮುಕ್ಕಬೇಕಾದ ಪರಿಸ್ಥಿತಿ ಉಂಟಾಗಿದೆ. ಆದರೆ ಅದೊಂದು ಸ್ವಯಂಕೃತ ಅಪರಾಧ.  ಗೋವಾದಲ್ಲಿ ಇದೇ ನವೆಂಬರ್ ತಿಂಗಳಿನಲ್ಲಿ ತೆಹಲ್ಕಾ ಪತ್ರಿಕೆ ಏರ್ಪಡಿಸಿದ್ದ ‘ಥಿಂಕ್ ಫೆಸ್ಟ್’ ಕಾರ್ಯಕ್ರಮದ ಸಂದರ್ಭದಲ್ಲಿ […]

 ಮೋದಿ ಪಟೇಲರ ಪ್ರತಿಮೆ ನಿರ್ಮಿಸಿದರೆ ಕಾಂಗ್ರೆಸ್ಸಿಗರಿಗೇಕೆ ಮೈ ಉರಿ?

ಮೋದಿ ಪಟೇಲರ ಪ್ರತಿಮೆ ನಿರ್ಮಿಸಿದರೆ ಕಾಂಗ್ರೆಸ್ಸಿಗರಿಗೇಕೆ ಮೈ ಉರಿ?

ದು ಗು ಲಕ್ಷ್ಮಣ್ - 0 Comment
Issue Date : 23.11.2013

55 ವರ್ಷಕ್ಕಿಂತಲೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಮರೆತೇ ಬಿಟ್ಟಿದ್ದ ಧೀಮಂತ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಮತ್ತೆ ಮತ್ತೆ ನೆನಪು ಮಾಡಿಕೊಡುವ ಪ್ರಯತ್ನ ಈಚೆಗೆ ಸಾಗಿದೆ. ಪ್ರಧಾನಿ ಅಭ್ಯರ್ಥಿ ಎಂದು ಘೋಷಿತವಾಗಿರುವ ನರೇಂದ್ರ ಮೋದಿ ಈಚೆಗೆ ಸಭೆಯೊಂದರಲ್ಲಿ ಮಾತನಾಡುತ್ತಾ, `ನೆಹರು ಅವರ ಬದಲಿಗೆ ಪಟೇಲರು ಮೊದಲ ಪ್ರಧಾನಿಯಾಗಿ ನೇಮಕಗೊಂಡಿದ್ದರೆ ದೇಶದ ಈಗಿನ ಪರಿಸ್ಥಿತಿಯೇ ಬದಲಾಗುತ್ತಿತ್ತು’ ಎಂದಿದ್ದು ದೇಶಾದ್ಯಂತ ಭಾರೀ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಮುಖಂಡರಂತೂ ಮೋದಿ ಅವರ ಈ ಹೇಳಿಕೆ ವಿರುದ್ಧ […]