ಆರೆಸ್ಸೆಸ್ ಮೇಲೆ ಮತ್ತೊಂದು ಮಿಥ್ಯಾಪವಾದ; ವಾಸ್ತವವೇನು?

ಆರೆಸ್ಸೆಸ್ ಮೇಲೆ ಮತ್ತೊಂದು ಮಿಥ್ಯಾಪವಾದ; ವಾಸ್ತವವೇನು?

ದು ಗು ಲಕ್ಷ್ಮಣ್ - 0 Comment
Issue Date : 11.11.2013

ದೇಶದಲ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಂಘಟಿತ ಹಿಂದೂ ಶಕ್ತಿಯನ್ನು ಹೊಸಕಿ ಹಾಕುವುದು ಹೇಗೆ? ಇದು ಎಲ್ಲ ಎಡಪಂಥೀಯ ಬುದ್ಧಿಜೀವಿಗಳ, ವಿಚಾರವಾದಿಗಳ ಹಾಗೂ ಇವರ ಹೆಜ್ಜೆಗೆ ತಕ್ಕ ತಾಳ ಹಾಕುವ ರಾಜಕಾರಣಿಗಳ ತಲೆ ತಿನ್ನುತ್ತಿರುವ ಒಂದು ಯಕ್ಷ ಪ್ರಶ್ನೆ. ಸಂಘಟಿತ ಹಿಂದೂ ಶಕ್ತಿ ಎಂದ ಕೂಡಲೇ ಈ ಮಂದಿಯ ಕಣ್ಣಿಗೆ ತಕ್ಷಣ ರಾಚುವುದು ಆರೆಸ್ಸೆಸ್ ಹಾಗೂ ಅದರ ಸೋದರ ಸಂಸ್ಥೆಗಳು. ಇವನ್ನೆಲ್ಲ ಒಟ್ಟಾಗಿ ಅವರು ಸಂಘ ಪರಿವಾರ ಎಂದು ಕರೆಯುತ್ತಾರೆ. ಸಂಘವೇನೂ ಆ ಪರಿಭಾಷೆಯನ್ನು ಬಳಸಿಲ್ಲ. ಇರಲಿ, ಇದೀಗ […]

ಈರುಳ್ಳಿ ಬೆಲೆ ಏರಿಕೆ ರಾಜಕಾರಣ: ಹೊಣೆ ಯಾರು?

ಈರುಳ್ಳಿ ಬೆಲೆ ಏರಿಕೆ ರಾಜಕಾರಣ: ಹೊಣೆ ಯಾರು?

ದು ಗು ಲಕ್ಷ್ಮಣ್ - 0 Comment
Issue Date : 30.10.2013

ದೇಶದಾದ್ಯಂತ ಈಗ ದಿನಬಳಕೆಯ ಅತ್ಯವಶ್ಯಕ ಆಹಾರ ಪದಾರ್ಥವಾದ ಈರುಳ್ಳಿಯದೇ ಬಿಸಿಬಿಸಿ ಚರ್ಚೆ. ಈ ಚರ್ಚೆಗೆ ಕಾರಣ ಈರುಳ್ಳಿಯ ಬೆಲೆ ಹಿಂದೆಂದೂ ಏರದಷ್ಟು ಈಗ ಗಗನಮುಖಿಯಾಗಿರುವುದು. 1998ರಲ್ಲಿ ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈರುಳ್ಳಿ ಬೆಲೆ ಗಗನಕ್ಕೇರಿದ್ದರಿಂದಲೇ ಅಧಿಕಾರ ಕಳೆದುಕೊಳ್ಳಬೇಕಾಗಿತ್ತು. ವಿರೋಧಿ ಪಕ್ಷಗಳು ಈರುಳ್ಳಿ ಬೆಲೆ ಏರಿಕೆಯನ್ನೇ ವೈಭವೀಕರಿಸಿ, ತನ್ಮೂಲಕ ಬಿಜೆಪಿ ಅಧಿಕಾರವನ್ನು ಕಳೆದಿದ್ದರು. ಆದರೆ ಆಗ ಈರುಳ್ಳಿ ಬೆಲೆ ಕಿಲೋಗೆ 45 ರೂ. ಮಾತ್ರ ಏರಿಕೆಯಾಗಿತ್ತು. ಆದರೆ ಈಗ ಮಾತ್ರ ದೆಹಲಿಯಲ್ಲೇ ಕಿಲೋಗೆ 100 ರೂ.ನಷ್ಟು ಏರಿಕೆಯಾಗಿದ್ದರೂ ಕೇಂದ್ರ […]

ಉರ್ದು ಪತ್ರಿಕೆಗಳ ರೋಗಗ್ರಸ್ತ, ಪಕ್ಷಪಾತಿ ನಿಲುವು

ಉರ್ದು ಪತ್ರಿಕೆಗಳ ರೋಗಗ್ರಸ್ತ, ಪಕ್ಷಪಾತಿ ನಿಲುವು

ದು ಗು ಲಕ್ಷ್ಮಣ್ - 1 Comment
Issue Date : 21.10.2013

ತ್ರಿಕಾರಂಗ ಪ್ರಜಾತಂತ್ರ ವ್ಯವಸ್ಥೆಯ ನಾಲ್ಕನೆಯ ಆಧಾರಸ್ತಂಭ ಎಂಬ ಮಾತು ಈಗ ಹಳಸಿಹೋಗುವಷ್ಟು ಬಳಕೆಯಾಗಿದೆ. ಹಾಗಿದ್ದಾಗ್ಯೂ ಪ್ರಜಾತಂತ್ರ ವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಪತ್ರಿಕೆಗಳ ಪಾತ್ರವನ್ನು ಎಂದಿಗೂ ಮರೆಯಲಾಗದು. ಏಕೆಂದರೆ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವಂತಹ ಪ್ರಯತ್ನ ನಡೆಸಿದಾಗ ಪತ್ರಿಕಾರಂಗ ಅದನ್ನು ಪ್ರತಿಭಟಿಸಿ ಪ್ರಜಾತಂತ್ರ ವ್ಯವಸ್ಥೆಗೆ ಭದ್ರ ಆಧಾರಸ್ತಂಭವಾಗಿ ಬೆಂಬಲಿಸಿದಂತಹ ವಿದ್ಯಮಾನಗಳು ಸಾಕಷ್ಟಿವೆ. 1975ರ ತುರ್ತು ಪರಿಸ್ಥಿತಿ ವಿರುದ್ಧ ಪತ್ರಿಕೆಗಳ ಸಮರವೇ ಇದಕ್ಕೆ ಸಾಕ್ಷಿ. ಪತ್ರಿಕೋದ್ಯಮ ಎಂಬುದು ಸಾಮಾಜಿಕ ಆಗುಹೋಗುಗಳಿಗೆ ಹಿಡಿದ ಯಥಾವತ್ ಕನ್ನಡಿ ಎಂಬ ಮಾತಿದೆ. […]

ಕೆಟ್ಟ ರಾಜಕಾರಣದ ಅಂತಿಮ ನಿಲ್ದಾಣ - ಜೈಲು

ಕೆಟ್ಟ ರಾಜಕಾರಣದ ಅಂತಿಮ ನಿಲ್ದಾಣ – ಜೈಲು

ದು ಗು ಲಕ್ಷ್ಮಣ್ - 1 Comment
Issue Date : 07.10.2013

ಕಳೆದೊಂದು ವಾರದಲ್ಲಿ ದೇಶದ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಗಳಾಗಿವೆ.  ಕಳಂಕಿತ ಶಾಸಕರು, ಸಂಸದರನ್ನು ರಕ್ಷಿಸುವ ಸುಗ್ರೀವಾಜ್ಞೆಗೆ ರಾಹುಲ್ ಗಾಂಧಿ ವಿರೋಧ ವ್ಯಕ್ತಪಡಿಸಿ, ಅದು ರದ್ದಾದ ನಾಲ್ಕೇ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮೇವು ಹಗರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೈಲು ಸೇರಿದ್ದಾರೆ.  ಈ ಅಪರಾಧಕ್ಕಾಗಿ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕೆಂದು ರಾಂಚಿಯ ವಿಶೇಷ ಕೋರ್ಟ್ ತೀರ್ಪು ನೀಡಿದೆ.  ಜಾನುವಾರುಗಳ ಮೇವಿಗೆಂದು ತೆಗೆದಿರಿಸಿದ 900 ಕೋಟಿ ಹಣವನ್ನು ತಿಂದು ತೇಗಿದ ಲಾಲೂ ಈಗ ಜೈಲಿನಲ್ಲಿ ಸೊಳ್ಳೆ […]

 ಅಜ್ಮಲ್ ಕಸಬ್‌ನಷ್ಟೇ ಅಪಾಯಕಾರಿ ವ್ಯಕ್ತಿ ಅಜೀಜ್ ಬರ್ನಿ!

ಅಜ್ಮಲ್ ಕಸಬ್‌ನಷ್ಟೇ ಅಪಾಯಕಾರಿ ವ್ಯಕ್ತಿ ಅಜೀಜ್ ಬರ್ನಿ!

ದು ಗು ಲಕ್ಷ್ಮಣ್ - 0 Comment
Issue Date : 05.10.2013

  “ಪಾರ್ಲಿಮೆಂಟ್ ಭವನದ ಮೇಲೆ ದಾಳಿ ಹಾಗೂ ಮುಂಬೈಯಲ್ಲಿ ನಡೆದ 26/11ರ ದಾಳಿಯನ್ನು ಸಂಘಟಿಸಿದ್ದು ಸರ್ಕಾರವೇ. ಸರ್ಕಾರವು ಪಾರ್ಲಿಮೆಂಟ್‌ನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನರನ್ನು ಗುರಿಯಾಗಿರಿಸಿಕೊಂಡು ಭಯೋತ್ಪಾದನೆ ವಿರುದ್ಧ ಕಠಿಣ ಕಾನೂನು ರೂಪಿಸಲು ಇಚ್ಛಿಸಿತ್ತು. ಆದರೆ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡರೆ, ಅದು ಆ ಸಮುದಾಯಕ್ಕೆ ಹೇಗೆ ನೆರವಾದೀತು? ಅದರಿಂದ ಭಯೋತ್ಪಾದನೆಯನ್ನು ತಡೆಗಟ್ಟಬಹುದೇ? ಇಲ್ಲ, ಖಂಡಿತ ಸಾಧ್ಯವಿಲ್ಲ… ಪ್ರಜಾತಂತ್ರದ 4ನೇ ಆಧಾರಸ್ತಂಭ ಕೂಡ ಈ ಬಗ್ಗೆ ತೆಪ್ಪಗಿದ್ದಿದ್ದು ನನಗೆ ಆಶ್ಚರ್ಯವೆನಿಸಿದೆ…” (ಅಜೀಜುಲ್‌ಹಿಂದ್, ಜು. 18, 2013) “ವಕ್ಫ್ ಮಂಡಳಿಯ ಅನೇಕ […]