ಅರೋಗ್ಯ ಮತ್ತು ಯೋಗ

ಅರೋಗ್ಯ ಮತ್ತು ಯೋಗ

ಅಷ್ಟಾಂಗ ಯೋಗ - 0 Comment
Issue Date : 10.04.2014

 “ಸ್ವಾಸ್ಥ್ಯ” ಎಂಬ ಸಂಸ್ಕೃತ ಪದವು ಶಾಂತಿ, ಸಂತೃಪ್ತಿ, ಆರೋಗ್ಯ ಮುಂತಾದ ಅರ್ಥಗಳನ್ನು ಕೊಡುತ್ತದೆ. ಆಯುರ್ವೇದದ ಒಂದು ಶ್ಲೋಕ ಈ ಬಗ್ಗೆ ಹೀಗೆ ಹೇಳುತ್ತದೆ:- ಸಮದೋಷ ಸಮಾಗ್ನಿಶ್ಚ ಸಮಧಾತು ಮಲಕ್ರಿಯಾಃ | ಪ್ರಸನ್ನಾತ್ನೇಂದ್ರಿಯ ಮನಃ ಸ್ವಸ್ಥ ಇತ್ಯಭಿಧೀಯತೇ|| ಮನುಷ್ಯನೋರ್ವ ಪೂರ್ಣ ಸ್ವಸ್ಥನೆಂದರೆ ಅವನಲ್ಲಿ ದೋಷಗಳು(ತ್ರಿದೋಷ), ಧಾತುಗಳು (ಸಪ್ತಧಾತುಗಳು), ಅಗ್ನಿ, ಮಲಕ್ರಿಯೆಗಳು ಸಮವಾಗಿದ್ದು ಇಂದ್ರಿಯಗಳು, ಮನಸ್ಸು ಮತ್ತು ಆತ್ಮವು ಪ್ರಸನ್ನವಾಗಿ ಅಂದರೆ ಸಂತೃಪ್ತವಾಗಿದ್ದರೆ ಆತನನ್ನು ಸ್ವಸ್ಥ ಎನ್ನಬಹುದಾಗಿದೆ. ಅಂದರೆ ಮನುಷ್ಯನ ಆರೋಗ್ಯ ಎಂದರೆ ಕೇವಲ ದೇಹದ ಆರೋಗ್ಯವಲ್ಲದೆ, ಅದು ಮನಸ್ಸು […]

ಭೂಧರಾಸನ

ಭೂಧರಾಸನ

ಅಷ್ಟಾಂಗ ಯೋಗ - 0 Comment
Issue Date : 27.03.2014

ಭೂಧರಾಸನದಲ್ಲಿ ಇಡೀ ಶರೀರವು ತಲೆಕೆಳಗಾದ ಇಂಗ್ಲಿಷಿನ ‘v’ ಯನ್ನು ಹೋಲುತ್ತದೆ. ಮಾಡುವ ಕ್ರಮ: 1)    ಎರಡೂ ಕಾಲೂ ಜೋಡಿಸಿ, ನಮಸ್ಕಾರ ಮುದ್ರೆಯಲ್ಲಿ ಎದೆ ಎತ್ತಿ ನಿಲ್ಲಬೇಕು. 2)   ಕಾಲುಗಳನ್ನು ಬದಲಿಸದೇ ನಮಸ್ಕಾರ ಮುದ್ರೆಯಲ್ಲೇ ಕೈಗಳನ್ನು ಮೇಲಕ್ಕೆತ್ತಬೇಕು. 3)    ಅನಂತರ ಉಸಿರನ್ನು ಬಿಡುತ್ತಾ ಮುಂದಕ್ಕೆ ಬಾಗಿ ಮಂಡಿಯನ್ನು ಬಗ್ಗಿಸದೇ ಕೈಗಳನ್ನು ನೆಲಕ್ಕೆ ತಗಲಿಸಬೇಕು. 4)   ಯಾವುದಾದರೂ ಒಂದು ಕಾಲನ್ನು ಹಿಂದಕ್ಕೆ ಚಾಚಿ ಇನ್ನೊಂದು ಕಾಲನ್ನು ಎರಡು ಕೈಗಳ ನಡುವೆ ಇಡಬೇಕು. 5)   ಅನಂತರ ಇನ್ನೊಂದು ಕಾಲನ್ನು ಹಿಂದೆ ಇದ್ದ […]

ಭುಜಂಗಾಸನ

ಭುಜಂಗಾಸನ

ಅಷ್ಟಾಂಗ ಯೋಗ - 0 Comment
Issue Date : 26.03.2014

ಭುಜಂಗ ಎಂದರೆ ಸರ್ಪ ಎಂದರ್ಥ. ಈ ಆಸನದಲ್ಲಿ ಹೆಡೆ ಎತ್ತಿದ ಸರ್ಪದ ಆಕಾರವನ್ನು ಶರೀರವು ಹೋಲುವುದರಿಂದ, ಇದಕ್ಕೆ ‘ಭುಜಂಗಾಸನ’ ಎಂಬ ಹೆಸರು ಅನ್ವರ್ಥವಾಗಿದೆ. ಮಾಡುವ ಕ್ರಮ: 1)    ಎರಡೂ ಪಾದಗಳನ್ನು ಒಟ್ಟಿಗೇ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ನಿಲ್ಲಬೇಕು. 2)   ಕಾಲುಗಳನ್ನು ಸ್ವಲ್ಪವೂ ಬದಲಿಸದೆ ಉಸಿರನ್ನು ಒಳಕ್ಕೆ ತೆಗೆದುಕೊಳ‍್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನೇರವಾಗಿಡಬೇಕು. 3)    ಉಸಿರನ್ನು ಹೊರಕ್ಕೆ ಬಿಡುತ್ತಾ ಕಾಲುಗಳನ್ನು ಬಗ್ಗಿಸದೇ ಮುಂದಕ್ಕೆ ಬಗ್ಗಿ ಕೈಗಳನ್ನು ನೆಲದ ಮೇಲೆ ಇಡಬೇಕು. 4)   ಅನಂತರ […]

ಸಾಷ್ಟಾಂಗ ಪ್ರಣಿಪಾತಾಸನ

ಸಾಷ್ಟಾಂಗ ಪ್ರಣಿಪಾತಾಸನ

ಅಷ್ಟಾಂಗ ಯೋಗ - 0 Comment
Issue Date : 25.03.2014

ಹಣೆ, ಎದೆ, ಅಂಗೈಗಳು, ಮಂಡಿಗಳು ಮತ್ತು ಎರಡೂ ಕಾಲುಗಳ ಬೆರಳುಗಳ ಸಮೂಹ –ಇವೇ ಅಷ್ಟ ಅಂಗಗಳು. ಇವುಗಳ ಸಹಾಯದಿಂದ ನಮಸ್ಕಾರ ಮಾಡುವುದಕ್ಕೆ ‘ಸಾಷ್ಟಾಂಗ ನಮಸ್ಕಾರ’ ಎಂದು ಹೆಸರು. ಮಾಡುವ ಕ್ರಮ: 1)    ಭೂಮಿಗೆ ಲಂಬವಾಗಿ, ಎದೆ ಎತ್ತಿ, ನಮಸ್ಕಾರ  ಮುದ್ರೆಯಲ್ಲಿ  ಎರಡೂ ಕಾಲುಗಳ ಪಾದಗಳನ್ನು ಒಟ್ಟಿಗೆ ಜೋಡಿಸಿ ನಿಂತುಕೊಳ‍್ಳಬೇಕು. 2)   ಅನಂತರ ದೀರ್ಘವಾದ ಉಸಿರನ್ನು ತೆಗೆದುಕೊಂಡು ಅದೇ ಸ್ಥಿತಿಯಲ್ಲಿ ಕಾಲುಗಳನ್ನು ಬದಲಿಸದೇ ಕೇವಲ ಕೈಗಳನ್ನು ಮಾತ್ರ ಮೇಲಕ್ಕೆ ಎತ್ತಬೇಕು. 3)    ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಬಗ್ಗಿ […]

ದ್ವಿಪಾದ ಪ್ರಸರಣಾಸನ

ದ್ವಿಪಾದ ಪ್ರಸರಣಾಸನ

ಅಷ್ಟಾಂಗ ಯೋಗ - 0 Comment
Issue Date : 25.03.2014

ದ್ವಿಪಾದ ಪ್ರಸರಣಾಸನ ಹೆಸರೇ ಸೂಚಿಸುವಂತೆ ಎರಡೂ ಕಾಲುಗಳು ಈ ಆಸನದಲ್ಲಿ ಹಿಂದಕ್ಕೆ ಚಾಚಿರುತ್ತವೆ. ಮಾಡುವ ಕ್ರಮ: 1)  ಎರಡೂ ಕಾಲುಗಳ ಪಾದಗಳನ್ನು ಜೋಡಿಸಿ, ಎದೆ ಎತ್ತಿ ನಮಸ್ಕಾರ ಮುದ್ರೆಯಲ್ಲಿ ಮೊದಲು ನಿಂತುಕೊಳ್ಳಬೇಕು. 2)  ಅನಂತರ ದೀರ್ಘವಾದ ಉಸಿರನ್ನು ಒಳಕ್ಕೆ ಎಳೆದುಕೊಳ್ಳುತ್ತ ಕೈಗಳನ್ನು ಮೇಲಕ್ಕೆ (ಸೂರ್ಯ ನಮಸ್ಕಾರ ಸ್ಥಿತಿ ಎರಡರಂತೆ) ಎತ್ತಬೇಕು. 3)   ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಟ್ಟು ಮುಂದಕ್ಕೆ ಬಗ್ಗಿ, ಎರಡೂ ಕೈಗಳನ್ನು ಭೂಮಿಗೆ (ಸೂರ್ಯ ನಮಸ್ಕಾರ ಸ್ಥಿತಿ ಮೂರರಲ್ಲಿ ವಿವರಿಸಿದಂತೆ) […]

ದಕ್ಷಿಣಪಾದ ಪ್ರಸರಣಾಸನ

ದಕ್ಷಿಣಪಾದ ಪ್ರಸರಣಾಸನ

ಅಷ್ಟಾಂಗ ಯೋಗ - 0 Comment
Issue Date : 22.03.2014

ಬಲಗಾಲನ್ನು ಹಿಂದಕ್ಕೆ ಚಾಚಿರುವುದುಂದಾಗಿ ಈ ಆಸನಕ್ಕೆ ದಕ್ಷಿಣಪಾದ ಪ್ರಸರಣಾಸನ ಎಂಬ ಹೆಸರು ಬಂದಿದೆ. ಮಾಡುವ ಕ್ರಮ: 1)    ನಮಸ್ಕಾರ ಮುದ್ರೆಯಲ್ಲಿ ಎರಡೂ ಕಾಲುಗಳ ಪಾದಗಳನ್ನು ಒಟ್ಟಿಗೆ ಜೋಡಿಸಿ ಎದೆ ಎತ್ತಿ  (ಸೂರ್ಯ ನಮಸ್ಕಾರ ಸ್ಥಿತಿ 1 ರಂತೆ) ನಿಂತುಕೊಳ್ಳಬೇಕು. 2)   ದೀರ್ಘವಾದ ಉಸಿರನ್ನು ತೆಗೆದುಕೊಳ್ಳುತ್ತ ಕಾಲುಗಳ ಸ್ಥಿತಿ ಬದಲಿಸದೇ ಕೈಗಳನ್ನು ನಮಸ್ಕಾರ ಮುದ್ರೆಯಲ್ಲೇ (ಸೂರ್ಯ ನಮಸ್ಕಾರ ಸ್ಥಿತಿ ಎರಡರಂತೆ) ಮೇಲಕ್ಕೆ ಎತ್ತಿ ನಿಲ್ಲಬೇಕು. 3)  ಅನಂತರ ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮುಂದಕ್ಕೆ ಬಗ್ಗಿ ಎರಡೂ […]

ಪಾದಹಸ್ತಾಸನ

ಪಾದಹಸ್ತಾಸನ

ಅಷ್ಟಾಂಗ ಯೋಗ - 0 Comment
Issue Date : 20.03.2014

ಸೂರ್ಯನಮಸ್ಕಾರದ ಮೂರನೇ ಸ್ಥಿತಿಗೆ ಪಾದಹಸ್ತಾಸನವೆಂಬ ಹೆಸರಿದೆ. ಈ ಸ್ಥಿತಿಯಲ್ಲಿ ಪಾದ ಮತ್ತು ಅಂಗೈಗಳು ಸಂಪೂರ್ಣವಾಗಿ ನೆಲದ ಮೇಲೆ ಇರುತ್ತದೆ. ಮಾಡುವ ಕ್ರಮ: 1)   ಎರಡೂ ಪಾದಗಳನ್ನು ಒಟ್ಟಿಗೆ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ಭೂಮಿಗೆ ಲಂಬವಾಗಿ (ಸೂರ್ಯನಮಸ್ಕಾರ ಸ್ಥಿತಿ 1ರಂತೆ) ನಿಂತುಕೊಳ‍್ಳಬೇಕು. 2)  ಕಾಲುಗಳ ಸ್ಥಿತಿಯನ್ನು ಬದಲಿಸದೆ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ (ಸೂರ್ಯ ನಮಸ್ಕಾರ ಸ್ಥಿತಿ 2ರಂತೆ) ನಿಲ್ಲಬೇಕು. 3)  ಅನಂತರ ಉಸಿರನ್ನು ನಿಧಾನವಾಗಿ […]

ಊರ್ಧ್ವನಮಸ್ಕಾರಾಸನ

ಊರ್ಧ್ವನಮಸ್ಕಾರಾಸನ

ಅಷ್ಟಾಂಗ ಯೋಗ - 0 Comment
Issue Date : 19.03.2014

ಸೂರ್ಯನಮಸ್ಕಾರದ ಎರಡನೇ ಸ್ಥಿತಿಯಲ್ಲಿ ಎರಡೂ ಕೈಗಳನ್ನು ನಮಸ್ಕಾರ ಮುದ್ರೆಯಲ್ಲಿ ‘ಊರ್ಧ್ವ’ ಎಂದರೆ ಮೇಲೆ ಇರುತ್ತವೆ. ಆದ್ದರಿಂದಲೇ ಊರ್ಧ್ವನಮಸ್ಕಾರಾಸನವೆಂಬ ಹೆಸರು ಈ ಸ್ಥಿತಿಗೆ ಅನ್ವರ್ಥವಾಗಿದೆ. ಮಾಡುವ ಕ್ರಮ: 1)   ಮೊದಲಿಗೆ ಎರಡೂ ಪಾದಗಳನ್ನು ಒಟ್ಟಿಗೆ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ಭೂಮಿಗೆ ಲಂಬವಾಗಿ ಮಂಡಿ ಚಿಪ್ಪುಗಳನ್ನು ಮೇಲಕ್ಕೆಳೆದು ನೇರವಾಗಿ ನಿಂತಿರಬೇಕು ( ಸ್ಥಿತಿ 1ರಂತೆ). 2)  ಅನಂತರ ಕಾಲುಗಳ ಸ್ಥಿತಿಯನ್ನು ಸ್ವಲ್ಪವೂ ಬದಲಾಯಿಸದೆ ಕೇವಲ ಕೈಗಳನ್ನು ನಮಸ್ಕಾರ ಮುದ್ರೆಯಲ್ಲೇ ಆದಷ್ಟೂ ಮೇಲಕ್ಕೆ ಆಕಾಶದೆಡೆಗೆ ಚಾಚಬೇಕು. ಹೀಗೆ […]

ತಾಡಾಸನ

ತಾಡಾಸನ

ಅಷ್ಟಾಂಗ ಯೋಗ - 0 Comment
Issue Date : 18.03.2014

ಸೂರ್ಯನಮಸ್ಕಾರದಲ್ಲಿ ಅನೇಕ ಆಸನಗಳ ಭಂಗಿಯಿದ್ದು, ಆಸನಗಳಂತೆಯೇ ಸೂರ್ಯನಮಸ್ಕಾರದಿಂದಲೂ ಅನೇಕ ಲಾಭಗಳನ್ನು ಪಡೆಯಬಹುದು. ಸೂರ್ಯನಮಸ್ಕಾರವು ಕೇವಲ ಧಾರ್ಮಿಕ ಕ್ರಿಯೆಯಾಗಿದರೆ ಶಾರೀರಿಕವಾಗಿಯೂ ಲಾಭಪ್ರದ ಎನ್ನುವುದನ್ನು ಮನಗಾಣಬೇಕು. ಮಾಡುವ ಕ್ರಮ: 1)   ಪ್ರಾರಂಭದಲ್ಲಿ ಭೂಮಿಗೆ ಲಂಬವಾಗಿ, ಎರಡೂ  ಪಾದಗಳು ಮತ್ತು ಹಿಮ್ಮಡಿಗಳು ಒಂದಕ್ಕೊಂದು ಸ್ಪರ್ಶಿಸಿರುವಂತೆ ಜೋಡಿಸಿ, ಎದೆ ಎತ್ತಿ ನೇರವಾಗಿ ನಿಲ್ಲಬೇಕು. 2)  ಅನಂತರ ಎರಡೂ ಕೈಗಳನ್ನು (ಚಿತ್ರದಲ್ಲಿರುವಂತೆ) ನಮಸ್ಕಾರ ಮುದ್ರೆಯಂತೆ ಜೋಡಿಸಬೇಕು. (ಸಾಮಾನ್ಯವಾಗಿ ತಾಡಾಸನದಲ್ಲಿ ಎರಡೂ ಕೈಗಳು ಶರೀರದ ಪಕ್ಕದಲ್ಲಿ ನೀಳವಾಗಿ ಚಾಚಿರುತ್ತವೆ.) ಈ ಸ್ಥಿತಿಯಲ್ಲಿ ಹೊಟ್ಟೆಯನ್ನು ಒಳಕ್ಕೆ […]

ಉತ್ಥಿತಹಸ್ತ ಪಾದಾಂಗುಷ್ಠಾಸನ

ಉತ್ಥಿತಹಸ್ತ ಪಾದಾಂಗುಷ್ಠಾಸನ

ಅಷ್ಟಾಂಗ ಯೋಗ - 0 Comment
Issue Date : 12.03.2014

ಉತ್ಥಿತಹಸ್ತ ಪಾದಾಂಗುಷ್ಠಾಸನಕ್ಕೆ ಹಸ್ತಪಾದಾಂಗುಷ್ಠಾಸನ ಮತ್ತು ಉತ್ಥಿತ ಪಾದಾಂಗುಷ್ಠಾಸನ ಎಂಬ ಹೆಸರುಗಳೂ ಇವೆ.  ಆದರೆ ಉತ್ಥಿತ ಹಸ್ತಪಾದಾಂಗುಷ್ಠಾಸನ ಎಂಬ ಹೆಸರೇ ಈ ಆಸನಕ್ಕೆ ಹೆಚ್ಚು ಸೂಕ್ತವಾದುದು. ಮಾಡುವ ಕ್ರಮ 1) ಯೋಗಾಭ್ಯಾಸಿಯು ಪ್ರಾರಂಭದಲ್ಲಿ ಎರಡೂ ಪಾದಗಳನ್ನು ಜೋಡಿಸಿ, ಭೂಮಿಗೆ ಲಂಬವಾಗಿ, ಕೈಗಳನ್ನು ತೊಡೆಗೆ ತಗಲುವಂತೆ ನೀಳವಾಗಿ ಚಾಚಿ, ಎದೆ ಎತ್ತಿ ನಿಲ್ಲಬೇಕು. 2) ಅನಂತರ ಉಸಿರನ್ನು ಹೊರಕ್ಕೆ ದೂಡಿ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ ಚಿತ್ರದಲ್ಲಿರುವಂತೆ ಎಡಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ಶರೀರದ ಮುಂದೆ ಬರುವಂತೆ ಮಾಡಬೇಕು. (ಅಂದರೆ […]