ಉಷ್ಟ್ರಾಸನ

ಉಷ್ಟ್ರಾಸನ

ಅಷ್ಟಾಂಗ ಯೋಗ - 0 Comment
Issue Date : 11.02.2014

ಉಷ್ಟ್ರಾಸನಕ್ಕೆ ಜಾನು ಪೃಷ್ಠವಲಿ ಶಾಸನ ಎಂಬ ಹೆಸರೂ ಇದೆ. ಮಾಡುವ ಕ್ರಮ 1)    ಮೊದಲು ನೇರವಾಗಿ, ಲಂಬವಾಗಿ ನಿಲ್ಲಬೇಕು. 2)    ಅನಂತರ ಮೊಣಕಾಲೂರಿ ಕುಳಿತುಕೊಳ್ಳಬೇಕು. 3)    ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ( ಸೊಂಟದ ಮೇಲಿನ ಶರೀರವನ್ನು) ಬಾಗಬೇಕು. ಈ ಸ್ಥಿತಿಯಲ್ಲಿ ಕತ್ತನ್ನು ಸಹ ಆದಷ್ಟು ಹಿಂದಕ್ಕೆ ಬಗ್ಗಿಸಬೇಕು. 4)    ಸಾಧ್ಯವಾದಷ್ಟು ಬೆನ್ನನ್ನು ಹಿಂದಕ್ಕೆ ಬಗ್ಗಿಸಿ ಚಿತ್ರದಲ್ಲಿ ತೋರಿಸುವಂತೆ ಕೈಗಳಿಂದ ಭೂಮಿಯನ್ನು ಸ್ವರ್ಶಿಸಬೇಕು. 5)    ಈ ಸ್ಥಿತಿಯಲ್ಲಿ ಬೆನ್ನು ಬಿಲ್ಲಿನಂತೆ ಬಗ್ಗಿರುತ್ತದೆ. ಇದೇ ಸ್ಥಿತಿಯಲ್ಲಿ […]

ಚಕ್ರಾಸನ

ಚಕ್ರಾಸನ

ಅಷ್ಟಾಂಗ ಯೋಗ - 0 Comment
Issue Date : 10.02.2014

ಚಕ್ರಾಸನಕ್ಕೆ ಊರ್ಧ್ವ ಧನುರಾಸನ ಮತ್ತು ತ್ರ್ಯಂಗ ಮುಖೋತ್ತಾನಾಸನ ಎಂಬ ಹೆಸರುಗಳೂ ಇವೆ. ಆದರೆ ಇವುಗಳಲ್ಲಿ ಸ್ವಲ್ಪ ವ್ಯಾತ್ಯಾಸಗಳು ಇವೆ. ಮಾಡುವ ಕ್ರಮ 1)    ಪಾದಹಸ್ತಾಸನದಂತೆ ಪ್ರಾರಂಭದಲ್ಲಿ ಭೂಮಿಗೆ ನೇರವಾಗಿ, ಲಂಬವಾಗಿ ನಿಲ್ಲಬೇಕು. 2)    ಅನಂತರ ಎರಡು ಕಾಲುಗಳ ನಡುವೆ ಒಂದು ಅಡಿಯಷ್ಟು ಅಂತರ ವಿರಿಸಿ, ಅಂಗೈಗಳನ್ನು ರೊಂಡಿಯ ಮೇಲೆ ಇಡಬೇಕು. 3)    ಉಸಿರನ್ನು ಹೊರಕ್ಕೆ ದೂಡುತ್ತಾ ನಿಧಾನವಾಗಿ ಹಿಂದಕ್ಕೆ ಬಾಗಿ  ನೆಲವನ್ನು ಮುಟ್ಟಬೇಕು. ಈ ಸ್ಥಿತಿಯಲ್ಲಿ ಶರೀರವು ಬಗ್ಗಿಸಿದ ಬಿಲ್ಲಿನಂತೆ ಇರುವುದು. ಆದರೆ ಹಿಂದಕ್ಕೆ ಬಾಗುವಾಗ ವಿಶೇಷವಾದ […]

ಪಾದಹಸ್ತಾಸನ

ಪಾದಹಸ್ತಾಸನ

ಅಷ್ಟಾಂಗ ಯೋಗ - 0 Comment
Issue Date : 08.02.2014

ಪಾದಹಸ್ತಾಸನಕ್ಕೆ ‘ಹಸ್ತಪಾದೋತ್ತಾನಾಸ’ ಹಾಗೂ ‘ಭೂ ಸ್ಪಷ್ಟಪಾದ ಜಾನು ಭಾಲಾಸನ’ ಎಂಬ ಹೆಸರುಗಳೂ ಇವೆ. ಮಾಡುವ ಕ್ರಮ 1)    ಮೊದಲು ಭೂಮಿಗೆ ಲಂಭವಾಗಿ, ನೇರವಾಗಿ ನಿಲ್ಲಬೇಕು. 2)   ಅನಂತರ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಬೇಕು. 3)    ನಿಧಾನವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಬಗ್ಗಿ ನೆಲವನ್ನು ಮುಟ್ಟಬೇಕು. ಆದರೆ ಮುಂದಕ್ಕೆ ಬಗ್ಗುವಾಗ ಸೊಂಟವನ್ನಾಗಲಿ ಅಥವಾ ಮೊಣಕಾಲುಗಳನ್ನಾಗಲಿ ಬಗ್ಗಿಸದಿರುವತ್ತ ಗಮನ ವಹಿಸಬೇಕು. ಮೊದಲು ಭೂಮಿಯನ್ನು ಮುಟ್ಟುವುದು, ಅನಂತರ ಭೂಮಿಯ ಮೇಲೆ ಅಂಗೈಯನ್ನು  ಊರುವುದು, ನಂತರ […]

ಪಶ್ಚಿಮೋತ್ತಾನಾಸನ

ಪಶ್ಚಿಮೋತ್ತಾನಾಸನ

ಅಷ್ಟಾಂಗ ಯೋಗ - 0 Comment
Issue Date : 07.02.2014

ಪಶ್ಚಿಮೋತ್ತಾನಾಸನವನ್ನು ಬ್ರಹ್ಮಚರ್ಯಾಸನ ಎಂದೂ ಕರೆಯುವರು. ತ್ರ್ಯಂಗಮುಖೈಕ ಪಶ್ಚಿಮೋತ್ತಾನಾಸನ ಮತ್ತು ಅರ್ಧಬದ್ಧ ಪಶ್ಚಿಮೋತ್ತಾನಾಸನಗಳೆಂಬ ಪ್ರಭೇದಗಳೂ ಇದರಲ್ಲಿವೆ. ಮಾಡುವ ಕ್ರಮ 1)    ಮೊದಲು ನೆಲದ ಮೇಲೆ ಕುಳಿತು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಾಬೇಕು. 2)    ಅನಂತರ ಎರಡೂ ಕೈಗಳನ್ನು ಮೇಲಕ್ಕೆತ್ತಿ ದೀರ್ಘವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಬೇಕು. 3)    ಉಸಿರನ್ನು ನಿಧಾನವಾಗಿ  ಹೊರಕ್ಕೆ ಬಿಡುತ್ತಾ ಸಾಧ್ಯವಾದಷ್ಟೂ ಮಟ್ಟಿಗೆ ಮುಂದಕ್ಕೆ ಬಗ್ಗುವಾಗ ಮಂಡಿಯು ಮೇಲಕ್ಕೆ ಎಳೆದಿರುವ ಕಡೆ ಗಮನಿಸುವುದು ಅಗತ್ಯ. 4)    ಅಲ್ಲದೆ ಮುಂದಕ್ಕೆ ಬಗ್ಗುವಾಗ ಚಿತ್ರದಲ್ಲಿರುವಂತೆ ಕಾಲುಗಳನ್ನು ಕೈಗಳಿಂದ ಭದ್ರವಾಗಿ ಹಿಡಿದುಕೊಂಡು, […]

ಊರ್ಧ್ವಮುಖ ಪಶ್ಚಿಮೋತ್ಥಾನಾಸನ

ಊರ್ಧ್ವಮುಖ ಪಶ್ಚಿಮೋತ್ಥಾನಾಸನ

ಅಷ್ಟಾಂಗ ಯೋಗ - 0 Comment
Issue Date : 06.02.2014

ಊರ್ಧ್ವಮುಖ ಪಶ್ಚಿಮೋತ್ಥಾನಾಸನಕ್ಕೆ ವಿಪರೀತ ನಾವಾಸನ ಹಾಗೂ ವಿಪರೀತ ಮೇರುದಂಡಾಸನ ಎಂಬ ಹೆಸರುಗಳೂ ಇವೆ. ಮಾಡುವ ಕ್ರಮ 1)    ನೆಲದ ಮೇಲೆ ಅಂಗಾತನಾಗಿ, ನೇರವಾಗಿ, ಬೆನ್ನನ್ನು ನೆಲಕ್ಕೆ ತಗಲಿಸಿಕೊಂಡು ಮಲಗಬೇಕು. 2)    ನಂತರ ಉಸಿರನ್ನು ನಿಧಾನವಾಗಿ ಹೊರಗೆ ಬಿಡುತ್ತಾ ಕಾಲುಗಳನ್ನು ಉತ್ಥಿತ ಪಾದಾಸನದಂತೆ ನೆಲದಿಂದ ಮೇಲಕ್ಕೆ ಎತ್ತಿ ಭೂಮಿಗೆ ಲಂಬವಾಗಿರಿಸಬೇಕು. ಆನಂತರ ಚಿತ್ರದಲ್ಲಿ ತೋರಿಸಿರುವಂತೆ ಸೊಂಟದ ಮೇಲ್ಭಾಗದ ಶರೀರವನ್ನು ನೆಲದಿಂದ ಮೇಲಕ್ಕೆತ್ತಿ ಎರಡೂ ಕೈಗಳಿಂದ ಕಾಲುಗಳನ್ನು ಭದ್ರವಾಗಿ ಹಿಡಿದು ಕೊಳ್ಳಬೇಕು. 3)  ಈ ಸ್ಥಿತಿಯಲ್ಲಿ ಸೊಂಟ ಮಾತ್ರ ನೆಲದ […]

ಕರ್ಣಪೀಡಾಸನ

ಕರ್ಣಪೀಡಾಸನ

ಅಷ್ಟಾಂಗ ಯೋಗ - 0 Comment
Issue Date : 05.02.2014

ಕರ್ಣಪೀಡಾಸನ ಹಲಾಸನದ ವ್ಯತ್ಯಸ್ತ ಭಂಗಿಯೇ ಕರ್ಣಪೀಡಾಸನ. ‘ಕರ್ಣ’ ಎಂದರೆ ಕಿವಿ, ‘ಪೀಡಾ’ ಎಂದರೆ ಬಾಧೆ. ವಿಶೇಷವಾಗಿ ಕಿವುಡು ಹಾಗೂ ಕಿವಿಯ ಅನೇಕ ವಿಕಾರಗಳು ಈ ಆಸನದ ಅಭ್ಯಾಸದಿಂದ ದೂರವಾಗುವುದರಿಂದ ಕರ್ಣಪೀಡಾಸನವೆಂಬ  ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ. ಮಾಡುವಕ್ರಮ 1)    ಅಂಗತನಾಗಿ, ನೇರವಾಗಿ ನೆಲದ ಮೇಲೆ ಮೊದಲು ಮಲಗಬೇಕು. 2)   ಅನಂತರ ನಿಧಾನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕಾಲುಗಳನ್ನು ಉತ್ಥಿತ ಪಾದಾಸನದಲ್ಲಿ ವಿವರಿಸಿದಂತೆ ಮೇಲಕ್ಕೆತ್ತಬೇಕು. 3)    ಎರಡೂ ಕೈಗಳಿಂದ ಬೆನ್ನಿಗೆ ಭದ್ರವಾದ ಆಸರೆ  ನೀಡಿ ಸರ್ವಾಂಗಾಸನದಂತೆ ಕಾಲುಗಳನ್ನು […]

ಹಲಾಸನ

ಹಲಾಸನ

ಅಷ್ಟಾಂಗ ಯೋಗ - 0 Comment
Issue Date : 04.02.2014

ಹಲಾಸನದಲ್ಲಿ ಶೀರ್ಷಬದ್ಧಹಸ್ತ ಹಲಾಸನ, ವಿಸ್ತೃತಪಾದ ಹಲಾಸನ, ಪಾರ್ಶ್ವ ಹಲಾಸನ ಮತ್ತು ಸುಪ್ತಕೋಣಾಸನ ಎಂಬ ಪ್ರಭೇದಗಳು ಇವೆ. ‘ಹಲ’ ಎಂದರೆ ಸಂಸ್ಕೃತದಲ್ಲಿ ನೇಗಿಲು ಎಂದರ್ಥ. ಮಾಡುವಕ್ರಮ ಮೊದಲು ನೆಲದ ಮೇಲೆ ನೇರವಾಗಿ, ಅಂಗಾತನಾಗಿ ಮಲಗಿಕೊಳ್ಳಬೇಕು. ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಎರಡೂ ಕಾಲುಗಳನ್ನೂ ಉತ್ಥಿತ ಪಾದಾಸನದಂತೆ ನೆಲದಿಂದ ಮೇಲಕ್ಕೆ ಎತ್ತಬೇಕು. ಎರಡೂ ಕೈಗಳಿಂದ ಬೆನ್ನಿಗೆ ಭದ್ರವಾದ ಆಧಾರವನ್ನು ಕೊಟ್ಟು ಸರ್ವಾಂಗಾಸನದಂತೆ ಕಾಲುಗಳನ್ನು ಮೇಲೆತ್ತಿ ಭೂಮಿಗೆ ಲಂಬವಾಗಿ ನಿಲ್ಲಿಸಬೇಕು. ಈ ಸ್ಥಿತಿಯಲ್ಲಿ ನಿಧಾನವಾಗಿ ಉಸಿರಾಡಿ ಅನಂತರ ಚಿತ್ರದಲ್ಲಿ ತೋರಿಸುವಂತೆ ಕಾಲುಗಳನ್ನು  ನೆಲಕ್ಕೆ […]

ಸರ್ವಾಂಗಾಸನ

ಸರ್ವಾಂಗಾಸನ

ಅಷ್ಟಾಂಗ ಯೋಗ - 0 Comment
Issue Date : 03.02.2014

ಸರ್ವಾಂಗಾಸನದಲ್ಲಿ ನಿರಾಲಂಬ ಸರ್ವಾಂಗಾಸನ, ಸಾಲಂಬಗಾಸನ, ಏಕಪಾಸ ಸರ್ವಾಂಗಸನ ಎಂಬ ಪ್ರಭೇದಗಳು ಇವೆ. ಈ ಆಸನದ ಅಭ್ಯಾಸವು ಶರೀರದ ಎಲ್ಲ ಅಂಗಗಳಿಗೂ ವ್ಯಾಯಾಮ ನೀಡುತ್ತದೆ. ಆದ್ದರಿಂದ ಸರ್ವಾಂಗಾಸನ ಎನ್ನುವ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ. ಮಾಡುವ ಕ್ರಮ : 1)    ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಅಂಗಾತನಾಗಿ, ನೇರವಾಗಿ ಮಲಗಬೇಕು. 2)    ಅನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಏಕಕಾಲದಲ್ಲಿ (ಉತ್ಥಿತ ಪಾದಾಸನದಂತೆ) ಮೇಲಕ್ಕೆ ಎತ್ತಬೇಕು. 3)    ಅನಂತರ ಉತ್ಥಿತ ಪಾದಾಸನದಲ್ಲಿ ಲಂಬವಾಗಿದ್ದ ಕಾಲುಗಳನ್ನು ತಲೆಯ ಕಡೆಗೆ ಆದಷ್ಟೂ ಬಗ್ಗಿಸಬೇಕು. […]

ಉತ್ಥಿತ ಪಾದಾಸನ

ಉತ್ಥಿತ ಪಾದಾಸನ

ಅಷ್ಟಾಂಗ ಯೋಗ - 0 Comment
Issue Date : 01.02.2014

ಉತ್ಥಿತ ಪಾದಾಸನದಲ್ಲಿ, ಉತ್ಥಿತ ಏಕಪಾದಾಸನ ಮತ್ತು  ಉತ್ಥಿತ ದ್ವಿಪಾದಾಸನ ಎಂಬ ಪ್ರಭೇದಗಳು ಇವೆ. ಮಾಡುವ ಕ್ರಮ 1)    ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಅಂಗಾತನಾಗಿ, ನೇರವಾಗಿ ಮಲಗಬೇಕು. 2)   ಅನಂತರ ನಿಧನವಾಗಿ ಯಾವುದಾದರೂ ಒಂದು ಕಾಲನ್ನು ( ಉ. ಚಿತ್ರದಲ್ಲಿ ತೋರಿಸಿರುವಂತೆ ಬಲಗಾಲನ್ನು)  ಸಾಧ್ಯವಾದಷ್ಟೂ ಮೇಲಕ್ಕೆ ಎತ್ತಬೇಕು. ಹೀಗೆ ಕಾಲನ್ನು ಮೇಲಕ್ಕೆ ಎತ್ತುವಾಗ ನಿಧನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಬಹುದು. 3)    ಉಸಿರನ್ನು ಹೊರಕ್ಕೆ ಬಿಡುತ್ತಾ ನಿಧಾನವಾಗಿ ಕಾಲನ್ನೂ ಕೆಳಗೆ ಇಳಿಸುವುದು. 4)  ಇದೇ ಕ್ರಿಯೆಯನ್ನು ಇನ್ನೊಂದು […]

ಧನುರಾಸನ

ಧನುರಾಸನ

ಅಷ್ಟಾಂಗ ಯೋಗ - 0 Comment
Issue Date : 31.01.2014

ಶಲಭಾಸನ ಮತ್ತು ಭುಜಂಗಾಸನಗಳ ಸಂಯುಕ್ತ ರೂಪವೇಧನುರಾಸನ. ‘ಧನುಃ’ ಎಂದರೆ ಬಿಲ್ಲು. ಮಾಡುವ ಕ್ರಮ 1)  ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ ಮಲಗಬೇಕು. 2)  ಅನಂತರ ಎರಡೂ ಕಾಲುಗಳನ್ನು ಮಂಡಿಗಳ ಬಳಿ ಹಿಂದಕ್ಕೆ ಬಗ್ಗಿಸಬೇಕು. 3)  ಹೀಗೆ ಬಗ್ಗಿಸಿದ ಕಾಲುಗಳನ್ನು ಎಡಗೈಯಿಂದ ಎಡಗಾಲ ಗಿಣ್ಣನ್ನು ಹಿಡಿದುಕೊಳ್ಳಬೇಕು. 4)  ಉಸಿರನ್ನು ಸಂಪೂರ್ಣವಾಗಿ ಹೊರಗೆ ಬಿಟ್ಟು ಚಿತ್ರದಲ್ಲಿ ತೋರಿಸಿರುವಂತೆ ಕಾಲುಗಳನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. ಈ ಸ್ಥಿತಿಯಲ್ಲಿ ಇಡೀ ಶರೀರದ ಭಾರವು ಹೊಟ್ಟೆಯ ಮೇಲೆ ಇರುತ್ತದೆ. […]