ಭುಜಂಗಾಸನ

ಭುಜಂಗಾಸನ

ಅಷ್ಟಾಂಗ ಯೋಗ - 0 Comment
Issue Date : 30.01.2014

ಹೆಡೆಯೆತ್ತಿದ ಸರ್ಪವನ್ನು ಈ ಆಸನವು ನೆನಪಿಗೆ ತರುವುದರಿಂದ ಭುಜಂಗಾಸನವೆಂಬ ಹೆಸರು ಇದಕ್ಕೆ ಅನ್ವರ್ಥವಾಗಿದೆ. ಮಾಡುವ ಕ್ರಮ: 1)  ಮೊದಲು ಯೋಗಾಭ್ಯಾಸಿಯು ಬೋರಲಾಗಿ (ಕೆಳಮುಖ ಮಾಡಿ) ನೇರವಾಗಿ ಶಲಭಾಸನದ ಪ್ರಾರಂಭದಂತೆ ಮಲಗಬೇಕು. 2)  ಅನಂತರ ಎರಡೂ ಅಂಗೈಗಳನ್ನ ಎದೆಯ ಪಕ್ಕದಲ್ಲಿ ಇಡಬೇಕು. 3)  ಅಂಗೈಗಳ ಮೇಲೆ ಹೊಕ್ಕಳಿನ ಮೇಲಿನ ಭಾಗದ ಶರೀರದ ಭಾರ ಹಾಕಿ, ಉಸಿರನ್ನು ನಿಧಾನವಾಗಿ ಒಳಗೆ ತೆಗೆದುಕೊಳ್ಳುತ್ತಾ ಚಿತ್ರದಲ್ಲಿ ತೋರಿಸಿರುವಂತೆ ಶರೀರವನ್ನು ನೆಲದಿಂದ ಮೇಲಕ್ಕೆ ಎತ್ತಬೇಕು. 4)  ಈ ಸ್ಥಿತಿಯಲ್ಲಿ ಸೊಂಟದ ಕೆಳಗಿನ ಭಾಗವು ನೆಲದ […]

ಶಲಭಾಸನ

ಶಲಭಾಸನ

ಅಷ್ಟಾಂಗ ಯೋಗ - 0 Comment
Issue Date : 29.01.2014

ಶಲಭಾಸನದಲ್ಲಿ ಏಕಪಾದ ಶಲಭಾಸನ ಮತ್ತು ದ್ವಿಪಾದ ಅಥವಾ ಪೂರ್ಣ ಶಲಭಾಸನಗಳೆಂಬ ಪ್ರಭೇದಗಳೂ ಇವೆ. ಶಲಭ ಎಂದರೆ ಸಂಸ್ಕೃತದಲ್ಲಿ ಮಿಡತೆ, ಈ ಆಸನದ ಅಭ್ಯಾಸದಲ್ಲಿ ಶರೀರವು ಮಿಡತೆಯ ಆಕಾರವನ್ನು ಹೊಂದುವುದು. ಮಾಡುವ ಕ್ರಮ 1)    ಯೋಗಾಭ್ಯಾಸಿಯೂ ಮೊದಲು ನೆಲದ ಮೇಲೆ ಬೋರಲಾಗಿ, (ಕೆಳ ಮುಖ ಮಾಡಿ) ನೇರವಾಗಿ ಮಲಗಿಕೊಳ್ಳಬೇಕು. 2)   ನಂತರ ಎರಡೂ ಕೈಗಳನ್ನು ತೊಡೆಗಳ  ಕೆಳಗೆ ಇಡಬೇಕು. 3)    ನಿಧನವಾಗಿ ತಲೆಯನ್ನು ಚಿತ್ರದಲ್ಲಿರುವಂತೆ ಮೇಲಕ್ಕೆತ್ತಬೇಕು. 4)   ಹಾಗೆಯೇ ಎರಡೂ ಕಾಲುಗಳನ್ನು ನಿಧನವಾಗಿ ಮೇಲಕ್ಕೆತ್ತಬೇಕು. ಆಗ ಎದೆ ಮತ್ತು […]

ಪೂರ್ಣಮತ್ಸ್ಯೇಂದ್ರಾಸನ

ಪೂರ್ಣಮತ್ಸ್ಯೇಂದ್ರಾಸನ

ಅಷ್ಟಾಂಗ ಯೋಗ - 0 Comment
Issue Date : 28.01.2014

ಅರ್ಧಮತ್ಸೇಂದ್ರಾಸನದ ವಿಪರೀತ ಭಂಗಿಯನ್ನು ಪೂರ್ಣಮತ್ಸೇಂದ್ರಾಸನವೆಂದೂ, ಪರಿಪೂರ್ಣ ಮತ್ಸೇಂದ್ರಾಸನವೆಂದೂ ಕರೆಯುವರು. ಮಾಡುವಕ್ರಮ: 1)    ಯೋಗಾಭ್ಯಾಸಿಯೂ ಮೊದಲು ನೆಲದ ಮೇಲೆ ಕುಳಿತು ತನ್ನೆರಡು ಕಾಲುಗಳನ್ನು ಮುಂದಕ್ಕೆ ಚಾಚಾಬೇಕು. 2)   ಅನಂತರ ಎಡಗಾಲನ್ನು ಬಲತೊಡೆಯ ಮೇಲೆ ಇಡಬೇಕು. 3)    ಅರ್ಧಮತ್ಸ್ಯೇಂದ್ರಾಸನದ ರೀತಿಯಲ್ಲಿ ಚಿತ್ರದಲ್ಲಿರುವಂತೆ ಬಲಗಾಲನ್ನು ಎಡಗಾಲಿನ ಮಂಡಿಯ ಬಳಿ ಶರೀರದ ಹೊರಗೆ ಇಡಬೇಕು. 4)   ಅನಂತರ ಸೊಂಟದ ಮೇಲ್ಭಾಗದ ಶರೀರವನ್ನು ಬಲಗಡೆಗೆ ತಿರುಗಿಸುತ್ತಾ, ಎಡಗೈಯಿಂದ ಬಲಮಂಡಿಯನ್ನು ಬಳಸಿ, ಹಾಗೆಯೇ ಬಲಪಾದ ಅಥವಾ ಬಲಗಾಲಿನ ಹೆಬ್ಬೆರಳನ್ನು ಹಿಡಿದುಕೊಳ್ಳಬೇಕು. 5)   ಬಲಗೈಯನ್ನು ಬೆನ್ನಿನ ಮೇಲೆ […]

ಅರ್ಧ ಮತ್ಸೇಂದ್ರಾಸನ

ಅರ್ಧ ಮತ್ಸೇಂದ್ರಾಸನ

ಅಷ್ಟಾಂಗ ಯೋಗ - 0 Comment
Issue Date : 22.01.2014

‘ಮತ್ಸೇಂದ್ರ’ನೆಂಬ ಯೋಗಿಯೊಬ್ಬನಿಂದ ಪ್ರಣೀತವಾದುದು ‘ಹಠಯೋಗ ಪ್ರದೀಪಿಕೆ’. ಹಠಯೋಗ ಪ್ರದೀಪಿಕೆಯಲ್ಲಿ ಈ ಆಸನಕ್ಕೆ ಸಂಬಂಧಿಸಿದ ವಿಷಯಗಳು ಹೇರಳವಾಗಿ ದೊರೆಯುತ್ತವೆ. ಆದ್ದರಿಂದಲೇ ಈ ಆಸನಕ್ಕೆ ಆ ಯೋಗಿಯ ಹೆಸರು ಬಂದಿರಬಹುದು. ಮಾಡುವಕ್ರಮ 1)    ಆಸನ ಪ್ರಾರಂಭಿಸುವ ಮೊದಲು ಯೋಗಾಭ್ಯಾಸಿಯೂ ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಬೇಕು. 2)    ನಂತರ ಎಡಗಾಲನ್ನು ಮಡಿಸಿ, ಎಡ ಹಿಮ್ಮಡಿಯು ಗುದದ್ವಾರದ  ಬಳಿ ಬರುವಂತೆ ಇಡಬೇಕು. ಈ ಸ್ಥಿತಿಯಲ್ಲಿ ಎಡಗಾಲಿನ ತೊಡೆ ಮತ್ತು ಮೀನಖಂಡಗಳು ಪರಸ್ಪರ ತಗಲಿರುತ್ತವೆ. 3)    ಬಲಗಾಲನ್ನು ಮಡಿಸಿ, ಅದನ್ನು ಎಡಗಾಲಿನ ಮಂಡಿಯ […]

ಗೋಮುಖಾಸನ

ಗೋಮುಖಾಸನ

ಅಷ್ಟಾಂಗ ಯೋಗ - 0 Comment
Issue Date : 21.01.2014

ಸಂಸ್ಕೃತದಲ್ಲಿ ‘ಗೋ’ ಎಂದರೆ ಹಸು. ಹಸುವಿನ ಮೋರೆಯ ನೆನಪನ್ನೇ ಈ ಆಸನ ತರುತ್ತದೆ. ಅದಕ್ಕಾಗಿಯೇ ಗೋಮುಖಾಸನವೆಂದು ಹೆಸರು. ಮಾಡುವ ಕ್ರಮ 1)    ಆಸನ ಪ್ರಾರಂಭಿಸುವ ಮೊದಲು ಯೋಗಾಭ್ಯಾಸಿಯು ಎರಡೂ ಕಾಲುಗಳನ್ನು ಮುಂದಕ್ಕೆ ನೀಡಿ ಕುಳಿತುಕೊಳ್ಳಬೇಕು. 2)   ಮೊದಲು ಬಲಗಾಲನ್ನು ಮಡಿಸಿ, ಬಲ ಹಿಮ್ಮಡಿಯು ಅಂಡಮೂಲಕ್ಕೆ ತಗಲುವಂತೆ ಎಡತೊಡೆಯ ಕೆಳಗೆ ಇಡಬೇಕು. 3)    ಅನಂತರ ಇದೇ ರೀತಿ ಎಡಗಾಲನ್ನು ಮಡಿಸಿ, ಎಡಗಾಲು ಬಲ ಮಂಡಿಯ ಮೇಲೆ ಬರುವಂತೆ ಇಡಬೇಕು. ಈ ಸ್ಥಿತಿಯಲ್ಲಿ ಎರಡೂ ಕಾಲುಗಳು ಸಾಧ್ಯವಾದಷ್ಟೂ ಶರೀರದ ಪಕ್ಕದಲ್ಲೇ ಇರುವುದು […]

ಪವನಮುಕ್ತಾಸನ

ಪವನಮುಕ್ತಾಸನ

ಅಷ್ಟಾಂಗ ಯೋಗ - 0 Comment
Issue Date : 18.01.2014

  ಪವನಮುಕ್ತಾಸನಕ್ಕೆ ಪೃಷ್ಠಾಸನ, ದ್ವಿಪಾದ ಪವನಮುಕ್ತಾಸನವೆಂಬ ಹೆಸರುಗಳೂ ಇವೆ. ಮಾಡುವ ಕ್ರಮ: 1) ನೆಲದ ಮೇಲೆ ಯೋಗಾಭ್ಯಾಸಿಯು ಅಂಗಾಂತನಾಗಿ, ನೇರವಾಗಿ ಮಲಗಬೇಕು, 2) ಉಸಿರನ್ನು ನಿಧಾನವಾಗಿ ಒಳಕ್ಕೆ ತೆಗೆದುಕೊಳ್ಳತ್ತ  ಎರಡೂ ಕಾಲನ್ನು ಮಡಿಸಿ ಮಂಡಿಗಳು ಎದೆಯ ಮೇಲೆ ಬರುವಂತೆ ಬಗ್ಗಿಸಬೇಕು. 3)ಉಸಿರನ್ನು ಹೊರಕ್ಕೆ ಬಿಡುತ್ತಾ ಚಿತ್ರದಲ್ಲಿ ತೋರಿಸಿರುವಂತೆ ಕತ್ತನ್ನು ಮುಂದಕ್ಕೆ ಬಗ್ಗಿಸಿ, ಮೂಗು ಮಂಡಿಗೆ ಮುಟ್ಟಿಸಲು ಪ್ರಯತ್ನಿಸಬೇಕು. 4) ಕಾಲುಗಳನ್ನು ಎರಡೂ ಕೈಗಳಿಂದ ಸುತ್ತಿ ಪರಸ್ಪರ ಹಿಡಿದುಕೊಳ್ಳಬೇಕು. ಇದೇ ಸ್ಥಿತಿಯಲ್ಲಿ ಶರೀರವನ್ನು ಹಿಂದಕ್ಕೂ ಮುಂದಕ್ಕೂ (ಮಕ್ಕಳ ಆಟದ […]

ಏಕಪಾದ ಪವನಮುಕ್ತಾಸನ

ಏಕಪಾದ ಪವನಮುಕ್ತಾಸನ

ಅಷ್ಟಾಂಗ ಯೋಗ - 0 Comment
Issue Date : 16.01.2014

‘ಪವನ’ ಎಂದರೆ ಗಾಳಿ ಎಂದರ್ಥ. ಮುಕ್ತಾ ಎಂದರೆ ಬಿಡುಗಡೆ ಹೊಂದುವುದು. ಹೀಗಾಗಿ ಪವನಮುಕ್ತಾಸನವೆಂಬ ಹೆಸರು ಈ ಆಸನಕ್ಕೆ ಅನ್ವರ್ಥವಾಗಿದೆ. ಮಾಡುವ ಕ್ರಮ : ಯೋಗಾಭ್ಯಾಸಿಯು ಮೊದಲು ನೆಲದ ಮೇಲೆ ಅಂಗಾತನಾಗಿ ನೇರವಾಗಿ ಮಲಗಬೇಕು. ಅನಂತರ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ, ಬಲಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ನಿಧಾನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳುತ್ತಾ ಮಂಡಿಯ ಬಳಿ ಬಗ್ಗಿಸಿ, ಚಿತ್ರದಲ್ಲಿ ತೋರಿಸುವಂತೆ ಎದೆಯ ಮೇಲೆ ಇಡಬೇಕು. ಹಾಗೆಯೇ ತಲೆಯನ್ನೂ ಮುಂದಕ್ಕೆ ಬಗ್ಗಿಸಿ, ಉಸಿರನ್ನು ಹೊರಕ್ಕೆ ಬಿಡುತ್ತಾ ಬಲಗಾಲಿನ ಮಂಡಿ ಮತ್ತು […]

ಯೋಗಾಮುದ್ರಾಸನ

ಯೋಗಾಮುದ್ರಾಸನ

ಅಷ್ಟಾಂಗ ಯೋಗ - 0 Comment
Issue Date : 15.01.2014

ಯೋಗಾಮುದ್ರಾಸನ ಕುಂಡಲಿನೀ ಶಕ್ತಿಯನ್ನು ವಿಶೇಷವಾಗಿ ಉದ್ದೀಪನಗೊಳಿಸುವುದರಲ್ಲಿ ಸಹಕಾರಿ ಅಲ್ಲದೆ ಧ್ಯಾನಕ್ಕೂ ಉತ್ತಮವಾದುದು. ಮಾಡುವ ಕ್ರಮ ಯೋಗಾಭ್ಯಾಸಿಯು ಎದೆಯೆತ್ತಿ, ನೇರವಾಗಿ ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಆನಂತರ ಎರಡೂ ಕೈಗಳನ್ನು ಬೆನ್ನಿನ ಮೇಲೆ ಒಂದು ಇನ್ನೊಂದನ್ನು ಛೇದಿಸುವಂತೆ ಇಡಬೇಕು ಮತ್ತು ಅದೇ ಸ್ಥಿತಿಯಲ್ಲಿ ಎಡಗೈಯಿಂದ ಎಡ ಗಾಲಿನ ಹೆಬ್ಬೆರಳನ್ನೂ, ಬಲಗೈಯಿಂದ ಬಲಗಾಲಿನ ಹೆಬ್ಬೆರಳನ್ನೂ ಹಿಡಿಯಬೇಕು. ಒಮ್ಮೆ ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ನಿಧನವಾಗಿ ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಚಿತ್ರದಲ್ಲಿ ತೋರಿಸುವಂತೆ ಬಾಗಬೇಕು.  ಒಮ್ಮೆ ಬಗ್ಗಿದನಂತರ ಆ ಸ್ಥಿತಿಯಲ್ಲಿ ಅತಿ ನಿಧನವಾಗಿ […]

 ಬಕಾಸನ  (ಪದ್ಮಾಸನ ಸಹಿತ)

ಬಕಾಸನ (ಪದ್ಮಾಸನ ಸಹಿತ)

ಅಷ್ಟಾಂಗ ಯೋಗ - 0 Comment
Issue Date : 14.01.2014

  ಬಕಾಸನ (ಪದ್ಮಾಸನ ಸಹಿತವಾದ)ಕ್ಕೆ ಊರ್ಧ್ವ ಕುಕ್ಕುಟಾಸನವೆಂದೂ ಹೆಸರುಂಟು.  ಹೆಸರಿನಲ್ಲಿ ವ್ಯತ್ಯಾಸ ತೋರಿಬಂದರೂ, ಅವುಗಳ ಲಾಭದಲ್ಲಿ ಮಾತ್ರ ವ್ಯತ್ಯಾಸವಿಲ್ಲ. ಮಾಡುವ ಕ್ರಮ  ಈ ಆಸನವನ್ನು ಸಾಮಾನ್ಯವಾಗಿ ಎರಡು ವಿಧವಾಗಿ ಮಾಡಬಹುದು:  1) ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಎರಡೂ ಕೈಗಳನ್ನು ಶರೀರದ ಮುಂದೆ ಒಂದೂವರೆಯಿಂದ ಎರಡು ಅಡಿ ಅಂತರದಲ್ಲಿ ಊರಬೇಕು. ಹಾಗೆ ಊರಿದ ಕೈಗಳ ಮೇಲೆ ತನ್ನ ಶರೀರವನ್ನು ಚಿತ್ರದಲ್ಲಿ ತೋರಿಸುವಂತೆ ಸಮತೋಲನದಲ್ಲಿ ನಿಲ್ಲಿಸಿಕೊಳ್ಳಬೇಕು. ಹೀಗೆ ಸಮತೋಲನದ ಸ್ಥಿತಿಯಲ್ಲಿ ನಮ್ಮ ಕಾಲಿನ ಮಂಡಿಗಳು ಕಂಕಳುಗಳು ಪಕ್ಕದಲ್ಲಿ […]

ಸ್ವಾಂಕ ಪದ್ಮಾಸನ

ಅಷ್ಟಾಂಗ ಯೋಗ - 0 Comment
Issue Date : 11.01.2014

ಸಹಜವಾಗಿ ಮಲಗಿ ನಿದ್ರಿಸಲು ಸಾಧ್ಯವಿಲ್ಲದ ಈ ಯುಗದಲ್ಲಿ ತನ್ನ ತೊಡೆಯ ಮೇಲೆ ತಾನೇ ಮಲಗಿ ನಿದ್ರಿಸುವುದಂತೂ ಆಶ್ಚರ್ಯದ ಮಾತೇ ಹೌದು. ಸ್ವಾಂಕ ಪದ್ಮಾಸನವೆಂದರೆ ತನ್ನ ತೊಡೆಯ ಮೇಲೆ ಮಲಗುವುದು ಎಂದರ್ಥ. ಈ ಅರ್ಥವು ಸ್ವಾಂಕ ಪದ್ಮಾಸನಕ್ಕೆ ಅನ್ವರ್ಥವೂ ಆಗಿದೆ. ಮಾಡುವ ಕ್ರಮ ಈಗಾಗಲೇ ವಿವರಿಸಿರುವಂತೆ ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಅನಂತರ ಎಡಕೈಯನ್ನು ಬೆನ್ನಿನ ಮೇಲಿಟ್ಟು ಬಲಗೈಯನ್ನು ಬಲಪಾದದ ಮೇಲಿಡಬೇಕು. ನಿಧನವಾಗಿ ಬಲತೊಡೆಯ ಮೇಲೆ ಬಲ ಕಪಾಳವು ಬರುವಂತೆ ಮಂದಕ್ಕೆ ಚಿತ್ರದಲ್ಲಿ ತೋರಿಸುವಂತೆ ಬಗ್ಗಬೇಕು. ಹಾಗೆಯೇ, ಎಡತೊಡೆಯ […]