ಉತ್ಥಿತ ಪದ್ಮಾಸನ

ಉತ್ಥಿತ ಪದ್ಮಾಸನ

ಅಷ್ಟಾಂಗ ಯೋಗ - 0 Comment
Issue Date : 10.01.2014

  ಉತ್ಥಿತ ಪದ್ಮಾಸನಕ್ಕೆ ಹಲವು ಹೆಸರುಗಳಿವೆ. ಇದನ್ನು ತೋಲಾಸನವೆಂದೂ, ಲೋಲಾಸನವೆಂದೂ ಕರೆಯುತ್ತಾರೆ. ಪದ್ಮಾಸನ ಸಹಿತ ನೆಲದಿಂದ ಮೇಲಕ್ಕೆ ಇಡೀ ಶರೀರವನ್ನು ಎತ್ತುವುದಕ್ಕೆ ಉತ್ಥಿತ ಪದ್ಮಾಸನವೆಂದೂ, ಎರಡೂ ಕೈಗಳು ಇಡೀ ಶರೀರದ ಭಾರವನ್ನು ಹೊರುವುದರಿಂದ ತೋಲಾಸನವೆಂದೂ, ತೋಲಾಸನದಲಲ್ಲೇ  ಉಯ್ಯಾಲೆಯಂತೆ –ಹಿಂದಕ್ಕೂ – ಮಂದಕ್ಕೂ – ತೂಗಾಡುವುದಕ್ಕೆ ಲೋಲಾಸನವೆಂದೂ ಕರೆಯಲಾಗುತ್ತದೆ. ಈ ಆಸನವು ಪದ್ಮಾಸನದ ಒಂದು ವ್ಯತ್ಯಸ್ತ ಭಂಗಿ. ಮಾಡುವ ಕ್ರಮ ಉತ್ಥಿತ ಪದ್ಮಾಸನಕ್ಕೆ ಮೊದಲು ಯೋಗಾಭ್ಯಾಸಿಯು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಎರಡೂ ತೊಡೆಗಳ ಹಿಂದೆ ಅಂಗೈಗಳನ್ನು ನೆಲದಲ್ಲಿ ಭದ್ರವಾಗಿ ಊರಬೇಕು. […]

ಗರ್ಭಾಸನ

ಗರ್ಭಾಸನ

ಅಷ್ಟಾಂಗ ಯೋಗ - 0 Comment
Issue Date : 09.01.2014

  ಗರ್ಭಾಸನಕ್ಕೆ ಅನೇಕಾರು ಹೆಸರುಗಳುಂಟು. ಸಾಮಾನ್ಯವಾಗಿ ಇದನ್ನು ಗರ್ಭಾಸನವೆಂದೂ ಕರೆಯುತ್ತಾರೆ. ಇದು ಸಹ ಪದ್ಮಾಸನದ ಒಂದು ವ್ಯತ್ಯಾಸ್ತಭಂಗಿಯೇ. ಗರ್ಭದಲ್ಲಿರುವ ಮಗುವಿನ ಆಕಾರವನ್ನು ಹೋಲುವುದೆಂದರೂ, ಈ ವಿವರಣೆಯು ಹೆಚ್ಚು ಅರ್ಥಕಾರಿಯಲ್ಲ. ಏಕೆಂದರೆ ಗರ್ಭದಲ್ಲಿರುವ ಮಗು ಪದ್ಮಾಸನದಲ್ಲಿ ಇರುವುದಿಲ್ಲ. ಅಲ್ಲದೆ ಗರ್ಭದಲ್ಲಿ ಮಗು ಚಿತ್ರದಲ್ಲಿರುವಂತೆ ಇರದೆ ತಲೆಕೆಳಗಾಗಿರುತ್ತದೆ.  ಮಾಡುವ ಕ್ರಮ : ಗರ್ಭಾಸನ ಮಾಡುವ ಮೊದಲು ಪದ್ಮಾಸನದಲ್ಲಿ ಎಡತೊಡೆಯ ಮೇಲೆ ಬಲಪಾದವನ್ನೂ ಬಲತೊಡೆಯ ಮೇಲೆ ಎಡಪಾದವನ್ನೂ ಹಾಕಿ ಕುಳಿತುಕೊಳ್ಳಬೇಕು. ಕುಕ್ಕುಟಾಸನದಲ್ಲಿ ಹೇಳಿದಂತೆ ಬಲಗಾಲು ಮತ್ತು ಬಲ ಮೀನಖಂಡಗಳ ನಡುವೆ ಬಲಗೈಯನ್ನೂ, […]

ಮತ್ಸ್ಯಾಸನ

ಮತ್ಸ್ಯಾಸನ

ಅಷ್ಟಾಂಗ ಯೋಗ - 0 Comment
Issue Date : 08.01.2014

  ‘ಮತ್ಸ್ಯಾ’ ಎಂದರೆ ಸಂಸ್ಕೃತದಲ್ಲಿ ಮೀನು.  ಮೀನಿನಂತೆ ಮನುಷ್ಯನು ಸಹ ತನ್ನ ಶರೀರದ ಅಂಗಗಳ ಮೇಲೆ ಹಿಡಿತವಿಟ್ಟುಕೊಂಡು, ಅವುಗಳ ಉಪಯೋಗವನ್ನು ಪಡೆಯಬೇಕು. ಇಲ್ಲದಿದ್ದಲ್ಲಿ ಕಲೆಮೊಮ್ಮೆ ಅಪಾಯ ಸಂಭವಿಸುವ ಸಂದರ್ಭಗಳೂ ಉಂಟು. ಮಾಡುವ ಕ್ರಮ ಪ್ರಾರಂಭದಲ್ಲಿ ಪದ್ಮಾಸನದಲ್ಲಿ ಕುಳಿತುಕೊಳ‍್ಳಬೇಕು. ಅನಂತರ ಬಲಗೈ ಸಹಾಯದಿಂದ ಬಲಗಡೆಯಿಂದ ಅಂಗಾತ ಮಲಗಬೇಕು. ಈ ಸ್ಥಿತಿಯಲ್ಲಿ ತಲೆ, ಬೆನ್ನು ಮತ್ತು ತೊಡೆ ಹಾಗೂ ಮಂಡಿ ನೆಲವನ್ನು ಸ್ಪರ್ಶಿಸಿರಬೇಕು. ನಿಧನವಾಗಿ ಸೊಂಟ, ಬೆನ್ನು ಮತ್ತು ಕತ್ತನ್ನು ಸ್ವಲ್ಪ ಮೇಲಕ್ಕೆತ್ತಿ ತಲೆಯನ್ನು ಚಿತ್ರದಲ್ಲಿ ತೋರಿಸುವಂತೆ ಹಿಂದಕ್ಕೆ ಬಗ್ಗಿಸಬೇಕು. […]

ಕುಕ್ಕುಟಾಸನ

ಕುಕ್ಕುಟಾಸನ

ಅಷ್ಟಾಂಗ ಯೋಗ - 0 Comment
Issue Date : 07.01.2014

  ಪದ್ಮಾಸನದ ಒಂದು ಪ್ರಕಾರವೇ ಕುಕ್ಕುಟಾಸನ. ಇದು ಒಂದು ರೀತಿಯಲ್ಲಿ ವಿಶೇಷ ಅಭ್ಯಾಸದಿಂದಲೇ ಸಿದ್ದಿಸುವ ಆಸನ, ಏಕೆಂದರೆ, ಈ ಆಸನದಲ್ಲಿ  ಇಡೀ ಶರೀರದ ಭಾರವು ಕೇವಲ ಎರಡು ಹಸ್ತಗಳ ಮೇಲೆಯೇ ಬೀಳುವುದು. ಅದನ್ನು ಹೊರುವ ಶಕ್ತಿಯನ್ನು ಹಸ್ತಗಳು ಹೊಂದಿದಾಗ ಮಾತ್ರ ಈ ಆಸನ ಕರಗತವಾಗುವುದು. ಮಾಡುವ ಕ್ರಮ ಯೋಗಾಭ್ಯಾಸಿಯು ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಬಲತೊಡೆ ಮತ್ತು ಬಲಗಾಲಿನ ಮೀನಖಂಡಗಳ ನಡುವೆ ಬಲಗೈಯನ್ನೂ, ಎಡತೊಡೆ ಮತ್ತು ಎಡಗಾಲಿನ ಮಿನಖಂಡಗಳ ನಡುವೆ ಎಡಗೈಯನ್ನೂ ಕೂರಿಸಬೇಕು. ಅನಂತರ ಎರಡೂ ಅಂಗೈಗಳನ್ನು ಭದ್ರವಾಗಿ […]

ಬದ್ಧ ಪದ್ಮಾಸನ

ಬದ್ಧ ಪದ್ಮಾಸನ

ಅಷ್ಟಾಂಗ ಯೋಗ - 0 Comment
Issue Date : 04.01.2014

    ‘ಬದ್ಧ’ ಎಂದರೆ ಸಂಸ್ಕೃತದಲ್ಲಿ ಕಟ್ಟಲ್ಪಟ್ಟದ್ದು ಅಥವಾ ಹಿಡಿತಕ್ಕೆ, ಬಿಗಿಗೆ ಒಳಗಾದುದು ಎಂದರ್ಥ. ಈ ಆಸನದ ಅಭ್ಯಾಸದಿಂದ ಇಡೀ ಶರೀರದಲ್ಲಿ ಒಂದು ರೀತಿಯ ಸೆಳೆತ, ಬಿಗಿ ಬರುತ್ತದೆ. ಕಾಲಿನ ಹೆಬ್ಬೆರಳಿನಿಂದ ತಲೆಯ ತನಕ ಶರೀರದ ಎಲ್ಲ ಅಂಗಗಳಲ್ಲೂ ಹೆಚ್ಚಿನ ಚಟುವಟಿಕೆ ಇರುತ್ತದೆ. ಆದ್ದರಿಂದಲೇ ‘ಬದ್ಧಪದ್ಮಾಸನ’ ವೆಂಬ ಹೆಸರು ಈ ಆಸನಕ್ಕೆ ಅನ್ವರ್ಥವಾದುದು. ಮಾಡುವ ಕ್ರಮ ಬದ್ಧ ಪದ್ಮಾಸನಕ್ಕೆ ಮೊದಲು ಯೋಗಾಭ್ಯಾಸಿಯೂ ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು.  ಎದೆಯನ್ನು ಸಾಕಷ್ಟು ಎತ್ತಿರಬೇಕು, ಹೊಟ್ಟೆ ಸಾಧ್ಯವಾದಷ್ಟೂ ಒಳಗೆ ತೆಗೆದುಕೊಳ್ಳುವುದು ಉತ್ತಮ. ನಂತರ […]

ಪದ್ಮಾಸನ

ಪದ್ಮಾಸನ

ಅಷ್ಟಾಂಗ ಯೋಗ - 0 Comment
Issue Date : 03.12.2013

  ಇದಂ ಪದ್ಮಾಸಂ ಸನಂ ಪ್ರೋಕ್ತಂ ಸರ್ವವ್ಯಾಧಿವಿನಾಶನಂ | ದುರ್ಲಭಂ ಯೇನ ಕೇನಾಪಿ ಧೀಮತಾ ಭುವಿ ಲಭ್ಯತೆ || ಎಂದು ಹಠಯೋಗ ಪ್ರದೀಪಿಕೆಯಲ್ಲಿ ಪದ್ಮಾಸನವನ್ನು ಕುರಿತು ಹೇಳಲಾಗಿದೆ. ಅಂದರೆ “ಪದ್ಮಾಸನವನ್ನು ಮಾಡುವುದರಿಂದ ಸಮಸ್ತ ರೋಗಗಳೂ ನಾಶವಾಗುವುವು. ದುರ್ಲಭವಾದ ಈ  ವಿಷಯವು ಕೇವಲ ಬುದ್ಧಿವಂತರಿಗೆ ಮಾತ್ರ ಲಭ್ಯವಾಗುವುದು. ಮಾಡುವ ಕ್ರಮ ಮೊದಲು ನೆಲದ ಮೇಲೆ ಕುಳಿತು ಎರಡು ಕಾಲುಗಳನ್ನು ಮುಂದಕ್ಕೆ ಚಾಚಾಬೇಕು. ನಂತರ ನಿಧನವಾಗಿ ಬಲಗಾಲನ್ನು ಮಂಡಿಯ ಬಳಿ ಬಗ್ಗಿಸಿ, ಬಲ ಪಾದವನ್ನು ಹಿಡಿದುಕೊಂಡು ಎಡತೊಡೆಯ ಮೇಲೆ ಅಂದರೆ […]