ಆರು ರುಚಿಗಳು ಬೇರೆ; ಸಾರವೊಂದೇ

ಆರು ರುಚಿಗಳು ಬೇರೆ; ಸಾರವೊಂದೇ

ಬೋಧ ಕಥೆ - 0 Comment
Issue Date : 10.12.2015

ಸಿಹಿ, ಹುಳಿ, ಉಪ್ಪು, ಖಾರ, ಒಗರು ಮತ್ತು ಕಹಿ-ಇವನ್ನು ಷಡ್ರಸಗಳೆಂದು (ಆರು ರುಚಿಗಳೆಂದು) ಕರೆಯುತ್ತಾರೆ. ಯಾವನೇ ವ್ಯಕ್ತಿಯು ಉಣ್ಣುವ ಆಹಾರದಲ್ಲಿ ಈ ರಸಗಳೆಲ್ಲ ಸೇರಿದಾಗ ಅದರ ರುಚಿಯೂ ಹೆಚ್ಚುತ್ತದೆ. ಉಣ್ಣುವವನ ಖುಷಿಯೂ ಅಧಿಕಗೊಳ್ಳುತ್ತದೆ. ಆದರೆ ಉಣ್ಣುವಾಗ, ತಿನ್ನುವಾಗ ಇವುಗಳನ್ನು ಬೇರೆ ಬೇರೆಯಾಗಿ ಗುರುತಿಸುವುದಿಲ್ಲ. ಊಟ, ತಿಂಡಿ, ಫಲಾಹಾರ, ಉಪಾಹಾರ ಇತ್ಯಾದಿಗಳೆಲ್ಲ ಒಂದೇ. ನಿನಗೆ ತಿಂಡಿ ಆಯಿತೇ? ಊಟ ಮುಗಿಯಿತೇ? ಎಂದು ಕೇಳುತ್ತಾರಲ್ಲದೆ ನೀನು ಹುಳಿ ತಿಂದೆಯೇ, ಕಹಿ ಸೇವಿಸಿದೆಯೇ ಎಂದು ಯಾರೂ ಕೇಳುವುದಿಲ್ಲ. ಊಟೋಪಚಾರಗಳಲ್ಲಿ ವೈವಿಧ್ಯಕ್ಕಾಗಿ, ಶರೀರ […]

ಅವತಾರ : ಭವಭಯಹಾರ

ಬೋಧ ಕಥೆ - 0 Comment
Issue Date :

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಯಾವ ಯಾವ ಸಮಯದಲ್ಲಿ ಧರ್ಮದ ಹಾನಿ ಹಾಗೂ ಅಧರ್ಮದ ಹೆಚ್ಚಳವಾಗುವುದೋ ಆಗೆಲ್ಲ ನಾನು ಸಜ್ಜನರನ್ನು ಕಾಯಲು ದುರ್ಜನರನ್ನು ವಿನಾಶ ಮಾಡಲು ಹಾಗೂ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗಗಳಲ್ಲಿ ಅವತರಿಸುತ್ತೇನೆ (….ಸಂಭವಾಮಿ ಯುಗೇ ಯುಗೇ) ಇದು ಗೀತಾಚಾರ್ಯ ಭಗವಂತನ ಮಾತು. (ಗೀತಾ. ಅ: 2, ಶ್ಲೋ 7-8) ಜಗತ್ಪಾಲಕನಾದ ಭಗವಂತ ಕಾಲಕಾಲಕ್ಕೆ ಹಲವು ಅವತಾರಗಳನ್ನು ತಳೆದು ಬಂದು ತನ್ನ ನಂಬಿದವರನ್ನು ಕಾಯ್ದಿದ್ದಾನೆ. ಹಲವು ಅವತಾರಗಳಲ್ಲಿ ಮತ್ಸ್ಯಾದಿ ಹತ್ತು ಅವತಾರಗಳು ಬಹುಪ್ರಸಿದ್ಧ. […]

ಗಾದೆ ಮಾತುಗಳು

ಗಾದೆ ಮಾತುಗಳು

ಬೋಧ ಕಥೆ - 0 Comment
Issue Date : 08.05.2015

“ಆಡಿ ಉಂಬುವನ ಅರಸನಾಗುವುದಕ್ಕಿಂತ ಮಾಡಿ ಉಂಬುವನ ಆಳಾಗಿ ದುಡಿ’’ ಎನ್ನುವ ಗಾದೆಯಿದೆ. ಉಡಾಳನಾಗಿ ಉಂಡುಂಡು ದುಡಿಯದೇ ಯಾವ ಕೆಲಸವನ್ನು ಮಾಡದೇ ಪೋಕರಿಯಾಗಿ ತಿರುಗುವುದನ್ನು ನೋಡಿ ಈ ಗಾದೆ ಹುಟ್ಟಿಕೊಂಡಿದೆ. ‘‘ವೇದ ಸುಳ್ಳಾದರು ಗಾದೆ ಸುಳ್ಳಲ್ಲ’’ ಎಂಬುವ ನಾಣ್ಣುಡಿಯಿದೆ. ತಂದೆ-ತಾಯಿಯ ಮಾತನ್ನು ಆಲಿಸದೆ, ಗುರುಹಿರಿಯರ ಆಶೀರ್ವಾದ ಪಡೆಯದೇ ಉಂಡಾಡಿ ಗುಂಡನಂತೆ ಆಡಿ ಅಂಡಲೆಯವವನನ್ನು ನೋಡಿ ಹಿರಿಯರು ‘‘ಆಡಿ ಉಂಬುವನ ಅರಸನಾಗಬೇಡ’’ ಎಂದು ಹೇಳಿದ್ದಾರೆ. ‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎನ್ನುವ ಗಾದೆಯೂ ಇದೆ. ಬಸವಣ್ಣ ‘‘ಕಾಯಕವೇ ಕೈಲಾಸ’’ ಎಂದು […]

ಅವಮಾನವಾದರೆ ಒಳ್ಳಿತು

ಅವಮಾನವಾದರೆ ಒಳ್ಳಿತು

ಬೋಧ ಕಥೆ - 0 Comment
Issue Date : 08.05.2015

ಸಾಮಾನ್ಯವಾಗಿ ಸಮಾಜದಲ್ಲಿ ಯಾರೂ ಕೂಡ ಮಾನ – ಸಮ್ಮಾನ – ಪ್ರಶಸ್ತಿ – ಗೌರವ – ಶ್ಲಾಘನೆಗಳನ್ನು ಇಷ್ಟಪಡುತ್ತಾರಲ್ಲದೆ ಅಪಮಾನ – ನಿಂದೆ – ಟೀಕೆ – ಬೈಗುಳಗಳನ್ನಲ್ಲ. ಆದರೆ ಪುರಂದರದಾಸರು ತಮ್ಮ ಕೀರ್ತನೆಯೊಂದರಲ್ಲಿ ‘‘ಅಪಮಾನವಾದರೆ ಒಳ್ಳಿತು’’ ಎಂದು ಹೇಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೇಲ್ನೋಟಕ್ಕೆ ಅವರ ಈ ಮಾತು ವಿಚಿತ್ರವಾಗಿ ತೋರಿದರೂ ಒಳಹೊಕ್ಕು ನೋಡಿದರೆ ಅದರ ಅಂತರಾರ್ಥ ಸ್ಪಷ್ಟವಾಗುತ್ತದೆ.  ನಿತ್ಯವೂ ಭಿಕ್ಷೆಗಾಗಿ ಊರೂರು ಅಲೆದಾಡುವ ಹರಿದಾಸ ರನ್ನು ಕಂಡು ಕೆಲ ಜನರು ಹೀನಾಯವಾಗಿ ಜರೆದಾಗ ಅವರು […]

ಕೇವಲ ಹೆಣ್ಣಲ್ಲ , ಈಕೆ ಎಲ್ಲರ ಮಾನ್ಯತೆ ಪಡೆದ ಮಾತೆ

ಕೇವಲ ಹೆಣ್ಣಲ್ಲ , ಈಕೆ ಎಲ್ಲರ ಮಾನ್ಯತೆ ಪಡೆದ ಮಾತೆ

ಬೋಧ ಕಥೆ - 0 Comment
Issue Date : 14.04.2015

ಭಾರತೀಯ ಸ್ತ್ರೀ ಪರಂಪರೆಯು ಸಾಧಾರಣ ಕೌಟುಂಬಿಕ ಜೀವನ ಹಾಗೂ ಅಸಾಧಾರಣ ಆಧ್ಯಾತ್ಮಿಕತೆಯ ಸಮನ್ವಯಕ್ಕೆ ಬಹುದೊಡ್ಡ ನಿದರ್ಶನ. ಇವರ ಬದುಕು ಪಾಶ್ಚಾತ್ಯ ಭ್ರಮೆಯ ಲೋಕದ ಮಹಿಳೆಯರಂತೆ ಪ್ರದರ್ಶನದ್ದಲ್ಲ, ನಿದರ್ಶನ! ಕುಟುಂಬ ಜೀವನ ಹಾಗೂ ಆಧ್ಯಾತ್ಮಿಕತೆ ಎರಡೂ ಎಂದೂ ಪರಸ್ಪರ ವಿರೋಧವುಳ್ಳವಲ್ಲ. ಆಧ್ಯಾತ್ಮಿಕತೆಯು ಬದುಕಿನ ಬುನಾದಿ. ಬ್ರಹ್ಮವಾದಿನಿಯೊಬ್ಬಳು ಸದ್ಯೋವಧು ಆಗಿರಬಹುದು, ಸದ್ಯೋವಧುವೊಬ್ಬಳು ಬ್ರಹ್ಮವಾದಿನಿಯೂ ಆಗಿರಬಹುದು. ಕುಟುಂಬ ಜೀವನವೆಂದರೆ ಸಾಧಾರಣ, ಸಂಕುಚಿತ, ಸ್ವಾರ್ಥಪರ, ಸ್ಥಿಮಿತರಹಿತ, ಹೀನ ಅಲ್ಲ. ಅದೂ ಸಹ ಪರಮ ಸುಖದ ಸಾಧನೆಯ ಮಾರ್ಗ ಎಂಬುದನ್ನು ತೋರಿದ ಹಲವು ಸ್ತ್ರೀಯರು […]

ಹೆಣ್ಣು: ಅಮೂಲ್ಯ ಹೊನ್ನು!

ಬೋಧ ಕಥೆ - 0 Comment
Issue Date : 13.04.2015

ಅಪರಿಮಿತ ‘ಪರಿಜ್ಞಾನ’ ವೇದರಾಶಿಯ ಬಹುಮೂಲ್ಯ ಋಚೆಗಳಲ್ಲಿ ಹಲವು ‘ಬ್ರಹ್ಮವಾದಿನಿ’ಯ ಹೆಸರಲ್ಲಿರುವುದು ಸ್ತ್ರೀ ಸಂಕುಲದ ಸಾಧನೆಗೆ ಉದಾಹರಣೆ. ಶ್ರೇಷ್ಠತೆ ಹಾಗೂ ಸಂಪೂರ್ಣತೆಗೆ ಮತ್ತೊಂದು ಹೆಸರೆನಿಸಿದ ‘ಭೂಮನ್’ ಈ ಮಹಿಳೆಯ ಅಂತಃಸತ್ವ ಎಂಬುದನ್ನು ನಾವು ಗಮನಿಸಬಹುದಾಗಿದೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಒಂದು ಸಂವಾದ ಬಹು ವಿಶಿಷ್ಟವಾದುದು. ಯಾಜ್ಞವಲ್ಕ್ಯ ಅಮಿತ ತೇಜಸ್ಸಿನ ಋಷಿ. ಆತನ ಪತ್ನಿಯರು ಈರ್ವರು, ಮೈತ್ರೇಯೀ ಹಾಗೂ ಕಾತ್ಯಾಯನೀ. ಆತ ಇಹಪ್ರಪಂಚದಿಂದ ಮುಕ್ತನಾಗಬಯಸಿದ. ತನ್ನೆಲ್ಲ ಸಂಪತ್ತನ್ನು ಈರ್ವರಿಗೂ ಸಮನಾಗಿ ಹಂಚಲು ಮುಂದಾದ. ಅದನ್ನು ತನಗೆ ಬೇಡ ಎಂದ ಮೈತ್ರೇಯೀ […]

ಅನ್ನವನು ಇಕ್ಕು

ಬೋಧ ಕಥೆ - 0 Comment
Issue Date : 13.04.2015

‘ಅನ್ನವನು ಇಕ್ಕು, ನನ್ನಿಯನು ನುಡಿ’ ಎನ್ನುವ ಕವಿ ವಾಕ್ಯವು ಮಾನವ ಜೀವನದ ಸಾರ್ಥಕ್ಯವನ್ನು ಅತ್ಯಂತ ಸರಳವಾಗಿಯೂ ಸುಂದರವಾಗಿಯೂ ಬಿಂಬಿಸುತ್ತದೆ. ಅತಿಥಿ ಸತ್ಕಾರ ಮತ್ತು ಸತ್ಯ ನಿಷ್ಠೆಗಳಿಗೆ ನಮ್ಮ ಪೂರ್ವಜರು ಎಷ್ಟು ಮಹತ್ತ್ವ ಕೊಡುತ್ತಿದ್ದರು ಎಂಬುದನ್ನು ಇದರಿಂದ ತಿಳಿಯಬಹುದು. ಹಸಿವೆಯು ಮನುಕುಲದ ಅತ್ಯಂತ ದೊಡ್ಡ ಪಿಡುಗು. ಜಗತ್ತು ಬಹಳಷ್ಟು ಸುಧಾರಣೆಗಳನ್ನು ಕಂಡಿದ್ದರೂ, ಇಂದಿಗೂ ಕೆಲವು ಬಡ ದೇಶಗಳಲ್ಲಿ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆಂಬುದು ತೀರಾ ನಾಚಿಕೆಗೇಡಿನ ಸಂಗತಿ. ಆದ್ದರಿಂದ ಯಾರು ಹಸಿದು ಅತಿಥಿಯಾಗಿ ಮನೆಗೆ ಬರುತ್ತಾರೋ ಅವರಿಗೆ ಊಟವನ್ನು […]

ಆನೆಯ ಸೇಡು

ಆನೆಯ ಸೇಡು

ಬೋಧ ಕಥೆ - 0 Comment
Issue Date : 28.10.2014

ಪ್ರಾಣಿಗಳು ದ್ವೇಷ ಸಾಧಿಸುತ್ತವೆಯೇ? ಹೌದು ಕೆಲವೊಮ್ಮೆ ಅವು ಮನುಷ್ಯರಂತೆ ದ್ವೇಷ ಸಾಧಿಸುತ್ತವೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಹಿಂಸೆಯನ್ನು ಯಾವತ್ತೂ ಅವು ಸಹಿಸಿಕೊಳ್ಳುವುದಿಲ್ಲ. ಅದಕ್ಕೊಂದು ಕತೆ ಹೇಳುತ್ತೇನೆ ಕೇಳಿ. ಮಕ್ಕಳೆ, ಪ್ರಾಣಿಗಳಲ್ಲೆಲ್ಲಾ ದೊಡ್ಡವರಿಂದ ಚಿಕ್ಕವರವರೆಗೆ ಎಲ್ಲರೂ ಪ್ರೀತಿಸುವ ಪ್ರಾಣಿ ಎಂದರೆ ಆನೆ. ಆನೆಗಳು ಬಲಶಾಲಿಗಳಾಗಿರುತ್ತವೆ. ಯಾರಿಂದಲೂ ಎತ್ತಲಾರದಷ್ಟು ಬಹುಬಾರದ ಹೊರೆಯನ್ನು ಅವು ಎತ್ತಬಲ್ಲವು. ಕಾಡಿನ ಮರಗಳನ್ನು ಎಳೆಯಲು ಮರದ ದಿಮ್ಮಿಗಳನ್ನು ತರಲು ಆನೆಗಳನ್ನು ಬಳಸುತ್ತಾರೆ. ದೊಡ್ಡ ಕಾರ್ಖಾನೆಗಳಿಗೆ ಸರಕು ಸಾಗಿಸಲು ಅವಶ್ಯಕತೆ ಕಂಡು ಬಂದಾಗ ಆನೆಯನ್ನು ಉಪಯೋಗಿಸುತ್ತಾರೆ. ಆನೆಗೆ […]

ನೂರರ ಒಂದು ನೋಟು

ನೂರರ ಒಂದು ನೋಟು

ಬೋಧ ಕಥೆ - 0 Comment
Issue Date : 13.10.2014

ನಡುರಸ್ತೆಯಲ್ಲಿ ನೂರರ ಒಂದು ನೋಟು ಸಿಕ್ಕಿಬಿಟ್ಟಿದೆ ಸೋಮನಿಗೆ. ಅವನು ತಿರುಗಿಸಿ ಮುರುಗಿಸಿ ನೋಡಿದನು. ನಿಜ ಅದು ನೂರರ ನೋಟು. ಈ ನೋಟು ಯಾರಿಗೆ ಸೇರಿದ್ದೋ, ನಿಜವಾಗಿ ಶ್ರೀಮಂತ ಬೀಳಿಸಿಕೊಂಡು ಹೋಗಿದ್ದರೆ ಪರವಾಗಿಲ್ಲ. ಆದರೆ ಬಡವ ಆಕಸ್ಮಿಕವಾಗಿ ಬೀಳಿಸಿದ್ದರೆ?. ಅವನಿಗೆ ಎಷ್ಟು ಕಷ್ಟವಿದೆಯೋ ಏನು ಕತೆಯೋ! ದೇವರೆ ನನಗೇಕೆ ಸಿಕ್ಕಿತು ಈ ನೋಟು ಎಂದು ಸೋಮ ಚಿಂತಿಸುತ್ತಿದ್ದನು. ಆದರೆ ಅದರ ಒಡೆಯ ಮಾತ್ರ ಪತ್ತೆಯಾಗಲಿಲ್ಲ. ಅದನ್ನು ಖರ್ಚುಮಾಡುವುದಕ್ಕೂ ಸೋಮನಿಗೆ ಮನಸ್ಸಿಲ್ಲ. ಅದನ್ನು ತನ್ನ ಒಳಜೋಬಿನಲ್ಲಿಟ್ಟುಕೊಂಡೇ ಸೋಮ ಸದಾ ತಿರುಗಾಡುತ್ತಿದ್ದನು. […]

ಗಾಂಧೀಜಿ ಕಂಡ ಭಾರತಮಾತೆ

ಬೋಧ ಕಥೆ - 0 Comment
Issue Date :

ಡಿಸೆಂಬರ್ 1924 ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧಿವೇಶನ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಒಂದೇ ಒಂದು ಅಧಿವೇಶನ ಅದು. ರಾಜಕೀಯ ಚರ್ಚೆಗಳೊಡನೆ ಸಂಗೀತ ನಾಟಕಗಳೂ ಅಲ್ಲಿದ್ದವು. ಭಾರತಮಾತಾ ಎಂಬ ನಾಟಕವೊಂದು ಅಲ್ಲಿ ಪ್ರದರ್ಶನಗೊಳ್ಳುವುದಿತ್ತು. ಅದರಲ್ಲಿ  ಹುಬ್ಬಳಿಯ 13 ವರ್ಷದ ಹುಡುಗಿಯೊಬಳ್ಳದು ಭಾರತಮಾತೆಯ ಪಾತ್ರ. ಆಕೆಯ ಅಧ್ಯಾಪಕಿ ಬರೆದು ಕಲಿಸಿದ ನಾಟಕ ಅದು.  ನಾಟಕ ಆಡುವ ಮಕ್ಕಳು, ಆಡಿಸುವ ಆ ಅಧ್ಯಾಪಕಿ-ಎಲ್ಲರಲ್ಲೂ ಒಂದು ರೀತಿಯ ಭಯಮಿಶ್ರಿತ ಆನಂದ. ನಾಟಕ ನೋಡಿ ಗಾಂಧೀಜಿಯವರು ಏನೆಂದಾರು ಎಂಬ ಭಯ ಒಂದೆಡೆ. ಸ್ವತಃ ಗಾಂಧೀಜಿಯ […]