ಸ್ವಾಭಿಮಾನ

ಬೋಧ ಕಥೆ - 0 Comment
Issue Date : 12.10.2013

ಆಂಗ್ಲರ ಆಳ್ವಿಕೆಯ ಕಾಲ. ಮುಂಬಯಿಯ ವ್ಯಾಟ್ಸನ್ ಎಂಬ ಭವ್ಯ ಹೊಟೇಲ್. ಒಂದು ದಿನ ಹೊಟೇಲ್ ಗೆ ಬಂದ ಭಾರತೀಯ ಯುವಕನನ್ನು ಮ್ಯಾನೇಜರ್ ತಡೆದುಬಿಟ್ಟ. ದು ಬಿಳಿಯರಿಗೆ ಮಾತ್ರ, ಕರಿಯರಿಗೆ ಪ್ರವೇಶವಿಲ್ಲ ಎಂದ. ಆ ಯುವಕನ ಸ್ವಾಬಿಮಾನ ಜಾಗೃತವಯಿತು. ಇದಕ್ಕಿಂತ ಭವ್ಯ ಹೊಟೇಲ್ ಕಟ್ಟುತ್ತೇನೆ. ಅಲ್ಲಿ ಭಾರತೀಯರಿಗೆ ಮಾತ್ರವೇ ಪ್ರವೇಶ, ಬೇರೆಯವರಿಗಿರದು. ನಿಮ್ಮಂತಹ ಬಿಳಿಯರನ್ನು ಅಲ್ಲಿ ಕೆಲಸಕ್ಕಿಟ್ಟುಕೊಳುತ್ತೇನೆ ಎಂದು ಆತ್ಮ ವಿಶ್ವಾಸದ ದನಿಯಲ್ಲಿ ಗುಡುಗಿದ. ಯುವಕನ ಆವೇಶದ ಮಾತುಕೇಳಿ ಸುತ್ತಮುತ್ತಲಿದ್ದವರೆಲ್ಲ ನಕ್ಕುಬಿಟ್ಟರು. ಹತ್ತಿರದ ನೆಂಟರಂತೂ ನಿನ್ನಿಂದ ಸಾಧ್ಯವಾಗದು ಎಂದು […]

ವಿಷ ಕೊಡಬೇಕಾಗಿದ್ದು ಯಾರಿಗೆ?

ಬೋಧ ಕಥೆ - 0 Comment
Issue Date : 09.10.2013

 ಒಂದೂರಿನಲ್ಲಿ ಇಬ್ಬರು ಅತ್ತೆ ಸೊಸೆಯರಿರುತ್ತಾರೆ.ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬಂದ ಸೊಸೆಗೆ ಹೊಸದಾದ ವಾತವರಣ ಹೊಸ ಜನರ ಸ್ವಭಾವಗಳು ತುಂಬ ಭಿನ್ನವಾಗಿ ಕಂಡು ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಅತ್ತೆಯ ಸ್ವಭಾವವು ಅವಳಿಗೆ ಇಷ್ಟವಾಗದು. ಅತ್ತೆ ಯು ಅಷ್ಟೆ ಸೊಸೆಯ ಪ್ರತಿಯೊಂದು ನಡತೆಯಲ್ಲೂ ತಪ್ಪು ಕಂಡು ಹಿಡಿಯುತ್ತಿರುತ್ತಾಳೆ. ನಂದ ಗೋಕುಲವಾಗುವ ಬದಲು ಮನೆ ನರಕವಾಗಿ ಬಿಡುತ್ತದೆ. ಇವರಿಬ್ಬರ ಜಗಳದಿಂದ.  ಬೇಸತ್ತ ಸೊಸೆ ಪರಿಹಾರ ಕಂಡುಕೊಳ್ಳಲು ತನ್ನ ತಂದೆಯ ಮನೆಗೆ ಬಂದಾಗ ಅವಳಿಗೆ ಗುರುಗಳೊಬ್ಬರ ದರ್ಶನವಾಗುತ್ತದೆ. ಅವರು ಸಮಸ್ಯೆಯ ಪರಿಹಾರ ಎಂದರೆ […]

ಧ್ಯೇಯವಾದಿಯ ದೃಷ್ಟಿ

ಬೋಧ ಕಥೆ - 0 Comment
Issue Date : 07.10.2013

ಮಿಥಿಲೆಯನ್ನು ಆಳುತ್ತಿದ್ದ ಜನಕಮಹಾರಾಜ ಭೋಗಭಾಗ್ಯ ತುಂಬಿದ ಅರಮನೆಯಲ್ಲಿದ್ದರೂ ಸುಖಸಾಧನಗಳಿಂದ ದೂರವಿದ್ದು, ಖುಷಿಯಂತೆ ಬದುಕುತ್ತಿದ್ದ. ರಾಜರ್ಷಿ ಎನಿಸಿಕೊಂಡಿದ್ದ. ಒಮ್ಮೆ ಆತನ ಅರಮನೆಗೆ ಬಂದ ಶುಕ ಮಹರ್ಷಿ, ರಾಜನು ಖುಷಿಯಂತೆ ಬದುಕುತ್ತಿರುವುದನ್ನು ಕಂಡು ಅಚ್ಚರಿಗೊಂಡ. ವೈಭವದ ಅರಮನೆಯಲ್ಲಿದ್ದರೂ ಹೀಗಿರುವುದು ಹೇಗೆ ಸಾಧ್ಯ ಎಂದು ಕೇಳಿದ. ಆಗ ಮಹಾರಾಜ ಋಷಿಯೆದುರು ಒಂದು ಹಣತೆ ತಂದಿಟ್ಟು ಶುಕಮುನಿಗಳೇ, ಈ ಹಣತೆಯನ್ನು ಕೈಯಲ್ಲಿ ಹಿಡಿದು ಅರಮನೆಯ ಒಳಗೆಲ್ಲಾ ಓಡಾಡಿ  ಬನ್ನಿ. ಆದರೆ ಹಣತೆಯ ದೀಪ ಆರಬಾರದು, ಎಣ್ಣೆ ಚೆಲ್ಲಬಾರದು. ಹಾಗೇನಾದರೂ ಆದರೆ  ನಿಮ್ಮ ಪ್ರಾಣಹೋದೀತು ಎಂದು ಹೇಳಿ […]

ಗುರಿ ಸಾಧನೆಯ ಛಲ

ಬೋಧ ಕಥೆ - 0 Comment
Issue Date :

 ಆತನದು ಹದಿನಾರರ ಹರೆಯ. ವೇದಾಂತ ಓದಬೇಕೆಂಬ ಆಸಕ್ತಿ! ತಂದೆಗೆ ಮಗ ಡಾಕ್ಟರಾಗಬೇಕೆಂಬ ಆಸೆ. ಮೆಡಿಕಲ್ ಕಾಲೇಜು  ಸೇರಬೇಕೆಂದು ಮಗನನ್ನು ಒತ್ತಾಯಿಸಿದರು. ಇಲ್ಲ, ನಾನು ವೇದಾಂತವನ್ನೇ ಓದುತ್ತೇನೆ ಎಂದ ಮಗ. ನಿನ್ನದು ಅದೇ ನಿರ್ಧಾರವಾದರೆ  ಓದಿಗಾಗಿ ಒಂದು ಪೈಸೆಯನ್ನೂ ನನ್ನಿಂದ ನಿರೀಕ್ಷಿಸಬೇಡ- ತಂದೆಯ ಕಟು ತೀರ್ಮಾನ. ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿಯದ ತರುಣ ಬರಗೈಯಲ್ಲೇ ಮನೆ ಬಿಟ್ಟು  ಹೊರಟ. ಕೈಯಲ್ಲಿ ಕಾಸಿಲ್ಲ. ಯಾವುದೋ ರೈಲುಗಾಡಿ ಹತ್ತಿದ. ಟಿಕೆಟ್ ಪರೀಕ್ಷಕ ಬಂದಾಗ ಅವನ ಬಳಿ ನಿಜವನ್ನೇ ಹೇಳಿದ. ವೇದಾಂತ  ಓದುವ […]

ಭಾರತ ಸ್ವರ್ಗವಾಗಿತ್ತು

ಬೋಧ ಕಥೆ - 0 Comment
Issue Date :

ಸಾವಿರಾರು ವರ್ಷಗಳ ಹಿಂದೆ ಫಾಹಿಯಾನ್ ಎಂಬ ಚೀನೀ ಯಾತ್ರಿಕ ಭಾರತಕ್ಕೆ ಬಂದಿದ್ದ. ಆ ಸಮಯದಲ್ಲಿ ಭಾರತವು ನೈತಿಕವಾಗಿಯೂ, ಭೌತಿಕವಾಗಿಯೂ ಶ್ರೀಮಂತವಾಗಿತ್ತು. ಆಗ ಇಲ್ಲಿ ಸುಳ್ಳು ಹೇಳುವುದು ಇರಲಿಲ್ಲ. ಕಳ್ಳಕಾಕರ ಭಯವಿರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗಲೂ ಮನೆಗೆ ಬೀಗ ಹಾಕುತ್ತಿರಲಿಲ್ಲ. ಅದೇ ಸಮಯದಲ್ಲಿ ಫಾಹಿಯಾನ ಸಂಚರಿಸುತ್ತ ಪಾಟಲೀಪುತ್ರದ ಬಳಿ ಮಗಧದ ಸಾಮಂತ ರಾಜನ ರಾಜಸಭೆಗೆ ಬಂದು ತಲುಪಿದ. ಇಬ್ಬರು ರೈತರು ತಮ್ಮ ವಿವಾದವನ್ನು ಬಗೆಹರಿಸಿಕೊಳ್ಳಲು ರಾಜನ ಬಳಿಗೆ ಬಂದಿದ್ದರು. ಫಾಹಿಯಾನ್ ಗೆ ಇವರಿಬ್ಬರ ಜಗಳದ ಕಾರಣವೇನೆಂದು  ತಿಳಿಯುವ […]