ರಾಜರ್ಷಿ ಟಂಡನರ ವೀರವ್ರತ !

ಬೋಧ ಕಥೆ - 0 Comment
Issue Date : 09.08.2014

ರಾಜರ್ಷಿ ಪುರುಷೋತ್ತಮದಾಸ ಟಂಡನರು ಚರ್ಮದ ಚಪ್ಪಲಿಯನ್ನು ಉಪಯೋಗಿಸುತ್ತಿರಲಿಲ್ಲ. ಅದನ್ನು ಉಪಯೋಗಿಸು ವುದನ್ನು ಅವರು ಏಕೆ ಬಿಟ್ಟರು ಎನ್ನುವುದಕ್ಕೆ 1907ರ ಒಂದು ಘಟನೆ ಕಾರಣ. ಒಮ್ಮೆ ಕಸಾಯಿಖಾನೆಯನ್ನು ಪ್ರಾರಂಭಿಸುವ  ವ್ಯಾಪಾರಿಗಳಿಗೆ ಸಂಬಂಧಿಸಿದ ಒಂದು ದಸ್ತಾವೇಜಿನ ಕರಡನ್ನು ಅವರು ತಯಾರಿಸಬೇಕಾಯಿತು. ಗೋಹತ್ಯೆಯನ್ನು ಕೇವಲ ಮಾಂಸಕ್ಕಾಗಿ ಅಲ್ಲದೆ ಚರ್ಮಕ್ಕಾಗಿಯೂ ಮಾಡಲಾಗುತ್ತಿದೆ ಎನ್ನುವುದು ಆಗ ಅವರ ಗಮನಕ್ಕೆ ಬಂದಿತು. ಅಂದೇ ಅವರು ಚರ್ಮದ ಚಪ್ಪಲಿಗಳನ್ನು ಧರಿಸುವುದನ್ನು ತ್ಯಜಿಸಿದರು ! 1909ರಲ್ಲಿ ಮೊಟ್ಟಮೊದಲ ಬಾರಿಗೆ ಅವರು ಹೈಕೋರ್ಟಿಗೆ ವಕಾಲತ್ತು ಮಾಡಲು ಹೋದಾಗ ಸೆಣಬಿನ ನಾರಿನಿಂದ […]

ಸಾಧನೆಯ ಛಲ ಇರಬೇಕು

ಬೋಧ ಕಥೆ - 0 Comment
Issue Date : 08.08.2014

ಮಹಾತ್ಮಾ ಗಾಂಧಿಯವರ ಬಳಿಗೆ  ಒಂದು ದಿನ ಯುವಕನೊಬ್ಬ ಬಂದು ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಹೇಳಿದ. ಅವನ ದುರ್ಬಲ ಶರೀರವನ್ನು ನೋಡಿದ ಬಾಪೂ, “ನೀನು ದುರ್ಬಲನಾಗಿರುವೆ. ವ್ಯಾಯಾಮ ಮಾಡಿ ದೃಢಕಾಯನಾಗು.  ಅನಂತರ ನಾನು ನಿನ್ನನ್ನು ಶಿಷ್ಯನನ್ನಾಗಿ ಮಾಡಿಕೊಳ್ಳುತ್ತೇನೆ” ಎಂದರು. ಮರುಮಾತನಾಡದೆ ಆ ತರುಣ ಹೊರಟುಹೋದ. ಒಂದು ವರ್ಷ ಕಳೆದುಹೋಯಿತು. ಬಾಪೂರವರ ಮುಂದೆ ಧಿಡೀರನೆ ಒಬ್ಬ ದಷ್ಟ – ಪುಷ್ಟ ಯುವಕ ಬಂದು ನಿಂತ. ಬಾಪೂಗೆ ಅವನ ಗುರುತು ಸಿಗಲಿಲ್ಲ. ಆಗ ಆ ಯುವಕನೇ ತನ್ನ ಹೆಸರು ಹೇಳಿ, ತನ್ನನ್ನು […]

ಸ್ವಾತಂತ್ರ್ಯವೀರ ಸಾವರ್ಕರ್

ಬೋಧ ಕಥೆ - 0 Comment
Issue Date : 08.08.2014

ನಮ್ಮ ರಾಷ್ಟ್ರದ ರಕ್ಷಣೆಯ ದೃಷ್ಟಿಯಿಂದ ಏನಕೇನ ಪ್ರಕಾರೇಣ  ರಾಷ್ಟ್ರ ಮತ್ತು ರಾಷ್ಟ್ರ ಧರ್ಮವನ್ನು ಒಳಗಿನಿಂದಲೂ, ಹೊರಗಿನಿಂದಲೂ ಕೊರೆಯುವ ಪರಕೀಯಹುಳುಗಳನ್ನು ಶಕ್ಯ ಮತ್ತು ಸಾಧ್ಯವಾದ ಮಾರ್ಗಗಳಿಂದ ಸಕಾಲದಲ್ಲಿ ಕಿತ್ತು ಎಸೆಯಬೇಕು.  ಇಂದಿನ ಮಿಶನರಿಗಳ ಚಟುವಟಿಕೆಗಳೂ ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಘಾಟುಕಪ್ರಾಯವಾಗಿದ್ದು ಅವುಗಳ ಸಮೂಲ ಉಚ್ಛಟನೆಯು ಅತಿ ಅವಶ್ಯವಾಗಿ ಶೀಘ್ರಾತೀಶೀಘ್ರ ನಡೆಯಲೇಬೇಕಾಗಿದೆ. ಜನಜಾಗೃತಿ “ಸ್ವರಾಜ್ಯ” ಮತ್ತು “ಸ್ವಾತಂತ್ರ್ಯ” ಎಂಬ ಶಬ್ದಗಳ ಉಚ್ಛಾರವು ಕೂಡ ಮಹಾ ಅಪರಾಧವೆಂದು ಪರಕೀಯ ಶಾಸನದಿಂದ ಪರಗಣಿಸಲ್ಪಡುತ್ತಿದ್ದಾಗ ಲೋಕಮಾನ್ಯ ತಿಲಕರು “ ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು […]

ಗ್ರಾಮೀಣ ಪ್ರಗತಿಗೆ ಮಾಲವೀಯರ ರಾಜಮಾರ್ಗ

ಬೋಧ ಕಥೆ - 0 Comment
Issue Date : 02.08.2014

ಒಮ್ಮೆ ಪಂಡಿತ ಮದನಮೋಹನ ಮಾಳವೀಯರು  ಮತ್ತು ಮಹಾತ್ಮಾ ಗಾಂಧಿಯವರು ಯಾವುದೋ ಒಂದು ಗಂಭೀರವಾದ ವಿಷಯವನ್ನು  ಏಕಾಂತವಾಗಿ ಚರ್ಚಿಸಲು ಬಯಸಿದರು. ಆದರೆ ಅವರನ್ನು ಭೇಟಿ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದ್ದುದರಿಂದ  ಮಾಳವೀಯರಿಗೆ ಕೊನೆಗೆ  ಒಂದು ಉಪಾಯ ಹೊಳೆಯಿತು. ಅವರು,  “ಗಾಂಧೀಜಿ, ನಾವು  ಆ ಹಿಂದೂ ವಿದ್ಯಾರ್ಥಿ ನಿಲಯದ ಹತ್ತಿರ ಒಬ್ಬ ಸಜ್ಜನರನ್ನು  ಭೇಟಿಯಾಗಬೇಕಲ್ಲವೆ? ಪಾಪ, ಆ ಬಡವ  ನಮಗಾಗಿ ಕಾದು ಈ ವೇಳೆಗೆ ಬಳಲಿರಬಹುದು” ಎಂದರು. ಮಾಳವೀಯರ ಮಾತು ಕೇಳಿ ಗಾಂಧೀಜಿಯವರು ಕೂಡಲೆ ಎದ್ದುನಿಂತರು. ಇಬ್ಬರೂ ಕಾಲ್ನಡಿಗೆಯಲ್ಲಿ  ಆ […]

ಭಗವದ್ಭಕ್ತಿಯಿಂದ ವ್ಯಕ್ತಿ ಪವಿತ್ರನಾಗುತ್ತಾನೆ !

ಬೋಧ ಕಥೆ - 0 Comment
Issue Date : 31.07.2014

 “ಬಾ, ಒಳಗೆ ಬಾ. ಹೊರಗಿನ ಬಾಗಿಲ ಬಳಿ ಏಕೆ ನಿಂತಿದ್ದೀಯೆ?” ಎಂದು ಕಡು ಬಡವನೊಬ್ಬನಿಗೆ ಚೈತನ್ಯ ಮಹಾಪ್ರಭು ಹೇಳಿದರು. ಆತ ಅಲ್ಲಿಂದಲೇ ನಮಸ್ಕಾರ ಮಾಡಿ ಅತ್ಯಂತ ವಿನಯದಿಂದ, “ಮಹಾಪ್ರಭು, ನಾನೊಬ್ಬ ಚಂಡಾಲ. ಶೂದ್ರ ಕೆಲಸವೇ ನನ್ನ ವೃತ್ತಿ. ಆದರೂ ನನ್ನ ಈ ಮನುಷ್ಯ ಜನ್ಮ ವ್ಯರ್ಥವಾಗಬಾರದೆಂದು  ತಿಳಿದು ತಮ್ಮಿಂದ  ಗುರೂಪದೇಶವನ್ನು  ಪಡೆಯಲು ಬಂದಿದ್ದೇನೆ. ತಾವು ಆ ಉಪದೇಶವನ್ನು ನಾನು ದೂರದಿಂದಲೇ ಕೇಳುವಂತೆ ಮಾಡಿ. ನನ್ನ ಹೆಸರು ಹರಿದಾಸ” ಎಂದು ವಿನಂತಿಸಿದ. ಆತನನ್ನು ಕಂಡೊಡನೆ ಚೈತನ್ಯರಿಗೆ ಹರಿದಾಸ ಒಬ್ಬ […]

ಪ್ರಾಣಗಳನ್ನು ಕೈಯಲ್ಲಿ ಹಿಡಿದೇ ಹುತಾತ್ಮರಾದರು !

ಬೋಧ ಕಥೆ - 0 Comment
Issue Date : 30.07.2014

ಮಹಾತ್ಮಾ ಗಾಂಧಿಯವರನ್ನು  1932ರಲ್ಲಿ ಬಂಧಿಸಿದಾಗ  ದೇಶಾದ್ಯಂತ  ಸತ್ಯಾಗ್ರಹ ನಡೆಯಿತು.  ತಮಿಳುನಾಡಿನ  ತಿರುಪ್ಪುರ್‍ನಲ್ಲೂ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಪ್ರತಿಭಟನಾ ಮೆರವಣಿಗೆ ಹೊರಡಿಸಲು ಯುವಕರು ನಿರ್ಧರಿಸಿದ್ದರು.  ಬ್ರಿಟಿಷರ ದುರಾಡಳಿತದಿಂದ ರೋಸಿಹೋಗಿದ್ದ ಅಲ್ಲಿನ ಬಿಸಿರಕ್ತದ ತರುಣ, ಬಡ ನೇಕಾರ ಕುಮಾರನ್ ಈ ಮೆರವಣಿಗೆಯಲ್ಲಿ ಭಾಗವಹಿಸಲು ನಿರ್ಧರಿಸಿದ. ಕಾಂಗ್ರೆಸ್ ಧ್ವಜ ಹಿಡಿದು ಮೆರವಣಿಗೆಯಲ್ಲಿ ಹೋಗುವುದು ಕಾನೂನಿಗೆ ವಿರುದ್ಧ ಎಂದು ಬ್ರಿಟಿಷರು ಘೋಷಿಸಿದ್ದರೂ ಸುಮಾರು 10 ಯುವಕರು ಧ್ವಜ ಹಿಡಿದು ಮೆರವಣಿಗೆಯಲ್ಲಿ  ಹೊರಟರು.  ಪೋಲಿಸರು ಮೆರವಣಿಗೆಕಾರರ ಮೇಲೆ ಲಾಠಿ ಪ್ರಹಾರ ಮಾಡುತ್ತಾ ಅವರನ್ನು  ಚದುರಿಸಿದರು. […]

ಸತ್ಯನಿಷ್ಠ ಸತ್ಯಕಾಮ

ಬೋಧ ಕಥೆ - 0 Comment
Issue Date : 28.07.2014

ತುಂಬಾ ದಿನಗಳ ಹಿಂದೆ ಸತ್ಯಕಾಮ ಎಂಬ ಹುಡುಗನಿದ್ದ. ಅವನಿಗಿನ್ನೂ ಚಿಕ್ಕ ವಯಸ್ಸು, ಏನೂ ತಿಳಿಯದ ಹುಡುಗ ಅವನು.  ಸ್ವಲ್ಪ ಕಾಲ ಕಳೆದನಂತರ ಅವನಿಗೆ ವಿದ್ಯಾಭ್ಯಾಸ ಮಾಡಬೇಕು, ಬ್ರಹ್ಮಚರ್ಯ ಪಾಲನೆ ಮಾಡುತ್ತಾ ಗುರುಗಳನ್ನು ಸೇವಿಸಿ ‘ಬ್ರಹ್ಮ’ವನ್ನು ಸಾಧಿಸಬೇಕೆಂಬ ಇಚ್ಛೆಯುಂಟಾಯಿತು.  ಮನಸ್ಸಿನಲ್ಲಿ ಇಚ್ಛೆಯಾದುದೇ ತಡ-ಮರುಕ್ಷಣದಲ್ಲಿ ತಾಯಿಯ ಬಳಿ ಹೋಗಿ ಕೇಳಿದ. “ಅಮ್ಮಾ, ನನಗೆ ಗುರುಕುಲಕ್ಕೆ ಹೋಗಬೇಕು ಎಂದು ಆಸೆಯಾಗುತ್ತಿದೆ, ಅಲ್ಲಿ ಹೋಗಿ ಗುರುಗಳನ್ನು ಸೇವಿಸಿ ಬ್ರಹ್ಮವಿದ್ಯೆ ಕಲಿಯಬೇಕೆನ್ನಿಸುತ್ತಿದೆ.  ಆದರೆ ಯಾವುದೇ ಗುರುವಿನ ಆಶ್ರಮಕ್ಕೆ ಪ್ರವೇಶಿಸಬೇಕಾದರೂ ಮೊದಲು ಬ್ರಾಹ್ಮಣ-ಬ್ರಹ್ಮವಿದ್ಯೆ ಸಾಧಿಸಲು ಯೋಗ್ಯತೆ […]

‘ಆಡಳಿತ’ ಅಂದರೆ ಇದು !

ಬೋಧ ಕಥೆ - 0 Comment
Issue Date : 26.07.2014

 “ಅಯ್ಯೋ ದೇವರೆ ! ಮಾಧವ, ಇದೇನು ನೀನು  ಹೇಳುತ್ತಿರುವೆ?  ನಾನು ನಿನ್ನಿಂದ ಇದನ್ನು ಅಪೇಕ್ಷಿಸಿರಲಿಲ್ಲ.” “ಏನು ಅಮ್ಮಾ? ತಾವು ಯಾವ ವಿಷಯದ ಬಗ್ಗೆ ಹೇಳುತ್ತಿದ್ದೀರಾ? ಪ್ರತಿದಿನ ಸಾವಿರಾರು ಚಿಕ್ಕ-ದೊಡ್ಡ ಪ್ರಕರಣಗಳನ್ನು ತೀರ್ಮಾನಿಸಬೇಕಾಗುತ್ತದೆ.  ರಾಜ್ಯಕಾರ್ಯದಲ್ಲಿ ನಾನೇನೂ ವಿಶಾರದನಲ್ಲ. ನನ್ನಿಂದ ಎಷ್ಟೋ ಸಂಗತಿಗಳು ಮರೆತುಹೋಗುತ್ತವೆ.  ಆದ್ದರಿಂದಲೇ ನೀವು ಯಾವ ವಿಷಯವನ್ನು  ಕುರಿತು ಕೇಳುತ್ತಿದ್ದೀರೆಂದು ತಿಳಿಸಿದಲ್ಲಿ, ನನ್ನನ್ನು  ನಾನು ಸುಧಾರಿಸಿಕೊಳ್ಳುವೆ.” ತಾಯಿ ಧ್ವನಿ ಏರಿಸಿದರು : “ನೀನು ನಿನ್ನ ಸೋದರಮಾವನಿಗೆ ಅಂದರೆ ನನ್ನ ಸ್ವಂತ  ತಮ್ಮನಿಗೆ  ಜಹಗೀರನ್ನು  ಜಫ್ತು ಮಾಡುವುದಾಗಿ ಬೆದರಿಸಿದ್ದೀಯಾ? […]

ಸೇವೆಯೇ ಬದುಕಿನ ಉಸಿರಾದಾಗ

ಬೋಧ ಕಥೆ - 0 Comment
Issue Date : 25.07.2014

ಬ್ರಿಟಿಷರು ‘ಸಾತ್ವಿಕ ಚೌಕಡೀ’ ಎಂದು ಕರೆಯುತ್ತಿದ್ದ ಸ್ವಾಮಿ ಶ್ರದ್ಧಾನಂದರು, ಮೋತೀಲಾಲ ನೆಹರು, ಪಂಡಿತ ಮದನ ಮೋಹನ ಮಾಳವೀಯರು ಮತ್ತು ವೆಂಕಟೇಶ ನಾರಾಯಣ ತಿವಾರಿ ಅವರು ಅಂದು ಗುಜರಾನ್‍ವಾಲಾದಲ್ಲಿನ  ಖಾಲಸಾ ಕಾಲೇಜನ್ನು ನೋಡಲು ಹೋಗಿದ್ದರು. ಸೈನಿಕ ಆಡಳಿತದ ದಿನಗಳಲ್ಲಿ ಆಂಗ್ಲ ಸೈನಿಕರು  ಆ ಕಾಲೇಜಿನ  ಮೇಲೆ ವಿಮಾನದಿಂದ  ಗುಂಡಿನ ಮಳೆ ಸುರಿಸಿದ್ದರು. ಎಂದೇ ಅದು ದೇಶಭಕ್ತರಿಗೆ ಪುಣ್ಯಕ್ಷೇತ್ರವೆನಿಸಿತ್ತು. ಜೂನ್ ತಿಂಗಳ ಉರಿಬೇಸಿಗೆಯ  ಮಧ್ಯಾಹ್ನದ ಸಮಯ. ಸೂರ್ಯನ ಕಿರಣಗಳು ಪ್ರಖರವಾಗಿದ್ದವು. ಮತ್ತು ವಾಯುದೇವನು  ಹರತಾಳ ಮಾಡಿದಂತಿತ್ತು. ತಿವಾರಿಯವರನ್ನು ಬಿಟ್ಟು ಇತರ […]

ದೇಶಕ್ಕಾಗಿ ಪ್ರಾಣತ್ಯಾಗ

ಬೋಧ ಕಥೆ - 0 Comment
Issue Date : 24.07.2014

ರಷ್ಯಾ  ಮತ್ತು  ಜಪಾನಿನ  ನಡುವೆ  ಯುದ್ಧ  ನಡೆಯುತ್ತಿದ್ದ ದಿನಗಳು  ಅವು.  ರಷ್ಯಾಗೆ ಹೋಲಿಸಿದಲ್ಲಿ  ಜಪಾನ್ ಬಹಳ ಸಣ್ಣ ದೇಶವಾಗಿತ್ತು. ರಷ್ಯಾದಲ್ಲಿ ಇನ್ನೂ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಿರಲಿಲ್ಲ. ಎರಡು ದೇಶಗಳಲ್ಲೂ ಅರಸೊತ್ತಿಗೆ ಇತ್ತು. ಜಪಾನಿನ ರಾಜ ಮಿಕಾಡೋ ರಷ್ಯಾದ ಆಕ್ರಮಣದ ಬಗ್ಗೆ ಯೋಚಿಸತೊಡಗಿದ. ಕೊನೆಗೆ ‘ರಷ್ಯಾದ ಹಡಗುಗಳು ನಮ್ಮ ಮೇಲೆ ಆಕ್ರಮಣ ಮಾಡುತ್ತಿವೆ. ಅವುಗಳಲ್ಲಿ ಕೆಲವನ್ನಾದರೂ ನಾವು ಮುಳುಗಿಸಿ ನಾಶಮಾಡಿದಲ್ಲಿ  ರಷ್ಯಾದ ಶಕ್ತಿಯು  ಕ್ಷೀಣಗೊಳ್ಳುವುದು’ ಎಂದು ಆತ ಯೋಚಿಸಿದ. ಅದರಂತೆ ಜಪಾನೀ ಜನತೆಗೆ ಮಿಕಾಡೋ ಈ ರೀತಿ ಕರೆ […]