ದೇಶದ ಗೌರವದ ಎದುರು ಪ್ರಾಣ ತೃಣಸಮಾನ

ಬೋಧ ಕಥೆ - 0 Comment
Issue Date : 23.07.2014

ಸರದಾರ್ ಭಗತ್ ಸಿಂಹ, ರಾಜಗುರು ಮತ್ತು ಸುಖದೇವರನ್ನು  1931ರ ಮಾರ್ಚ್ 23ರಂದು ಲಾಹೋರಿನಲ್ಲಿ  ಗಲ್ಲಿಗೇರಿಸಲಾಗಿತ್ತು. ಪಂಜಾಬಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಸರ್‍ ಹೆನ್ರಿಕ್ರೇಕ್‍ ಇದಕ್ಕೆ ಮುಖ್ಯ ಕಾರಣನಾಗಿದ್ದ. ಭಗತ್‍ ಸಿಂಹನ  ಫಾಸಿಯ ಸಂಬಂಧದಲ್ಲಿ  ಹೆನ್ರಿ ಕ್ರೇಕನ ಹೆಸರೂ ಪತ್ರಿಕೆಗಳಲ್ಲಿ ಬಂದಿತ್ತು. ಎಂದೇ ಕ್ರೇಕ್ ಕೇವಲ ಭಗತ್‍ಸಿಂಹ, ರಾಜಗುರು, ಸುಖದೇವರಿಗಷ್ಟೇ ಅಲ್ಲದೆ ಇಡೀ ಕ್ರಾಂತಿಕಾರಿಗಳ ಗುಂಪಿಗೇ ಪರಮ ಶತ್ರುವೆನಿಸಿದ. ಸುಶೀಲಾ ದೀದಿ ಕ್ರಾಂತಿಕಾರಿಗಳ ಗುಂಪಿನ ಸಕ್ರಿಯ ಸದಸ್ಯರಾಗಿದ್ದರು. ಏನಾದರೂ ಮಾಡಿ ಹೆನ್ರಿಗೆ  ಶಿಕ್ಷೆ ವಿಧಿಸಲೇಬೇಕು ಎಂದು ನಿರ್ಧರಿಸಿ ಲಖ್ನೋಗೆ ಬಂದರು. […]

ಆಂಗ್ಲ ಅಧಿಕಾರಿ ಮೂಕನಾದ !

ಬೋಧ ಕಥೆ - 0 Comment
Issue Date : 20.07.2014

 ಜೀವದ ಹಂಗು ತೊರೆದು ಅಪಾಯವನ್ನು ಎದುರಿಸುವುದು ಕ್ರಾಂತಿಕಾರಿಗಳ ಸಹಜ ಸ್ವಭಾವ ಆಗಿತ್ತು. ಪ್ರಸಿದ್ಧ ಪಾರ್ಸಿ ಕ್ರಾಂತಿಕಾರಿಣಿ  ಮೇಡಂ ಕಾಮಾ ಅವರ ಜೀವನ  ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿದೆ. 1911ರ ಜೂನ್ 17 ರಂದು ವಂಚಿ ಅಯ್ಯರ್‍ ಎಂಬ  ತಮಿಳು ಕ್ರಾಂತಿಕಾರಿ ತಿನ್ನವೆಲ್ಲಿ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಅಲ್ಲಿನ ಆಂಗ್ಲ ಜಿಲ್ಲಾ ಮ್ಯಾಜಿಸ್ಟ್ರೇಟ್‍ ಐಶ್‍ನನ್ನು ಗುಂಡುಹಾರಿಸಿ ಅವನ ಕಥೆ ಮುಗಿಸಿದ್ದ.  ಇಂಗ್ಲೆಂಡಿನ ಚಕ್ರವರ್ತಿಯ ರಾಜ್ಯಾಭಿಷೇಕದ ನಿಮಿತ್ತ ಭಾರತದಲ್ಲಿ  ವಿಶೇಷವಾಗಿ ಕಾರ್ಯಕ್ರಮಗಳನ್ನು  ನಡೆಸುತ್ತಿದ್ದ  ದಿನಗಳು ಅವು.  ಅದೇ ಸಮಯಕ್ಕೆ ಸರಿಯಾಗಿ […]

ಧರ್ಮಪಾಲನೆಗೆ ಮುಂದಿಟ್ಟ ಹೆಜ್ಜೆ

ಬೋಧ ಕಥೆ - 0 Comment
Issue Date : 19.07.2014

ಹಿಂದೂ ಮಠ ಮಂದಿರಗಳನ್ನು  ಹೊಡೆದುರುಳಿಸುವಲ್ಲಿ ತಾವು ಯಾರಿಗಿಂತಲೂ ಕಡಿಮೆ ಅಲ್ಲ ಎಂದು ತೋರಿಸಲು  ಸ್ಪರ್ಧೆಯ ರೀತಿಯಲ್ಲಿ  ಮುಸ್ಲಿಂ ಆಡಳಿತಗಾರರು ಅವುಗಳನ್ನು ನಾಶಮಾಡುತ್ತಿದ್ದ ಕಾಲ.  ಇಂತಹವರಲ್ಲಿ  ಅಹಮದಾಬಾದಿನ ಸುಲ್ತಾನ ಮಹಮ್ಮದ್‍ ಬೇಗಡಾ ಸಹ ಒಬ್ಬ. ಸೋಮನಾಥ ಮಂದಿರದ ಮೇಲೆ ಅವನು 1490 ರಲ್ಲಿ ಕೊನೆಯ ಬಾರಿ ಆಕ್ರಮಣ ಮಾಡಿದ. ಸೋಮನಾಥದತ್ತ ಹೊರಟ ಬೇಗಡಾನ ಸೇನೆ  ರಸ್ತೆಯಲ್ಲಿದ್ದ ಎಲ್ಲ ಮಠ-ಮಂದಿರಗಳನ್ನು  ಉರುಳಿಸುತ್ತ ಲಾಟಿಗೆ ಬಂತು . ಆಗ ಲಾಟಿಯ ರಾಜನಾದ ಭೀಮಜಿ ಗೋಹಿಲ್‍ ಜುನಾಗಢಕ್ಕೆ ಹೋಗಿದ್ದನು. ಅವನ ಕಿರಿಯ ಮಗ […]

ಪ್ರತಿಜ್ಞೆ ಪೂರ್ಣವಾಯಿತು!

ಬೋಧ ಕಥೆ - 0 Comment
Issue Date : 17.07.2014

ವೈದಿಕ ಸಂಸ್ಕೃತಿಯನ್ನು  ಎತ್ತಿ ಹಿಡಿಯುವುದೇ ಸ್ವಾಮೀ ಶ್ರದ್ಧಾನಂದರ ಜೀವನದ ಪರಮೋಚ್ಚ ಗುರಿಯಾಗಿತ್ತು.  ತಮ್ಮ ಗುರಿಯ ಸಾಧನೆಗಾಗಿ ಲಾರ್ಡ್ ಮೆಕಾಲೆಯ ಶಿಕ್ಷಣ ಪದ್ಧತಿಯ ಪ್ರಭಾವದಿಂದ ವಿದ್ಯಾರ್ಥಿಗಳನ್ನು  ಉಳಿಸುವ  ದಿಸೆಯಲ್ಲಿ  ಅವರು ಪ್ರಯತ್ನ ಆರಂಭಿಸಿದರು. ಗುರುಕುಲ ಪದ್ಧತಿಯ ಶಿಕ್ಷಾ ಕ್ರಮವನ್ನು  ಜಾರಿಗೆ  ತರಬಯಸಿದರು. ಈ ಯೋಜನೆಗೆ  ಒಂದು  ಸ್ವರೂಪ ನೀಡಲು ಶ್ರದ್ಧಾನಂದರು ತಮ್ಮ ಪ್ರಾಣವನ್ನೇ ಪಣವಾಗಿಟ್ಟರು. 1898ರಲ್ಲಿ ಪಂಜಾಬಿನಲ್ಲಿ  ನಡೆದ ಆರ್ಯ ಪ್ರತಿನಿಧಿ ಸಭೆಯು  ಈ ವಿಷಯವನ್ನು ಪ್ರಸ್ತಾಪಿಸಿ, ಈ ಕಾರ್ಯಕ್ಕಾಗಿ ಯೋಜನೆಯೊಂದನ್ನು  ಸಿದ್ಧಪಡಿಸಲು ಶ್ರದ್ಧಾನಂದರಿಗೆ ಅಧಿಕಾರ ನೀಡಿತು. ಯೋಜನೆಯೂ […]

ಸಾಹಸಕ್ಕೆ ನಿರ್ಧಾರದ ಬಲ !

ಬೋಧ ಕಥೆ - 0 Comment
Issue Date : 16.07.2014

ಬಾಜೀರಾವ್ ಪೇಶ್ವೆಯ ಸೋದರ  ಚಿಮಾಜಿ ಆಪ್ಪಾನ ಮುಖದಿಂದ  ಹೊರಟ ಆ ಮಾತುಗಳನ್ನು ಕೇಳಿ ಸೇನಾಪತಿಗಳ ಸಭೆ ಕ್ಷಣಕಾಲ ಮೌನವಾಯಿತು. ಸಭೆ ಅಲ್ಲಿಗೇ ಕೊನೆಗೊಂಡಿತಲ್ಲದೆ ಮರು ಮಾತನಾಡದೆ ಎಲ್ಲ ಸೇನಾಪತಿಗಳೂ ತಮ್ಮ ತಮ್ಮ ಶಿಬಿರಗಳಿಗೆ ಹಿಂದಿರುಗಿದರು.  ಕೆಲವೇ ಕ್ಷಣಗಳಲ್ಲಿ ವಸಯೀ ಕೋಟೆಯ ಮೇಲೆ ನಾಲ್ಕೂ ಕಡೆಯಿಂದ  ಭೀಕರ ಆಕ್ರಮಣವಾಯಿತು.  ಎರಡೂ ಕಡೆಯ ಸಾವಿರಾರು ಸೈನಿಕರು ವೀರ ಸ್ವರ್ಗ ಸೇರಿದರು.  ಕೊನೆಗೂ ಪೋರ್ಚುಗೀಸರು ಸೋತರು.  ವಸಯೀ ಕೋಟೆಯ ಮೇಲೆ  ಭಗವಾ ಧ್ವಜ ಹಾರಾಡತೊಡಗಿತು.  ಬೆಳಿಗ್ಗೆಯಿದ್ದ ನಿರಾಶೆಯ ವಾತಾವರಣ ಮಾಯವಾಗಿ ವಿಜಯದ  […]

ಕೊನೆಯುಸಿರಲ್ಲೂ ಕ್ರಾಂತಿಯ ಕೆಚ್ಚು !

ಬೋಧ ಕಥೆ - 0 Comment
Issue Date : 12.07.2014

1930 ಮೇ 28.  ಮೂವರು ಯುವಕರು  ರಾವಿ ನದಿಯನ್ನು ಒಂದು ಸಣ್ಣ ದೋಣಿಯಲ್ಲಿ ದಾಟುತ್ತಿದ್ದರು.  ದಡ ಸಿಕ್ಕಿದ ನಂತರ ಅವರು  ದೋಣಿಯನ್ನು  ಅಲ್ಲಿದ್ದ ಗೂಟಕ್ಕೆ ಕಟ್ಟಿದರು. ಗಹನವಾದ ವಿಚಾರ   ಮಾಡುತ್ತಾ ಮೂವರೂ ಮುಂದೆ ಹೊರಟರು. ಅವರು ದಟ್ಟವಾದ ಪೊದೆಯೊಂದನ್ನು  ಹುಡುಕುತ್ತಿದ್ದರು. ಅಷ್ಟರಲ್ಲೇ ಆಳವಾದ ಹಳ್ಳವೊಂದನ್ನು ನೋಡಿ ಆ ಮೂವರೂ ನಿಂತರು. ಭಗವತೀಚರಣ್ ವೋಹರಾ, ಸುಖದೇವರಾಜ್  ಮತ್ತು  ವಿಶ್ವನಾಥ ವೈಶಂಪಾಯನರೇ ಆ ಮೂವರು. ತಮ್ಮ ಸಹ ಕ್ರಾಂತಿಕಾರಿಗಳಾದ ಭಗತ್‍ಸಿಂಹ, ಬಟುಕೇಶ್ವರ ದತ್ತ,  ರಾಜಗುರು ಮತ್ತು ಸುಖದೇವನನ್ನು ಬಂಧನದಿಂದ ಬಿಡಿಸಲು  […]

ಸಾರ್ಥಕ ಸಾಧನೆ

ಬೋಧ ಕಥೆ - 0 Comment
Issue Date : 11.07.2014

“ಯಾರೋ ಬಿಠಾಬಾಯಿಯಂತೆ ! ಜನಾಬಾಯಿಯ ಜೊತೆಗೆ ಹಾಡುತ್ತಿದ್ದಾನೆ” ಎಂದು ಮಹಾರಾಷ್ಟ್ರದ ಸಂತಶ್ರೇಷ್ಠ ನಾಮದೇವರ ತಾಯಿ ಅವರು  ಒಮ್ಮೆ ತಮ್ಮ ಮಗನಿಗೆ ಹೇಳಿದರು. ಎರಡು ಕ್ಷಣ ಮೌನವಾಗಿ ಕುಳಿತ ನಾಮದೇವರು ತಾಯಿಯನ್ನು  ಉದ್ದೇಶಿಸುತ್ತ, “ಅಮ್ಮ, ನಮ್ಮ ಜನಾಬಾಯಿಯ ಜೀವನ-ಸಾಧನೆ ಇಂದಿಗೆ ಸಾರ್ಥಕವಾಯಿತು. ಆ ಬಿಠಾಬಾಯಿ ಇನ್ನಾರೂ ಅಲ್ಲ ಅಮ್ಮ, ಸಾಕ್ಷಾತ್ ವಿಠ್ಠಲನೇ ಅಗಿದ್ದಾನೆ” ಎಂದರು. ಗೋಸಾಯೀ ಮಗನ ಮಾತು  ಕೇಳಿ ಅವಾಕ್ಕಾದಳು. ಮಹಾನ್ ಋಷಿಮುನಿಗಳು ಇಡೀ ಜೀವನವನ್ನು  ಮುಡಿಪಾಗಿಟ್ಟರೂ ಅವರಿಗೆ  ದರ್ಶನ ನೀಡದ ಭಗವಂತ ನಮ್ಮ ಮನೆಯ ಸಾಮಾನ್ಯ […]

‘ಸೇವೆ ನನ್ನ ಭಾಗ್ಯ’

ಬೋಧ ಕಥೆ - 0 Comment
Issue Date : 10.07.2014

“ಮಹಾರಾಜರ ಧಾನ್ಯದ ಭಂಡಾರ (ಕಣಜ) ಎಲ್ಲರಿಗಾಗಿ  ತೆರೆದಿದೆ. ಆಹಾರ  ಧಾನ್ಯ ಬೇಕಾದವರು  ಬಂದು  ಎಷ್ಟು ಬೇಕಾದರೂ ಧಾನ್ಯವನ್ನು  ಒಯ್ದು ಈ ಭೀಕರ ಬರಗಾಲದಲ್ಲಿ ತಮ್ಮ ಕುಟುಂಬವನ್ನು  ಪೋಷಿಸಬಹುದು’’- ಎಂಬ ರಾಜಾ ರಣಜೀತ ಸಿಂಹನ ಆಜ್ಞೆಯನ್ನು ಎಲ್ಲೆಡೆ ಸಾರಲಾಗಿತ್ತು. ಆ ವರ್ಷ ಇಡೀ ಪಂಜಾಬಿನಲ್ಲಿ ಭೀಕರ ಕ್ಷಾಮ. ಹೊಲ-ಗದ್ದೆಗಳಲ್ಲಿ  ಒಂದು ಕಾಳೂ ಬೆಳೆ ಬೆಳೆದಿರಲಿಲ್ಲ. ತನ್ನ ಪ್ರಜೆಗಳಲ್ಲಿ ಯಾರೂ  ಹಸಿವಿನಿಂದ  ಸಾಯಬಾರದೆಂದು ರಾಜಾ  ರಣಜೀತಸಿಂಹನು ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದ. ರಾಜನ ಭಂಡಾರದಿಂದ ಆಹಾರಧಾನ್ಯಗಳನ್ನು  ತೆಗೆದುಕೊಂಡು ಹೋಗುವವರ ಸಂಖ್ಯೆ ದಿನೇ […]

ಹಂಗಿಲ್ಲದವರ ಹಿರಿಮೆ !

ಬೋಧ ಕಥೆ - 0 Comment
Issue Date : 09.07.2014

ಮಹಾರಾಷ್ಟ್ರದ ಪ್ರಸಿದ್ದ ಸಂತ ಶ್ರೀ ತುಕಾರಾಮರ  ಬಗ್ಗೆ ಚೆನ್ನಾಗಿ  ತಿಳಿದುಕೊಂಡಿದ್ದ ಶಿವಾಜಿ ಮಹಾರಾಜರು ಒಮ್ಮೆ ಅವರಿಗೆ   ಪತ್ರದ ಮೂಲಕ ಹೃತ್ಪೂರ್ವಕ ನಮಸ್ಕಾರಗಳನ್ನು  ಸಲ್ಲಿಸಿ, ಅವರು ದರ್ಬಾರಿಗೆ ಬಂದು ದರ್ಶನ ನೀಡಬೇಕೆಂದು ವಿನಂತಿಸುತ್ತ ಆಹ್ವಾನವನ್ನು ಕಳುಹಿಸಿದರು. ಛತ್ರಪತಿ ಶಿವಾಜಿ ಮಹಾರಾಜರ ಕಡೆಯವನು ಕೊಟ್ಟ ಆಮಂತ್ರಣ ಪತ್ರವನ್ನು ಓದಿ ತುಕಾರಾಮರು ಮುಗುಳ್ನಕ್ಕು, ಮನಸ್ಸಿನಲ್ಲೇ ಯೋಚಿಸತೊಡಗಿದರು.  ಅವರನ್ನು ಕರೆದೊಯ್ಯಲು ಶಿವಾಜಿ ಮಹಾರಾಜರು 200 ಸೈನಿಕರ ಜೊತೆಗೆ ಪಲ್ಲಕ್ಕಿಯೊಂದನ್ನು ಕಳುಹಿಸಿದ್ದರು.  ಸ್ವಲ್ಪ ಹೊತ್ತಿನ ನಂತರ ತುಕಾರಾಮರು  ಪದ್ಯದ   ರೂಪದಲ್ಲಿ  ಶಿವಾಜಿಗೆ   ಉತ್ತರವನ್ನು  ಬರೆದು […]

ಸತ್ಕಾರಕ್ಕೆ ತಿರಸ್ಕಾರ

ಬೋಧ ಕಥೆ - 0 Comment
Issue Date : 08.07.2014

ಬಿಜಾಪುರದ ದರ್ಬಾರಿನಲ್ಲಿ  ಶಿವಾಜಿಯ ಕಡೆಯಿಂದ ಬಂದ ಪತ್ರವೊಂದನ್ನು ಓದುತ್ತಿದ್ದಂತೆ,  ಅದರ  ಒಕ್ಕಣೆಯನ್ನು  ಕೇಳಿ ಬಾದಶಹ ದಂಗಾದ ! ಅವನ ಮುಖದಿಂದ ತಾನಾಗಿಯೇ ಪ್ರಶಂಸೆಯ ಉದ್ಗಾರಗಳು ಹೊರಬಿದ್ದವು ! “ಎಂತಹ ಕುಶಲ ಪತ್ರಲೇಖಕ, ಪತ್ರದ ಒಕ್ಕಣೆಯಲ್ಲಿ ಎಂತಹ ನಮ್ರತೆ ಇದೆ.  ಎಂತಹ ಸ್ಪಷ್ಟತೆ ಇದೆ ! ಸ್ವಾಭಿಮಾನಕ್ಕೆ ಸ್ವಲ್ಪವೂ ಧಕ್ಕೆಯಾಗಿಲ್ಲ. ಅಕ್ಷರಗಳೂ ಮುತ್ತಿನಂತೆ ಜೋಡಿಸಲ್ಪಟ್ಟಿವೆ. ಇಂತಹ ಲೇಖಕನನ್ನು  ನಾವು ಪಡೆದುದೇ ಆದರೆ ಅದರಿಂದ  ನಮಗೆ  ಬಹಳ ಲಾಭವಾಗುವುದು”  ಎಂದೂ ಹೇಳಿದ. “ಹುಜೂರ್, ನಾವು ಯಾರನ್ನು ಪಡೆಯಬಯಸಿದರೂ, ಹಣ, ಗೌರವ, […]