ಅವರು ಅಮರರಾದರು

ಬೋಧ ಕಥೆ - 0 Comment
Issue Date : 04.04.2014

ಪ್ರಸಿದ್ಧ ಕ್ರಾಂತಿಕಾರಿ ರಾಸ್ ಬಿಹಾರಿ ಬೋಸರ ಆತ್ಮೀಯ ಜೊತೆಗಾರ, ರಾಜಸ್ಥಾನದ ಯುವಕ ಕ್ರಾಂತಿಕಾರಿ ಪ್ರತಾಪ್ ಸಿಂಹ ವಾರಾಹಠ್ ಅವರು ಬರೇಲಿ ಜೈಲಿನಲ್ಲಿದ್ದಾಗ ಘೋರ ಯಾತನೆಗಳನ್ನು ನೀಡಿದ್ದರಿಂದ ಅಲ್ಲೇ ಹುತಾತ್ಮರಾಗಿದ್ದರು. ಒಂದೂವರೆ ವರ್ಷಗಳ ಶಿಕ್ಷೆ ಅನುಭವಿಸಲು ನಾನು ಅಲ್ಲಿಗೆ ಹೋದಾಗ, ಅಲ್ಲಿಯ ಹಿರಿಯ ಕೈದಿಗಳನ್ನು ಸಂಪರ್ಕಿಸಿ ಪ್ರತಾಪಸಿಂಹನ ವಿಷಯ ತಿಳಿಯಬಯಸಿದೆ. ಜೈಲಿನ ಹಿಂದಿನ ವಾರ್ಡರುಗಳೂ ಪ್ರತಾಪಸಿಂಹನ ವಿಲಕ್ಷಣ ಬಲಿದಾನ ಕಥೆಯನ್ನು ಹೇಳಿದರು. ಆ ಜೈಲಿನಲ್ಲಿ ಅವನನ್ನು ವಿಧವಿಧವಾಗಿ ಗೋಳಾಡಿಸಲಾಯಿತು, ಹೊಡೆಯಲಾಯಿತು. ತರತರಹದ ಆಮಿಷಗಳನ್ನು ತೋರಿಸಲಾಯಿತು. “ಲಾರ್ಡ್ ಹಾರ್ಡಿಂಜನ ಮೇಲೆ […]

ದೇಶಭಕ್ತಿಯ ತೇಜಸ್ಸು

ಬೋಧ ಕಥೆ - 0 Comment
Issue Date : 03.04.2014

ಶಿವಾಜಿ ಮಹಾರಾಜನ ನವನಿರ್ಮಿತ ಸ್ವರಾಜ್ಯದ ಮೇಲೆ ಅದಿಲ್‍ಶಾಹಿ ಸರದಾರ ಫತೇಹಖಾನನು ಧಾಳಿ ಮಾಡಿದಾಗ, ಛತ್ರಪತಿಯು ಪರಂದರಗಢದಲ್ಲಿ ಆಶ್ರಯ ಪಡೆಯಬೇಕಾಯಿತು. ಫತೇಹಖಾನನ ಸೈನ್ಯ ಬಹಳ ದೊಡ್ಡದಿದ್ದರೂ, ಶಿವಾಜಿಯ ಚಿಕ್ಕ ಸೈನ್ಯವು ಇದ್ದಕ್ಕಿದ್ದಂತೆ ಆಕ್ರಮಣ ಮಾಡುವ ನೀತಿಯನ್ನು ಮುಂದುವರಿಸಿತು. ಅದಿಲ್‍ಷಾಹಿಯ ಸೇನೆ ವಿಶ್ರಮಿಸತೊಡಗಿದರೆ ಅಥವಾ ಅದರ ಸೈನಿಕರು ದಣಿದಿರುವಂತೆ ಕಂಡುಬಂದಾಗ ಶಿವಾಜಿಯ ಸೈನಿಕರು ಅವರ ಮೇಲೆ ದಿಢೀರನೆ ಆಕ್ರಮಣ ಮಾಡುತ್ತಿದ್ದರು. ಅದಿಲ್‍ಷಾಹನ ಸೈನ್ಯವು ಎಚ್ಚರಗೊಳ‍್ಳುತ್ತಿದ್ದಂತೆ, ಹಿಂದೂ ಸೈನಿಕರು ಮಾಯವಾಗುತ್ತಿದ್ದರು. ಈ ರೀತಿಯ ಮರಾಠರ ಆಕ್ರಮಣದಲ್ಲಿ ಮಹತ್ವವಿತ್ತು. ಇದರ ಜೊತೆ ಜೊತೆಗೇ […]

ಸುಧಾರಣೆಯ ಮಾರ್ಗ

ಬೋಧ ಕಥೆ - 0 Comment
Issue Date : 02.04.2014

ಸೆರೆಮನೆಯಲ್ಲಿ ಯಾರಾದರೂ ಕೈದಿ ಇತರರಿಗೆ ತೊಂದರೆ ಕೊಡುತ್ತಿದ್ದರೆ ಅಂತಹವನ ಎರಡೂ ಕಾಲುಗಳಿಗೆ ಬೇಡಿಯನ್ನು ತೊಡಿಸುತ್ತಿದ್ದರು. ಎರಡು  ಕಾಲುಗಳ ಬೇಡಿಗಳ ನಡುವೆ ಒಂದು ಸಲಾಕೆಯೂ ಇರುತ್ತಿತ್ತು. ಹೀಗಾಗಿ ಅಂತಹ ಶಿಕ್ಷೆ ಪಡೆದ ಕೈದಿಗೆ ಓಡಾಡಲು ತುಂಬಾ ಕಷ್ಟ. 1942ನೇ ಆಂದೋಲನದಲ್ಲಿ ಭಾಗವಹಿಸಿದ್ದ ದಾದಾ ಮಾವಳಂಕರರು ಸಾಬರಮತಿ ಸೆರೆಮನೆಯಲ್ಲಿ ಬಂದಿಯಾಗಿದ್ದರು. ಅವರನ್ನು ಒಂದು ದಿನ ಬಾಪೂ ಎಂಬ ಕೈದಿ ಭೇಟಿಮಾಡಿ, “ದಾದಾಸಾಹೇಬರೇ, ಈ ಬೇಡಿಕೆಯಿಂದ ನನಗೆ ಬಹಳ ತ್ರಾಸವಾಗುತ್ತಿದೆ. ನೀವೇ ಇದನ್ನು ತೆಗೆದುಹಾಕಿದರೆ ನನಗೆ ತುಂಬಾ ಸಹಾಯವಾಗುತ್ತದೆ” ಎಂದ. ದಾದಾಸಾಹೇಬರು […]

ದೇಶಭಕ್ತಿಯ ಪಾಠವೇ?

ಬೋಧ ಕಥೆ - 0 Comment
Issue Date : 27.02.2014

ಇಂದು ನಮ್ಮ ನಾಯಕರೂ ಜನತೆಗೆ ನಿಸ್ವಾರ್ಥತೆ ಮತ್ತು ನೈಜ ದೇಶಭಕ್ತಿಯ ಪಾಠ ಕಲಿಸಲು ಸಾಧ್ಯವಿಲ್ಲದಿರುವುದು ನಮ್ಮ ದೇಶದ ಒಂದು ದುರ್ಭಾಗ್ಯ ಪೂರ್ಣ ಸಂಗತಿಯಾಗಿದೆ. ಇದಕ್ಕೆ ಒಂದು ಉದಾಹರಣೆ ಹೇಳುವೆ. 1965ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧ ಕಾಲದ ಮಾತು. ಪಾಕಿಸ್ತಾನದ ಕೆಲವು ಛತ್ರಿ ಸೈನಿಕರು ಪಂಜಾಬಿನಲ್ಲಿ ಇಳಿದಿದ್ದರು. ಅವರು ಶಸ್ತ್ರಾಸ್ತ್ರಗಳಿಂದ ಸಜ್ಜಾಗಿದ್ದರು ಮತ್ತು ಗುಪ್ತವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದರು. ಶತ್ರುಗಳ ಛತ್ರಿ ಸೈನಿಕರನ್ನು ಹಿಡಿದು ಕೊಡುವವರಿಗೆ ನಗದು ಬಹುಮಾನ ಕೊಡಲಾಗುವುದು ಎಂದು ಆಗ ನಮ್ಮ ಸರಕಾರದ ವತಿಯಿಂದ ಘೋಷಿಸಲಾಯಿತು. […]

ಉಚ್ಚಾರ ಸ್ಪಷ್ಟವಾಗಿರಲಿ

ಬೋಧ ಕಥೆ - 0 Comment
Issue Date : 24.02.2014

ನಮ್ಮ ಪ್ರಾರ್ಥನೆ ಎಂದರೆ ಮಂತ್ರವೇ ಆಗಿದೆ. ಮಂತ್ರದ ಉಚ್ಚಾರಣೆಯು ಎಂದೂ ಅಶುದ್ಧವಾಗಿರಬಾರದು. ಒಮ್ಮೆ ದೇವತೆಗಳ ಓರ್ವ ಪುರೋಹಿತನು ದುಷ್ಕರ್ಮಗಳನ್ನು ಮಾಡಿದ. ಆಗ ಇಂದ್ರನು ಅವನನ್ನು ಕೊಂದುಹಾಕಿದ. ಅನಂತರ ಆ ಪುರೋಹಿತನ ಮಗನು ಒಂದು ದೊಡ್ಡ ಯಜ್ಞವನ್ನು ಮಾಡಿದ. ಆ ಭವ್ಯವಾದ ಯಜ್ಞವನ್ನು ನೋಡಿ ಬ್ರಹ್ಮದೇವನು ಸಂತುಷ್ಟನಾದ. “ನಿನಗೆ ಬೇಕಾದ ವರಗಳನ್ನು ಕೇಳು” ಎಂದನು. ಆತ ಹೇಳಿದ, “ನನಗೆ ಇಂದ್ರ ಶತ್ರು ಪುತ್ರನನ್ನು ನೀಡು” ಇಂದ್ರನೊಂದಿಗೆ ಶತ್ರುತ್ವ ಸಾಧಿಸಿ ಆತನನ್ನು ಕೊಲ್ಲುವವನು ಎಂಬುದು ಆತನ ಮಾತಿನ ಆಶಯವಾಗಿತ್ತು. ಆದರೆ […]

ಭೀಕರ ದಾರಿದ್ರ್ಯ

ಬೋಧ ಕಥೆ - 0 Comment
Issue Date : 22.02.2014

ನಮ್ಮ ವನವಾಸಿ ಬಾಂಧವರ ಹಿತಕ್ಕಾಗಿ ಶ್ರಮಿಸುತ್ತಿರುವ ಸಜ್ಜನರೊಬ್ಬರು ಸದಾ ಗ್ರಾಮ ಗ್ರಾಮಗಳಲ್ಲಿ ಪ್ರವಾಸಮಾಡುತ್ತಿರುತ್ತಾರೆ. ವನವಾಸಿಗಳ ಅಂತಃಕರಣದಲ್ಲಿ ಶ್ರದ್ಧೆ ಮತ್ತು ಭಕ್ತಿಯನ್ನು ಮೂಡಿಸುವುದು, ಅವರ ಐಹಿಕ ಅಡಚಣೆಗಳನ್ನು ತಿಳಿದುಕೊಂಡು ಸಾಧ್ಯವಾದಷ್ಟೂ ಅವನ್ನು ದೂರಗೊಳಿಸುವುದು, ಈ ಬಗ್ಗೆ ಅವರು ಪ್ರಯತ್ನಿಸುತ್ತಿದ್ದರು. ಒಮ್ಮೆ ವನವಾಸಿಗಳ ಒಂದು ವಸತಿಕ್ಷೇತ್ರದಲ್ಲಿ ಅವರು ಭಜನೆ – ಕೀರ್ತನೆಗಳ ಕಾರ್ಯಕ್ರಮವನ್ನು ಏರ್ಪಡಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಅದರಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ, ಗ್ರಾಮದಲ್ಲಿ ಏನೇನು ತೊಂದರೆಗಳಿವೆ, ಯಾವ ರೀತಿಯ ಸಹಾಯ ಸಿಗಬೇಕಾಗಿದೆ ಇತ್ಯಾದಿ ವಿಚಾರಿಸಿದರು. ಕೊನೆಗೆ ಅವರಿಗೆ […]

ವೀರಶ್ರೇಷ್ಠ ಅರ್ಜುನ

ಬೋಧ ಕಥೆ - 0 Comment
Issue Date : 21.02.2014

ಪಾಂಡವರು ಅಜ್ಞಾತವಾಸದಲ್ಲಿ ವಿರಾಟರಾಜನ ಬಳಿ ಇರುತ್ತಿದ್ದರು. ಅವರು ವೇಷಾಂತರ ಮತ್ತು ನಾಮಾಂತರ ಮಾಡಿದ್ದರು. ವಿರಾಟನ ದುಷ್ಟ, ಸೇನಾಪತಿ ಕೀಚಕನು ಕೊಲ್ಲಪ್ಪಟ್ಟ ವಾರ್ತೆಯು ಪಕ್ಕದ ಸುಶರ್ಮಾ ಎಂಬ ರಾಜನಿಗೆ ತಿಳಿಯುತ್ತಲೇ ಆತ ತರಾತುರಿಯಿಂದ ದುರ್ಯೋಧನನ ಬಳಿಗೆ ಹೋದ. ಇಬ್ಬರೂ ಸೇರಿ ವಿರಾಟನ ಮೇಲೆ ಆಕ್ರಮಣ ಮಾಡುವ ಗುಪ್ತ ಯೋಜನೆಯನ್ನು ರೂಪಿಸಿದರು. ಆ ಪ್ರಕಾರ  ಸುಶರ್ಮನು ದಕ್ಷಿಣದ ಕಡೆಯಿಂದ ಆಕ್ರಮಣ ಮಾಡಿದ. ವಿರಾಟ ರಾಜನು ಕಂಕ, ಬಲ್ಲವ ಮುಂತಾದವರೊಂದಿಗೆ ಎಲ್ಲ ಸೇನೆಯ ಜೊತೆ ದಕ್ಷಿಣ ಗಡಿಭಾಗಕ್ಕೆ ಧಾವಿಸಿದ, ಶತ್ರುಗಳೊಂದಿಗೆ ಹೋರಾಡ […]

ಕೇವಲ ವಾಕ್ಯಾರ್ಥ ವ್ಯರ್ಥ

ಬೋಧ ಕಥೆ - 0 Comment
Issue Date : 20.02.2014

ರಾಮಕೃಷ್ಣ ಪರಮಹಂಸರ ಓರ್ವ ಶಿಷ್ಯನಿದ್ದ. ಪತ್ರಿಯೊಂದು ಜೀವಿಯಲ್ಲೂ “ನಾರಾಯಣ’ ನೆಲೆಸಿದ್ದಾನೆ ಎಂದು ಪರಮಹಂಸರು ಒಮ್ಮೆ ಅವನಿಗೆ ಹೇಳಿದರು. ಈ ವಾಕ್ಯವನ್ನು ಆತ ತನ್ನ ಮನಃ ಪಟಲದಲ್ಲಿ ಅಚ್ಚೊತ್ತಿಕೊಂಡನು. ಒಮ್ಮೆ ಆ ಶಿಷ್ಯನು ಅಗಲಕಿರಿದಾದ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಆನೆ ಬರುತ್ತಿರುವುದು ಕಾಣಿಸಿತು. ಆನೆಯ ಮೇಲಿದ್ದ ಮಾವುತನು ಪಾದಚಾರಿಗಳಿಗೆ ಕೂಗಿ ಹೇಳುತ್ತಿದ್ದ: “ಆನೆಗೆ ಮದವೇರಿದೆ, ಅದರ ಮೇಲೆ ನನ್ನದೇನೂ ಹಿಡಿತವಿಲ್ಲ, ರಸ್ತೆಯಿಂದ ದೂರ ಸರಿಯಿರಿ. ಆದರೆ ಸಕಲ ಪ್ರಾಣಿಗಳಲ್ಲೂ ನಾರಾಯಣ ನೆಲೆಸಿರುತ್ತಾನೆ, ಎಂದು ಪರಮಹಂಸರು ಹೇಳಿದ್ದು ಆ […]

ಸ್ವಯಂ ಸೇವಕ

ಬೋಧ ಕಥೆ - 0 Comment
Issue Date : 19.02.2014

ಸ್ವಯಂಸೇವಕ ಎಂದರೆ ಯಾರು ಎಂಬುದನ್ನು ಸಂಘಶಾಖೆ ಪ್ರಾರಂಭವಾದ ಸಮಯದಲ್ಲಿ ಪೂಜ್ಯ ಡಾಕ್ಟರಜಿ ತಿಳಿಸಿದ್ದರು. ಅದಕ್ಕೆ ಮುಂಚೆ ಸಮಾಜದಲ್ಲಿ ಸ್ವಯಂ ಸೇವಕ ಎಂದರೆ ಸಭೆ – ಸಮ್ಮೇಳನಗಳಲ್ಲಿ ಜಮಖಾನ, ಖುರ್ಚಿ ಮೇಜು ಎತ್ತುವವರು, ಪುಕ್ಕಟೆಯಾಗಿ ಜನರ ಕೆಲಸ ಮಾಡುವವರು, ಸಾಮಾನುಗಳನ್ನು ತರುವ –ಒಯ್ಯುವ ಕೆಲಸ ಮಾಡುವವರು, ಎಂದು ಜನ ಭಾವಿಸುತ್ತಿದ್ದರು ಹಾಗೂ ಈ ಅರ್ಥದಲ್ಲೇ ಎಲ್ಲರೂ ಸ್ವಯಂಸೇವಕರನ್ನು ಉಪಯೋಗಿಸಿ ಕೊಳ್ಳುತ್ತಿದ್ದರು. ನಾಗಾಪುರದ ಗುಲಾಮ ಮಹಮ್ಮದ್ ಎಂಬ ಓರ್ವ ಜಟ್ಟಿಯು ಕುಸ್ತಿ ಆಡಲು ವಿದೇಶಕ್ಕೆ ಹೋಗಿದ್ದ. ಅವನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. […]

ನೈತಿಕತೆ

ಬೋಧ ಕಥೆ - 0 Comment
Issue Date : 18.02.2014

ಬಂಗಳಾದ ಸುಪ್ರಸಿದ್ಧ ಸಮಾಜಸೇವಕ  ಚಿತ್ತರಂಜನದಾಸರ ವಿಷಯ. ಅವರ ತಂದೆ ತುಂಬಾ ದಯಾಳುವಾಗಿದ್ದರು. ಸರಳ ಮತ್ತು ನಿಷ್ಕಪಟ ಸ್ವಭಾವದವರಾಗಿದ್ದುದರಿಂದ ಅವರ ಮಿತ್ರವೃಂದ ದೊಡ್ಡದಾಗಿತ್ತು. ಕುಟುಂಬದವರಿಗಿಂತಲೂ ಕಷ್ಟದಲ್ಲಿದ್ದ ಮಿತ್ರರ ಬಗ್ಗೆಯೇ ಅವರಿಗೆ ಹಿಚ್ಚಿನ ಕಾಳಜಿಯಿರುತ್ತಿತ್ತು. ಈ ಸ್ವಭಾವದಿಂದಾಗಿ ಅವರ ಮೇಲೆ ತುಂಬ ಸಾಲದ ಹೊರೆಯುಂಟಾಯಿತು. ಆದಾಯ ಕಡಿಮೆಯಿತ್ತು. ಸಾಲ ಮರುಪಾವತಿ ಮಾಡಲು ಅಸಾಧ್ಯವಾಗಿತ್ತು. ಸಾಹುಕಾರರು ಅವರಿಂದ ಸಾಲಪತ್ರಗಳನ್ನು ಬರೆಸಿಕೊಂಡಿದ್ದರು. ಆದರೆ ದಾಸಬಾಬು ರವರ ತಂದೆಯ ಸಜ್ಜನಿಕೆಯಿಂದಾಗಿ ಅವರ ಮೇಲೆ ನ್ಯಾಯಾಲಯದ ಕ್ರಮ ಕೈಗೊಳ್ಳಲು ಸಾಹುಕಾರರಿಗೆ  ಸಂಕೋಚ ವೆನಿಸುತ್ತಿತ್ತು. ಚಿತ್ತರಂಜನದಾಸರಿಗೆ ‘ದಿವಾಳಿಖೋರ […]