ಒಗ್ಗಟ್ಟಿನಲ್ಲಿ ಬಲವಿದೆ

ಬೋಧ ಕಥೆ - 0 Comment
Issue Date : 17.02.2014

ಮುದುಕನೊಬ್ಬ ಎಲ್ಲ ದೃಷ್ಟಿಯಿಂದಲೂ ಸುಖಿಯಾಗಿದ್ದ. ವ್ಯವಸಾಯ, ಧನಸಂಪತ್ತು ಎಲ್ಲವೂ ಆತನಿಗಿದ್ದವು. ಆತನಿಗೆ ನಾಲ್ವರು ಗಂಡುಮಕ್ಕಳಿದ್ದರು. ಆ ಮಕ್ಕಳು ಬಹು ಕರ್ತೃತ್ವಶಾಲಿ ಮತ್ತು ಬುದ್ಧಿವಂತರಾಗಿದ್ದರು. ಆದರೆ ಚಿಕ್ಕ ದೊಡ್ಡ ಕಾರಣಗಳಿಂದ ಅವರು ಪರಸ್ಪರ ಜಗಳವಾಡುತ್ತಿದ್ದರು. ಇದರಿಂದ ಆ ಮುದುಕನಿಗೆ ದುಃಖವುಂಟಾಗಿತ್ತು. ಒಂದು ಆತ ಕಾಡಿನಿಂದ ಕಟ್ಟಿಗೆ ತರುವಂತೆ ತನ್ನ ಮಕ್ಕಳಿಗೆ ಹೇಳಿದ. ಅವರು ತರುತ್ತಲೇ ಮುದುಕನು ಕಟ್ಟಿಗಳ ಒಂದು ಕಟ್ಟನ್ನು ಕಟ್ಟಿ ಮಕ್ಕಳಿಗೆ ಹೇಳಿದ, “ಈ  ಕಟ್ಟನ್ನು ಮಧ್ಯದಲ್ಲಿ ಮುರಿಯಿರಿ ನೋಡೋಣ”. ಆ ಗಟ್ಟಿಮುಟ್ಟು ಮಕ್ಕಳು ತಮ್ಮ ಪೂರ್ಣಶಕ್ತಿಯೊಂದಿಗೆ […]

ಪಾಣಿನಿ ಮತ್ತು ಹುಲಿ

ಬೋಧ ಕಥೆ - 0 Comment
Issue Date : 15.02.2014

ಸಮಾಜಕಾರ್ಯ ಮಾಡುವಾಗ ಹಿಂದೂ ಸಮಾಜ, ಹಿಂದೂ ಸಂಘಟನೆ ಇತ್ಯಾದಿ ಶಬ್ದಗಳನ್ನು ಉಚ್ಛರಿಸುವುದರೊಂದಿಗೆ, ‘ಹಿಂದೂ’ ಶಬ್ದ ಹೇಗೆ ಬಂತು ಎನ್ನುವ ಬಗ್ಗೆ ಅನೇಕ ವಿದ್ವಾಂಸರು ಚರ್ಚೆಗೆ ಇಳಿಯುತ್ತಾರೆ. ಹಿಂದೂ ಸಂಸ್ಕೃತಿ, ಧರ್ಮ ಇವು ಜಗತ್ತಿನಲ್ಲಿ ಸರ್ವ ಶ್ರೇಷ್ಠವಾಗಿದ್ದರೆ, ಅವುಗಳನ್ನು ಪಾಲನೆ ಮಾಡುವ ಹಿಂದೂ ಸಮಾಜವು ಬಲಿಷ್ಠ, ಸಂಘಟಿತವಾಗಬೇಕೆಂಬುದು ಸಂಘದ ವ್ಯಾವಹಾರಿಕ ವಿಚಾರವಾಗಿದೆ. ಪಾಣಿನಿ ಋಷಿಯು ಓರ್ವ ಶ್ರೇಷ್ಠ ವೈಯ್ಯಾಕರಣಿಯಾಗಿದ್ದರು. ಒಮ್ಮೆ ತಮ್ಮ ಶಿಷ್ಯರಿಗೆ ಅವರು ವ್ಯಾಕರಣ ಹೇಳಿಕೊಡುತ್ತಿದ್ದಾಗ ಶಬ್ದಗಳ ವ್ಯುತ್ಪತ್ತಿಯನ್ನು ವಿವರಿಸುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಒಂದು ಕ್ರೂರವಾದ ಹುಲಿ […]

ಶ್ರೇಯಸ್ಸಿನ ಅಭಿಮಾನ ಹಾಸ್ಯಸ್ಪದ

ಬೋಧ ಕಥೆ - 0 Comment
Issue Date : 14.02.2014

ಒಂದು ಒಂಟೆ ನಡೆಯುತ್ತಿತ್ತು. ಅದರ ಮೂಗಿಗೆ ಕಟ್ಟಿದ್ದ ಹಗ್ಗವನ್ನು ಒಂಟೆಯ ಮಾಲಿಕನು ಕೈಯಲ್ಲಿ ಹಿಡಿಯದೆ ಕೆಳಕ್ಕೆ ಬಿಟ್ಟಿದ್ದ. ಅದು ಒಂಟೆಯೊಂದಿಗೆ ಸರಿಯುತ್ತ ಹೋಗುತ್ತಿತ್ತು ಅಷ್ಟರಲ್ಲಿ ಹತ್ತಿರದ ಒಂದು ಬಿಲದಿಂದ ಇಲಿಯೊಂದು ಹೊರಬಿತ್ತು. ಅದು ಆ ಹಗ್ಗದ ಕೆಳಗೆ ಬಿದ್ದಿದ್ದ ತುದಿಯನ್ನು ಬಾಯಲ್ಲಿ ಹಿಡಿಯಿತು, ಆ ಒಂಟೆಯೊಂದಿಗೇ ನಡೆಯತೊಡಗಿತು. ಆಮೇಲೆ ಅದು ಆ ಒಂಟೆಗೆ ಹೇಳಿತು. “ಅರೆರೆ! ನೀನು ಸ್ವತಃ  ಬಹು ದೊಡ್ಡ ಬಲಶಾಲಿಯೆಂದು ತಿಳಿದಿರುವೆಯಲ್ಲ? ಆದರೆ ಇಲ್ಲಿ ನೋಡು, ನನ್ನ ಶಕ್ತಿಯು ನಿನಗಿಂತಲೂ ಹೆಚ್ಚಾಗಿದೆ. ನಾನು ನಿನ್ನನ್ನು […]

ಸುಶಿಕ್ಷಿತ ದನಗಾಹಿ

ಬೋಧ ಕಥೆ - 0 Comment
Issue Date : 13.02.2014

ಒಂದು ರಾಜಾ ದಿನ. ಒಬ್ಬ ಐ.ಎ.ಎಸ್ ಅಧಿಕಾರಿ ವಿಹಾರಕ್ಕೆಂದು ಹೋಗಿದ್ದರು. ಆಗ ಒಂದು ಮರದಲ್ಲಿ ಸುಂದರವಾಗಿ ಹೆಣೆದಿದ್ದ ಗೀಜಗನ ಗೂಡುಗಳನ್ನು ನೋಡಿದರು. ಅದನ್ನು ಕಿತ್ತು ತಮ್ಮ ಮನೆಯ ಷೋಕೇಸಿನಲ್ಲಿ ಇಡಬೇಕೆಂಬ ಇಚ್ಛೆ ಅವರಿಗಾಯಿತು. ಆ ಗೂಡುಗಳನ್ನು ಕೀಳುವ ಅವರ ಪ್ರಯತ್ನ ಫಲಿಸಲಿಲ್ಲ.  ಹತ್ತಿರದಲ್ಲೇ ಹರಕು ಬಟ್ಟೆ ಧರಿಸಿ ಓಡಾಡುತ್ತಿದ್ದ ದನಕಾಯುವ ಹುಡುಗನನ್ನು  ನೋಡಿದರು. ಆ ಹಕ್ಕಿಯ ಗೂಡುಗಳನ್ನು ಕಿತ್ತುಕೊಡುವಂತೆ ಕೇಳಿದರು. ಆ ಬಾಲಕ ಕಿತ್ತುಕೊಡಲು ಒಪ್ಪಲಿಲ್ಲ.  ಐ.ಎ.ಎಸ್ ಅಧಿಕಾರಿ ಗೂಡು ಕಿತ್ತುಕೊಡಲು ಹಣ ಕೊಡುವುದಾಗಿ ಆಸೆ ತೋರಿಸಿದರು. […]

ರಾಷ್ಟ್ರಭಕ್ತ ವಿಜ್ಞಾನಿಯ ಸ್ವಾಭಿಮಾನ

ಬೋಧ ಕಥೆ - 0 Comment
Issue Date : 12.02.2014

ಶ್ರೀ ಜಗದೀಶಚಂದ್ರ ಬೋಸ್ ರವರು 1885ರಲ್ಲಿ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತವಿಜ್ಞಾನದ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಆಗ ಸರ್  ಅಲ್ಫ್ರಡ್ ಕ್ರಾಫ್ಟ್ ರವರು ಶಿಕ್ಷಣ ಸಂಚಾಲಕರಾಗಿದ್ದರು. ಅವರು ಶ್ರೀ ಬೋಸ್ ರವರೊಂದಿಗೆ. ಮೊದಲನೆಯದಾಗಿ ನೀವೊಬ್ಬ ಭಾರತೀಯರು; ಅನನುಭವಿಗಳು. ನಿಮ್ಮ ವಯಸ್ಸಿಗೆ ತರಗತಿಯಲ್ಲಿ ಪಾಠ ಮಾಡುವಾಗ ನಿಯಂತ್ರಣ ಅನುಶಾಸನಗಳನ್ನು  ಉಳಿಸಿಕೊಳ್ಳಲು ಸಾಧ್ಯವಾದೀತೇ ಎನ್ನುವ ಸಂದೇಹವೂ ಇದೆ. ನಿಮ್ಮ ನೇಮಕಾತಿಯೂ ತಾತ್ಕಾಲಿಕ ಎಂದು ಸ್ಪಷ್ಟವಾಗಿಯೇ ಹೇಳಿದರು. ಬ್ರಿಟಿಷ್ ಅಧಿಕಾರಿಗಳು ಭಾರತೀಯರನ್ನು ತುಚ್ಛವಾಗಿ ಕಾಣುತ್ತಿದ್ದರು. ಬ್ರಿಟಿಷರಷ್ಟೇ ಶೈಕ್ಷಣಿಕ ಯೋಗತ್ಯೆ ಹಾಗೂ ಸ್ಥಾನ ಇದ್ದರೂ […]

ದೇಶಧರ್ಮಗಳ ಅಪಮಾನ ಸಹಿಸಲಾರೆ

ಬೋಧ ಕಥೆ - 0 Comment
Issue Date : 11.02.2014

ಪಂಡಿತ ಮದನ ಮೋಹನ ಮಾಲವೀಯರು ಆಗ ಪ್ರಯಾಗದಲ್ಲಿ ವಕೀಲರಾಗಿದ್ದರು. ‘ಸನಾತನ ಮಹಾಸಭಾ’ದ ಕೆಲಸ ಕಾರ್ಯಗಳಲ್ಲೂ ತೊಡಗಿದ್ದರು. ಅಂದು ನ್ಯಾಯಾಲಯದಲ್ಲಿ ಯಾವುದೋ ಮೊಕದ್ದಮೆ ನಡೆಯುತ್ತಿತ್ತು. ನ್ಯಾಯಾಧೀಶ ಓರ್ವ ಆಂಗ್ಲ. ಆತ ಭಾರತ ಮತ್ತು ಹಿಂದೂ ಧರ್ಮದ ಕುರಿತು ಅಪಮಾನದ ಮಾತುಗಳನ್ನಾಡಿದ. ಇದನ್ನು ಮಾಲವೀಯರಿಗೆ ಸಹಿಸಲಾಗಲಿಲ್ಲ. ಮಹಾಶಯ, ನಮ್ಮ ದೇಶ ಧರ್ಮಗಳ ಕುರಿತು ತಿಳುವಳಿಕೆಯೇ ಇಲ್ಲದ ನಿಮಗೆ ಬಾಯಿಗೆ ಬಂದಂತೆ ಮಾತನಾಡುವ ಅಧಿಕಾರವನ್ನಾದರೂ ಕೊಟ್ಟವರಾರು? ಎಂದು ಮಾಲವೀಯರು ನಿರ್ಭಯವಾಗಿ ಕೆಂಡ ಕಾರಿದರು. ಇದನ್ನು ಕೇಳಿದ ನ್ಯಾಯಾಧೀಶ ದಂಗಾದ. ಮಾಲವೀಯರೊಡನೆ ಆತನ […]

ನಿಜವಾದ ಸಮಾಜಪ್ರೇಮಿ

ಬೋಧ ಕಥೆ - 0 Comment
Issue Date : 10.02.2014

ಬರಗಾಲ ಪೀಡಿತ ಹಳ್ಳಿಗರು ಓರ್ವ ಯುವನಾಯಕನ ಬಳಿಬಂದು ನಾವು ಹಸಿವಿನಿಂದ ಸಾಯುತ್ತಿದ್ದೇವೆ. ಎಲ್ಲೂ ಅನ್ನ ಸಿಕ್ಕುತ್ತಿಲ್ಲ ಎಂದರು. ಯುವನಾಯಕ ಗರ್ಜಿಸಿದ – ಹೇಳಿ, ಈ ಹಳ್ಳಿಯಲ್ಲಿ ಯಾರು ಆಹಾರ ಬಚ್ಚಿಟ್ಟಿದ್ದಾರೆ? ಹಳ್ಳಿಗರು ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು. ಆದರೆ ಉತ್ತರಿಸುವವರಾರು? ಯುವನಾಯಕ ಮತ್ತಷ್ಟು ಗರ್ಜಿಸುತ್ತ ಕೇಳಿದ – ಹೆದರಿದಿರಿ, ಹೆಸರು ಹೇಳಿ. ಗುಂಪಿನಿಂದ ಕ್ಷೀಣವಾದ ಧ್ವನಿಯೊಂದು ಕೇಳಿಬಂದಿತು. ನಿಮ್ಮ ತಂದೆಯವರೇ. ಯುವಕನ ಕಣ್ಣುಗಳು ಕೆಂಪಾದವು. ಆತ ಹಳ್ಳಿಗರೊಂದಿಗೆ ತಂದೆಯ ಗೋದಾಮಿಗೆ ನುಗ್ಗಿದ. ನೋಡನೋಡುತ್ತಿದ್ದಂತೆ ಇದ್ದ ಧಾನ್ಯವನ್ನೆಲ್ಲ ಬೇಕಾದವರಿಗೆ […]

ಕನಿಕರ ಇದ್ದರಷ್ಟೇ ಸಾಲದು

ಬೋಧ ಕಥೆ - 0 Comment
Issue Date : 08.02.2014

ಒಮ್ಮೆ ಶ್ರಾವಸ್ತಿಯಲ್ಲಿ ಭೀಕರ ಬರಗಾಲ ತಲೆದೋರಿತು. ಎಷ್ಟೋ ಜನ ಹಸಿವಿನಿಂದ ಸತ್ತರು. ಹಸುಗೂಸು, ಹಸಿಬಾಣಂತಿಯರು, ದುಡಿವ ಗಂಡಸರು ಸತ್ತ ಮನೆಗಳವರ  ದುಃಖವಂತೂ ಹೇಳತೀರದು. ಭಗವಾನ್ ಬುದ್ಧ ಇದನ್ನು ಕಂಡು ಕರಗಿಹೋದ. ಏನದಾರೂ ಮಾಡಬೇಕೆಂದು ಯೋಚಿಸಿದ. ಅಲ್ಲಿನ ಎಲ್ಲರನ್ನೂ ಕರೆದು ಸಭೆ ಸೇರಿಸಿದ. ಬರಗಾಲದಿಂದಾಗಿ ಅನಾಥರಾದ  ವಿಧವೆಯರ, ತಬ್ಬಲಿ ಮಕ್ಕಳ ಜೀವ ಉಳಿಸಲು ಏನಾದರೂ ಮಾಡಬೇಕೆಂದು ಎಲಲ್ಲರಲ್ಲೂ ವಿನಂತಿಸಿದ. ಆ ಸಭೆಯಲ್ಲಿ ಸಿರಿವಂತರೂ ಇದ್ದರು. ಅವರು ಬುದ್ಧದೇವ, ನಮ್ಮ ಬಳಿ ಈಗಿರುವ ಕಾಳುಕಡ್ಡಿ ನಮ್ಮ ಕುಟುಂಬವನ್ನು ಒಂದು ವರ್ಷ […]

ವಿದ್ವಾಂಸನ ಹಿರಿಮೆ

ಬೋಧ ಕಥೆ - 0 Comment
Issue Date : 07.02.2014

1844 ರ ಘಟನೆ. ಆಗಿನ್ನೂ ನಮ್ಮ ದೇಶ ಸ್ವತಂತ್ರವಾಗಿರಲಿಲ್ಲ. ಆ ದಿನಗಳಲ್ಲಿ ಶ್ರೀ ಈಶ್ವರಚಂದ್ರ ವಿದ್ಯಾಸಾಗರು ಸಂಸ್ಕೃತ ಪ್ರಕಾಂಡ ಪಂಡಿತರೆಂದು ಪ್ರಸಿದ್ಧರಾಗಿದ್ದರು. ಅವರು ತಮ್ಮ ವಿನಯ, ಪರೋಪಕಾರ, ಸತ್ಯಸಂಧತೆ ಇತ್ಯಾದಿ ಗುಣಗಳಿಂದ ಎಲ್ಲರ ಪ್ರೀತಿ ಆದರಗಳಿಗೆ ಪಾತ್ರರಾಗಿದ್ದರು. ಇದೇ ಸಮಯದಲ್ಲಿ ಕಲ್ಕತ್ತಾದಲ್ಲಿ ಸಂಸ್ಕೃತ ಕಲೇಜಿನ ವಿದ್ವಜ್ಜನರು ಪರಸ್ಪರ ಪ್ರಾಚಾರ್ಯರು ಈ ಕುರಿತು ಪತ್ರವನ್ನು ಬರೆದು ಸಂಸ್ಕೃತ ಅಧ್ಯಾಪಕ ಸ್ಥಾನವನ್ನು ಸ್ವೀಕರಿಸುವಂತೆ ಈಶ್ವರಚಂದ್ರರನ್ನು ಕೇಳಿಕೊಂಡರು. ಒಳ್ಳೆಯ ವೇತನ ಮತ್ತು ಗೌರವ -ಎರಡನ್ನೂ ಪಡೆಯುವ ಸುಸಂಧಿ ಇದಾಗಿತ್ತು. ಆದರೆ ಪತ್ರವನ್ನು […]

ಅಗಸ ಮತ್ತು ಕುಂಬಾರ

ಬೋಧ ಕಥೆ - 0 Comment
Issue Date : 06.02.2014

ಒಂದೂರಿನಲ್ಲಿ ಒಬ್ಬ ಅಗಸನಿದ್ದ. ಅವನು ಪ್ರಾಮಾಣಿಕನೂ ಕಷ್ಟಪಟ್ಟು ದುಡಿಯುವವನೂ ಆಗಿದ್ದ. ಅವನು ಒಗೆದ ಬಟ್ಟೆಗಳು ಬೆಳ್ಳಗಾಗುತ್ತವೆಂದು ಊರಿನ ಜನ ನಂಬಿದ್ದರು. ಇದರಿಂದ ದಿನೇದಿನೇ ಅವನ ವ್ಯಾಪಾರ ವೃದ್ಧಿಯಾಗತೊಡಗಿತು. ಅದೇ ಊರಿನಲ್ಲಿ ಒಬ್ಬ ಕುಂಬಾರನಿದ್ದ. ಅವನು ಸೋಮಾರಿ. ಅಗಸನ ಏಳಿಗೆ ಕಂಡು ಅವನಿಗೆ ಅಸೂಯೆ ಆಯಿತು. ಹೇಗಾದರೂ ಮಾಡಿ ಅಗಸನನ್ನು ಬಡವನನ್ನಾಗಿ ಮಾಡಬೇಕು ಎಂದು ಅವನು ಯೋಚಿಸಿದ. ಆ ಊರಿನ ರಾಜನ ಬಳಿ ಕಂದು ಬಣ್ಣದ ಆನೆಯೊಂದಿತ್ತು. ಆದರೆ ರಾಜನಿಗೆ ಬಿಳಿಯ ಆನೆಯ ಮೇಲೆ ತುಂಬಾ ವ್ಯಾಮೋಹ. “ನನ್ನ […]