ಎಲ್ಲರೂ ಸಹೋದರರು

ಬೋಧ ಕಥೆ - 0 Comment
Issue Date : 05.02.2014

ಸಾಮಾಜಿಕ ಕಾರ್ಯ ಮಾಡುತ್ತಿರುವಾಗಲೂ ಹಲವರ ಮನಸ್ಸಿನಲ್ಲಿ ತನ್ನವರು ಬೇರೆಯವರು ಎಂಬ ಭಾವನೆ ಇರುತ್ತದೆ. ಈ ಸಂಬಂಧವಾಗಿ ಆರ್.ಎಸ್.ಎಸ್.ನ ಮುಖ್ಯಸ್ಥರಾಗಿದ್ದ ಶ್ರೀ ಗುರೂಜಿಯವರ ಜೀವನದ ಒಂದು ಘಟನೆ ನಮ್ಮ ದೃಷ್ಟಿಕೋನ ಹೇಗಿರಬೇಕೆಂದು ತಿಳಿಸುತ್ತದೆ. ಒಮ್ಮೆ ಗುರೂಜಿಯವರು ಪ್ರತಿಷ್ಠಿತ ಸಜ್ಜನರೊಬ್ಬರ ಭೇಟಿಗಾಗಿ ಹೋದರು. ಅವರೊಂದಿಗೆ ಕೆಲವರು ಸ್ಥಾನೀಯ ಕಾರ್ಯಕರ್ತರು ಇದ್ದರು. ಭೇಟಿ ಮುಗಿಸಿ ಹೊರಡುತ್ತಿದ್ದಂತೆ ಒಬ್ಬ ಕಾರ್ಯಕರ್ತರು ಆ ಸಜ್ಜನರನ್ನು ಉದ್ದೇಶಿಸಿ,  ನಾಳೆ ಶ್ರೀ ಗುರೂಜಿಯವರು ನಮ್ಮ ಮನೆಗೆ ಭೋಜನಕ್ಕಾಗಿ  ಬರುವವರಿದ್ದಾರೆ. ತಾವೂ ನಮ್ಮ ಮನೆಗೆ ಬರಬೇಕೆಂದು ವಿನಂತಿ ಎಂದು […]

ಬಂಧಮುಕ್ತಿ

ಬೋಧ ಕಥೆ - 0 Comment
Issue Date : 04.02.2014

ಸಂತ ರವಿಶಂಕರ್ ಮಹಾರಾಜರು ಗುಜರಾತಿನ ಪ್ರಸಿದ್ಧ ಸಮಾಜ ಸುಧಾರಕ ಸಂತರು. ಜನರನ್ನು ವ್ಯಸನಮುಕ್ತರಾಗಿಸಲು ಮೂಲೆ ಮೂಲೆಗೂ ಪ್ರವಾಸ ಮಾಡಿ ಪ್ರವಚನ ಮಾಡುತ್ತಿದ್ದರು. ಸ್ವಾಮಿ, ಏನೆಲ್ಲಾ ಪ್ರಯತ್ನ ಮಾಡಿದರೂ ನಶೆ ನನ್ನನ್ನು ಬಿಡದು. ನನಗೆ ದಾರಿ ತೋರಿಸಿ ಎಂದೊಬ್ಬ ಅವರನ್ನು ಬೇಡಿದನು . ಸಂತರು ಅವನನ್ನು ಮರುದಿನ ಬರಹೇಳಿದರು. ಮರುದಿನ ಅವನು ಬಂದಾಗ ಸಂತರು ಕಲ್ಲಿನ ಕಂಬವೊಂದನ್ನು ಗಟ್ಟಿಯಾಗಿ ತಬ್ಬಿನಿಂತಿದ್ದರು. ಬಂದವನು ತನಗೆ ಉಪದೇಶ ಮಾಡಿರೆಂದಾಗ ಸಂತರು ನಾನು ಕುಳಿತುಕೊಂಡರೆ ಉಪದೇಶ ಮಾಡಬಲ್ಲೆ ಆದರೆ ಈ ಕಂಬ ಹೇಗೆ […]

ಅನ್ಯಾಯದ ಗಳಿಕೆಗೆ ಆಸೆ ಪಡದವರು

ಬೋಧ ಕಥೆ - 0 Comment
Issue Date : 03.02.2014

ಇಸವಿ 1954: ಸೋವಿಯತ್ ರಷ್ಯಾದ ಆಗಿನ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ನಿಕೇತಾ ಕ್ರುಶ್ಚೇವ್ ಅವರು ರಾಷ್ಟ್ರದ ಪ್ರಧಾನಿ ಬುಲ್ಗಾನಿನ್ ಜತೆಯಲ್ಲಿ ಭಾರತದ ಪ್ರವಾಸಕ್ಕಾಗಿ ಬಂದಾಗಿನ ಒಂದು ಪ್ರಸಂಗ. ಕ್ರುಶ್ಚೇವ್ ಅವರು ತಮ್ಮ ಒಂದು ಪ್ಯಾಂಟನ್ನು ಒಗೆದು ಇಸ್ತ್ರಿಮಾಡಿ ಕೊಡುವುದಕ್ಕಾಗಿ ಓರ್ವ ಮಡಿವಾಳನಿಗೆ ಕೊಟ್ಟಿದ್ದರು. ಒಗೆಯುವ ಮೊದಲು ಮಡಿವಾಳ ಪ್ಯಾಂಟಿನ ಜೇಬಿಗೆ ಕೈ ಹಾಕಿದಾಗ ಆತನಿಗೆ ಅದರಲ್ಲಿ ರೂ. 400 ಬೆಲೆಯ ನೋಟುಗಳು ಸಿಕ್ಕವು. ಆತ ಆ ಕೂಡಲೇ ಆ ಹಣದ ಸಹಿತ ವಾಪಸ್ ಬಂದು, ಕುಶ್ಚೇವ್ ಅವರಿಗೆ […]

ನಾಯಕತ್ವದ ಲಕ್ಷಣ

ಬೋಧ ಕಥೆ - 0 Comment
Issue Date : 01.02.2014

ಬಾಹ್ಯಾಕಾಶ ನೌಕೆ ಎಸ್.ಎಲ್.ವಿ. 3ರ ಉಡಾವಣೆಗಾಗಿ ವಿಜ್ಞಾನಿಗಳ ತಂಡ ಅವಿರತ ಪ್ರಯತ್ನ ನಡೆಸಿತ್ತು. ಹೆಮ್ಮೆಯ ವಿಜ್ಞಾನಿ ಡಾ|| ಏ.ಪಿ.ಜೆ.ಅಬ್ದುಲ್ ಕಲಾಂ ಮತ್ತವರ ತಂಡ ಇದರಲ್ಲಿ ತೊಡಗಿತ್ತು. ರಾತ್ರಿ ಹಗಲೆನ್ನದೆ ದುಡಿದ ವಿಜ್ಞಾನಿಗಳ ತಂಡ ನೌಕೆಯ ಉಡಾವಣೆಯ ದಿನ ನಿಗದಿಪಡಿಸಿತು. ಅಂದು 1979ರ ಆಗಸ್ಟ್ 10. ಮುಂಜಾನೆ 7.58ಕ್ಕೆ ಎಸ್.ಎಲ್.ವಿ-3 ಬಾಹ್ಯಾಕಾಶಕ್ಕೆ ಚಿಮ್ಮಿತು. ಎಲ್ಲರ ಸಂತೋಷ ಹೇಳತೀರದು. ಆದರೆ ಧುತ್ತೆಂದು ಆಘಾತ ಎರಗಿತು. ಸ್ವಲ್ಪ ಹೊತ್ತಿನಲ್ಲೇ ನೌಕೆ ನಿಯಂತ್ರಣ ತಪ್ಪಿತು. ವಿಜ್ಞಾನಿಗಳ ಮನಸ್ಸು ದುಗುಡದಿಂದ ಮುಸುಕಾಯಿತು. ಆಗ ಇಸ್ರೋ […]

ಮನವು ಶ್ರೀಮಂತವಾದಲ್ಲಿ ಸೇವೆಗೆ ಹಲವು ದಾರಿ

ಬೋಧ ಕಥೆ - 0 Comment
Issue Date : 31.01.2014

ಮುತ್ತು ಮತ್ತು ಗೀತಾ ಅವರದು ಚಿಕ್ಕ ಚೊಕ್ಕ ಸಂಸಾರ. ಉತ್ತರ ಚೆನ್ನೈನಲ್ಲಿನ ಫುಲಿಯಾತೋಪ್ ಪ್ರದೇಶದಲ್ಲಿ ವಾಸಿಸುವ ಈ ದಂಪತಿಗಳಿಗೆ ಇರುವವಳು ಆರತಿಗೊಬ್ಬಳು ಮಗಳು ಮಾತ್ರ. ಮುತ್ತು ಓರ್ವ ಟೈಲರ್. ಪ್ರಾಥಮಿಕ ಶಾಲಾ ಶಿಕ್ಷಣಕ್ಕಿಂತ ಹೆಚ್ಚು ಓದಿದವರಲ್ಲ. ಗೀತಾ ಓದಿರುವುದು 8ನೇ ತರಗತಿವರೆಗೆ ಮಾತ್ರ. ಸ್ವತಃ ಓರ್ವ ಗೃಹಿಣಿಯಾಗಿರುವ ಶ್ರೀಮತಿ ಗೀತಾ ತನ್ನ ಮನೆಯಲ್ಲಿ ಇನ್ನೂ ಹದಿನೈದು ಗೃಹಿಣಿಯರಿಗೆ ನಿಶ್ಶುಲ್ಕವಾಗಿ ಹೊಲಿಗೆಯನ್ನು ಕಲಿಸುತ್ತಿದ್ದಾರೆ. ಆ ಮಹಿಳೆಯರೆಲ್ಲರ ಗಂಡಂದಿರು ಚೆನ್ನೈ ಮಹಾನಗರಪಾಲಿಕೆಯಲ್ಲಿ ಸಫಾಯಿ ಕರ್ಮಚಾರಿಗಳು. ಇದಲ್ಲದೆ ಕೂಲಿಯಾಳುಗಳು ಅಥವಾ ರಿಕ್ಷಾವಾಲಾಗಳಾಗಿರುವವರು […]

ದಾನ ಚಿಂತಾಮಣಿ

ಬೋಧ ಕಥೆ - 0 Comment
Issue Date : 30.01.2014

ಮಹಾಕವಿ ಮಾಘ ಸಂಸ್ಕೃತದ ಹಿರಿಯ ಕವಿ. ಆತ ಕೊಡುಗೈ ದಾನಿ ಎಂದೇ ಪ್ರಖ್ಯಾತ. ಆತನ  ಮನೆಗೆ ಹೋದವರು ಬರಿಗೈಯಲ್ಲಿ ಹಿಂದಿರುಗುವುದಿಲ್ಲ ಎಂದೇ ಜನರ ನಂಬಿಕೆ. ಹೀಗೆ ಬಂದವರಿಗೆಲ್ಲಾ ದಾನ ಮಾಡುತ್ತಲೇ ಮಾಘ ಬರಿಗೈಯವನಾದ. ಇಷ್ಟಾದರೂ ದಾನಗುಣ ಮಾತ್ರ ಆತನಿಂದ ದೂರವಾಗಲಿಲ್ಲ. ಒಂದು ರಾತ್ರಿ ಬಡವನೊಬ್ಬ  ಮಾಘನ ಮನೆ ಬಾಗಿಲು ತಟ್ಟಿದ. ತನ್ನ ಮಗಳ ಮದುವೆಗಾಗಿ ಏನಾದರೂ ಕೊಡಿ ಎಂದು ಬೇಡಿದ. ಕೊಡಲು ಏನೂ ಇಲ್ಲದ ಮಾಘ ಚಿಂತೆಗೊಳಗಾದ. ಏನೋ ಹೊಳೆದು  ಒಳಮನೆಗೆ ಓಡಿದ. ಮಲಗಿದ್ದ ತನ್ನ ಹೆಂಡತಿಯ […]

ಬೇಡಲು ಅಲ್ಲ; ಕೊಡಲು ಬಂದಿರುವೆ

ಬೋಧ ಕಥೆ - 0 Comment
Issue Date : 29.01.2014

ಗುಜರಾತಿನ ಸೌರಾಷ್ಟ್ರದಲ್ಲಿ ಸತತ ಮೂರುವರ್ಷಗಳಿಂದ ಭೀಕರ ಬರಗಾಲ. ಜನ ಕಂಗಲಾಗಿದ್ದರು. ಆಸುಪಾಸಿನ ಜನ ಅಲ್ಲಲ್ಲಿ ‘ಸುಖಡಿ’ (ತುಪ್ಪ – ಹಿಟ್ಟಿನಿಂದ ಮಾಡಿದ ಆಹಾರ – ರೊಟ್ಟಿ) ಸಂಗ್ರಹಿಸಿ ಕೊಡುವ ಯೋಜನೆ ಹಾಕಿದ್ದರು. ಗುಜರಾತಿನ ಬೇರೆ ಬೇರೆ ಪಟ್ಟಣಗಳ ಜನರು ಪರಿಹಾರದಲ್ಲಿ ತೊಡಗಿದರು.  ಕಾರ್ಯಕರ್ತರ ಕರೆಗೆ ಸ್ಪಂದಿಸಿದರು. ಸುಖಡಿ ರಾಶಿರಾಶಿಯಾಗಿ ಬಂದು ಬೀಳತೊಡಗಿತು. ಇಂಥ ಸುಖಡಿ ಸಂಗ್ರಹ ಕೇಂದ್ರದೆದುರು ಭಿಕಾರಿ ಮುದುಕಿಯೊಬ್ಬಳು ಬಂದಳು. ಈಕೆ ಭಿಕ್ಷೆ ಬೇಡಲು ಬಂದಿರಬಹುದೆಂದು ಅಲ್ಲಿದ್ದ ಸ್ವಯಂಸೇವಕರು ಯೋಚಿಸಿದರು. ‘ಅಮ್ಮಾ, ಇಲ್ಲೇಕೆ ಬಂದಿರುವಿ? ಇವು […]

ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ

ಬೋಧ ಕಥೆ - 0 Comment
Issue Date : 28.01.2014

ಶ್ರೀ ಓಂ ದತ್ತ ಶರ್ಮರಿಗೆ ಈಗ 68. ನ್ಯೂಯಾರ್ಕ್ ನಲ್ಲಿ ಓರ್ವ ಟ್ಯಾಕ್ಸಿ ಚಾಲಕರಾಗಿ ಜೀವನ ನಿರ್ವಹಣೆ. ಪತ್ನಿ ಕೃಷ್ನಾ ನ್ಯೂಯಾರ್ಕಿನ ಬೆಲ್ಲವ್ಯೂ ಹಾಸ್ಪಿಟಲ್ ಸೆಂಟರ್ ನಲ್ಲಿ ಓರ್ವ ನರ್ಸ್. ಅಮೆರಿಕೆಯಂಥ ದುಬಾರಿ ದೇಶದಲ್ಲಿ ಈ ದಂಪತಿಗಳಿದ್ದು ಅತ್ತಂತ ಕಟ್ಟುನಿಟ್ಟಾದ ಮಿತವ್ಯಯದ ಸರಳ ಬದುಕು. ಸ್ವಂತಕ್ಕೆ ಖರ್ಚು ಮಾಡುವುದಕ್ಕಿಂತ ಉಳಿತಾಯಕ್ಕೆ ಮೊದಲ ಆದ್ಯತೆ– ವಾರಾಂತ್ಯ ವಿಹಾರವಿಲ್ಲ. ಮಕ್ಕಳಿಗೆ ಹೊಸ ಉಡುಪು ಖರೀದಿಸುವುದೂ ಕಡಿಮೆ. ಮಕ್ಕಳು ಶಾಲೆಯಲ್ಲಿರುವಾಗ ಕ್ಯಾಂಟಿನ್ ಗೆ ಹೋದರೆ ಖರ್ಚು ಹೆಚ್ಚಾದೀತೆಂದು ತಾಯಿ ಕೃಷ್ಣಾ ಕಷ್ಟವಾದರೂ ಮನೆ […]

ಕುಲವಂ ನಾಲಗೆ ಅರುಹಿತ

ಬೋಧ ಕಥೆ - 0 Comment
Issue Date : 22.01.2014

ಒಮ್ಮೆ ರಾಜ ವಿಕ್ರಮಾದಿತ್ಯ ಬೇಟೆಗೆಂದು ಕಾಡಿಗೆ ಹೋಗಿದ್ದ. ಮಂತ್ರಿಗಳೂ ಸೇನಾಧಿಪತಿಗಳೂ ಕೆಲವು ಸೈನಿಕರೂ ಆತನೊಡನಿದ್ದರು. ಬೇಟೆಯ ಉತ್ಸಾಹದಲ್ಲಿದ್ದ ರಾಜ ಕಾಡಿನಲ್ಲಿ ತನ್ನ ಪರಿವಾರದಿಂದ ಬೇರಾದ. ಎಷ್ಟೋ ಹೊತ್ತು ಕಳೆಯಿತು. ಪರಸ್ಪರ ಹುಡುಕಾಟ ನಡೆದೇ ಇತ್ತು. ಅಷ್ಟರಲ್ಲಿ ವಿಕ್ರಮಾದಿತ್ಯ ಮರದ ನೆರಳಿನಲ್ಲಿ ಕುಳಿತಿದ್ದ ಸನ್ಯಾಸಿಯೊಬ್ಬನನ್ನು ಕಂಡ. ಆತ ಕುರುಡ, ಆದರೂ ಮಾಹಿತಿ ದೊರೆಯಬಹುದೆಂದು ಮಹಾರಾಜ ಅಯ್ಯಾ, ಇಲ್ಲಿಂದ ಯಾರಾದರೂ ಹೋದದ್ದನ್ನು ನೀವು ನೋಡಿರುವಿರಾ? ಎಂದು ಕೇಳಿದ. ಆಗ ಆ ಕುರುಡ ಸನ್ಯಾಸಿ ಮಹಾರಾಜರೇ, ಮೊದಲು ನಿಮ್ಮ ಸೇವಕ, ಆಮೇಲೆ […]

ಭಿಕ್ಷುಕನ ಭಿಕ್ಷೆ

ಬೋಧ ಕಥೆ - 0 Comment
Issue Date : 21.01.2014

ವಿದೇಶೀಯರ ದಾಸ್ಯದಲ್ಲಿ ನಮ್ಮ ದೇಶ ನಲುಗುತ್ತಿದ್ದ ಕಾಲವದು. ಹಳ್ಳಿಯೊಂದರ ಯುವಕರು ದೇಶದ ದಾಸ್ಯಮುಕ್ತಿಗಾಗಿ ಏನಾದರೂ ಮಾಡಬೇಕೆಂದು ಟೊಂಕಕಟ್ಟಿದ್ದರು. ದಾಸ್ಯಮುಕ್ತಿಯ ಸಂಘರ್ಷಕ್ಕಾಗಿ ಅವರಿಗೆ ಸಂಪನ್ಮೂಲದ ಅಗತ್ಯವಿತ್ತು. ಅದಕ್ಕಾಗಿ ಹಳ್ಳಿಯಲ್ಲಿ ಹಣಸಂಗ್ರಹ ಮಾಡಲು ಮನೆ ಮನೆ ತಿರುಗುತ್ತಿದ್ದರು. ಓರ್ವ ಭಿಕ್ಷುಕ ಅವರನ್ನು ಹಿಂಬಾಲಿಸುತ್ತಿದ್ದ. ಈ ಯುವಕರು ಅವನನ್ನು ಗಮನಿಸಲೇ ಇಲ್ಲ. ಸಾಯಂಕಾಲವಾಯಿತು.  ಯುವಕರು ಒಂದೆಡೆ ಸೇರಿದರು. ತಾವು ಸಂಗ್ರಹಿಸಿದ ಹಣ – ವಸ್ತುಗಳನ್ನು ಲೆಕ್ಕ ಮಾಡುತ್ತಿದ್ದರು. ಆ ಭಿಕಾರಿಯೂ ಅಲ್ಲಿ ಬಂದ. ಯುವಕರು ಅವನನ್ನು ತಡೆದರು. ಇಷ್ಟು ಹೊತ್ತು ನಾನು […]