ಫೇಸ್‌ಬುಕ್ ಗೆಳೆಯನಿಂದ 1.30 ಕೋಟಿ ಪಂಗನಾಮ!

ವಿಶೇಷ ಸುದ್ದಿಗಳು - 0 Comment
Issue Date : 28.07.2014

ಸ್ನೇಹಿತರನ್ನು ಹೆಚ್ಚಿಸಿಕೊಳ್ಳುವುದಕ್ಕೆ, ಸಂಬಂಧಗಳ ನಡುವೆ ಸೌಹಾರ್ದತೆ ಸೃಷ್ಟಿಸುವುದಕ್ಕೆ ಹುಟ್ಟಿಕೊಂಡ ಹಲವು ಸಾಮಾಜಿಕ ಜಾಲತಾಣಗಳು ಇಂದು ದುರ್ಬಳಕೆಯೇ ಆಗುತ್ತಿವೆ. ಅದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆಯನ್ನು ನೋಡಿದ್ದೇವೆ. ಇತ್ತೀಚೆಗೆ ಫೇಸ್‌ಬುಕ್ ಗೆಳೆಯನೊಬ್ಬನಿಂದ ಬರೋಬ್ಬರಿ 1.30 ಕೋಟಿ ರೂ. ಹಣವನ್ನು ಕಳೆದುಕೊಂಡ ಮಹಿಳೆಯೊಬ್ಬಳ ಕತೆ ಸಾಮಾಜಿಕ ಜಾಲತಾಣಗಳ ದುರ್ಬಳಕೆಗೆ ತಾಜಾ ಉದಾಹರಣೆ. ಬೀನಾ ಬೋರ್ ಥಾಂಕೂರ್ ಡೆಹ್ರಾಡೂನಿನಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದವಳು. ಫೇಸ್‌ಬುಕ್ಕಿನಲ್ಲಿ ಗೆಳೆಯನಾದ ರಿಚರ್ಡ್ ಆ್ಯಂಡರ್‌ಸನ್ ಎಂಬುವವನೊಂದಿಗೆ ಆಗಾಗ ಚಾಟಿಂಗ್ ನಡೆಸುತ್ತಿದ್ದಳು. ತಾನು ಸೇವಾಮನೋಭಾವ ಹೊಂದಿದ್ದು, ಕಷ್ಟದಲ್ಲಿರುವವರಿಗೆ ಕೈಲಾದಷ್ಟು ನೆರವಾಗಲು ಬಯಸುತ್ತೇನೆ […]

ವಾಸನೆ ಗ್ರಹಿಕೆಯಲ್ಲಿ ಆನೆಗಳಿಗೇ ಮೊದಲ ಸ್ಥಾನ!

ವಾಸನೆ ಗ್ರಹಿಕೆಯಲ್ಲಿ ಆನೆಗಳಿಗೇ ಮೊದಲ ಸ್ಥಾನ!

ವಿಶೇಷ ಸುದ್ದಿಗಳು - 0 Comment
Issue Date : 28.07.2014

ವಾಸನೆ ಗ್ರಹಿಸುವುದರಲ್ಲಿ ಮನುಷ್ಯನಿಗಿಂತ ಪ್ರಾಣಿಗಳೇ ಮೇಲು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದರಲ್ಲೂ ನಾಯಿಗಳು ವಾಸನೆಯನ್ನು ಗ್ರಹಿಸುವಲ್ಲಿ ಅತ್ಯಂತ ಸೂಕ್ಷ್ಮತೆಯನ್ನು ಹೊಂದಿವೆ ಎಂಬ ಕಾರಣಕ್ಕಾಗಿಯೇ ತನಿಖಾ ದಳಗಳಲ್ಲಿಯೂ ನಾಯಿಯನ್ನು ಇಟ್ಟುಕೊಳ್ಳಲಾಗುತ್ತದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿರುವ ಪ್ರಕಾರ ನಾಯಿ ಮತ್ತು ಇನ್ನಿತರ ಪ್ರಾಣಿಗಳಿಗಿಂತ ಆನೆಯೇ ವಾಸನೆಯನ್ನು ಗ್ರಹಿಸುವಲ್ಲಿ ಹೆಚ್ಚು ಸಾಮರ್ಥ್ಯ ಪಡೆದಿದೆಯಂತೆ. ನಾಯಿಗಳಿಗಿಂತ 5 ಪಟ್ಟು ಹೆಚ್ಚು ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಇವು ಪಡೆದಿವೆ. ಅದರಲ್ಲೂ ಆಫ್ರಿಕನ್ ಆನೆಗಳಲ್ಲಿ ಈ ಶಕ್ತಿ ಇನ್ನೂ ಹೆಚ್ಚಂತೆ!

ಚಂದ್ರನ ಮೇಲೂ ಕಣ್ಣಾಮುಚ್ಚಾಲೆ ಆಟ!

ಚಂದ್ರನ ಮೇಲೂ ಕಣ್ಣಾಮುಚ್ಚಾಲೆ ಆಟ!

ವಿಶೇಷ ಸುದ್ದಿಗಳು - 0 Comment
Issue Date : 28.07.2014

ನೀಲಿ ಆಕಾಶದಲ್ಲಿ ತೇಲುವ ಬೆಳ್ಳಿ ಬಟ್ಟಲು ಚಂದ್ರನನ್ನು ಇಷ್ಟಪಡದವರ್ಯಾರು? ಚಿಕ್ಕ ಮಕ್ಕಳಿಗಂತೂ ಅವನು ಅಚ್ಚರಿಯ ಆಗರ! ಊಟ ಮಾಡಿಸುವಾಗ, ಕತೆ ಹೇಳುವಾಗ, ನಿದ್ದೆಗೆ ಹೊರಟಾಗ… ಹೀಗೆ ಹಲವು ಸನ್ನಿವೇಶಗಳಲ್ಲಿ ಚಂದಮಾಮನ ಪ್ರಸ್ತಾಪವಾದರೆ ಮಾತ್ರ ಮಕ್ಕಳಿಗೂ ಸಮಾಧಾನ! ಭೂಮಿಯ ನೈಸರ್ಗಿಕ ಉಪಗ್ರಹವಾಗಿ, ಸೂರ್ಯನ ಬೆಳಕನ್ನು ಹೀರಿಕೊಂಡು ರಾತ್ರಿ ಬೆಳದಿಂಗಳೂಟ ಬಡಿಸುವ ಚಂದ್ರನ ಅಧ್ಯಯನವೆಂದರೆ ಖಗೋಳ ವಿಜ್ಞಾನಿಗಳಿಗೂ ನೆಚ್ಚಿನ ವಿಷಯವೇ. ಚಂದ್ರನಲ್ಲಿ ಭೂಮಿಯಲ್ಲಿರುವಂತೆ ಕಲ್ಲು, ಮಣ್ಣುಗಳಿವೆ, ನೂರಾರು ಮೈಲಿ ಉದ್ದದ ಕಂದಕಗಳಿವೆ, ನೀರಿನ ಕುರುಹೂ ಕಾಣುತ್ತಿದೆ, ಆಮ್ಲಜನಕವೂ ಇರಬಹುದು… ಒಟ್ಟಿನಲ್ಲಿ […]

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಚಿಂತನ - 0 Comment
Issue Date : 28.07.2014

‘ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು’ ಎನ್ನುವ ಮಾತನ್ನು ಪುರಂದರದಾಸರು ತಮ್ಮ ಕೀರ್ತನೆಯೊಂದರಲ್ಲಿ ಹೇಳಿದ್ದಾರೆ. ತಿಳಿಗೇಡಿಗಳು ಮತ್ತು ತಿಳಿದವರ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ದಾಸವರೇಣ್ಯರ ನುಡಿ ಸತ್ಯವೆನ್ನುವುದು ಮನವರಿಕೆಯಾಗುತ್ತದೆ.ಅಜ್ಞಾನಿಗಳೆಂದರೆ ಯಾವುದೇ ವಿಷಯದ ಕುರಿತು ಅರಿವು ಇಲ್ಲದವರು. ತಿಳಿಗೇಡಿಗಳಾಗಿ ಇರುವುದಲ್ಲದೆ, ತಮಗೇನೂ ಗೊತ್ತಿಲ್ಲವೆಂಬ ಸಂಗತಿ ಕೂಡ ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಅನೇಕ ವಿಷಯಗಳ ಬಗೆಗೆ ಅವರು ತಪ್ಪು ಮಾಹಿತಿ ನೀಡಿ ಇತರರ ದಾರಿ ತಪ್ಪಿಸುವ ಸಾಧ್ಯತೆ ಧಾರಾಳವಾಗಿದೆ. ಆದ್ದರಿಂದ ಇಂತಹ ವ್ಯಕ್ತಿಗಳ ಜತೆ […]

ಸತ್ಯನಿಷ್ಠ ಸತ್ಯಕಾಮ

ಬೋಧ ಕಥೆ - 0 Comment
Issue Date : 28.07.2014

ತುಂಬಾ ದಿನಗಳ ಹಿಂದೆ ಸತ್ಯಕಾಮ ಎಂಬ ಹುಡುಗನಿದ್ದ. ಅವನಿಗಿನ್ನೂ ಚಿಕ್ಕ ವಯಸ್ಸು, ಏನೂ ತಿಳಿಯದ ಹುಡುಗ ಅವನು.  ಸ್ವಲ್ಪ ಕಾಲ ಕಳೆದನಂತರ ಅವನಿಗೆ ವಿದ್ಯಾಭ್ಯಾಸ ಮಾಡಬೇಕು, ಬ್ರಹ್ಮಚರ್ಯ ಪಾಲನೆ ಮಾಡುತ್ತಾ ಗುರುಗಳನ್ನು ಸೇವಿಸಿ ‘ಬ್ರಹ್ಮ’ವನ್ನು ಸಾಧಿಸಬೇಕೆಂಬ ಇಚ್ಛೆಯುಂಟಾಯಿತು.  ಮನಸ್ಸಿನಲ್ಲಿ ಇಚ್ಛೆಯಾದುದೇ ತಡ-ಮರುಕ್ಷಣದಲ್ಲಿ ತಾಯಿಯ ಬಳಿ ಹೋಗಿ ಕೇಳಿದ. “ಅಮ್ಮಾ, ನನಗೆ ಗುರುಕುಲಕ್ಕೆ ಹೋಗಬೇಕು ಎಂದು ಆಸೆಯಾಗುತ್ತಿದೆ, ಅಲ್ಲಿ ಹೋಗಿ ಗುರುಗಳನ್ನು ಸೇವಿಸಿ ಬ್ರಹ್ಮವಿದ್ಯೆ ಕಲಿಯಬೇಕೆನ್ನಿಸುತ್ತಿದೆ.  ಆದರೆ ಯಾವುದೇ ಗುರುವಿನ ಆಶ್ರಮಕ್ಕೆ ಪ್ರವೇಶಿಸಬೇಕಾದರೂ ಮೊದಲು ಬ್ರಾಹ್ಮಣ-ಬ್ರಹ್ಮವಿದ್ಯೆ ಸಾಧಿಸಲು ಯೋಗ್ಯತೆ […]

‘ಆಡಳಿತ’ ಅಂದರೆ ಇದು !

ಬೋಧ ಕಥೆ - 0 Comment
Issue Date : 26.07.2014

 “ಅಯ್ಯೋ ದೇವರೆ ! ಮಾಧವ, ಇದೇನು ನೀನು  ಹೇಳುತ್ತಿರುವೆ?  ನಾನು ನಿನ್ನಿಂದ ಇದನ್ನು ಅಪೇಕ್ಷಿಸಿರಲಿಲ್ಲ.” “ಏನು ಅಮ್ಮಾ? ತಾವು ಯಾವ ವಿಷಯದ ಬಗ್ಗೆ ಹೇಳುತ್ತಿದ್ದೀರಾ? ಪ್ರತಿದಿನ ಸಾವಿರಾರು ಚಿಕ್ಕ-ದೊಡ್ಡ ಪ್ರಕರಣಗಳನ್ನು ತೀರ್ಮಾನಿಸಬೇಕಾಗುತ್ತದೆ.  ರಾಜ್ಯಕಾರ್ಯದಲ್ಲಿ ನಾನೇನೂ ವಿಶಾರದನಲ್ಲ. ನನ್ನಿಂದ ಎಷ್ಟೋ ಸಂಗತಿಗಳು ಮರೆತುಹೋಗುತ್ತವೆ.  ಆದ್ದರಿಂದಲೇ ನೀವು ಯಾವ ವಿಷಯವನ್ನು  ಕುರಿತು ಕೇಳುತ್ತಿದ್ದೀರೆಂದು ತಿಳಿಸಿದಲ್ಲಿ, ನನ್ನನ್ನು  ನಾನು ಸುಧಾರಿಸಿಕೊಳ್ಳುವೆ.” ತಾಯಿ ಧ್ವನಿ ಏರಿಸಿದರು : “ನೀನು ನಿನ್ನ ಸೋದರಮಾವನಿಗೆ ಅಂದರೆ ನನ್ನ ಸ್ವಂತ  ತಮ್ಮನಿಗೆ  ಜಹಗೀರನ್ನು  ಜಫ್ತು ಮಾಡುವುದಾಗಿ ಬೆದರಿಸಿದ್ದೀಯಾ? […]

ದೇಶ ಸೇವೆ

ಕಥೆಗಳು - 0 Comment
Issue Date : 25.07.2014

“ಸೈನಿಕನೇ ದೇಶಸೇವೆ ಮಾಡಬಲ್ಲರೇನು? ಸೈನ್ಯಕ್ಕೆ ಸೇರಿ ಕತ್ತಿ ಗುರಾಣಿಗಳನ್ನು ಹಿಡಿದರೆ ಮಾತ್ರ ದೇಶಸೇವೆ ಏನು? ಅದು ದೇಶ ಸೇವೆ ನಿಜ.  ಅದರಿಂದ ಮಾತ್ರ ದೇಶಸೇವೆಯಲ್ಲ.  ದೇಶಸೇವೆ ಮಾಡುವುದು ಎಲ್ಲ ದೇಶೀಯನ ಕಾರ್ಯ.  ಮಾತೆಯ ಪುತ್ರನ ಕರ್ತವ್ಯ ಪ್ರತಿಯೋರ್ವ ತನ್ನ ತನ್ನ ಉದ್ಯಮ ಮಾಡುತ್ತಲೇ, ಅದರಿಂದಲೇ, ಆಯಾ ಕ್ಷೇತ್ರದಲ್ಲಿಯೇ ದೇಶಕ್ಕೆ ಉನ್ನತ, ತ್ತಮ ಸೇವೆ ಸಲ್ಲಿಸಬಲ್ಲ.  ದೇಶವನ್ನು ರಕ್ಷಿಸಬಲ್ಲ.  ಆಪತ್ತಿನಲ್ಲಿ ಆತ್ಮವನ್ನೊಡ್ಡುವ ಆತ್ಮೀಯತೆ ದೇಶದ ಬಗ್ಗೆ ಅವನಿಗಿದ್ದರೆ ಸಾಕು.  ಇದು ಎಲ್ಲರಿಗೂ ಬೇಕು.  ಸೈನಿಕರಲ್ಲಿ ಮಾತ್ರವಿದ್ದರೆ ಸಾಲದು.  ಕೇವಲ […]

ಸೇವೆಯೇ ಬದುಕಿನ ಉಸಿರಾದಾಗ

ಬೋಧ ಕಥೆ - 0 Comment
Issue Date : 25.07.2014

ಬ್ರಿಟಿಷರು ‘ಸಾತ್ವಿಕ ಚೌಕಡೀ’ ಎಂದು ಕರೆಯುತ್ತಿದ್ದ ಸ್ವಾಮಿ ಶ್ರದ್ಧಾನಂದರು, ಮೋತೀಲಾಲ ನೆಹರು, ಪಂಡಿತ ಮದನ ಮೋಹನ ಮಾಳವೀಯರು ಮತ್ತು ವೆಂಕಟೇಶ ನಾರಾಯಣ ತಿವಾರಿ ಅವರು ಅಂದು ಗುಜರಾನ್‍ವಾಲಾದಲ್ಲಿನ  ಖಾಲಸಾ ಕಾಲೇಜನ್ನು ನೋಡಲು ಹೋಗಿದ್ದರು. ಸೈನಿಕ ಆಡಳಿತದ ದಿನಗಳಲ್ಲಿ ಆಂಗ್ಲ ಸೈನಿಕರು  ಆ ಕಾಲೇಜಿನ  ಮೇಲೆ ವಿಮಾನದಿಂದ  ಗುಂಡಿನ ಮಳೆ ಸುರಿಸಿದ್ದರು. ಎಂದೇ ಅದು ದೇಶಭಕ್ತರಿಗೆ ಪುಣ್ಯಕ್ಷೇತ್ರವೆನಿಸಿತ್ತು. ಜೂನ್ ತಿಂಗಳ ಉರಿಬೇಸಿಗೆಯ  ಮಧ್ಯಾಹ್ನದ ಸಮಯ. ಸೂರ್ಯನ ಕಿರಣಗಳು ಪ್ರಖರವಾಗಿದ್ದವು. ಮತ್ತು ವಾಯುದೇವನು  ಹರತಾಳ ಮಾಡಿದಂತಿತ್ತು. ತಿವಾರಿಯವರನ್ನು ಬಿಟ್ಟು ಇತರ […]

ಗುರುವಿನ ಗುರುತು

ಚಿಂತನ - 0 Comment
Issue Date : 25.07.2014

‘ಗುರುವಃ ಬಹವಃ ಸಂತಿ ಶಿಷ್ಯ ವಿತ್ತಾಪಹಾರಕಾಃ’ಶಿಷ್ಯನ ಹಣ ಅಪಹರಿಸುವ ಗುರುಗಳು ಲೋಕದಲ್ಲಿ ಬಹುಮಂದಿ ಇರುತ್ತಾರೆ. ಆದರೆ ಶಿಷ್ಯ ಸಂತಾಪಹಾರಕಾಃ’ – ಶಿಷ್ಯನ ಸಂತಾಪವನ್ನು ಪರಿಹರಿಸುವ ಗುರು ದುರ್ಲಭ. ಈ ಮಾತನ್ನು ಶಿವ ತನ್ನ ಪತ್ನಿ ಶಿವೆ (ಉಮಾ)ಗೆ ಹೇಳಿದ್ದಾನೆ. (ಗುರುಗೀತಾ – ಸ್ಕಾಂ, ಉತ್ತರಖಂಡ 137)ಬಹುಮಂದಿ ನಕಲಿ ಗುರುಗಳೇ ಆಡಂಬರದ ವೇಷ ತೊಟ್ಟು ಎಲ್ಲೆಡೆ ಮೆರೆಯುತ್ತಾರೆ. ಅವರ ಮಿರುಗುಬಣ್ಣ ಮಿಂಚುಮಾತು – ಇವುಗಳಿಗೆ ಯಾರೂ ಮರುಳಾಗಿಬಿಡುವ ಸಾಧ್ಯತೆ ಹೆಚ್ಚು. ನಿಜದ ಗುರು – ಗುರುತನ್ನು ಅರಿವನ್ನು ಪಡೆಯಬೇಕು.ಗುರು […]

ದೇಶಕ್ಕಾಗಿ ಪ್ರಾಣತ್ಯಾಗ

ಬೋಧ ಕಥೆ - 0 Comment
Issue Date : 24.07.2014

ರಷ್ಯಾ  ಮತ್ತು  ಜಪಾನಿನ  ನಡುವೆ  ಯುದ್ಧ  ನಡೆಯುತ್ತಿದ್ದ ದಿನಗಳು  ಅವು.  ರಷ್ಯಾಗೆ ಹೋಲಿಸಿದಲ್ಲಿ  ಜಪಾನ್ ಬಹಳ ಸಣ್ಣ ದೇಶವಾಗಿತ್ತು. ರಷ್ಯಾದಲ್ಲಿ ಇನ್ನೂ ಕಮ್ಯುನಿಸ್ಟರು ಅಧಿಕಾರಕ್ಕೆ ಬಂದಿರಲಿಲ್ಲ. ಎರಡು ದೇಶಗಳಲ್ಲೂ ಅರಸೊತ್ತಿಗೆ ಇತ್ತು. ಜಪಾನಿನ ರಾಜ ಮಿಕಾಡೋ ರಷ್ಯಾದ ಆಕ್ರಮಣದ ಬಗ್ಗೆ ಯೋಚಿಸತೊಡಗಿದ. ಕೊನೆಗೆ ‘ರಷ್ಯಾದ ಹಡಗುಗಳು ನಮ್ಮ ಮೇಲೆ ಆಕ್ರಮಣ ಮಾಡುತ್ತಿವೆ. ಅವುಗಳಲ್ಲಿ ಕೆಲವನ್ನಾದರೂ ನಾವು ಮುಳುಗಿಸಿ ನಾಶಮಾಡಿದಲ್ಲಿ  ರಷ್ಯಾದ ಶಕ್ತಿಯು  ಕ್ಷೀಣಗೊಳ್ಳುವುದು’ ಎಂದು ಆತ ಯೋಚಿಸಿದ. ಅದರಂತೆ ಜಪಾನೀ ಜನತೆಗೆ ಮಿಕಾಡೋ ಈ ರೀತಿ ಕರೆ […]