ಗುರುಮನೆಯ ದೀಪ ಬೆಳಗಿದಾತ

ಗುರುಮನೆಯ ದೀಪ ಬೆಳಗಿದಾತ

ಕಥೆಗಳು - 0 Comment
Issue Date : 30.10.2015

ಆ  ಹುಡುಗ ಈಗ ದಿಕ್ಕುತೋಚದಾಗಿದ್ದ. ಗುರುವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ‘ನೀವು ಆಗಮಿಸುವವರೆಗೆ ಅಗ್ನಿ ಸಂರಕ್ಷಣೆಯ ಹೊಣೆ ನನ್ನದು, ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ’ ಆತ್ಮವಿಶ್ವಾಸ ದಿಂದ ನುಡಿದಿದ್ದ ಬಾಲಕ ಕಂಗಾಲಾಗಿದ್ದ. ಅಗ್ನಿಯ ಕಾಂತಿಯಿಲ್ಲದೆ ಆಶ್ರಮ ಮಂಕಾಗಿತ್ತು.  ಆ ಕಾಲದಲ್ಲಿ ಪದ್ಧತಿ ಹಾಗಿತ್ತು. ಋಷ್ಯಾಶ್ರಮವೆಂದರೆ ಅಲ್ಲಿನ ಯಜ್ಞಕುಂಡ ಸದಾ ಜ್ವಲಿಸುತ್ತಿರಬೇಕು. ಸಂಧ್ಯಾತ್ರಯದಲ್ಲೂ ತಪ್ಪದೇ ವಿವಿಧ ದ್ರವ್ಯ ಸಮಿತ್ತುಗಳಿಂದ ಹೋಮ ನಡೆಯಲೇಬೇಕು. ಅದು ತಪ್ಪುವಂತಿಲ್ಲ. ಅಗ್ನಿ ಆರಿದರೆ ಅನಾಹುತ ಖಂಡಿತ. ಈಗ ಆಶ್ರಮದಲ್ಲಿ ಅನಾಹುತ ಆಗಿಯೇಬಿಟ್ಟಿತ್ತು. ಯಜ್ಞಕುಂಡ […]

ಅವಸರವು ತರವಲ್ಲ

ಅವಸರವು ತರವಲ್ಲ

ಕಥೆಗಳು - 0 Comment
Issue Date : 15.10.2015

‘ಇಗೋ.. ತೆಗೆದುಕೋ ಈ ಖಡ್ಗ..’ ಕೋಪವೇ ಮೈವೆತ್ತಂತೆ ಇದ್ದ ಆ ಋಷಿಯ ಮಾತು ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಈ ಹುಡುಗ. ತನ್ನ ತಂದೆ ಯಾಕೆ ಖಡ್ಗ ಹಿಡಿದು ತೆಗೆದುಕೋ ಎನ್ನುತ್ತಿರುವರೆಂದು ಯೋಚಿಸತೊಡಗಿದ.   ‘ನಿನಗೇ ಹೇಳಿದ್ದು..’ ಮತ್ತೊಮ್ಮೆ ತಂದೆಯ ಗದರು ದನಿಕೇಳಿ ಹುಡುಗ ಬೆಚ್ಚಿಬಿದ್ದ. ಈಗ ಪ್ರತಿಕ್ರಿಯಿಸದಿದ್ದರೆ ಯಾವುದೋ ಅನಾಹುತ ಖಂಡಿತ ಎಂದು ಕೈನೀಡಿದ.   ‘ನಿನ್ನಮ್ಮನ ತಲೆ ಕಡಿದುಬಿಡು..’ ಸಿಡಿಲಿನಂತೆ ಅಪ್ಪಳಿಸಿ ಬಂತು ತಂದೆಯ ಮಾತು. ಈಗ ಆ ಹುಡುಗ ಖಂಡಿತಾ ಕಂಗಾಲಾದ. ತಂದೆಯ […]

ವ್ಯರ್ಥವಾಗದ ತಪಸ್ಸು

ವ್ಯರ್ಥವಾಗದ ತಪಸ್ಸು

ಕಥೆಗಳು - 0 Comment
Issue Date : 13.10.2015

   –  ಹಾದಿಗಲ್ಲು ಲಕ್ಷ್ಮೀನಾರಾಯಣ ಆ ಹುಡುಗ ಈಗ ಭಯದಿಂದ ನಡುಗುತ್ತಿದ್ದ. ತನ್ನ ಕಣ್ಣೆದುರೇ ತಂದೆಯ ತಲೆ ಕಡಿದು ದೇಹವನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿದ್ದನ್ನು ಕಂಡು ಮಾತು ಉಡುಗಿತ್ತವನಿಗೆ.  ರಕ್ಕಸ ಲೋಕದ ಲಂಕಾಧಿಪತಿಯ ಸೇನೆ ಅಯೋಧ್ಯೆಯನ್ನು ಮುತ್ತಿತ್ತು. ಅನಿರೀಕ್ಷಿತ ದಾಳಿಯಿಂದ ಕಂಗಾಲಾಗಿದ್ದ ಅರಸ. ರಕ್ಕಸರ ಮಾಯಾಯುದ್ಧ ಮಾನವ ಸೇನೆಯನ್ನು ಬಗ್ಗು ಬಡಿಯಿತು. ಅರಸನ ತಲೆ ಉರುಳಿತು. ಎಲ್ಲೆಲ್ಲೂ ರಕ್ತದೋಕುಳಿ – ಚೀತ್ಕಾರಗಳು. ಇದನ್ನೆಲ್ಲ ಕಣ್ಣಾರೆ ಕಂಡ ಎಳೆ ಹುಡುಗ ದಿಕ್ಕು ತೋಚದೇ ಅವಿತಿದ್ದ. ಹೇಗೋ ಕಾಡು ಸೇರಿದ್ದ. […]

ಬದುಕು ಒತ್ತೆಯಿಟ್ಟ... ಬದುಕಟ್ಟಿದ

ಬದುಕು ಒತ್ತೆಯಿಟ್ಟ… ಬದುಕಟ್ಟಿದ

ಕಥೆಗಳು - 0 Comment
Issue Date : 08.10.2015

ಆಗಸಕ್ಕೇ ರಂಧ್ರಬಿದ್ದಿದೆಯೋ ಎಂಬಂತೆ ಸುರಿವ ಮಳೆ. ನಡುನಡುವೆ ಗುಡುಗು ಸಿಡಿಲು. ಎತ್ತ ನೋಡಿದರೂ ರಭಸದಿಂದ ಹರಿವ ನೀರು. ಅದೇ ತಾನೆ ನೆಟ್ಟಿರುವ ಭತ್ತದ ಸಸಿಗಳೆಲ್ಲ ಕೊಚ್ಚಿ ಹೋಗುತ್ತಿವೆ. ಹರಿವ ನೀರಿಗೆ ಅಡ್ಡಗಟ್ಟಿ ಹಾಕುವ ಆ ಹುಡುಗನ ಪ್ರಯತ್ನಗಳೆಲ್ಲ ವಿಫಲವಾದವು. ಒಂದು ಕ್ಷಣ ಏನು ಮಾಡುವುದೆಂದೇ ತಿಳಿಯುತ್ತಿಲ್ಲ. ಈ ನಡುವೆ ಆಕಾಶ ಮತ್ತಷ್ಟು ಕಪ್ಪುಗಟ್ಟಿದೆ. ಸಾಯಂಕಾಲವೂ ಆಗಿಬಿಟ್ಟಿದೆ.  ಗುರುಕುಲದ ಗದ್ದೆಗಳ ರಕ್ಷಣೆ ಮಾಡಲೆಂದೇ ಬಂದವನು ಆತ. ಹಾಗೆ ಮಾಡೆನ್ನುವುದು ಗುರುಗಳ ವಾಕ್ಯ. ಅದನ್ನು ಮೀರಬಾರದು. ಕೇವಲ ನನಗೆ ಮಾತ್ರವಲ್ಲ […]

ಅತಿಯಲ್ಲ ಮಿತಿಯಿರಲಿ

ಅತಿಯಲ್ಲ ಮಿತಿಯಿರಲಿ

ಕಥೆಗಳು - 0 Comment
Issue Date : 22.09.2015

-ಹಾದಿಗಲ್ಲು ಲಕ್ಷ್ಮೀನಾರಾಯಣ ‘ಆಯಿತು ನಾನಿನ್ನು ಬರುತ್ತೇನೆ ನಿಮ್ಮ ಮನದ ಸತ್ಸಂಕಲ್ಪಗಳೆಲ್ಲ ಈಡೇರಲಿ…’ ಎಂದವನೇ ಆ ಪ್ರಖರ ತೇಜದ ಬಾಲಕ ಹೊರಟೇಬಿಟ್ಟ.  ‘ತಾವು ವಿದ್ಯಾಸಂಪನ್ನರು. ಕಾರಣವಿಲ್ಲದೇ ಬರುವವರಲ್ಲ. ಬಂದ ಕಾರಣವನ್ನೇ ಹೇಳದೇ ಹೊರಟುಬಿಟ್ಟಿರಲ್ಲ. ಇಲ್ಲಿ ಬಂದವರಾರೂ ಇದುವರೆಗೆ ಬರಿಗೈಯಲ್ಲಿ ತೆರಳಲಿಲ್ಲ’ ದೊರೆ ವಿನೀತನಾಗಿ ನುಡಿದ. ‘ಬೇಡುವವರಲ್ಲಿ, ಬರಿಗೈಯವರಲ್ಲಿ ಬೇಡುವುದು ಯಾಚಕನ ಲಕ್ಷಣವೇ ಅಲ್ಲ.’ ಬಂದ ಬಂದವರಿಗೆ ಮಾತ್ರವಲ್ಲ, ಬರಿದೆ ಹೋಗುವವರನ್ನು ಕರೆ ಕರೆದು ದಾನ ಮಾಡಿದ್ದ ಆ ಮಹಾರಾಜನಿಗೆ ಈ ಮಾತು ಕೇಳಿ ಆಘಾತವಾಯಿತು. ನನ್ನ ಸ್ಥಿತಿ ಆತನಿಗೆ ಹೇಗೆ […]

ತಂದೆ ತೋರಿದ ದಾರಿ

ಕಥೆಗಳು - 0 Comment
Issue Date :

-ಹಾದಿಗಲ್ಲು ಲಕ್ಷ್ಮೀನಾರಾಯಣ ಇದ್ದಕ್ಕಿದ್ದಂತೆಯೇ ಭಾರೀ ಬೆಂಕಿ ಬಂದಂತಾಯಿತು. ಎಲ್ಲೆಡೆ ಚಾಚಿ ಬರುವ ಕೆನ್ನಾಲಿಗೆ. ಆ ಉರಿಯ ಒಳಗಿಂದ ನೆಲಮುಗಿಲನ್ನು ಒಂದುಮಾಡುವ ಯಾವುದೋ ಆಕೃತಿ. ಇದನ್ನು ಕಾಣುತ್ತಿದ್ದಂತೆಯೇ ಆ ಹುಡುಗನ ಧೈರ್ಯವೆಲ್ಲ ಉಡುಗಿಹೋಯಿತು. ಗಂಟಲಾರಿತು. ಮಾತು ಹೊರಡಲಿಲ್ಲ. ಗಡಗಡ ನಡುಗತೊಡಗಿದ. ಇದೆಲ್ಲ ನನ್ನದು, ನನಗೆ ಸೇರಿದ್ದು… ಮುಟ್ಟಬಂದರೆ.. ಸುಟ್ಟು ಬೂದಿ ಆಗುತ್ತೀಯೆ… ಬರಸಿಡಿಲಂತೆ ಬಂದೆರಗಿತು ಮಾತು.  ಈಗಂತೂ ಹುಡುಗ ಕಂಗಾಲಾದ. ಈ ಸಂಪತ್ತು ನನ್ನದು.. ಆ ಮುನಿ ನನಗೆ ದಾನವಾಗಿ ಕೊಟ್ಟಿದ್ದು ಎಂಬ ಮಾತುಗಳು ಗಂಟಲಲ್ಲೇ ಉಳಿದವು. ಒಂದು […]

ಸುಖ ಬೇಡದ ಸತಿ

ಸುಖ ಬೇಡದ ಸತಿ

ಕಥೆಗಳು - 0 Comment
Issue Date : 12.09.2015

-ಹಾದಿಗಲ್ಲು ಲಕ್ಷ್ಮೀನಾರಾಯಣ ಒಂದು ಕ್ಷಣ ಏನು ಮಾಡಬೇಕೆಂಬುದೇ ಹೊಳೆಯಲಿಲ್ಲ ರಾಜ ದಂಪತಿಗಳಿಗೆ. ಆ ಮುನಿಯ ಮಾತು ಹಾಗಿತ್ತು. ‘ನಿನ್ನ ಮಗಳು ನನ್ನ ತಪಸ್ಸನ್ನು ಹಾಳುಗೆಡಹಿದ್ದಾಳೆ. ನನ್ನನ್ನು ಕುರುಡನನ್ನಾಗಿಸಿದ್ದಾಳೆ….’ ಮುಂದೇನು ಆಘಾತ ಕಾದಿದೆಯೋ.. ತುದಿಗಾಲಲ್ಲಿ ನಿಂತರು ದಂಪತಿಗಳು. ಬಯಸಿ ಪಡೆದ ಮಗಳು ಇದೇನು ಸಂಕಟಕ್ಕೆ ಸಿಲುಕಿದ್ದಾಳೆ ಎಂದು ಮರುಗಿದರು ಅವರು. ಮುನಿಗಳೋ ಮೂಗಿನ ಮೊನೆಯಲ್ಲೇ ಕೋಪವುಳ್ಳವರು. ಅವರು ಮುನಿದರೇನುಗತಿ ಎಂಬ ಚಿಂತೆ ಅವರನ್ನು ಕಾಡಿತು.  ಆದದ್ದಿಷ್ಟೆ. ಆ ರಾಜಪರಿವಾರ ವನವಿಹಾರಕ್ಕೆ ಬಂದಿತ್ತು. ಜತೆಗೆ ಮುದ್ದಿನ ಮಗಳೂ ಇದ್ದಳು. ಆ […]

ತಾಯ್ತಂದೆಯರ ಸೇವೆಯೇ ತಪಸ್ಸು

ತಾಯ್ತಂದೆಯರ ಸೇವೆಯೇ ತಪಸ್ಸು

ಇತರೆ - 0 Comment
Issue Date :

  ಆ ಹುಡುಗನಿಗೆ ಏನೆಲ್ಲವನ್ನೂ ತನ್ನ ಕೈವಶ ಮಾಡಿಕೊಳ್ಳಬೇಕೆಂಬ ಬಯಕೆ. ಕಠಿಣ ತಪದಿಂದ ಇದು ಸಾಧ್ಯ ಎಂದರು ತಿಳಿದವರು. ಸರಿ, ಈತ ಸಾಧನೆಗಾಗಿ ತನ್ನ ಮುಪ್ಪಿನ ತಂದೆತಾಯಿಗಳನ್ನೂ ದಾರಿಗೆ ತೊಡಕೆಂದು ತೊರೆದ. ಕಾಡಿಗೆ ಹೊರಟ ; ತಪದಲ್ಲಿ ತೊಡಗಿದ. ಕೊನೆಗೂ ಸಿದ್ಧಿ ಸಿಕ್ಕಿತು. ಆತನ ಬೇಕುಗಳೆಲ್ಲವೂ ಕ್ಷಣಮಾತ್ರದಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದವು. ಜಟೆಗಡ್ಡಗಳೊಡನೆ ಅಹಂಕಾರವೂ ಬೆಳೆಯಿತು.  ಆಲದಮರವೊಂದರ ಬುಡದಲ್ಲಿ ಕುಳಿತಿದ್ದಾಗ ಮೇಲಿಂದ ಹಕ್ಕಿಯ ಹಿಕ್ಕೆ ಬಿತ್ತು. ತರುಣ ಮುನಿ ಮುನಿದ. ಕೆಂಗಣ್ಣಿನಿಂದ ಮೇಲೆ ನೋಡಿದ. ಹಕ್ಕಿಯ ಸಂಸಾರ ಸುಟ್ಟು ಬೂದಿ! […]

ತಾಯ ಗೌರವ ಕಾಪಾಡಿದ ಸುಪುತ್ರ

ತಾಯ ಗೌರವ ಕಾಪಾಡಿದ ಸುಪುತ್ರ

ಇತರೆ - 0 Comment
Issue Date : 10.08.2015

  ‘ಹೌದು, ಅಮ್ಮನ ಮಾತು ನಿಜ. ನಾನು ಉಳಿ ದವರಂತೆ ಆಗಬೇಕು’. ಆ ಹುಡುಗನ ಮನದಲ್ಲಿ ನಿರ್ಧಾರ ಬಲಿಯಿತು.   ಋಷಿ ಮಾಂಡೂಕಿ ದಂಪತಿ ಕಠಿಣ ತಪದ ಮೂಲಕ ಭಗವದಾರಾಧನೆ ನಡೆಸಿದ್ದರ ಫಲ ಕಾಂತಿ ತುಂಬಿದ ಮಗು ಜನಿಸಿತ್ತು. ಗರ್ಭಾಷ್ಟಮದಲ್ಲೇ ಉಪನಯನವೂ ಆಗಿತ್ತು. ಆದರೂ ಈ ಮಗು ಎಲ್ಲರಂತೆ ಇರಲಿಲ್ಲ. ಸದಾ ಅಂತರ್ಮುಖಿ. ಉಳಿದ ವಟುಗಳಂತೆ ಬಾಹ್ಯ ಜಗತ್ತಿನ ಪರಿವೆಯೇ ಇರದಂತಿದ್ದ. ಇದು ತಾಯಿಗೂ ದುಃಖ.   ಆಕೆಯ ದುಃಖ ಇಮ್ಮಡಿಸಲು ಮತ್ತೊಂದು ಕಾರಣ ಆಕೆಯ ಸವತಿಯ […]

ಅವಿನಾಶಿ ಆತ್ಮವಿದ್ಯೆಯ ಸಾಧಕ

ಅವಿನಾಶಿ ಆತ್ಮವಿದ್ಯೆಯ ಸಾಧಕ

ಇತರೆ - 0 Comment
Issue Date : 06.08.2015

-ಹಾದಿಗಲ್ಲು ಲಕ್ಷ್ಮೀನಾರಾಯಣ ವಾಜಶ್ರವಸ ಸಂಪ್ರದಾಯನಿಷ್ಠ, ಕರ್ಮಠ ಮುನಿಯೆನಿಸಿ ಗುರುಕುಲ ನಡೆಸುತ್ತಿದ್ದ ವೇದ ಪಂಡಿತ. ಆತನ ಮಗ ನಚಿಕೇತ ಅಧ್ಯಯನಶೀಲ. ವಾಜಶ್ರವಸ ಹಲವು ಯಜ್ಞಗಳನ್ನು ಮಾಡಿದವ. ಒಮ್ಮೆ ವಿಶ್ವಜಿತ್ ಯಾಗ ಮಾಡಿದ. ಮಂತ್ರ ಜಪ, ತರ್ಪಣ, ಹೋಮ, ದಾನ, ಸಂತರ್ಪಣೆ, ಪುಣ್ಯ ಕಥಾಶ್ರವಣ ಇವೆಲ್ಲ ಇದರ ಅಂಗಗಳು. ಯಜ್ಞಗಳೆಂದರೆ ಲೋಕೋಪಕಾರಕವೆಂದು ಅರಿತು ರಾಜರು ಪ್ರಜೆಗಳು ತಾವಾಗಿಯೇ ಸಾಧನ ಸಂಪತ್ತನ್ನು ತಂದುಕೊಡುತ್ತಿದ್ದರು. ಈಗ ದಾನದ ಸಮಯ. ಎಲ್ಲವನ್ನೂ ಕೊಟ್ಟು ಉಳಿದುದು ಕೆಲ ಮುದಿಹಸುಗಳಷ್ಟೇ. ತಂದೆ ಅವನ್ನೂ ಬ್ರಾಹ್ಮಣರಿಗೆ ದಾನ ಕೊಡುತ್ತಿರುವುದನ್ನು ಕಂಡು […]