ತಾಯ್ನೆಲದ ಮಮತೆ

ತಾಯ್ನೆಲದ ಮಮತೆ

ಇತರೆ - 0 Comment
Issue Date : 05.08.2015

ಪುರಾಣ ಪಥ -ಹಾದಿಗಲ್ಲು ಲಕ್ಷ್ಮೀನಾರಾಯಣ ಅಂದು ಇಂದ್ರ ಎಂದಿಗಿಂತ ಹೆಚ್ಚು ಚಿಂತೆಗೀಡಾಗಿದ್ದ. ದೇವದಾನವರ ನಡುವೆ ಯುದ್ಧ ನಡೆಯುತ್ತಿತ್ತು. ದೇವತೆಗಳು ಗೆದ್ದು ಬೀಗುತ್ತಿದ್ದರು. ಆದರೆ ಮತ್ತಷ್ಟೇ ಸಂಖ್ಯೆಯಲ್ಲಿ ರಕ್ಕಸರು ಯುದ್ಧಕ್ಕೆ ಬರುತ್ತಿದ್ದರು. ದೇವತೆಗಳು ಕೊಂದ ರಕ್ಕಸರನ್ನೆಲ್ಲ ಆಚಾರ್ಯ ಶುಕ್ರರು ಮೃತಸಂಜೀವಿನಿ ಮಂತ್ರದಿಂದ ಬದುಕಿಸಿಬಿಡುತ್ತಿದ್ದರು. ಆ ಮಂತ್ರವನ್ನು ದೇವತೆಗಳು ಪಡೆಯದೇ ಬೇರೆ ದಾರಿಯೇ ಇಲ್ಲ ಎಂದುಬಿಟ್ಟರು ದೇವಗುರು ಬೃಹಸ್ಪತಿ. ಇದೇ ಇಂದ್ರನ ಚಿಂತೆಗೆ ಕಾರಣವಾಗಿತ್ತು.  ‘ಸಂಜೀವಿನಿ ವಿದ್ಯೆಯನ್ನು ಸಂಪಾದಿಸದಿದ್ದರೆ ನಾವು ರಕ್ಕಸರ ಉಪಟಳ ಸಹಿಸಲು ಸಾಧ್ಯವಾಗದು. ಸ್ವರ್ಗಲೋಕದ ಹಿತಸಾಧನೆ ಆಗಬೇಕಾದರೆ […]

ಆಡದೇ ಮಾಡುವನು ರೂಢಿಯೊಳಗುತ್ತಮನು

ಆಡದೇ ಮಾಡುವನು ರೂಢಿಯೊಳಗುತ್ತಮನು

ಚಿಂತನ - 0 Comment
Issue Date : 14.07.2015

ಕಾರ್ಯಗಳನ್ನು ಮಾಡುವ ದೃಷ್ಟಿಯಿಂದ ಮೂರು ರೀತಿಯ ಜನರಿದ್ದಾರೆ. ಕೆಲವರು ಪ್ರಚಾರ ಪ್ರಿಯರಲ್ಲವಾದ್ದರಿಂದ ಸ್ವಯಂ ಸ್ಫೂರ್ತಿಯ ಮೂಲಕ ಒಳ್ಳೆಯ ಕೆಲಸವನ್ನೇನೋ ಮಾಡುತ್ತಾರೆ. ಆದರೆ ಆ ಬಗೆಗೆ ಯಾರಲ್ಲೂ ಹೇಳಿಕೊಂಡು ತಿರುಗಾಡುವುದಿಲ್ಲ. ಕೆಲಸ ಮಾಡುವ ಮೊದಲಾಗಲೀ ಅನಂತರವಾಗಲೀ ಅದರ ಕುರಿತು ಎಲ್ಲರೆದುರು ಕೊಚ್ಚಿಕೊಳ್ಳುವುದಿಲ್ಲ; ಪತ್ರಿಕೆಗಳಲ್ಲಿ ಜಾಹೀರಾತು ಹಾಕಿಸುವುದಿಲ್ಲ. ಸದ್ದುಗದ್ದಲಗಳಿಲ್ಲದೆ, ಗೌಜಿ ಪ್ರಚಾರಗಳಿಲ್ಲದೆ ಅವರು ಕೈಗೆತ್ತಿಕೊಂಡ ಕೆಲಸಗಳು ಪ್ರಾರಂಭಗೊಂಡು ಯಶಸ್ವಿಯಾಗಿ ಮುಗಿದುಹೋಗುತ್ತವೆ. ‘‘ಆಡದೇ ಮಾಡುವನು ರೂಢಿಯೊಳಗುತ್ತಮನು’’ ಎನ್ನುವ ಮುಖಾಂತರ ಸರ್ವಜ್ಞ ಕವಿಯು ಇಂತಹ ಸರಳ ವ್ಯಕ್ತಿಯನ್ನು ಶ್ಲಾಘಿಸುತ್ತಾನೆ. ಏಕೆಂದರೆ ಈ ರೀತಿಯ […]

ಪ್ರಾಚೀನ ಭಾರತದ ಕನ್ನಡಿ : ಉಪ ಪುರಾಣ ಲೋಕ

ನುಡಿ-ಕಿಡಿ - 0 Comment
Issue Date :

ಬೃಹದ್ಧರ್ಮ ಪುರಾಣವು ಉಪಪುರಾಣಗಳ ಸಂಖ್ಯೆ ಹದಿನೆಂಟೇ ಎಂದು ಹೇಳಿದರೂ ಇನ್ನು ಹಲವು ಉಪಪುರಾಣಗಳು ದೊರೆಯುತ್ತವೆ. ಕೂರ್ಮ, ಬೃಹದ್ಧರ್ಮ, ಏಕಾಮ್ರ ಈ ಪುರಾಣಗಳು ಕೊಡುವ ಉಪಪುರಾ ಣಗಳ ಪಟ್ಟಿಯು ಬೇರೆಬೇರೆಯೇ ಇದೆ. ಸಂಸ್ಕೃತ ಗ್ರಂಥರಾಶಿಯಲ್ಲಿ ಒಂದುನೂರು ಉಪಪುರಾಣಗಳು ಇದ್ದ ಮಾಹಿತಿಯಿದೆ. ಇಷ್ಟಾದರೂ ಹಲವು ನಷ್ಟವಾಗಿರಬಹುದು ಎನ್ನಲು ಬೇಕಾದಷ್ಟು ಪುರಾವೆಗಳು ಲಭ್ಯವಾಗಿವೆ. ಉಪ ಪುರಾಣಗಳನ್ನು ವೈಷ್ಣವ, ಶಾಕ್ತ, ಶೈವ, ಸೌರ, ಗಾಣಾಪತ್ಯ ಎಂಬ ಪಂಚಪ್ರಕಾರಗಳಲ್ಲದೇ ಇವು ಯಾವುದಕ್ಕೂ ಸೇರದ ಕೆಲವನ್ನು ಗಮನಿಸಿ ಅಪಂಥೀಯ ಎಂಬ ಆರನೇ ಪ್ರಕಾರವನ್ನೂ ಪಟ್ಟಿಮಾಡಬಹುದು. ನೃಸಿಂಹ […]

ಅಕ್ಕ ತಂಗೇರ ಹೊರತು

ಅಕ್ಕ ತಂಗೇರ ಹೊರತು

ಚಿಂತನ - 0 Comment
Issue Date :

‘ಅಕ್ಕ ತಂಗೇರ ಹೊರತು ಮತ್ತೊಬ್ಬ ಗೆಳತಿಲ್ಲ’ ಎನ್ನುವದು ಜನಪದರ ಹೃದಯಾಂತರಾಳದಿಂದ ಹೊರಹೊಮ್ಮಿ ಹಲವು ಶತಮಾನಗಳೇ ಕಳೆದಿರಬಹುದು. ಆದರೆ ಇದರಲ್ಲಿ ಅಡಗಿರುವ ಸತ್ಯ ಮಾತ್ರ ಇಂದಿಗೂ, ಮುಂದಿಗೂ ಪ್ರಸ್ತುತ, ಸ್ಮರಣೀಯ. ಸಾಂಸಾರಿಕ ಮತ್ತು ಸಾಮಾಜಿಕ ಜೀವನಕ್ಕೆ ಕುಟುಂಬವೇ ಪಂಚಾಂಗ. ಅದರಲ್ಲಿ ಮನುಷ್ಯನು ಪಡೆಯುವ ಪ್ರೀತಿ, ವಾತ್ಸಲ್ಯ, ಆದರ, ಅನ್ಯೋನ್ಯತೆ, ಆಸರೆ ಮುಂತಾದ ಭಾವರಸಗಳು ಅವನನ್ನು ಮೃದುಗೊಳಿಸುತ್ತವೆ, ಹದಗಳಿಸುತ್ತವೆ, ಪಾಕಗೊಳಿಸುತ್ತವೆ. ಸಾಮಾಜಿಕ ಕ್ಷೇತ್ರದಲ್ಲಿ ಯಾರು ಸಮರ್ಪಕವಾಗಿ ಸೌಹಾರ್ದದಿಂದ ಬೆರೆಯುವುದಿಲ್ಲವೋ, ನೆರೆಯುವುದಿಲ್ಲವೋ ಅಂತಹ ವ್ಯಕ್ತಿಯ ಕೌಟುಂಬಿಕ ಬದುಕು ಸರಿಯಿರಲಿಲ್ಲವೆಂದು ನೋಡದೆಯೇ ಹೇಳಬಹುದು. […]

ಅವತಾರ : ಭವಭಯಹಾರ

ಬೋಧ ಕಥೆ - 0 Comment
Issue Date :

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ಯಾವ ಯಾವ ಸಮಯದಲ್ಲಿ ಧರ್ಮದ ಹಾನಿ ಹಾಗೂ ಅಧರ್ಮದ ಹೆಚ್ಚಳವಾಗುವುದೋ ಆಗೆಲ್ಲ ನಾನು ಸಜ್ಜನರನ್ನು ಕಾಯಲು ದುರ್ಜನರನ್ನು ವಿನಾಶ ಮಾಡಲು ಹಾಗೂ ಧರ್ಮ ಸಂಸ್ಥಾಪನೆಗಾಗಿ ಯುಗ ಯುಗಗಳಲ್ಲಿ ಅವತರಿಸುತ್ತೇನೆ (….ಸಂಭವಾಮಿ ಯುಗೇ ಯುಗೇ) ಇದು ಗೀತಾಚಾರ್ಯ ಭಗವಂತನ ಮಾತು. (ಗೀತಾ. ಅ: 2, ಶ್ಲೋ 7-8) ಜಗತ್ಪಾಲಕನಾದ ಭಗವಂತ ಕಾಲಕಾಲಕ್ಕೆ ಹಲವು ಅವತಾರಗಳನ್ನು ತಳೆದು ಬಂದು ತನ್ನ ನಂಬಿದವರನ್ನು ಕಾಯ್ದಿದ್ದಾನೆ. ಹಲವು ಅವತಾರಗಳಲ್ಲಿ ಮತ್ಸ್ಯಾದಿ ಹತ್ತು ಅವತಾರಗಳು ಬಹುಪ್ರಸಿದ್ಧ. […]

ಅರ್ಥಕ್ಕೆ ಕಿಂಕರರು

ಅರ್ಥಕ್ಕೆ ಕಿಂಕರರು

ಚಿಂತನ - 0 Comment
Issue Date : 26.05.2014

ಮನುಷ್ಯನ ನಾನಾ ಬಗೆಯ ಬಯಕೆ ಮತ್ತು ಲಾಲಸೆಗಳನ್ನು ಈಡೇರಿಸುವಲ್ಲಿ ಹಣಕಾಸಿನ ಪಾತ್ರ ನಿರ್ಣಾಯಕವಾದುದು. ಆದ್ದರಿಂದ ಆರ್ಥಿಕ ವಿಷಯಗಳಿಗೆ ಅವನು ಬಹಳಷ್ಟು ಪ್ರಾಮುಖ್ಯವನ್ನು ಕೊಡುತ್ತಾನೆೆ. ಈ ಧನ ಲಾಲಸೆ ಎಷ್ಟರ ಮಟ್ಟಿಗೆ ಮುಂದುವರಿಯುತ್ತದೆ ಎಂದರೆ ತಾನೇ ಅದರ ದಾಸನಾಗಿಬಿಡು ತ್ತಾನೆ. ಅದು ತನ್ನ ಬೇಕು ಬೇಡಗಳಿಗೆ ನಿರತವೂ ಸ್ಪಂದಿಸುವ ಒಂದು ಮಾಧ್ಯಮವೇ ವಿನಾ ಜೀವನದ ಪರಮ ಗುರಿಯಲ್ಲ ಎನ್ನುವುದನ್ನು ಆತ ಮರೆತೇಬಿಡುತ್ತಾನೆ. ನಿಜವಾಗಿ ನೋಡಿದರೆ ಅರ್ಥ ಅಥವಾ ಹಣಕಾಸು ಎನ್ನುವುದು ಮನುಷ್ಯನೇ ತನ್ನ ಅನುಕೂಲತೆ ಾಗೂ ಆಗತ್ಯಗಳಿಗಾಗಿ ರೂಪಿಸಿಕೊಂಡ […]

ಪುರಾಣ : ಅಮೂಲ್ಯ ವಿಶ್ವಕೋಶ

ಪುರಾಣ : ಅಮೂಲ್ಯ ವಿಶ್ವಕೋಶ

ಚಿಂತನ - 0 Comment
Issue Date : 14.05.2015

ನಮ್ಮ ಪುರಾಣಗಳು ಅಮೂಲ್ಯ ಜ್ಞಾನದ ಭಂಡಾರ. ಒಂದು ನೆಲೆಯಲ್ಲಿ ನೋಡಿದರೆ ಅದ್ಭುತ ವಿಶ್ವಕೋಶಗಳು. ‘ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್’ ಇತಿಹಾಸ ಪುರಾಣಗಳಿಂದ ವೇದಜ್ಞಾನವನ್ನು ಸಮರ್ಥವಾಗಿ ಬಲವತ್ತರವಾಗಿ ಅರ್ಥೈಸಬೇಕು ಎಂಬ ಮಾತನ್ನು ಲಕ್ಷಿಸಿದರೆ ಪುರಾಣಪ್ರತಿಪಾದಿತ ಜ್ಞಾನದ ಮಹತ್ತ್ವ ಅರಿವಾದೀತು! ಭೂಗೋಳ, ಖಗೋಳ, ಜ್ಯೋತಿಷ, ಸಾಮುದ್ರಿಕ, ಉತ್ಪಾತಗಳು, ವೈದ್ಯಕೀಯ, ತಂತ್ರಶಾಸ್ತ್ರ, ದನ-ಕುದುರೆ-ಆನೆ ಮುಂತಾದ ಪ್ರಾಣಿಗಳ ಲಕ್ಷಣ, ಚಿಕಿತ್ಸೆ, ಸರ್ಪಜ್ಞಾನ, ರತ್ನಪರೀಕ್ಷಣ, ರಾಜನೀತಿ, ಯುದ್ಧವಿಜ್ಞಾನ, ಆಯುರ್ವೇದ, ಧನುರ್ವೇದ, ಕೃಷಿ-ತೋಟಗಾರಿಕೆ, ಛಂದಸ್ಸು, ವ್ಯಾಕರಣ, ನಾಟ್ಯಶಾಸ್ತ್ರ, ಅಲಂಕಾರಶಾಸ್ತ್ರ, ಸಂಗೀತ – ನೃತ್ಯಪ್ರಕಾರಗಳು, ವಾಸ್ತು – […]

ಅರಿದೆಸಗುವ ಕಾರ್ಯ

ಅರಿದೆಸಗುವ ಕಾರ್ಯ

ಚಿಂತನ - 0 Comment
Issue Date : 14.05.2015

ಕೈಗೆತ್ತಿಕೊಂಡ ಯಾವುದೇ ಕಾರ್ಯ ಯಶಸ್ವಿಯಾಗಬೇಕಾದರೆ ಯಾವ ಯಾವ ಸಂಗತಿಗಳನ್ನು ತಿಳಿದಿರ ಬೇಕು ಎನ್ನುವುದನ್ನು ‘ನೀತಿ ಮಂಜರಿ’ಯ ಕವಿ ತನ್ನ ಪದ್ಯವೊಂದರಲ್ಲಿ ತಿಳಿಸಿಕೊಟ್ಟಿದ್ದಾನೆ. ‘ಅರಿದೆಸಗುವ ಕಾರ್ಯ ಮೆಂದುಂ ಅಮೋಘ’ (ತಿಳಿದುಕೊಂಡು ಮಾಡುವ ಕೆಲಸ ಯಾವಾಗಲೂ ವ್ಯರ್ಥವಾಗದು) ಎನ್ನುವುದು ಅವನ ಸೂಕ್ತಿ. ಕೆಲಸ ಚೆನ್ನಾಗಿ ನಡೆಯಬೇಕಾದರೆ ಮೊತ್ತ ಮೊದಲು ಪರಿಶೀಲಿಸಬೇಕಾದುದು ಸ್ಥಳವನ್ನು. ಕಾರ್ಯವೆಸಗಬೇಕಾದ ಜಾಗದ ಲಕ್ಷಣಗಳು, ಒಳಿತು – ಕೆಡುಕುಗಳನ್ನು ಕರ್ತೃವು ಜಾಗರೂಕತೆಯಿಂದ ಪರೀಕ್ಷಿಸಿಕೊಳ್ಳಬೇಕು. ಸ್ಥಳವು ತಾನು ಗೈಯಬೇಕಾದ ಕೆಲಸಕ್ಕೆ ಅನುಕೂಲಕರವಾಗಿದ್ದರೆ ಮಾತ್ರ ಅದನ್ನು ಪ್ರಯತ್ನ ಮುಖೇನ ಕೊನೆಮುಟ್ಟಿಸಬಹುದು. ಸಾಕಷ್ಟು […]

ಗಾದೆ ಮಾತುಗಳು

ಗಾದೆ ಮಾತುಗಳು

ಬೋಧ ಕಥೆ - 0 Comment
Issue Date : 08.05.2015

“ಆಡಿ ಉಂಬುವನ ಅರಸನಾಗುವುದಕ್ಕಿಂತ ಮಾಡಿ ಉಂಬುವನ ಆಳಾಗಿ ದುಡಿ’’ ಎನ್ನುವ ಗಾದೆಯಿದೆ. ಉಡಾಳನಾಗಿ ಉಂಡುಂಡು ದುಡಿಯದೇ ಯಾವ ಕೆಲಸವನ್ನು ಮಾಡದೇ ಪೋಕರಿಯಾಗಿ ತಿರುಗುವುದನ್ನು ನೋಡಿ ಈ ಗಾದೆ ಹುಟ್ಟಿಕೊಂಡಿದೆ. ‘‘ವೇದ ಸುಳ್ಳಾದರು ಗಾದೆ ಸುಳ್ಳಲ್ಲ’’ ಎಂಬುವ ನಾಣ್ಣುಡಿಯಿದೆ. ತಂದೆ-ತಾಯಿಯ ಮಾತನ್ನು ಆಲಿಸದೆ, ಗುರುಹಿರಿಯರ ಆಶೀರ್ವಾದ ಪಡೆಯದೇ ಉಂಡಾಡಿ ಗುಂಡನಂತೆ ಆಡಿ ಅಂಡಲೆಯವವನನ್ನು ನೋಡಿ ಹಿರಿಯರು ‘‘ಆಡಿ ಉಂಬುವನ ಅರಸನಾಗಬೇಡ’’ ಎಂದು ಹೇಳಿದ್ದಾರೆ. ‘ಆಳಾಗಿ ದುಡಿ ಅರಸನಾಗಿ ಉಣ್ಣು’ ಎನ್ನುವ ಗಾದೆಯೂ ಇದೆ. ಬಸವಣ್ಣ ‘‘ಕಾಯಕವೇ ಕೈಲಾಸ’’ ಎಂದು […]

ಅವಮಾನವಾದರೆ ಒಳ್ಳಿತು

ಅವಮಾನವಾದರೆ ಒಳ್ಳಿತು

ಬೋಧ ಕಥೆ - 0 Comment
Issue Date : 08.05.2015

ಸಾಮಾನ್ಯವಾಗಿ ಸಮಾಜದಲ್ಲಿ ಯಾರೂ ಕೂಡ ಮಾನ – ಸಮ್ಮಾನ – ಪ್ರಶಸ್ತಿ – ಗೌರವ – ಶ್ಲಾಘನೆಗಳನ್ನು ಇಷ್ಟಪಡುತ್ತಾರಲ್ಲದೆ ಅಪಮಾನ – ನಿಂದೆ – ಟೀಕೆ – ಬೈಗುಳಗಳನ್ನಲ್ಲ. ಆದರೆ ಪುರಂದರದಾಸರು ತಮ್ಮ ಕೀರ್ತನೆಯೊಂದರಲ್ಲಿ ‘‘ಅಪಮಾನವಾದರೆ ಒಳ್ಳಿತು’’ ಎಂದು ಹೇಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೇಲ್ನೋಟಕ್ಕೆ ಅವರ ಈ ಮಾತು ವಿಚಿತ್ರವಾಗಿ ತೋರಿದರೂ ಒಳಹೊಕ್ಕು ನೋಡಿದರೆ ಅದರ ಅಂತರಾರ್ಥ ಸ್ಪಷ್ಟವಾಗುತ್ತದೆ.  ನಿತ್ಯವೂ ಭಿಕ್ಷೆಗಾಗಿ ಊರೂರು ಅಲೆದಾಡುವ ಹರಿದಾಸ ರನ್ನು ಕಂಡು ಕೆಲ ಜನರು ಹೀನಾಯವಾಗಿ ಜರೆದಾಗ ಅವರು […]