ಧ್ಯೇಯವಾದಿಯ ದೃಷ್ಟಿ

ಬೋಧ ಕಥೆ - 0 Comment
Issue Date : 07.10.2013

ಮಿಥಿಲೆಯನ್ನು ಆಳುತ್ತಿದ್ದ ಜನಕಮಹಾರಾಜ ಭೋಗಭಾಗ್ಯ ತುಂಬಿದ ಅರಮನೆಯಲ್ಲಿದ್ದರೂ ಸುಖಸಾಧನಗಳಿಂದ ದೂರವಿದ್ದು, ಖುಷಿಯಂತೆ ಬದುಕುತ್ತಿದ್ದ. ರಾಜರ್ಷಿ ಎನಿಸಿಕೊಂಡಿದ್ದ. ಒಮ್ಮೆ ಆತನ ಅರಮನೆಗೆ ಬಂದ ಶುಕ ಮಹರ್ಷಿ, ರಾಜನು ಖುಷಿಯಂತೆ ಬದುಕುತ್ತಿರುವುದನ್ನು ಕಂಡು ಅಚ್ಚರಿಗೊಂಡ. ವೈಭವದ ಅರಮನೆಯಲ್ಲಿದ್ದರೂ ಹೀಗಿರುವುದು ಹೇಗೆ ಸಾಧ್ಯ ಎಂದು ಕೇಳಿದ. ಆಗ ಮಹಾರಾಜ ಋಷಿಯೆದುರು ಒಂದು ಹಣತೆ ತಂದಿಟ್ಟು ಶುಕಮುನಿಗಳೇ, ಈ ಹಣತೆಯನ್ನು ಕೈಯಲ್ಲಿ ಹಿಡಿದು ಅರಮನೆಯ ಒಳಗೆಲ್ಲಾ ಓಡಾಡಿ  ಬನ್ನಿ. ಆದರೆ ಹಣತೆಯ ದೀಪ ಆರಬಾರದು, ಎಣ್ಣೆ ಚೆಲ್ಲಬಾರದು. ಹಾಗೇನಾದರೂ ಆದರೆ  ನಿಮ್ಮ ಪ್ರಾಣಹೋದೀತು ಎಂದು ಹೇಳಿ […]

ಗುರಿ ಸಾಧನೆಯ ಛಲ

ಬೋಧ ಕಥೆ - 0 Comment
Issue Date :

 ಆತನದು ಹದಿನಾರರ ಹರೆಯ. ವೇದಾಂತ ಓದಬೇಕೆಂಬ ಆಸಕ್ತಿ! ತಂದೆಗೆ ಮಗ ಡಾಕ್ಟರಾಗಬೇಕೆಂಬ ಆಸೆ. ಮೆಡಿಕಲ್ ಕಾಲೇಜು  ಸೇರಬೇಕೆಂದು ಮಗನನ್ನು ಒತ್ತಾಯಿಸಿದರು. ಇಲ್ಲ, ನಾನು ವೇದಾಂತವನ್ನೇ ಓದುತ್ತೇನೆ ಎಂದ ಮಗ. ನಿನ್ನದು ಅದೇ ನಿರ್ಧಾರವಾದರೆ  ಓದಿಗಾಗಿ ಒಂದು ಪೈಸೆಯನ್ನೂ ನನ್ನಿಂದ ನಿರೀಕ್ಷಿಸಬೇಡ- ತಂದೆಯ ಕಟು ತೀರ್ಮಾನ. ತನ್ನ ಅಚಲ ನಿರ್ಧಾರದಿಂದ ಹಿಂದೆ ಸರಿಯದ ತರುಣ ಬರಗೈಯಲ್ಲೇ ಮನೆ ಬಿಟ್ಟು  ಹೊರಟ. ಕೈಯಲ್ಲಿ ಕಾಸಿಲ್ಲ. ಯಾವುದೋ ರೈಲುಗಾಡಿ ಹತ್ತಿದ. ಟಿಕೆಟ್ ಪರೀಕ್ಷಕ ಬಂದಾಗ ಅವನ ಬಳಿ ನಿಜವನ್ನೇ ಹೇಳಿದ. ವೇದಾಂತ  ಓದುವ […]

ಕಥೆ

ಕಥೆ

ಕಥೆಗಳು - 0 Comment
Issue Date :

ಒಂದು ದಿನ ಬುದ್ಧ ತನ್ನ ಅನುಯಾಯಿಗಳೊಂದಿಗೆ ಸಂಚಾರದಲ್ಲಿದ್ದಾಗ ಅವನಿಗೆ ಬಾಯಾರಿಕೆಯಾಯಿತು. ತನ್ನ ಶಿಷ್ಯರಲ್ಲಿ ಒಬ್ಬನ್ನು ಕರೆದು ಹತ್ತಿರದಲ್ಲಿ ಎಲ್ಲಾದರೂ ಕುಡಿಯಲು ನೀರು ತರಲು ಹೇಳಿದ. ಬುದ್ಧನ ಆಜ್ಞೆಯಂತೆ ಅವನ ಶಿಷ್ಯ ನೀರು ತರಲು ನದಿಯ ಬಳಿಗೆ ಹೋದಾಗ ಅಲ್ಲಿ ಕೆಲವು ಮಹಿಳೆಯರು ಬಟ್ಟೆ ಒಗೆಯುತ್ತಿದ್ದರು. ಅದೆ ವೇಳೆಯಲ್ಲಿ ಬಂಡಿಯೊಂದು ಹೊಳೆ ದಾಟಲು ಆರಂಭಿಸಿತು. ಇದರಿಂದ ನದಿಯ ನೀರು ರಾಡಿಯಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂದು ಆ ಶಿಷ್ಯನಿಗೆ ಅನಿಸಿ ಬರಿಗೈಯಿಂದ ಆತ ವಾಪಸ್ ಬಂದು ಬುದ್ಧನಿಗೆ ವಿಷಯ ತಿಳಿಸಿದ. […]

ಭಾರತ ಸ್ವರ್ಗವಾಗಿತ್ತು

ಬೋಧ ಕಥೆ - 0 Comment
Issue Date :

ಸಾವಿರಾರು ವರ್ಷಗಳ ಹಿಂದೆ ಫಾಹಿಯಾನ್ ಎಂಬ ಚೀನೀ ಯಾತ್ರಿಕ ಭಾರತಕ್ಕೆ ಬಂದಿದ್ದ. ಆ ಸಮಯದಲ್ಲಿ ಭಾರತವು ನೈತಿಕವಾಗಿಯೂ, ಭೌತಿಕವಾಗಿಯೂ ಶ್ರೀಮಂತವಾಗಿತ್ತು. ಆಗ ಇಲ್ಲಿ ಸುಳ್ಳು ಹೇಳುವುದು ಇರಲಿಲ್ಲ. ಕಳ್ಳಕಾಕರ ಭಯವಿರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗಲೂ ಮನೆಗೆ ಬೀಗ ಹಾಕುತ್ತಿರಲಿಲ್ಲ. ಅದೇ ಸಮಯದಲ್ಲಿ ಫಾಹಿಯಾನ ಸಂಚರಿಸುತ್ತ ಪಾಟಲೀಪುತ್ರದ ಬಳಿ ಮಗಧದ ಸಾಮಂತ ರಾಜನ ರಾಜಸಭೆಗೆ ಬಂದು ತಲುಪಿದ. ಇಬ್ಬರು ರೈತರು ತಮ್ಮ ವಿವಾದವನ್ನು ಬಗೆಹರಿಸಿಕೊಳ್ಳಲು ರಾಜನ ಬಳಿಗೆ ಬಂದಿದ್ದರು. ಫಾಹಿಯಾನ್ ಗೆ ಇವರಿಬ್ಬರ ಜಗಳದ ಕಾರಣವೇನೆಂದು  ತಿಳಿಯುವ […]

ಯಜಮಾನ – ಬಸಪ್ಪ ಕಂಬಾರ

ಕಥೆಗಳು - 0 Comment
Issue Date : 00-00-0000

ಕೃಷ್ಣ , ತನಗೆ ಪ್ರಿಯವಾದ ಕೊಳಲನ್ನು ತೆಗೆದುಕೊಂಡನು. ತಲೆಗೆ ಸುತ್ತಿದ ರುಮಾಲಿಗೆ ನವಿಲುಗರಿಯನ್ನು ಸಿಕ್ಕಿಸಿಕೊಂಡಿದ್ದನು. ಹಸಿರು ಬಣ್ಣದ ಪಂಚೆ ತೊಟ್ಟು ಹೆಗಲಲ್ಲಿ ಹಳದಿ ಶಲ್ಯ ಹಾಕಿಕೊಂಡಿದ್ದನು. ತನ್ನ ಪ್ರೀತಿಯ ಗೋವುಗಳನ್ನು ಕರೆದುಕೊಂಡು, ಬೃಂದಾವನದಿಂದ ಸ್ವಲ್ಪ ದೂರವಿರುವ ಗೋವರ್ಧನಗಿರಿ ತಪ್ಪಲಿಗೆ ಹೊರಟಿದ್ದನು. ಮೇಘವರ್ಣದ ಮೈಬಣ್ಣ, ದುಂಡುಮುಖ, ಕಾಂತಿಯುತ ಕಂಗಳು, ಕಾಮನಬಿಲ್ಲು ನಾಚುವಂತಹ ಹುಬ್ಬುಗಳು. ಹರಯಕ್ಕೇ ತಕ್ಕಂಥ ಮೈಕಟ್ಟು, ನಿಲುವು. ಬಿಲ್ಲುವಿದ್ಯೆ, ಮಲ್ಲವಿದ್ಯೆ, ಕತ್ತಿವಿದ್ಯೆಗಳಲ್ಲಿ ಪ್ರವೀಣ. ಗೋವುಗಳ ರಕ್ಷಣೆಯಲ್ಲಿ ನಿಪುಣ. ದಾರಿಯಲ್ಲಿ ಕೊಳಲನೂದುತ್ತ ಗೋವುಗಳೊಡನೆ ಹೊರಟಿದ್ದರೆ ಗಿಡ, ಮರಗಳಲ್ಲಿ ಕೂತಿದ್ದ […]

ಅಹಲ್ಯಾಬಾಯಿ ಹೋಳ್ಕರ್

ಕಥೆಗಳು - 0 Comment
Issue Date :

ಪತಿ ಖಂಡೇರಾಯನ ಮೃತ್ಯುವಿನ ಬಳಿಕ ಅಹಲ್ಯಾಬಾಯಿ ಇಂದೋರ್ ಸಂಸ್ಥಾನದ ಆಡಳಿತ ಸೂತ್ರ ವಹಿಸಿಕೊಂಡಿದ್ದಳು. ಮಗ ಮಾಲೇರಾಯ ಕಾಯಿಲೆಯಿಂದ ಸಾವಿಗೀಡಾಗಿದ್ದ; ಮಗಳು ಮುಕ್ತಾಬಾಯಿಗೆ ಸುಬೇದಾರ ಪಟ್ಟ ಸಿಗುವಂತಿಲ್ಲ. ಆಗ ಕೆಲ ಸ್ವಾರ್ಥಿಗಳಿಗೆ ದುರಾಶೆಯುಂಟಾಯಿತು. ಅವರಲ್ಲೊಬ್ಬ ಗಂಗಾಧರ ಯಶವಂತರಾಯನು ಒಂದು ದಿನ , “ನೀವು ಹೆಂಗಸರು. ರಾಜ್ಯಭಾರ ಮಾಡುವುದಕ್ಕೆ ನಿಮಗೆ ಕಷ್ಟವಾಗುತ್ತದೆ. ಆದ್ದರಿಂದ ಯಾವುದಾದರೂ ಒಬ್ಬ ಹುಡುಗನನ್ನು ದತ್ತು ಮಾಡಿಕೊಳ್ಳಿ. ಅವನು ದೊಡ್ಡವನಾಗುವವರೆಗೆ ನಾನೇ ರಾಜ್ಯವನ್ನು ಆಳುತ್ತಿರುತ್ತೇನೆ”, ಎಂದು ಅಹಲ್ಯಾಬಾಯಿಗೆ ಹೇಳಿದನು. ಆದರೆ ಅಹಲ್ಯಾಬಾಯಿ ಅದಕ್ಕೆ ಒಪ್ಪಲಿಲ್ಲ. ಇದರಿಂದ ಯಶವಂತರಾಯನಿಗೆ […]

ಆತ್ಮವಿಶ್ವಾಸ

ಚಿಂತನ - 0 Comment
Issue Date :

ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುತ್ತಾರೆ. ಅವರಲ್ಲಿ ಒಬ್ಬನು ಪಾಠಗಳನ್ನು ಚೆನ್ನಾಗಿ ಓದಿಕೊಂಡಿದ್ದಾನೆ, ಮಾತ್ರವಲ್ಲದೆ ಅಧ್ಯಾಪಕರು ಕೊಟ್ಟ ಸೂಚನೆಗಳಿಗೆ ಅನುಗುಣವಾಗಿ ಸಂಭಾವ್ಯ ಪ್ರಶ್ನೆಗಳಿಗೆ ಉತ್ತರಗಳನ್ನೂ ನೋಡಿಕೊಂಡಿದ್ದಾನೆ. ಕೆಲವು ಮುಖ್ಯ ವಿಷಯಗಳನ್ನು ಕಂಠಪಾಠ ಮಾಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ಓದಿದ್ದು ಕಡಮೆ, ಪ್ರಶ್ನೆ ಪತ್ರಿಕೆಗಳನ್ನು ಕೂಡ ಕೊನೆಯ ಗಳಿಗೆಯಲ್ಲಿ ನೋಡಲು ಅವನಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮೊದಲನೆಯವನು ಎರಡನೆಯವನಿಗಿಂತ ಅಧಿಕ ಅಂಕಗಳನ್ನು ಪಡೆಯಬೇಕಾಗಿತ್ತು. ಆದರೆ ಫಲಿತಾಂಶ ಬಂದಾಗ ಆದದ್ದೇ ಬೇರೆ. ಎರಡನೆಯವನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದರೆ ಮೊದಲನೆಯವನು ದ್ವಿತೀಯ ಶ್ರೇಣಿ ಗಳಿಸಿದ್ದ. […]

ಸಾಮಾನ್ಯರಿಗೂ ವೇದಜ್ಞಾನ ನೀಡುವ ಪುರಾಣಗಳು

ಚಿಂತನ - 0 Comment
Issue Date : 29.04.2015

ಪುರಾಣ ಎಂದರೆ ಪ್ರಾಚೀನ ಅಥವಾ ಹಳೆಯ ಆಖ್ಯಾನ ಎಂಬ ಅರ್ಥವಿದೆ. ಜಗತ್ತಿನ ಹಳೆಯ ಕಥೆ ಹಾಗೂ ಐತಿಹ್ಯಗಳನ್ನು ಸಂಕೇತಿಸುವ ಕಥೆಗಳ ಗುಂಪಿನ ಸಂಜ್ಞೆ. ವೇದ (ಅಥರ್ವ), ಶತಪಥ ಮತ್ತು ಗೋಪಥ ಬ್ರಾಹ್ಮಣ ಹಾಗೂ ಬೃಹದಾರಣ್ಯ ಕೋಪಷತ್ತಿನಲ್ಲಿ ಪುರಾಣ ಶಬ್ದ ಕಂಡುಬರುತ್ತದೆ. ಅಥರ್ವವೇದವು ಪುರಾಣದ ಹುಟ್ಟಿನ ಕುರಿತು ಯಜುಸ್ಸುಗಳೊಡನೆ ಯಜ್ಞ ಉಚ್ಛಿಷ್ಟದಿಂದ ಹುಟ್ಟಿದ್ದೆಂದು ಹೇಳಿದೆ. ಬೃಹದಾರಣ್ಯಕವು ವೇದ, ಇತಿಹಾಸ ಹಾಗೂ ಪುರಾಣಗಳು ಪರಮಾತ್ಮನ ಉಸಿರಿನಿಂದ ಹುಟ್ಟಿದವು ಎನ್ನುತ್ತದೆ. ವಾಯು ಪುರಾಣವು ವೇದಗಳಿಗಿಂತ ಮೊದಲು ಇತಿಹಾಸ – ಪುರಾಣಗಳು ಜನ್ಮ […]