ಸೂತಪುರಾಣಿಕರು

ಚಿಂತನ - 0 Comment
Issue Date : 08.05.2015

 ಜನಸಾಮಾನ್ಯರಿಗೂ ಸಂಸ್ಕೃತಿ ಶಿಕ್ಷಣ ನೀಡುವ ಮಾಧ್ಯಮ ಎಂದರೆ ‘ಪುರಾಣ ಪ್ರವಚನ’. ಯಜ್ಞಯಾಗ ನಡೆದಾಗ ಇಂಥ ಪ್ರವಚನಗಳು ಸಾಮಾನ್ಯವಾಗಿ ರುತ್ತಿದ್ದವು. ವೇದವೇದಾಂತಗಳು ನಿರೂಪಿಸುವ ‘ಧರ್ಮ’ವನ್ನು ಈ ಪುರಾಣಗಳು ಎಲ್ಲರಿಗೂ ಅರ್ಥವಾಗುವಂತೆ ಸರಳ ಉದಾಹರಣೆಗಳ ಮೂಲಕ ಹೇಳುತ್ತಿದ್ದುದು ಅರ್ಥಪೂರ್ಣ. ಸೂತಪುರಾಣಿಕರೆಂದೇ ಖ್ಯಾತರಾದ ಪುರಾಣ ಪ್ರವಚನಕಾರರು ಎಲ್ಲರ ಮಾನ್ಯತೆ ಗಳಿಸಿದವರು.  ಪಂಚವಿಂಶ ಬ್ರಾಹ್ಮಣದ ಪ್ರಕಾರ ಈ ಸೂತರಾಜನೊಡನೆ ಇದ್ದ ಅಷ್ಟವೀರರಲ್ಲಿ ಒಬ್ಬ. ರಾಜನ ಹನ್ನೊಂದು ರತ್ನಗಳಲ್ಲಿ ಈತನೊಬ್ಬ. ಯಜುರ್ವೇದದ ಶತರುದ್ರೀಯ ನಿರೂಪಿಸುವಂತೆ ಸೂತನೆಂದರೆ ‘ರಾಜಕೃತ್’ (ರಾಜನನ್ನು ಆರಿಸುವವ ಎಂಬರ್ಥ ದಲ್ಲಿ) ರಾಜನ […]

ಪುರಾಣ: ಬದುಕಿನ ದಾರಿದೀಪ

ಪುರಾಣ: ಬದುಕಿನ ದಾರಿದೀಪ

ಚಿಂತನ - 0 Comment
Issue Date : 29.04.2015

ಬಹು ಪ್ರಾಚೀನ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಯೋಗ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ವೇದಗಳನ್ನೇ ಆಶ್ರಯಿಸಬೇಕು. ಅಲ್ಲಿರುವ ಗಹನ ತತ್ತ್ವಗಳನ್ನು ಸಾಮಾನ್ಯರಿಗೂ ಎಟುಕುವಂತೆ ಮಾಡಿದ್ದು ಪುರಾಣಗಳು. ವೇದಜ್ಞಾನವನ್ನು ಸಂಪಾದಿಸಿಕೊಟ್ಟವರು ವ್ಯಾಸಮಹರ್ಷಿಗಳು. ಹಾಗೆಂದೇ ಅವರು ವೇದವ್ಯಾಸ ಎನಿಸಿದ್ದು, ಅವರೇ ವೇದವಿಹಿತ ಧರ್ಮ ಪ್ರತಿಪಾದನೆಗಾಗಿ ವೇದಾಂತ ಸಂಪಾದಿಸಿದರು. ಆಗಲೂ ಅವರಿಗೆ ತೃಪ್ತಿ ಆಗದೇ ಪುರಾಣಗಳನ್ನು ‘ಕಂಡರು.’ ಹದಿನೆಂಟು ಪುರಾಣಗಳು, ಅಷ್ಟೇ ಸಂಖ್ಯೆಯ ಉಪಪುರಾಣಗಳು ಹೀಗೆ ಜನ್ಮ ತಾಳಿದವು. ಇಷ್ಟಾದರೂ ಅವರ ಜ್ಞಾನ ಪ್ರಸಾರದ ಹಸಿವು ಹಿಂಗಲಿಲ್ಲ! ಪಂಚಮವೇದ ಎಂದು ಖ್ಯಾತವಾದ ಮಹಾಭಾರತವನ್ನು ಸಂರಚಿಸಿದರು. […]

ಅಖಿಳ ಬಾಂಧವರೊಡನೆ

ಅಖಿಳ ಬಾಂಧವರೊಡನೆ

ಚಿಂತನ - 0 Comment
Issue Date : 29.04.2015

ಮನುಷ್ಯ ಏಕಾಂಗಿಯಾಗಿ ಬಾಳಲಾರನಾದ್ದರಿಂದ ಅವನಿಗೆ ಕುಟುಂಬ, ಬಂಧುವರ್ಗ ಮತ್ತು ಸಾಮಾಜಿಕರ ನೆರವು ಅತ್ಯಗತ್ಯ. ಹೆಂಡತಿ – ಮಕ್ಕಳು – ಸಂಸಾರ ಎಂದ ಮೇಲೆ ಆತ ಅನೇಕ ಜನರೊಂದಿಗೆ ಪ್ರತಿ ದಿವಸವೂ ವ್ಯವಹರಿಸಬೇಕಾಗುತ್ತದೆ. ಈ ವ್ಯವಹಾರಗಳಲ್ಲಿ ಯಾರು ಯಶಸ್ವಿಯಾಗುತ್ತಾನೋ ಅವನು ಮಾತ್ರ ತನ್ನ ಬದುಕಿನಲ್ಲಿ ಶಾಂತಿ, ತೃಪ್ತಿ, ಸಮಾಧಾನಗಳನ್ನು ಪಡೆಯುತ್ತಾನೆ. ಆದ್ದರಿಂದಲೇ ಲಕ್ಷ್ಮೀಶ ಕವಿ ತನ್ನ ಜೈಮಿನಿ ಭಾರತದಲ್ಲಿ ‘ಅಖಿಳ ಬಾಂಧವರೊಡನೆ ಬದುಕದ ಮನುಷ್ಯಸಂಸಾರವಿದೇನ್?’ ಎಂಬ ಪ್ರಶ್ನೆ ಹಾಕುತ್ತಾನೆ. ಪ್ರೀತಿ ಪ್ರಾರಂಭವಾಗುವುದು ಮನೆಯಲ್ಲಿ ಎಂದರೆ ಅತಿಶಯೋಕ್ತಿಯಾಗದು. ಆದ್ದರಿಂದ ಪ್ರತಿಯೋರ್ವ […]

 ಅಜೀರ್ಣೇ ಭೇಷಜಂ ವಾರಿ

ಅಜೀರ್ಣೇ ಭೇಷಜಂ ವಾರಿ

ಚಿಂತನ - 0 Comment
Issue Date : 29.04.2015

ಊಟದ ವೇಳೆ ನೀರನ್ನು ಯಾವಾಗ, ಎಷ್ಟು ಕುಡಿಯಬೇಕು ಎನ್ನುವುದು ಅನೇಕರಿಗೆ ತಿಳಿದಿರುವುದಿಲ್ಲ. ಕೆಲವರು ಊಟಕ್ಕೆ ಮುನ್ನ, ಇಲ್ಲವೇ ಊಟದ ನಂತರ ಧಾರಾಳವಾಗಿ ನೀರನ್ನು ಕುಡಿಯುತ್ತಾರೆ. ಕೆಲವರು ಊಟದ ನಡು ನಡುವೆ ಕುಡಿದು ಬಿಡುತ್ತಾರೆ. ಕೆಲವರು ಹೆದರಿ ಭೋಜನದ ಸಮಯದಲ್ಲಿ ನೀರನ್ನೇ ಕುಡಿಯುವುದಿಲ್ಲ. ನಾರು, ಮಜ್ಜಿಗೆ ಇತ್ಯಾದಿಗಳಲ್ಲಿ ಸಾಕಷ್ಟು ನೀರಿನ ಪ್ರಮಾಣ ಇದೆಯಲ್ಲ ಅಂದುಕೊಳ್ಳುತ್ತಾರೆ. ಅಂತೂ ನೀರಿನ ಹಿತ – ಮಿತ ಬಳಕೆಯ ಕುರಿತು ಸ್ಪಷ್ಟವಾದ ಅಭಿಪ್ರಾಯ ಕೊಡುವವರು ವಿರಳ. ಆದರೆ ಚಾಣಕ್ಯ ನೀತಿ ದರ್ಪಣದಲ್ಲಿ ಈ ಕುರಿತು […]

ಅದ್ವೈತ ತಾನಾಗಿ

ಅದ್ವೈತ ತಾನಾಗಿ

ಚಿಂತನ - 0 Comment
Issue Date : 15.04.2015

ಇರುವುದು ಒಂದೇ ಬ್ರಹ್ಮ. ಅದು ಏಕಮೇವಾದ್ವಿತೀಯವಾದುದು. ದ್ವೈತ ಅಥವಾ ಎರಡು ಇಲ್ಲದ್ದು ಎಂದು ಅದ್ವೈತ ಸಿದ್ಧಾಂತವು ಸಾರುತ್ತದೆ. ಶಂಕರಾಚಾರ್ಯರು ಹೇಳುವ ಪ್ರಕಾರ ‘ಬ್ರಹ್ಮವೇ ಸತ್ಯ. ಜಗತ್ತು ಮಿಥ್ಯ. ಜೀವವೂ ಬ್ರಹ್ಮವೇ. ಅದಕ್ಕಿಂತ ಬೇರೆಯಿಲ್ಲ.’ ವಿಶ್ವದಲ್ಲಿರುವ ತತ್ತ್ವವು ಒಂದೇ ಆಗಿದ್ದರೆ ಅದು ಹಲವಾಗಿ ತೋರುವುದೇಕೆ? ಇದು ಹಲವರನ್ನು ಕಾಡುವ ಪ್ರಶ್ನೆ. ಇದಕ್ಕೆ ಮಾಯೆಯೇ ಕಾರಣವೆಂದು ಶಂಕರಾಚಾರ್ಯರು ಹೇಳುತ್ತಾರೆ. ಇಲ್ಲದಿರುವುದನ್ನು ಇರುವಂತೆ ತೋರಿಸಿಕೊಡುವ ಶಕ್ತಿಯೇ ಮಾಯೆ. ಈ ಮಾಯೆಯಿಂದಾಗಿ ಈಶ್ಚರ, ಜೀವ, ಜಗತ್ತು, ಇಂದ್ರಿಯಗಳು ಇವೆ ಮತ್ತು ಇವೆಲ್ಲ ಬೇರೆ […]

ಕೇವಲ ಹೆಣ್ಣಲ್ಲ , ಈಕೆ ಎಲ್ಲರ ಮಾನ್ಯತೆ ಪಡೆದ ಮಾತೆ

ಕೇವಲ ಹೆಣ್ಣಲ್ಲ , ಈಕೆ ಎಲ್ಲರ ಮಾನ್ಯತೆ ಪಡೆದ ಮಾತೆ

ಬೋಧ ಕಥೆ - 0 Comment
Issue Date : 14.04.2015

ಭಾರತೀಯ ಸ್ತ್ರೀ ಪರಂಪರೆಯು ಸಾಧಾರಣ ಕೌಟುಂಬಿಕ ಜೀವನ ಹಾಗೂ ಅಸಾಧಾರಣ ಆಧ್ಯಾತ್ಮಿಕತೆಯ ಸಮನ್ವಯಕ್ಕೆ ಬಹುದೊಡ್ಡ ನಿದರ್ಶನ. ಇವರ ಬದುಕು ಪಾಶ್ಚಾತ್ಯ ಭ್ರಮೆಯ ಲೋಕದ ಮಹಿಳೆಯರಂತೆ ಪ್ರದರ್ಶನದ್ದಲ್ಲ, ನಿದರ್ಶನ! ಕುಟುಂಬ ಜೀವನ ಹಾಗೂ ಆಧ್ಯಾತ್ಮಿಕತೆ ಎರಡೂ ಎಂದೂ ಪರಸ್ಪರ ವಿರೋಧವುಳ್ಳವಲ್ಲ. ಆಧ್ಯಾತ್ಮಿಕತೆಯು ಬದುಕಿನ ಬುನಾದಿ. ಬ್ರಹ್ಮವಾದಿನಿಯೊಬ್ಬಳು ಸದ್ಯೋವಧು ಆಗಿರಬಹುದು, ಸದ್ಯೋವಧುವೊಬ್ಬಳು ಬ್ರಹ್ಮವಾದಿನಿಯೂ ಆಗಿರಬಹುದು. ಕುಟುಂಬ ಜೀವನವೆಂದರೆ ಸಾಧಾರಣ, ಸಂಕುಚಿತ, ಸ್ವಾರ್ಥಪರ, ಸ್ಥಿಮಿತರಹಿತ, ಹೀನ ಅಲ್ಲ. ಅದೂ ಸಹ ಪರಮ ಸುಖದ ಸಾಧನೆಯ ಮಾರ್ಗ ಎಂಬುದನ್ನು ತೋರಿದ ಹಲವು ಸ್ತ್ರೀಯರು […]

ಗೂಳಿ ಸವಾರಿ

ಗೂಳಿ ಸವಾರಿ

ಕಥೆಗಳು - 1 Comment
Issue Date : 14.04.2015

ಕೃಷ್ಣ, ಬೃಂದಾವನದಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತಿದ್ದ ಮರದ ಬುಡದಲ್ಲಿ ಹುಲ್ಲು ಹಾಸಿಗೆಯ ಮೇಲೆ ಕುಳಿತು, ಯಾವುದೋ ಗಹನವಾದ ಯೋಚನೆಯಲ್ಲಿ ಮುಳುಗಿದ್ದನು. ಪರಿಸರ ಚಿಗುರಿದ ಎಲೆಗಳಿಂದ ಗಿಡ ಮರಗಳಲ್ಲಿ ಹಸಿರು ತುಂಬಿಕೊಂಡಿತ್ತು. ಫಲವತ್ತಾದ ಗಿಡಮರಗಳು ಫಲಗಳನ್ನು ಹೊರಲಾರದೆ ತಿಣುಕುತ್ತಿದ್ದವು. ಅವನ ಸಮೀಪದಲ್ಲೇ ಜಿಂಕೆ, ಮೊಲಗಳು ಚಕ್ಕಂದದಿಂದ ಓಡಾಡುತ್ತಿದ್ದವು. ನವಿಲುಗಳು ಗರಿಬಿಚ್ಚಿ ಕುಣಿಯುತ್ತಿದ್ದವು. ಕೋಗಿಲೆಗಳು ತಮ್ಮ ಸುಮಧುರ ಕಂಠದಿಂದ ‘ಕುಹೂ ಕುಹೂ’ ಎಂದು ಹಾಡುತ್ತಿದ್ದವು. ಅವನು ಪೀತಾಂಬರ ಉಟ್ಟಿದ್ದನು. ಅವನ ಹೆಗಲ ಮೇಲಿನ ಉತ್ತರೀಯ ಜಾರಿ ತೊಡೆಯ ಮೇಲೆ ಬಿದ್ದಿತ್ತು, […]

ಧಿಡೀರ್ ಕೆರೆ

ಕಥೆಗಳು - 0 Comment
Issue Date : 13.04.2015

ಸೇವ ನಮಿರಾಜ ಮಲ್ಲ  ಕಥೆ  ಯುದ್ಧ ನಡೆಯುತ್ತಿದ್ದರೂ, ಹೆಚ್ಚು ಆಹಾರ ಬೆಳೆಸಿ ಎಂಬ ಚಳುವಳಿಯನ್ನು ಸರ್ಕಾರ ಮುತುವರ್ಜಿಯಿಂದ ನಡೆಸುತ್ತಿತ್ತು. ನೆಲದಡಿಯಲ್ಲಿ ಕಂದಮೂಲಗಳು ಬೆಳೆಯುವ ತನಕ ಜನರಿಗೆ ಆಹಾರದ ಕೊರತೆ ಪ್ರಬಲವಾಗಿರಲಿಲ್ಲ. ಆದರೆ ತೆಂಕು ದಿಕ್ಕಿನ ಜನ ಈ ಕಂದಮೂಲಗಳ ಮೂಲಕ ಹಸಿವನ್ನು ಇಂಗಿಸಿಕೊಳ್ಳಲು ಯತ್ನಿಸಿ ಜೀವವನ್ನೇ ಕಳೆದುಕೊಳ್ಳುತ್ತಿದ್ದರು. ಹೀಗೆ ಕ್ಷಾಮದಿಂದಾಗಿ ಜನರು ಸಾಯಲು ಎರಡು ಕಾರಣಗಳಿದ್ದುವು : ಹೊಟ್ಟೆಗಿಲ್ಲದೆ ಸಾಯುವ ಜನ ಹೆಚ್ಚಾಗಿದ್ದರೂ, ಕಂದಮೂಲಾದಿ ಸಪ್ತ ಋಷಿಗಳ ಆಹಾರವನ್ನು ಭುಂಜಿಸಿಯೂ ಪ್ರಾಣ ಕಳೆದುಕೊಳ್ಳುವ ಮಂದಿ ಇದ್ದರು.  ಅದು […]

ಹೆಣ್ಣು: ಅಮೂಲ್ಯ ಹೊನ್ನು!

ಬೋಧ ಕಥೆ - 0 Comment
Issue Date : 13.04.2015

ಅಪರಿಮಿತ ‘ಪರಿಜ್ಞಾನ’ ವೇದರಾಶಿಯ ಬಹುಮೂಲ್ಯ ಋಚೆಗಳಲ್ಲಿ ಹಲವು ‘ಬ್ರಹ್ಮವಾದಿನಿ’ಯ ಹೆಸರಲ್ಲಿರುವುದು ಸ್ತ್ರೀ ಸಂಕುಲದ ಸಾಧನೆಗೆ ಉದಾಹರಣೆ. ಶ್ರೇಷ್ಠತೆ ಹಾಗೂ ಸಂಪೂರ್ಣತೆಗೆ ಮತ್ತೊಂದು ಹೆಸರೆನಿಸಿದ ‘ಭೂಮನ್’ ಈ ಮಹಿಳೆಯ ಅಂತಃಸತ್ವ ಎಂಬುದನ್ನು ನಾವು ಗಮನಿಸಬಹುದಾಗಿದೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಒಂದು ಸಂವಾದ ಬಹು ವಿಶಿಷ್ಟವಾದುದು. ಯಾಜ್ಞವಲ್ಕ್ಯ ಅಮಿತ ತೇಜಸ್ಸಿನ ಋಷಿ. ಆತನ ಪತ್ನಿಯರು ಈರ್ವರು, ಮೈತ್ರೇಯೀ ಹಾಗೂ ಕಾತ್ಯಾಯನೀ. ಆತ ಇಹಪ್ರಪಂಚದಿಂದ ಮುಕ್ತನಾಗಬಯಸಿದ. ತನ್ನೆಲ್ಲ ಸಂಪತ್ತನ್ನು ಈರ್ವರಿಗೂ ಸಮನಾಗಿ ಹಂಚಲು ಮುಂದಾದ. ಅದನ್ನು ತನಗೆ ಬೇಡ ಎಂದ ಮೈತ್ರೇಯೀ […]

ಅನ್ನವನು ಇಕ್ಕು

ಬೋಧ ಕಥೆ - 0 Comment
Issue Date : 13.04.2015

‘ಅನ್ನವನು ಇಕ್ಕು, ನನ್ನಿಯನು ನುಡಿ’ ಎನ್ನುವ ಕವಿ ವಾಕ್ಯವು ಮಾನವ ಜೀವನದ ಸಾರ್ಥಕ್ಯವನ್ನು ಅತ್ಯಂತ ಸರಳವಾಗಿಯೂ ಸುಂದರವಾಗಿಯೂ ಬಿಂಬಿಸುತ್ತದೆ. ಅತಿಥಿ ಸತ್ಕಾರ ಮತ್ತು ಸತ್ಯ ನಿಷ್ಠೆಗಳಿಗೆ ನಮ್ಮ ಪೂರ್ವಜರು ಎಷ್ಟು ಮಹತ್ತ್ವ ಕೊಡುತ್ತಿದ್ದರು ಎಂಬುದನ್ನು ಇದರಿಂದ ತಿಳಿಯಬಹುದು. ಹಸಿವೆಯು ಮನುಕುಲದ ಅತ್ಯಂತ ದೊಡ್ಡ ಪಿಡುಗು. ಜಗತ್ತು ಬಹಳಷ್ಟು ಸುಧಾರಣೆಗಳನ್ನು ಕಂಡಿದ್ದರೂ, ಇಂದಿಗೂ ಕೆಲವು ಬಡ ದೇಶಗಳಲ್ಲಿ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆಂಬುದು ತೀರಾ ನಾಚಿಕೆಗೇಡಿನ ಸಂಗತಿ. ಆದ್ದರಿಂದ ಯಾರು ಹಸಿದು ಅತಿಥಿಯಾಗಿ ಮನೆಗೆ ಬರುತ್ತಾರೋ ಅವರಿಗೆ ಊಟವನ್ನು […]