ಮಸಣದಿಂದ ಮನೆಗೆ

ಕಥೆಗಳು - 0 Comment
Issue Date : 27.10.2014

ಬೆಳಗಿನ ಜಾವದ ಸಮಯ. ತಣ್ಣನೆಯ ತಂಪುಗಾಳಿ ಬೀಸುತ್ತಿತ್ತು. ಹೊತ್ತೇರಲು ಇನ್ನೂ ಎರಡು ತಾಸಿತ್ತು. ಚಳಿಯಿಂದ ಸಿದ್ಧನು ತನ್ನ ಕಂಬಳಿಯನ್ನು ಪೂರ ಹೊದ್ದುಕೊಂಡು ಗುಡಿಸಿಲಿನ ಮೂಲೆಯಲ್ಲಿ ಮುದುಡಿಕೊಂಡ. ಗುಡಿಸಿಲಿನ ಬಾಗಿಲಿಗೆ ಉರಿಯುತ್ತಿದ್ದ ಕಂದೀಲು ನೇತಾಡುತ್ತಿತ್ತು. ಪಕ್ಕದಲ್ಲಿಯೇ ಅವನ ಊರುಗೋಲು ಬಾಗಿಲಿಗೆ ಆತುಕೊಂಡು ನಿಂತಿತ್ತು. ಕಳೆದ ಹದಿನಾಲ್ಕು ವರ್ಷಗಳಿಂದ ಅವೆರಡೇ ಇವನ ಸಂಗಾತಿಗಳು. ತನ್ನ ಸೋದರಮಾವನ ಮರಣಾನಂತರ, ಸ್ಮಶಾನ ಕಾಯಲು ಬಂದಿದ್ದ. ಹಿಂದೆ ಮುಂದೆ ದಿಕ್ಕಿಲ್ಲದೆ, ಕುಲವೃತ್ತಿಯನ್ನು ಸಂತೋಷದಿಂದ ಕೈ ಗೊಂಡಿದ್ದ. ಸದಾಕಾಲವೂ ರಣ ರಣ ಎನ್ನುತ್ತಿದ್ದ ಸ್ಮಶಾನದ ರುದ್ರಭೂಮಿಯಲ್ಲಿ, […]

ಕಂಬನಿಯೊಳಗಿನ ಬಿಂಬ

ಕಂಬನಿಯೊಳಗಿನ ಬಿಂಬ

ಕಥೆಗಳು - 0 Comment
Issue Date : 19.10.2014

ಕಳೆದ ಒಂದೂವರೆ ಗಂಟೆಯಿಂದ ಶಿವಲಿಂಗನು ತನ್ನ ಮನೆಗೆ ಸಂಬಂಧಿಸಿದ ಯಾವುದೊ ಕಾಗದ ಪತ್ರಗಳನ್ನು ಹುಡುಕುತ್ತಿದ್ದ. ತನ್ನ ಹಳೆಯ ಎಲ್ಲ ಪುಸ್ತಕಗಳನ್ನು ಹರವಿಕೊಂಡು ಚಿಂತಾಕ್ರಾಂತನಾಗಿ ಕುಳಿತಿದ್ದ. ಜೊತೆಗೆ ನಾಲ್ಕಾರು ಫೈಲುಗಳಲ್ಲಿಯ ಕಾಗದ ಪತ್ರಗಳನ್ನು ತಿರುವಿ ಹಾಕಿದ್ದ. ಸಾಹಿತ್ಯದ ಅಭಿರುಚಿಯುಳ್ಳವನಾಗಿದ್ದ ಅವನು ಒಂದಿಷ್ಟು ಗ್ರಂಥಗಳನ್ನು ಮನೆಯಲ್ಲಿರಿಸಿಕೊಂಡಿದ್ದನು. ತನಗೆ ಈಗ ಬೇಕಾಗಿರುವ ಕಾಗದಪತ್ರವು ಗಡಿಬಿಡಿಯಲ್ಲಿ ಅವುಗಳಲ್ಲೇನಾದರೂ ಮರೆತು ಇಟ್ಟರಬಹುದೆಂದು ಲೆಕ್ಕಾಚಾರದಲ್ಲಿ ಪ್ರತಿ ಪುಸ್ತಕದ ಹಾಳೆಗಳನ್ನು ಸರಿಸಿ ಸರಿಸಿ ನೋಡಿದ್ದಾಗಿತ್ತು. ಹಲವಾರು ಗ್ರಂಥಗಳ ನಡುವೆ, ಅವನು ಹೈಸ್ಕೂಲ್ ಕಲಿಯುವಾಗಿನ ಪಠ್ಯ ಪುಸ್ತಕಗಳೆರಡು ದೊರೆತವು. […]

ಮುಂದುವರಿದವರು

ಕಥೆಗಳು - 0 Comment
Issue Date : 17.10.2014

ಜ್ವರದಿಂದ ಹಾಸಿಗೆ ಹಿಡಿದಿದ್ದ ನಾನು ಚೇತರಿಸಿಕೊಳ್ಳುತ್ತಿದ್ದೆ. ಕಡೆಯ ಪಕ್ಷ ಒಂದು ವಾರವಾದರೂ ವಿಶ್ರಾಂತಿ ಅಗತ್ಯ ಎಂದು ಡಾಕ್ಟರು ಹೇಳಿದ್ದರಿಂದ ರಜೆ ಅರ್ಜಿ ಸಲ್ಲಿಸಿ ಮನೆಯಲ್ಲೇ ಇದ್ದೆ.  ಬೆಳಿಗ್ಗೆ ಎದ್ದು ದಿನಪತ್ರಿಕೆಯತ್ತ ಕಣ್ಣು ಹಾಯಿಸುತ್ತಿದ್ದಾಗ ಟೆಲಿಫೋನ್ ಗಂಟೆ ಬಾರಿಸಿತು. ಕರೆ ನಮ್ಮ ಮೇಲಧಿಕಾರಿಯವರದು. ವ್ಯವಸ್ಥಾಪಕ ನಿರ್ದೇಶಕರು ತುರ್ತು ಸಭೆ ಕರೆದಿದ್ದು, ಕಾರ್ಯಸೂಚಿ ಸಿದ್ಧಗೊಳಿಸಲು ಒಂದೆರಡು ಗಂಟೆಗಳ ಮಟ್ಟಿಗಾದರೂ ಕಚೇರಿಗೆ ಬರಬೇಕೆಂದು ಕೋರಿದರು. ಮೇಲಧಿಕಾರಿಗಳ ಸೂಚನೆ ಪಾಲಿಸದಿರಲು ಸಾಧ್ಯವೇ? ವಿಧಿಯಿಲ್ಲದೆ ಮನೆಯಿಂದ ಹೊರಡಲೇಬೇಕಾಯಿತು. ಮನೆ ಇರುವುದು ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ […]

ಅವಳು ಕನಸು ಕಂಡಳು

ಅವಳು ಕನಸು ಕಂಡಳು

ಕಥೆಗಳು ; ಲೇಖನಗಳು - 0 Comment
Issue Date : 16.10.2014

ಗುಡಿಸಲಲ್ಲಿ ಮಕ್ಕಳು ಅಸ್ತವ್ಯಸ್ತವಾಗಿ ಮಲಗಿದ್ದವು. ಒಂದೊಂದು ಆಕೃತಿ ಒಂದೊಂದು ತರ. ಎಲ್ಲರೂ ಅವಳ ಮಕ್ಕಳೆ, ಒಂದರ ಬಣ್ಣ ಇನ್ನೊಂದರ ತರವಿಲ್ಲ; ಒಂದರ ಗಾತ್ರ ಬೇರೆ. ಎಲ್ಲರೂ ಅವಳ ಮಕ್ಕಳೆ. ತಾಯಿ ಆ ಮಕ್ಕಳನ್ನೆಲ್ಲ ನೋಡಿದಳು. ಒಮ್ಮೆಲೆ ಗುಡಿಸಲಕ್ಕೆ ಬೆಂಕಿ ಹತ್ತಿತು. ನಿಟ್ಟುಸಿರನ್ನು ಹಾಕಿದಳು. ತಾಯಿ ಗಡಬಡಿಸಿ ಕೂಗಿದಳು. “ಮನೆಗೆ ಬೆಂಕಿ ಬಿದ್ದಿದೆ !” ಮಕ್ಕಳೆಲ್ಲ ಕಣ್ಣುತೆರೆದು ನೋಡಿದರು. ಆ ಮನೆಯ ಉತ್ತರದ ಕಡೆಗೆ ಬೆಂಕಿ ಬಿದ್ದುದು ನಿಜವಾಗಿತ್ತು. ಬೆಂಕಿ ! ಬೆಂಕಿ !! ಎಲ್ಲರೂ ಕೂಗಿದರು. ಆದರೆ, […]

ಪ್ರತಿಧ್ವನಿ

ಪ್ರತಿಧ್ವನಿ

ಕಥೆಗಳು - 0 Comment
Issue Date : 15.10.

ವೇಲುಗೆ ಆ ಶಕ್ತಿ ಬಂದುದು ಹಠಾತ್ತನೆ ಹಾಗೂ ಅನಿರೀಕ್ಷಿತವಾಗಿ. ಅದು ಹೇಗೆ ಬಂತು, ಏಕೆ ಬಂತು ಎಂಬುದು ಆತನಿಗೆ ಅರಿವಿಲ್ಲ. ಆ ಶಕ್ತಿ ಬಂತು ಅಷ್ಟೆ! ಅಂತಹ ಶಕ್ತಿಯು ಯಾವನಾದರೂ ಒಳ್ಳೆಯ ವ್ಯಕ್ತಿಗೆ ಬಂದಿದ್ದರೆ ಅದು ದೇವರು ಕೊಟ್ಟ ವರ ಎನ್ನಬಹುದಿತ್ತು. ಆದರೆ ವೇಲುವಾದರೋ ಒಬ್ಬ ಸಣ್ಣ ಕಳ್ಳ, ಜೂಜುಕೋರ. ಅವನ ಮುಖ್ಯ ದಂಧೆ ಚಿತ್ರಮಂದಿರದಲ್ಲಿ ಕಾಳಸಂತೆಯಲ್ಲಿ ಟಿಕೆಟ್ ಮಾರುವುದು, ಕ್ರಿಕೆಟ್ ಬೆಟ್ಟಿಂಗ್ ನಡೆಸುವುದು ಮುಂತಾಗಿ. ಕಾಲೇಜು ಮಕ್ಕಳಿಗೆ ಮಾದಕ ವಸ್ತು ಪೂರೈಸುವ ಕೆಲಸವೂ ಮಾಡುತ್ತಿದ್ದ. ಆದರೆ […]

ನೂರರ ಒಂದು ನೋಟು

ನೂರರ ಒಂದು ನೋಟು

ಬೋಧ ಕಥೆ - 0 Comment
Issue Date : 13.10.2014

ನಡುರಸ್ತೆಯಲ್ಲಿ ನೂರರ ಒಂದು ನೋಟು ಸಿಕ್ಕಿಬಿಟ್ಟಿದೆ ಸೋಮನಿಗೆ. ಅವನು ತಿರುಗಿಸಿ ಮುರುಗಿಸಿ ನೋಡಿದನು. ನಿಜ ಅದು ನೂರರ ನೋಟು. ಈ ನೋಟು ಯಾರಿಗೆ ಸೇರಿದ್ದೋ, ನಿಜವಾಗಿ ಶ್ರೀಮಂತ ಬೀಳಿಸಿಕೊಂಡು ಹೋಗಿದ್ದರೆ ಪರವಾಗಿಲ್ಲ. ಆದರೆ ಬಡವ ಆಕಸ್ಮಿಕವಾಗಿ ಬೀಳಿಸಿದ್ದರೆ?. ಅವನಿಗೆ ಎಷ್ಟು ಕಷ್ಟವಿದೆಯೋ ಏನು ಕತೆಯೋ! ದೇವರೆ ನನಗೇಕೆ ಸಿಕ್ಕಿತು ಈ ನೋಟು ಎಂದು ಸೋಮ ಚಿಂತಿಸುತ್ತಿದ್ದನು. ಆದರೆ ಅದರ ಒಡೆಯ ಮಾತ್ರ ಪತ್ತೆಯಾಗಲಿಲ್ಲ. ಅದನ್ನು ಖರ್ಚುಮಾಡುವುದಕ್ಕೂ ಸೋಮನಿಗೆ ಮನಸ್ಸಿಲ್ಲ. ಅದನ್ನು ತನ್ನ ಒಳಜೋಬಿನಲ್ಲಿಟ್ಟುಕೊಂಡೇ ಸೋಮ ಸದಾ ತಿರುಗಾಡುತ್ತಿದ್ದನು. […]

ಹಿತ ಮತ್ತು ಪ್ರಿಯ

ಚಿಂತನ - 0 Comment
Issue Date : 15.10.2014

ಪ್ರಿಯವಾಗಿ ಇರುವುದೆಲ್ಲವೂ ಹಿತವನ್ನುಂಟು ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಿಯವೆಂದರೆ ಈಗ ಚೆನ್ನಾಗಿ ತೋರುವುದು-ಈಗ ಮಾತ್ರ ಬೇಕಾದುದು ಎನ್ನುತ್ತಾರೆ ಪ್ರಾಜ್ಞರು. ಪ್ರಿಯವನ್ನು ಅಪಥ್ಯವಾದ ರುಚಿ ಎನ್ನಬಹುದು. ಮಡದಿ-ಮಕ್ಕಳು-ಬಂಧು ಬಳಗ (ಹೆಂಡತಿಯ ಮಾತಿಗಾದರೆ ಗಂಡ ಮನೆ ಮಕ್ಕಳು….) ಇವರೆಲ್ಲರೂ ಪ್ರಿಯರು ನಿಜ. ಆದರೆ ಇವರು ತೋರುವ ಪ್ರೀತಿಯೆಲ್ಲಾ ಒಂದು ಅರ್ಥದಲ್ಲಿ ತಮ್ಮ ಸುಖ ನೆಮ್ಮದಿಗೆ ಮಾತ್ರ (ಅದೂ ತಾತ್ಕಾಲಿಕ ಎಂದು ತಿಳಿಯುವಾಗ ಕಾಲ ಮಿಂಚಿರುತ್ತದೆ!) ಎನ್ನಬಹುದು. ಸತ್ಯ ಸಂಗತಿ ಇದಲ್ಲ- ಪ್ರತ್ಯಗಾತ್ಮನು ಎಲ್ಲರಿಗಿಂತಲೂ ಪ್ರಿಯನಾದವನು. ಆತ್ಮನನ್ನು ಪ್ರಿಯನು ಎಂದರಿತವನಿಗೆ […]

ಅಪ್ರಿಯವಾದೊಡಂ ಹಿತವಂ ನುಡಿ

ಚಿಂತನ - 0 Comment
Issue Date : 13.10.2014

ಯಾರೇ ಆಗಲಿ, ಹಲವು ಮಾತುಗಳನ್ನಾಡಿದರೆ ಕೆಲವು ನುಡಿಗಳು ಕೇಳಲು ಪ್ರಿಯವಾಗಿರುತ್ತವೆ. ಆದರೆ ಅವು ಹಿತಕರವಾಗಿರುವುದಿಲ್ಲ. ಕೆಲವು ಮಾತುಗಳು ಹಿತಕಾರಿಯಾಗಿದ್ದರೂ ಪ್ರಿಯವಾಗಿರುವುದಿಲ್ಲ. ಇನ್ನು ಕೆಲವು ನುಡಿಗಳು ಏಕಕಾಲಕ್ಕೆ ಪ್ರಿಯವೂ ಹಿತಕರವೂ ಆಗಿರುತ್ತವೆ. ಇವುಗಳಲ್ಲಿ ಹೇಳುವವನು ಯಾವ ದಾರಿಯನ್ನು ಅನು ಸರಿಸಬೇಕು? ಇದೇ ಬಹು ಮಂದಿಯನ್ನು ಕಾಡುವ ಪ್ರಶ್ನೆ. ಯಾವುದೇ ಮಾತಿನ ನಿಜವಾದ ಉದ್ದೇಶವೇನು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಪ್ರಶ್ನೆಗೆ ಸರಿಯಾದ ಉತ್ತರ ಹೊಳೆ ಯುತ್ತದೆ. ಕೇಳುಗನ ಕಿವಿಗೆ ಆಪ್ಯಾಯಮಾನವಾಗಿರಬೇಕು ಎಂಬುದಷ್ಟೇ ಮಾತಿನ ಗುರಿಯಲ್ಲ. ಏಕೆಂದರೆ ಆತನಿಗೆ ಖುಷಿಯಾಗಬೇಕೆಂದು […]

ಸಿದ್ಧಿ

ಚಿಂತನ - 0 Comment
Issue Date : 08.10.2014

ಸಾಧನೆಯಿಂದ ಮಾತ್ರವೇ ಸಿದ್ಧಿ. ಸಾಧನೆಗಾಗಿ ಸಾಧಕ ತನ್ನ ಗುರಿಯನ್ನು ತಲುಪಲು ಮಾಡಬೇಕಾದ ಸತ್ಕಾರ್ಯ ಸಾಧನೆ ಎನ್ನಿಸಿಕೊಳ್ಳುತ್ತದೆ. ಯೋಗ್ಯ ಗುರುವಿನ ಮಾರ್ಗದರ್ಶನ ಯೋಗ್ಯ ದಾರಿ ಇವು ಸಿದ್ಧಿಯ ಸಾಧನ. ಇಹ ಮತ್ತು ಪರವನ್ನು ಜೋಡಿಸುವ ಮಾತ್ರವಲ್ಲ , ಇಹವನ್ನೇ ಪರವನ್ನಾಗಿ ಅರಳಿಸುವ ಸಾಧನ ಯೋಗ. ಯೋಗ ಎಂದರೇ ಜೋಡಿಸುವುದು ಎಂಬ ಅರ್ಥವೂ ಇರುವುದು ಇಲ್ಲಿ ಗಮನಿಸಬೇಕಾದ ಅಂಶ. ಯೋಗ ಸಾಧಕ ಯೋಗಿ. ಈ ಸಾಧನೆಯಿಂದ (ಹಠಯೋಗ) ಎಂಟು ಸಿದ್ಧಿಗಳು ಉಂಟಾಗುತ್ತವೆ. ಅಣಿಮಾ (ಅಣು ಭಾವ ಪಡೆಯುವುದು) ಮಹಿಮಾ (ಅತಿ […]

ನೋವು ಅನುಭವಿಸದೆ ಬುದ್ಧಿ ಬರುವುದಿಲ್ಲ

ಕಥೆಗಳು - 0 Comment
Issue Date : 06.10.2014

ರಂಗಯ್ಯನವರು ಎಲ್ಲದರಲ್ಲೂ ಸರಿ, ಆದರೆ ಅವರಿಗೆ ಶಾಪ ಹಾಕುವ ಕೆಟ್ಟ ಚಟವೊಂದಿತ್ತು. ಯಾರೇನಾದರು ಕೆಟ್ಟಮಾತುಗಳನ್ನು ಆಡಿದರೆ, ಬೈದುಗಿಯ್ದು ಮಾಡಿದರೆ, ತೊಂದರೆ ಕೊಟ್ಟರೆ, ‘ನಿನ್ನ ವಂಶ ನಿರ್ವಂಶವಾಗ, ನಿನ್ನ ಬಾಯಿ ಬಿದ್ದು ಹೋಗ’ ಎಂದೆಲ್ಲಾ ಬೈಯುತ್ತಿದ್ದರು. ಕೈ ಲಟಿಕೆ ಮುರಿದು ಹಿಡಿಹಿಡಿ ಶಾಪ ಹಾಕುತ್ತಿದ್ದರು. ಅವರಮ್ಮ ಕುಮುದಾ ಬಾಯಿ, ಹಾಗೆಲ್ಲ ಅನ್ನಬಾರದು, ಬೈದವರನ್ನು ಪ್ರೀತಿಸು, ತೊಂದರೆ ಕೊಟ್ಟವರನ್ನು ಕ್ಷಮಿಸು, ದೇವರು ನಿನಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂದರೆ ರಂಗಯ್ಯನವರು ಕೇಳುತ್ತಿರಲಿಲ್ಲ. ಇದರಿಂದಾಗಿ ಅವರನ್ನು ಪ್ರೀತಿಸುವವರಿಗಿಂತ ದ್ವೇಷಿಸುವವರೇ ಹೆಚ್ಚಾಗಿದ್ದರು. ಆದರೂ ರಂಗಯ್ಯನವರಿಗೆ […]