ಅನಿಯತ ಪದಂ

ಚಿಂತನ - 0 Comment
Issue Date : 06.10.2014

‘‘ಅನಿಯತ ಪದಮ ಸ್ವಯಂ ಪ್ರಭುವಿನ ಮಾರ್ಗಂ’’ ( ಅನಿಶ್ಚಿತ ನಡೆ ಸರ್ವಾಧಿಕಾರಿಯ ಮಾರ್ಗ) ಎಂದು ರುದ್ರ ಭಟ್ಟ ಕವಿಯು ತನ್ನ ‘ಜಗನ್ನಾಥ ವಿಜಯ’ದಲ್ಲಿ ಹೇಳಿರುವುದು ತುಂಬ ಸಮಂಜಸವಾಗಿದೆ. ಏಕೆಂದರೆ ಆನುವಂಶಿಕವಾಗಿಯೋ, ಆಯ್ಕೆ ಮೂಲಕವೋ ಸಿಂಹಾಸನವೇರಿ ದವನಿಗೆ ಇರುವ ಕ್ರಮ ಬದ್ಧತೆ, ಪೂರ್ವ ಸಿದ್ಧತೆ, ನಿಯಂತ್ರ ಣಾದಿಗಳು ಸ್ವಯಂ ರಾಜ್ಯಾಧಿಪತ್ಯವನ್ನು ಸೆಳೆದು ಕೊಂಡವನಿಗೆ ಇರುವುದಿಲ್ಲ. ಗಣರಾಜ್ಯ ಪದ್ಧತಿಯಲ್ಲಿ ಕಾಣಿಸುವ ಸಂವಿಧಾನವೂ (ಲಿಖಿತ ಅಥವಾ ಅಲಿಖಿತ) ಈತನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆನೆ ಮೆಟ್ಟಿದ್ದೇ ದಾರಿ ಎಂಬಂತೆ ಇವನು ಸ್ವೇಚ್ಛೆ […]

ಗಾಂಧೀಜಿ ಕಂಡ ಭಾರತಮಾತೆ

ಬೋಧ ಕಥೆ - 0 Comment
Issue Date :

ಡಿಸೆಂಬರ್ 1924 ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧಿವೇಶನ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಒಂದೇ ಒಂದು ಅಧಿವೇಶನ ಅದು. ರಾಜಕೀಯ ಚರ್ಚೆಗಳೊಡನೆ ಸಂಗೀತ ನಾಟಕಗಳೂ ಅಲ್ಲಿದ್ದವು. ಭಾರತಮಾತಾ ಎಂಬ ನಾಟಕವೊಂದು ಅಲ್ಲಿ ಪ್ರದರ್ಶನಗೊಳ್ಳುವುದಿತ್ತು. ಅದರಲ್ಲಿ  ಹುಬ್ಬಳಿಯ 13 ವರ್ಷದ ಹುಡುಗಿಯೊಬಳ್ಳದು ಭಾರತಮಾತೆಯ ಪಾತ್ರ. ಆಕೆಯ ಅಧ್ಯಾಪಕಿ ಬರೆದು ಕಲಿಸಿದ ನಾಟಕ ಅದು.  ನಾಟಕ ಆಡುವ ಮಕ್ಕಳು, ಆಡಿಸುವ ಆ ಅಧ್ಯಾಪಕಿ-ಎಲ್ಲರಲ್ಲೂ ಒಂದು ರೀತಿಯ ಭಯಮಿಶ್ರಿತ ಆನಂದ. ನಾಟಕ ನೋಡಿ ಗಾಂಧೀಜಿಯವರು ಏನೆಂದಾರು ಎಂಬ ಭಯ ಒಂದೆಡೆ. ಸ್ವತಃ ಗಾಂಧೀಜಿಯ […]

ಅರಿವಿನ ಬೆಳಕ ಬೀರುವ ಕಾರ್ಯ

ಚಿಂತನ - 0 Comment
Issue Date : 25.09.2014

ಅರಿವು ಅಮೃತ, ಅದನ್ನು ಪಾನ ಮಾಡಿದವರಿಗೆ ಖಂಡಿತ ಸಾವಿಲ್ಲ. ಅವರೆಲ್ಲ ಅಮರರು. ಆದ್ದರಿಂದಲೇ ಅರಿವಿನ ಬೆಳಕಿನಿಂದ ಎಲ್ಲರ ಬಾಳಿಗೂ ಬೆಳಕಾದ ವೇದವ್ಯಾಸರಂತಹ ಋಷಿವರ್ಯರ, ಅವರೇ ಸಾಕ್ಷಿಯಾಗಿ ನಿಂತು (ಒಳಿತನ್ನೇ ಬಯಸುವ ಪ್ರಜ್ಞೆ – ಒಳಿತನ್ನೇ ಆಚರಿಸುವ ಪ್ರಜ್ಞೆ ಗೆ ಬದುಕನ್ನೇ ಸಾಕ್ಷಿ ಆಗಿಸಿದವರು- ತಾವು ಸುರಕ್ಷಿತ ದೂರದಲ್ಲಿ ನಿಂತು ಹೆರವರನ್ನು ಆಳಕ್ಕೆ ತಳ್ಳಿ ಬಿಡುವ ಆಧುನಿಕ ‘ಸಾಕ್ಷಿ ಪ್ರಜ್ಞೆ’ಗಳಂತಲ್ಲ ಇವರು) ಸಾಮಾನ್ಯರಿಗಾಗಿ ತಿಳಿವಿನ ಕಂದೀಲು ವೇದ- ಪುರಾಣಗಳ ಮೂಲಕ ಸತ್ಯ ಇತಿಹಾಸವನ್ನು ತೆರೆದಿಟ್ಟು ಆ ಬೆಳಕಿನಲ್ಲಿ ಬೆಳಕಾಗಿ […]

ಮನುಷ್ಯನಿಗೆ ಇರದ ಕೃತಜ್ಞತೆ

ಮನುಷ್ಯನಿಗೆ ಇರದ ಕೃತಜ್ಞತೆ

ಕಥೆಗಳು - 0 Comment
Issue Date : 24.09.2014

ಕೆಂಪ ಒಂದು ನಾಯಿಯನ್ನು ಸಾಕಿದ್ದನು. ಅವನು ಅದನ್ನು ಹೊರಗೆಲ್ಲಿಗೂ ಬಿಡುತ್ತಿರಲಿಲ್ಲ. ಹೊರಗೆ ಹೋದರೆ ಗಲೀಜು ತಿಂದು ಬರುತ್ತದೆ ಎಂದು ಅವನಿಗೆ ಗೊತ್ತಿತ್ತು. ಅದಕ್ಕಾಗಿ ಅವನು ಮನೆಯಲ್ಲೆ ಅದನ್ನು ಕಟ್ಟಿ ಹಾಕಿರುತ್ತಿದ್ದನು. ಕಾಂಪೌಂಡ್ ಹೊರಗೆ ಬಿಡದಿದ್ದುದರಿಂದ ಒಮ್ಮೊಮ್ಮೆ ಕರಿಯ ಮನಸೋ ಇಚ್ಛೆ ಬೊಗಳುತ್ತಿತ್ತು. ಅದರಲ್ಲೂ ತನ್ನ ಜಾತಿಯ ನಾಯಿಗಳನ್ನು ಕಂಡರೆ ಅದು ಹೆಚ್ಚಾಗಿ ಬೊಗಳುತ್ತಿತ್ತು. ಅವೇನಾದರು ಕಾಂಪೌಂಡಿನ ಹತ್ತಿರಕ್ಕೆ ಬಂದರೆ ಎಗರಾಡುತ್ತಿತ್ತು. ಕರಿಯನನ್ನು ಸರಪಳಿಯಲ್ಲಿ ಕಟ್ಟಿಹಾಕಿರುತ್ತಿದ್ದುದರಿಂದ ಅದನ್ನು ಕಿತ್ತುಕೊಂಡು ಓಡಲು ಅದರಿಂದ ಸಾಧ್ಯವಾಗುತ್ತಿರಲಿಲ್ಲ. ಅದರ ಬೊಬ್ಬೆ ಕೇಳಿದರೆ ಒಳಗಿದ್ದ […]

ಅತನು ತಾಪಮೆ ತಾಪಂ

ಚಿಂತನ - 0 Comment
Issue Date : 22.09.2014

ಅರಿಷಡ್ವರ್ಗಗಳಲ್ಲಿ ಮೊದಲನೆಯದೇ ಕಾಮ. ಅದರಿಂದ ಉಂಟಾಗುವ ಉರಿಗೆ ಸಮನಾದುದು ಬೇರೆ ಯಾವುದೂ ಇಲ್ಲ. ಇದನ್ನು ತೋರಿಸಿಕೊಡುವ ನೂರಾರು ಪ್ರಸಂಗಗಳು ಹಿಂದೆ ನಡೆದಿವೆ, ಈಗಲೂ ನಡೆಯುತತ್ತಿವೆ, ಮುಂದೆಯೂ ನಡೆಯದಿರಲು ಸಾಧ್ಯವಿಲ್ಲ. ಆದ್ದರಿಂದಲೇ ನೇಮಿಚಂದ್ರನು ತನ್ನ ‘ಲೀಲಾವತಿ’ ಕೃತಿಯಲ್ಲಿ ‘‘ಅತನು ತಾಪಮೆ ತಾಪಂ’’ (ಅತನು ಎಂದರೆ ಅನಂಗನಾದ ಕಾಮ; ತಾಪವೆಂದರೆ ಉರಿ, ಸಂಕಷ್ಟ.) ಎಂದು ಉದ್ಗರಿಸಿದ. ಕಾಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ; ಕಾಮವು ಕುರುಡುತನದ ಅವಳಿಯೆಂದು ಅರೇಬಿಯಾ ದೇಶದ ಗಾದೆಯೊಂದು ಸಾರುತ್ತದೆ. ಕಾಮಮೋಹಿತನಾದ ವ್ಯಕ್ತಿಗೆ ಸ್ತ್ರೀಯೊಬ್ಬಳು ಕಾಣ ಸಿಕ್ಕಿದರೆ ಸಾಕು. ಅವಳ […]

ಇಹವೇ ಪರವಾಗಿ ಅರಳುವ ಪರಿ

ಚಿಂತನ - 0 Comment
Issue Date : 15.08.2014

‘ಜ್ಞಾನ’ ಎಂದರೆ ಅರಿವು ತಿಳಿವಳಿಕೆ. ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ’ ಎಂದಿದೆ ಗೀತೆ. ಅದಕ್ಕೆ ಹೋಲಿಕೆ ಆಗಲಿ ಸರಿ ಮಿಗಿಲಾದುದಾಗಲೀ ಯಾವುದೂ ಅಲ್ಲ. ಅದು ಪವಿತ್ರ, ಅದುವೇ ಪವಿತ್ರ. ತನ್ನ ಬಳಿ ಸಾರಿದವರನ್ನೆಲ್ಲ ಬೆಳಗಿಸುವ ದಿವ್ಯ ಬೆಳಕು. ವಸ್ತು ವಿಷಯ ಜ್ಞಾನವು ಭೌತಿಕವಾದುದು. ಅದು ಸತ್ಯವೆನಿಸದು. ಅದಕ್ಕಿಂತ ಭಿನ್ನವಾದ, ಮಿಗಿಲಾದುದು, ಎಂದೂ ಮಾಸದ ಶಾಶ್ವತವಾದ ಜ್ಞಾನವೇ ನೈಜ ಜ್ಞಾನ. ಅದು ತನ್ನ ಆತ್ಮನ ಇರವನ್ನು ಗುರುತಿಸಬಲ್ಲದು. ಆ ಮೂಲಕ ಬ್ರಹ್ಮನ ಇರವನ್ನು ಆ ವಿಷಯದ ಜ್ಞಾನವನ್ನು […]

ಮಿಲ್ಕಿವೇ-ಅಂದುಕೊಂಡಿದ್ದಕ್ಕಿಂತ ಚಿಕ್ಕ ಗಾತ್ರದ್ದು!

ವಿಶೇಷ ಸುದ್ದಿಗಳು - 0 Comment
Issue Date : 11.08.2014

ನಮ್ಮ ಸೌರವ್ಯೆಹ ವ್ಯವಸ್ಥೆಯನ್ನು ಒಳಗೊಂಡಿರುವ ಮಿಲ್ಕಿವೇ(ಕ್ಷೀರಪಥ) ಗ್ಯಾಲಾಕ್ಸಿ ವಿಜ್ಞಾನಿಗಳೆಲ್ಲ ಅಂದುುಕೊಂಡಿದ್ದಕ್ಕಿಂತ ಗಾತ್ರದಲ್ಲಿ ಸಣ್ಣದು ಎಂಬುದನ್ನು ಇತ್ತೀಚೆಗೆ ಲಂಡನ್ನಿನ ಖಗೋಳಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಈ ಗ್ಯಾಲಾಕ್ಸಿಯ ಪಕ್ಕದಲ್ಲಿರುವ ಆಂಡ್ರೊಮೆಡಾ ಎಂಬ ಗ್ಯಾಲಾಕ್ಸಿಗಿಂತ ತೂಕದಲ್ಲೂ ಮಿಲ್ಕಿವೇ ಚಿಕ್ಕದು ಎಂದವರು ಹೇಳಿದ್ದಾರೆ. ಆಂಡ್ರೊಮೆಡಾವು ಮಿಲ್ಕಿವೇಗಿಂತ ಹೆಚ್ಚು ಕತ್ತಲನ್ನು ಹೊಂದಿದ್ದು, ಇದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದೆಯಂತೆ. ಆದರೆ ಗಾತ್ರದಲ್ಲಿ ಮಾತ್ರ ನಮ್ಮ ಮಿಲ್ಕಿವೇಗಿಂತ ದೊಡ್ಡದಾಗಿರಬಹುದು ಎಂಬುದು ಖಗೋಳ ಶಾಸ್ತ್ರಜ್ಞರ ಅಭಿಮತ. ಆದರೂ ಈ ಬಗ್ಗೆ ಖಚಿತ ನಿರ್ಧಾರಕ್ಕೆ ಇನ್ನೂ ಬರಲಾಗಿಲ್ಲ.  

ಜೆಲ್ಲಿ ಮೀನಿನ ಸರೋವರ ಪತ್ತೆ

ಜೆಲ್ಲಿ ಮೀನಿನ ಸರೋವರ ಪತ್ತೆ

ವಿಶೇಷ ಸುದ್ದಿಗಳು - 0 Comment
Issue Date : 11.08.2014

ಗುಜರಾತಿನಲ್ಲಿ ಇತ್ತೀಚೆಗೆ ಪತ್ತೆಯಾದ ಜೆಲ್ಲಿ ಮೀನುಗಳ ಸರೋವರ ಭಾರತದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅತೀ ಹೆಚ್ಚು ಜೆಲ್ಲಿ ಮೀನುಗಳಿರುವ ಈ ಸರೋವರದ ದಂಡೆಯ ಮೇಲೆ ನಿಂತರೆ ಈ ಮೀನುಗಳು ಕಾಣಿಸುತ್ತವೆ. ಭಾರತೀಯ ವನ್ಯಜೀವಿ ಸಂಸ್ಥೆ ನಡೆಸುತ್ತಿದ್ದ ಸಂಶೋಧನೆಯೊಂದರಲ್ಲಿ ಈ ಸರೋವರ ಪತ್ತೆಯಾಗಿದ್ದು, ಇದು ಗುಜರಾತಿನ ಅರ್ಮಾಬದಾ ಎಂಬ ಪ್ರದೇಶದಲ್ಲಿದೆ. ಈ ಸರೋವರದಲ್ಲಿರುವ ಜೆಲ್ಲಿಮೀನುಗಳ ವಿಶೇಷತೆಯೆಂದರೆ ಇವು ವರ್ಷದ ಎಲ್ಲಾ ಸಮಯದಲ್ಲಿಯೂ ಕಾಣಿಸುತ್ತವೆ. ಸಾಮಾನ್ಯವಾಗಿ ಜೆಲ್ಲಿ ಮೀನುಗಳು ವರ್ಷದ ಕೆಲ ನಿರ್ದಿಷ್ಟ ಸಮಯದಲ್ಲಿ ಮಾತ್ರ ಕಾಣಿಸಿಕೊಂಡು ನಂತರ […]

ಹೊಸ ರುಚಿ ಹುಡುಕಾಟ: ಭಾರತೀಯರದೇ ಮೇಲುಗೈ!

ಹೊಸ ರುಚಿ ಹುಡುಕಾಟ: ಭಾರತೀಯರದೇ ಮೇಲುಗೈ!

ವಿಶೇಷ ಸುದ್ದಿಗಳು - 0 Comment
Issue Date : 11.08.2014

ಈಗೆಲ್ಲ ಅಡುಗೆ ಮಾಡೋದು ಕಷ್ಟದ ವಿಷಯವಲ್ಲ. ಬೇಕಾದ ಅಡುಗೆಯ ಹೆಸರನ್ನು ಗೂಗಲ್‌ನಲ್ಲಿ ಹುಡುಕಿದರೆ ಐದಾರು ಸೆಕೆಂಡ್‌ಗಳಲ್ಲಿ ಆ ಖಾದ್ಯಕ್ಕೆ ಬೇಕಾದ ಸಾಮಗ್ರಿಗಳು, ಮಾಡುವ ವಿಧಾನ, ಆರೋಗ್ಯದ ಮೇಲೆ ಸದರಿ ಖಾದ್ಯದ ಪರಿಣಾಮ ಮುಂತಾಗಿ ಎಲ್ಲವೂ ಕಂಪ್ಯೂಟರ್ ಪರದೆಯ ಮೇಲೆ ಪ್ರತ್ಯಕ್ಷವಾಗುತ್ತವೆ. ಈಗೀಗ ಹೀಗೆ ಕಂಪ್ಯೂಟರ್ ಮಾಹಿತಿ ನೋಡಿಕೊಂಡೇ ಅಡುಗೆ ಮಾಡುವ ಜನರ ಸಂಖ್ಯೆ ಸಾಕಷ್ಟಿದೆ. ಮತ್ತೊಬ್ಬರನ್ನು ಕೇಳಿ ಅವರಿಗೂ ತೊಂದರೆ ಕೊಟ್ಟು, ಅವರು ಹೇಳಿದ್ದು ಅರ್ಥವಾಗದೆ ಒಂದು ಮಾಡುವುದಕ್ಕೆ ಹೋಗಿ ಮತ್ತೊಂದು ಮಾಡಿ, ಸಕ್ಕರೆಯ ಬದಲು ಉಪ್ಪು […]

ನೋವಾಗೋದು ಯಾಕೆ ಗೊತ್ತಾ?

ನೋವಾಗೋದು ಯಾಕೆ ಗೊತ್ತಾ?

ವಿಶೇಷ ಸುದ್ದಿಗಳು - 0 Comment
Issue Date : 11.08.2014

ಚಿಕ್ಕ ಸೂಜಿಯೊಂದು ಚುಚ್ಚಿದರೂ ಒಮ್ಮೆ ನೋವಾಗುತ್ತದೆ. ಪುಟ್ಟ ಇರುವೆಯೊಂದು ಕಚ್ಚಿದರೂ ನೋವಾಗುತ್ತದೆ. ಮನುಷ್ಯನ ದೇಹದ ಯಾವುದೇ ಒಂದು ಅಂಗಕ್ಕೆ ಕೊಂಚವೇ ನೋವಾಧರೂ ಅದರ ಸಂವೇದನೆ ಮೆದುಳಿಗೆ ಸಿಕ್ಕುತ್ತದೆ. ಕಾಲ ಬೆರಳ ತುದಿಗೆ ಇರುವೆ ಕಚ್ಚಿದರೆ ಒಂದು ಸೆಕೆಂಡಿಗೂ ಎಷ್ಟೋ ಮೊದಲೇ ಮೆದುಳಿಗೆ ಸಂದೇಶ ಹೋಗಿ ನೋವಿನ ಅನುಭವವೂ ಸಿಕ್ಕಾಗಿರುತ್ತದೆ. ಕಾಲ್ಬೆರಳ ತುದಿಗೆ ಇರುವೆ ಕಚ್ಚಿದರೆ ಮೆದುಳಿಗೆ ಹೇಗೆ ಗೊತ್ತಾಗುತ್ತದೆ? ಮೆದುಳಿನಲ್ಲಿರುವ ಪುಟ್ಟದೊಂದು ಭಾಗವೇ ಇದಕ್ಕೆಲ್ಲ ಕಾರಣ ಎಂಬುದು ವಿಜ್ಞಾನಿಗಳ ಮಾತು. ಕೆಲವರಿಗೆ ನೋವೇ ತಿಳಿಯುವುದಿಲ್ಲ. ಸಂವೇದನೆಯೇ ಇಲ್ಲ […]