ಚಂದನದ ಕರಂಡಕ ಮತ್ತು ಕಶ್ಯಪ

ಚಂದನದ ಕರಂಡಕ ಮತ್ತು ಕಶ್ಯಪ

ಕಥೆಗಳು - 0 Comment
Issue Date : 18.04.2016

ಪಾಟಲೀ ಪುತ್ರ ನಗರದಲ್ಲಿ ಆದಿತ್ಯನೆಂಬ ಗೃಹಸ್ಥನಿದ್ದನು. ಆತನ ಬಳಿ ಬೆಲೆಬಾಳುವ ಒಂದು ಅಮೂಲ್ಯವಾದ ಚಂದನದ ಕರಂಡಕವಿದ್ದಿತು. ಆತನಿಗೆ ಆ ಕರಂಡಕದ ಬಗ್ಗೆ ವೈರಾಗ್ಯ ಮೂಡಿತು. ಅದನ್ನು ಪುರಜನರಿಗೆ ಯಾರಿಗಾದರೂ ಕೊಡೋಣವೆಂದುಕೊಂಡನು. ಅದಕ್ಕಾಗಿ ಒಂದು ಪರೀಕ್ಷೆಯನ್ನೂ ಇಟ್ಟನು. ಅದೇನೆಂದರೆ…. ಆ ಚಂದನದ ಕರಂಡಕವನ್ನು ಒಂದು ಎತ್ತರವಾದ ಕಂಬದ ತುದಿಯಲ್ಲಿಟ್ಟು ಅದರ ಕೆಳಗೆ ‘ಯಾರು ಏಣಿಯಿಂದ ಈ ಕಂಬವನ್ನು ಹತ್ತದೆ, ಅಥವಾ ಉದ್ದವಾದ ಕೋಲಿನ ಸಹಾಯವಿಲ್ಲದೆ ಅಥವಾ ಕಂಬವನ್ನು ಏರದೆ, ಕೇವಲ ಯಕ್ಷಿಣಿ ಮಂತ್ರ ಶಕ್ತಿಯಿಂದ ಈ ಕರಂಡಕವನ್ನು ತೆಗೆದುಕೊಳ್ಳುತ್ತಾರೋ […]

ಸ್ವಂತ ಸಂಕಟ ಮರೆತ, ಸರ್ವರ ಸುಖ ಬೇಡಿದ

ಸ್ವಂತ ಸಂಕಟ ಮರೆತ, ಸರ್ವರ ಸುಖ ಬೇಡಿದ

ಕಥೆಗಳು - 0 Comment
Issue Date : 16.02.2016

ಕತ್ತಲಮೊತ್ತ ಹೆಚ್ಚಾಗುತ್ತಲೇ ಇತ್ತು. ಅಮಾವಾಸ್ಯೆಯ ಸನಿಹದ ದಿನಗಳು ಬೇರೆ, ಕಾರ್ತೀಕ ಮಾಸ; ಹಾಗಾಗಿ ಕತ್ತಲಾಗುವುದು ಬಹುಬೇಗ. ತೀರ ಪರಿಚಯವಿರದ ಕಾಡುದಾರಿ ಅದು. ಮೂವರು ಹುಡುಗರು ಮಾತ್ರ. ಕೊನೆಯವ ದುರ್ಬಲ ದೇಹದವ. ಬೇಗ ನಡೆಯಲಾಗದೆ ಬಸವಳಿಯುತ್ತಿದ್ದ. ಬೆನ್ನಮೇಲೆ ಭಾರದ ಗಂಟು ಬೇರೆ. ‘‘ಮಾತಿನಿಂದಲೇ ಮರಳು ಮಾಡುತ್ತೀಯಲ್ಲ. ನಿನ್ನಿಂದ ಅಷ್ಟೇ ಆಗುವುದು. ಬುದ್ಧಿ ಬಲವೇ ಬಲವಲ್ಲ ತಿಳಿಯಿತೇ? ಅದಕ್ಕೆ ತಕ್ಕಂತೆ ಮೈಯಲ್ಲಿ ಕಸುವೂ ಇರಬೇಕು…ಬಾ ಬೇಗ ಬೇಗ.. ಕತ್ತಲಾಗುತ್ತದೆ’’. ಅಣ್ಣಂದಿರಿಬ್ಬರೂ ಹಂಗಿಸುತ್ತಲೇ ಅವಸರಿಸಿದರು. ‘‘ನಿಮಗಿಂತ ಸಣ್ಣವ, ಶಕ್ತಿಯೂ ಕಡಿಮೆ. ಇಷ್ಟೆಲ್ಲವೂ […]

ಪರೀಕ್ಷೆ

ಪರೀಕ್ಷೆ

ಕಥೆಗಳು - 0 Comment
Issue Date : 06.02.2016

ಮಾಲೂರಿನ್ಲೊಂದು ಅನಾಥಾಶ್ರಮ. ನೆಲೆಯಿಲ್ಲದ ಮಹಿಳೆಯರಿಗೆ, ಹುಡುಗಿಯರಿಗೆ ಆಶ್ರಯವನ್ನು ಕೊಟ್ಟಿದ್ದಿತು. ಅಲ್ಲಿ ಕೆಂಪಿ, ನೀಲಿ, ಬೆಳ್ಳಿ ಎಂಬ ಮೂರು ಜನ ಗೆಳತಿಯರಿದ್ದರು. ಒಮ್ಮೆ ಮಾಲೂರಿನ ಜಮೀನುದಾರಿಣಿಯೊಬ್ಬರಿಗೆ ಮನೆ ಕೆಲಸ ಹುಡುಗಿಯ ಅವಶ್ಯತೆ ಬಿತ್ತು. ಆಕೆ ಅನಾಥಾಶ್ರಮದ ಮೇಲ್ವಿಚಾರಕಿಯನ್ನು ಕಂಡು ‘‘ನಿಮ್ಮಲ್ಲಿರುವ ಹುಡುಗಿಯರಲ್ಲಿ ಯಾರನ್ನಾದರೂ ಮನೆಗೆಲಸಕ್ಕೆ ಕಳುಹಿಸಿ ಕೊಡು’’ ಎಂದು ಕೇಳಿಕೊಂಡಳು. ಅದಕ್ಕೆ ಮೇಲ್ವಿಚಾರಕಿ ಆ ಮೂವರಲ್ಲಿ ಯಾರನ್ನಾದರೂ ಒಬ್ಬರನ್ನು ಕಳುಹಿಸುವ ಆಲೋಚನೆಯನ್ನು ಮಾಡಿ ಆ ಜಮೀನುದಾರಿಣಿಯನ್ನು ಭರವಸೆ ಕೊಟ್ಟು ಕಳುಹಿಸಿ ಕೊಟ್ಟರು. ಮಾರನೆಯ ದಿನ ಕೆಂಪಿಯ ಜಮೀನುದಾರಿಣಿಯ ಮನೆಗೆ […]

ಸ್ವಾನುಭವ ಸತ್ಯ ಅರಿತಾಕೆ

ಸ್ವಾನುಭವ ಸತ್ಯ ಅರಿತಾಕೆ

ಕಥೆಗಳು - 0 Comment
Issue Date : 10.12.2015

ಅದು ಆಷಾಢದ ರಾತ್ರಿ. ದಟ್ಟ ಕತ್ತಲು. ಬೀಸುವ ಗಾಳಿ. ನಡುನಡುವೆ ಗುಡುಗು ಮಿಂಚು. ಅಗೋ ಬಿರುಸಿನ ಮಳೆಹನಿಗಳು ಬಿದ್ದೇಬಿಟ್ಟವು. ಕ್ಷಣಕ್ಷಣಕ್ಕೂ ರಭಸ ಹೆಚ್ಚಿತು. ಹದಿಹರೆಯದ ಹುಡುಗಿ ಒಬ್ಬಳೇ ನಡೆಯುತ್ತಿದ್ದಳು. ಆಕೆಯ ತಲೆತುಂಬಾ ತುಂಬಿದ್ದು ಒಂದೇ ಸಂಗತಿ. ತಂದೆ ಹೇಳಿದ ಮಾತು…. ‘ಮಗೂ ಪ್ರಪಂಚದ ಅನುಭವ ಪಡೆದರಷ್ಟೇ ಅನುಭವಕ್ಕೆ ದಕ್ಕುವುದು, ಮಾತ್ರವಲ್ಲ ಅದರ ಅರ್ಥ ಹೊಳೆಯುವುದು’. ನಿಜ, ಅದನ್ನು ಪಡೆಯಬೇಕೆಂದೇ ಹೊರಟವಳು ಅವಳು. ಆಶ್ರಮದಿಂದ ಆಕೆ ಹೊರಟದ್ದು ತಂದೆಗೆ ತಿಳಿದಿತ್ತು. ಆಕೆ ಬ್ರಹ್ಮಚಾರಿಣಿ. ಬ್ರಹ್ಮವಾದಿನಿಯಾಗಬಯಸಿದ್ದು ಅದಕ್ಕಾಗಿ ಸಾಧನೆ ಮಾಡುತ್ತಿದ್ದುದು […]

ಯಾರಿಗೂ ಸಲ್ಲದ ಅಹಂಕಾರ

ಯಾರಿಗೂ ಸಲ್ಲದ ಅಹಂಕಾರ

ಕಥೆಗಳು - 0 Comment
Issue Date : 03.12.2015

ಹೌದು, ಅವರು ಕೇಳಿದ ಗುರುದಕ್ಷಿಣೆಯೇ ಅಂಥದ್ದು!  ಆ ಮಾತು ಕೇಳಿದ ಶಿಷ್ಯನಿಗೆ ಮಾತ್ರವಲ್ಲ ಯಾರಿಗೂ ಅಚ್ಚರಿ ಹುಟ್ಟಿಸುವಂಥದ್ದು.  ಮೇಲ್ನೋಟಕ್ಕೆ ಬಹು ಸುಲಭ ಸಾಧ್ಯ ಎನ್ನಿಸಿಬಿಡಬಹುದಾದ ಕೋರಿಕೆ ಅದು.  ‘ಆಧ್ಯಾತ್ಮಿಕತೆಯನ್ನೇ ಉಸಿರಾಗಿಸಿಕೊಂಡವ ನೀನು. ಈವರೆಗೆ ಅಧ್ಯಯನ ಮಾಡಿದ್ದು ತೃಪ್ತಿ ತಂದಿದೆ. ಇನ್ನು ನನ್ನ ಬಳಿ ಕಲಿಯುವುದು ಏನಿಲ್ಲ. ಈಗ ನೀನು ಸ್ನಾತಕ. ಪ್ರಪಂಚ ಜ್ಞಾನ  ಸಂಗ್ರಹಿಸಲು  ಶಕ್ತ. ಸ್ವಾಧ್ಯಾಯ ಇದಕ್ಕೆ ಸಾಧನವಾಗಲಿ’ ಹೀಗೆಂದು ಗುರು ಹರಸಿದಾಗ ಶಿಷ್ಯನಲ್ಲಿ ಧನ್ಯತೆಯ ಭಾವ.  ಗುರುವಿನಿಂದ ಪಡೆದ ವಿದ್ಯೆ ಯಶಸ್ವಿಯಾಗಬೇಕಾದರೆ ಗುರುದಕ್ಷಿಣೆ ನೀಡಲೇಬೇಕು, […]

ಒತ್ತಿದ್ದಲ್ಲ, ತನ್ನೆತ್ತರಕ್ಕೆ ಎತ್ತಿದವ

ಒತ್ತಿದ್ದಲ್ಲ, ತನ್ನೆತ್ತರಕ್ಕೆ ಎತ್ತಿದವ

ಕಥೆಗಳು - 0 Comment
Issue Date : 28.11.2015

ಅದು ನರ್ಮದೆಯ ಉತ್ತರ ತಟದ ಭೃಗುಕಚ್ಛ ಎಂಬ ಪವಿತ್ರ ಪ್ರದೇಶ. ಮಹಾಯಜ್ಞವೊಂದು ಅಲ್ಲಿ ನಡೆಯುತ್ತಿತ್ತು. ಯಜ್ಞವೆಂದರೆ ಕೇಳಬೇಕೇ ವೇದವಿದರು, ವಿದ್ವಾಂಸರು ಅಗ್ನಿಯಲ್ಲಿ ವಿವಿಧ ಮಂತ್ರಗಳ ಮೂಲಕ ಹಲವು ವಿಶಿಷ್ಟ ಹವಿಸ್ಸು ಸಮರ್ಪಣೆ ಮಾಡುತ್ತಿರುವರು; ಮತ್ತೊಂದೆಡೆ ಪುರಾಣ ಪುಣ್ಯಕಥಾ ಪ್ರವಚನ, ಭಜನೆ, ಧ್ಯಾನ; ಇನ್ನೊಂದೆಡೆ ಅನ್ನ-ಐಶ್ವರ್ಯದಾನ ಹೀಗೆ ಅಪರೂಪದ ಎಷ್ಟೋ ಸಂಗತಿಗಳು. ನೋಡಲು, ಕೇಳಲು, ಪಡೆಯಲು ಎಲ್ಲೆಡೆಯಿಂದಲೂ ಜನರು..  ಒಂದು ದಿನ ಆ ಯಜ್ಞಮಂಟಪಕ್ಕೆ ಪುಟ್ಟ ಬಾಲಕನೊಬ್ಬ ಬಂದ. ಇಡೀ ಪ್ರದೇಶ ಉಜ್ವಲಕಾಂತಿಯಿಂದ ತುಂಬಿಹೋಯಿತು. ಒಮ್ಮೆಲೇ ಸಾವಿರ ಸೂರ್ಯರ […]

ಸಾತ್ವಿಕ ಶಕ್ತಿಯ ಶಾಪ

ಸಾತ್ವಿಕ ಶಕ್ತಿಯ ಶಾಪ

ಕಥೆಗಳು - 0 Comment
Issue Date : 03.11.2015

ಆಕೆಯ ಕಣ್ಣುಗಳು ಕೆಂಡದುಂಡೆಗಳಾಗಿದ್ದವು. ಸಿಟ್ಟು ನೆತ್ತಿಗೇರಿತ್ತು. ಗಂಡು ಸಂತತಿಯ ಮೇಲೆ ಇನ್ನಿಲ್ಲದ ಕೋಪ, ತಿರಸ್ಕಾರ ಮಡುಗಟ್ಟಿತ್ತು.  ತನ್ನ ಬದುಕಿಗೇ ಕೊಳ್ಳಿಯಿಡಲು ಬಂದ ಆ ಧೂರ್ತನ ಹುಟ್ಟಡಗಿಸುವ ನಿರ್ಧಾರಕ್ಕೆ ಬಂದಿದ್ದಳಾಕೆ. ಉಪನಯನ ಸಂಸ್ಕಾರದಿಂದ ಸಂಪಾದಿಸಿದ ಶಕ್ತಿ ನೆರವಿಗೆ ಬಂದಿತ್ತು. ಪ್ರಖರ ತೇಜದ ಸೂರ್ಯನ ಎಡೆಬಿಡದ ಉಪಾಸನೆಯಿಂದ ಆಕೆ ಸೂರ್ಯನ ಪ್ರಭೆಯನ್ನೇ ಸೂಸುತ್ತಿದ್ದವಳು. ಹದಿನೈದು ಹದಿನಾರರ ಹರೆಯ ಉಕ್ಕುವ ತರುಣಿ. ಜತೆಯಲ್ಲಿ ದಿವಾಕರ ಕಿರಣ ಪ್ರಭಾಮಂಡಲ. ಹಿತಮಿತಮಿದು ಮಾತಿನ ಆಕೆ ತಾನಾಯಿತು ತನ್ನ ಕಠಿಣ ಅನುಷ್ಠಾನವಾಯಿತೆಂದು ಇದ್ದವಳು. ಆಶ್ರಮದ ಗಿಡಮರಬಳ್ಳಿ ಖಗಮಿಗಗಳ […]

ನಾ ಕಂಡ 'ಇವಾಲೂನಾ'

ನಾ ಕಂಡ ‘ಇವಾಲೂನಾ’

ಕಥೆಗಳು - 0 Comment
Issue Date : 30.10.2015

‘‘ಆ  ಕಾಲದಲ್ಲಿ ಒಟ್ಟು ಕುಟುಂಬದಲ್ಲಿ ಬೇರೆ ಹೋಗುವ – ಬೇರೆ ಯಾಗುವ ವಿಚಾರ ಯಾರಿಗೂ ಬರುತ್ತಿರಲೇ ಇಲ್ವಾ? ವೃದ್ಧಾಶ್ರಮದ ಕಲ್ಪನೆ ಇತ್ತೀಚೆಗೆ ಬಂದಿದ್ದು. ತಂದೆ-ತಾಯಿಗೆ ಹತ್ತು ಮಕ್ಕಳನ್ನು ಸಾಕಿ-ಸಲಹುವುದು ದೊಡ್ಡ ವಿಷಯವೇ ಅಲ್ಲ! ಆದರೆ ತಂದೆ, ತಾಯಿ ಇಬ್ಬರನ್ನೂ ನೋಡಿಕೊಳ್ಳೋದು ಮೂರು ಮಕ್ಕಳಿಗೆ ಕಷ್ಟ! ನನಗಂತೂ ಗಂಡ ತೀರಿಹೋಗಿ ಎಂಟು ವರ್ಷ ಆಯಿತಲ್ಲ. ನನ್ನೊಬ್ಬಳನ್ನು ಸಾಕುವುದು ನನ್ನದೇ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲವಂತೆ! ಮದುವೆಯೋ. ಪ್ರೇಮ ವಿವಾಹ, ವಸುನಂದನರನ್ನು ಮದುವೆ ಯಾಗಿ ಅವಿಭಕ್ತ ಕುಟುಂಬದ ಸೊಸೆಯಾದೆ. ಅನ್ಯಧರ್ಮೀಯಳೆಂದು ಆ ಪರಿವಾರದವರು ಎಂದೂ […]

ಚೌಡಿ ಮಾಡಿದ ಉಪಕಾರ

ಚೌಡಿ ಮಾಡಿದ ಉಪಕಾರ

ಕಥೆಗಳು ; ಕಿರಿಯರ ಲೋಕ - 0 Comment
Issue Date : 30.10.2015

ವಜ್ರಳ್ಳಿ ಎಂಬ ಊರಿನಲ್ಲಿ ನೆಡಿಗೆಮನೆ ಎಂಬ ಒಂದು ಬ್ರಾಹ್ಮಣರ ಕೇರಿಯಿತ್ತು.  ಗೋಪಾಲಭಟ್ಟರುಎಂಬ ಸದ್ಬ್ರಾಹ್ಮಣರೊಬ್ಬರು ಕುಟುಂಬ ಸಮೇತ ರೈತಾಪಿ ಮಾಡಿಕೊಂಡು ಜೀವನಯಾಪನೆ ಮಾಡುತ್ತಿದ್ದರು. ಹತ್ತಾರು ಎಕರೆ ಜಮೀನು ಇದ್ದರೂ ತೀವ್ರ ಬಡತನದಿಂದಾಗಿ ಸಾಗುವಳಿ ಮಾಡಲಾರದೆ ಕುನ್ನಡೆ ಬೈಲು ಎಂಬ ಹತ್ತು ಎಕರೆ ಗದ್ದೆ  ಹಾಳುಬಿದ್ದುಕೊಂಡೇ ಇತ್ತು. ಮನೆಯಲ್ಲಿ ಬಡತನವಿದ್ದುದರಿಂದ ಊಟಕ್ಕೂ ತತ್ವಾರ ಎಂಬ ಸ್ಥಿತಿ ಇತ್ತು. ಗೋಪಾಲಭಟ್ಟರನ್ನು ‘ಗೋಪಾಲಜ್ಜ’ ಎಂದೇ ಎಲ್ಲರೂ ಪ್ರೀತಿಯಿಂದ  ಕರೆಯುತ್ತಿದ್ದರು. ಅಷ್ಟಿಷ್ಟು ಮಂತ್ರ ಕಲಿತಿದ್ದರಿಂದ ಆಗೀಗ ಭಟ್ಟ  ಕಸುಬಿಗೂ ಹೋಗುತ್ತಿದ್ದರು. ಸಿಂಹತಿಂಗಳಿನಲ್ಲಿ ತಾಳೆಗರಿಯಲ್ಲಿದ್ದ ಪದ್ಯರೂಪದ […]

ಗುರುಮನೆಯ ದೀಪ ಬೆಳಗಿದಾತ

ಗುರುಮನೆಯ ದೀಪ ಬೆಳಗಿದಾತ

ಕಥೆಗಳು - 0 Comment
Issue Date : 30.10.2015

ಆ  ಹುಡುಗ ಈಗ ದಿಕ್ಕುತೋಚದಾಗಿದ್ದ. ಗುರುವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ‘ನೀವು ಆಗಮಿಸುವವರೆಗೆ ಅಗ್ನಿ ಸಂರಕ್ಷಣೆಯ ಹೊಣೆ ನನ್ನದು, ನೀವು ನಿಶ್ಚಿಂತೆಯಿಂದ ಹೋಗಿ ಬನ್ನಿ’ ಆತ್ಮವಿಶ್ವಾಸ ದಿಂದ ನುಡಿದಿದ್ದ ಬಾಲಕ ಕಂಗಾಲಾಗಿದ್ದ. ಅಗ್ನಿಯ ಕಾಂತಿಯಿಲ್ಲದೆ ಆಶ್ರಮ ಮಂಕಾಗಿತ್ತು.  ಆ ಕಾಲದಲ್ಲಿ ಪದ್ಧತಿ ಹಾಗಿತ್ತು. ಋಷ್ಯಾಶ್ರಮವೆಂದರೆ ಅಲ್ಲಿನ ಯಜ್ಞಕುಂಡ ಸದಾ ಜ್ವಲಿಸುತ್ತಿರಬೇಕು. ಸಂಧ್ಯಾತ್ರಯದಲ್ಲೂ ತಪ್ಪದೇ ವಿವಿಧ ದ್ರವ್ಯ ಸಮಿತ್ತುಗಳಿಂದ ಹೋಮ ನಡೆಯಲೇಬೇಕು. ಅದು ತಪ್ಪುವಂತಿಲ್ಲ. ಅಗ್ನಿ ಆರಿದರೆ ಅನಾಹುತ ಖಂಡಿತ. ಈಗ ಆಶ್ರಮದಲ್ಲಿ ಅನಾಹುತ ಆಗಿಯೇಬಿಟ್ಟಿತ್ತು. ಯಜ್ಞಕುಂಡ […]