ಅವಸರವು ತರವಲ್ಲ

ಅವಸರವು ತರವಲ್ಲ

ಕಥೆಗಳು - 0 Comment
Issue Date : 15.10.2015

‘ಇಗೋ.. ತೆಗೆದುಕೋ ಈ ಖಡ್ಗ..’ ಕೋಪವೇ ಮೈವೆತ್ತಂತೆ ಇದ್ದ ಆ ಋಷಿಯ ಮಾತು ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ ಈ ಹುಡುಗ. ತನ್ನ ತಂದೆ ಯಾಕೆ ಖಡ್ಗ ಹಿಡಿದು ತೆಗೆದುಕೋ ಎನ್ನುತ್ತಿರುವರೆಂದು ಯೋಚಿಸತೊಡಗಿದ.   ‘ನಿನಗೇ ಹೇಳಿದ್ದು..’ ಮತ್ತೊಮ್ಮೆ ತಂದೆಯ ಗದರು ದನಿಕೇಳಿ ಹುಡುಗ ಬೆಚ್ಚಿಬಿದ್ದ. ಈಗ ಪ್ರತಿಕ್ರಿಯಿಸದಿದ್ದರೆ ಯಾವುದೋ ಅನಾಹುತ ಖಂಡಿತ ಎಂದು ಕೈನೀಡಿದ.   ‘ನಿನ್ನಮ್ಮನ ತಲೆ ಕಡಿದುಬಿಡು..’ ಸಿಡಿಲಿನಂತೆ ಅಪ್ಪಳಿಸಿ ಬಂತು ತಂದೆಯ ಮಾತು. ಈಗ ಆ ಹುಡುಗ ಖಂಡಿತಾ ಕಂಗಾಲಾದ. ತಂದೆಯ […]

ವ್ಯರ್ಥವಾಗದ ತಪಸ್ಸು

ವ್ಯರ್ಥವಾಗದ ತಪಸ್ಸು

ಕಥೆಗಳು - 0 Comment
Issue Date : 13.10.2015

   –  ಹಾದಿಗಲ್ಲು ಲಕ್ಷ್ಮೀನಾರಾಯಣ ಆ ಹುಡುಗ ಈಗ ಭಯದಿಂದ ನಡುಗುತ್ತಿದ್ದ. ತನ್ನ ಕಣ್ಣೆದುರೇ ತಂದೆಯ ತಲೆ ಕಡಿದು ದೇಹವನ್ನೆಲ್ಲ ತುಂಡು ತುಂಡಾಗಿ ಕತ್ತರಿಸಿದ್ದನ್ನು ಕಂಡು ಮಾತು ಉಡುಗಿತ್ತವನಿಗೆ.  ರಕ್ಕಸ ಲೋಕದ ಲಂಕಾಧಿಪತಿಯ ಸೇನೆ ಅಯೋಧ್ಯೆಯನ್ನು ಮುತ್ತಿತ್ತು. ಅನಿರೀಕ್ಷಿತ ದಾಳಿಯಿಂದ ಕಂಗಾಲಾಗಿದ್ದ ಅರಸ. ರಕ್ಕಸರ ಮಾಯಾಯುದ್ಧ ಮಾನವ ಸೇನೆಯನ್ನು ಬಗ್ಗು ಬಡಿಯಿತು. ಅರಸನ ತಲೆ ಉರುಳಿತು. ಎಲ್ಲೆಲ್ಲೂ ರಕ್ತದೋಕುಳಿ – ಚೀತ್ಕಾರಗಳು. ಇದನ್ನೆಲ್ಲ ಕಣ್ಣಾರೆ ಕಂಡ ಎಳೆ ಹುಡುಗ ದಿಕ್ಕು ತೋಚದೇ ಅವಿತಿದ್ದ. ಹೇಗೋ ಕಾಡು ಸೇರಿದ್ದ. […]

ಬದುಕು ಒತ್ತೆಯಿಟ್ಟ... ಬದುಕಟ್ಟಿದ

ಬದುಕು ಒತ್ತೆಯಿಟ್ಟ… ಬದುಕಟ್ಟಿದ

ಕಥೆಗಳು - 0 Comment
Issue Date : 08.10.2015

ಆಗಸಕ್ಕೇ ರಂಧ್ರಬಿದ್ದಿದೆಯೋ ಎಂಬಂತೆ ಸುರಿವ ಮಳೆ. ನಡುನಡುವೆ ಗುಡುಗು ಸಿಡಿಲು. ಎತ್ತ ನೋಡಿದರೂ ರಭಸದಿಂದ ಹರಿವ ನೀರು. ಅದೇ ತಾನೆ ನೆಟ್ಟಿರುವ ಭತ್ತದ ಸಸಿಗಳೆಲ್ಲ ಕೊಚ್ಚಿ ಹೋಗುತ್ತಿವೆ. ಹರಿವ ನೀರಿಗೆ ಅಡ್ಡಗಟ್ಟಿ ಹಾಕುವ ಆ ಹುಡುಗನ ಪ್ರಯತ್ನಗಳೆಲ್ಲ ವಿಫಲವಾದವು. ಒಂದು ಕ್ಷಣ ಏನು ಮಾಡುವುದೆಂದೇ ತಿಳಿಯುತ್ತಿಲ್ಲ. ಈ ನಡುವೆ ಆಕಾಶ ಮತ್ತಷ್ಟು ಕಪ್ಪುಗಟ್ಟಿದೆ. ಸಾಯಂಕಾಲವೂ ಆಗಿಬಿಟ್ಟಿದೆ.  ಗುರುಕುಲದ ಗದ್ದೆಗಳ ರಕ್ಷಣೆ ಮಾಡಲೆಂದೇ ಬಂದವನು ಆತ. ಹಾಗೆ ಮಾಡೆನ್ನುವುದು ಗುರುಗಳ ವಾಕ್ಯ. ಅದನ್ನು ಮೀರಬಾರದು. ಕೇವಲ ನನಗೆ ಮಾತ್ರವಲ್ಲ […]

ಅತಿಯಲ್ಲ ಮಿತಿಯಿರಲಿ

ಅತಿಯಲ್ಲ ಮಿತಿಯಿರಲಿ

ಕಥೆಗಳು - 0 Comment
Issue Date : 22.09.2015

-ಹಾದಿಗಲ್ಲು ಲಕ್ಷ್ಮೀನಾರಾಯಣ ‘ಆಯಿತು ನಾನಿನ್ನು ಬರುತ್ತೇನೆ ನಿಮ್ಮ ಮನದ ಸತ್ಸಂಕಲ್ಪಗಳೆಲ್ಲ ಈಡೇರಲಿ…’ ಎಂದವನೇ ಆ ಪ್ರಖರ ತೇಜದ ಬಾಲಕ ಹೊರಟೇಬಿಟ್ಟ.  ‘ತಾವು ವಿದ್ಯಾಸಂಪನ್ನರು. ಕಾರಣವಿಲ್ಲದೇ ಬರುವವರಲ್ಲ. ಬಂದ ಕಾರಣವನ್ನೇ ಹೇಳದೇ ಹೊರಟುಬಿಟ್ಟಿರಲ್ಲ. ಇಲ್ಲಿ ಬಂದವರಾರೂ ಇದುವರೆಗೆ ಬರಿಗೈಯಲ್ಲಿ ತೆರಳಲಿಲ್ಲ’ ದೊರೆ ವಿನೀತನಾಗಿ ನುಡಿದ. ‘ಬೇಡುವವರಲ್ಲಿ, ಬರಿಗೈಯವರಲ್ಲಿ ಬೇಡುವುದು ಯಾಚಕನ ಲಕ್ಷಣವೇ ಅಲ್ಲ.’ ಬಂದ ಬಂದವರಿಗೆ ಮಾತ್ರವಲ್ಲ, ಬರಿದೆ ಹೋಗುವವರನ್ನು ಕರೆ ಕರೆದು ದಾನ ಮಾಡಿದ್ದ ಆ ಮಹಾರಾಜನಿಗೆ ಈ ಮಾತು ಕೇಳಿ ಆಘಾತವಾಯಿತು. ನನ್ನ ಸ್ಥಿತಿ ಆತನಿಗೆ ಹೇಗೆ […]

ತಂದೆ ತೋರಿದ ದಾರಿ

ಕಥೆಗಳು - 0 Comment
Issue Date :

-ಹಾದಿಗಲ್ಲು ಲಕ್ಷ್ಮೀನಾರಾಯಣ ಇದ್ದಕ್ಕಿದ್ದಂತೆಯೇ ಭಾರೀ ಬೆಂಕಿ ಬಂದಂತಾಯಿತು. ಎಲ್ಲೆಡೆ ಚಾಚಿ ಬರುವ ಕೆನ್ನಾಲಿಗೆ. ಆ ಉರಿಯ ಒಳಗಿಂದ ನೆಲಮುಗಿಲನ್ನು ಒಂದುಮಾಡುವ ಯಾವುದೋ ಆಕೃತಿ. ಇದನ್ನು ಕಾಣುತ್ತಿದ್ದಂತೆಯೇ ಆ ಹುಡುಗನ ಧೈರ್ಯವೆಲ್ಲ ಉಡುಗಿಹೋಯಿತು. ಗಂಟಲಾರಿತು. ಮಾತು ಹೊರಡಲಿಲ್ಲ. ಗಡಗಡ ನಡುಗತೊಡಗಿದ. ಇದೆಲ್ಲ ನನ್ನದು, ನನಗೆ ಸೇರಿದ್ದು… ಮುಟ್ಟಬಂದರೆ.. ಸುಟ್ಟು ಬೂದಿ ಆಗುತ್ತೀಯೆ… ಬರಸಿಡಿಲಂತೆ ಬಂದೆರಗಿತು ಮಾತು.  ಈಗಂತೂ ಹುಡುಗ ಕಂಗಾಲಾದ. ಈ ಸಂಪತ್ತು ನನ್ನದು.. ಆ ಮುನಿ ನನಗೆ ದಾನವಾಗಿ ಕೊಟ್ಟಿದ್ದು ಎಂಬ ಮಾತುಗಳು ಗಂಟಲಲ್ಲೇ ಉಳಿದವು. ಒಂದು […]

ಸುಖ ಬೇಡದ ಸತಿ

ಸುಖ ಬೇಡದ ಸತಿ

ಕಥೆಗಳು - 0 Comment
Issue Date : 12.09.2015

-ಹಾದಿಗಲ್ಲು ಲಕ್ಷ್ಮೀನಾರಾಯಣ ಒಂದು ಕ್ಷಣ ಏನು ಮಾಡಬೇಕೆಂಬುದೇ ಹೊಳೆಯಲಿಲ್ಲ ರಾಜ ದಂಪತಿಗಳಿಗೆ. ಆ ಮುನಿಯ ಮಾತು ಹಾಗಿತ್ತು. ‘ನಿನ್ನ ಮಗಳು ನನ್ನ ತಪಸ್ಸನ್ನು ಹಾಳುಗೆಡಹಿದ್ದಾಳೆ. ನನ್ನನ್ನು ಕುರುಡನನ್ನಾಗಿಸಿದ್ದಾಳೆ….’ ಮುಂದೇನು ಆಘಾತ ಕಾದಿದೆಯೋ.. ತುದಿಗಾಲಲ್ಲಿ ನಿಂತರು ದಂಪತಿಗಳು. ಬಯಸಿ ಪಡೆದ ಮಗಳು ಇದೇನು ಸಂಕಟಕ್ಕೆ ಸಿಲುಕಿದ್ದಾಳೆ ಎಂದು ಮರುಗಿದರು ಅವರು. ಮುನಿಗಳೋ ಮೂಗಿನ ಮೊನೆಯಲ್ಲೇ ಕೋಪವುಳ್ಳವರು. ಅವರು ಮುನಿದರೇನುಗತಿ ಎಂಬ ಚಿಂತೆ ಅವರನ್ನು ಕಾಡಿತು.  ಆದದ್ದಿಷ್ಟೆ. ಆ ರಾಜಪರಿವಾರ ವನವಿಹಾರಕ್ಕೆ ಬಂದಿತ್ತು. ಜತೆಗೆ ಮುದ್ದಿನ ಮಗಳೂ ಇದ್ದಳು. ಆ […]

ಗೂಳಿ ಸವಾರಿ

ಗೂಳಿ ಸವಾರಿ

ಕಥೆಗಳು - 1 Comment
Issue Date : 14.04.2015

ಕೃಷ್ಣ, ಬೃಂದಾವನದಲ್ಲಿ ಸಮೃದ್ಧಿಯಾಗಿ ಬೆಳೆದು ನಿಂತಿದ್ದ ಮರದ ಬುಡದಲ್ಲಿ ಹುಲ್ಲು ಹಾಸಿಗೆಯ ಮೇಲೆ ಕುಳಿತು, ಯಾವುದೋ ಗಹನವಾದ ಯೋಚನೆಯಲ್ಲಿ ಮುಳುಗಿದ್ದನು. ಪರಿಸರ ಚಿಗುರಿದ ಎಲೆಗಳಿಂದ ಗಿಡ ಮರಗಳಲ್ಲಿ ಹಸಿರು ತುಂಬಿಕೊಂಡಿತ್ತು. ಫಲವತ್ತಾದ ಗಿಡಮರಗಳು ಫಲಗಳನ್ನು ಹೊರಲಾರದೆ ತಿಣುಕುತ್ತಿದ್ದವು. ಅವನ ಸಮೀಪದಲ್ಲೇ ಜಿಂಕೆ, ಮೊಲಗಳು ಚಕ್ಕಂದದಿಂದ ಓಡಾಡುತ್ತಿದ್ದವು. ನವಿಲುಗಳು ಗರಿಬಿಚ್ಚಿ ಕುಣಿಯುತ್ತಿದ್ದವು. ಕೋಗಿಲೆಗಳು ತಮ್ಮ ಸುಮಧುರ ಕಂಠದಿಂದ ‘ಕುಹೂ ಕುಹೂ’ ಎಂದು ಹಾಡುತ್ತಿದ್ದವು. ಅವನು ಪೀತಾಂಬರ ಉಟ್ಟಿದ್ದನು. ಅವನ ಹೆಗಲ ಮೇಲಿನ ಉತ್ತರೀಯ ಜಾರಿ ತೊಡೆಯ ಮೇಲೆ ಬಿದ್ದಿತ್ತು, […]

ಧಿಡೀರ್ ಕೆರೆ

ಕಥೆಗಳು - 0 Comment
Issue Date : 13.04.2015

ಸೇವ ನಮಿರಾಜ ಮಲ್ಲ  ಕಥೆ  ಯುದ್ಧ ನಡೆಯುತ್ತಿದ್ದರೂ, ಹೆಚ್ಚು ಆಹಾರ ಬೆಳೆಸಿ ಎಂಬ ಚಳುವಳಿಯನ್ನು ಸರ್ಕಾರ ಮುತುವರ್ಜಿಯಿಂದ ನಡೆಸುತ್ತಿತ್ತು. ನೆಲದಡಿಯಲ್ಲಿ ಕಂದಮೂಲಗಳು ಬೆಳೆಯುವ ತನಕ ಜನರಿಗೆ ಆಹಾರದ ಕೊರತೆ ಪ್ರಬಲವಾಗಿರಲಿಲ್ಲ. ಆದರೆ ತೆಂಕು ದಿಕ್ಕಿನ ಜನ ಈ ಕಂದಮೂಲಗಳ ಮೂಲಕ ಹಸಿವನ್ನು ಇಂಗಿಸಿಕೊಳ್ಳಲು ಯತ್ನಿಸಿ ಜೀವವನ್ನೇ ಕಳೆದುಕೊಳ್ಳುತ್ತಿದ್ದರು. ಹೀಗೆ ಕ್ಷಾಮದಿಂದಾಗಿ ಜನರು ಸಾಯಲು ಎರಡು ಕಾರಣಗಳಿದ್ದುವು : ಹೊಟ್ಟೆಗಿಲ್ಲದೆ ಸಾಯುವ ಜನ ಹೆಚ್ಚಾಗಿದ್ದರೂ, ಕಂದಮೂಲಾದಿ ಸಪ್ತ ಋಷಿಗಳ ಆಹಾರವನ್ನು ಭುಂಜಿಸಿಯೂ ಪ್ರಾಣ ಕಳೆದುಕೊಳ್ಳುವ ಮಂದಿ ಇದ್ದರು.  ಅದು […]

ರತ್ನಳ ಜಾಣತನ

ರತ್ನಳ ಜಾಣತನ

ಕಥೆಗಳು - 0 Comment
Issue Date : 20.01.2015

ಜೇನುಗೂಡಿನಂತಹ ಮನೆ ರತ್ನಳದು. ಅಂದರೆ ಮನೆ ಚಿಕ್ಕದಾದರೂ ಜೇನಿನಂತೆ ಆ ಮನೆಯಲ್ಲಿ ಸಿಹಿ ಇತ್ತು. ಹಿಗ್ಗು ಇತ್ತು, ಸಂತೋಷವಿತ್ತು. ಮನೆ ಚಿಕ್ಕದಾದರೇನು ಮನಸ್ಸು ದೊಡ್ಡದಿದ್ದರೆ ಸಾಕು ಎನ್ನುತ್ತಿದ್ದರು ಹಳ್ಳಿಗರು. ರತ್ನ ಹೆಸರಿಗೆ ತಕ್ಕಂತೆ ಅಮೂಲ್ಯವಾದ ಒಂದು ರತ್ನವೇ ಆಗಿದ್ದಳು. ಮನೆಗೆ ಯಾರೇ ಬರಲಿ ಅವರು ಹಳ್ಳಿಯವರೇ ಆಗಿದ್ದರೂ ಆದರದಿಂದ ಕರೆದು ಕೂಡಿಸಿ ಮಾತನಾಡಿಸಿ ಕಳುಹಿಸುತ್ತಿದ್ದಳು. ದೂರದಿಂದ ಬಂದವರಾಗಿದ್ದರೆ ತಮ್ಮಲ್ಲಿ ಏನಿದೆಯೋ ಅದನ್ನೇ ಬಡಿಸಿ ಅವರು ಉಣ್ಣುವುದನ್ನು ನೋಡುತ್ತಾ ತೃಪ್ತಿ ಪಡುತ್ತಿದ್ದಳು. ಅದನ್ನು ನೋಡಿದರೆ ಗಂಡ ಅಸಹನೆಯಿಂದ ರೇಗುತ್ತಿದ್ದನು. […]

ಮಸಣದಿಂದ ಮನೆಗೆ

ಕಥೆಗಳು - 0 Comment
Issue Date : 27.10.2014

ಬೆಳಗಿನ ಜಾವದ ಸಮಯ. ತಣ್ಣನೆಯ ತಂಪುಗಾಳಿ ಬೀಸುತ್ತಿತ್ತು. ಹೊತ್ತೇರಲು ಇನ್ನೂ ಎರಡು ತಾಸಿತ್ತು. ಚಳಿಯಿಂದ ಸಿದ್ಧನು ತನ್ನ ಕಂಬಳಿಯನ್ನು ಪೂರ ಹೊದ್ದುಕೊಂಡು ಗುಡಿಸಿಲಿನ ಮೂಲೆಯಲ್ಲಿ ಮುದುಡಿಕೊಂಡ. ಗುಡಿಸಿಲಿನ ಬಾಗಿಲಿಗೆ ಉರಿಯುತ್ತಿದ್ದ ಕಂದೀಲು ನೇತಾಡುತ್ತಿತ್ತು. ಪಕ್ಕದಲ್ಲಿಯೇ ಅವನ ಊರುಗೋಲು ಬಾಗಿಲಿಗೆ ಆತುಕೊಂಡು ನಿಂತಿತ್ತು. ಕಳೆದ ಹದಿನಾಲ್ಕು ವರ್ಷಗಳಿಂದ ಅವೆರಡೇ ಇವನ ಸಂಗಾತಿಗಳು. ತನ್ನ ಸೋದರಮಾವನ ಮರಣಾನಂತರ, ಸ್ಮಶಾನ ಕಾಯಲು ಬಂದಿದ್ದ. ಹಿಂದೆ ಮುಂದೆ ದಿಕ್ಕಿಲ್ಲದೆ, ಕುಲವೃತ್ತಿಯನ್ನು ಸಂತೋಷದಿಂದ ಕೈ ಗೊಂಡಿದ್ದ. ಸದಾಕಾಲವೂ ರಣ ರಣ ಎನ್ನುತ್ತಿದ್ದ ಸ್ಮಶಾನದ ರುದ್ರಭೂಮಿಯಲ್ಲಿ, […]