ಕಂಬನಿಯೊಳಗಿನ ಬಿಂಬ

ಕಂಬನಿಯೊಳಗಿನ ಬಿಂಬ

ಕಥೆಗಳು - 0 Comment
Issue Date : 19.10.2014

ಕಳೆದ ಒಂದೂವರೆ ಗಂಟೆಯಿಂದ ಶಿವಲಿಂಗನು ತನ್ನ ಮನೆಗೆ ಸಂಬಂಧಿಸಿದ ಯಾವುದೊ ಕಾಗದ ಪತ್ರಗಳನ್ನು ಹುಡುಕುತ್ತಿದ್ದ. ತನ್ನ ಹಳೆಯ ಎಲ್ಲ ಪುಸ್ತಕಗಳನ್ನು ಹರವಿಕೊಂಡು ಚಿಂತಾಕ್ರಾಂತನಾಗಿ ಕುಳಿತಿದ್ದ. ಜೊತೆಗೆ ನಾಲ್ಕಾರು ಫೈಲುಗಳಲ್ಲಿಯ ಕಾಗದ ಪತ್ರಗಳನ್ನು ತಿರುವಿ ಹಾಕಿದ್ದ. ಸಾಹಿತ್ಯದ ಅಭಿರುಚಿಯುಳ್ಳವನಾಗಿದ್ದ ಅವನು ಒಂದಿಷ್ಟು ಗ್ರಂಥಗಳನ್ನು ಮನೆಯಲ್ಲಿರಿಸಿಕೊಂಡಿದ್ದನು. ತನಗೆ ಈಗ ಬೇಕಾಗಿರುವ ಕಾಗದಪತ್ರವು ಗಡಿಬಿಡಿಯಲ್ಲಿ ಅವುಗಳಲ್ಲೇನಾದರೂ ಮರೆತು ಇಟ್ಟರಬಹುದೆಂದು ಲೆಕ್ಕಾಚಾರದಲ್ಲಿ ಪ್ರತಿ ಪುಸ್ತಕದ ಹಾಳೆಗಳನ್ನು ಸರಿಸಿ ಸರಿಸಿ ನೋಡಿದ್ದಾಗಿತ್ತು. ಹಲವಾರು ಗ್ರಂಥಗಳ ನಡುವೆ, ಅವನು ಹೈಸ್ಕೂಲ್ ಕಲಿಯುವಾಗಿನ ಪಠ್ಯ ಪುಸ್ತಕಗಳೆರಡು ದೊರೆತವು. […]

ಮುಂದುವರಿದವರು

ಕಥೆಗಳು - 0 Comment
Issue Date : 17.10.2014

ಜ್ವರದಿಂದ ಹಾಸಿಗೆ ಹಿಡಿದಿದ್ದ ನಾನು ಚೇತರಿಸಿಕೊಳ್ಳುತ್ತಿದ್ದೆ. ಕಡೆಯ ಪಕ್ಷ ಒಂದು ವಾರವಾದರೂ ವಿಶ್ರಾಂತಿ ಅಗತ್ಯ ಎಂದು ಡಾಕ್ಟರು ಹೇಳಿದ್ದರಿಂದ ರಜೆ ಅರ್ಜಿ ಸಲ್ಲಿಸಿ ಮನೆಯಲ್ಲೇ ಇದ್ದೆ.  ಬೆಳಿಗ್ಗೆ ಎದ್ದು ದಿನಪತ್ರಿಕೆಯತ್ತ ಕಣ್ಣು ಹಾಯಿಸುತ್ತಿದ್ದಾಗ ಟೆಲಿಫೋನ್ ಗಂಟೆ ಬಾರಿಸಿತು. ಕರೆ ನಮ್ಮ ಮೇಲಧಿಕಾರಿಯವರದು. ವ್ಯವಸ್ಥಾಪಕ ನಿರ್ದೇಶಕರು ತುರ್ತು ಸಭೆ ಕರೆದಿದ್ದು, ಕಾರ್ಯಸೂಚಿ ಸಿದ್ಧಗೊಳಿಸಲು ಒಂದೆರಡು ಗಂಟೆಗಳ ಮಟ್ಟಿಗಾದರೂ ಕಚೇರಿಗೆ ಬರಬೇಕೆಂದು ಕೋರಿದರು. ಮೇಲಧಿಕಾರಿಗಳ ಸೂಚನೆ ಪಾಲಿಸದಿರಲು ಸಾಧ್ಯವೇ? ವಿಧಿಯಿಲ್ಲದೆ ಮನೆಯಿಂದ ಹೊರಡಲೇಬೇಕಾಯಿತು. ಮನೆ ಇರುವುದು ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ […]

ಅವಳು ಕನಸು ಕಂಡಳು

ಅವಳು ಕನಸು ಕಂಡಳು

ಕಥೆಗಳು ; ಲೇಖನಗಳು - 0 Comment
Issue Date : 16.10.2014

ಗುಡಿಸಲಲ್ಲಿ ಮಕ್ಕಳು ಅಸ್ತವ್ಯಸ್ತವಾಗಿ ಮಲಗಿದ್ದವು. ಒಂದೊಂದು ಆಕೃತಿ ಒಂದೊಂದು ತರ. ಎಲ್ಲರೂ ಅವಳ ಮಕ್ಕಳೆ, ಒಂದರ ಬಣ್ಣ ಇನ್ನೊಂದರ ತರವಿಲ್ಲ; ಒಂದರ ಗಾತ್ರ ಬೇರೆ. ಎಲ್ಲರೂ ಅವಳ ಮಕ್ಕಳೆ. ತಾಯಿ ಆ ಮಕ್ಕಳನ್ನೆಲ್ಲ ನೋಡಿದಳು. ಒಮ್ಮೆಲೆ ಗುಡಿಸಲಕ್ಕೆ ಬೆಂಕಿ ಹತ್ತಿತು. ನಿಟ್ಟುಸಿರನ್ನು ಹಾಕಿದಳು. ತಾಯಿ ಗಡಬಡಿಸಿ ಕೂಗಿದಳು. “ಮನೆಗೆ ಬೆಂಕಿ ಬಿದ್ದಿದೆ !” ಮಕ್ಕಳೆಲ್ಲ ಕಣ್ಣುತೆರೆದು ನೋಡಿದರು. ಆ ಮನೆಯ ಉತ್ತರದ ಕಡೆಗೆ ಬೆಂಕಿ ಬಿದ್ದುದು ನಿಜವಾಗಿತ್ತು. ಬೆಂಕಿ ! ಬೆಂಕಿ !! ಎಲ್ಲರೂ ಕೂಗಿದರು. ಆದರೆ, […]

ಪ್ರತಿಧ್ವನಿ

ಪ್ರತಿಧ್ವನಿ

ಕಥೆಗಳು - 0 Comment
Issue Date : 15.10.

ವೇಲುಗೆ ಆ ಶಕ್ತಿ ಬಂದುದು ಹಠಾತ್ತನೆ ಹಾಗೂ ಅನಿರೀಕ್ಷಿತವಾಗಿ. ಅದು ಹೇಗೆ ಬಂತು, ಏಕೆ ಬಂತು ಎಂಬುದು ಆತನಿಗೆ ಅರಿವಿಲ್ಲ. ಆ ಶಕ್ತಿ ಬಂತು ಅಷ್ಟೆ! ಅಂತಹ ಶಕ್ತಿಯು ಯಾವನಾದರೂ ಒಳ್ಳೆಯ ವ್ಯಕ್ತಿಗೆ ಬಂದಿದ್ದರೆ ಅದು ದೇವರು ಕೊಟ್ಟ ವರ ಎನ್ನಬಹುದಿತ್ತು. ಆದರೆ ವೇಲುವಾದರೋ ಒಬ್ಬ ಸಣ್ಣ ಕಳ್ಳ, ಜೂಜುಕೋರ. ಅವನ ಮುಖ್ಯ ದಂಧೆ ಚಿತ್ರಮಂದಿರದಲ್ಲಿ ಕಾಳಸಂತೆಯಲ್ಲಿ ಟಿಕೆಟ್ ಮಾರುವುದು, ಕ್ರಿಕೆಟ್ ಬೆಟ್ಟಿಂಗ್ ನಡೆಸುವುದು ಮುಂತಾಗಿ. ಕಾಲೇಜು ಮಕ್ಕಳಿಗೆ ಮಾದಕ ವಸ್ತು ಪೂರೈಸುವ ಕೆಲಸವೂ ಮಾಡುತ್ತಿದ್ದ. ಆದರೆ […]

ನೋವು ಅನುಭವಿಸದೆ ಬುದ್ಧಿ ಬರುವುದಿಲ್ಲ

ಕಥೆಗಳು - 0 Comment
Issue Date : 06.10.2014

ರಂಗಯ್ಯನವರು ಎಲ್ಲದರಲ್ಲೂ ಸರಿ, ಆದರೆ ಅವರಿಗೆ ಶಾಪ ಹಾಕುವ ಕೆಟ್ಟ ಚಟವೊಂದಿತ್ತು. ಯಾರೇನಾದರು ಕೆಟ್ಟಮಾತುಗಳನ್ನು ಆಡಿದರೆ, ಬೈದುಗಿಯ್ದು ಮಾಡಿದರೆ, ತೊಂದರೆ ಕೊಟ್ಟರೆ, ‘ನಿನ್ನ ವಂಶ ನಿರ್ವಂಶವಾಗ, ನಿನ್ನ ಬಾಯಿ ಬಿದ್ದು ಹೋಗ’ ಎಂದೆಲ್ಲಾ ಬೈಯುತ್ತಿದ್ದರು. ಕೈ ಲಟಿಕೆ ಮುರಿದು ಹಿಡಿಹಿಡಿ ಶಾಪ ಹಾಕುತ್ತಿದ್ದರು. ಅವರಮ್ಮ ಕುಮುದಾ ಬಾಯಿ, ಹಾಗೆಲ್ಲ ಅನ್ನಬಾರದು, ಬೈದವರನ್ನು ಪ್ರೀತಿಸು, ತೊಂದರೆ ಕೊಟ್ಟವರನ್ನು ಕ್ಷಮಿಸು, ದೇವರು ನಿನಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂದರೆ ರಂಗಯ್ಯನವರು ಕೇಳುತ್ತಿರಲಿಲ್ಲ. ಇದರಿಂದಾಗಿ ಅವರನ್ನು ಪ್ರೀತಿಸುವವರಿಗಿಂತ ದ್ವೇಷಿಸುವವರೇ ಹೆಚ್ಚಾಗಿದ್ದರು. ಆದರೂ ರಂಗಯ್ಯನವರಿಗೆ […]

ಮನುಷ್ಯನಿಗೆ ಇರದ ಕೃತಜ್ಞತೆ

ಮನುಷ್ಯನಿಗೆ ಇರದ ಕೃತಜ್ಞತೆ

ಕಥೆಗಳು - 0 Comment
Issue Date : 24.09.2014

ಕೆಂಪ ಒಂದು ನಾಯಿಯನ್ನು ಸಾಕಿದ್ದನು. ಅವನು ಅದನ್ನು ಹೊರಗೆಲ್ಲಿಗೂ ಬಿಡುತ್ತಿರಲಿಲ್ಲ. ಹೊರಗೆ ಹೋದರೆ ಗಲೀಜು ತಿಂದು ಬರುತ್ತದೆ ಎಂದು ಅವನಿಗೆ ಗೊತ್ತಿತ್ತು. ಅದಕ್ಕಾಗಿ ಅವನು ಮನೆಯಲ್ಲೆ ಅದನ್ನು ಕಟ್ಟಿ ಹಾಕಿರುತ್ತಿದ್ದನು. ಕಾಂಪೌಂಡ್ ಹೊರಗೆ ಬಿಡದಿದ್ದುದರಿಂದ ಒಮ್ಮೊಮ್ಮೆ ಕರಿಯ ಮನಸೋ ಇಚ್ಛೆ ಬೊಗಳುತ್ತಿತ್ತು. ಅದರಲ್ಲೂ ತನ್ನ ಜಾತಿಯ ನಾಯಿಗಳನ್ನು ಕಂಡರೆ ಅದು ಹೆಚ್ಚಾಗಿ ಬೊಗಳುತ್ತಿತ್ತು. ಅವೇನಾದರು ಕಾಂಪೌಂಡಿನ ಹತ್ತಿರಕ್ಕೆ ಬಂದರೆ ಎಗರಾಡುತ್ತಿತ್ತು. ಕರಿಯನನ್ನು ಸರಪಳಿಯಲ್ಲಿ ಕಟ್ಟಿಹಾಕಿರುತ್ತಿದ್ದುದರಿಂದ ಅದನ್ನು ಕಿತ್ತುಕೊಂಡು ಓಡಲು ಅದರಿಂದ ಸಾಧ್ಯವಾಗುತ್ತಿರಲಿಲ್ಲ. ಅದರ ಬೊಬ್ಬೆ ಕೇಳಿದರೆ ಒಳಗಿದ್ದ […]

ದೇಶ ಸೇವೆ

ಕಥೆಗಳು - 0 Comment
Issue Date : 25.07.2014

“ಸೈನಿಕನೇ ದೇಶಸೇವೆ ಮಾಡಬಲ್ಲರೇನು? ಸೈನ್ಯಕ್ಕೆ ಸೇರಿ ಕತ್ತಿ ಗುರಾಣಿಗಳನ್ನು ಹಿಡಿದರೆ ಮಾತ್ರ ದೇಶಸೇವೆ ಏನು? ಅದು ದೇಶ ಸೇವೆ ನಿಜ.  ಅದರಿಂದ ಮಾತ್ರ ದೇಶಸೇವೆಯಲ್ಲ.  ದೇಶಸೇವೆ ಮಾಡುವುದು ಎಲ್ಲ ದೇಶೀಯನ ಕಾರ್ಯ.  ಮಾತೆಯ ಪುತ್ರನ ಕರ್ತವ್ಯ ಪ್ರತಿಯೋರ್ವ ತನ್ನ ತನ್ನ ಉದ್ಯಮ ಮಾಡುತ್ತಲೇ, ಅದರಿಂದಲೇ, ಆಯಾ ಕ್ಷೇತ್ರದಲ್ಲಿಯೇ ದೇಶಕ್ಕೆ ಉನ್ನತ, ತ್ತಮ ಸೇವೆ ಸಲ್ಲಿಸಬಲ್ಲ.  ದೇಶವನ್ನು ರಕ್ಷಿಸಬಲ್ಲ.  ಆಪತ್ತಿನಲ್ಲಿ ಆತ್ಮವನ್ನೊಡ್ಡುವ ಆತ್ಮೀಯತೆ ದೇಶದ ಬಗ್ಗೆ ಅವನಿಗಿದ್ದರೆ ಸಾಕು.  ಇದು ಎಲ್ಲರಿಗೂ ಬೇಕು.  ಸೈನಿಕರಲ್ಲಿ ಮಾತ್ರವಿದ್ದರೆ ಸಾಲದು.  ಕೇವಲ […]

ಆದರ್ಶವಾದಿ ಡಾ|| ಮಥುರಸಿಂಹ

ಕಥೆಗಳು - 0 Comment
Issue Date : 21.7.2014

ಚಕ್ರವಾಲಾ ಹೈಸ್ಕೂಲಿನಲ್ಲಿ ಮಥುರ ಸಿಂಹನನ್ನು ಅರಿಯದವರಿಲ್ಲ.  ಆತನ ತೀಕ್ಷ್ಣಬುದ್ಧಿ ಎಲ್ಲರನ್ನೂ ಅಚ್ಚರಿಗೊಳಿಸುತ್ತಿತ್ತು.  ಒಮ್ಮೆಲೇ ಮುಗ್ಧಗೊಳಿಸುತ್ತಿತ್ತು ಜನರನ್ನು, ಅವನ ನಡತೆ.  ಅವನ ಸ್ನೇಹವನ್ನು ಎಲ್ಲರೂ ಬಯಸುತ್ತಿದ್ದವರೇ, ಎಲ್ಲದರಲ್ಲೂ ಅವನು ಮುಂದು.  ಅವನಿಲ್ಲದ ಕಾರ್ಯವಿಲ್ಲ. ಅವನೆಂತು ಆದರ್ಶವಾದಿಯೋ, ಅಂತೆಯೇ ಅವನು ಎಲ್ಲರಿಗೂ ಆದರ್ಶವಾಗಿದ್ದನು.  ವೈದ್ಯಕೀಯ ವೃತ್ತಿ  1883ರಲ್ಲಿ ಝೇಲಂ ಜಿಲ್ಲೆಯ ಡುಡಿಚಾಲ ಗ್ರಾಮದಲ್ಲಿ ಜನಿಸಿದ ಮಥುರಸಿಂಹ ಸ್ವಗ್ರಾಮದಲ್ಲೇ ತನ್ನ ಮೊದಲ ಶಿಕ್ಷಣವನ್ನು ಮುಗಿಸಿದನು.  ಚಕ್ರವಾಲಾ ಹೈಸ್ಕೂಲಿನಲ್ಲಿ ಮೆಟ್ರಿಕ್ ಮುಗಿಸಿದನಂತರ ಖಾಸಗಿಯಾಗಿ ವೈದ್ಯಕೀಯ ವೃತ್ತಿಯನ್ನು ಕಲಿಯಲಾರಂಭಿಸಿದನು.  ಅವನು ವೈದ್ಯಕೀಯ ಶಿಕ್ಷಣ ಪಡೆದ […]

ಪರಿವರ್ತನೆ !

ಕಥೆಗಳು - 0 Comment
Issue Date : 04.07.2014

ತಂದೆ ಎಲ್ಲಾ ಚರಾಚರ ವಸ್ತುಗಳಲ್ಲಿಯೂ ನಾನಿದ್ದೇನೆ ಎಂದು ಭಗವಾನ್ ಶ್ರೀ ಕೃಷ್ಣ ಹೇಳಿಲ್ಲವೆ? ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಒಂದೇ, ಎಲ್ಲರಲ್ಲಿಯೂ ದೇವರನ್ನು ಕಾಣಲು ಪ್ರಯತ್ನಿಸಿ… ಎಂದು ಶಿಷ್ಯರಿಗೆ ಉಪದೇಶಿಸಿದ್ದೆ.  ನನ್ನ ಮಾತನ್ನು ಕೇಳಿದ ಶಿಷ್ಯರು ಮಂತ್ರ ಮುಗ್ಧರಾಗಿರಲಿಲ್ಲವೆ? ಆದರಲ್ಲೂ ನನ್ನ ಏಕಮಾತ್ರ ಪುತ್ರ ಹರ್ಷ ಮೈಯೆಲ್ಲಾ ಕಿವಿಯಾಗಿ ಕೇಳಿಸಿಕೊಂಡಿದ್ದ. ಈಗ ನನಗೆ ಅಂದಾಜಾದದ್ದು – ಅವನು ನನ್ನ ಉಪದೇಶವನ್ನು ಅಷ್ಟೇಕೆ ಗಮನವಿರಿಸಿ ಕೇಳಿಕೊಂಡ ಎಂದು. ಅಲ್ಲ …ಅವನದಾದರೂ ಎಂತಹ ವಿಚಿತ್ರ ಬುದ್ಧಿ…! …ನಾನೇನೋ ಉಪದೇಶಿಸುವುದಕ್ಕೆ ಮಾತ್ರ ನಾವೆಲ್ಲರೂ […]

ಕೆರೆಯ ನೀರನು ಕೆರೆಗೆ ಚೆಲ್ಲಿ

ಕಥೆಗಳು - 1 Comment
Issue Date : 29.06.2014

ಅಂದೇಕೋ ಏನು ಮಾಡಲೂ ಮನಸ್ಸಿಲ್ಲದೆ, ಬೇಸರವಾಗಿ ಸುಮ್ಮನೆ ಕುಳಿತಿದ್ದೆ; ಆದರೆ ಮನಸ್ಸು ಮಾತ್ರ ಸುಮ್ಮನಿರಲಿಲ್ಲ. ಎಲ್ಲೋ ಕೇಳಿದ್ದ ಹದಿನೈದು ವರ್ಷಗಳ ಹಿಂದೆ ನಡೆದ ಘಟನೆಯೊಂದನ್ನು ಮೆಲುಕು ಹಾಕತೊಡಗಿತು. *** ಅದೊಂದು ಸಾಧಾರಣ ಕುಟುಂಬ. ಎಲ್ಲಾ ತಂದೆ ತಾಯಿಗಳಂತೆ ಆ ತಂದೆ –ತಾಯಿಗಳಿಗೂ ತಮ್ಮ ಮಕ್ಕಳನ್ನು ಒಂದು ಸರಿಯಾದ ನೆಲೆಗೆ ಸೇರಿಸಬೇಕೆನ್ನುವ ತವಕ. ಆ ಆತುರದಲ್ಲಿಯೇ ಅವರು ವರಾನ್ವೇಷಣೆಗೆ ತೊಡಗಿದರು. ಆದರೆ ಹೇಳಿಕೊಳ‍್ಳುವಂತಹ ಅದಾಯವಿಲ್ಲದ ಆ ಕುಟುಂಬದೊಂದಿಗೆ ಸಂಬಂಧ ಬೆಳೆಸಲು ಒಪ್ಪುವರಾರು? ಒಳ್ಳೆಯ ಕುಟುಂಬ, ಲಕ್ಷಣವಂತ ಹುಡುಗಿ ಎನ್ನುವುದಕ್ಕಿಂತ […]