ಮೌಲ್ಯ!

ಕಥೆಗಳು - 0 Comment
Issue Date : 13.06.2014

ಓರ್ವ ಬ್ರಾಹ್ಮಣ ಮಹಾಪಂಡಿತನಾಗಿದ್ದು, ತನ್ನ ಬ್ರಾಹ್ಮವೃತ್ತಿಯಿಂದ ಸಾಕಷ್ಟು ಹಣವನ್ನೂ ಸಂಪಾದಿಸಿದ್ದ. ಸತ್ಯ – ಧರ್ಮ- ನ್ಯಾಯ – ಪ್ರಾಮಾಣಿಕತೆ ಮುಂತಾದುವುಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದ. ಆತನಿಗೆ ನಾಲ್ವರು ಮಕ್ಕಳಿದ್ದರು. ಅವರೆಲ್ಲರ ಓದು ಮುಗಿದ ಮೇಲೆ ತಂದೆಯು ತನ್ನ ಮಕ್ಕಳನ್ನು ಕುಳ್ಳಿರಿಸಿಕೊಂಡು ಹೀಗೆ ಹೇಳಿದೆ:  “ಮಕ್ಕಳೇ… ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ನಿಮಗೆ ವಿದ್ಯಾಭ್ಯಾಸವನ್ನು ಮಾಡಿಸಿದ್ದೇನೆ. ನೀವೀಗ ವಯಸ್ಕರಾಗಿದ್ದೀರಿ. ಇನ್ನು ಮುಂದೆ ನಿಮ್ಮ ನಿಮ್ಮ ಜೀವನವನ್ನು ನೀವು ರೂಪಿಸಿಕೊಳ್ಳಿ. ಮೂಲಧನವಾಗಿ ತಲಾ ಹದಿನೈದು ಸಾವಿರ ರೂಪಾಯಿಗಳಂತೆ ಹಂಚುತ್ತೇನೆ. ನನ್ನ […]

ವಿಜಯಮಾಲೆ!

ಕಥೆಗಳು - 0 Comment
Issue Date : 13.06.2014

ಪರಸ್ಪರ ಕಾದಾಟದಲ್ಲಿಯೇ ನಿರತರಾಗಿದ್ದ ಚಾಲುಕ್ಯ ರಾಜರು ಮತ್ತು ಚೋಳ ರಾಜರುಬದ್ಧ ದ್ವೇಷಿಗಳಾಗಿದ್ದರು. ಚೋಳರು ಚಾಲುಕ್ಯರ ಸಾಮ್ರಾಜ್ಯವನ್ನೂ, ಚಾಲುಕ್ಯರು ಚೋಳರ ಸಾಮ್ರಾಜ್ಯವನ್ನೂ ಸ್ವಾಧೀನಪಡಿಸಿಕೊಳ್ಳಲು ಸತತ ಪ್ರಯತ್ನಿಸುತ್ತಿದ್ದರು. ಆದರೆ ಎರಡೂ ಕಡೆಯ ಸಾಮ್ರಾಟರೂ ಬಲಿಷ್ಠರಾಗಿದ್ದರು. ಇಂತಹ ಸಮಯದಲ್ಲಿ ಚಾಲುಕ್ಯ ಸಾಮ್ರಾಟ ಮೊದಲನೇ ಸೋಮೇಶ‍್ವರನಿಗೆ ವಯಸ್ಸಾದ ಕಾರಣ ತನ್ನ ಮೊದಲನೆಯ ಮಗನಾದ ಎರಡನೆಯ ಸೋಮೇಶ್ವರನಿಗೆ ಪಟ್ಟ ಕಟ್ಟುತ್ತಾನೆ. ಇವನು ಸಾಮ್ರಾಟ ಸ್ಥಾನಕ್ಕೆ ಅರ್ಹವಲ್ಲವೆಂದೂ ಗೋತ್ತಿದ್ದರೂ ತನ್ನ ಎರಡನೆಯ ಮಗನಾದ ವಿಕ್ರಮನ ಒತ್ತಾಯದ ಮೇರೆಗೆ ಸಾಮ್ರಾಟ ಪಟ್ಟ ಕಟ್ಟುತ್ತಾನೆ. ಸೋಮೇಶ್ವರ ಸಾಮ್ರಾಟನಾದುದೇ ತಡ […]

ಕರಿಯಪ್ಪ ಕರಡಿಗೌಡ ಆದದ್ದು!

ಕಥೆಗಳು - 0 Comment
Issue Date : 07.06.2014

ಮುಂಗಾರಿನ ಮಜಲು. ಬೆಳದಿಂಗಳ ರಾತ್ರಿ. ಜಾತ್ರೆಯ ಕುಣಿತ, ಹಬ್ಬದ ಸಂತೆ, ಕೋಳಿಯಂಕ, ಸಾರಾಯಿಯ ಅಮಲು ಎಲ್ಲವೂ ತೀರುತ್ತಿದ್ದಂತೆ ನಾಲ್ಕಾರು ಮಂದಿ ಗೆಳೆಯರೊಂದಿಗೆ ಊರಿನತ್ತ ಹೆಜ್ಜೆ ಹಾಕಿದ ಕರಿಯಪ್ಪ ಗೌಡ. ಅಂಕು – ಡೊಂಕಾಗಿ ಬಿದ್ದಿರುವ ಟಾರು ರಸ್ತೆ. ಆಗೊಮ್ಮೆ – ಈಗೊಮ್ಮೆ ಇಣುಕುತ್ತಿರುವ  ಮಿಂಚು ಗೊಂಚಲಿನ, ಗುಡುಗು – ಮೋಡಗಳು ಮೇಳೈಸಿದ್ದ ಮುಂಗಾರಿನ  ವಾತಾವರಣ. ಕರಿಯಪ್ಪ ತಾನು ಕಂಡು ಕೇಳಿದ್ದ ಸಂಗತಿಗಳಿಗೆ ಬಣ್ಣ ಕಟ್ಟಿ ರಂಜನೀಯ ಮಾತುಗಳನ್ನು ಆಡುತ್ತಾ ದಾರಿ ಸವೆಯುತ್ತಿದ್ದಂತೆ ಒಬ್ಬೊಬ್ಬ ಗೆಳೆಯನ ಊರ ದಾರಿಗಳೂ […]

ಕತೆಯಾದವನ ಕಥೆ

ಕಥೆಗಳು - 0 Comment
Issue Date : 05.04.2014

ದಿನಪತ್ರಿಕೆಯ ಎರಡನೇ ಪುಟದ ನಾಲ್ಕನೇ ಕಾಲಂನ ಕೊನೆಯಲ್ಲಿ ತುಂಡು ಸುದ್ದಿಯೊಂದು ಅಚ್ಚಾಗಿತ್ತು. ಸುಮಾರು ಇಪ್ಪತ್ತೇಳರ ಹರೆಯದ ಯುವಕನೊಬ್ಬನ ಭಾವಚಿತ್ರದಡಿಯಲ್ಲಿ “ಗ್ರಾಮಾಂತರ ಪ್ರದೇಶದಲ್ಲಿ ಡಬ್ಬಲ್ ಡಿಗ್ರಿ ಪದವೀಧರನಾದ ಕಥೆಗಾರ ‘ಹಿರಿಯೂರು ಈರಣ್ಣ’ ಎಂಬ ಯುವಕನ ಆತ್ಮಹತ್ಯೆ ಮಾಡಿಕೊಂಡಿರುವ ನೆಂಬುದು ಬಲ್ಲ ಮೂಲಗಳಿಂದ  ತಿಳಿದು ಬಂದಿದೆ. ಇದೇ ವರ್ಷದ ‘ಯುಗಾದಿ ವಿಶೇಷಾಂಕ’ದಲ್ಲಿ ಪ್ರಕಟವಾದ ಈತನ ಕಥೆ ‘ಇನ್ನಿಲ್ಲದವರು’ ಪ್ರಥಮ ಬಹುಮಾನ ಪಡೆದಿತ್ತು. ಈತನ ‘ನ್ಯಾಯ’ ಕಾದಂಬರಿ ಈ ವರ್ಷದಲ್ಲಿ ಪ್ರಕಟನೆ ಕಾಣುವುದರಲ್ಲಿತ್ತು. ಈತ ವಯಸ್ಸಾದ ತಾಯಿಯೊಬ್ಬಳನ್ನು ಅಗಲಿದ್ದಾನೆ. ನಿರುದ್ಯೋಗವೇ ಈತನ […]

ಸದ್ಗುಣಿ ಹಿಂದೂ

ಕಥೆಗಳು - 0 Comment
Issue Date : 04.04.2014

ನಮ್ಮ ದೇಶದ ಸ್ವಾತಂತ್ರ್ಯದ ಸೂರ್ಯೊದಯದ ಜೊತೆಗೇನೇ ಪಂಜಾಬು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಿತು. ಆಗ ಅಮೃತಸರದ ಎಲ್ಲ ಮುಸಲ್ಮಾನರೂ ಪಾಕಿಸ್ತಾನಕ್ಕೆ ಹೊರಟು ಹೋದರು. ಅಮೃತ ಸರದಲ್ಲಿನ ಹಣ್ಣಿನ ವ್ಯಾಪಾರವು ಹೆಚ್ಚಾಗಿ ಮುಸಲ್ಮಾನರಲ್ಲೇ ಇತ್ತು.  ಭಾರತದ ಮೇಲಿನ ವ್ಯಾಮೋಹದಿಂದಲೋ ಅಥವಾ ಇನ್ನಾವ ಕಾರಣದಿಂದಲೋ ಹಲಕೆಲವು ಮಹಮದೀಯರು ಅಲ್ಲೇ ಉಳಿದಿದ್ದರು. ಅಲ್ಲೊಬ್ಬ ಮುದುಕ ಮುಸಲ್ಮಾನ ಒಂದು ಅರಳಿ ಮರದಡಿಯಲ್ಲಿ ಕುಳಿತು ತನ್ನ ಪರಂಪರೆಯಿಂದ ಬಂದ ಹಣ್ಣಿನ ವ್ಯಾಪಾರವನ್ನೇ ಮಾಡುತ್ತಿದ್ದ. ಅವನು ಗುಣವಂತ, ಅವನ ಬೆಳ್ಳಗಿನದಾಡಿ ಅವನು ಶುದ್ಧ ಮನಸ್ಕನೆಂದು ಸಾರುವಂತಿತ್ತು. ಅವನು […]

ವೀರ ಬಾಲಕ

ಕಥೆಗಳು - 0 Comment
Issue Date : 02.04.2014

ಮದ್ರಾಸ್ ಅಧಿಪತ್ಯದ ನಾರ್ತ್ ಆರ್ಕ್‍ಟ್ ಜಿಲ್ಲೆಯಲ್ಲಿ ಒಂದು ಕೋಟೆ ಇದೆ. ಅದರ ಹೆಸರು ಶೆಂಜಿ ಕೋಟೆ ಎಂದು.  ಆ ಕೋಟೆಯನ್ನು ಹಿಂದೆ ಒಬ್ಬ ಸಾಮಂತ ರಾಜನು ಆಳುತ್ತಿದ್ದನು. ಆ ಕೋಟೆಯು ಓರ್ವ ಸುಲ್ತಾನನಿಗೆ ಸೇರಿತು. ಸುಲ್ತಾನನಾದರೋ ಬಹಳ ಕ್ರೂರಿ. ಜನರನ್ನು ಒಂದಲ್ಲ ಒಂದು ರೀತಿ ಹಿಂಸಿಸುವುದೇ ಅವನ ವಾಡಿಕೆಯಾಗಿತ್ತು. ತನ್ನ ಎಲ್ಲ ಸಾಮಂತ  ರಾಜರನ್ನು ಸೂರೆಮಾಡಿ  ತನ್ನ  ಬೊಕ್ಕಸವನ್ನು ತುಂಬಿದ್ದನು. ಅಕಸ್ಮಾತ್ತಾಗಿ ಒಂದು ದಿನ ಸುಲ್ತಾನನ ಊರಿಗೆ ಒಂದು ಕುದುರೆ ಬಂದಿತು. ಅದು ಸಾಮಾನ್ಯವಾಗಿರಲಿಲ್ಲ.  ಎತ್ತರ, ಗಾತ್ರ, […]

ರಕ್ತ ನೀರಿಗಿಂತ ಗಟ್ಟಿ

ರಕ್ತ ನೀರಿಗಿಂತ ಗಟ್ಟಿ

ಕಥೆಗಳು - 0 Comment
Issue Date : 01.04.2014

ಭಜ ಗೋವಿಂದಂ ಭಜ ಗೋವಿಂದಂಗೋವಿಂದಂ ಭಜ ಮೂಢಮತೇ॥ ಎಳೆಕಂಠದಿಂದ ಮಗು ಕೈ ಜೋಡಿಸಿ ಭಕ್ತಿಯಿಂದ ಹೇಳಿದಾಗ ಬೆಕ್ಕಸ ಬೆರಗಾಗಿದ್ದರು ಸುಬ್ಬಣ್ಣ. ತಾವು ಕೆಂಪು ಮಡಿಯುಟ್ಟು ದೇವರ ಕೋಣೆಯಲ್ಲಿನ ಮಣೆಯಲ್ಲಿ ಕುಳಿತು ಆರತಿ ಮಾಡುವಾಗ ಹೊಸ್ತಿಲಾಚೆ ನಿಂತ ಎರಡೂವರೆ ವರ್ಷದ ಕಂದ ಸ್ಪಷ್ಟ ಉಚ್ಚಾರದಲ್ಲಿ ಭಕ್ತಿಯಿಂದ ಕೈ ಮುಗಿದು ಹಾಡಿದ್ದ. ಮಗುವಿನ ಹಿಂದೆ ನಿಂತಿದ್ದ ಶಾಂತಕ್ಕನಿಗೂ ಬೆರಗು. ಇಷ್ಟು ಸಣ್ಣ ಕಂದನಿಗೆ ಇದೆಲ್ಲ ಗೊತ್ತುಂಟಾ? ಪೂಜೆ ಮುಗಿಸಿ ಹೊರಬಂದು ನೈವೇದ್ಯಕ್ಕಿಟ್ಟ ಒಣದ್ರಾಕ್ಷಿ, ಬಾಳೆಯಹಣ್ಣು ಅವನ ಪುಟ್ಟ ಕೈಗಳಲ್ಲಿಟ್ಟ ಸುಬ್ಬಣ್ಣ […]

ವೀರ ಲವ – ಕುಶರು

ಕಥೆಗಳು - 0 Comment
Issue Date : 31.03.2014

ಪ್ರಭಾತ ಕಾಲ. ಅದೇ ಆಗ ಭಗವಾನ್ ಸೂರ್ಯದೇವನು ತನ್ನ ಹೊಂಬಣ್ಣದ ಕಿರಣಗಳನ್ನು ಮಹಾ ತಪಸ್ವಿ ವಾಲ್ಮೀಕಿಯ ಆಶ್ರಮದ ತುಂಬ ಪಸರಿಸಿದ್ದನು.  ಋಷಿಗಳು ತಮ್ಮ ಸ್ನಾನ ಸಂಧ್ಯಾದಿ ಅನುಷ್ಠಾನಗಳನ್ನು ನಡೆಸಿದ್ದರು. ಅವರ ವೇದಘೋಷದ ಸುಸ್ವರದಿಂದ ಆಶ್ರಮವು ಪವಿತ್ರಮಯ ವಾತಾವರಣದಿಂದ ತುಂಬಿ ಹೋಗಿತ್ತು. ಇಂಥ ತಪೋವನದ ಪಾರ್ಶ್ವದಲ್ಲಿ ಚಿಕ್ಕ ವಯಸ್ಸಿನ ಕೆಲ ಬಾಲಕರು ಆಟವಾಡುತ್ತಿದ್ದರು. ಬಾಲಕರು ತಮ್ಮ ಆಟದಲ್ಲಿ ಮಗ್ನರಾಗಿರುವಾಗ ಒಂದು ಸುದಂರವಾಗಿ ಅಲಂಕರಿಸಲ್ಪಟ್ಟ ಅಶ್ವವು ಒಮ್ಮೆಲೇ ಆಶ್ರಮದಲ್ಲಿ ನುಗ್ಗಿ ಎಲ್ಲ ಗಿಡ ಬಳ್ಳಿಗಳನ್ನು ತುಳಿದು ನಾಶಮಾಡುತ್ತಿತು.  ಅದರ ಗೌರವರ್ಣದ […]

ತುಂಬಿದ ಮಡಿಲು

ತುಂಬಿದ ಮಡಿಲು

ಕಥೆಗಳು - 0 Comment
Issue Date : 30.03.2014

ಮನೆಯ ಮುಂದಿನ ಹಜಾರದಲ್ಲಿ ಅಕ್ಕಿ ಹಸನು ಮಾಡುತ್ತಿದ್ದ ಪಾರ್ವತಿಗೆ ಭೂತಕಾಲದ ಘಟನೆಗಳು ನೆನಪಿಗೆ ಬಂದು ಅವಳನ್ನು ಒಂದಿಷ್ಟು ವ್ಯಾಕುಲಗೊಳ್ಳುವಂತೆ ಮಾಡಿದ್ದವು. ಕುಂತರೆ ಕುಂಡಿ ಬುಡಕ್ಕೆ -ಹೊರಟರೆ ಹೆಗಲ ಮೇಲೆ ಎಂಬತ್ತಿತ್ತು ಅವಳ ಬದುಕು. ಒಂಟಿ ಬಾಳನ್ನೇ ಬಹಳ ಕಾಲದಿಂದ ಅನುಭವಿಸುತ್ತಾ ಬಂದಿದ್ದರಿಂದ ಅದರ ಯಾತನೆಯಲ್ಲಿ ಬೆಂದು, ಬದುಕನ್ನು ರೂಪಿಸಿಕೂಂಡಿದ್ದಳು. ಯಾರ ಮನೆಯಲ್ಲಾದರೂ ಮನೆಗೆಲಸ ಮಾಡಿದರೆ ತನ್ನ ಹೊಟ್ಟೆ ತುಂಬುತ್ತದೆ ಎಂಬ ಸದ್ಯದ ನಿರಾಳತೆಯು ಅವಳಲ್ಲಿತ್ತು. ಅವಳನ್ನು ಆಶ್ರಯಿಸಿರೊ ಒಂದೂ ಜೀವವು ಇಲ್ಲವಾಗಿದ್ದರಿಂದ ಕೂಡಿಡುವ ವಿಚಾರವು ಅವಳಿಂದ ದೂರವಾಗಿತ್ತು. […]

ನೆನಪಲಿ.... ಜೊತೆಯಲಿ

ನೆನಪಲಿ…. ಜೊತೆಯಲಿ

ಕಥೆಗಳು - 0 Comment
Issue Date : 29.03.2014

ಎಲ್ಲವನ್ನೂ ಮರೆತು ಹೊಸ ಜೀವನ ಆರಂಭಿಸಬೇಕು;ಆಗಿದ್ದಕ್ಕಾಗಿ ಕೊರಗುತ್ತಾ ನಮ್ಮ ಜೀವನವನ್ನು ವ್ಯರ್ಥ ಮಾಡಿಕೊಳ್ಳಬಾರದು. ಹೌದು….ಹೇಳುವುದಕ್ಕೆ ಎಲ್ಲವೂ ಸುಲಭ; ಅವರವರ ಅನುಭವಕ್ಕೆ ಬಂದಾಗಲೇ ಕಷ್ಟದ ಅರಿವಾಗುವುದು. ಕಾಲ ಕಳೆದಂತೆ ದುಃಖ ಮರೆಯುತ್ತದೆ ಎನ್ನುವುದೂ ಮಿಥ್ಯೆಯೇ ಎನಿಸುತ್ತಿದೆ.ಎರಡು ತಿಂಗಳಾದರೂ ಹಳೆಯ ನೆನಪುಗಳಿಂದ ಹೊರಬರಲಾಗುತ್ತಿಲ್ಲ. ಕಾಲೇಜು, ವಿದ್ಯಾರ್ಥಿಗಳು, ಪರಿಚಿತರು, ಸಂಬಂಧಿಕರು… ಉಹುಂ… ಯಾವುದೂ ಬೇಡವೆನಿಸುತ್ತಿದೆ… ಆ ಅನುಕಂಪದ ನೋಟ, ಸಹಾನುಭೂತಿಯ ಮಾತುಗಳು,ಛೇ… ಹೀಗಾಗಬಾರದಿತ್ತು ಎಂದು ಕನಿಕರಿಸುವ ಮಂದಿ….ಸಹಿಸಲಾಗದು. ದುಃಖದಲ್ಲೂ ಒಮ್ಮಮ್ಮೆ ಸ್ಮೃತಿಪಟಲದಲ್ಲಿ ತೇಲಿಬರುವ ಆ ಆನಂದದ ಕ್ಷಣಗಳನ್ನೇ ನೆನೆಯುತ್ತಾ ಅದರಲ್ಲೇ ಲೀನವಾಗುವ […]