ಸಂಕ್ರಾಂತಿ !

ಕಥೆಗಳು - 0 Comment
Issue Date : 25.03.2014

ನಗರದ ಆ ಹಿಂದುಳಿದ ಬಡಾವಣೆಯಲ್ಲಿ ರಾ. ಸ್ವ. ಸಂಘದ ಶಾಖೆ ಶುರುವಾಗಿ ಹತ್ತಾರು ತಿಂಗಳು ಕಳೆದಿದ್ದವು. ಬಡಾವಣೆಯ ಕೊನೆಯ ಸಾಲಿನ ಗುಡಿಸಲೊಂದರಿಂದ ಅಂಜಿನಪ್ಪನೆಂಬ ಹುಡುಗ ಬರುತ್ತಿದ್ದ. ಈಗ ನಾಲ್ಕಾರು ದಿನದಿಂದ  ಆತ  ಬರದಿದ್ದಾಗ, ಮುಖ್ಯ ಶಿಕ್ಷಕ ಮಲ್ಲಣ್ಣ ಶಾಖೆ ಬಿಟ್ಟಮೇಲೆ ತಿಮ್ಮಾ ನಾಯ್ಕನೊಂದಿಗೆ ಅವನ ಗುಡಿಸಲಿಗೆ ಹೋದ. ಗುಡಿಸಲಿನ ಬಾಗಿಲು  ಮುಚ್ಚಿತ್ತು. ಮಲ್ಲಣ್ಣ ಹೊರಗೇ ನಿಂತು, “ಅಂಜಿನಪ್ಪಾ ಅಂಜಿನಪ್ಪಾ” ಎಂದು ಒಂದೆರಡು ಬಾರಿ  ಕೂಗಿದಾಗ, ಬಾಗಿಲು  ತೆರೆಯುವ ಸದ್ದು ಕೇಳಿಸಿತು. ಬಾಗಿಲು ತೆರೆದಳು ಆತನ ಅಕ್ಕ ಪಾರ್ವತಿ, […]

ಬನ್ನಿಯ ಮರ

ಕಥೆಗಳು - 0 Comment
Issue Date : 22.03.2014

ಬೊಮ್ಮನಹಳ್ಳಿಯ ಹಿರಿಯ ರಾಮಜ್ಜನಿಗೆ ನಿದ್ದೆ ಬರಲಿಲ್ಲ. ಆತನಗೆ ಅದೇ ಯೋಚನೆ ಆಗಿತ್ತು – “ಈ ವರ್ಷ ಹೇಗೆ ಹಬ್ಬ ಮಾಡುವುದು? ನಮ್ಮ ಹಳ್ಳಿಗೆ ಇರೋ ಒಂದೇ ಒದು ಮರ. ಅದು ನಟೆ ಬಡಿದು ಒಣಹೋಯಿತು. ಎಷ್ಟು ವರುಷ ಬರುತ್ತದೆ, ಮುದಿಯಾದ ಮೇಲೆ ಇರುತ್ತದೆಯೇ? ಎಲ್ಲಿ ಹುಡುಕಿದರೂ ಸಸಿ, ಗಿಡ, ಮರ ಸಿಗುವ ಹಾಗಿಲ್ಲ. ಈ ಜನ ರೊಕ್ಕದ ಆಸೆಗೆ ಗಿಡಮರಗಳನ್ನು ನಾಶ ಮಾಡಿದ್ದಾರೆ. ನಾಳೆ ಬರುವ  ದಸರಾ ಹಬ್ಬಕ್ಕೆ  ಆ ಗಿಡ ಇಲ್ಲದಿದ್ದರೆ ಹಬ್ಬ ಆಚರಿಸುವುದು ಹೇಗೆ?” […]

ಚದುರಿದ ಮುತ್ತುಗಳು

ಕಥೆಗಳು - 1 Comment
Issue Date : 19.03.2014

ಆ ಹುಡುಗಿ ನನ್ನ ಆಫೀಸಿನೆದುರು ಅಳುತ್ತ ನಿಂತು ಎಷ್ಟ್ಹೋತ್ತಾಗಿತ್ತೋ. ತರಗತಿಗಳಿಗೆ ಶಿಕ್ಷಕರು ಹೋಗಿದ್ದಾರೋ ಇಲ್ಲವೋ ನೋಡಬೇಕೆಂದು ನನ್ನ ಆಫೀಸಿನಿಂದ ಹೊರಗೆ ಬರುತ್ತಿದ್ದಂತೆಯೇ ಗೋಡೆಗೆ ಒರಗಿಕೊಂಡು ನಿಂತಿದ್ದ ಅವಳನ್ನು ಗಮನಿಸಿದೆ. “ಯಾಕೆ ಇಲ್ಲಿ ನಿಂತ್ಕೊಂಡಿದ್ದೀಯಾ?  ಕ್ಲಾಸಿಲ್ಲವೇ?” ಎಂದು ನಾನು ಕೇಳುತ್ತಿದ್ದಂತೆಯೇ ನನ್ನತ್ತ ತಿರುಗಿದ ಆಕೆಯ ಮುಖ ನೋಡಿದೆ. ಆಕೆಯ ಕಣ್ಣುಗಳೆರಡು ಆಗಲೇ ಕೆಂಪಾಗಿ ನೀರಿನ ಮಡುವಾಗಿದ್ದವು. “ಸರ್… ನನ್ನ..”ಎನ್ನುತ್ತಿದ್ದಂತೆಯೇ ಆಕೆಗೆ ದುಃಖ ಒತ್ತರಿಸಿ ಬಂದು ಮುಂದೆ ಮಾತನಾಡಲಾಗಲಿಲ್ಲ. ನಾನು ತರಗತಿಗಳಿಗೆ ಹೋಗುವುದನ್ನು ಬಿಟ್ಟು  ಮತ್ತೆ ತಿರುಗಿ ನನ್ನ ಆಫೀಸಿನೊಳಗೆ […]

ಮನ ಕಲಕುವ ಮಹಾಭಾರತದ ಎರಡು ಘಟನೆಗಳು

ಮನ ಕಲಕುವ ಮಹಾಭಾರತದ ಎರಡು ಘಟನೆಗಳು

ಕಥೆಗಳು - 0 Comment
Issue Date : 24.02.2014

ರಾಮಾಯಣ ಮತ್ತು ಮಹಾಭಾರತ ಹಿಂದುಗಳ ಪವಿತ್ರ ಗ್ರಂಥಗಳು. ಅವುಗಳಲ್ಲಿ ಬರುವ ಸಣ್ಣಪುಟ್ಟ ಕಥೆ ಮತ್ತು ಘಟನೆಗಳು ನೀತಿ ಪ್ರಧಾನ ಮತ್ತು ಮಾರ್ಗದರ್ಶಕವಾಗಿದೆ. ಯಕ್ಷನ ಪ್ರಶ್ನೆಗಳಿಗೆ ಉತ್ತರಿಸದೆ ಯುಧಿಷ್ಠಿರನ ಸಹೋದರರೆಲ್ಲ ಮೃತರಾದಾಗ, ಅವರನ್ನರಸುತ್ತ ಹೋದ ಯುಧಿಷ್ಠಿರನಿಗೆ ಆಶ್ಚರ್ಯ ಕಾದಿರುತ್ತದೆ. ಮಹಾ ಪರಾಕ್ರಮಿಗಳಾದ ಆತನ ಸಹೋದರರೆಲ್ಲ ಯಾವ ವಿಧವಾದ ಪ್ರತಿರೋಧವಿಲ್ಲದೆ ಮೃತರಾಗಿರುವುದನ್ನು ನೋಡಿ ತನ್ನ ಕಣ್ಣುಗಳನ್ನು ತಾನೇ ನಂಬುವುದಿಲ್ಲ. ತನ್ನ ಸಹೋದರರ ಸಾವಿಗೆ ಕಾರಣ ತಿಳಿಯುವುದಕ್ಕೆ ಮೊದಲು ಬಾಯಾರಿಕೆ ನೀಗಲು ಆ ಸರೋವರದ ನೀರನ್ನು ಕುಡಿಯಲು ಮುಂದಾದ. ಆಗ ‘ನಿನ್ನ […]

ಬದುಕಿಗೊಂದು ದಾರಿದೀಪ

ಕಥೆಗಳು - 0 Comment
Issue Date : 15.02.2014

ಇಂದು ಬೇಕಾಗಿದ್ದಾರೆ, ಇಂತಹ ವಿದ್ಯಾರ್ಥಿಗಳು! ಕಲ್ಕತ್ತಾದ ಕ್ರಾಂತಿಕಾರಿಗಳ ಭರ್ತಿ ಕೇಂದ್ರವಾದ ‘ಯುಗಾಂತರ ಗೋಷ್ಠಿ’ಯಲ್ಲಿ ಸುಶೀಲಚಂದ್ರ ಸೆನ್ ಮತ್ತು ವೀರೇನ್ ಸೆನ್ ಎಂಬ ಇಬ್ಬರು ವಿದ್ಯಾರ್ಥಿ ಸಹೋದರರಿದ್ದರು.  ಆಂಗ್ಲ ನ್ಯಾಯಧೀಶ ಕಿಂಗ್ಸ್ ಫೋರ್ಡ್ ನ ನ್ಯಾಯಾಲಯದಲ್ಲಿ ಪ್ರಸಿದ್ಧ ನಾಯಕ ಬಿಪಿನಚಂದ್ರಪಾಲರಿಗೆ 6 ತಿಂಗಳ ಶಿಕ್ಷೆ ನೀಡಲಾಗಿತ್ತು.  ಅದು ‘ವಂಗ ಭಂಗ’ದ ವಿರುದ್ಧ ಚಳುವಳಿಯ ಯುಗವಾಗಿತ್ತು.  ‘ವಂದೇ ಮಾತರಂ’ ವಾರ್ತಾಪತ್ರಿಕೆಯಲ್ಲಿ ಈ ಬಗ್ಗೆ ಪಾಲರ ಲೇಖನ ಪ್ರಕಟವಾದುದೇ ಅವರಿಗೆ ಶಿಕ್ಷೆ ವಿಧಿಸಲು ಕಾರಣ.   ಲೇಖನವನ್ನು ಆಂಗ್ಲರು ‘ಅಪತ್ಕಾರಿ ಎಂದು ಭಾವಿಸಿದರು.  […]

ಪೂರ್ಣಾಹುತಿ

ಕಥೆಗಳು - 0 Comment
Issue Date : 10.02.2014

“ಅಪ್ಪಾಜಿ! ಇಷ್ಟೊಂದು ಗಂಭೀರವಾಗಿ ಯಾವ ವಿಷಯ ಆಲೋಚನೆ ಮಾಡುತ್ತಿರುವಿರಿ?” “ಮಗು, ಅದೇ ಆ ವಿಷಯ.  ಮದುರೆಯ ಕಡೆಗೆ ದೃಷ್ಟಿ ಬೀರಿದಾಗಲೆಲ್ಲಾ ನನ್ನ ಅಂತರಂಗದಲ್ಲಿ ಕಳವಳವಾಗುತ್ತದೆ” “ಅಪ್ಪಾಜಿ, ವೃಥಾ ವ್ಯಥೆಪಡುವುದರಿಂದ ಏನು ಪ್ರಯೋಜನ? ಸಕಾಲದಲ್ಲಿ ಮದುರೆಯೂ ಮುಕ್ವಾಗಿ ಈ ಹಿಂದೂ ಸಾಮ್ರಾಜ್ಯದಲ್ಲಿ ಸೇರ್ಪಡಯಾಗುವುದು.” “ವಿರೂಪಾಕ್ಷ, ನೀನಿನ್ನೂ ಮುಗ.  ನನ್ನ ಹೃದಯದ ನೋವು ನೀನರಿಯೆ.  ಕಳೆದ 30 ವರ್ಷಗಳಿಂದ ಬಳಲಿ ಬೆಂಡಾದ ಜನಗಳ ಗೋಳನ್ನು ನಾನು ಈ ಕಣ್ಣಿನಿಂದ ನೋಡುತ್ತಿದ್ದೇನೆ.  ಜನತೆ ದುಃಖದಿಂದ ಕಣ್ಣೀರು ಸುರಿಸುವುದು ನಿಲ್ಲದ ವಿನಹ ನನ್ನ […]

ದ್ರೋಹಿಗೆ ಮರಣ ದಂಡವೇ ತಕ್ಕ ಶಾಸನ!

ಕಥೆಗಳು - 0 Comment
Issue Date : 08.02.2014

ಕ್ರಾಂತಿಕಾರಕ ಭಾರತ – ಪ್ರಾತಃ ಸ್ಮರಣೀಯರು ಕನೈಯಾ ಮತ್ತು ಸತ್ಯೇಂದ್ರ  ಮಾಣಿಕ ತೋಳಾ ಬಾಗ್ನ ವೀರಕ್ರಾಂತಿಕಾರಿಗಳನ್ನೆಲ್ಲ ಆಲಿಪುರ ಕಾರಾಗೃಹದಲ್ಲಿಡಲಾಗಿತ್ತು.  ಮತ್ತು ಬ್ರಿಟಿಷ್ ಸರಕಾರದ ವಿರುದ್ಧ ಮೊಕದ್ದಮೆ ನಡೆದಿತ್ತು.  ಇವರ ಸಂಪೂರ್ಣ ಚಟುವಟಿಕೆಗಳನ್ನೂ ಕಾರ್ಯಕ್ರಮಗಳನ್ನೂ ಬಹಿರಂಗಪಡಿಸಿ ಇವರು ಅಪರಾಧಿಗಳೆಂದು ಸಿದ್ಧಪಡಿಸಲು ಸರಕಾರ ಪ್ರಯತ್ನ ಮಾಡುತ್ತಿತ್ತು.  ಆದರೇನು! ಕ್ರಾಂತಿಕಾಋಇಗಳ ಕಾರ್ಯವೆಂದರೆ ರಹಸ್ಯಮಯ.  ಅವರ ಸಂಪೂರ್ಣ ಚಟುವಟಿಕೆಗಳ ಜ್ಞಾನ ಎಲ್ಲ ಕ್ರಾಂತಿಕಾರಿಗಳಿಗೆ ಸಹ ಇರುವುದು ಅಸಾಧ್ಯ.  ಕೇವಲ ಪ್ರಮುಖ ನಾಯಕನೊಬ್ಬನಿಗೆ ಮಾತ್ರ ಎಲ್ಲ ವಿಷಯ ತಿಳಿದಿರುವುದು. ಇಂತಹ ಸಂದರಭದಲ್ಲಿ ಅವರ ರಹಸ್ಯವನ್ನು […]

'ನಿಮಗಾಗಿ ನನ್ನ ಪ್ರಾಣವನ್ನು ಪಣವಾಗಿಡುವೆನು'

‘ನಿಮಗಾಗಿ ನನ್ನ ಪ್ರಾಣವನ್ನು ಪಣವಾಗಿಡುವೆನು’

ಕಥೆಗಳು - 0 Comment
Issue Date : 03.02.2014

ಆದ್ಯ ಕ್ರಾಂತಿಕಾರಕ ವಾಸುದೇವ ಬಳವಂತ ಫಡಕೆ ಆ ದೇಶಭಕ್ತನ ಅಂತಃಕರಣದ ಕಿಚ್ಚು ಕೆರಳಲು ಅಂತಹದೇ  ಪ್ರಶಂಸ  ಆ ದಿನ ನಡೆದಿತ್ತು.  ಅವನು ಕೆಲವು ವರ್ಷಗಳಿಂದ ಸರಕಾರದ ‘ಮಿಲಿಟರಿ ಫೈನಾನ್ಸ್’ ಖಾತೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದನು.  ತಾಯಿಗೆ ಅನಾರೋಗ್ಯವಾಗಿದ್ದು ದೇಹಸ್ಥಿತಿ ಚಿಂತಾಜನಕವಾಗಿದೆ ಎಂದು ಅವನಿಗೆ ತಂತಿ ಸಂದೇಶ ಬಂದಿತ್ತು.  ತನ್ನ ಗ್ರಾಮಕ್ಕೆ ಹೋಗಿ ತಾಯಿಯ ಸೇವೆ ಮಾಡಬೇಕೆಂದು ಬಯಸಿದ.  ತನ್ನ ಮೇಲಧಿಕಾರಿಗೆ ರಜಾ ಕೊಡಬೇಕೆಂದು ಪ್ರಾರ್ಥಿಸಿದ.  ಆದರೆ ಆ ಆಂಗ್ಲ ಅಧಿಕಾರಿ ದೇಶೀಯರಿಗೆ ತನ್ನ ಅಧಿಕಾರ ದರ್ಪವನ್ನು […]

ನ್ಯಾಯ ದೇವತೆಯ ಅಡಿಯಲ್ಲಿ - ಖುದೀರಾಮ್ ಮತ್ತು ಪ್ರಫುಲ್ಲ

ನ್ಯಾಯ ದೇವತೆಯ ಅಡಿಯಲ್ಲಿ – ಖುದೀರಾಮ್ ಮತ್ತು ಪ್ರಫುಲ್ಲ

ಕಥೆಗಳು - 0 Comment
Issue Date : 01.02.2014

“ನ್ಯಾಯ ಮಂದಿರದ ಭ್ರಷ್ಟಾಚಾರ! ನ್ಯಾಯದೇವತೆಗೆ ಕಳಂಕ!!” ಎಂದು ಅತ್ಯಂತ ಉಲ್ಬಣಗೊಂಡ ಮನೋಭಾವನೆಯಿಂದ ಖುದೀರಾಮ್ ಉದ್ಗಾರ ತೆಗೆದ.  “ವಿದೇಶೀಯರ ಆಳ್ವಿಕೆಯಲ್ಲಿ ನ್ಯಾಯವೆಲ್ಲಿ? ಸತ್ಯವೆಲ್ಲಿ?” ಪ್ರಫುಲ್ಲ ದನಿಗೂಡಿಸಿದ.  ಖುದೀರಾಮನ ಅಂತರ್ಯದ ಕಿಚ್ಚು ಇನ್ನಷ್ಟು ಕೆರಳಿತು.  “ಹಾಗೆಂದರೇನು ಪ್ರಫುಲ್ಲ? ಭಾರತೀಯರು ಮಾನವರಲ್ಲವೆ?  ನಮ್ಮ ದೇಶದಲ್ಲಿ ನಾವು ಪಶುಗಳಂತೆ ಜೀವಿಸಬೇಕೆ?  `ಗುಲಾಮನಾದವನು ಪಶುವಿಗಿಂತಲೂ ಕೀಳು.  ಖುದೀರಾಮ್, ಗುಲಾಮ ದೇಶದಲ್ಲಿ ರಾಜ್ಯದ ಅಧಿಕಾರಿಯು ಹೇಳಿದ್ದೇ ಸತ್ಯ, ಮಾಡಿದ್ದೇ ನ್ಯಾಯ! ಗುಲಾಮನಿಗೆ ತನ್ನ ಮನೋಭಾವನೆಯಂತೆ ನಡೆಯಲು ಅಧಿಕಾರವಿಲ್ಲ, ಅದನ್ನು ಆಡಿ ತೋರಿಸುವ ಅಧಿಕಾರ ಕೂಡಿ ಇಲ್ಲ!! […]

ಜನನೀ! ನಿನ್ನಡಿಯಲ್ಲಿ ಈ ದೇಹ ಅರ್ಪಿಸಿದ್ದೇನೆ

ಜನನೀ! ನಿನ್ನಡಿಯಲ್ಲಿ ಈ ದೇಹ ಅರ್ಪಿಸಿದ್ದೇನೆ

ಕಥೆಗಳು - 0 Comment
Issue Date : 31.01.2014

ವಿನಾಯಕ ಸಾವರಕರ್ ಮತ್ತು ಅವರ ಕ್ರಾಂತಿಕಾರಿ ಸ್ನೇಹಿತರ ಮೇಲೆ ಬ್ರಿಟಿಷ್ ಗುಪ್ತಚರ ವಿಭಾಗದ ದೃಷ್ಟಿ ಸದಾಕಾಲ ಬಿಗಿದಿರುತ್ತಿತ್ತು.  ಆದರೆ ತಮ್ಮ ಶತ್ರುಗಳ ರಾಜಧಾನಿಯಲ್ಲಿ ಕೂಡ  ಕ್ರಾಂತಿಕಾರಿಗಳು ನಿರ್ಭಯವಾಗಿ ಸಂಚರಿಸುತ್ತಿದ್ದರು.  ಅಭಿಮಾನದಿಂದ ಮೆರೆಯುತ್ತಿದ್ದರು.  ಅಪಾರ ಧೈರ್ಯ ಇವರ ಜೀವನದ ಮಾರ್ಗದರ್ಶನವಾಗಿತ್ತು.  ಆಂಗ್ಲರ ಉದ್ಧಟವರ್ತನೆಯನ್ನಂತೂ ಇವರು ಎಂದಿಗೂ ಸಹನ ಮಾಡುತ್ತಿರುಲಿಲ್ಲ.   ಒಮ್ಮೆ ಒಬ್ಬ ಆಂಗ್ಲ ಅಧಿಕಾರಯು ಉನ್ಮತ್ತನಂತೆ ಸಿಕ್ಕಾಪಟ್ಟೆ ಮಾತನಾಡಿದಾಗ ಲಂಡನ್ನಿನ ರಾಜಬೀದಿಯಲ್ಲಿ ಭಾರತೀಯ ಯುವಕನೊಬ್ಬನು ಆತನ ಕೆನ್ನೆಗೆ ಏಟು ಕೊಟ್ಟನು.  ಭಾರತೀಯನ  ಈ ಪ್ರತಿಭಟನೆಯ ಕೃತ್ಯ ಇಂಗ್ಲೆಂಡಿಗೆಲ್ಲ ಆಶ್ಚರ್ಯದ […]