ಸೊಸೆ ಹೇಗಿರಬೇಕು?

ಕಥೆಗಳು - 2 Comments
Issue Date : 29.01.2014

ಸೀತಮ್ಮ ಬಡ ವಿಧವೆ. ಗಂಡ ತೀರಿಕೊಂಡಾಗ ಅವಳಿಗೆ ಜೀವನೋಪಾಯಕ್ಕಿದ್ದುದು ಒಂದು ಹಸು–ಕರು ಮಾತ್ರ. ಇಬ್ಬರು ಹೆಣ್ಣು ಮಕ್ಕಳ ಸಹಾಯದಿಂದ ನಿತ್ಯ ನಿತ್ಯ ಹುಲ್ಲು ಹೆರೆದು, ಹಸುವಿಗೆ ಆಹಾರ ನೀಡಿ ಹಾಲು ಹಿಂಡುತ್ತಿದ್ದಳು. ಹಾಲು ಮಾರಿದ ದುಡ್ಡಿನಲ್ಲಿ ಮೂವರ ಬದುಕು ಕಷ್ಟದಲ್ಲಿಯೇ ಸಾಗುತ್ತಿತ್ತು. ಹಿರೀ ಮಗಳು ರಂಗಮಣಿ ಸುಂದರಿ. ಕಿರಿ ಮಗಳು ತಂಗಮಣಿಗೆ ಅಕ್ಕನ ರೂಪ ಲಕ್ಷಣಗಳಿಲ್ಲ. ಹಾಲಿನಂಥ ಬಣ್ಣವೂ ಇಲ್ಲ. ನಸುಗಪ್ಪು ಬಣ್ಣದ, ಸಾಧಾರಣ ಚೆಲುವಿನ ತಂಗಮಣಿ ಸರಳ ಮನಸ್ಸಿನ ಹುಡುಗಿ. ಹಿರೀಮಗಳು ತನ್ನಂತೇ ಸುಂದರ ರೂಪದವಳೆಂದು […]

ವೀರವಾಣಿ - ರಾಣಾ ಪ್ರತಾಪ ಸಿಂಹ

ವೀರವಾಣಿ – ರಾಣಾ ಪ್ರತಾಪ ಸಿಂಹ

ಕಥೆಗಳು - 0 Comment
Issue Date : 16.01.2014

ಹಳ್ಳಿ ಘಾಟಿಯ ಭೀಷಣಯುದ್ಧದಿಂದ ರಾಣಾ ಪ್ರತಾಪನು ತಾನೇ ಬಂದಿದ್ದನು.  ತನ್ನ ಪ್ರೀತಿಯ ಸೈನಿಕರೆಲ್ಲ ಯುದ್ಧಭೂಮಿಯಲ್ಲಿ ಹತರಾದ ವ್ಯಸನ, ತನ್ನ ಜೀವನದ ಸಹಕಾರಿ ಝಾಲಾ ತನಗೋಸ್ಕರ ಪ್ರಾಣ ಅರ್ಪಿಸಿದ ಸನ್ನಿವೇಶ ಮತ್ತು ವಾಪಸು ಬರುವಾಗ ತನ್ನ ಪ್ರಾಣ ಪ್ರಿಯ “ಚೇತಕ್” ಮೃತನಾದ ದುರಂತ ಅವನ ಅಂತಃಕರಣದಲ್ಲಿ ಬೇಗುದಿಯನ್ನುಂಟು ಮಾಡಿತ್ತು.  ಅದರ ಮೇಲೆ ಭವಿಷ್ಯದ ಯೋಚನೆ ಬೇರೆ!  ಮೂರು ದಿವಸಗಳಿಂದ ಪ್ರತಾಪನ ಮನೆಯವರಾರಿಗೂ ಊಟವಿರಲಿಲ್ಲ.  ಅಜ್ಞಾತವಾಸದಲ್ಲಿನ ಅವರ ಜೀವನದಲ್ಲಿ ಇಂತಹ ಸನ್ನಿವೇಶಗಳು ಎಷ್ಟು ಬಂದಿದ್ದವೋ! ತಮ್ಮ ಮಾತೃಭೂಮಿಯ ಮುಕ್ತಿಗಾಗಿ ಎಷ್ಟು […]

ಭಕ್ತಿಯ ಕರೆ

ಕಥೆಗಳು - 0 Comment
Issue Date : 06.12.2013

ಧರ್ಮರಾಜರು ತಮ್ಮ ಅರಮನೆಯ ಪಾವಟಿಗೆಗಳ ಮೇಲೆ ನಿಂತುಕೊಂಡು ಎದುರಿಗಿರುವ ಸರೋವರದಲ್ಲಿಯ ರಾಜಹಂಸಗಳ  ಚೆಲ್ಲಾಟವನ್ನು ನೋಡುವದರಲ್ಲಿ ತಲ್ಲೀನರಾಗಿದ್ದರು. ಹಂಸಗಳ ಲೀಲಾ ವಿನೋದದಿಂದ  ಅವರ ಮುಖದಲ್ಲಿ ಮಂದಹಾಸ ಕಾಣಿಸುತ್ತಿತ್ತು.  ಮರುಕ್ಷಣವೇ ಅದೇನೋ ವ್ಯಥೆ ಅವರ ಮುಖದ ಮೇಲೆ ಗೋಚರಿಸುತ್ತಿತ್ತು. ಅದೇ ಸಮಯದಲ್ಲಿ ಅವರ ಪ್ರಿತಿಯ ಪತ್ನಿ ದ್ರೌಪದಿಯ ಆಗಮನವಾಯಿತು. ಅವಳು ಬರುತ್ತಲೇ ನುಡಿದಳು : ‘ ನೋಡಿದಿರಾ ಆ ಬಳ್ಳಿಯು ಅದೇಷ್ಟು ಮನೋಹರವಾಗಿ ಹಬ್ಬಿಕೊಂಡಿದೆ. ಅದರ ನೀಲವರ್ಣದ ಪುಷ್ಪಗಳು ಬಿಸಿಲಿನಲ್ಲಿ ಅದೆಷ್ಟು ಚೆಂದವಾಗಿ ಕಾಣುತ್ತಿವೆ. ಅದನ್ನು ನನ್ನ ಅಣ್ಣ ಶ್ರೀಕೃಷ್ಣನ್ನು […]

ಬದಲಾವಣೆ

ಕಥೆಗಳು - 0 Comment
Issue Date : 30.12.2013

ನಮ್ಮ ಹಳ್ಳಿಯಲ್ಲಿ ಮುಕುಂದ ಬ್ರಾಹ್ಮಣ ಹುಡುಗ. ತಾಯಿ ಇಲ್ಲದ ಹುಡುಗನಾದ್ದರಿಂದ ತಂದೆ ರಾಮಣ್ಣ ಬಹಳ ಪ್ರೀತಿಯಿಂದ ಸಾಕಿದರು. ಈ ಮುದ್ದು ಅತಿಯಾಗಿ ಅವನಿಗೆ ವಿದ್ಯೆ ಹತ್ತಲಿಲ್ಲ. ಯಾವ ಕೆಲಸ ಮಾಡುವುದೂ ಕೈಗೂಡಲಿಲ್ಲ. ಎಲ್ಲದಕ್ಕೂ ಮೈಗಳ್ಳತನ ಹುಟ್ಟಿ ಬಲಿಯಿತು. ತಂದೆ ಪೌರೋಹಿತ್ಯ ಮಾಡಿ ಸಂಪಾದಿಸಿ ಹಣ ಹಾಗೂ ಹಿರಿಯರಿಂದ ಬಂದ ಹೊಲ ಸಾಗುವಳಿ ಮಾಡಿ ತಂದು ಹಾಕುತ್ತಿದ್ದರಿಂದ ಯಾವ ತೊಂದರೆಯೂ ಇಲ್ಲದೇ ಸೊಂಪಾಗಿ ಬೆಳೆದ. ಬಿಸಿಲು ಏರಿದ ಮೇಲೆ ಹಾಸಿಗೆಯಿಂದ ಎದ್ದು ಸ್ನಾನ ಮಾಡಿ ನಿತ್ಯ ಕಾರ್ಯ ಮುಗಿಸಿ […]

ನಿಂಗೆ ವಾಮನನ ಕತೆ ಗೊತ್ತಾ..?!

ನಿಂಗೆ ವಾಮನನ ಕತೆ ಗೊತ್ತಾ..?!

ಕಥೆಗಳು - 0 Comment
Issue Date : 18.11.2013

ನಿತಿನ್ ಏಳನೇ ತರಗತಿ ಓದುತ್ತಿದ್ದರೂ ನೋಡುವುದಕ್ಕೆ ಆಗಿನ್ನೂ ಮೊದಲನೇ ತರಗತಿಯೇನೋ ಎಂಬಂತೇ ಇದ್ದ. ಶಾಲೆಯಲ್ಲೆಲ್ಲ ಅವನನ್ನು ಕುಳ್ಳ ಎಂದು ರೇಗಿಸುವುದು ಸಾಮಾನ್ಯವಾಗಿತ್ತು. ಮೊದಮೊದಲು ನಿತಿನ್‌ಗೆ ಹೀಗೆ ಎಲ್ಲರೂ ಸೇರಿ ತನ್ನನ್ನು ರೇಗಿಸುವುದು ಕಂಡು ಕೋಪ ಬರುತ್ತಿತ್ತು. ದಿನವೂ ಮನೆಗೆ ಹೋಗಿ ರಂಪಮಾಡುತ್ತಿದ್ದ. ಆಟ, ಪಾಠ, ಸಂಗೀತ, ನೃತ್ಯ, ಭಾಷಣ… ಹೀಗೆ ಎಲ್ಲದರಲ್ಲೂ ನಿತಿನ್‌ನನ್ನು ಮೀರಿಸುವವರು ಶಾಲೆಯಲ್ಲಿ ಯಾರೂ ಇರಲಿಲ್ಲ. ಅದಕ್ಕೆಂದೇ ಶಾಲೆಯ ಉಳಿದ ಮಕ್ಕಳಿಗೆ ನಿತಿನ್ ಎಂದರೆ ಅಸೂಯೆ. ನಿತಿನ್‌ನನ್ನು ಆಡಿಕೊಳ್ಳುವುದಕ್ಕಿರುವ ಒಂದೇ ಒಂದು ಅಸ್ತ್ರವೆಂದರೆ ಆತನ […]

ಸುಳಾದಿ ವಿಜಯದಾಸರು

ಸುಳಾದಿ ವಿಜಯದಾಸರು

ಕಥೆಗಳು - 0 Comment
Issue Date : 12.11.2013

18 ನೇ ಶತಮಾನದಲ್ಲಿ ಹರಿದಾಸ ಸಾಹಿತ್ಯ ಶ್ರೀಮಂತವಾಗಿ ಬೆಳೆಯಲು ಕಾರಣರಾದವರಲ್ಲಿ ವಿಜಯ ವಿಠಲರು ಸಹ ಪ್ರಮುಖರು. ಇವರು ಹುಟ್ಟಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಚಿಲಕಪರವಿ ಎಂಬ ಗ್ರಾಮದಲ್ಲಿ 1683ರಲ್ಲಿ ಶ್ರೀನಿವಾಸಪ್ಪ ಮತ್ತು ಕೂಸಮ್ಮ ಎಂಬ ಬಡ ಬ್ರಾಹ್ಮಣ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ತೀರ ಬಡತನದಲ್ಲಿದ್ದ ಇವರನ್ನು ಕೂಸಿಮಗದಾಸ ಎಂದು ಜನ ಹೀಯಾಳಿಸುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಕಾಶಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಸಾಧು ಸಂತರೊಡನೆ ವಿರಾಗಿಯಾಗಿ ಜೀವನ ನಡೆಸುತ್ತಿದ್ದರು. ಮೂರ್ನಾಲ್ಕು ವರ್ಷಗಳ ನಂತರ ಸ್ವ–ಗ್ರಾಮಕ್ಕೆ ಮರಳಿ […]

ಕಲಿಕೆಯ ಗುರಿ

ಕಥೆಗಳು - 0 Comment
Issue Date : 08.11.2013

ಒಬ್ಬ ರಾಜಕುಮಾರ ಕತ್ತಿ ವರಸೆ ಕಲಿಯುವ ಆಸೆಯಿಂದ ಓರ್ವ ಗುರುವಿನ ಬಳಿಗೆ ಹೋಗಿ ತನಗೆ ಈ ವಿದ್ಯೆಯನ್ನು ಕಲಿಸಿಕೊಡಬೇಕಾಗಿ ಪ್ರಾರ್ಥಿಸಿದ. ‘ಆಗಲಿ’ ಎಂದರು ಗುರುಗಳು. ರಾಜಕುಮಾರ ಮರುಕ್ಷಣವೇ ‘ನಾನು ಅರೆಕ್ಷಣವನ್ನೂ ವ್ಯರ್ಥ ಮಾಡದೆ ಖಡ್ಗ ವಿದ್ಯೆಯನ್ನು ಕಲಿಯಬಲ್ಲೆ, ಇದರಲ್ಲಿ ನನ್ನನ್ನು ಪರಿಪೂರ್ಣಗೊಳಿಸಲು ತಮಗೆ ಎಷ್ಟು ಕಾಲಾವಧಿಬೇಕಾಗಬಹುದು?’ ಎಂದು ಕೇಳಿದ.‘ಹತ್ತು ವರ್ಷ ಬೇಕು’ ಎಂದರು ಗುರುಗಳು. ‘ಹತ್ತು ವರ್ಷವೆ? ನನ್ನ ತಂದೆಗೆ ನಾನು ಖಡ್ಗಯುದ್ಧ ವಿಶಾರದನಾಗುವುದನ್ನು ಕಾಣಬೇಕೆಂಬ ಆಸೆಯಿದೆ. ಅವರು ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ಹೆಚ್ಚು ಕಾಲ ಬದುಕುವುದಿಲ್ಲ.ನಾನು […]

ಕಥೆ

ಕಥೆ

ಕಥೆಗಳು - 0 Comment
Issue Date :

ಒಂದು ದಿನ ಬುದ್ಧ ತನ್ನ ಅನುಯಾಯಿಗಳೊಂದಿಗೆ ಸಂಚಾರದಲ್ಲಿದ್ದಾಗ ಅವನಿಗೆ ಬಾಯಾರಿಕೆಯಾಯಿತು. ತನ್ನ ಶಿಷ್ಯರಲ್ಲಿ ಒಬ್ಬನ್ನು ಕರೆದು ಹತ್ತಿರದಲ್ಲಿ ಎಲ್ಲಾದರೂ ಕುಡಿಯಲು ನೀರು ತರಲು ಹೇಳಿದ. ಬುದ್ಧನ ಆಜ್ಞೆಯಂತೆ ಅವನ ಶಿಷ್ಯ ನೀರು ತರಲು ನದಿಯ ಬಳಿಗೆ ಹೋದಾಗ ಅಲ್ಲಿ ಕೆಲವು ಮಹಿಳೆಯರು ಬಟ್ಟೆ ಒಗೆಯುತ್ತಿದ್ದರು. ಅದೆ ವೇಳೆಯಲ್ಲಿ ಬಂಡಿಯೊಂದು ಹೊಳೆ ದಾಟಲು ಆರಂಭಿಸಿತು. ಇದರಿಂದ ನದಿಯ ನೀರು ರಾಡಿಯಾಗಿ ಕುಡಿಯಲು ಯೋಗ್ಯವಾಗಿಲ್ಲ ಎಂದು ಆ ಶಿಷ್ಯನಿಗೆ ಅನಿಸಿ ಬರಿಗೈಯಿಂದ ಆತ ವಾಪಸ್ ಬಂದು ಬುದ್ಧನಿಗೆ ವಿಷಯ ತಿಳಿಸಿದ. […]

ಯಜಮಾನ – ಬಸಪ್ಪ ಕಂಬಾರ

ಕಥೆಗಳು - 0 Comment
Issue Date : 00-00-0000

ಕೃಷ್ಣ , ತನಗೆ ಪ್ರಿಯವಾದ ಕೊಳಲನ್ನು ತೆಗೆದುಕೊಂಡನು. ತಲೆಗೆ ಸುತ್ತಿದ ರುಮಾಲಿಗೆ ನವಿಲುಗರಿಯನ್ನು ಸಿಕ್ಕಿಸಿಕೊಂಡಿದ್ದನು. ಹಸಿರು ಬಣ್ಣದ ಪಂಚೆ ತೊಟ್ಟು ಹೆಗಲಲ್ಲಿ ಹಳದಿ ಶಲ್ಯ ಹಾಕಿಕೊಂಡಿದ್ದನು. ತನ್ನ ಪ್ರೀತಿಯ ಗೋವುಗಳನ್ನು ಕರೆದುಕೊಂಡು, ಬೃಂದಾವನದಿಂದ ಸ್ವಲ್ಪ ದೂರವಿರುವ ಗೋವರ್ಧನಗಿರಿ ತಪ್ಪಲಿಗೆ ಹೊರಟಿದ್ದನು. ಮೇಘವರ್ಣದ ಮೈಬಣ್ಣ, ದುಂಡುಮುಖ, ಕಾಂತಿಯುತ ಕಂಗಳು, ಕಾಮನಬಿಲ್ಲು ನಾಚುವಂತಹ ಹುಬ್ಬುಗಳು. ಹರಯಕ್ಕೇ ತಕ್ಕಂಥ ಮೈಕಟ್ಟು, ನಿಲುವು. ಬಿಲ್ಲುವಿದ್ಯೆ, ಮಲ್ಲವಿದ್ಯೆ, ಕತ್ತಿವಿದ್ಯೆಗಳಲ್ಲಿ ಪ್ರವೀಣ. ಗೋವುಗಳ ರಕ್ಷಣೆಯಲ್ಲಿ ನಿಪುಣ. ದಾರಿಯಲ್ಲಿ ಕೊಳಲನೂದುತ್ತ ಗೋವುಗಳೊಡನೆ ಹೊರಟಿದ್ದರೆ ಗಿಡ, ಮರಗಳಲ್ಲಿ ಕೂತಿದ್ದ […]

ಅಹಲ್ಯಾಬಾಯಿ ಹೋಳ್ಕರ್

ಕಥೆಗಳು - 0 Comment
Issue Date :

ಪತಿ ಖಂಡೇರಾಯನ ಮೃತ್ಯುವಿನ ಬಳಿಕ ಅಹಲ್ಯಾಬಾಯಿ ಇಂದೋರ್ ಸಂಸ್ಥಾನದ ಆಡಳಿತ ಸೂತ್ರ ವಹಿಸಿಕೊಂಡಿದ್ದಳು. ಮಗ ಮಾಲೇರಾಯ ಕಾಯಿಲೆಯಿಂದ ಸಾವಿಗೀಡಾಗಿದ್ದ; ಮಗಳು ಮುಕ್ತಾಬಾಯಿಗೆ ಸುಬೇದಾರ ಪಟ್ಟ ಸಿಗುವಂತಿಲ್ಲ. ಆಗ ಕೆಲ ಸ್ವಾರ್ಥಿಗಳಿಗೆ ದುರಾಶೆಯುಂಟಾಯಿತು. ಅವರಲ್ಲೊಬ್ಬ ಗಂಗಾಧರ ಯಶವಂತರಾಯನು ಒಂದು ದಿನ , “ನೀವು ಹೆಂಗಸರು. ರಾಜ್ಯಭಾರ ಮಾಡುವುದಕ್ಕೆ ನಿಮಗೆ ಕಷ್ಟವಾಗುತ್ತದೆ. ಆದ್ದರಿಂದ ಯಾವುದಾದರೂ ಒಬ್ಬ ಹುಡುಗನನ್ನು ದತ್ತು ಮಾಡಿಕೊಳ್ಳಿ. ಅವನು ದೊಡ್ಡವನಾಗುವವರೆಗೆ ನಾನೇ ರಾಜ್ಯವನ್ನು ಆಳುತ್ತಿರುತ್ತೇನೆ”, ಎಂದು ಅಹಲ್ಯಾಬಾಯಿಗೆ ಹೇಳಿದನು. ಆದರೆ ಅಹಲ್ಯಾಬಾಯಿ ಅದಕ್ಕೆ ಒಪ್ಪಲಿಲ್ಲ. ಇದರಿಂದ ಯಶವಂತರಾಯನಿಗೆ […]