‘ಅನ್ನ’ದ ‘ಅದ್ಭುತ’

ಚಿಂತನ - 0 Comment
Issue Date : 13.11.2013

‘..ಯತ್ ಅನ್ನೇನ ಅತಿರೋಹತಿ’ (ಋ.10.90.2) ಇದು ಪುರುಷ ಸೂಕ್ತದ ಮಾತು. ಇಲ್ಲಿರುವ ‘ಅನ್ನ’ ಅರ್ಥಪೂರ್ಣವಾದ ಪದ. ಇದರ ಧಾತು ‘ಅದ್’ (ಭಕ್ಷಣೇ, ಕರ್ಮಣಿ ಕ್ತಃ) ‘ತಿನ್ನುವುದು’ ಎಂಬುದು ಸಾಮಾನ್ಯ ಅರ್ಥ. ತೈತ್ತರೀಯ ಉಪನಿಷತ್ ‘ಅದ್ಯತೇ ಅತ್ತಿ ಚ ಭೂತಾನಿ ತಸ್ಮಾತ್ ಅನ್ನಂ ತದ್ ಉಚ್ಯತೇ’ – ಯಾವುದು ಜೀವಿಗಳಿಂದ ತಿನ್ನಲ್ಪಡುವುದೋ ಅದು ಅನ್ನ; ಹಾಗೆಯೇ ಯಾವುದು ಅವುಗಳನ್ನು ತಿನ್ನುತ್ತದೆಯೋ ಅದು ಸಹ ಅನ್ನವೇ (ಅಂದರೆ ಕರ್ಮಫಲ) ಎನ್ನುತ್ತದೆ. ‘ಅನ್ನ’ವೆಂದರೆ ಭೋಗ ಸಾಮಗ್ರಿ, ಮಾನವ ಜೀವಿಗಳಿಂದ ಗಳಿಸಲ್ಪಡುವ ಕರ್ಮಪ್ರವೃತ್ತಿ […]

ತಾರತಮ್ಯಕ್ಕೆ ಮದ್ದು

ಚಿಂತನ - 0 Comment
Issue Date : 12.11.2013

      ವರ್ಣ ತಾರತಮ್ಯ ಸಲ್ಲದು. ಮಾನವ ಕುಲವೆಲ್ಲ ಒಂದೇ ಆಗಿರುವುದರಿಂದ ಮೇಲುಕೀಳು ಭಾವನೆ ಸಮಂಜಸವಾದುದಲ್ಲ. ಮನುಷ್ಯನ ಚರ್ಮದ ಬಣ್ಣ ಮುಖ್ಯವಲ್ಲ; ಆತನ ಆಂತರಂಗಿಕವಾದ ಗುಣಗಳೇ ಜೀವನದಲ್ಲಿ ಪ್ರಧಾನ ಪಾತ್ರವಹಿಸುತ್ತದೆ – ಎಂದೆಲ್ಲ ವೇದಿಕೆಯ ಮೇಲಿನಿಂದ ಹೇಳುವವರು ನಿಜ ಬದುಕಿನಲ್ಲಿ ಅನ್ಯವರ್ಣೀ ಯರನ್ನು ಹೊಟ್ಟೆಕಿಚ್ಚಿನಿಂದ ನೋಡುತ್ತಾರೆ. ಸಾಮ್ರಾಜ್ಯ ವಾದವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ವರ್ಣಭೇದಕ್ಕೆ ಹೆಚ್ಚಿನ ಪ್ರಾಧಾನ್ಯವಿತ್ತು. ಇದರಿಂದಾಗಿ ಬಿಳಿಯರು (ಬ್ರಿಟಿಷರು) ಭಾರತೀಯರನ್ನು ತಾತ್ಸಾಸರದಿಂದ ಕಾಣುತ್ತಿದ್ದರು. ಸಾಮಾನ್ಯ ಜನರು ಮತ್ತು ಅವಿದ್ಯಾವಂತರು ಆಂಗ್ಲರ ದಬ್ಬಾಳಿಕೆಯನ್ನು ಮೌನವಾಗಿ ಸಹಿಸಿಕೊಂಡು […]

‘ಬಾಳು ಬಂಗಾರ’ವಾಗಲು ತ್ರಿದಂಡನೆ

ಚಿಂತನ - 0 Comment
Issue Date : 05.11.2013

‘ಅಕಾಮಸ್ಯ ಕ್ರಿಯಾ ಕಾಚಿದ್ದೃಶ್ಯತೇ… ತತ್ತತ್ಯಾಮಸ್ಯ ಚೇಷ್ಟಿತಂ’ ಈ ಮಾತು ಹೇಳಿದವನು ಮನು. (2.4) ಮಾನವನ ಯಾವ ಕೃತಿಯೂ ಇಚ್ಛೆಯಿಂದ ಹೊರತಾಗಿಲ್ಲ. ಅವನು ಮಾಡುವ ಎಲ್ಲಾ ಕಾರ್ಯವೂ ‘ಇಚ್ಛೆ’ಯಿಂದಲೇ ಪ್ರೇರಿತವಾಗಿರುತ್ತದೆ – ಎಂದು ಸ್ಥೂಲವಾಗಿ ಹೇಳಬಹುದಾಗಿದೆ. ಇಲ್ಲಿ ‘ಇಚ್ಛೆ’ ಎಂದರೆ ‘ಕಾಮ’ (ಕಾಮನೆ – ಆಸೆ) ಎಂದು ಹೇಳುವುದರಲ್ಲಿ ಒಂದು ವಿಶಿಷ್ಟ ಸಂಗತಿ ಅಡಗಿದೆ. ಮಾನವ ಸ್ವಭಾವ ವಿವರಿಸುವ ಯಾವುದೇ ವಿಜ್ಞಾನ ಸಹ ಅವನ ಎಲ್ಲಾ ಕೃತಿಗಳಿಗೂ ಪ್ರೇರಕ ಶಕ್ತಿ ‘ಇಚ್ಛೆ (ಕಾಮ) ಎನ್ನುತ್ತದೆ ತಾನೇ? ‘ಮನದಲ್ಲಿ ಒಳ್ಳೆಯ […]

ವಿರಳವಾದ ಸರಳತೆ

ಚಿಂತನ - 0 Comment
Issue Date : 04.11.2013

ಉಡುಗೆ ತೊಡುಗೆಗಳಲ್ಲಿ, ರೀತಿನೀತಿಗಳಲ್ಲಿ ಅಥವಾ ಸಾಮಾಜಿಕ ನಡವಳಿಕೆಗಳಲ್ಲಿ ಸರಳತೆಯನ್ನು ರೂಢಿಸಿಕೊಂಡು ಬರುವುದು ತುಂಬ ಕಷ್ಟದ ಕೆಲಸ. ಏಕೆಂದರೆ ಮಾನವ ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರದರ್ಶನಪ್ರಿಯತೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾರೆ. ಶ್ರೀಮಂತಿಕೆ, ಸ್ಥಾನಮಾನ, ಅಧಿಕಾರ ಉಳ್ಳವರಂತೂ ಅವುಗಳಿಗೆ ತಕ್ಕುದಾಗಿ ಅಥವಾ ಅವುಗಳಿಗೂ ಮಿಕ್ಕಿದ್ದಾಗಿ ಮೆರೆಯಲು ಕಾತುರಪಡುತ್ತಾರೆ. ಒಂದು ವೇಳೆ ಒಳ್ಳೆಯ ಹುದ್ದೆಯಲ್ಲಿ ಇದ್ದವರು ಸರಳವಾಗಿ ವ್ಯವಹರಿಸಲು ಹೊರಟರೆ ಅವರನ್ನು ಕಡು ಬಡವರೆಂದೂ ಏನೂ ಗತಿಯಿಲ್ಲದವರೆಂದೂ ತಪ್ಪಾಗಿ ಭಾವಿಸುವವರೇ ಹೆಚ್ಚು. ಸುತ್ತಮುತ್ತ ಸರಳತೆಯೇ ವಿರಳವಾಗಿರುವಾಗ ಅದನ್ನು ನಿಜಜೀವನದಲ್ಲಿ ಆಚರಿಸಿಕೊಂಡು ಬರುವುದು ಎಷ್ಟು […]

ಮನಸ್ಸಿನ ಶಕ್ತಿ

ಚಿಂತನ - 0 Comment
Issue Date : 30.10.2013

ಒಂದು ಭಾವನೆಯನ್ನು ತೆಗೆದುಕೊಳ್ಳಿ.  ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ.  ಅದನ್ನೇ ಕನಸುಕಾಣಿ.  ಆ ಒಂದು ಭಾವನೆಗಾಗಿ ನಿಮ್ಮ ಬಾಳನ್ನೆಲ್ಲ ಸವೆಸಿ.  ಮೆದುಳು, ಮಾಂಸಖಂಡಗಳು, ನರಗಳು ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಕೂಡ ಆ ಭಾವದಿಂದ ತುಂಬಿ ತುಳುಕಾಡಲಿ.  ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಬಿಡಿ.  ಜಯ ಪಡೆಯುವುದಕ್ಕೆ ಇದೊಂದೇ ದಾರಿ….ನಾವು ನಿಜವಾಗಿಯೂ ಮುಕ್ತರಾಗಬೇಕಾದರೆ ಮತ್ತು ಇತರರನ್ನು ಬಂಧಮುಕ್ತರನ್ನಾಗಿ ಮಾಡಬೇಕಾದರೆ ನಾವು ಇನ್ನೂ ಆಳಕ್ಕೆ ಹೋಗಬೇಕು. – ಸ್ವಾಮಿ ವಿವೇಕಾನಂದ

‘ಅಮರ’ನಾಗುವ ಸುಲಭ ಸೂತ್ರ

ಚಿಂತನ - 0 Comment
Issue Date : 28.10.2013

‘ಉತ ಅಮೃತತ್ವಸ್ಯ ಈಶಾನೋ….’ ಎಂಬ ಮಾತು ಋಗ್ವೇದದಲ್ಲಿದೆ. 10-90-2ರ ಆ ಮಂತ್ರ ‘ಪುರುಷ ಏವೇದಂ… ಯತ್ ಅನ್ನೇನ ಅತಿರೋಹತಿ’ ಎಂಬಲ್ಲಿ ಸೂಚಿತವಾಗಿದೆ. ಈ ಸಮಗ್ರ ವಿಶ್ವವು ಹಿಂದೆ ಇದ್ದದ್ದು (ಭೂತ) ಮುಂದೆ ಆಗುವಂಥದ್ದು (ಭವ್ಯ) ಎಲ್ಲದರ ಸಮುಚ್ಚಯ. ಇದರಲ್ಲಿ ಅಡಕವಾಗಿರುವ ‘ಶಕ್ತಿ’ಯನ್ನು ‘ಪುರುಷ’ ಎಂದು ವೇದ ವರ್ಣಿಸಿದೆ. ಈ ಪುರುಷ ‘ಅಮೃತ’ (ಸಾವಿಲ್ಲದ… ಅಮರ)ದ ಅಧಿಪತಿ (ಈಶಾನ). ‘ಭೂತಂ’ ಹಾಗೂ ‘ಭವ್ಯಂ’ ಮಾತ್ರವಲ್ಲ ‘ವರ್ತಮಾನ’ವೂ ಸೇರಿದ ಈ ‘ವಿಶ್ವ’ ನಮ್ಮ ಕಣ್ಣಿಗೆ ಕಾಣುವ ಮಾತ್ರವಲ್ಲ ಕಾಣದ ಭಾಗದ […]

ವಜ್ರ ಕುಸುಮ

ವಜ್ರ ಕುಸುಮ

ಚಿಂತನ - 1 Comment
Issue Date : 28.10.2013

ವಜ್ರವು ಕಾಠಿಣ್ಯಕ್ಕೆ ಹೆಸರಾದ ವಸ್ತು. ತುಂಬ ಗಟ್ಟಿ. ಕುಸುಮವು ಮೃದುತ್ವಕ್ಕೆ ಮಾದರಿ. ಬಹಳ ಮೆತ್ತಗೆ. ಒಬ್ಬನೇ ವ್ಯಕ್ತಿ ಇವೆರಡೂ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಾಧ್ಯವೇ? ಹೌದು ಎನ್ನುವುದನ್ನು ಅನೇಕ ಮಂದಿ ಆಡಳಿತಗಾರರು, ಮುತ್ಸದ್ದಿಗಳು ಮತ್ತು ಪುರುಷೋತ್ತಮರು ತಮ್ಮ ಜೀವನಾದರ್ಶಗಳಿಂದ ತೋರಿಸಿಕೊಟ್ಟಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡುವಲ್ಲಿ ಮೃದು ಧೋರಣೆ ಸಲ್ಲದು. ಏಕೆಂದರೆ ಅಂಥವರನ್ನು ಪರಿವರ್ತಿಸಲು ಸರಿಯಾದ ದಂಡನೆಯೇ ಬೇಕು. ಆದರೆ ಯಾವನೇ ವ್ಯಕ್ತಿ ಕಷ್ಟಕ್ಕೆ / ತೊಂದರೆಗಳಿಗೆ ಒಳಗಾದಾಗ ಅವರ ಬಗೆಗೆ ಮೃದು ಧೋರಣೆ ತಳೆಯುವುದು ಸೂಕ್ತ. ಹೀಗೆ ಉಭಯ […]

ವಿವೇಕ ವಾಣಿ

ಚಿಂತನ - 0 Comment
Issue Date : 25.10.2013

ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ.  ಕಳೆದುದನ್ನು ಕುರಿತು ವ್ಯಥೆಪಡಬೇಡಿ.  ಅನಂತ ಭವಿಷ್ಯ ನಿಮ್ಮೆದುರಿಗಿದೆ.   ಪ್ರತಿಯೊಂದು ಮಾತು, ಆಲೋಚನೆ ಮತ್ತು ಕೆಲಸ ನಿಮಗಾಗಿ ಕಾದುಕೊಂಡಿದೆ.  ಕೆಟ್ಟ ಆಲೋಚನೆ, ಕೆಟ್ಟ ಕೆಲಸ ಇವು  ರಕ್ಕಸರಂತೆ ನಿಮ್ಮ ಮೇಲೆ ಬೀಳಲು ಕಾಯ್ದುಕೊಂಡಿರುವಂತೆ ಒಳ್ಳೆಯ ಆಲೋಚನೆ, ಒಳ್ಳೆಯ ಕಾರ್ಯ ಇವು ಸಾವಿರಾರು ದೇವದೂತರ ಶಕ್ತಿಯೊಂದಿಗೆ ನಿಮ್ಮನ್ನು ಎಂದೆಂದಿಗೂ ರಕ್ಷಿಸಲು ಕಾಯ್ದುಕೊಂಡಿವೆ ಎನ್ನುವುದೇ ಉತ್ತೇಜನಕಾರಿಯಾದ ಭರವಸೆ.

‘ಆಳಕ್ಕೆ ಇಳಿದರಷ್ಟೇ ಮೊಗೆದಷ್ಟೂ ಅರ್ಥ’

ಚಿಂತನ - 0 Comment
Issue Date : 21.10.2013

‘ವೇದ’ ‘ಮಂತ್ರ’ಗಳನ್ನು ಅರ್ಥ ಮಾಡಿಕೊಳ್ಳಲು ವಿಶೇಷ ‘ಶಕ್ತಿ’ಬೇಕು. ವೈದಿಕ ವ್ಯಾಕರಣವೇ ಬೇರೆ ಇದೆ. ಅದೊಂದು ‘ಸಂಕೇತಗಳ ಸಂಹಿತೆ.’ ‘ವೇದ’ದಲ್ಲಿ ಉಲ್ಲೇಖಿತವಾದ ಹಲವು ‘ಪದ’ಗಳು ‘ಸಂಕೇತಗಳಿಂದ ಕೂಡಿವೆ. ಸಾಮಾನ್ಯ ಪರಿಭಾಷೆಯಲ್ಲಿ ಅವು ನೀಡುವ ಅರ್ಥಕ್ಕಿಂತ ಭಿನ್ನವಾದ ‘ಅರ್ಥ’ವನ್ನು ಅವು ನೀಡುವುದು ಇಲ್ಲಿನ ವಿಶೇಷ.‘ಗೋ’ ಎಂದರೆ ಕೇವಲ ‘ಹಸು’ ಮಾತ್ರವಲ್ಲ. ಅದು ವಿಶಿಷ್ಟ ಬಗೆಯ ‘ಜ್ಯೀತಿ’ ಅಥವಾ ‘ಜ್ಞಾನ’ದ ಸಂಕೇತ. ‘ಅರಿವಿನ ಕಿರಣ’ ಅದು. ತೈತ್ತರೀಯ ಸಂಹಿತೆಯ 7.5.1ರಲ್ಲಿ ಬರುವ ‘ಗಾವಃ’ ಎಂಬ ಪದವನ್ನು ಈ ಬೆಳಕಿನಲ್ಲಿ ನೋಡಿದಾಗ ‘ಸೂಕ್ಷ್ಮವಾದ’ […]

ಆತ್ಮ ವಿಶ್ವಾಸದ ಹಿರಿಮೆ

ಚಿಂತನ - 0 Comment
Issue Date : 21.10.2013

ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ಆತ್ಮವಿಶ್ವಾಸ ಬಲು ಮುಖ್ಯ. ತನ್ನಲ್ಲಿಯೇ ತನಗೆ ವಿಶ್ವಾಸವಿಲ್ಲದೆ ಹೋದರೆ ಬೇರೆ ಯಾರಲ್ಲಾದರೂ ಎಷ್ಟೇ ಭರವಸೆ ಇದ್ದರೂ ಅದು ವ್ಯರ್ಥ. ತನ್ನ ಶಕ್ತಿ – ಸಾಮರ್ಥ್ಯಗಳಲ್ಲಿ ಯಾರಿಗೆ ಪೂರ್ಣ ಭರವಸೆ ಇದೆಯೋ ಆತನು ನಿಧಾನವಾಗಿಯಾದರೂ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಹೋಗಿ ಗುರಿಯನ್ನು ಮುಟ್ಟಬಲ್ಲ. ಸಾಧನೆಯ ಹಾದಿಯಲ್ಲಿ ಮುಂದುವರಿಯಲು ಅವನಿಗೆ ಯಾವ ಹಿಂಜರಿಕೆಯೂ ಇಲ್ಲ. ಏಕೆಂದರೆ ಎಷ್ಟೇ ದೀರ್ಘವಾದ ಪಯಣವೇ ಇರಲಿ, ಅದು ಪ್ರಾರಂಭವಾಗುವುದು ಒಂದು ಸಣ್ಣ ಹೆಜ್ಜೆಯಿಂದ ಎನ್ನುವುದು ಅವನಿಗೆ ಗೊತ್ತಿರುತ್ತದೆ. ಧೈರ್ಯದಿಂದ ಒಂದನೆಯ […]