ವಿವೇಕ ವಾಣಿ

ವಿವೇಕ ವಾಣಿ

ಚಿಂತನ - 0 Comment
Issue Date : 18.10.2013

ಸುಮ್ಮನೆ ಜಗಳವಾಡಿ, ದೂರಿ ಪ್ರಯೋಜನವೇನು? ಇದರಿಂದ ಪರಿಸ್ಥಿತಿ ಉತ್ತಮವಾಗುವುದಿಲ್ಲ. ಯಾರು ತಮ್ಮ ಭಾಗಕ್ಕೆ ಬಂದ ಸಣ್ಣ ಕೆಲಸಗಳಿಗೆ ಗೊಣಗುತ್ತಾರೆಯೊ ಅವರು ಎಲ್ಲದಕ್ಕೂ ಗೊಣಗಾಡುವರು; ಯಾವಾಗಲೂ ಗೊಣಗಾಡುತ್ತಾ ದುಃಖದಲ್ಲೇ ಜೀವಿಸುವರು. ಅವರು ಮುಟ್ಟಿದ್ದೆಲ್ಲಾ ಹಾಳು. ಆದರೆ ಒಬ್ಬನು ತನಗೆ ಬಂದ ಕರ್ತವ್ಯವನ್ನು ಚಕ್ರಕ್ಕೆ ಹೆಗಲುಕೊಟ್ಟು ಮಾಡುತ್ತಾ ಹೋದರೆ ಅವನಿಗೆ ಜ್ಞಾನ ಹೊಳೆಯುವುದು. ಉತ್ತಮೋತ್ತಮ ಕರ್ತವ್ಯಗಳು ಅವನ ಪಾಲಿಗೆ ಬರುವುವು.                             […]

ವಿವೇಕ ವಾಣಿ

ವಿವೇಕ ವಾಣಿ

ಚಿಂತನ - 0 Comment
Issue Date : 16.10.2013

ಇದು ಮಾನವ ಸಹಜ ದೋಷ. ಸಾಧಾರಣವಾಗಿ ಜನರು ತಪ್ಪನ್ನೆಲ್ಲ ಇತರರ ಮೇಲೆ ಹಾಕುತ್ತಾರೆ. ಇಲ್ಲದಿದ್ದರೆ ದೇವರು, ದೆವ್ವ, ಅದೃಷ್ಟ ಎನ್ನುವರು. ಆದರೆ ಎಲ್ಲಿದೆ ಅದೃಷ್ಟ? ಅದೃಷ್ಟ ಯಾವುದು?ನಾವು ಬಿತ್ತಿದುದನ್ನು ಬೆಳೆಯುತ್ತೇವೆ. ನಮ್ಮ ಅದೃಷ್ಟಕ್ಕೆ ನಾವೇ ಹೊಣೆ.  ಇತರರನ್ನು ನಿಂದಿಸಬೇಕಾಗಿಲ್ಲ.  ಹೊಗಳಬೇಕಾಗಿಲ್ಲ.  ಗಾಳಿ ಬೀಸುತ್ತಿದೆ.  ಯಾವ ದೋಣಿಗಳು ತಮ್ಮ ಪಟಗಳನ್ನು ಹರಡಿವೆಯೊ ಅವು ಗಾಳಿಗೆ ಮುಂದೆ ಹೋಗುವುವು.  ಯಾವುವು ಪಟವನ್ನು ಹರಡಿಲ್ಲವೊ ಅವು ಗಾಳಿಯನ್ನು ಹಿಡಿಯಲಾರವು.  ಇದು ಗಾಳಿಯ ತಪ್ಪೆ? – ಸ್ವಾಮಿ ವಿವೇಕಾನಂದ

ಕರ್ಮಫಲ

ಚಿಂತನ - 0 Comment
Issue Date :

“ಇದೆಲ್ಲ ನಮ್ಮ ಹಿಂದಿನ ಕರ್ಮದ ಫಲ; ಅನುಭವಿಸಲೇ ಬೇಕು” ಎಂದು ಸಾಮಾನ್ಯವಾಗಿ ಹೇಳುವುದನ್ನು ನಾನು ಕೇಳಿರುತ್ತೇವೆ.  ಈ ಮಾತು ಸಕಾರಣವಾಗಿಯೇ ಇದೆ.  ಹಿಂದು ಜೀವನದಲ್ಲಿ ಕರ್ಮ ಎಂಬ ತತ್ತ್ವದ ಕಲ್ಪನೆ ಪ್ರಧಾನವಾಗಿದೆ.  ಈ ತತ್ತ್ವವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರವೇ ಹಿಂದು ಜೀವನ ದೃಷ್ಟಿ, ಹಿಂದು ಜೀವನ ಮಾರ್ಗ ಮತ್ತು ಹಿಂದು ತತ್ತ್ವಜ್ಞಾನ – ಇವುಗಳನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.  ನಮ್ಮ ಜೀವನವನ್ನು ಸರಿಯಾಗಿ ಅವಲೋಕನೆ ಮಾಡಿ ವಿಮರ್ಶೆ ಮಾಡಿದಾಗ ಇದು ಎಲ್ಲ ಮಾನವರಿಗೂ ಅನ್ವಯಿಸುವ ತರ್ಕಬದ್ಧವಾದ […]

ಆತ್ಮವಿಶ್ವಾಸ

ಚಿಂತನ - 0 Comment
Issue Date :

ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುತ್ತಾರೆ. ಅವರಲ್ಲಿ ಒಬ್ಬನು ಪಾಠಗಳನ್ನು ಚೆನ್ನಾಗಿ ಓದಿಕೊಂಡಿದ್ದಾನೆ, ಮಾತ್ರವಲ್ಲದೆ ಅಧ್ಯಾಪಕರು ಕೊಟ್ಟ ಸೂಚನೆಗಳಿಗೆ ಅನುಗುಣವಾಗಿ ಸಂಭಾವ್ಯ ಪ್ರಶ್ನೆಗಳಿಗೆ ಉತ್ತರಗಳನ್ನೂ ನೋಡಿಕೊಂಡಿದ್ದಾನೆ. ಕೆಲವು ಮುಖ್ಯ ವಿಷಯಗಳನ್ನು ಕಂಠಪಾಠ ಮಾಡಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ಓದಿದ್ದು ಕಡಮೆ, ಪ್ರಶ್ನೆ ಪತ್ರಿಕೆಗಳನ್ನು ಕೂಡ ಕೊನೆಯ ಗಳಿಗೆಯಲ್ಲಿ ನೋಡಲು ಅವನಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮೊದಲನೆಯವನು ಎರಡನೆಯವನಿಗಿಂತ ಅಧಿಕ ಅಂಕಗಳನ್ನು ಪಡೆಯಬೇಕಾಗಿತ್ತು. ಆದರೆ ಫಲಿತಾಂಶ ಬಂದಾಗ ಆದದ್ದೇ ಬೇರೆ. ಎರಡನೆಯವನು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾದರೆ ಮೊದಲನೆಯವನು ದ್ವಿತೀಯ ಶ್ರೇಣಿ ಗಳಿಸಿದ್ದ. […]

ಸಾಮಾನ್ಯರಿಗೂ ವೇದಜ್ಞಾನ ನೀಡುವ ಪುರಾಣಗಳು

ಚಿಂತನ - 0 Comment
Issue Date : 29.04.2015

ಪುರಾಣ ಎಂದರೆ ಪ್ರಾಚೀನ ಅಥವಾ ಹಳೆಯ ಆಖ್ಯಾನ ಎಂಬ ಅರ್ಥವಿದೆ. ಜಗತ್ತಿನ ಹಳೆಯ ಕಥೆ ಹಾಗೂ ಐತಿಹ್ಯಗಳನ್ನು ಸಂಕೇತಿಸುವ ಕಥೆಗಳ ಗುಂಪಿನ ಸಂಜ್ಞೆ. ವೇದ (ಅಥರ್ವ), ಶತಪಥ ಮತ್ತು ಗೋಪಥ ಬ್ರಾಹ್ಮಣ ಹಾಗೂ ಬೃಹದಾರಣ್ಯ ಕೋಪಷತ್ತಿನಲ್ಲಿ ಪುರಾಣ ಶಬ್ದ ಕಂಡುಬರುತ್ತದೆ. ಅಥರ್ವವೇದವು ಪುರಾಣದ ಹುಟ್ಟಿನ ಕುರಿತು ಯಜುಸ್ಸುಗಳೊಡನೆ ಯಜ್ಞ ಉಚ್ಛಿಷ್ಟದಿಂದ ಹುಟ್ಟಿದ್ದೆಂದು ಹೇಳಿದೆ. ಬೃಹದಾರಣ್ಯಕವು ವೇದ, ಇತಿಹಾಸ ಹಾಗೂ ಪುರಾಣಗಳು ಪರಮಾತ್ಮನ ಉಸಿರಿನಿಂದ ಹುಟ್ಟಿದವು ಎನ್ನುತ್ತದೆ. ವಾಯು ಪುರಾಣವು ವೇದಗಳಿಗಿಂತ ಮೊದಲು ಇತಿಹಾಸ – ಪುರಾಣಗಳು ಜನ್ಮ […]