ಅಮೃತದ ಮಳೆ ಕೊಳಲ್

ಚಿಂತನ - 0 Comment
Issue Date : 01.12.2014

‘ಅಮೃತದ ಮಳೆ ಕೊಳಲ್ ಜೇನನ್ ಅರಸುವರೆ?’ ಎಂದು ಹರಿಹರನು ತನ್ನ ‘ನಂಬಿಯಣ್ಣನ ರಗಳೆ’ ಯಲ್ಲಿ ಪ್ರಶ್ನಿಸುತ್ತಾನೆ. ಮೇಲ್ತರಗತಿಯ ಮತ್ತು ಹೆಚ್ಚು ತೃಪ್ತಿದಾಯಕವಾದ ವಸ್ತು ದೊರಕಿದಾಗ ಯಾರೇ ಆಗಲಿ ಕಡಿಮೆ ತರಗತಿಯ ಸಾಮಗ್ರಿಯನ್ನು ಹುಡುಕಿಕೊಂಡು ಹೋಗುವುದಿಲ್ಲ. ಇದು ಮಾನವ ಸ್ವಭಾವ. ಜೇನು ತುಂಬ ಪೌಷ್ಟಿಕವಾದ ಹಾಗೂ ರಸಭರಿತ ಆಹಾರವೆಂಬುದರಲ್ಲಿ ಸಂದೇಹವಿಲ್ಲ. ಪೌಷ್ಟಿಕಾಹಾರದಂತೆ ಗಟ್ಟಿಯೂ ಆಗಿರದೆ, ದ್ರವ್ಯಾಹಾರದಂತೆ ತೆಳುವೂ ಆಗಿರದೆ ಹದವಾಗಿಯೂ ಮಿದುವಾಗಿಯೂ, ಮಧುರವಾಗಿಯೂ ಇರುವ ಜೇನನ್ನು ಭೂಲೋಕದ ಅಮೃತವೆಂದೇ ಪರಿಗಣಿಸುವುದು ರೂಢಿ. ಆದ್ದರಿಂದ ಆರೋಗ್ಯ ವೃದ್ಧಿಗೋಸ್ಕರ ಅಥವಾ ರೋಗ […]

ನಾಮದ ಬಲ

ಚಿಂತನ - 0 Comment
Issue Date : 18.11.2014

‘ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲ ಒಂದಿದ್ದರೆ ಸಾಕೋ’ ಎಂಬುದು ದಾಸವಾಣಿ. ಭಗವನ್ನಾಮಕ್ಕೆ ಇರುವ ‘ಬಲ’ ಶಕ್ತಿಯನ್ನು ಬಹು ಮಾರ್ಮಿಕವಾಗಿ ಇದು ಚಿತ್ರಿಸುತ್ತದೆ. ‘ಶ್ರೀರಾಮ’ ಎಂದು ಬರೆದ ಕಲ್ಲು-ಬೆಟ್ಟಗಳು ಮುಳುಗದೇ ತೇಲಿ ಸೇತುವೆ ನಿರ್ಮಾಣವಾದ ಕಥೆ ಶ್ರೀರಾಮಾಯಣದಲ್ಲಿದೆ. ಸ್ವತಃ ಶ್ರೀರಾಮ ಒಂದೊಂದೇ ಕಲ್ಲುಗಳನ್ನು ಸಮುದ್ರಕ್ಕೆ ಹಾಕುವನು. ಕಪಿವೀರರು ಸೇತುವೆ ಕಟ್ಟಿದಾಗ ಕಲ್ಲುಗಳು ಮುಳುಗದೇ ಇರುವುದನ್ನು ಆತ ಕಂಡಿದ್ದ. ಆದರೆ ಶ್ರೀರಾಮ ಹಾಕಿದ ಕಲ್ಲುಗಳು ಮುಳುಗಿದವು. ಅದೇಕೆಂದು ಚಿಂತಿಸಿದ ಶ್ರೀರಾಮನಿಗೆ ಆಂಜನೇಯನ ಉತ್ತರ ‘ಆ ಕಲ್ಲುಗಳನ್ನು ನೀನೇ […]

ನಾಮಸ್ಮರಣೆ: ಸಂತರಿಗೆ ಸಹಜ ಕ್ರಿಯೆ

ಚಿಂತನ - 0 Comment
Issue Date :

ಸಂತರು ದಾರ್ಶನಿಕರಲ್ಲ. ಹಾಗೇ ತಾವು ದಾರ್ಶನಿಕರು ಎಂದು ಎಲ್ಲೂ ಹೇಳಿಕೊಂಡಿಲ್ಲ. ಅವರು ಧಾರ್ಮಿಕ ಸ್ವಭಾವದವರು. ಸಾಧಕರು ತರ್ಕದ ಒರೆಗಲ್ಲು ಅವರ ಜಾಯಮಾನಕ್ಕೆ ಒಗ್ಗದು. ಹಾಗೆಂದು ತಾವು ಕಂಡು ಅನುಭವಿಸಿದ ‘ಸತ್ಯ’ವನ್ನು ಬಲವಾಗಿ ನಂಬಿದವರು. ಏಕೆಂದರೆ ಅವರು ಅದನ್ನು ಕಂಡಿದ್ದಾರೆ, ಅದು ನೀಡುವ ಬೆಚ್ಚನೆಯ ಹಿತವನ್ನು ಅನುಭವಿಸಿದ್ದಾರೆ. ಈ ‘ಅನುಭವ’ವೇ ಅವರನ್ನು ‘ಮಾಗಿಸಿದೆ.’ ಸಂತರು ತಾವು ಕಂಡು ಉಂಡು ಅನುಭವಿಸಿದ ‘ಸತ್ಯ’ವನ್ನು ಹಲವು ಹೆಸರಿನಿಂದ ಕರೆದಿದ್ದಾರೆ. ರಾಮ, ಬ್ರಹ್ಮ, ಖುದಾ, ನಿರ್ವಾಣ, ಪರಮಪದ ಎಂದೆಲ್ಲಾ ಆ ‘ಸತ್ಯ’ಕ್ಕೆ ಹೆಸರಿಟ್ಟಿದ್ದಾರೆ. […]

ಅಪಥ್ಯದಲಿ ಉಂಬವನ

ಅಪಥ್ಯದಲಿ ಉಂಬವನ

ಚಿಂತನ - 0 Comment
Issue Date : 11.11.2014

‘ಅಪಥ್ಯದಲಿ ಉಂಬವನ ವ್ಯಾಧಿಗಳು ಪೀಡಿಸುವುವು’ ಎಂಬ ಕಿವಿಮಾತನ್ನು ಹೇಳಿದವನು ದುರ್ಗಸಿಂಹ. ಇದು ಮನುಷ್ಯನ ಆಹಾರ ಸೇವನೆಗೂ, ಸ್ವಾಸ್ಥ್ಯಕ್ಕೂ ಇರುವ ನಿಕಟ ಸಂಬಂಧವನ್ನು ವಿಷದಗೊಳಿಸುತ್ತದೆ. ಆಹಾರದ ಬಲದಿಂದಲೇ ಮನುಷ್ಯರಲ್ಲಿ ಶಕ್ತಿ, ವರ್ಣ, ಪ್ರತಿಭೆ, ವಿಷಯಗ್ರಹಣ ಸಾಮರ್ಥ್ಯ, ಸುಖ, ಆನಂದ, ದೃಢತೆ, ಆರೋಗ್ಯ ಮುಂತಾದವು ಉಂಟಾಗುತ್ತವೆ ಎನ್ನುವುದನ್ನು ಅನುಭವಿಗಳು ಕಂಡುಕೊಂಡಿದ್ದಾರೆ. ಆಹಾರದಲ್ಲಿ ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮತ್ತು ಒಗರುಗಳೆಂಬ ಷಡ್ರಸ ಗಳು ಅಡಕವಾಗಿವೆ. ಈ ರಸಗಳು ನಾನಾ ಪದಾರ್ಥ ಗಳಲ್ಲಿ ಸೇರಿಕೊಂಡಿದ್ದು ಪ್ರತಿಯೊಬ್ಬ ವ್ಯಕ್ತಿಯೂ ದೇಶ, ನೆಲ, […]

ಅನುಭವಿಯೇ ಸಂತ!

ಚಿಂತನ - 0 Comment
Issue Date : 07.11.2014

‘ಕೃಷ್ಣ , ಬುದ್ಧ ಇತ್ಯಾದಿ ದೊಡ್ಡವರು ಹೇಳಿದ್ದಾರೆ ಎಂಬುದರಿಂದ ‘ಸತ್ಯ’ವನ್ನು ‘ಸತ್ಯ’ ಎಂದು ತಿಳಿಯಬೇಡ. ಅದನ್ನು ನಿನ್ನ ಸ್ವಾನುಭವದ ಒರೆಗಲ್ಲಿಗೆ ಹಾಕಿ ತಿಕ್ಕಿ ನೋಡು. ನಮ್ಮ ಬದುಕಿನ ಒಂದು ಅಂಗವಾಗಬಲ್ಲ ‘ಸತ್ಯದ ಅಂಶ’ವೇ ನಮ್ಮ ಪ್ರಯೋಜನಕ್ಕೆ ಬರುವಂಥದು’ ಇದು ಸ್ವಾಮಿ ರಾಮತೀರ್ಥರ ಮಾತು. ‘ಸಂತ’ನಿಗೆ ಸ್ವಾನುಭವ ಮುಖ್ಯ. ಸತ್ಯದ ಪೂರ್ಣರೂಪವನ್ನು ಅರಿತವರಾರು? ಇದರರ್ಥ ಯಾರೂ ಇಲ್ಲ ಎಂದಲ್ಲ. ಅರಿತವರು ಇದ್ದಾರೆ. ಆದರೆ ಆ ಅರಿವು ‘ಅಕಥನೀಯ’. ಹಾಗೆಂದೇ ಹೇಳಲು ಬರುವುದಿಲ್ಲ. ಉಪನಿಷತ್ತು ವರ್ಣಿಸುವ ‘ಮೂಕಾಸ್ವಾದನವತ್’. ಕಬೀರ ಹೇಳುವಂತೆ […]

ಅಲ್ಲಪ್ಪನೂರಲ್ಲಿ ಬಲ್ಲಪ್ಪನಲ್ಲಪ್ಪ

ಚಿಂತನ - 0 Comment
Issue Date : 07.11.2014

ಜ್ಞಾನ ಮತ್ತು ಮೂರ್ಖತನ ಎಂಬ ಪದಗಳು ಸಾಪೇಕ್ಷವಾದವು. ಏಕೆಂದರೆ ಬುದ್ಧಿವಂತಿಕೆ ಅತಿಯಾದರೆ, ದಾರಿ ತಪ್ಪಿದರೆ ಅಥವಾ ಬಿಗಡಾಯಿಸಿದರೆ ಅಲ್ಲಿ ಹುಂಬತನದ ಕರಿ ನೆರಳು ಬೀಳಬಹುದು. ಅದೇ ರೀತಿ ಒಬ್ಬ ಮೂರ್ಖ ತನಗಿಂತಲೂ ಹೆಡ್ಡರಾದವರನ್ನು ಭೇಟಿಯಾದರೆ ಮಾತಿನಲ್ಲಿ ಮೇಲುಗೈ ಸಾಧಿಸಿ ಜ್ಞಾನಿಯಂತೆ ತೋರಬಹುದು-ಎಲ್ಲರೂ ಕುರುಡರೇ ಇರುವಲ್ಲಿ ಒಕ್ಕಣನಾದವನು ತನ್ನ ಹಿರಿಮೆಯನ್ನೂ ಸ್ಥಾಪಿಸುವಂತೆ. ಮತ್ತೊಂದು ವಿಶೇಷವೆಂದರೆ ಸಂಖ್ಯಾ ಬಲ. ಪ್ರಜಾ ರಾಜ್ಯದಲ್ಲಿ ಬಹುಮತವೇ ಮುಖ್ಯವಾದ್ದರಿಂದ ಯಾರು (ಬುದ್ಧಿಶಾಲಿ ಗಳೋ, ತಿಳಿಗೇಡಿಗಳೋ) ಅಧಿಕ ಸಂಖ್ಯೆ ಯಲ್ಲಿದ್ದಾರೋ ಅಥವಾ ಯಾರ ಪ್ರತಿನಿಧಿಗಳು ಬಹುಮತ […]

ಸಂತ ಲಕ್ಷಣ

ಚಿಂತನ - 0 Comment
Issue Date : 28.10.2014

ನಿರ್ವೈರೀ ನಿಹಕಾಮನಾ ಸಾಈ ಸೇತೀ ನೇಹ್‌ ವಿಷಯಾಂ ಸೂಂ ನ್ಯಾರಾ ರಹೈ ಸಂತನಕೋ ಅಂಗ ಏಹ್ ॥ ಇದು ಸಂತ ಕಬೀರರು ಪಟ್ಟಿಮಾಡುವ ಸಂತನ ಲಕ್ಷಣ. ವೈರವೇ ಇಲ್ಲದ ನಿರ್ವೈರೀ, ನಿಷ್ಕಾಮಿ ಪ್ರಭುವಿನೊಡನೆ ನೇಹ(ಸ್ನೇಹ) ಹೊದಿದವ, ವಿಷಯಗಳಿಂದ ದೂರ ಇರುವುದು ಇವು ಸಂತನ ವಿಶೇಷ ಎಂಬುದು ಕಬೀರದಾಸರ ಅಭಿಪ್ರಾಯ. ಗೀತೆಯಲ್ಲಿ ಸದ್ಭಾವೇ ಸಾಧುಭಾವೇ ಚ….. ಮತ್ತು ಯಜ್ಞೇ ತಪಸಿ ದಾನೇ ಚ….. ಎಂಬಲ್ಲಿ ಯಜ್ಞ ತಪಸ್ಸು ಮತ್ತು ದಾನದಲ್ಲಿ ಸ್ಥಿರಭಾವವಿಡುವುದನ್ನು ಸತ್ ಎಂದು ನಿರ್ದೇಶಿಸಿ ಈ ನಿಮಿತ್ತವಾಗಿ […]

ಅರಿದಡೆ ಶರಣ, ಮರೆದಡೆ ಮಾನವ

ಅರಿದಡೆ ಶರಣ, ಮರೆದಡೆ ಮಾನವ

ಚಿಂತನ - 0 Comment
Issue Date : 28.10.2014

ಅರಿವಿಗೂ ಶರಣಾಗತಿಗೂ ಹತ್ತಿರದ ಸಂಬಂಧ. ಏಕೆಂದರೆ ತಿಳಿವಳಿಕೆ ಇಲ್ಲದವನು ತಾನು ಕಾಣುವ ಜಗತ್ತೇ ಶಾಶ್ವತವೆಂದೂ, ತನ್ನಲ್ಲಿರುವ ಹಣ, ವಸ್ತು, ವಾಹನಾದಿಗಳು ಸುಖ ಸಂತೋಷಗಳಿಗೆ ಕಾರಣವೆಂದೂ ಭ್ರಮಿಸುತ್ತಾರೆ.ಇಹಲೋಕದ ಭೋಗ ಭಾಗ್ಯಗಳೆಲ್ಲ ಕ್ಷಣಿಕವಾದುವು: ಪಾರಮಾರ್ಥಿಕವಾದ ಬಿಡುಗಡೆ ಮಾತ್ರ ಚಿರವಾದುದು ಎನ್ನುವ ಜ್ಞಾನ ಮೂಡಿದರೆ ಮಾತ್ರ ಆತ ಕರುಣಾ ಸಾಗರನಾದ ಶಿವನಿಗೆ ಪೂರ್ತಿಯಾಗಿ ಶರಣಾಗುತ್ತೇವೆ. ‘‘ನಾನು, ನನ್ನದು, ನನ್ನಿಂದ ಎಂಬುವೆಲ್ಲ ಬರಿಯ ಮಾಯೆ. ನೀನೇ ನನ್ನ ಸರ್ವಸ್ವ. ಇಹ ಜಗತ್ತಿನ ಬಂಧನದಿಂದ ಬಿಡಿಸಿ ನನಗೆ ಮೋಕ್ಷವನ್ನು ನೀಡು’’ ಎಂದು ಬೇಡಿಕೊಳ್ಳುತ್ತಾನೆ. ಆದ್ದರಿಂದಲೇ […]

ಹಿತ ಮತ್ತು ಪ್ರಿಯ

ಚಿಂತನ - 0 Comment
Issue Date : 15.10.2014

ಪ್ರಿಯವಾಗಿ ಇರುವುದೆಲ್ಲವೂ ಹಿತವನ್ನುಂಟು ಮಾಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಿಯವೆಂದರೆ ಈಗ ಚೆನ್ನಾಗಿ ತೋರುವುದು-ಈಗ ಮಾತ್ರ ಬೇಕಾದುದು ಎನ್ನುತ್ತಾರೆ ಪ್ರಾಜ್ಞರು. ಪ್ರಿಯವನ್ನು ಅಪಥ್ಯವಾದ ರುಚಿ ಎನ್ನಬಹುದು. ಮಡದಿ-ಮಕ್ಕಳು-ಬಂಧು ಬಳಗ (ಹೆಂಡತಿಯ ಮಾತಿಗಾದರೆ ಗಂಡ ಮನೆ ಮಕ್ಕಳು….) ಇವರೆಲ್ಲರೂ ಪ್ರಿಯರು ನಿಜ. ಆದರೆ ಇವರು ತೋರುವ ಪ್ರೀತಿಯೆಲ್ಲಾ ಒಂದು ಅರ್ಥದಲ್ಲಿ ತಮ್ಮ ಸುಖ ನೆಮ್ಮದಿಗೆ ಮಾತ್ರ (ಅದೂ ತಾತ್ಕಾಲಿಕ ಎಂದು ತಿಳಿಯುವಾಗ ಕಾಲ ಮಿಂಚಿರುತ್ತದೆ!) ಎನ್ನಬಹುದು. ಸತ್ಯ ಸಂಗತಿ ಇದಲ್ಲ- ಪ್ರತ್ಯಗಾತ್ಮನು ಎಲ್ಲರಿಗಿಂತಲೂ ಪ್ರಿಯನಾದವನು. ಆತ್ಮನನ್ನು ಪ್ರಿಯನು ಎಂದರಿತವನಿಗೆ […]

ಅಪ್ರಿಯವಾದೊಡಂ ಹಿತವಂ ನುಡಿ

ಚಿಂತನ - 0 Comment
Issue Date : 13.10.2014

ಯಾರೇ ಆಗಲಿ, ಹಲವು ಮಾತುಗಳನ್ನಾಡಿದರೆ ಕೆಲವು ನುಡಿಗಳು ಕೇಳಲು ಪ್ರಿಯವಾಗಿರುತ್ತವೆ. ಆದರೆ ಅವು ಹಿತಕರವಾಗಿರುವುದಿಲ್ಲ. ಕೆಲವು ಮಾತುಗಳು ಹಿತಕಾರಿಯಾಗಿದ್ದರೂ ಪ್ರಿಯವಾಗಿರುವುದಿಲ್ಲ. ಇನ್ನು ಕೆಲವು ನುಡಿಗಳು ಏಕಕಾಲಕ್ಕೆ ಪ್ರಿಯವೂ ಹಿತಕರವೂ ಆಗಿರುತ್ತವೆ. ಇವುಗಳಲ್ಲಿ ಹೇಳುವವನು ಯಾವ ದಾರಿಯನ್ನು ಅನು ಸರಿಸಬೇಕು? ಇದೇ ಬಹು ಮಂದಿಯನ್ನು ಕಾಡುವ ಪ್ರಶ್ನೆ. ಯಾವುದೇ ಮಾತಿನ ನಿಜವಾದ ಉದ್ದೇಶವೇನು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಈ ಪ್ರಶ್ನೆಗೆ ಸರಿಯಾದ ಉತ್ತರ ಹೊಳೆ ಯುತ್ತದೆ. ಕೇಳುಗನ ಕಿವಿಗೆ ಆಪ್ಯಾಯಮಾನವಾಗಿರಬೇಕು ಎಂಬುದಷ್ಟೇ ಮಾತಿನ ಗುರಿಯಲ್ಲ. ಏಕೆಂದರೆ ಆತನಿಗೆ ಖುಷಿಯಾಗಬೇಕೆಂದು […]