ಸಿದ್ಧಿ

ಚಿಂತನ - 0 Comment
Issue Date : 08.10.2014

ಸಾಧನೆಯಿಂದ ಮಾತ್ರವೇ ಸಿದ್ಧಿ. ಸಾಧನೆಗಾಗಿ ಸಾಧಕ ತನ್ನ ಗುರಿಯನ್ನು ತಲುಪಲು ಮಾಡಬೇಕಾದ ಸತ್ಕಾರ್ಯ ಸಾಧನೆ ಎನ್ನಿಸಿಕೊಳ್ಳುತ್ತದೆ. ಯೋಗ್ಯ ಗುರುವಿನ ಮಾರ್ಗದರ್ಶನ ಯೋಗ್ಯ ದಾರಿ ಇವು ಸಿದ್ಧಿಯ ಸಾಧನ. ಇಹ ಮತ್ತು ಪರವನ್ನು ಜೋಡಿಸುವ ಮಾತ್ರವಲ್ಲ , ಇಹವನ್ನೇ ಪರವನ್ನಾಗಿ ಅರಳಿಸುವ ಸಾಧನ ಯೋಗ. ಯೋಗ ಎಂದರೇ ಜೋಡಿಸುವುದು ಎಂಬ ಅರ್ಥವೂ ಇರುವುದು ಇಲ್ಲಿ ಗಮನಿಸಬೇಕಾದ ಅಂಶ. ಯೋಗ ಸಾಧಕ ಯೋಗಿ. ಈ ಸಾಧನೆಯಿಂದ (ಹಠಯೋಗ) ಎಂಟು ಸಿದ್ಧಿಗಳು ಉಂಟಾಗುತ್ತವೆ. ಅಣಿಮಾ (ಅಣು ಭಾವ ಪಡೆಯುವುದು) ಮಹಿಮಾ (ಅತಿ […]

ಅನಿಯತ ಪದಂ

ಚಿಂತನ - 0 Comment
Issue Date : 06.10.2014

‘‘ಅನಿಯತ ಪದಮ ಸ್ವಯಂ ಪ್ರಭುವಿನ ಮಾರ್ಗಂ’’ ( ಅನಿಶ್ಚಿತ ನಡೆ ಸರ್ವಾಧಿಕಾರಿಯ ಮಾರ್ಗ) ಎಂದು ರುದ್ರ ಭಟ್ಟ ಕವಿಯು ತನ್ನ ‘ಜಗನ್ನಾಥ ವಿಜಯ’ದಲ್ಲಿ ಹೇಳಿರುವುದು ತುಂಬ ಸಮಂಜಸವಾಗಿದೆ. ಏಕೆಂದರೆ ಆನುವಂಶಿಕವಾಗಿಯೋ, ಆಯ್ಕೆ ಮೂಲಕವೋ ಸಿಂಹಾಸನವೇರಿ ದವನಿಗೆ ಇರುವ ಕ್ರಮ ಬದ್ಧತೆ, ಪೂರ್ವ ಸಿದ್ಧತೆ, ನಿಯಂತ್ರ ಣಾದಿಗಳು ಸ್ವಯಂ ರಾಜ್ಯಾಧಿಪತ್ಯವನ್ನು ಸೆಳೆದು ಕೊಂಡವನಿಗೆ ಇರುವುದಿಲ್ಲ. ಗಣರಾಜ್ಯ ಪದ್ಧತಿಯಲ್ಲಿ ಕಾಣಿಸುವ ಸಂವಿಧಾನವೂ (ಲಿಖಿತ ಅಥವಾ ಅಲಿಖಿತ) ಈತನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆನೆ ಮೆಟ್ಟಿದ್ದೇ ದಾರಿ ಎಂಬಂತೆ ಇವನು ಸ್ವೇಚ್ಛೆ […]

ಅರಿವಿನ ಬೆಳಕ ಬೀರುವ ಕಾರ್ಯ

ಚಿಂತನ - 0 Comment
Issue Date : 25.09.2014

ಅರಿವು ಅಮೃತ, ಅದನ್ನು ಪಾನ ಮಾಡಿದವರಿಗೆ ಖಂಡಿತ ಸಾವಿಲ್ಲ. ಅವರೆಲ್ಲ ಅಮರರು. ಆದ್ದರಿಂದಲೇ ಅರಿವಿನ ಬೆಳಕಿನಿಂದ ಎಲ್ಲರ ಬಾಳಿಗೂ ಬೆಳಕಾದ ವೇದವ್ಯಾಸರಂತಹ ಋಷಿವರ್ಯರ, ಅವರೇ ಸಾಕ್ಷಿಯಾಗಿ ನಿಂತು (ಒಳಿತನ್ನೇ ಬಯಸುವ ಪ್ರಜ್ಞೆ – ಒಳಿತನ್ನೇ ಆಚರಿಸುವ ಪ್ರಜ್ಞೆ ಗೆ ಬದುಕನ್ನೇ ಸಾಕ್ಷಿ ಆಗಿಸಿದವರು- ತಾವು ಸುರಕ್ಷಿತ ದೂರದಲ್ಲಿ ನಿಂತು ಹೆರವರನ್ನು ಆಳಕ್ಕೆ ತಳ್ಳಿ ಬಿಡುವ ಆಧುನಿಕ ‘ಸಾಕ್ಷಿ ಪ್ರಜ್ಞೆ’ಗಳಂತಲ್ಲ ಇವರು) ಸಾಮಾನ್ಯರಿಗಾಗಿ ತಿಳಿವಿನ ಕಂದೀಲು ವೇದ- ಪುರಾಣಗಳ ಮೂಲಕ ಸತ್ಯ ಇತಿಹಾಸವನ್ನು ತೆರೆದಿಟ್ಟು ಆ ಬೆಳಕಿನಲ್ಲಿ ಬೆಳಕಾಗಿ […]

ಅತನು ತಾಪಮೆ ತಾಪಂ

ಚಿಂತನ - 0 Comment
Issue Date : 22.09.2014

ಅರಿಷಡ್ವರ್ಗಗಳಲ್ಲಿ ಮೊದಲನೆಯದೇ ಕಾಮ. ಅದರಿಂದ ಉಂಟಾಗುವ ಉರಿಗೆ ಸಮನಾದುದು ಬೇರೆ ಯಾವುದೂ ಇಲ್ಲ. ಇದನ್ನು ತೋರಿಸಿಕೊಡುವ ನೂರಾರು ಪ್ರಸಂಗಗಳು ಹಿಂದೆ ನಡೆದಿವೆ, ಈಗಲೂ ನಡೆಯುತತ್ತಿವೆ, ಮುಂದೆಯೂ ನಡೆಯದಿರಲು ಸಾಧ್ಯವಿಲ್ಲ. ಆದ್ದರಿಂದಲೇ ನೇಮಿಚಂದ್ರನು ತನ್ನ ‘ಲೀಲಾವತಿ’ ಕೃತಿಯಲ್ಲಿ ‘‘ಅತನು ತಾಪಮೆ ತಾಪಂ’’ (ಅತನು ಎಂದರೆ ಅನಂಗನಾದ ಕಾಮ; ತಾಪವೆಂದರೆ ಉರಿ, ಸಂಕಷ್ಟ.) ಎಂದು ಉದ್ಗರಿಸಿದ. ಕಾಮಕ್ಕೆ ಕಣ್ಣಿಲ್ಲ ಎನ್ನುತ್ತಾರೆ; ಕಾಮವು ಕುರುಡುತನದ ಅವಳಿಯೆಂದು ಅರೇಬಿಯಾ ದೇಶದ ಗಾದೆಯೊಂದು ಸಾರುತ್ತದೆ. ಕಾಮಮೋಹಿತನಾದ ವ್ಯಕ್ತಿಗೆ ಸ್ತ್ರೀಯೊಬ್ಬಳು ಕಾಣ ಸಿಕ್ಕಿದರೆ ಸಾಕು. ಅವಳ […]

ಇಹವೇ ಪರವಾಗಿ ಅರಳುವ ಪರಿ

ಚಿಂತನ - 0 Comment
Issue Date : 15.08.2014

‘ಜ್ಞಾನ’ ಎಂದರೆ ಅರಿವು ತಿಳಿವಳಿಕೆ. ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ’ ಎಂದಿದೆ ಗೀತೆ. ಅದಕ್ಕೆ ಹೋಲಿಕೆ ಆಗಲಿ ಸರಿ ಮಿಗಿಲಾದುದಾಗಲೀ ಯಾವುದೂ ಅಲ್ಲ. ಅದು ಪವಿತ್ರ, ಅದುವೇ ಪವಿತ್ರ. ತನ್ನ ಬಳಿ ಸಾರಿದವರನ್ನೆಲ್ಲ ಬೆಳಗಿಸುವ ದಿವ್ಯ ಬೆಳಕು. ವಸ್ತು ವಿಷಯ ಜ್ಞಾನವು ಭೌತಿಕವಾದುದು. ಅದು ಸತ್ಯವೆನಿಸದು. ಅದಕ್ಕಿಂತ ಭಿನ್ನವಾದ, ಮಿಗಿಲಾದುದು, ಎಂದೂ ಮಾಸದ ಶಾಶ್ವತವಾದ ಜ್ಞಾನವೇ ನೈಜ ಜ್ಞಾನ. ಅದು ತನ್ನ ಆತ್ಮನ ಇರವನ್ನು ಗುರುತಿಸಬಲ್ಲದು. ಆ ಮೂಲಕ ಬ್ರಹ್ಮನ ಇರವನ್ನು ಆ ವಿಷಯದ ಜ್ಞಾನವನ್ನು […]

ಅಣಕಕ್ಕೆ ಸವಣನುಂ ಸೈರಿಪನೇ?

ಚಿಂತನ - 0 Comment
Issue Date : 11.08.2014

ಅಣಕವೆಂದರೆ ಅಪಹಾಸ್ಯ, ಕುಚೋದ್ಯ, ಹೀಯಾಳಿಕೆ. ಸವಣನೆಂದರೆ ಶ್ರವಣ, ಜೈನಯತಿ. ಕವಿ ಜನ್ನನು ತನ್ನ ಯಶೋಧರ ಚರಿತೆಯಲ್ಲಿ ‘ಅಣಕಕ್ಕೆ ಸವಣನುಂ ಸೈರಿಪನೇ?’ ಎಂಬ ಪ್ರಶ್ನೆಯನ್ನು ಎತ್ತಿದ್ದಾನೆ. ಸರ್ವಸಾಮಾನ್ಯವಾಗಿ ಯತಿಗಳಾದವರು, ಸನ್ಯಾಸಿಗಳು, ಋಷಿಮುನಿಗಳು ತಾಳ್ಮೆಗೆ, ಸೈರಣೆಗೆ ಹೆಸರಾದವರು. ಆದರೆ ಯಾವುದಕ್ಕೂ ಒಂದು ಮಿತಿಯಿರುತ್ತದೆ. ಅತಿಯಾದ ಅಪಹಾಸ್ಯವನ್ನು ಯಾರಾದರೂ ಮಾಡತೊಡಗಿದರೆ ಅವರ ಸಹನೆಯ ಕಟ್ಟೆ ಒಡೆದುಹೋಗುತ್ತದೆ. ಇದು ಮಾನವ ಸಹಜ. ಅಧಿಕ ಪ್ರಸಂಗಿಗಳನ್ನು, ಉಪದ್ರವಕಾರಿಗಳನ್ನು ನಿಯಂತ್ರಿಸಿ ಸಮಾಜದಲ್ಲಿ ಸಮತೋಲನವನ್ನು ಕಾಪಾಡಿಕೊಂಡು ಬರುವ ದೃಷ್ಟಿಯಿಂದ ಇಂತಹ ಮಹಾನುಭಾವರ ಸಾತ್ತ್ವಿಕ ಕೋಪವು ಅಗತ್ಯವೆಂದು ತೋರುತ್ತದೆ. […]

ಆಗಮ

ಚಿಂತನ - 0 Comment
Issue Date : 07.08.2014

‘ಅಸಮಂತಾತ್ ಗಮಯತಿ ಇತಿ ಆಗಮಃ’ – ಎಂಬುದು ಆಗಮ ಶಬ್ದದ ನಿಷ್ಪತ್ತಿ. ಸರ್ವವ್ಯಾಪಿ – ಸರ್ವಸ್ಪರ್ಶಿ – ಸರ್ವಶಕ್ತ ಎನಿಸಿದ ‘ಪರಮಾತ್ಮ ತತ್ತ್ವ’ದ ವಿಚಾರವನ್ನು ಅನುಷ್ಠಾನಕ್ಕೆ ತರಲು ಯೋಗ್ಯ ಮಾತ್ರವಲ್ಲ ಅನುಕೂಲವೂ ಆದ ವಿಚಾರಧಾರೆ ಇದು. ಆಗಮ ಎಂದರೆ ಬಂದದ್ದು, ಹಿಂದಿನಿಂದ ಬಂದದ್ದು. ಪರಂಪರೆಯಿಂದ ಬಂದದ್ದು ಎಂಬುದು ಸ್ಥೂಲಾರ್ಥ. ನಂಬಿಕೆಗೆ ವಿಶ್ವಾಸಕ್ಕೆ ಯೋಗ್ಯ – ಆಪ್ತ ವ್ಯಕ್ತಿಯು ತಾನು ‘ಸಾಧನೆ’ಯಿಂದ ಸಾಕ್ಷಾತ್ಕಾರ ಮಾಡಿಕೊಂಡ ‘ಸತ್ಯ’ವನ್ನು ‘ಪ್ರಕಟಿಸುವನು’ ಇದು ವೇದ ಸತ್ಯ – ಜ್ಞಾನ. ಇದನ್ನು ಆಲಿಸಿದವನ ಮನದಲ್ಲಿ […]

ಅಟ್ಟಡಿಗೆಯಾ ರುಚಿಯ

ಅಟ್ಟಡಿಗೆಯಾ ರುಚಿಯ

ಚಿಂತನ - 0 Comment
Issue Date : 05.08.2014

ಸಮಾಜದಲ್ಲಿ ಅನೇಕ ಜನರು ನಮ್ಮ ಸುತ್ತಮುತ್ತ ದೊಡ್ಡ ಮನುಷ್ಯರೆನಿಸಿಕೊಂಡು ಓಡಾಡುತ್ತಿರುತ್ತಾರೆ. ಅವರಲ್ಲಿ ಕೆಲವರು ತಮ್ಮ ಐಶ್ವರ್ಯ – ಅಂತಸ್ತುಗಳಿಂದಾಗಿ ಮೆರೆದರೆ ಕೆಲವರು ಹೊರನೋಟದ ಪಾಂಡಿತ್ಯ – ತಿಳಿವಳಿಕೆಗಳಿಂದ ಮನ್ನಣೆ ಪಡೆದಿರುತ್ತಾರೆ. ಆದರೆ ಇಂತಹ ಪ್ರದರ್ಶನಪ್ರಿಯರು ನಿಜವಾಗಿಯೂ ಆಂತರಂಗಿಕವಾದ ಅರಿವನ್ನು ಹೊಂದಿರುವುದಿಲ್ಲ. ಏಕೆಂದರೆ ಅವರ ಹೊರಗಣ್ಣು ಮಾತ್ರ ಕೆಲಸ ಮಾಡುತ್ತಿದ್ದು ಅಂತಃಚಕ್ಷು ತೆರೆದಿರುವುದಿಲ್ಲ. ಆತ್ಮಾವಲೋಕನ ಅಥವಾ ಆತ್ಮದರ್ಶನ ಅವರಿಗೆ ಆಗಿರುವುದಿಲ್ಲ. ಸರ್ವಜ್ಞಕವಿ ಹೇಳುವಂತೆ ಇಂಥವರ ಸಂಗದಿಂದ ಯಾವ ಪ್ರಯೋಜನವೂ ದೊರೆಯಲಾರದು. ಏಕೆಂದರೆ ಅವರ ದಾರಿಯೇ ಬೇರೆ ರೀತಿಯದು. ‘ಅಟ್ಟಡಿಗೆಯ […]

‘ಅಕ್ಷರ’ – ಆರಾಧನೆ

ಚಿಂತನ - 0 Comment
Issue Date : 30.07.2014

‘ಅಕ್ಷರ’ ಎಂದರೆ ‘ನಾಶ’ವಿಲ್ಲದ್ದು (ಕ್ಷರ = ನಾಶ) ಅದನ್ನೇ ಬ್ರಹ್ಮ – ಭಗವಂತ ಎಂದು ಸಾರುತ್ತಿದೆ ವೇದ. ಪರಬ್ರಹ್ಮ, ಪರಮಾತ್ಮ, ಪ್ರಣವ, ಪ್ರಕೃತಿ, ಮೋಕ್ಷ, ಆಕಾಶ, ಶಬ್ದ ಮುಂತಾದ ಹಲವು ಅರ್ಥ ವಿಶೇಷಗಳು ಈ ಪದಕ್ಕಿದೆ. ಇರುವುದು ಹಾಗೂ ಬರುವುದು ಮಾತ್ರವಲ್ಲ , ಇಲ್ಲದ್ದು , ಎಲ್ಲವನ್ನೂ ಮೀರಿದ್ದು ಅಕ್ಷರ. ಇದು ಪುರುಷ ಹಾಗೂ ಜೀವ ಎಂಬ ಅಭಿದಾನವನ್ನು ಹೊಂದುವುದು ವಿಶೇಷ.ಅಕ್ಷರ ಅವ್ಯಾಕೃತ. ಇಲ್ಲಿ ಸಂಭವಿಸುವ ಎಲ್ಲಾ ಸಂಗತಿಗಳಿಗೂ ಕಾರಣ ಆದರೂ ಇದು ಕಾರ್ಯ ಕಾರಣ ಸಂಬಂಧಗಳಿಂದ […]

ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ

ಚಿಂತನ - 0 Comment
Issue Date : 28.07.2014

‘ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೇ ಲೇಸು’ ಎನ್ನುವ ಮಾತನ್ನು ಪುರಂದರದಾಸರು ತಮ್ಮ ಕೀರ್ತನೆಯೊಂದರಲ್ಲಿ ಹೇಳಿದ್ದಾರೆ. ತಿಳಿಗೇಡಿಗಳು ಮತ್ತು ತಿಳಿದವರ ನಡುವಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ದಾಸವರೇಣ್ಯರ ನುಡಿ ಸತ್ಯವೆನ್ನುವುದು ಮನವರಿಕೆಯಾಗುತ್ತದೆ.ಅಜ್ಞಾನಿಗಳೆಂದರೆ ಯಾವುದೇ ವಿಷಯದ ಕುರಿತು ಅರಿವು ಇಲ್ಲದವರು. ತಿಳಿಗೇಡಿಗಳಾಗಿ ಇರುವುದಲ್ಲದೆ, ತಮಗೇನೂ ಗೊತ್ತಿಲ್ಲವೆಂಬ ಸಂಗತಿ ಕೂಡ ಅವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಅನೇಕ ವಿಷಯಗಳ ಬಗೆಗೆ ಅವರು ತಪ್ಪು ಮಾಹಿತಿ ನೀಡಿ ಇತರರ ದಾರಿ ತಪ್ಪಿಸುವ ಸಾಧ್ಯತೆ ಧಾರಾಳವಾಗಿದೆ. ಆದ್ದರಿಂದ ಇಂತಹ ವ್ಯಕ್ತಿಗಳ ಜತೆ […]