ಗುರುವಿನ ಗುರುತು

ಚಿಂತನ - 0 Comment
Issue Date : 25.07.2014

‘ಗುರುವಃ ಬಹವಃ ಸಂತಿ ಶಿಷ್ಯ ವಿತ್ತಾಪಹಾರಕಾಃ’ಶಿಷ್ಯನ ಹಣ ಅಪಹರಿಸುವ ಗುರುಗಳು ಲೋಕದಲ್ಲಿ ಬಹುಮಂದಿ ಇರುತ್ತಾರೆ. ಆದರೆ ಶಿಷ್ಯ ಸಂತಾಪಹಾರಕಾಃ’ – ಶಿಷ್ಯನ ಸಂತಾಪವನ್ನು ಪರಿಹರಿಸುವ ಗುರು ದುರ್ಲಭ. ಈ ಮಾತನ್ನು ಶಿವ ತನ್ನ ಪತ್ನಿ ಶಿವೆ (ಉಮಾ)ಗೆ ಹೇಳಿದ್ದಾನೆ. (ಗುರುಗೀತಾ – ಸ್ಕಾಂ, ಉತ್ತರಖಂಡ 137)ಬಹುಮಂದಿ ನಕಲಿ ಗುರುಗಳೇ ಆಡಂಬರದ ವೇಷ ತೊಟ್ಟು ಎಲ್ಲೆಡೆ ಮೆರೆಯುತ್ತಾರೆ. ಅವರ ಮಿರುಗುಬಣ್ಣ ಮಿಂಚುಮಾತು – ಇವುಗಳಿಗೆ ಯಾರೂ ಮರುಳಾಗಿಬಿಡುವ ಸಾಧ್ಯತೆ ಹೆಚ್ಚು. ನಿಜದ ಗುರು – ಗುರುತನ್ನು ಅರಿವನ್ನು ಪಡೆಯಬೇಕು.ಗುರು […]

ಅಗ್ನಿ ದಿವ್ಯದ ಕರ್ಮ

ಚಿಂತನ - 0 Comment
Issue Date : 21.07.2014

ಹಿಂದಿನ ಕಾಲದಲ್ಲಿ ಮನುಷ್ಯನ ಸತ್ಯಸಂಧತೆ, ಧರ್ಮನಿಷ್ಠೆ, ಪರಿಶುದ್ಧತೆ, ನಿರಪರಾಧಿತ್ವ ಮುಂತಾದುವನ್ನು ಪರೀಕ್ಷಿಸಲು ನಾನಾ ಕ್ರಮಗಳನ್ನು ಅನುಸರಿಸುತ್ತಿದ್ದರು. ಇವುಗಳಲ್ಲಿ ‘ಅಗ್ನಿ ದಿವ್ಯ’ ಅಥವಾ ‘ಅಗ್ನಿ ಪರೀಕ್ಷೆ’ಯೂ ಒಂದು. ಪರೀಕ್ಷೆಗೆ ಒಳಗಾಗುವ ವ್ಯಕ್ತಿ ಸುಡು ಕೆಂಡವನ್ನು ಅಂಗೈಯಲ್ಲಿ ಹಿಡಿದುಕೊಂಡು ನಿಲ್ಲಬೇಕು ಅಥವಾ ಧಗಧಗನೆ ಉರಿಯುವ ಬೆಂಕಿಯ ಕುಂಡಕ್ಕೆ ಹಾರಬೇಕು. ಹೀಗೆ ಮಾಡಿದಾಗ ನಿರಪರಾಧಿಗಳಾದವರು ಅಥವಾ ನಿರ್ಮಲ ಚರಿತರು ಯಾವುದೇ ಸುಟ್ಟ ಗಾಯಗಳಾಗದೆ ಹೊರ ಬರುತ್ತಾರೆ ಎಂಬ ನಂಬಿಕೆ ಅವರಲ್ಲಿತ್ತು. ಸುಡುವ ಬೆಂಕಿ, ಕುದಿಯುವ ಎಣ್ಣೆ ಮುಂತಾದವುಗಳನ್ನು ಹೊಕ್ಕರೂ ಕೂದಲು ಕೂಡ […]

ಅಕ್ಷತೆ ಸುರಿದ ಕೈಯಲೇ…

ಚಿಂತನ - 0 Comment
Issue Date : 14.07.2014

ಹೆಣ್ಣಿನ ಶೋಷಣೆಯೆಂಬುದು ಇಂದು ನಿನ್ನೆಯ ಕಥೆಯಲ್ಲ. ಅದೊಂದು ಕೊನೆಯಿಲ್ಲದ, ಎಣೆಯಿಲ್ಲದ ವ್ಯಥೆ. ಸಮಾಜವು ಪುರುಷ ಪ್ರಧಾನವಾದುದರಿಂದ ಸ್ತ್ರೀಯರ ಮೇಲೆ ದಬ್ಬಾಳಿಕೆ, ಹಿಂಸೆ, ಅತ್ಯಾಚಾರಗಳು ನಡೆಯುತ್ತಿವೆ ಎಂದು ಹೇಳುವುದುಂಟು. ಆದರೆ ವರದಕ್ಷಿಣೆಯಂತಹ ಪ್ರಕರಣಗಳಲ್ಲಿ ಸ್ವತಃ ಮಹಿಳೆಯಾದ ಅತ್ತೆಯೇ ಇತರರೊಂದಿಗೆ ಸೇರಿ ಸೊಸೆಯನ್ನು ದಂಡಿಸಲು ಹೊರಡುತ್ತಿರುವುದು ನಿಜಕ್ಕೂ ದಯನೀಯ ಹಾಗೂ ಖಂಡನೀಯ ಸಂಗತಿ. ಇದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಡಾ. ಕಮಲಾ ಹಂಪನಾ ತಮ್ಮ ಒಂದು ವಚನದಲ್ಲಿ ‘ಅಕ್ಷತೆ ಸುರಿದ ಕೈಯಲೇ ಸೀಮೆ ಎಣ್ಣೆ ಸುರಿವರಯ್ಯೆ’ ಎಂದು ಉದ್ಗರಿಸಿದ್ದಾರೆ. ಹೆಣ್ಣನ್ನು ಸೊಸೆಯಾಗಿ […]

ರಾಷ್ಟ್ರದೇವಗೆ ಈ ಪ್ರಾಣ ದೀವಿಗೆ

ಚಿಂತನ - 0 Comment
Issue Date : 10..07.2014

‘ಪ್ರಾದುರ್ಭೂತೋಸ್ಮಿ ರಾಷ್ಟ್ರೇಸ್ಮಿನ್ ಕೀರ್ತಿಮೃದ್ಧಿಂ ದದಾತು ಮೇ’ ಇದು ‘ಶ್ರೀ ಸೂಕ್ತ’ದ ಏಳನೇ ಮಂತ್ರದ ಮಾತು. ‘ಅಹಂ ರಾಷ್ಟ್ರೀಸಂಗಮನೀ ವಸೂನಾಂ…’ ಇದು ಅಂಭೃಣೀ ಸೂಕ್ತದ ಉದ್ಗಾರ. ಇದಲ್ಲದೇ ಆಂಗಿರಸ ಧ್ರುವ ಋಷಿ ಕಂಡ ಆತ್ವಾ ಹಾರ್ಷಮಂತರೇಧಿ… ಎಂದು ಆರಂಭವಾಗುವ ಸೂಕ್ತವೊಂದನ್ನು ‘ರಾಷ್ಟ್ರಸೂಕ್ತ’ ಎಂದೇ ಋಗ್ವೇದದಲ್ಲಿ ಹೆಸರಿಸಲಾಗಿದೆ. ಅನುಷ್ಟುಪ್ ಛಂದಸ್ಸಿನ ಈ ಸೂಕ್ತದ ಧ್ರುವಂ ತೇ ರಾಜಾ ಎಂದು ಆರಂಭವಾಗುವ ಐದನೆಯ ಮಂತ್ರದಲ್ಲಿ ‘…ಧ್ರುವಂ ತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂ ಧಾರಯತಾಂ ಧ್ರುವಮ್’ ಎಂಬ ಉಲ್ಲೇಖವಿದೆ. ಇವೆಲ್ಲ, ಋಗ್ವೇದದ ಕೆಲವು ಉದಾಹರಣೆಗಳಷ್ಟೇ. […]

ಅರ್ಕನೊತ್ತಿನೊಳಿರ್ದು ದೀಪವೇತಕೆ?

ಚಿಂತನ - 0 Comment
Issue Date : 07.07.2014

‘ಅರ್ಕನೊತ್ತಿನೊಳಿರ್ದು ದೀಪವೇತಕೆ?’ (ಸೂರ್ಯನ ಹತ್ತಿರದಲ್ಲಿದ್ದು ದೀಪ ಯಾತಕ್ಕೆ?) ಎನ್ನುವುದು ರತ್ನಾಕರವರ್ಣಿಯ ‘ಭರತೇಶ ವೈಭವ’ದಲ್ಲಿ ಬರುವ ಒಂದು ವಾಕ್ಯಮಾಣಿಕ್ಯ. ಸೂರ್ಯನು (ದಿನಕರ, ಅರ್ಕ, ಭಾನು, ಆದಿತ್ಯ ಮುಂತಾದುವು ಇವನ ಇತರ ಹೆಸರುಗಳು) ಇಡಿಯ ಜಗತ್ತನ್ನೇ ಬೆಳಗುವ ಪ್ರಚಂಡವಾದ ಕಿರಣಗಳುಳ್ಳವನು. ಪ್ರಕಾಶದ ಜತೆಗೆ ಕಾವನ್ನೂ ನೀಡಿ ಪ್ರಪಂಚದ ಜೀವರಾಶಿಗಳಿಗೆ ಚೈತನ್ಯವನ್ನು ಕೊಡುವವನು. ಅಂತಹ ದಿವಾಕರನು ಸನಿಹದಲ್ಲೇ ಇರುವಾಗ ಕತ್ತಲೆಯನ್ನು ಹೋಗಲಾಡಿಸಲು ಯಾರೂ ಕೂಡ ಹುಡುಕಿಕೊಂಡು ಹೋಗುವ ಅವಶ್ಯಕತೆಯೇ ಇಲ್ಲ. ಅದೇ ರೀತಿಯಲ್ಲಿ ಅಜ್ಞಾನ ತಿಮಿರವನ್ನು ದೂರ ಮಾಡಬೇಕೆನ್ನುವ ಸಂದರ್ಭದಲ್ಲಿ ಸಮೀಪವೇ […]

ಆತ್ಮ ಆಧಾರ ಎಂದರೆ ಸೂರ್ಯ

ಚಿಂತನ - 0 Comment
Issue Date : 03.07.2014

ಋಗ್ವೇದ (1.115.1), ಅಥರ್ವ ಸಂಹಿತೆ (13.2.35) ಮತ್ತು ತೈತ್ತರೀಯ ಸಂಹಿತೆಯ (1.4.43)ಲ್ಲಿ ಕಂಡು ಬರುವ ಒಂದು ಮಂತ್ರ ಹೀಗಿದೆ. ‘ಚಿತ್ರಂ ದೇವಾನಾಮುದಗಾದ ನೀಕಂ ಚಕ್ಷುರ್ಮಿತ್ರಸ್ಯ ವರುಣಸ್ಯಾಗ್ನೇಃ’ಆ ಪ್ರಾದ್ಯಾವಾ ಪೃಥಿವೀ ಅಂತರಿಕ್ಷಂ ಸೂರ್ಯ ಆತ್ಮಾ ಜಗತಸ್ತಸ್ಥುಪಶ್ಚ ॥ ಇದನ್ನು ಸ್ಥೂಲವಾಗಿ ‘ದೇವತೆಗಳ ಅದ್ಭುತವಾದ ಮುಖ, ಮಿತ್ರ, ವರುಣ, ಅಗ್ನಿ ಇವರ ಕಣ್ಣುಗಳು ತೆರೆದಿವೆ. (ಉನ್ಮೀಲಿತವಾಗಿವೆ) ಸಕಲ ಚರಾಚರಗಳ ‘ಆತ್ಮ’ವಾದ ಸೂರ್ಯನು ಭೂಮಿ, ಅಂತರಿಕ್ಷ ಹಾಗೂ ಆಕಾಶವನ್ನು ವ್ಯಾಪಿಸಿದ್ದಾನೆ. ಆತ್ಮದ ಕುರಿತಾದ ಮೊದಲ ಉಲ್ಲೇಖ ಇದೇ ಎಂದು ಖಚಿತವಾಗಿ ಹೇಳಬಹುದು.ಈ […]

ಕರುಣೆಯ ಕಣ್ಣು

ಚಿಂತನ - 0 Comment
Issue Date : 01.07.2014

ಕರುಣೆ ಮಾನವೀಯವಾದ ಬಲು ದೊಡ್ಡ ಗುಣ. ಅದು ಒಳಗಿಲ್ಲವಾದರೆ ಹೃದಯಕ್ಕೆ ದೊಡ್ಡ ರೋಗ ಹತ್ತಿದ ಹಾಗೆ. ಹೃದಯಿಯಾದವನು ಮಾತ್ರ ಒಳ್ಳೆಯ ಮನುಷ್ಯನಾಗಬಲ್ಲ. ಆದ್ದರಿಂದಲೇ ಕರುಣೆ ಇಲ್ಲದ ವ್ಯಕ್ತಿಯನ್ನು ಪಾಷಾಣ (ಕಲ್ಲು) ಹೃದಯಿ ಎಂದು ಹಿರಿಯರು ಗುರುತಿಸುತ್ತಾರೆ. ಅನುಭವಿಗಳು ಹೇಳುವಂತೆ ಕರುಣೆಯು ಮನಸ್ಸಿನ ಹುಟ್ಟುಗುಣ. ಇನ್ನೊಬ್ಬನು ಕಷ್ಟದಲ್ಲಿರುವುದನ್ನು ಕಂಡ ಕೂಡಲೇ ಮನುಷ್ಯನ ಮನಸಾಕ್ಷಿಯು ಆತನಿಗೆ ನೆರವಾಗಲು ಒತ್ತಾಯಿಸುತ್ತದೆ. ಇದು ಸಹಜವಾದುದು. ಅಂತಹ ಸಂದರ್ಭದಲ್ಲಿ ನಿರ್ದಯಿಯಾಗಿ ವರ್ತಿಸಬೇಕಾದರೆ ಆತನು ಬಹಳಷ್ಟು ಪ್ರಯತ್ನ (ಕೃತಕವಾಗಿ) ಮಾಡಬೇಕಾಗುತ್ತದೆ. ಆದ್ದರಿಂದಲೇ ದಯೆಯೇ ಧರ್ಮದ ಮೂಲ […]

ಅರ್ಹತೆಗೆ ಮನ್ನಣೆ

ಚಿಂತನ - 0 Comment
Issue Date : 23.06.2014

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮತ್ತು ಬಡ್ತಿ ನೀಡುವ ಸಂದರ್ಭದಲ್ಲಿ ಯಾರಿಗೆ ನಿಜವಾಗಿಯೂ ಅರ್ಹತೆ, ಸಾಮರ್ಥ್ಯ ಇದೆಯೋ ಅಂತಹವರನ್ನು ಗಣನೆಗೆ ತೆಗೆದುಕೊಳ್ಳಬೇಕು. ಹಾಗಿದ್ದರೆ ಮಾತ್ರ ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ಸಮರ್ಥವಾಗಿಯೂ ಸಲೀಸಾಗಿಯೂ ನಿರ್ವಹಿಸುವುದರಿಂದ ದೇಶವು ಪ್ರಗತಿಯತ್ತ ಸಾಗಲು ಅನುಕೂಲವಾಗುತ್ತದೆ. ಬದಲಾಗಿ ಜಾತಿ, ವರ್ಗ, ಪ್ರಭಾವ, ಜ್ಯೇಷ್ಠತೆ ಮುಂತಾದವುಗಳ ಲೆಕ್ಕಾಚಾರ ಮಾಡಿದರೆ ಎಷ್ಟೋ ಹುದ್ದೆಗಳಲ್ಲಿ ಅಸಮರ್ಥರು ಸೇರಿಕೊಳ್ಳುತ್ತಾರೆ. ಕಾರ್ಯ ನಿರ್ವಹಣೆಯಲ್ಲಿ ದಕ್ಷತೆ, ಪ್ರಾಮಾಣಿಕತೆಗಳು ಇರುವುದಿಲ್ಲ. ಸರಿಯಾದ ಹುದ್ದೆಯಲ್ಲಿ ಸರಿಯಾದ ವ್ಯಕ್ತಿ ಇದ್ದಾಗ ಮಾತ್ರ ಕ್ಲುಪ್ತ ಸಮಯಕ್ಕೆ ಉತ್ತಮ ಗುಣಮಟ್ಟದ […]

ಬೀಳುವಳುಕಿಲ್ಲದ ಬದುಕು

ಚಿಂತನ - 0 Comment
Issue Date : 19.06.2014

ಪಂಚಭೂತಗಳಿಂದ ಹುಟ್ಟಿದ ಈ ಪ್ರಪಂಚ ಭೌತಿಕವಾಗಿ ಸುಖ ನೀಡುವ ತಾಣ ಎನಿಸಿದರೂ ಅದು ನೀಡುವ ಸುಖ ಶಾಶ್ವತವಲ್ಲ ಕ್ಷಣಿಕ, ಗಾಳಕ್ಕೆ ಸಿಕ್ಕಿದ ಮೀನು ಅದನ್ನು ಹುಳವೆಂದು ಭ್ರಮಿಸಿ ತಿನ್ನಲು ಎಳೆದಷ್ಟೂ ಗಾಳ ಆಳಕ್ಕೆ ಚುಚ್ಚಿಕೊಂಡು ಬಿಡಿಸಿಕೊಳ್ಳುವುದು ಅಸಾಧ್ಯ ಎಂದು ಅರಿಯುವ ವೇಳೆಗೆ ಕಾಲ ಮಿಂಚಿರುತ್ತದೆ. ಈ ಜೀವಿಗಳು ಹಾತೊರೆಯುವ ಸುಖವೂ ಇದೇ ತೆರನಾದುದು. ಮತ್ತೂ ಮತ್ತೂ ಆಸೆ ಹೆಚ್ಚಿದಂತೆಲ್ಲಾ ದುಃಖವನ್ನೇ ತಂದೊಡ್ಡುತ್ತದೆ ಈ ಭೌತಿಕ ಪ್ರಪಂಚ.ಇದೊಂದು ಬಲೆ. ಅದರಿಂದ ತಪ್ಪಿಸಿಕೊಳ್ಳಲೆಂದೇ ಭಕ್ತಿ, ಕರ್ಮ ಹಾಗೂ ಜ್ಞಾನಗಳೆಂಬ ದಿವ್ಯ […]

ಕ್ಷಮಾಪಣೆ

ಚಿಂತನ - 0 Comment
Issue Date : 16.06.2014

ಕ್ಷಮೆ ಎನ್ನುವುದು ಬಲು ದೊಡ್ಡ ಗುಣ. ಕ್ಷಮಾಯಾಚನೆ ಮಾಡುವುದು ಒಳ್ಳೆಯತನವಾದರೆ ಕ್ಷಮೆಯನ್ನು ಕೊಡುವುದಕ್ಕಿಂತಲೂ ಶ್ರೇಷ್ಠವಾದ ಗುಣ. ಏಕೆಂದರೆ ತಾನು ಮಾಡಿದ ತಪ್ಪು ಎಷ್ಟು ಗುರುತರವಾದುದು ಎಂಬುದರ ಅರಿವಾದಾಗ ಯಾರೇ ಆದರೂ ಕ್ಷಮೆ ಯಾಚಿಸಲು ಮುಂದಾಗುತ್ತಾರೆ. ಆದರೆ ತನಗಾದ ಅವಮಾನ, ನೋವು, ಸಂಕಟಗಳಿಂದ ನೊಂದ ವ್ಯಕ್ತಿ ಯಾವ ದ್ವೇಷವನ್ನೂ ಇಟ್ಟುಕೊಳ್ಳದೆ ಕ್ಷಮೆ ನೀಡಬೇಕಾದರೆ ಆತ ವಿಶಾಲ ಹೃದಯದವನೇ ಆಗಿರಬೇಕು. ‘ಓ ದೇವರೇ, ಅವರನ್ನು ಕ್ಷಮಿಸು. ತಾವು ಏನು ಮಾಡುತ್ತಿರುವೆವೆಂದು ಅವರು ಅರಿಯರು’ ಎನ್ನುವ ಯೇಸುವಿನ ಮಾತುಗಳು ಕ್ಷಮಾಗುಣಕ್ಕೆ ಅತ್ಯಂತ […]