ಜೀವದ ಜೀವ ಅರಿವ ಪರಿ

ಚಿಂತನ - 0 Comment
Issue Date : 13.06.2014

ಪ್ರಾಣಧಾರಣೆ ಮಾಡಿದ ಆತ್ಮ ಜೀವ ಎನ್ನುತ್ತದೆ ಗೀತೆ. ಜೀವ ಇದ್ದವ ಜೀವಿ. ಅದಿಲ್ಲದಿದ್ದರೆ ಶವ, ಇದ್ದರೆ ಶಿವ.ತಾನೇ ಕರ್ತೃ ತಾನೇ ಭೋಕ್ತೃ ಎಂಬ ಭ್ರಮೆ ಆವರಿಸುತ್ತದೆ ಜೀವಿಯಲ್ಲಿ. ದೇಹದ ಒಳಗೆ ಜೀವ ಇರುವಲ್ಲಿಯವರೆಗೆ ಆತ ನಾನು, ನನ್ನದು, ನನ್ನಿಂದ ಎಂದೆಲ್ಲ ಬಡಬಡಿಸುವನು. ಅದು ನೀರ ಮೇಲಣ ಗುಳ್ಳೆ ‘ಜಾತಸ್ಯ ಮರಣಂ ಧ್ರುವಂ’ ಎಂದಿದೆ ಗೀತೆ. ಕರ್ಮ ಬಂಧನದಿಂದ ಬದ್ಧವಾಗಿ ಜೀವವು ಸಂಸಾರದಲ್ಲಿ ಸಿಲುಕಿದೆ. ಹುಟ್ಟಿದ ಕೂಡಲೇ ಮಗು ಅಳುತ್ತದೆ, ಸಿಹಿ ಹಂಚುತ್ತೇವೆ. ನಾವು, ದೇಹದಿಂದ ಜೀವ ಮುಕ್ತವಾದಾಗ […]

ಪ್ರೋತ್ಸಾಹ

ಚಿಂತನ - 0 Comment
Issue Date : 09.06.2014

ಯಾವುದಾದರೂ ಒಳ್ಳೆಯ ಕೆಲಸವನ್ನು ಮಾಡುವವನಿಗೆ, ಹೊಸತಾಗಿ ಒಂದು ಕ್ಷೇತ್ರಕ್ಕೆ ಧುಮುಕುವ ಉತ್ಸಾಹಿಗೆ ಮತ್ತು ಯಾವುದನ್ನಾದರೂ ಕಲಿಯುವುದಕ್ಕೆ ಹಿಂದೇಟು ಹಾಕುವವನಿಗೆ ಪ್ರೋತ್ಸಾಹದ ನುಡಿಗಳ ಮತ್ತು ಉತ್ತೇಜನದ ವರ್ತನೆಯ ಆವಶ್ಯಕತೆ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ನಿರುತ್ಸಾಹದ ಮಾತುಗಳನ್ನಾಡುವುದು ಅಥವಾ ವ್ಯಕ್ತಿಯ ಉತ್ಸಾಹಕ್ಕೆ ತಣ್ಣೀರು ಎರಚುವುದು ಸಮಂಜಸವಲ್ಲ. ಬದಲಾಗಿ ಉತ್ತೇಜನದ ಮಾತುಗಳನ್ನಾಡಿದರೆ ಅಥವಾ ಜತೆಗೆ ನಾವೂ ಬರುತ್ತೇವೆಂದು ಹೇಳಿದರೆ ಅದರಿಂದಾಗುವ ಸತ್ಪರಿಣಾಮಕ್ಕೆ ಎಣೆಯೇ ಇಲ್ಲ. ರೋಬರ್ಟ್ ಫುಲ್ಟೋನ್ ಎಂಬ ಹೆಸರಿನ ಅಮೆರಿಕನ್ ಇಂಜಿನಿಯರ್ ಓರ್ವ ಸಂಶೋಧಕನೂ ಆಗಿದ್ದು ಅವನು ಉಗಿಯಿಂದ ನಡೆಯುವ […]

ಸತತ ಸಾಧನೆಯಿಂದ ಸಮೃದ್ಧ ಜ್ಞಾನ

ಚಿಂತನ - 0 Comment
Issue Date : 05.06.2014

‘ಜ್ಞಾನ’ವನ್ನು ‘ನಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ’ ಜ್ಞಾನಕ್ಕಿಂತ ಮಿಗಿಲಾದುದು, ಪವಿತ್ರವಾದುದು. ಬೇರೊಂದಿಲ್ಲ ಎಂದು ಹೇಳುತ್ತದೆ ಗೀತೆ. ಅದನ್ನೇ ಬ್ರಹ್ಮವೆನ್ನುತ್ತದೆ ಉಪನಿಷತ್ತು. ‘ಜ್ಞಾನಂ ವಿಜ್ಞಾನ ಸಹಿತಂ’ ಎನ್ನುವ ಶಾಸ್ತ್ರಕಾರರು ‘ಜ್ಞಾನಂ ವಿಜ್ಞಾನಂ ತನುತೇ’ ಎಂಬ ತೈತ್ತಿರೀಯದ ಮಾತನ್ನು ಅನುಮೋದಿಸುತ್ತಾರೆ.ಜ್ಞಾನ ಎಂದರೆ ಅರಿವು, ತಿಳಿವಳಿಕೆ. ಅದು ಗುರು ಅದೇ ಬೃಹತ್, ಅದೇ ಭೂಮ, ಅದೇ ಶಾಶ್ವತ ಸತ್ಯ. ಜ್ಞಾನಕ್ಕೆ ಸದ್ಯೋಮುಕ್ತಿಯ ಫಲ. ಜ್ಞಾನವೆಂದರೆ ಹೊಸದಾಗಿ ಏನನ್ನೋ ತಿಳಿಯುವುದಲ್ಲ, ಸಿದ್ಧವಾಗಿರುವುದನ್ನು ಅರಿತುಕೊಳ್ಳುವುದು. ಇದರಿಂದ ಭೇದವು ಬಾಧಿತವಾಗುತ್ತದೆ. ಭಗದನುಗ್ರಹದಿಂದಲೇ ಜ್ಞಾನದ ಸಂಪಾದನೆ ಸಾಧ್ಯ.ಜ್ಞಾನಕ್ಕೆ […]

ನಿಂದಕರಿರಬೇಕು

ಚಿಂತನ - 0 Comment
Issue Date : 02.06.2014

ಅನೇಕ ವೇಳೆ ರಾಜಕೀಯ ಮುತ್ಸದ್ದಿಗಳಿಗೆ ಪ್ರಯೋಜನ ಸಿಗುವುದು ಶ್ಲಾಘನೆ ಮಾಡುವವರಿಂದಲ್ಲ, ಟೀಕಿಸುವವರಿಂದ. ಏಕೆಂದರೆ ಹೊಗಳುವವನು ಪ್ರಶಂಸೆಯ ಭರದಲ್ಲಿ ಗುಣಗಳು ಇಲ್ಲದಾಗಲೂ ತನ್ನ ಕೆಲಸ ಮಾಡಬಹುದು. ದೋಷಗಳನ್ನು ಪೂರ್ತಿಯಾಗಿ ಮರೆಯಬಹುದು. ಆದರೆ ನಿಂದಕನು ಹಾಗಲ್ಲ. ದೋಷಗಳನ್ನು ಮತ್ತು ಲೋಪಗಳನ್ನು ಹುಡುಕಿ ಹುಡುಕಿ ಎತ್ತಿ ಹೇಳುತ್ತಾನೆ. ಸಮದರ್ಶಿಯಾದ ವಿಮರ್ಶಕ ಸಿಕ್ಕಿದರಂತೂ ಬಹಳಷ್ಟು ಪ್ರಯೋಜನ ಉಂಟು. ಆಡಳಿತಗಾರನು ಅಥವಾ ಅಧಿಕಾರಿಯು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಆದ್ದರಿಂದಲೇ ದಾಸವರೇಣ್ಯರು ‘ನಿಂದಕರಿರಬೇಕಿರಬೇಕು’ ಎಂದು ಘಂಟಾ ಘೋಷವಾಗಿ ಸಾರಿದರು. ಸಾರ್ವಜನಿಕ ಹಾಗೂ ಜವಾಬ್ದಾರಿಯುತ ಟೀಕೆಗಳ ಉಪಯುಕ್ತತೆಯನ್ನು […]

ಹಿರಿಯರ ಮೇಲ್ಪಂಕ್ತಿ

ಚಿಂತನ - 0 Comment
Issue Date : 26.05.2014

ಎಳೆಯ ಮಕ್ಕಳು ಮುಗ್ಧರು, ಅಜ್ಞಾನಿಗಳು. ತುಂಟತನ ಮಾಡುವುದು ಅವರ ಅಭ್ಯಾಸ. ತಮ್ಮ ಲೂಟಿಯಿಂದ ಆಗುವ ಹಾನಿಯೇನು ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳುವ ಸಾಮರ್ಥ್ಯ ಅವರಿಗಿಲ್ಲ. ಹಾಗಾಗಿ ಹಿರಿಯರು ಮನೆಯಲ್ಲಿ ಇಲ್ಲದ ವೇಳೆ ತಮಗೆ ತೋಚಿದ ಹಾಗೆ ವರ್ತಿಸುತ್ತಾರೆ. ಏನಾದರೂ ಉಪದ್ವ್ಯಾಪ ಮಾಡುತ್ತಾರೆ. ಇದರ ಫಲವಾಗಿ ದೊಡ್ಡವರಿಗೆ ಏನಾದರೂ ನಷ್ಟವಾಗಬಹುದು, ಕಷ್ಟವೂ ಆಗಬಹುದು. ಇಂತಹ ಸಂದರ್ಭದಲ್ಲಿ ಹಿರಿಯರಿಗೆ ಕೋಪ ಬರುವುದು ಸಹಜ. ತುಂಟತನ ಮಾಡಿ ಹಾನಿಗೆ ಕಾರಣರಾದ ಮಕ್ಕಳಿಗೆ ಏನು ಮಾಡಬೇಕು? ಬೆತ್ತದಿಂದ ಹೊಡೆಯಬೇಕೇ? ಕೋಣೆಯೊಳಗೆ ಕೂಡಿ ಹಾಕಿ ಹಿಂಸಿಸಬೇಕೆ? […]

ಆತ್ಮ ಅರಿಯಲು ಆತ್ಮದರಿವು

ಚಿಂತನ - 1 Comment
Issue Date : 22.05.2014

‘ಆತ್ಮ’ ಬರಿಗಣ್ಣಿಗೆ ಗೋಚರಿಸದ ಸತ್ತ್ವ – ಸತ್ಯ. ಅದನ್ನು ‘ಸ್ವರೂಪ’ ಎಂದು ವೇದಾಂತವು ಬಣ್ಣಿಸುತ್ತದೆ. ‘ತಾನು’ ಎನ್ನುವುದು ‘ಸ್ಥೂಲಾರ್ಥ’ ವಾದರೆ ‘ತನ್ನ ಸ್ವರೂಪ’ ಎಂಬುದು ಸೂಕ್ಮ ಅರ್ಥ ಎಂದಿದ್ದಾರೆ ‘ಅರಿತವರು’.‘ಆತ್ಮ’ ಎಂದರೆ ಎಲ್ಲದರ ‘ಸಾರ’ , ‘ಪರಮಾರ್ಥ ಸತ್ಯ’ ಎಂದು ಛಾಂದೋಗ್ಯ ಉಪನಿಷತ್ತು ವರ್ಣಿಸುತ್ತದೆ.‘ಆತ್ಮ’ವನ್ನು ಮಹಾಂತ, ಹುಟ್ಟು – ಮುಪ್ಪು – ಸಾವುಗಳಿಲ್ಲ ದವನು ಎಂದು ‘ಬೃಹದಾರಣ್ಯಕ’ದ ವಿವರಣೆ. ಆತ್ಮನಿಗಿಂತ ಲೋಕ, ದೇವತೆಗಳು ವೇದಗಳು ಹಾಗೂ ಪ್ರಾಣಿಗಳು ಬೇರೆ ಎಂದು ಅರಿತವನನ್ನು ಲೋಕ, ದೆವತೆಗ್ಝಲು ವೇದಗಳು ಹಾಗೂ […]

ತಾಯ್ತನದ ಹಿರಿಮೆ

ಚಿಂತನ - 0 Comment
Issue Date : 19.05.2014

‘ತಾನು ಎಲ್ಲೆಲ್ಲೂ ಇರಲಾರನಾದ್ದರಿಂದ ದೇವರು ತಾಯಿಯನ್ನು ಸೃಷ್ಟಿಸಿದ’ಎಂಬ ಯಹೂದಿ ಗಾದೆ ತಾಯಿಯ ಶ್ರೇಷ್ಠತೆಯನ್ನು ಸಾರುತ್ತದೆ. ಆದ್ದರಿಂದಲೇ ಭಾರತೀಯರು ‘ಮಾತೃದೇವೋಭವ’ ಎನ್ನುತ್ತಾ ಅಮ್ಮನಿಗೆ ಮೊದಲು ನಮಸ್ಕಾರ ಸಲ್ಲಿಸುತ್ತಾರೆ. ‘‘ಅಡುಗೆಯವಳು, ಚಾಲಕಿ, ದೀದಿ, ಪರಿಚಾರಿಣಿ, ಮನೆಯ ನಿರ್ದೇಶಕಿ-ಇವೆಲ್ಲವುಗಳ ಕಲಸು ತಾಯಿ. ಅಗತ್ಯಕ್ಕಾಗಿ ಸೃಷ್ಟಿಯಾದವಳು ’’ ಎಂದು ಸಾಹಿತಿಯೊಬ್ಬ ಹೇಳಿರುವುದು ತುಂಬಾ ಸಮಂಜಸವಾಗಿದೆ. ಏಕೆಂದರೆ ಮಕ್ಕಳನ್ನು ಹೆತ್ತ ಮಾತ್ರಕ್ಕೆ ಆಕೆಯ ಹೊಣೆಗಾರಿಕೆ ಮುಗಿಯುವುದಿಲ್ಲ. ಮನೆಯ ಎಲ್ಲಾ ಕೆಲಸಕಾರ್ಯಗಳನ್ನು ಆಕೆ ಜಾಗರೂಕತೆಯಿಂದ , ಜವಾಬ್ದಾರಿಯುತವಾಗಿ ನಿರ್ವಹಿಸುವುದು ಅಗತ್ಯವಾಗಿದೆ. ಆಧುನಿಕ ಜಗತ್ತಿನಲ್ಲಿ ಮಹಿಳೆಯಾದವಳು ಮನೆಯೊಳಗಿನ […]

ಶುಚಿತ್ವ ಮತ್ತು ಭಕ್ತಿ

ಶುಚಿತ್ವ ಮತ್ತು ಭಕ್ತಿ

ಚಿಂತನ - 0 Comment
Issue Date : 05.05.2014

ದೇವಾಲಯಗಳ ಒಳಗೆ ಪ್ರವೇಶಿಸುವಾಗ ಭಕ್ತ ಜನರು ಶುಚಿತ್ವದ ಕಡೆಗೆ ಗರಿಷ್ಠ ಗಮನ ಹರಿಸಬೇಕೆಂದು ಪೂರ್ವಜರು ನಿಯಮ ಮಾಡಿದ್ದರು. ಆದ್ದರಿಂದ ಪ್ರತಿಯೊಂದು ದೇವಸ್ಥಾನದ ಎದುರು ಒಂದು ನದಿ, ಕೆರೆ ಅಥವಾ ಸರೋವರ ಇರುತ್ತಿತ್ತು. ಭಕ್ತರು ತಣ್ಣೀರಿನಲ್ಲಿ ಸ್ನಾನ ಮಾಡಿ ಅಥವಾ ಸ್ನಾನವಾಗಿದ್ದರೆ ಕೈ ಕಾಲು ತೊಳೆದುಕೊಂಡು ಮಂದಿರದ ಒಳಕ್ಕೆ ಹೋಗುತ್ತಿದ್ದರು. ಬಾಹ್ಯ ಶುಚಿತ್ವ ಮಾತ್ರ ಇದ್ದರೆ ಸಾಲದು. ಆಂತರಂಗಿಕವಾದ ಪರಿಶುದ್ಧತೆ ಕೂಡ ಅವಶ್ಯ ಎಂದು ಅವರು ನಂಬಿದ್ದರು. ಮೈ ಕೈ ಸ್ವಚ್ಛವಾಗಿದ್ದರೂ ಸಹ ಮನಸ್ಸಿನೊಳಗೆ ಕೆಟ್ಟ ಯೋಚನೆಗಳ ಕೊಳಕು […]

ಔದಾರ್ಯದ ಕೊಡುಗೆ

ಚಿಂತನ - 0 Comment
Issue Date : 28.04.2014

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ವಿವಿಧ ಸಂಸ್ಥಾನಗಳನ್ನು ಆಳುತ್ತಿದ್ದ ರಾಜ ಮಹಾರಾಜರುಗಳ ಪೈಕಿ ಪಟಿಯಾಲದ ಮಹಾರಾಜ ಭೂಪೀಂದರ್ ಸಿಂಗ್ ಅವರದು ವಿಶಿಷ್ಟ ವ್ಯಕ್ತಿತ್ವ. ಅವರು ಬದುಕಿ ಉಳಿದದ್ದು ಕೇವಲ ನಲವತ್ತೇಳು ವರ್ಷ. ಆದರೆ ಈ ಅಲ್ಪಾವಧಿಯಲ್ಲಿ ಓರ್ವ ವ್ಯಕ್ತಿಯಾಗಿ ಏನನ್ನೆಲ್ಲಾ ಸಾಧಿಸಬಹುದೋ ಅಷ್ಟನ್ನೂ ಅವರು ಪ್ರಯತ್ನಪೂರ್ವಕ ಸಾಧಿಸಿದರು. ರಾಜನಾಗಿದ್ದುದರಿಂದ ಆಡಳಿತದಲ್ಲಿ ಅವರಿಗೆ ಸಾಕಷ್ಟು ಆಸಕ್ತಿ ಇತ್ತು. ಅನುಭವಿಗಳಾದ ಮಂತ್ರಿಗಳನ್ನು ಮತ್ತು ಅಧಿಕಾರಿಗಳನ್ನು ನೇಮಿಸಿ ಅವರ ಸಲಹೆಯಂತೆ ರಾಜ್ಯವನ್ನು ಆಳುತ್ತಿದ್ದ ಅವರು ಯುದ್ಧ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದರು. ಉತ್ತಮ ಕ್ರೀಡಾಪಟುವಾಗಿದ್ದು […]

ದೈವೀಮನದೊಡೆಯ ಆನಂದಸಾಗರ: ಇಂದ್ರ

ಚಿಂತನ - 0 Comment
Issue Date : 23.04.2014

ಮನಸ್ಸು ನಮಗೆ ಇರುವುದರಿಂದಲೇ ನಾವು ಮನುಷ್ಯರು, ಮಾನವರು. ಮನ್ ವಿಚಾರಿಸು ಎಂಬ ಅರ್ಥ ವಿಶೇಷ ನೀಡುವ ಧಾತುವಿನಿಂದ ಅರಳಿಬಂದ ಪದ ಇದು. ನಮ್ಮ ಒಳಗೆ ಇರುವ ಮನಸ್ಸು ಸಾಮಾನ್ಯವಾದುದು ಖಂಡಿತ ಅಲ್ಲ. ಅದು ದೈವೀ ಸ್ವರೂಪ ಹೊಂದಿದೆ. ಉಜ್ವಲವಾದ ಬೆಳಕು ಅದು. ಅದಕ್ಕೆ ಅದೇ ಹೋಲಿಕೆ ಎಂದರೆ ತಪ್ಪಾಗದು. ಇಂದ್ರ ಈ ದೈವೀ ಮನಸ್ಸಿನ ಒಡೆಯ ಎಂದು ಋಗ್ವೇದ ಸಾರುತ್ತದೆ. ಇಲ್ಲಿ ಇಂದ್ರ ಪರವಾದ ಇನ್ನೂರೈವತ್ತಕ್ಕೂ ಹೆಚ್ಚು ಸೂಕ್ತಗಳಿವೆ. ಮನುಷ್ಯರ ಮನಸ್ಸು ರೂಪಿಸುವಲ್ಲಿ ದೈವೀ ಮನಸ್ಸಿನ ಒಡೆಯನಾದ […]