ನಿಸ್ಪೃಹ ರಾಜಕಾರಣ

ಚಿಂತನ - 0 Comment
Issue Date : 21.04.2014

‘ಅಧಿಕಾರವು ಜನರನ್ನು ಭ್ರಷ್ಟರನ್ನಾಗಿ ಮಾಡುತ್ತದೆ. ಸರ್ವಾಧಿಕಾರವಂತೂ ಅವರನ್ನು ಎಲ್ಲ ರೀತಿಯಿಂದಲೂ ಕೆಡಿಸುತ್ತದೆ’ ಎಂಬ ಮಾತಿದೆ. ಅಧಿಕಾರದ ದಾಹ ಅತಿಯಾಗಿರುವ ರಾಜಕಾರಣಿಗಳು ಯಾವುದೇ ದೇಶದಲ್ಲಿ ಉನ್ನತ ಅಧಿಕಾರವನ್ನು ಪಡೆಯಲು ಮತ್ತು ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳಲು ಯಾವ ತಂತ್ರವನ್ನು ಬೇಕಾದರೂ ಹೂಡುತ್ತಾರೆ. ತಮ್ಮ ಪಕ್ಷದಲ್ಲಿ ಬಹುಮತದ ಬೆಂಬಲ ಇಲ್ಲದಿದ್ದಾಗ ಬೇರೆ ಪಕ್ಷಗಳ ಸಾಂಸದರನ್ನು ಹೇಗಾದರೂ ಮಾಡಿ ಕೊಂಡುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಏನಕೇನ ಪ್ರಕಾರೇಣ ಅಧಿಕಾರವನ್ನು ಪ್ರಾರ್ಥಿಸಿಕೊಳ್ಳುವುದು ಸ್ವಾರ್ಥಿ ರಾಜಕಾರಣಿಗಳ ಹವ್ಯಾಸ, ಚಟ. ಇದರ ಉದ್ದೇಶ ಪ್ರಜೆಗಳ ಉದ್ಧಾರವೆಂದಾಗಲೀ ದೇಶಸೇವೆಯೆಂದಾಗಲೀ […]

ಹಸಿದವರಿಗೆ ಅನ್ನ ಕೊಡು

ಚಿಂತನ - 0 Comment
Issue Date : 14.04.2014

‘ಅನ್ನ ದಾನಕ್ಕಿಂತ ಇನ್ನು ದಾನಗಳಿಲ್ಲ’ ಎನ್ನುವುದೇನೋ ನಿಜ. ಏಕೆಂದರೆ ಮನುಷ್ಯನ ಬಯಕೆಗಳಲ್ಲಿ ಅತ್ಯಂತ ಮುಖ್ಯವಾದುದು ಅನ್ನ. ಆದರೆ ಇದನ್ನು ಯಾರಿಗೆ ದಾನ ಮಾಡಬೇಕು ಎನ್ನುವುದೇ ಎಲ್ಲರನ್ನು ಕಾಡುವ ಪ್ರಶ್ನೆ. ನಿಜವಾಗಿ ಅನ್ನವನ್ನು ಇಕ್ಕಬೇಕಾದದ್ದು ಹಸಿದವರಿಗೆ. ಹೊಟ್ಟೆ ತುಂಬಿದ ಅಥವಾ ಮನೆಯಲ್ಲಿ ಧಾರಾಳ ಆಹಾರ ಪದಾರ್ಥಗಳಿರುವ ವ್ಯಕ್ತಿಗಳಿಗೆ ಒತ್ತಾಯಪೂರ್ವಕ ಊಟವನ್ನೋ ಫಲಾಹಾರವನ್ನೋ ಕೊಡುವುದರಿಂದ ಅವರ ಆರೋಗ್ಯವೂ ಕೆಡುತ್ತದೆ, ಒಳ್ಳೆಯ ಆಹಾರವೂ ನಷ್ಟವಾಗುತ್ತದೆ. ಈ ವಿಚಾರವನ್ನು ಅನೇಕರು ಚಿಂತನೆಗೆ ಒಳಪಡಿಸುವುದೇ ಇಲ್ಲ. ಬಂಧುಗಳನ್ನೋ, ಮಿತ್ರರನ್ನೋ, ಪ್ರತಿಷ್ಠಿತರನ್ನೋ ಮನೆಗೆ ಕರೆದು ಅವರಿಗೆ […]

ದಾರಿ ತೋರುವ ದೇವನ ನೆಲೆ ವೇದ

ಚಿಂತನ - 0 Comment
Issue Date : 11.04.2014

‘ವೇದ’ ಎಂಬುದೇ ಅಚ್ಚರಿಯ ಆಗರ. ಅಖಂಡ ಅರಿವಿನ ರಾಶಿ ಅದು. ಒಂದು ನಿಟ್ಟಿನಲ್ಲಿ ನೋಡಿದರೆ – ಅಲ್ಲಿರುವ ವರ್ಣಗಳನ್ನು ಹಿಂದೆ ಮುಂದೆ ಮಾಡಿದರೆ ಸಾಕು ದೇವಪದದ ಉದಯ ಅದು ಬೆಳಕಿನ ಪುಂಜ. ದೇವ ಪದ ಸಹ ದಿವ್ ಪ್ರಕಾಶೇ ಬೆಳಗು ಎಂಬ ಅರ್ಥದ ಧಾತುವಿನಿಂದಲೇ ಹುಟ್ಟಿದ ಪದ. ಯಾವ ಅಕ್ಷರ, ಪದ, ಪದಪುಂಜಗಳೇ ಆಗಲಿ ಅಲ್ಲೊಂದು ವಿಶಿಷ್ಟ ಎನ್ನಿಸುವ ಅರ್ಥ ಸ್ವಾರಸ್ಯವನ್ನು ಹೊಂದಿಯೇ ಇರುವುದನ್ನು ಅರಿತವರು ಮಾತ್ರವೇ ಬಲ್ಲವರು! ಹಾಗೆಂದೇ ಅಕ್ಷರ (ನಾಶವಿಲ್ಲದ್ದು)ವನ್ನೇ ಬ್ರಹ್ಮ (ಜ್ಞಾನ – […]

ಎದುರಾಳಿಗೆ ತಕ್ಕ ಆಟಗಾರ

ಚಿಂತನ - 0 Comment
Issue Date : 09.04.2014

ಯೋಧನಾಗಲಿ, ಆಟಗಾರನಾಗಲಿ ಎದುರಾಳಿಯ ಸ್ಥಿತಿಗತಿಗಳನ್ನು ನೋಡಿಕೊಂಡು ಕಣಕ್ಕಿಳಿಯುವುದು ಧರ್ಮ. ಎದುರಾಳಿಯ ಆಯುಧ ಕೆಟ್ಟು ಹೋಗಿದ್ದರೆ, ಅವನು ಬರಿಗೈಯಲ್ಲೇ ಯುದ್ಧ ಮಾಡಬೇಕಾದ ಅನಿವಾರ್ಯತೆ ಒದಗಿದರೆ ಯೋಧನಾದವನು ಬರಿಗೈಯಲ್ಲೇ ಹೋರಾಟಕ್ಕೆ ತೊಡಗಬೇಕು. ನಿರಾಯುಧನನ್ನು ಆಯುಧ ಮುಖಾಂತರ ಎದುರಿಸುವುದು ನ್ಯಾಯವಲ್ಲ. ಹಾಗೆಯೇ ಕ್ರೀಡಾಪಟು ಕೂಡ. ಎದುರಾಳಿಯ ಶಕ್ತಿ – ದೌರ್ಬಲ್ಯ ನೋಡಿಕೊಂಡು ಆಟಕ್ಕೆ ತೊಡಬೇಕು. ಗಾಂಧೀಜಿಯರ ಜೀವನದಲ್ಲಿ ನಡೆದ ಘಟನೆಯೊಂದು ಈ ನೀತಿಯನ್ನು ದೃಢೀಕರಿಸುತ್ತದೆ.ಚಲೇಜಾವ್ ಚಳುವಳಿಯ ಕಾಲ. ಮಹಾತ್ಮಾ ಗಾಂಧಿಯವರನ್ನು ಬ್ರಿಟಿಷರು ಬಂಧಿಸಿ ಸೆರೆಮನೆಯೊಂದರಲ್ಲಿ ಇಟ್ಟಿದ್ದರು. ಅದೇ ಕಾರಾಗೃಹದಲ್ಲಿ ಸರೋಜಿನಿ ನಾಯ್ಡು […]

ಕೊಡುವುದು ಪಡೆಯುವ ದಾರಿ

ಚಿಂತನ - 0 Comment
Issue Date : 03.04.2014

ನಮ್ಮ ಅಸ್ತಿತ್ವದ ಮೂಲಾಧಾರವೇ ಜ್ಞಾನ. ಅದು ನಿಜವಾದ ಸಂಪತ್ತು. ಅದನ್ನೇ ದೈವೀ ಸಂಪತ್ತು ಎಂದು ವೇದಗಳು ವರ್ಣಿಸಿವೆ. ಈ ಸಂಪತ್ತು ಕೇವಲ ಭೌತಿಕವಾದುದಲ್ಲ. ಭೌತಿಕ ಸಂಪತ್ತು ಎಂದೂ ಶಾಶ್ವತವಲ್ಲ. ಅದು ಕ್ಷಣಿಕ, ನಶ್ವರ. ಇದ್ದಂತೆ ಭಾಸವಾಗುತ್ತದೆ, ಆದರೆ ಅದು ಇರುವುದೇ ಇಲ್ಲ. ಕನ್ನಡಿಯಲ್ಲಿನ ಗಂಟು. ಕಣ್ಣಿಗೆ ಕಂಡರೂ ಅದು ಸತ್ಯವಲ್ಲ. ಆದರೆ ಸತ್ಯ ಮಾತ್ರ ಹಾಗಲ್ಲ. ಅದು ಶಾಶ್ವತ. ಕತ್ತಲು ತುಂಬಿದ ಕೋಣೆಯಲ್ಲಿ ಇರುವ ಯಾವುದೂ ನಮಗೆ ಕಾಣಿಸದು. ಹಾಗೆಂದು ಅಲ್ಲಿ ಏನೂ ಇಲ್ಲ ಎನ್ನುವಂತಿಲ್ಲ. ಇರುವುದು […]

ಸಮಯಕ್ಕೆ ಒದಗುವ ವಸ್ತು

ಚಿಂತನ - 0 Comment
Issue Date :

ಮನುಷ್ಯನ ಪ್ರಯೋಜನಕ್ಕೆ ಒದಗಿಬರುವ ವಸ್ತು ಆಕಾರದಲ್ಲೆಲ್ಲೋ ಸ್ವರೂಪದಲ್ಲೇ ದೊಡ್ಡದಾಗಿರಬೇಕೆಂಬ ನಿಯಮವೇನೂ ಅಲ್ಲ. ವಸ್ತುವಿನ ಪ್ರಾಮುಖ್ಯವು ನಿಂತಿರುವುದು ಅದರ ಉಪಯುಕ್ತತೆಯ ಆಧಾರದ ಮೇಲೆ. ಬಾವಿಯಿಂದ ನೀರು ಎತ್ತುವುದಕ್ಕೆ ಕೊಡಪಾನವೇ ಬೇಕು. ಆದರೆ ಬಾಯಾರಿದಾಗ ಕುಡಿಯುವುದಕ್ಕೆ ಒಂದು ಲೋಟ ಸಾಕು. ಸಾರು ಬಡಿಸಲಿಕ್ಕೆ ಚಮಚವಷ್ಟೇ ಸಾಕು. ಕೊಡಲಿ – ಕತ್ತಿ – ಚೂರಿಗಳು ಕೂಡ ಬೇರೆಬೇರೆ ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತವೆ. ಜನರಲ್ ಕಾರ್ಯಪ್ಪನವರ ಜೀವನದಲ್ಲಿ ನಡೆದ ಘಟನೆಯೊಂದು ಜೇಬಿನೊಳಗೆ ಹಿಡಿಸುವ ಮೇಣದ ಬತ್ತಿಯ ಉಪಯುಕ್ತತೆಯನ್ನು ಸಾರಿ ಹೇಳುತ್ತದೆ. ಜನರಲ್ ಕೆ.ಎಂ. […]

‘ಆನಂದ’ದ ಪ್ರಾರ್ಥನೆಯ ಪರಿ

ಚಿಂತನ - 0 Comment
Issue Date : 19.03.2014

‘ಭದ್ರಂ ಕರ್ಣೇ ಭಿಃ ಶೃಣುಯಾಮ ದೇವಾ’ ಎಂದು ಮೊದಲಾಗುವ ಋಗ್ವೇದ ಮಂತ್ರ (1.89.9) ಒಂದಿದೆ. ಪ್ರಶ್ನೆ, ಮಾಂಡೂಕ್ಯ, ನೃಸಿಂಹ ಪೂರ್ವತಾಪನಿ ಹಾಗೂ ಮುಕ್ತಿ ಉಪನಿಷತ್ತುಗಳನ್ನು ಅಲ್ಲದೇ ಸಾಮವೇದ (1224), ವಾಜಸನೇಯಿ ಸಂಹಿತಾ (25.21) ತೈತ್ತರೀಯ ಆರಣ್ಯಕ (1.1.1) ಮತ್ತು ಐತರೇಯ ಆರಣ್ಯಕ (1.1)ಗಳಲ್ಲೂ ಈ ಮಂತ್ರವನ್ನು ಕಾಣಬಹುದು.‘ಒಳಿತು’ ಮಾತ್ರ ‘ಆನಂದ’ವನ್ನು ನೀಡಬಲ್ಲದು. ಅದು ಮಾತ್ರ ಶಾಶ್ವತ ಆನಂದದ ದಾರಿ. ‘ಒಳ್’ ಎಂದರೆ ‘ಇರು’ ಎಂಬ ಅರ್ಥ ಕನ್ನಡದಲ್ಲಿರುವುದನ್ನು ಗಮನಿಸಿ. ‘ಒಳಿತು’ ಮಾತ್ರ ಎಂದೂ ಇರುತ್ತದೆ (ಶಾಶ್ವತವಾಗಿ) ಎಂಬುದು […]

ಹೃದಯ ವೈಶಾಲ್ಯ

ಚಿಂತನ - 0 Comment
Issue Date : 17.03.2014

ಎತ್ತರಕ್ಕೆ ಏರಿದವರು ಅಹಂಕಾರ, ಸ್ವಪ್ರತಿಷ್ಠೆಗಳಿಗೆ ಬಲಿಯಾಗಬಾರದು. ‘ಏರಿದವನು ಚಿಕ್ಕವನಿರಬೇಕೆಲೆ’ ಎಂಬ ಕವಿವಾಣಿ ಎಂದೆಂದಿಗೂ ಸುಳ್ಳಾಗದು. ಇದನ್ನು ಸ್ಪಷ್ಟಪಡಿಸುವ ಘಟನೆಯೊಂದು ಶ್ರೇಷ್ಠ ವಿಜ್ಞಾನಿಯೊಬ್ಬರ ಜೀವನದಲ್ಲಿ ನಡೆಯಿತು.ಆಲ್ಬರ್ಟ್ ಐನ್‌ಸ್ಟೀನ್ ಅಸಾಧಾರಣ ಪ್ರತಿಭಾವಂತ. ಬಡ ಕುಟುಂಬದಲ್ಲಿ ಜನಿಸಿದ್ದರಿಂದ ವೈಜ್ಞಾನಿಕ ಪ್ರಯೋಗಗಳಿಗೆ ಬೇಕಾದ ಅತ್ಯಾಧುನಿಕ ಪ್ರಯೋಗ ಶಾಲೆಯಾಗಲೀ ಇರಲಿಲ್ಲ. ಆದರೆ ಭೌತಶಾಸ್ತ್ರದ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯಾವುದರ ಚಲನೆಯೂ ಸ್ವಯಂಪೂರ್ಣವಲ್ಲ. ಪ್ರತಿಯೊಂದು ಚಲನೆಯೂ ಇನ್ನೊಂದರ ಜತೆ ಹೋಲಿಸಿದ್ದು. ಎಂದರೆ ಪ್ರತಿ ಚಲನೆಯೂ ಸಾಪೇಕ್ಷವಾದುದು. ಪಥದಲ್ಲಿ ಸುತ್ತುವ ಪ್ರತಿಯೊಂದು […]

ಆನಂದ ಎಂದರೆ ‘ಸಾಮರ್ಥ್ಯ ಸಂಪನ್ನ ಸಮಾಜ ನಿರ್ಮಿತಿ’

ಚಿಂತನ - 0 Comment
Issue Date : 13.03.2014

ಋಗ್ವೇದ ಋಷಿ ಗೋತಮ ರಾಹೂಗಣ ಮಾಡಿದ ಪ್ರಾರ್ಥನೆ (1.89.1) ‘‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತೋದಬ್ದಾಸೋ ಅಪರೀತಾಸ ಉದ್ಬಿದಃ ದೇವಾ ನೋ ಯಥಾ ಸದಮಿದ್‌ವೃಧೇ ಅಸನ್ನಪ್ರಾಯುವೋ ರಕ್ಷಿತಾರೋ ದಿವೇ ದಿವೇ॥ಸೃಷ್ಟಿಯ ಮೂಲವೇ ‘ಪರಮಾನಂದ’. ಹಾಗಾಗಿ ಆನಂದಮಯ ಈ ಜಗಹೃದಯ. ನಮ್ಮ ಬದುಕಿನ ಪರಮ ಉದ್ದೇಶವೆಂದರೆ ‘ಆನಂದ’ವನ್ನು ಹೊಂದುವುದೇ ಆಗಿದೆ. ಇದೇನೂ ಸುಲಭ ಸಂಗತಿಯಲ್ಲ. ಮೊದಲು ‘ಎಲ್ಲೆಡೆ ತುಂಬಿರುವ ಆನಂದ’ವನ್ನು ‘ಗುರುತಿಸುವ’ ‘ಶಕ್ತಿ’ಯನ್ನು ನಾವು ಸಂಪಾದಿಸಬೇಕು. ಇದಕ್ಕೂ ವಿಫುಲ ಸಿದ್ಧತೆ, ದಣಿವರಿಯದ – ಎಡೆಬಿಡದ ಸತತ ಸಾಧನೆ ಬೇಕು. […]

ವಿಷ್ಣು ಸಹಸ್ರನಾಮದ ಮಹತ್ವ

ಚಿಂತನ - 0 Comment
Issue Date : 05.03.2014

ಮನುಷ್ಯನ ಆಯುಃ ಪ್ರಮಾಣವನ್ನು 100 ವರ್ಷಗಳು ಎಂದಿದ್ದಾರೆ. ಇದರಲ್ಲಿ 36000 ಹಗಲುಗಳು 36000 ರಾತ್ರಿಗಳು ಸೇರಿವೆ. ನಮ್ಮ ದೇಹದಲ್ಲೂ ‘ದ್ವಾಸಪ್ತತಿ ಸಹಪ್ರಾಣಿ ನಾಡ್ಯಃ’ – ಎಂದರೆ 72000 ನಾಡಿಗಳಿವೆ ಎಂದಿದ್ದಾರೆ ಋಷಿಗಳು. ‘ಅಗ್ನಿ ಪುರಾಣ’, ‘ಶಾರದಾತಿಲಕ’ ಮುಂತಾದಲ್ಲಿ ಈ ವಿವರಗಳು ಲಭ್ಯ. ನಮ್ಮ ಆಯುಃ ಪ್ರಮಾಣದ ಹಗಲು – ರಾತ್ರಿಗಳನ್ನು ಸೇರಿಸಿದರೆ ಬರುವ ಸಂಖ್ಯೆ ಸಹ 72,000! ದೇಹದ ಮುಖ್ಯ ನಾಡಿಗಳ ವಿವಕ್ಷೆಯಿಂದ ಈ ಸಂಖ್ಯೆ. ಹಾಗೆಂದೇ ‘ನಾಡ್ಯೋನಂತಾಃ’ – ನಾಡಿಗಳು ‘ಅನಂತ’ ಷಟ್ಪಶ್ನ ಎಂಬ ಉಪನಿಷತ್ತು […]