ತೃಪ್ತಿ ಇದ್ದಲ್ಲಿ ಸಂತೋಷ

ಚಿಂತನ - 0 Comment
Issue Date : 03.03.2014

ಅಣ್ಣ-ತಮ್ಮ ಇಬ್ಬರೂ ಒಂದೇ ಊರಿನಲ್ಲಿ ಮನೆ ಮಾಡಿಕೊಂಡು ಜೀವಿಸುತ್ತಿದ್ದರು. ಯಾವುದೋ ಕಾರಣಕ್ಕೆ ಅಣ್ಣ ಬಡವನಾಗಿದ್ದ; ತಮ್ಮ ಶ್ರೀಮಂತನಾಗಿದ್ದ. ಬಡತನ ಇದ್ದುದರಿಂದ ಅಣ್ಣನೂ ಅವನ ಹೆಂಡತಿಯೂ ಕಷ್ಟಪಟ್ಟು ದುಡಿಯುತ್ತಿದ್ದರು. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ಅಷ್ಟೋ ಇಷ್ಟೋ ಕೈಗೆ ಬಂದ ಸಂಪಾದನೆಯಲ್ಲಿ ಗಂಜಿ ಕುಡಿದು ತೃಪ್ತಿಯಿಂದ ಇದ್ದರು. ಅವರ ಕುಟುಂಬದಲ್ಲಿ ನೆಮ್ಮದಿ – ಸಂತೋಷಗಳು ನೆಲಸಿದ್ದವು. ಆದರೆ ತಮ್ಮನ ವಿಷಯ ಹಾಗಲ್ಲ. ಧಾರಾಳ ಹಣವಿದ್ದರೂ ಮನಸ್ಸಿಗೆ ತೃಪ್ತಿ ಇರಲಿಲ್ಲ. ಇನ್ನಷ್ಟು ಸೌರ್ಕರ್ಯ, ಸಂಪತ್ತುಗಳು ಬೇಕೆಂಬ ಆಸೆ ಇತ್ತು. ಕ್ಷುಲ್ಲಕ […]

‘ಸೋಮ’ ಎಂದರೆ ‘ಆನಂದ’

ಚಿಂತನ - 0 Comment
Issue Date : 26.02.2014

‘ಸೋಮ’ ಎಂದ ಕೂಡಲೇ ನಮ್ಮ ಮನಸ್ಸು ಅದೊಂದು ‘ರಸ’ ಕುಡಿದರೆ ‘ಮತ್ತು’ ತರಿಸುವಂಥದು ಎಂಬ ‘ಅರ್ಥ’ದತ್ತ ಹರಿದು ಬಿಡುತ್ತದೆ! ಐರೋಪ್ಯರು, ಪಾಶ್ಚಿಮಾತ್ಯರು ತಮ್ಮ ‘ಆಳ’ ‘ಅರಿವು’ ‘ಇರುವಷ್ಟರಲ್ಲಿ’ ‘ವೇದ’ಕ್ಕೆ ‘ವ್ಯಾಖ್ಯಾನ’ ಬರೆದುದರ ಫಲ ಇದು. ಅವರು ಹೀಗೆ ‘ದಾರಿ’ ತಪ್ಪಲು ಕಾರಣವೆಂದರೆ ‘ಸುತ’ ಎಂದರೆ ‘ಮರ್ದನ’ ಅಥವಾ ‘ಹಿಂಡುವುದು’ ಎಂಬ ಅರ್ಥ ಕೊಡುವ ‘ಪದ’ದ ಜೊತೆಗೆ ‘ಸೋಮ’ದ ಪ್ರಸ್ತಾಪ ಬಂದಿರುವುದೂ ಆಗಿದೆ ಎನ್ನಬಹುದು.‘ಇಂದ್ರ’ ‘ವೃತ್ರಾಸುರ’ನನ್ನು ಕೊಲ್ಲುವಾಗ ‘ಸೋಮ’ ರಸವನ್ನು ಕುಡಿದು ‘ಮತ್ತಿನಲ್ಲಿದ್ದ’ ಎಂಬ ‘ಸುಂದರ’ ಕಥೆಯಂತೂ ಪುರಾಣದಲ್ಲಿದೆ!ಋಗ್ವೇದದಲ್ಲಿ […]

ಮೊದಲಿದ್ದ ಸ್ಥಿತಿ ವಾಸಿ

ಚಿಂತನ - 0 Comment
Issue Date : 24.02.2014

ಕೆಲವರಿಗೆ ತಾವು ಈಗಿರುವ ಸ್ಥಿತಿಯಲ್ಲಿ ತೃಪ್ತಿ ಇರುವುದಿಲ್ಲ. ಇನ್ನಷ್ಟು ಎತ್ತರದ, ಉತ್ತಮ ಸ್ಥಿತಿಗೆ ಏರಬೇಕೆಂದು ಹಂಬಲಿಸುತ್ತಾರೆ. ತಮಗಿಂತ ಮೇಲೆ ಇರುವವರ ಸುಖವನ್ನು ನೋಡುತ್ತಿರುವುದೇ ಇದಕ್ಕೆ ಕಾರಣ. ‘‘ಅವರಷ್ಟು ಸೌಕರ್ಯ ನಮಗೆ ಇಲ್ಲವಲ್ಲ’’ ಎಂದು ಕೊರಗುತ್ತಾರೆ. ತಮಗಿಂತ ಕೆಳ ಸ್ತರದಲ್ಲಿ ಇರುವವರ ಕಡೆಗೆ ನೋಡಬೇಕು. ಆಗ ತಾವಿರುವ ಸ್ಥಿತಿ ಎಷ್ಟೋ ಉತ್ತಮ ಎನಿಸದಿರದು. ದೃಷ್ಟಾಂತ ಕಥೆಯೊಂದು ಈ ವಾಸ್ತವವನ್ನು ವಿಶದಗೊಳಿಸುತ್ತದೆ.ಸಣ್ಣ ಹಡಗಿನಲ್ಲಿ ಹಲವರು ಪ್ರಯಾಣ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಸಮುದ್ರದಲ್ಲಿ ಅಲೆಗಳೆದ್ದವು. ಹಡಗು ಅತ್ತಿತ್ತ ಹೊಯ್ದಿಡತೊಡಗಿತು. ಆಗ ಜತೆಗಿದ್ದ ಸೇವಕನೊಬ್ಬ […]

ಸರ್ವರೋಗ ಪರಿಹಾರಕ ಸೂರ್ಯ

ಚಿಂತನ - 0 Comment
Issue Date : 20.02.2014

‘ಆದಿತ್ಯೋ ವಾ ಏಷ ಏತನ್ಮಂಡಲಂ ತಪತಿ…’ ಎಂದು ಆರಂಭವಾಗುವ ಮಂತ್ರ ಸೂಕ್ತವೊಂದು ಯಜುರ್ವೇದದಲ್ಲಿದೆ. (ತೈ.ಅ. 4-14)‘ಉದ್ಯನ್ನದ್ಯ ಮಿತ್ರಮಹಃ…’ ಎಂಬ ಮತ್ತೊಂದು ಮಂತ್ರ ‘ಸೌರ ಮಂತ್ರ’ವೆಂದೇ ಖ್ಯಾತವಾಗಿದೆ. (ಯ.ತೈ.ಯ.ಬ್ರಾ.3.7.6) ‘ಸೂರ್ಯೋ ದೇವೀಂ… ಸೂರ್ಯ ಆತ್ಮಾ ಜಗತಸ್ತಸ್ಥುಷಶ್ವ’ ಎಂಬ ಸೂಕ್ತವು ಸೌರ್ಯ ಸೂಕ್ತವೆಂದೇ ಯಜುರ್ವೇದದಲ್ಲಿ ಪ್ರಸಿದ್ಧ. (ತೈ.ಯ.ಬ್ರಾ.3.8.7)ಸೂರ್ಯನೆಂದರೆ ಕೇವಲ ಬೆಳಕಿನ ಪುಂಜವಲ್ಲ. ಜಗದ ಚಕ್ಷು – ಕಣ್ಣು. ‘ಭಗ’ವಂತ ‘ಜಗ’ವನ್ನು ಈ ಕಣ್ಣಿನಿಂದಲೇ ‘ಕಾಣು’ವುದು.ಆದಿತ್ಯಮಂಡಲದಲ್ಲಿ ಸದಾ ಬೆಳಗುತ್ತಿದ್ದು ಸ್ವಯಂಭೂ ಬ್ರಹ್ಮ ಸ್ವರೂಪದಲ್ಲಿರುವ ‘ಹಿರಣ್ಮಯ ಪುರುಷ’ನನ್ನು ಸ್ಮರಿಸುವುದು ಎಂದರೆ ‘ಜಗದ ಕಾರಣ’ನನ್ನೇ […]

ನಿರ್ಮಾತೃ ಯಾರು?

ಚಿಂತನ - 0 Comment
Issue Date : 18.02.2014

ವಿಶ್ವದಲ್ಲಿ ಗ್ರಹ ನಕ್ಷತ್ರಾದಿಗಳು, ಪ್ರಪಂಚ, ಇಲ್ಲಿರುವ ನೆಲ-ಜಲ, ಪ್ರಾಣಿ-ಪಕ್ಷಿ – ಉರಗ ಸಂತತಿ, ಮರ-ಗಿಡ-ಲತೆಗಳು, ಪಂಚಭೂತಗಳು, ಮನುಷ್ಯ ಮುಂತಾದ ಎಲ್ಲವನ್ನು ಸೃಜಿಸಿದವನು ದೇವರು. ಬ್ರಹ್ಮ – ವಿಷ್ಣು – ಪರಮೇಶ್ವರರು ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣರಾಗಿದ್ದಾರೆ. ಪರಮಾತ್ಮನ ಆಣತಿಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಕೂಡ ಅಲುಗಾಡದು ಎಂದೆಲ್ಲ ನಂಬುವವರು ಆಸ್ತಿಕರು. ಅವರಿಗೆ ಸೃಷ್ಟಿಯ ಬಗೆಗೆ ಯಾವ ಸಂದೇಹವೂ ಇಲ್ಲ.ಆದರೆ ದೇವರ ಅಸ್ತಿತ್ವವನ್ನೇ ಪ್ರಶ್ನಿಸುವ ನಾಸ್ತಿಕನಿಗೆ ಇದೆಲ್ಲ ಮೂಢನಂಬಿಕೆಯಾಗಿ ತೋರುತ್ತದೆ. ಪ್ರತಿಯೊಂದು ವಸ್ತುವೂ ತಾನೇ ತಾನಾಗಿ ಉದ್ಭವಿಸಿತು. ಅದು ತಾನಾಗಿಯೇ ಬೆಳೆದು ಒಂದು […]

ವಿವೇಕ ವಾಣಿ

ವಿವೇಕ ವಾಣಿ

ಚಿಂತನ - 0 Comment
Issue Date : 15.02.2014

ಸ್ಥಿರತೆಯನ್ನು ಪಡೆಯಿರಿ, ಎಲ್ಲಕ್ಕಿಂತ ಹೆಚ್ಚಾಗಿ ಪರಿಶುದ್ಧರಾಗಿ, ನಿಷ್ಠಾವಂತರಾಗಿ. ನಿಮ್ಮ ಭವಿಷ್ಯದಲ್ಲಿ ನಂಬಿಕೆಯಿಡಿ…. ದುಡ್ಡಿಲ್ಲಿದ ನಿಮ್ಮ ಮೇಲೆ ಅದು ನಿಂತಿದೆ; ನೀವು ದೀನರು, ಅದಕ್ಕೇ ನೀವು ಕಾರ್ಯಪ್ರವೃತ್ತರಾಗುವಿರಿ. ನಿಮ್ಮಲ್ಲಿ ಏನೂ ಇಲ್ಲ, ಅದಕ್ಕೇ ನೀವು ನಿಷ್ಠಾವಂತರಾಗುವಿರಿ. ನೀವು ನಿಷ್ಠಾವಂತರಾಗಿರುವುದರಿಂದಲೇ ಸರ್ವವನ್ನೂ ತ್ಯಾಗಮಾಡಬಲ್ಲಿರಿ. ಈಗ ನಾನು ಇದನ್ನೇ ನಿಮಗೆ ಹೇಳುತ್ತಿರುವುದು.

ದ್ವಾದಶ ಆದಿತ್ಯರು

ಚಿಂತನ - 0 Comment
Issue Date : 12.02.2014

 ‘ಸೂರ್ಯ’ ನಮ್ಮ ಪ್ರಾಣಕಾರಕ, ಪ್ರಾಣಧಾರಕ. ಆತನಿಲ್ಲದೆ ನಾವಿಲ್ಲ. ಆತ ಪ್ರಖರ ತೇಜವುಳ್ಳವ. ಅದನ್ನು ‘ಹದ’ಗೊಳಿಸಲು ವಿಶ್ವಕರ್ಮ ಸಾಣೆ ಹಿಡಿದ. ಸೂರ್ಯ ಮಂಡಲದ ನ್ಯೂನಾಧಿಕ ಭಾಗಗಳನ್ನು ಕತ್ತರಿಸಿ ತೆಗೆದ. ಅದರಿಂದ ಸೂರ್ಯನ ಮುಖವೆಲ್ಲಾ ಕೆಂಪಾಯಿತು. ಕತ್ತರಿಸಿದಾಗ ಸೂರ್ಯ ಮಂಡಲದಿಂದ ಹನ್ನೆರಡು ತುಣುಕುಗಳಾದವು. ಅವೇ ಧಾತಾ, ಆರ್ಯಾಮಾ ಇತ್ಯಾದಿ ದ್ವಾದಶ ಆದಿತ್ಯರೆಂದು ಖ್ಯಾತರಾದರು. ಆಗ ಉದುರಿದ ಚಿಕ್ಕ ಚಿಕ್ಕ ಚೂರುಗಳನ್ನೆಲ್ಲ ಸೇರಿಸಿ ಒಂದು ಆಯುಧವನ್ನು ರೂಪಿಸಿ ಶ್ರೀಹರಿಗೆ ವಿಶ್ವಕರ್ಮ (ದೇವ ಬಡಗಿ) ನೀಡಿದನು. ಅದೇ ಸುದರ್ಶನ ಚಕ್ರಾಯುಧವೆಂದು ಪ್ರಖ್ಯಾತವಾಯಿತು ಎಂದು […]

ಅನುಭವದಿಂದ ಕಲಿತ ಪಾಠ

ಅನುಭವದಿಂದ ಕಲಿತ ಪಾಠ

ಚಿಂತನ - 0 Comment
Issue Date : 10.02.2014

ಹಾಗೆ ಮಾಡು, ಹೀಗೆ ಮಾಡು, ಅದನ್ನು ಮಾಡಬೇಡ ಎಂದು ಮುಂತಾಗಿ ಬೇರೆಯವರಿಗೆ ಉಪದೇಶ ಕೊಡುವುದು ಸುಲಭದ ಕೆಲಸ. ಗುರು ಹಿರಿಯರು, ವೃದ್ಧರು, ಅಧ್ಯಾಪಕರು ಮತ್ತು ಸಂನ್ಯಾಸಿಗಳು ಯಾವಾಗಲೂ ಬೋಧನೆಯನ್ನು ಕೊಡುತ್ತಲೇ ಇರುತ್ತಾರೆ. ಆದರೆ ತಾವು ಅಂತಹದೇ ಸನ್ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ ಇಲ್ಲವೇ ಎನ್ನುವುದನ್ನು ಅವರು ಪರಿಶೀಲಿಸಿಕೊಳ್ಳುವುದಿಲ್ಲ. ಮಹಾಭಾರತದಲ್ಲಿ ಬರುವ ನಿದರ್ಶನವೊಂದು ಇದಕ್ಕೆ ಸಾಕ್ಷಿಯಾಗಿದೆ.ಪಾಂಡವರು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲ. ‘‘ಸತ್ಯಂ ವದ, ಕ್ರೋಧಂ ಮಾ ಕುರು’ (ಸತ್ಯವನ್ನು ಹೇಳು; ಕೋಪ ಮಾಡಿಕೊಳ್ಳಬೇಡ) ಎಂಬ ಪಾಠವನ್ನು ಹೇಳಿಕೊಟ್ಟ ಆಚಾರ್ಯರು ಇದನ್ನು […]

ಮೂಜಗದ ಮಿತ್ರ ಸೂರ್ಯ

ಚಿಂತನ - 0 Comment
Issue Date : 04.02.2014

‘ಸೂರ್ಯ’ ಪ್ರಖರ ಬೆಳಕಿನ ಪುಂಜ. ನಿರಂತರ ಚಟುವಟಿಕೆ ಆತನದು. ಅದೂ ‘ಅನುಶಾಸನ’ ಸಹಿತ. ಎಂದೂ ವಿರಾಮವಿಲ್ಲ! ಎಲ್ಲವೂ ‘ಸಮಯ’ಕ್ಕೆ ಸರಿಯಾಗಿಯೇ ಒಂದು ಕ್ಷಣವೂ ತಪ್ಪದು! ಹಗಲು ಸೂರ್ಯ ತಾನೇ ಬೆಳಗಿದರೆ, ರಾತ್ರಿ ತನ್ನ ಬೆಳಕಿನಿಂದ ‘ಚಂದ್ರ’ನನ್ನು ಬೆಳಗಿಸುವನು.ಋಗ್ವೇದದ ಅರವತ್ತು ಮಂತ್ರಗಳು ಸೂರ್ಯನನ್ನು ಕುರಿತ ಉಲ್ಲೇಖಿಸುತ್ತವೆ. ‘ದ್ವೌಃ’ ಮತ್ತು ‘ಅದಿತಿ’ ಯರ ಪುತ್ರ, ‘ಉಪಸ್’ ಈತನ ಪತ್ನಿ, ‘ಸೂರ್ಯ’ ಎಂದರೆ ‘ಚೈತನ್ಯ’. ಹಾಗೆಂದೇ ಆತನನ್ನು ‘ಸವಿತೃ’ ಎಂದು ಕರೆಯಲಾಗಿದೆ. ‘ಸು’ ಎಂಬ ಧಾತುವಿನಿಂದ ನಿಷ್ಪನ್ನವಾದ ಈ ಶಬ್ದ ‘ಚೈತನ್ಯ’ […]

ನಾಳೆಗೆ ಕಾಯಬೇಡಿ

ಚಿಂತನ - 0 Comment
Issue Date : 03.02.2014

ಸತ್ಕಾರ್ಯಗಳನ್ನು ಮಾಡಬೇಕೆಂದು ಬಯಸುವವರು ಅನೇಕರಿದ್ದಾರೆ. ಆದರೆ ಅವನ್ನು ಕೂಡಲೇ, ಶೀಘ್ರವಾಗಿ ಮಾಡಿ ಮುಗಿಸಬೇಕೆಂದು ಅವರಿಗೆ ಅನಿಸುವುದಿಲ್ಲ. ನಾಳೆ ಮಾಡಿದರಾಯಿತು ಅಂದುಕೊಳ್ಳುತ್ತಾರೆ, ‘‘ನನ್ನ ಸಮಸ್ಯೆಗಳೆಲ್ಲ ಪರಿಹಾರವಾಗಲಿ. ಅನಂತರ ಮಾಡುತ್ತೇನೆ’’ ಎಂದೋ ‘‘ಬರುವ ತಿಂಗಳು ಸ್ವಲ್ಪ ಹಣ ಬರುವುದಿದೆ. ಆಗ ದಾನ ಮಾಡಲು ಅನುಕೂಲ’’ ಎಂದೋ ಭಾವಿಸುತ್ತಾರೆ. ಇದು ಸರಿಯಾದ ನಿಲುವಲ್ಲ. ಏಕೆಂದರೆ ನಾಳೆಯವರೆಗೆ (ಅಥವಾ ನಮಗೆ ಅನುಕೂಲವಾದ ಸನ್ನಿವೇಶ ಒದಗುವವರೆಗೆ) ನಾವು ಬದುಕಿ ಉಳಿಯುತ್ತೇವೆ ಎನ್ನುವುದೇ ಖಚಿತವಲ್ಲ. ಹಾಗಾಗಿ ಸತ್ಕರ್ಮಗಳನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮಾಡಬೇಕು […]