‘ಪರ’ ಪ್ರಾಪ್ತಿಯ ಸಾಧನ

ಚಿಂತನ - 0 Comment
Issue Date : 30.01.2014

‘ಇಹ’ದ ಬದುಕು ಮಾತ್ರವೇ ‘ಸತ್ಯ’. ‘ಪರ’ವೆಂಬುದೂ ಇಲ್ಲವೇ ಇಲ್ಲ – ಇದು ಅಪ್ಪಟ ಭ್ರಾಮಕ ಸಂಗತಿ. ಹಾಗೆಂದು ‘ಪರ’ವೇ ‘ಸತ್ಯ’ ‘ಇಹ’ ಎಂಬುದು ಭ್ರಮೆ ಎಂದೂ ಭಾವಿಸಬಾರದು. ಇಲ್ಲಿರುವ ಎಲ್ಲ ಸಂಗತಿಗಳೂ ನಮ್ಮ ಕಣ್ಣಿಗೆ ಕಾಣಿಸಲು ಸಾಧ್ಯವಿಲ್ಲ. ಹಾಗೆ ಕಾಣಲು ‘ಕಣ್ಣು ’ – ‘ಕಾಣಬಲ್ಲ ಕಣ್ಣು’ ನಮಗೆ ಇರಬೇಕು. ‘ಸತತ ಸಾಧನೆ’ಯಿಂದ ಮಾತ್ರವೇ ‘ಆ’ ಕಣ್ಣು ಕಂಡೀತು. ನಮ್ಮ ಕಣ್ಣನ್ನು ನಾವೇ ಮುಚ್ಚಿಕೊಂಡರೆ ‘ಬೆಳಕು’ ಕಾಣುವುದೆಲ್ಲಿ? ಹಾಡ ಹಗಲಲ್ಲೇ ಕಣ್ಣು ಮುಚ್ಚಿ ‘ಕತ್ತಲು, ಕತ್ತಲು’ ಎಂದು […]

ಮನೋನಿಗ್ರಹ ಅಪೂರ್ವ

ಚಿಂತನ - 0 Comment
Issue Date : 28.01.2014

ಸಾಧುವೊಬ್ಬ ಸಂಚಾರ ಮಾಡುತ್ತಾ ಒಂದು ಹಳ್ಳಿಗೆ ಬಂದನು. ಅಲ್ಲಿನ ದೇವಸ್ಥಾನದ ಮೊಗಸಾಲೆಯಲ್ಲಿ ವೌನವಾಗಿ ಧ್ಯಾನ ಮಾಡುತ್ತಾ ಕುಳಿತುಕೊಳ್ಳತೊಡಗಿದನು. ಇವನ ಆಧ್ಯಾತ್ಮಿಕ ಹಿರಿಮೆಯಿಂದ ಪ್ರೀತನಾದ ಅರ್ಚಕ ದೇವರ ನೈವೇದ್ಯದ ಒಂದು ಭಾಗವನ್ನು ಅವನಿಗೆ ಕೊಡತೊಡಗಿದ. ಇದರಿಂದ ಸಾಧುವು ಊಟಕ್ಕಾಗಿ ಪರದಾಡುವುದು ತಪ್ಪಿತು. ಹೀಗೆಯೇ ಕೆಲವು ದಿವಸ ಕಳೆದ ಬಳಿಕ ದೇವಸ್ಥಾನದ ವ್ಯವಸ್ಥಾಪಕನು ಮೇಲ್ವಿಚಾರಣೆಗಾಗಿ ಅಲ್ಲಿಗೆ ಬಂದ. ಆಗ ನೈವೇದ್ಯದ ಒಂದು ಭಾಗವನ್ನು ಸಾಧುವಿಗೆ ಕೊಡಲಾಗುತ್ತಿದೆ ಎಂದು ತಿಳಿಯಿತು. ‘‘ಈ ಸೋಮಾರಿಗೆ ಏಕೆ ನೈವೇದ್ಯ ಬಡಿಸುವೆ? ಇನ್ನು ಮುಂದೆ ಹೀಗೆ […]

ಆಪದ್ಧರ್ಮ

ಚಿಂತನ - 0 Comment
Issue Date : 22.01.2014

ಧರ್ಮವನ್ನು ಎಲ್ಲೆಡೆಗಳಲ್ಲೂ ಎಲ್ಲ ಸಂದರ್ಭಗಳಲ್ಲೂ ಪಾಲಿಸಬೇಕು. ಆದರೆ ಆಪತ್ಕಾಲದಲ್ಲಿ ಇದಕ್ಕೆ ಕೊಂಚ ರಿಯಾಯಿತಿ ಇದೆ. ಇದನ್ನು ಆಪದ್ಧರ್ಮವೆಂದು ಕರೆಯುತ್ತಾರೆ. ಆದರೆ ಇದಕ್ಕೂ ಒಂದು ಮಿತಿಯಿದೆ. ಸುಖಕ್ಕಾಗಿ ಧರ್ಮೋಲ್ಲಂಘನೆ ಸಲ್ಲದು ಎನ್ನುವುದನ್ನು ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಘಟನೆಯೊಂದು ವಿಶದಪಡಿಸುತ್ತದೆ.ಕುರುದೇಶದಲ್ಲಿ ಚಾಕ್ರಾಯಣ ಎಂಬ ಯುವ ಋಷಿ ಇದ್ದರು. ಅವರಿಗೊಬ್ಬಳು ಅನುಕೂಲೆಯಾದ ಹೆಂಡತಿ. ಊರಿಗೆಲ್ಲ ಬರಗಾಲ ಬಂದು ಜೀವನ ನಡೆಸುವುದಕ್ಕೆ ತುಂಬ ಕಷ್ಟವಾಯಿತು. ಅಷ್ಟರಲ್ಲಿ ಪಕ್ಕದ ರಾಜ್ಯದ ಅರಸನು ಯಜ್ಞವೊಂದನ್ನು ನಡೆಸುವ ಸುದ್ದಿ ಬಂತು. ಪತ್ನಿ ಹೇಳಿದಳು – ‘‘ನೀವು ಯಜ್ಞದಲ್ಲಿ […]

ಋಷಿ – ಬೆಳಕಿನ ನೆಲೆ

ಚಿಂತನ - 0 Comment
Issue Date : 21.01.2014

ಪುರುಷ ಸೂಕ್ತ (10.90.7)ದ ‘ತೇನ ದೇವಾ ಅಯಜಂತ ಸಾಧ್ಯಾ ಋಷಯಃ ಚಯೇ’ ಎಂಬಲ್ಲಿ ಉಲ್ಲೇಖಿತವಾದ ‘ಋಷಯಃ’ ಎಂಬುದು ಬಹು ‘ವಿಶಿಷ್ಟ’ ಪದ.ಸಾಮಾನ್ಯ ಅರ್ಥದಲ್ಲಿ ಋಷಿಗಳು, ಮುನಿಗಳು ಜ್ಞಾನಿಗಳು – ತಿಳಿದವರು, ಅರಿತವರು ಎಂದು ಭಾವಿಸಬಹುದು. ‘ಋಷಗತೌ’ ಇದರಿಂದ ‘ಗತ್ಯರ್ಥಕ’ ಧಾತುವನ್ನು ‘ಜ್ಞಾನಾರ್ಥಕ’ ಎಂಬ ಅರ್ಥದಲ್ಲಿ ಇಲ್ಲಿ ಬಳಸಲಾಗಿದೆ. ವೇದ ಮಂತ್ರಗಳನ್ನು ಅರ್ಥೈಸುವಾಗ ಕೇವಲ ಒಂದೇ ಮಗ್ಗುಲಿನಿಂದ ನೋಡಿದರೆ ಸಾಲದು. ‘ದೃಶ್’ ಧಾತುವಿನಿಂದ ಉತ್ಪನ್ನವಾಗಿ ‘ನೋಡು’ ಎಂಬ ಅರ್ಥವನ್ನು (ಋಷಯಃ ದ್ರಷ್ಟಾರಃ, ಉಣಾದಿ – 4.116) ಕೊಡುವುದನ್ನೂ ನಾವು […]

‘ನಾವು ಪಾಪಿಗಳಲ್ಲ – ಅಮೃತದ ಮಕ್ಕಳು’

ಚಿಂತನ - 0 Comment
Issue Date : 08.01.2014

‘ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ ಆ ಯೇ ಧಾಮಾನಿ ದಿವ್ಯಾನಿತಸ್ಥುಃ’ (ಋ. 10.13.1) ಓ ಅಮೃತದ ಮಕ್ಕಳೇ ಕೇಳಿ, ‘ದೇವಲೋಕ’ವೇ ನಿಮ್ಮ ನಿಜಧಾಮ’ ಎನ್ನುತ್ತಾರೆ. ಋಗ್ವೇದ ‘ದೇವಲೋಕ’ ಎಂದರೆ ‘ಬೆಳಕಿನ’ ಲೋಕ. ಅಲ್ಲಿ ಕೇವಲ ‘ಬೆಳಕು’. ಬೆಳಕೇ ಬೆಳಕು. ‘ಕತ್ತಲು’ ಇರಲು ಅಲ್ಲಿ ಸ್ಥಳವೇ ಇಲ್ಲ. ‘ಬೆಳಕು’ ಬಂದರೆ ಸಾಕು ‘ಕತ್ತಲು’ ‘ಎಂಥ ಮೊತ್ತ’ದಲ್ಲಿದ್ದರೂ ಪಲಾಯನ ಗೈಯುತ್ತದೆ.‘ದೇವಲೋಕ’ವೇ ನಿಮ್ಮ ನಿಜಧಾಮವೆಂದು ಹೇಳಿದ್ದಾದರೂ ಯಾರಿಗೆ? ಮರ್ತ್ಯರಿಗೆ ಅವರನ್ನು ಸಂಬೋಧಿಸಿದ್ದು ಹೇಗೆಂದು? – ‘ಅಮೃತ’ದ ಮಕ್ಕಳೆಂದು. ‘ಅಮೃತ’ರು ‘ಸಾವಿರದವರು’, ನಿಜವಾಗಿ […]

ಆರೋಹಣ ಕಷ್ಟ

ಆರೋಹಣ ಕಷ್ಟ

ಚಿಂತನ - 0 Comment
Issue Date : 06.12.2013

ಅರಿಸ್ಟಾಟಲ್ ಗ್ರೀಸಿನ ಬಲು ದೊಡ್ಡ ತತ್ತ್ವಜ್ಞಾನಿ. ಪ್ಲೇಟೋ ಮಹಾಶಯನ ಶಿಷ್ಯ. ಅಥೆನ್ಸಿನ ಪ್ರಥಮ ಗ್ರಂಥಭಂಡಾರದ ಸ್ಥಾಪಕ. ವಿಜ್ಞಾನಕ್ಕೆ ಸಂಬಂಧಪಟ್ಟ ಹಲವು ಕೃತಿಗಳನ್ನು ಬರೆದ. ಅವನ ವಿಶೇಷತೆಯೆಂದರೆ ಜೀವಮಾನವಿಡೀ ಪ್ರಯತ್ನ ಪಟ್ಟು ಮಹಾರಾಜನ ಅತ್ಯಂತ ನೀತಿವಂತ ಶಿಷ್ಯರನ್ನು ತಯಾರು ಮಾಡಿದ್ದು. ಈ ಮೂವರು ಶಿಷ್ಯರು ಸತ್ಯ ಹಾಗೂ ನೀತಿನಿಷ್ಠರಾಗಿದ್ದು ಪರೋಪಕಾರಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿದ್ದರು. ಕರ್ತವ್ಯಪ್ರಜ್ಞೆ, ಶ್ರದ್ಧೆ, ಗುರುಭಕ್ತಿ, ರಾಷ್ಟ್ರಪ್ರೇಮ ಮುಂತಾದ ಹಲವು ಸದ್ಗುಣಗಳನ್ನು ಅವರು ಮೈಗೂಡಿಸಿಕೊಂಡಿದ್ದರು. ಗ್ರೀಸಿನಾದ್ಯಂತ ಈ ಗುರುಶಿಷ್ಯರ ಪ್ರಸಿದ್ಧಿ ಹಬ್ಬಿತ್ತು. ಅವರನ್ನು ನೋಡಲು, ಮಾತಾಡಲು ಹಲವರು […]

ವೇದ ವಿದ್ಯೆಯ ಅಧಿಕಾರಿ

ಚಿಂತನ - 0 Comment
Issue Date : 31.12.2013

ವೇದ ಜ್ಞಾನ ಭಂಡಾರ. ಬದುಕನ್ನು ಮುದಗೊಳಿಸುವ ವಿದ್ಯೆ. ಆದರೆ ಅದು ತಿಳಿದವರಿಗೆ ಮಾತ್ರ. ಅದನ್ನು ತಿಳಿಯುವ ಬಗೆ ಹೇಗೆ? ಯಾರು ತಿಳಿಯಬಹುದು? ಎಂಬ ಪ್ರಶ್ನೆಗೆ ಉತ್ತರ ಅಧಿಕಾರಿ ಮಾತ್ರ ಎಂಬುದು. ಪತಂಜಲಿ ಋಷಿ ತನ್ನ ವ್ಯಾಕರಣ ಭಾಷ್ಯದಲ್ಲಿ ‘ದಕ್ಷಿಣೇನ ಹಿಮಮಂತ- ಮುತ್ತರೇಣ ಪಾರಿಯಾತ್ರಮೇತಸ್ಮಿನ್ ಆರ್ಯಾವರ್ತೇ ನಿವಾಸಾಯೇ ಬ್ರಾಹ್ಮಣಾಃ (ಬ್ರಾಹ್ಮಣ ಎಂಬುದು ಈಗಿನ ಜಾತಿ ಸೂಚಕವಲ್ಲ) ಕುಂಭೀಧಾನ್ನಾ ಅಲೋಲುಪಾ ಅಹೃಷ್ಯಮಾಣಕರಣಾ: ಕಿಂಚಿದಂತರೇಣ ಕಸ್ಯಾಶ್ಚಿದ್ವಿದ್ಯಾಯ: ಪಾರಂಗತಾ ಸ್ತತ್ರಭವಂತಃಶಿಷ್ಟಾ’ ದಕ್ಷಿಣೋತ್ತರಗಳಲ್ಲಿ ಪಾರಿಯಾತ್ರ, ಹಿಮವಂತಗಳೇ ಎಲ್ಲೆಯಾಗಿರುವ ಈ ಆರ್ಯಾವರ್ತದಲ್ಲಿ ನೆಲೆಸಿರುವ, ಮಡಕೆಯಲ್ಲಷ್ಟು ತುಂಬಿಡುವ […]

ರೂಪಕ್ಕಿಂತ ಗುಣ ಮುಖ್ಯ

ರೂಪಕ್ಕಿಂತ ಗುಣ ಮುಖ್ಯ

ಚಿಂತನ - 0 Comment
Issue Date : 30.12.2013

ಜಗತ್ತಿನಲ್ಲಿ ಹೊರಗಿನ ರೂಪ, ಥಳುಕು ಬಳುಕುಗಳಿಗೆ ಮರುಳಾಗುವ ಜನರೇ ಹೆಚ್ಚು. ಶರೀರದ ಬಣ್ಣ, ಮುಖದ ಸೌಂದರ್ಯ, ಲಾವಣ್ಯ ಮುಂತಾದವುಗಳಿಗೆ ಆಕರ್ಷಿತರಾಗುವ ಮಂದಿ ಒಳಗಿನ ಸತ್ತ್ವ, ಗುಣಾತಿಶಯಗಳಿಗೆ ಹೆಚ್ಚಿನ ಬೆಲೆ ಕೊಡುವುದಿಲ್ಲ. ಇದರಿಂದಾಗಿಯೇ ವರ್ಣಭೇದ, ಜಾತಿತಾರತಮ್ಯ ಮೊದಲಾದ ಪಿಡುಗುಗಳು ಮನುಕುಲವನ್ನು ಪೀಡಿಸುತ್ತಿವೆ.ತುಂಬ ತಿಳಿವಳಿಕೆ ಉಳ್ಳವನೆಂಬ ಖ್ಯಾತಿಯನ್ನು ಪಡೆದ ಭೋಜರಾಜನು ಕೂಡ ಇಂತಹ ಅಜ್ಞಾನಕ್ಕೆ ಒಳಗಾಗಿದ್ದ. ಒಂದು ದಿನ ಅವನು ತನ್ನ ಪ್ರಧಾನಿಯೊಂದಿಗೆ ಮಾತಾಡುತ್ತಾ ನಿನ್ನ ಬುದ್ಧಿವಂತಿಕೆ- ಜಾಣ್ಮೆಗಳೇನೋ ಪ್ರಶಂಸನೀಯ. ಆಡಳಿತದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ಬರುವಲ್ಲಿ ನಿನ್ನ ಕೊಡುಗೆ ಅಪಾರ. […]

ಸದ್ವ್ಯವಹಾರ

ಚಿಂತನ - 0 Comment
Issue Date : 26.12.2013

ಜಗತ್ತಿನಲ್ಲಿ ಹುಟ್ಟಿ ಬಂದ ಮೇಲೆ ಪ್ರತಿಯೊಬ್ಬನೂ ವ್ಯವಹಾರ ನಡೆಸಲೇಬೇಕು. ಕೃಷಿ, ಕೈಗಾರಿಕೆ, ವ್ಯಾಪಾರ ಮುಂತಾದುವೆಲ್ಲ ವ್ಯವಹಾರಗಳೇ. (ವ್ಯವಹಾರವೆಂದರೆ ವಹಿವಾಟು ಎಂದು ಅರ್ಥ.) ಆದರೆ ಇವನ್ನು ಮನುಷ್ಯ ಯಾತಕ್ಕೆ ಮಾಡುತ್ತಾನೆ? ಲಾಭಕ್ಕಾಗಿ ಮತ್ತು ಜೀವನ ನಿರ್ವಹಣೆಗೆ ಅವಶ್ಯವಾದ ಆದಾಯ ಪ್ರಾಪ್ತಿಗಾಗಿ. ಕೆಲವರು ವ್ಯವಹಾರ ನಡೆಸುವಾಗ ಸ್ವಾರ್ಥವೊಂದನ್ನೇ ದೃಷ್ಟಿಯಲ್ಲಿ ಇಟ್ಟುಕೊಳ್ಳುತ್ತಾರೆ. ತಮಗೆ ಲಾಭ ಸಿಕ್ಕಿದರೆ ಸಾಕು. ಬೇರೆಯವರಿಗೆ ಏನು ಬೇಕಾದರೂ ಆಗಲಿ ಎನ್ನುವುದು ಅವರ ದೃಷ್ಟಿಕೋನ. ಆದರೆ ಇನ್ನು ಕೆಲವರು ಬೇರೆಯವರಿಗೆ ಒಳ್ಳೆಯದಾಗಬೇಕು. ತಮಗೆ ತುಸು ತೊಂದರೆಯಾದರೂ ಅಡ್ಡಿಯಿಲ್ಲ ಅಂದುಕೊಳ್ಳುತ್ತಾರೆ. […]

ಸಮಾನತೆಯ ಸೆಲೆ – ವೇದ

ಚಿಂತನ - 0 Comment
Issue Date : 18.12.2013

‘‘ಬಿಭರ್ತಿ ಸರ್ವಭೂತಾನಿ ವೇದ ಶಾಸ್ತ್ರಂ ಸನಾತನಮ್’’ – ವೇದ ಸಕಲ ಜೀವಿಗಳಿಗೂ ಆಧಾರವಾಗಿದೆ. ಇದು ಮನುಸ್ಮೃತಿಯ ಘೋಷಣೆ. (12-99) ವೇದಗಳು ಧರ್ಮದ ಮೂಲ. ಸಮಾನತೆ (ಭೌತಿಕವಲ್ಲ) ವೇದಗಳಲ್ಲಿನ ಪ್ರಮುಖ ನಿಯಮ.ಅಥರ್ವವೇದದ ಸಂಜ್ಞಾನಸೂಕ್ತ ‘ಸಮಾನೀ ಪ್ರಪಾ ಸಹವೋನ್ನಭಾಗಃಸಮಾನೇಯೋಕ್ತ್ರೇ ಸಹವೋ ಯುನಜ್ಮಿ ಅರಾಃ ನಾಭಿಮಿವಾಭಿತಃ॥ -ಆಹಾರ ಮತ್ತು ನೀರು (ಪಕೃತಿ) ಇವುಗಳ ಮೇಲೆ ಮಾನವರಿಗೆಲ್ಲ ಸಮಾನವಾದ ಹಕ್ಕಿದೆ. (ಶಂನೋ ಅಸ್ತು ದ್ವಿಪದೇ ಶಂ ಚತುಷ್ಪದೇ – ಇಲ್ಲಿನ ‘ಚತುಷ್ಪದೇ’ ಪದ ಪಶು-ಪಕ್ಷಿ-ಪ್ರಾಣಿ- ಕ್ರಿಮಿಕೀಟ ಹೀಗೆ ಎಲ್ಲಾ  ಜೀವಿಗಳನ್ನು ಸಂಕೇರಿಸುತ್ತದೆ.)  ಜೀವನ […]