ಕರುಣೆಯ ಸಾಗರ

ಚಿಂತನ - 0 Comment
Issue Date : 16.12.2013

ಪಂಡಿತ ಈಶ್ವರಚಂದ್ರ ವಿದ್ಯಾಸಾಗರ (1820-91) ಖ್ಯಾತ ಶಿಕ್ಷಣವೇತ್ತರು ಮತ್ತು ಸಾಮಾಜಿಕ ಕಾರ್ಯಕರ್ತರು. ಸಂಸ್ಕೃತ-ಇಂಗ್ಲಿಷ್ ಭಾಷೆಗಳೆರಡರಲ್ಲೂ ಪ್ರಭುತ್ವ ಸಾಧಿಸಿದ ಅವರು ಕೊಲ್ಕೊತ್ತಾದ ಸರ್ಕಾರಿ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕರಾಗಿ ದುಡಿದರು. ಅತ್ಯಂತ ಸರಳ ಜೀವನ ನಡೆಸಿದ ಅವರು ಹಲವು ವಿದ್ಯಾಲಯಗಳನ್ನು ಸ್ಥಾಪಿಸಿದರು. ಬಂಗಾಲಿ ಭಾಷೆಯಲ್ಲಿ ಕೃತಿಗಳನ್ನು ಬರೆದರು. ಹಿಂದು ಧರ್ಮ ಸಂಸ್ಕೃತಿಗಳ ಬೆಳವಣಿಗೆಗಾಗಿ ನಿರಂತರ ದುಡಿದ ಅವರು ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತದ ನವಜಾಗೃತಿಗಾಗಿ ಶ್ರಮಿಸಿದರು. ಸನಾತನತೆಯ ಮಹಾವೃಕ್ಷದ ಕೊಂಬೆರೆಂಬೆಗಳಲ್ಲಿ ವಿನೂತನತೆಯ ಚಿಗುರುಗಳು ಮೂಡಿಬರಬೇಕೆಂಬುದು ಅವರ ಪ್ರಯತ್ನವಾಗಿತ್ತು. ವಿದ್ಯಾಸಾಗರರು ಎಷ್ಟೇ ದೊಡ್ಡ […]

ಅರಿವಿನ ಅರಿವು ಬದುಕಿನ ಗುರಿ

ಚಿಂತನ - 0 Comment
Issue Date : 11.12.2013

‘ಪಾದೋ ಅಸ್ಯ ವಿಶ್ಯಾ ಭೂತಾನಿ ತ್ರಿಪಾದ್ ಅಸ್ಯ ಅಮೃತಂ ದಿವಿ’ (ಋ.10.9.3) ಇದು ಪುರುಷ ಸೂಕ್ತದ ಮೂರನೆಯ ಮಂತ್ರದ ಎರಡನೆಯ ಪಾದ. ನಮ್ಮ ಕಣ್ಣಿಗೆ ಕಾಣಿಸುವುದಷ್ಟೇ ಪ್ರಪಂಚವಲ್ಲ. ನಾವು ಅದಷ್ಟು ಮಾತ್ರ ‘ಸತ್ಯ’ ಎಂಬ ಭ್ರಮೆಯಲ್ಲಿದ್ದೇವೆ. ಇಲ್ಲಿ ಕಾಣುವ ಸಮಸ್ತವು ಪರಮಪುರುಷನ ಭವ್ಯತೆಯ ಕಾಲು ಭಾಗ ಮಾತ್ರ! ನಮ್ಮ ಕಲ್ಪನೆಗೆ ನಿಲುಕದ ಮತ್ತಷ್ಟು ಅಲ್ಲ ಮತ್ತೆಷ್ಟೋ ಇದೆ. ಅದು ನಮ್ಮ ಊಹೆಗೆ ನಿಲುಕುತ್ತಿಲ್ಲ!!‘ಪಾದ’ವನ್ನು ಶಬ್ದಶಃ ‘ಪ್ರಗತಿ’ ಅಥವಾ ‘ಚಲನೆ’ಯ ‘ಸಾಧನ’ ಎಂಬ ಅರ್ಥದಲ್ಲಿ ನೋಡಿದಾಗ ಅದರ ‘ಭವ್ಯತೆ’ಯ […]

ಶಾಂತಿ ಮತ್ತು ಸ್ಥಿರತೆಗೆ ಕಾರಣಗಳು

ಚಿಂತನ - 0 Comment
Issue Date : 10.12.2013

ಪ್ರಾಚೀನ ಚೀನಾ ದೇಶದ ಮಹಾನ್ ತತ್ತ್ವಜ್ಞಾನಿ ಕನ್‌ಫ್ಯೂಶಿಯಸ್. ಅಲ್ಲಿನ ಮಹಾರಾಜನೂ ಸೇರಿದಂತೆ ಎಲ್ಲರೂ ಸಮಸ್ಯೆಗಳಿಗೆ ಪರಿಹಾರ ಕೇಳಲು ಅವನಲ್ಲಿಗೇ ಹೋಗುತ್ತಿದ್ದರು. ಒಂದು ಸಾರಿ ಅವನ ಶಿಷ್ಯನೊಬ್ಬ ‘‘ಗುರುಗಳೇ, ಯಾವುದೇ ರಾಷ್ಟ್ರವು ಶಾಂತಿ ಮತ್ತು ಸ್ಥಿರತೆಗಳನ್ನು ಕಾಪಾಡಿಕೊಂಡು ಬರಬೇಕಾದರೆ ಯಾವ ಕಾರಣಗಳು ಅತ್ಯವಶ್ಯ?’’ ಎಂದು ಕೇಳಿದ.ಆಗ ಕನ್‌ಫ್ಯೂಶಿಯಸ್ ಹೇಳಿದ – ‘‘ಮೂರೇ ಅಂಶಗಳ ಕಡೆಗೆ ಗಮನ ಕೊಟ್ಟರೆ ಸಾಕು. ದೇಶದಲ್ಲಿ ಶಾಂತಿ – ಸುವ್ಯವಸ್ಥೆಗಳು ನೆಲಸಿರುತ್ತವೆ. ಸಾಕಾಗುವಷ್ಟು ಯುದ್ಧ ಸಾಮಗ್ರಿಗಳು, ಬೇಕಾಗುವಷ್ಟು ಆಹಾರ ಸಾಮಗ್ರಿಗಳು ಮತ್ತು ಪರ್ಯಾಪ್ತವಾಗುವಷ್ಟು ಶ್ರದ್ಧೆ.’’‘‘ಸ್ವಲ್ಪ […]

ಧರ್ಮ-ಅರ್ಥ-ಕಾಮ ಸಮನ್ವಯ ಸುಖಸಾಧನ

ಚಿಂತನ - 0 Comment
Issue Date : 04.12.2013

‘ಪರಿತ್ಯಜೇದರ್ಥ ಕಾಮೌ ಯೌ ಸ್ಯಾತಾಂ ಧರ್ಮ ವರ್ಜಿತಾ’ – ‘ಅರ್ಥ’, ‘ಕಾಮ’ಗಳು, ‘ಧರ್ಮ’ ವಿರೋಧವಾಗಿದ್ದಲ್ಲಿ ಅವುಗಳನ್ನು ತಿರಸ್ಕರಿಸಬೇಕು – ಹೀಗೆಂದು ಕರೆಕೊಟ್ಟವ ‘ಮನು’ (2-224, 4-176)ನಮ್ಮ ಬದುಕಿನ ಗುರಿ ಸುಖ ಪಡೆಯುವುದು, ಸಂತೋಷ ಅನುಭವಿಸುವುದು ಎಂಬುದು ಎಲ್ಲರ ನಂಬಿಕೆ. ಇವನ್ನು ಹೊಂದಲು ಧರ್ಮ ಹಾಗೂ ಅರ್ಥ (ಐಶ್ವರ್ಯ – ಸಂಪತ್ತು) ಬೇಕೆಂದು ಹಲವರ ಮತ. ಆದರೆ ಕೆಲವರು ಅರ್ಥ ಮತ್ತು ಕಾಮ (ಆಸೆ) ಇವಿಷ್ಟೇ ಸಾಕು ಎನ್ನುತ್ತಾರೆ. ಕೆಲವರಂತೂ ಬದುಕಿನ ‘ಗುರಿ’ ಕೇವಲ ಧರ್ಮ ಸಾಧನೆ ಎನ್ನುತ್ತಾರೆ. […]

ಪ್ರಾಣಿ ದಯೆ

ಪ್ರಾಣಿ ದಯೆ

ಚಿಂತನ - 0 Comment
Issue Date : 02.12.2013

ಎಲ್ಲರಿಗೂ ಸುಖವನ್ನು ಬಯಸುವುದೇ ದಯೆ. ಹಾಗೆಂದ ಮೇಲೆ ಪರರ ದುಃಖವನ್ನು ಕಂಡು ಕರಗಿ ನೆರವಿಗೆ ಧಾವಿಸುವುದೇ ಕರುಣೆಯೆಂದು ಬೇರೆ ಹೇಳಬೇಕಾಗಿಲ್ಲ. ಮಹಾಭಾರತವು ಹೇಳುವಂತೆ ‘‘ಎಲ್ಲ ತೀರ್ಥಗಳಲ್ಲಿ ಸ್ನಾನ ಮಾಡುವುದಕ್ಕಿಂತ ಸಕಲ ಪ್ರಾಣಿಗಳಲ್ಲಿ ದಯೆಯನ್ನಿಡುವುದೇ ಶ್ರೇಷ್ಠ’’. ಆದ್ದರಿಂದಲೇ ‘‘ದಯೆಯಿಲ್ಲದ ಧರ್ಮವಾವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿ’’ ಎಂದು ಬಸವಣ್ಣ ಹೇಳಿದರು. ದಯಾಗುಣ ಇರುವವರಲ್ಲಿ ಎರಡು ವರ್ಗದವರಿದ್ದಾರೆ. ಕೆಲವರು ಬೇರೆ ಮನುಷ್ಯರಿಗೆ ಕಷ್ಟ – ಸಂಕಟ ಬಂದಾಗ ಕರಗುತ್ತಾರೆ, ಕೊರಗುತ್ತಾರೆ. ಕೂಡಲೇ ಅವರಿಗೆ ನೆರವು ನೀಡಲು ಮುಂದಾಗುತ್ತಾರೆ. ಆದರೆ ಪ್ರಾಣಿಪಕ್ಷಿಗಳಿಗೆ ತೊಂದರೆಯಾದರೆ […]

‘ಸುಖ’ದ ಬದುಕಿಗೆ ಸೋಪಾನ – ‘ಧರ್ಮ’

ಚಿಂತನ - 2 Comments
Issue Date : 26.11.2013

ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ ಲೋಕೇ ಧರ್ಮಿಷ್ಠಂ ಪ್ರಜಾ ಉಪಸರ್ಪಂತಿ|ಧರ್ಮೇಣ ಪಾಪಮುಪನುದತಿ ಧರ್ಮೇ ಸರ್ವಂ ಪ್ರತಿಷ್ಠಿತಂ ತಸ್ಮಾಧರ್ಮಂ ಪರಮಂ ವದಂತಿ॥ಈ ‘ಧರ್ಮ’ದ ಮೂಲ ಯಾವುದೆಂದು ‘ಮನು’ ಹೇಳುತ್ತಾ (2-12) ‘ವೇದ ಸ್ಮೃತಿ ಸದಾಚಾರಃ ಸ್ವಸ್ಯ ಚ ಪ್ರಿಯಮಾತ್ಮನಃ’ – ವೇದ, ಸ್ಮೃತಿ, ಸದಾಚಾರ ಹಾಗೂ ‘ಆತ್ಮ’ಕ್ಕೆ ಒಪ್ಪಿಗೆ ಆಗುವ ವಿಷಯಗಳು ಎನ್ನುವಲ್ಲಿ ‘ಅಂತರಾತ್ಮ ಒಪ್ಪುವಂತೆ’ ನಡೆಯಬೇಕೆಂದು ಹೇಳಿದ್ದು ಅತ್ಯಂತ ಮಹತ್ವದ ಸಂಗತಿ. ‘ಆತ್ಮಕ್ಕೆ ಅರಿವಾಗದಂತೆ ನಮಗೆ ಏನೂ ಮಾಡಲು ಸಾಧ್ಯವಿಲ್ಲ. ‘ಆತ್ಮಸಾಕ್ಷಿ’ ಎಂದು ಇದನ್ನು ಕರೆಯಲಾಗಿದೆ. ಬಹಿರಂಗವಾಗಿ […]

ಬೇಡಿಕೆ ನೋಡಿ ಭರವಸೆ

ಬೇಡಿಕೆ ನೋಡಿ ಭರವಸೆ

ಚಿಂತನ - 0 Comment
Issue Date : 25.11.2013

ಹೋದಲ್ಲಿ ಬಂದಲ್ಲಿ ಪ್ರಜಾ ಜನರ ತಾತ್ಕಾಲಿಕ ಮೆಚ್ಚುಗೆ ಪಡೆಯುವುದಕ್ಕಾಗಿ ಮತ್ತು ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಾಗಿ ರಾಜಕೀಯ ಧುರೀಣರು ಅವರ ಬೇಡಿಕೆಗಳ ಅಗತ್ಯಾನಗತ್ಯಗಳನ್ನು ಮತ್ತು ಈಡೇರಿಕೆಯ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸದೆ ಪೊಳ್ಳು ಭರವಸೆಗಳನ್ನು ನೀಡುತ್ತಾ ಹೋಗುವುದು ತೀರಾ ಸಾಮಾನ್ಯ. ಚುನಾವಣೆ ಬಂತೆಂದರೆ ಕೇಳುವುದೇ ಬೇಡ. ಭರವಸೆಗಳ ಮಹಾಪೂರವೇ ಹರಿಯತೊಡಗುತ್ತದೆ.ಆದರೆ ಎಲ್ಲಾ ರಾಜಕೀಯ ಮುಂದಾಳುಗಳೂ ಹೀಗಿರುದಿಲ್ಲ. ಅವರು ಪರಿಸ್ಥಿತಿಯ ಸೂಕ್ಷ್ಮವಾದ ಅವಲೋಕನ ಮಾಡಿಯೇ ಆಶ್ವಾಸನೆ ನೀಡುತ್ತಾರೆ. ಒಂದು ವೇಳೆ ಜನರ ಬೇಡಿಕೆಯು ಸಮಂಜಸವಲ್ಲದೆ ಹೋದರೆ ಅದಕ್ಕೆ ಸೂಕ್ತವಾದ ಕಾರಣವನ್ನು ಕೊಡುತ್ತಾರೆ. ಸಜ್ಜನ, ಪ್ರಾಮಾಣಿಕ […]

‘ಮನ’ದ ‘ಹದ’ ಬದುಕಿಗೆ ‘ಮುದ’

ಚಿಂತನ - 0 Comment
Issue Date : 19.11.2013

ಪಂಚ ಜ್ಞಾನೇಂದ್ರಿಯ ಹಾಗೂ ಪಂಚ ಕರ್ಮೇಂದ್ರಿಯಗಳ ಕುರಿತು ನಮಗೆಲ್ಲ ಗೊತ್ತು. ಆದರೆ ಇವುಗಳಿಗಿಂತ ಮಿಗಿಲಾದ ಮತ್ತೊಂದು ಇಂದ್ರಿಯ ಇದೆ. ಅದೇ ‘ಮನಸ್ಸು’ ಮನಸ್ಸು ಇವೆರಡೂ ಇಂದ್ರಿಯ ಆಗಬಲ್ಲದು. (ಮನು 2 – 89, 90, 91) ನಮ್ಮ ಎಲ್ಲಾ ಒಳಿತು – ಕೆಡುಕುಗಳಿಗೂ ಕಾರಣ ಈ ‘ಮನಸ್ಸು’. ಮನಸ್ಸು ಚೆನಾ್ನಗಿದ್ದರೆ ಎಲ್ಲವೂ ಚೆನ್ನಾಗಿ ‘ಇರುತ್ತದೆ’ ಮತ್ತು ‘ಆಗುತ್ತದೆ’ – ಇದು ಪ್ರಾಜ್ಞರ ಅನುಭವದ ಸಂಗತಿ.‘ಧ್ಯಾಯತೋ ವಿಷಯಾನ್‌ ಪುಂಸಃ…’ ಎಂದು ಆರಂಭವಾಗುವ ಗೀತೆ (3-62, 63)ಯ ಎರಡು ಶ್ಲೋಕಗಳು […]

ಶಕ್ತಿ ಮತ್ತು ವಿರಕ್ತಿ

ಶಕ್ತಿ ಮತ್ತು ವಿರಕ್ತಿ

ಚಿಂತನ - 0 Comment
Issue Date : 19.11.2013

ಅನೇಕ ಮಹಾಪುರುಷರಲ್ಲಿ ಜ್ಞಾನ, ಯೋಗಗಳೂ ಸೇರಿದಂತೆ ಹಲವು ಬಗೆಯ ಶಕ್ತಿಗಳಿರುತ್ತವೆ. ಆದರೆ ಅವುಗಳನ್ನು ಸಮಷ್ಟಿಯ ಹಿತಕ್ಕಾಗಿ ವಿನಿಯೋಗಿಸುವರೇ ವಿನಾ ಸ್ವಂತದ ಉಪಯೋಗಕ್ಕಾಗಿ ಅಲ್ಲ. ಏಕೆಂದರೆ ಅವರಿಗೆ ಬೇರೆಯವರ ಸುಖ-ಸಂತೋಷ-ತೃಪ್ತಿಗಳಲ್ಲಿ ಇರುವ ಆಸಕ್ತಿಯು ತಮ್ಮದೇ ಆದ ಆನಂದಾನುಭವದಲ್ಲಿ ಇರುವುದಿಲ್ಲ. ತಾವು ಹಸಿದಿದ್ದರೂ ಉಪವಾಸ ಬೀಳುವವನನ್ನು ಬದುಕಿಸಬೇಕು, ತಮಗೆ ಬೇಸರವಾದರೂ ಇತರರು ಸಂತೋಷದಿಂದಿರಬೇಕು – ಎಂದು ದೃಢವಾಗಿ ನಂಬುವವರು ಅವರು. ರಾಮಕೃಷ್ಣ ಪರಮಹಂಸರ ಕೊನೆಗಾಲದಲ್ಲಿ ನಡೆದ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ.ಪರಮಹಂಸರು ಕಾಯಿಲೆಗೆ ಒಳಗಾಗಿದ್ದರು. ಅವರಿಗೆ ಗಂಟಲಲ್ಲಿ ಕ್ಯಾನ್ಸರ್‌ ಆಗಿತ್ತು. ಇದರಿಂದಾಗಿ […]

ಶ್ರೀಮಂತಿಕೆ

ಶ್ರೀಮಂತಿಕೆ

ಚಿಂತನ - 0 Comment
Issue Date : 15.11.2013

  ನಮ್ಮ ಬದುಕು ಯಾವಾಗಲೂ ನಾವಂದುಕೊಂಡಂತೆ ಸಾಗುವುದಿಲ್ಲ. ನಾವು ಕೆಲವೊಮ್ಮೆ ತುಂಬ ಆಸೆಪಟ್ಟು ಕಾಯುತ್ತಿರುವ ಕಾರ್ಯಗಳು ನಾವಂದುಕೊಂಡಂತೆ ನಡೆಯುವುದಿಲ್ಲ.ಅದು ವಿದ್ಯೆ, ಉದ್ಯೋಗ, ವಿವಾಹ ಅಥವಾ ಇನ್ನಾವುದೋ ಸಂಗತಿ ಆಗಿರಬಹುದು. ಆಗ ನಮಗೆ ನಿರಾಸೆಯಾಗುತ್ತದೆ. ಸಿಟ್ಟು ಬರುತ್ತದೆ. ವಿಧಿಯನ್ನು ಶಪಿಸುತ್ತಾ ದೇವರು ನನಗೆ ಯಾಕೆ ಹೀಗೆ ಮಾಡಿದ?, ಎಂದು ಯೋಚಿಸುತ್ತಾ ಹತಾಶರಾಗಿ ಬಿಡುತ್ತೇವೆ. ಜೀವನದಲ್ಲಿ ಎಲ್ಲ ಮುಗಿದು ಹೋದವರ ಹಾಗೇ ಯಾವುದರಲ್ಲೂ ಆಸಕ್ತಿ ಇಲ್ಲದವರ ಹಾಗೇ ಬದುಕಿದ್ದೂ ಸತ್ತವರಂತೆ ವರ್ತಿಸಲಾರಂಬಿಸುತ್ತೇವೆ. ಇಂತಹ ಸಂದರ್ಭ ಒಂದಿಲ್ಲೊಮ್ಮೆ ನಮ್ಮೆಲರ ಜೀವನದಲ್ಲೂ ಹಾದು […]