ಇಂಗ್ಲೆಂಡ್‌ನಲ್ಲಿ ಪ್ರೌಢ ಶಿಬಿರ

ಸುದ್ದಿಗಳು - 0 Comment
Issue Date : 28.07.2014

ಲಂಡನ್: ಇಂಗ್ಲೆಂಡ್‌ನ ಲಿಸೆಸ್ಟರ್‌ಶೈರ್‌ನಲ್ಲಿ ಹಿಂದೂ ಸ್ವಯಂಸೇವಕ ಸಂಘ ಪ್ರೌಢ ಶಿಬಿರವನ್ನು ಕಳೆದ ಜೂ. 6ರಿಂದ 8ರವರೆಗೆ ಏರ್ಪಡಿಸಿತ್ತು. ಶಿಬಿರದ ಮುಖ್ಯ ಉದ್ದೇಶ ಸಂಘ, ಸಮಾಜ ಮತ್ತು ಸಂಪರ್ಕದ ಕುರಿತಾಗಿತ್ತು. 87 ಮಂದಿ ಸ್ವಯಂಸೇವಕರು ಪಾಲ್ಗೊಂಡಿದ್ದರು. ಇಂಗ್ಲೆಂಡ್ ಸಂಘಚಾಲಕ ಧೀರಜ್‌ಭಾಯಿ ಶಹಾ, ಬ್ರಿಟಿಷ್ ಹಿಂದೂ ವಾಯ್ಸಿನ ಮುಖೇಶ್ ನಕೇರ್ ಹಾಗೂ ನವಜೀವನ ಸಮಾಜದ ಜಯಂತಿ ಭಾಯಿ ದೋಶಿ ಮೊದಲಾದ ಪ್ರಮುಖರು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ರಾಂ ವೈದ್ಯ ಅವರು ಸಮಾರೋಪ ಬೌದ್ಧಿಕ್ ನೆರವೇರಿಸಿಕೊಟ್ಟರು.

ಒಗಟು ಬಿಡಿಸಿದ ಭಾರತೀಯ

ಒಗಟು ಬಿಡಿಸಿದ ಭಾರತೀಯ

ಸುದ್ದಿಗಳು - 0 Comment
Issue Date : 21.07.2014

ಇಡೀ ವಿಶ್ವಕ್ಕೂ ಭಾರತೀಯರ ಬಗ್ಗೆ ಮೆಚ್ಚುಗೆ, ಮರೆಯಲ್ಲೇ ಒಂದಷ್ಟು ಅಸೂಯೆಯೂ ಇರುವುದಕ್ಕೆ ಕಾರಣವಿದೆ. ಬೇರೆಲ್ಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹಣ, ಸಂಪನ್ಮೂಲ, ತಂತ್ರಜ್ಞಾನ ಎಲ್ಲವೂ ಸಾಕಷ್ಟು ಪ್ರಮಾಣದಲ್ಲಿರಬಹುದು. ಆದರೆ ಬುದ್ಧಿಶಕ್ತಿಯಲ್ಲಿ ಭಾರತೀಯರನ್ನು ಮೀರಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ ಎಂಬುದು ಎಂದೋ ಸಾಬೀತಾಗಿದೆ. ಸಹಸ್ರಮಾನದಷ್ಟು ಹಿಂದೆ ಭಾರತೀಯರು ಸಾಧಿಸಿದ್ದನ್ನೇ ಇಂದಿಗೂ ಸಾಧಿಸಲಾಗದೇ ಬೇರೆ ದೇಶಗಳು ಕೊರಗುತ್ತಿವೆ. ಭಾರತೀಯರ ಬುದ್ಧಿ ಶಕ್ತಿಗೆ ಸಾಟಿ ಇಲ್ಲ ಎಂಬುದಕ್ಕೆ ಇತ್ತೀಚೆಗೊಂದು ತಾಜಾ ಪುರಾವೆ ಸಿಕ್ಕಿದೆ. ಭಾರತದ ಕೀರ್ತಿಯನ್ನು ಮತ್ತೊಮ್ಮೆ ಹೆಚ್ಚಿಸುವುದಕ್ಕೆ ಕಾರಣರಾದವರು ನಿಖಿಲ್ ಶ್ರೀವತ್ಸನ್ […]

ಬ್ರಿಟನ್ ಸಂಸತ್ತಿನಲ್ಲಿ ಮಹಾತ್ಮಾ ಗಾಂಧಿ!

ಬ್ರಿಟನ್ ಸಂಸತ್ತಿನಲ್ಲಿ ಮಹಾತ್ಮಾ ಗಾಂಧಿ!

ಸುದ್ದಿಗಳು - 0 Comment
Issue Date : 16.07.2014

ಬ್ರಿಟಿಷರ ವಿರುದ್ಧ ಸತ್ಯಾಗ್ರಹದ ಅಸ್ತ್ರದಿಂದಲೇ ಹೋರಾಡಿದ ಮಹಾತ್ಮಾ ಗಾಂಧಿನಮಗೆಲ್ಲ ಗೊತ್ತು. ಆದರೆ ಗಾಂಧಿಯಾರ ವಿರುದ್ಧ ಹೋರಾಡಿದ್ದರೋ, ಅದೇ ದೇಶದ ಶಕ್ತಿ ಕೇಂದ್ರವಾದ ಸಂಸತ್ತಿನ ಆವರಣದಲ್ಲಿ ಗಾಂಧಿಪ್ರತಿಮೆಯನ್ನು ನಿರ್ಮಿಸುವ ವಿಷಯ ಮಾತ್ರ ಸದ್ಯಕ್ಕೆ ಹೊಸತು. ಹೌದು, 2015ರ ಹೊತ್ತಿಗೆ ಬ್ರಿಟನ್ನಿನ ಸಂಸತ್ತಿನ ಆವರಣದಲ್ಲಿ ಗಾಂಧಿಪ್ರತಿಮೆ ಎದ್ದು ನಿಲ್ಲಲಿದೆ ಎಂದಿದ್ದಾರೆ ಬ್ರಿಟಿಶ್ ವಿದೇಶಾಂಗ ಸಚಿವ ವಿಲಿಯಂ ಹಾಗ್. ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದ ಹಾಗ್, ಮಹಾತ್ಮಾ ಗಾಂಧಿಯವರ ಅಹಿಂಸೆ ಮತ್ತು ಸತ್ಯಾಗ್ರಹದ ಶಾಂತಿಯ ಹೋರಾಟ ಇಡೀ ಜಗತ್ತಿಗೂ ಮಾದರಿ. ಆದ್ದರಿಂದ ಅವರ […]

ಫೇಸ್‌ಬುಕ್‌ನ ಮನಃಶ್ಶಾಸ್ತ್ರ ಸಮೀಕ್ಷೆ !

ಫೇಸ್‌ಬುಕ್‌ನ ಮನಃಶ್ಶಾಸ್ತ್ರ ಸಮೀಕ್ಷೆ !

ಸುದ್ದಿಗಳು - 0 Comment
Issue Date : 16.07.2014

ಬಹುಮುಖ್ಯ ಸಾಮಾಜಿಕ ಜಾಲತಾಣಗಳಲ್ಲೊಂದಾದ ಫೇಸ್‌ಬುಕ್ ಬಗ್ಗೆ ಯಾರಿಗೆ ಗೊತ್ತಿಲ್ಲ. ಇತ್ತೀಚೆಗಂತೂ ನಗರವಾಸಿಗಳಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶದ ಜನರು ಕೂಡ ಒಂದರ್ಥದಲ್ಲಿ ಫೇಸ್‌ಬುಕ್ ಚಟದ ದಾಸರಾಗಿರುವುದು ಎಲ್ಲರಿಗೂ ಗೊತ್ತು. ಒಂದು ದಿನ ಊಟವಾದರೂ ಬಿಟ್ಟೇನು, ಆದರೆ ಫೇಸ್‌ಬುಕ್ ಇಲ್ಲದೆ ಬದುಕೇ ದುಸ್ತರ ಎಂಬಂಥ ಮನಸ್ಥಿತಿಯೂ ಇಂದು ನೆಲೆ ಕಂಡುಕೊಂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಆದರೆ ಇತ್ತೀಚೆಗೆ ಫೇಸ್‌ಬುಕ್‌ನ ಆಡಳಿತ ಮಂಡಳಿಯೊಂದು ಮಾಡಿದ ಪ್ರಮಾದದಿಂದಾಗಿ ಫೇಸ್‌ಬುಕ್ ಬಳಕೆದಾರರು ಎಚ್ಚರಿಕೆಯಿಂದಿರಬೇಕಾದ ಪರಿಸ್ಥಿತಿ ಬಂದೊದಗಿದೆ. ಸುಮಾರು 7 ಲಕ್ಷಕ್ಕೂ ಹೆಚ್ಚು ಫೇಸ್‌ಬುಕ್ ಬಳಕೆದಾರರು ತಮ್ಮ […]

ಹೊಲಕ್ಕೆ ಹೋಗೋದೋ... ಟಿವಿ ನೋಡೋದೋ?!

ಹೊಲಕ್ಕೆ ಹೋಗೋದೋ… ಟಿವಿ ನೋಡೋದೋ?!

ಸುದ್ದಿಗಳು - 0 Comment
Issue Date : 16.07.2014

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, ರೈತರಿಗಾಗಿಯೇ ಒಂದು ಹೊಸ ಚಾನೆಲ್ ಅನ್ನು ಪರಿಚಯಿಸಲಾಗುವುದು ಎಂಬ ಹೇಳಿಕೆ ನೀಡುತ್ತಿದ್ದಂತೆಯೇ ಹಲವು ರೈತರ ಮನಸ್ಸಿನಲ್ಲಿ ಹುಟ್ಟಿದ ಪ್ರಶ್ನೆ ಅದೇ, ಹೊಲಕ್ಕೆ ಹೋಗೋದೋ… ಟಿವಿ ನೋಡೋದೋ?! ಗಡಿ ಕಿಸಾನ್ ಎಂಬ ಈ ಚಾನೆಲ್ 24 ಗಂಟೆಗಳ ಕಾಲವೂ ರೈತರಿಗೆ ಮತ್ತು ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಲಿದೆ. ಈಗಾಗಲೇ ಈ ಹೊಸ ಚಾನೆಲ್‌ಅನ್ನು ಪರಿಚಯಿಸುವುದಕ್ಕಾಗಿ ಪ್ರಯತ್ನಗಳು ನಡೆಯುತ್ತಿದ್ದು, ಸದ್ಯದಲ್ಲೇ ರೈತರಿಗೆ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ಇದುವರೆಗೂ ಟಿಆರ್‌ಪಿಗಾಗಿ […]

ಒಂದು ವರ್ಷಕ್ಕೂ ಮೊದಲೇ ಪ್ರವಾಹ ಮುನ್ಸೂಚನೆ!

ಒಂದು ವರ್ಷಕ್ಕೂ ಮೊದಲೇ ಪ್ರವಾಹ ಮುನ್ಸೂಚನೆ!

ಸುದ್ದಿಗಳು - 0 Comment
Issue Date : 16.07.2014

ನದಿ ದಡದ ಗುರುತ್ವಾಕರ್ಷಣ ಬಲವನ್ನಾಧರಿಸಿ ಉಪಗ್ರಹಗಳ ಮೂಲಕ ಒಂದು ವರ್ಷಕ್ಕೂ ಮೊದಲೇ ಪ್ರವಾಹದ ಮುನ್ಸೂಚನೆಯನ್ನು ತಿಳಿಯಬಹುದಾದ ಸಂಶೋಧನೆಯೊಂದನ್ನು ವಾಷಿಂಗ್ಟನ್ನಿನ ವಿಜ್ಞಾನಿಗಳು ಮಾಡಿದ್ದಾರೆ. ಈಗಾಗಲೇ ನದಿಯಲ್ಲಿರುವ ನೀರಿನ ಮಟ್ಟ ಮತ್ತು ಅದು ಮುಂದಿನ 11 ತಿಂಗಳಲ್ಲಿ ಏರಬಹುದಾದ ಮಟ್ಟವನ್ನು ಉಪಗ್ರಹ ಮೊದಲೇ ತಿಳಿಸಿ, ಪ್ರವಾಹದ ಸಾಧ್ಯತೆಗಳಿದ್ದಲ್ಲಿ ಮುಂಜಾಗರೂಕತೆ ವಹಿಸುವಂತೆ ನೋಡಿಕೊಳ್ಳುತ್ತದೆ. ಒಂದು ಬಕೆಟ್ಟಿಗೆ ಆ ಬಕೆಟ್ಟಿನ ಗಾತ್ರಕ್ಕೂ ಹೆಚ್ಚಿನ ಪ್ರಮಾಣದ ನೀರನ್ನು ತುಂಬಿದರೆ ಅದು ಸಹಜವಾಗಿಯೇ ಹೊರಚೆಲ್ಲುತ್ತದೆ. ಅದೇ ಆಧಾರವನ್ನಿಟ್ಟುಕೊಂಡು, ಒಂದು ನದಿಗೂ ತನ್ನದೇ ಆದ ಒಂದಷ್ಟು ನಿರ್ದಿಷ್ಟ […]

ವ್ಯಾಟಿಕನ್ನಿನ ಪಾದ್ರಿ ಲೈಂಗಿಕ  ಶೋಷಣೆಯ ಅಪರಾಧಿ

ವ್ಯಾಟಿಕನ್ನಿನ ಪಾದ್ರಿ ಲೈಂಗಿಕ ಶೋಷಣೆಯ ಅಪರಾಧಿ

ಸುದ್ದಿಗಳು - 0 Comment
Issue Date : 16.07.2014

ವ್ಯಾಟಿಕನ್ನಿನ ಇತಿಹಾಸದಲ್ಲಿ ಮೊದಲ ಬಾರಿಗೆ ಒಬ್ಬ ಪಾದ್ರಿಯು ಲೈಂಗಿಕ ಶೋಷಣೆಯ ಅಪರಾಧಿಯೆಂದು ಕಂಡುಬಂದು, ಆತನನ್ನು ಪಾದ್ರಿ ಸ್ಥಾನದಿಂದ ವಜಾ ಮಾಡಲಾಗಿದೆ. ಈ ಪಾದ್ರಿಯು ಜೋಜೆಫ್ ವೆಸೊಲೊವಸ್ಕೀ. ಜೊಜೆಫ್ ಡೊಮಿನಿಕ್ ಗಣರಾಜ್ಯದಲ್ಲಿ ವ್ಯಾಟಿಕನ್ನಿನ ಡೊಮಿನಿಕ್ ಗಣರಾಜ್ಯದಲ್ಲಿ ವ್ಯಾಟಿಕನ್ನಿನ ರಾಜದೂತರಾಗಿದ್ದರು. ಡೊಮಿನಿಕ್ ಗಣರಾಜ್ಯದಲ್ಲಿ ಸೈಂಟೋ ಡೊಮಿಂಗೋದ ಕೊಳೆಗೇರಿಯಲ್ಲಿ ಕೆಲವು ಮಕ್ಕಳ ಲೈಂಗಿಕ ಶೋಷಣೆ ಮಾಡಿದ್ದು ಆತನ ಮೇಲಿನ ಆರೋಪ. ಆರೋಪ ಹೊರಿಸಲ್ಪಟ್ಟ ಬಳಿಕ ಪೋಪ್‌ರು ಅವರನ್ನು ಕಳೆದ ವರ್ಷ ವ್ಯಾಟಿಕನ್ನಿಗೆ ವಾಪಸು ಕರೆಸಿಕೊಂಡಿದ್ದರು. ವ್ಯಾಟಿಕನ್ನಿನ ಒಂದು ತನಿಖಾ ಸಮಿತಿಯು ಈ […]

ವ್ಯಾಟಿಕನ್‍ಲ್ಲೊಂದು ವಿಷ್ಣು ದೇವಾಲಯ

ವ್ಯಾಟಿಕನ್‍ಲ್ಲೊಂದು ವಿಷ್ಣು ದೇವಾಲಯ

ಸುದ್ದಿಗಳು - 0 Comment
Issue Date : 09.07.2014

ವ್ಯಾಟಿಕನ್‌ನಲ್ಲಿರುವ 18ನೇ ಶತಮಾನದ ವಿಷ್ಣು ದೇವಾಲಯ ಹಿಂದು ಸಂಸ್ಕೃತಿಯ ಶ್ರೇಷ್ಠತೆಯನ್ನು ಸಂಕೇತಿಸುತ್ತದೆ. ವ್ಯಾಟಿಕನ್‌ನ ಮ್ಯೂಸಿಯಂ ಒಂದರಲ್ಲಿ ಹಿಂದು ಧರ್ಮದ ಪ್ರಾಚೀನತೆ, ಶ್ರೇಷ್ಠತೆಯನ್ನು ಬಿಂಬಿಸುವ ಹಲವಾರು ವಸ್ತುಗಳಿರುವುದು ಸಹ ಬೆಳಕಿಗೆ ಬಂದಿದೆ. 8 ರಿಂದ 14ನೇ ಶತಮಾನದ ನಡುವಿನ ಹಲವಾರು ವಿಗ್ರಹಗಳು ಈ ಮ್ಯೂಸಿಯಂನಲ್ಲಿವೆ. ವ್ಯಾಟಿಕನ್ನಿನ ಲೈಬ್ರೆರಿಗಳು ಸಹ ಸಾಕಷ್ಟು ಹಿಂದು ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಹೊಂದಿವೆ. ವೇದ, ಉಪನಿಷತ್, ಪುರಾಣ, ಮಹಾಭಾರತ, ರಾಮಾಯಣ, ಭಗವದ್ಗೀತೆ, ಪಂಚತಂತ್ರ, ಕೃಷ್ಣ, ಬ್ರಹ್ಮ, ಯೋಗ, ಶಕ್ತಿ, ಹಿಂದು ತತ್ವಶಾಸ್ತ್ರ ಮುಂತಾದ ಹಲವು […]

ಇಲ್ಲಿ ರಂಜಾನ್ ಉಪವಾಸ ನಿಷೇಧ

ಇಲ್ಲಿ ರಂಜಾನ್ ಉಪವಾಸ ನಿಷೇಧ

ಸುದ್ದಿಗಳು - 0 Comment
Issue Date : 08.07.2014

ಚೀನಾದ ಜಿಂಜಿಯಾಂಗ್‌ನ ಪ್ರದೇಶವೊಂದರಲ್ಲಿ ಇಂಥದೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳೀಯ ಸರ್ಕಾರೀ ಏಜೆನ್ಸಿಗಳು ಮತ್ತು ಶಾಲಾ-ಕಾಲೇಜಿನ ವೆಬ್‌ಸೈಟ್‌ಗಳಲ್ಲಿ ಈ ನಿಷೇಧದ ನಿರ್ಧಾರವನ್ನು ತಿಳಿಸಲಾಗಿದ್ದು ಅವಕ್ಕೆ ಸೂಕ್ತ ಕಾರಣಗಳನ್ನೂ ನೀಡಲಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಹದಗೆಡುತ್ತದಲ್ಲದೆ, ಅವರು ಎಲ್ಲ ಮಕ್ಕಳಂತೆ ಚಟುವಟಿಕೆಯಿಂದಿರುವುದಿಲ್ಲ. ಇದರಿಂದ ಒಂದೇ ತರಗತಿಯಲ್ಲಿ ಎರಡು ವರ್ಗ ತಯಾರಾಗುತ್ತದೆ. ಇಲ್ಲಿರುವ ಎಷ್ಟೋ ಮಕ್ಕಳಿಗೆ ರಂಜಾನ್ ಉಪವಾಸದ ಕಾರಣಗಳಾಗಲೀ, ಹಿನ್ನೆಲೆಯಾಗಲೀ ತಿಳಿದಿಲ್ಲವಾದರೂ ಮನೆಯವರ ಒತ್ತಾಯಕ್ಕಾಗಿ ಉಪವಾಸ ಕೈಗೊಳ್ಳುವುದನ್ನು ಕಾಣುತ್ತೇವೆ. ಇದು ನಿಜಕ್ಕೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ […]

ಇಸ್ಲಾಮಿಕರಣವೋ, ಸರ್ವನಾಶವೋ?!

ಇಸ್ಲಾಮಿಕರಣವೋ, ಸರ್ವನಾಶವೋ?!

ಸುದ್ದಿಗಳು - 0 Comment
Issue Date : 07.07.2014

ಲಷ್ಕರ್ ಇ ತೊಯ್ಬ ಮತ್ತು ಜಮ್ಮತ್ ಉದ್ ದಾವಾ ಭಯೋತ್ಪಾದಕ ಸಂಘಟನೆಗಳ ಉದ್ದೇಶ ನಿಜಕ್ಕೂ ಇಸ್ಲಾಮೀಕರಣವಾ ಅಥವಾ ಸರ್ವನಾಶವಾ ಎಂಬುದೊಂದು  ಅನುಮಾನ ಈ ಭಯೋತ್ಪಾಕ ಸಂಘಟನೆಗಳ ನಿಲುವನ್ನು ಕಂಡರೆ ಹುಟ್ಟಿಕೊಳ್ಳುತ್ತದೆ. ಇಸ್ಲಾಮೀಕರಣದ ಉದ್ದೇಶವನ್ನಿಟ್ಟುಕೊಂಡು ಹುಟ್ಟಿಕೊಂಡ ಈ ಎಲ್ಲ ಸಂಘಟನೆಗಳು ಇಂದು ಏನಾಗುತ್ತಿವೆ? 2008ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಅವರ ಗುರಿ ಇಸ್ಲಾಮೀಕರಣ ಮಾತ್ರವಲ್ಲ, ಅದರ ಹೆಸರಲ್ಲಿ ಸರ್ವನಾಶ ಎಂಬುದು ಇತ್ತೀಚೆಗೆ ದೃಢವಾಗಿದೆ.ಸಮೂಹ ಹತ್ಯೆಗಾಗಿ ಸಾಕಷ್ಟು ಅಪಾಯಕಾರೀ ಆಯುಧಗಳನ್ನು ನಿರ್ಮಿಸುತ್ತಿರುವ ಈ ಸಂಘಟನೆಗಳ ಪಾಲಿಗೆ ಜೀಹಾದೇ ಜೀವನ. […]