ಬಾಂಗ್ಲಾದಲ್ಲಿ  ಹಿಂದು ಬಾಲಕಿಯ ಅಪಹರಣ

ಬಾಂಗ್ಲಾದಲ್ಲಿ ಹಿಂದು ಬಾಲಕಿಯ ಅಪಹರಣ

ಸುದ್ದಿಗಳು - 0 Comment
Issue Date : 21.04.2014

ಇಷ್ಟು ದಿನ ಪಾಕಿಸ್ಥಾನದ ಪ್ರಮುಖ ಸಮಸ್ಯೆ ಎನ್ನಿಸಿದ್ದ ಹಿಂದು ಯುವತಿಯರ ಅಪಹರಣ, ಮತಾಂತರ, ಅತ್ಯಾಚಾರದಂಥ ಪ್ರಕರಣಗಳು ಇದೀಗ ಬಾಂಗ್ಲಾದೇಶವನ್ನೂ ವ್ಯಾಪಿಸಿವೆ. ಇಷ್ಟು ದಿನ ದೇವಾಲಯ ಧ್ವಂಸ, ಮನೆಗಳನ್ನು ನೆಲಸಮ ಮಾಡುವಲ್ಲಿ ನಿರತರಾಗಿದ್ದ ಜಿಹಾದಿಗಳು ಇದೀಗ ಹಿಂದು ಬಾಲಕಿಯರನ್ನು ಅಪಹರಣ ಮಾಡುವ ಹೊಸ ವರಸೆ ಶುರುಮಾಡಿದ್ದಾರೆ. ಯಾವುದೋ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ತೆರಳಿದ್ದ ಮಾಲೋತಿ ರಾಣಿ ಎಂಬ 13 ವರ್ಷದ ಬಾಲಕಿಯನ್ನು ಜಿಹಾದಿಗಳು ಅಪಹರಿಸಿದ್ದಾರೆ. ತಂದೆ ಜಗದೀಶ್ ಚಂದ್ರ ರಾಮ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ರತ್ನೈ […]

 ಕ್ಯಾಲಿಫೋರ್ನಿಯಾದಲ್ಲಿ  ಹಿಂದು ಪ್ರಾರ್ಥನೆ

ಕ್ಯಾಲಿಫೋರ್ನಿಯಾದಲ್ಲಿ ಹಿಂದು ಪ್ರಾರ್ಥನೆ

ಸುದ್ದಿಗಳು - 0 Comment
Issue Date : 21.04.2014

ಓಂ ಅಸತೋ ಮಾ ಸದ್ಗಮಯಾ… ತಮಸೋ ಮಾ ಜ್ಯೋತಿರ್ಗಮಯಾ… ಮೃತ್ಯೋರ್ಮಾ ಅಮೃತಂ ಗಮಯಾ… ಓಂ ಶಾಂತಿಃ ಶಾಂತಿಃ ಶಾಂತಿಃ… ಯುನಿವರ್ಸಲ್ ಸೊಸೈಟಿ ಆಫ್ ಹಿಂದುಇಸಂ ನ ಅಧ್ಯಕ್ಷ ರಾಜನ್ ಝೆಡ್ ಕಣ್ಮುಚ್ಚಿಕೊಂಡು ಪ್ರಾರ್ಥಿಸುತ್ತಿದ್ದರೆ ಕ್ಯಾಲಿಫೋರ್ನಿಯದ ನ್ಯೂಮನ್ ಸಿಟಿ ಕೌನ್ಸಿಲ್‌ನ 125ನೇ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ಜನರೆಲ್ಲ ಮಂತ್ರಮುಗ್ಧರಾಗಿ ಆಲಿಸುತ್ತಿದ್ದರು. ರಾಜನ್ ಕಣ್ಣು ತೆರೆದು, ಬೃಹದಾರಣ್ಯಕೋಪನಿಷತ್ತಿನ ಈ ಸಾಲುಗಳು… ಅಸತ್ಯದಿಂದ ಸತ್ಯದೆಡೆಗೆ, ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮರತ್ವದೆಡೆಗೆ ನನ್ನನ್ನು ನಡೆಸು ಎಂದು ಸರ್ವಶಕ್ತ ಭಗವಂತನನ್ನು ಬೇಡುವ ಅರ್ಥವನ್ನು […]

ಜಿಹಾದಿ ಭಯೋತ್ಪಾದಕರ ಕೈಯಲ್ಲಿ ಕಾಶ್ಮೀರಿ ಹಿಂದುಗಳು

ಜಿಹಾದಿ ಭಯೋತ್ಪಾದಕರ ಕೈಯಲ್ಲಿ ಕಾಶ್ಮೀರಿ ಹಿಂದುಗಳು

ಸುದ್ದಿಗಳು - 0 Comment
Issue Date : 21.04.2014

ಕಾಶ್ಮೀರದಲ್ಲಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಇಲ್ಲಿನ ಜನಸಂಖ್ಯೆಯ ಶೇ.97 ರಷ್ಟು ಜನರು ಮುಸ್ಲಿಮರಾದರೆ ಹಿಂದು ಮತ್ತು ಸಿಕ್ಖರ ಸಂಖ್ಯೆ ಕೇವಲ ಶೇ.2.5! ಬೌದ್ಧರೂ ಸಹ ತೀರಾ ಕಡಿಮೆ ಸಂಖ್ಯೆಯಲ್ಲೇ ಇದ್ದಾರೆ. ಕಾಶ್ಮೀರೀ ಪಂಡಿತರು ಬಹುಸಂಖ್ಯಾತ ಮುಸ್ಲಿಮರ ಮತ್ತು ಜಿಹಾದಿ ಭಯೋತ್ಪಾದಕರ ಭಯದಿಂದಾಗಿ ಸ್ವಂತ ನೆಲವನ್ನೇ ತೊರೆದು ದೇಶದ ವಿವಿಧ ಕಡೆಗಳಲ್ಲಿ ವಾಸವಾಗಿರುವುದು ನಿಜಕ್ಕೂ ಶೋಚನೀಯ ಸಂಗತಿ. ಈ ಕುರಿತಂತೆ ಸಾಪ್ತಾಹಿಕ ಚಿತ್ರಲೇಖ ಎಂಬ ನಿಯತಕಾಲಿಕವೊಂದು ಪ್ರಕಟಿಸಿದ ಲೇಖನ ಕಾಶ್ಮೀರಿ ಪಂಡಿತರ ದಯನೀಯ ಸ್ಥಿತಿಯನ್ನು ತೋರಿಸಿಕೊಡುತ್ತದೆ. […]

ಮಜಿದ್‌ಖಾನ್ ಧರಂದಾಸನಾದ ಕಥೆ

ಮಜಿದ್‌ಖಾನ್ ಧರಂದಾಸನಾದ ಕಥೆ

ಸುದ್ದಿಗಳು - 0 Comment
Issue Date : 14.04.2014

ದಕ್ಷಿಣ ಅಮೆರಿಕದ ಉತ್ತರದಲ್ಲಿರುವ ಎರಡು ಅವಳಿ ದ್ವೀಪ ದೇಶಗಳಾದ ಟ್ರಿನಿಡಾಡ್ ಮತ್ತು ಟೊಬ್ಯಾಗೊ ಗಣರಾಜ್ಯಗಳು ಹೆಚ್ಚು ಜನರಿಗೆ ಪರಿಚಯವಿರಲಿಕ್ಕಿಲ್ಲ. ಕ್ರೈಸ್ತ ಮತ್ತು ಮುಸ್ಲಿಂ ಮತಸ್ಥರೇ ಹೆಚ್ಚಿರುವ ಈ ಪ್ರದೇಶದಲ್ಲೆಲ್ಲ ಹಿಂದು ಧರ್ಮದ ಬಗ್ಗೆ ಪ್ರಚಾರವೇ ಇಲ್ಲವೆಂದರೂ ಸರಿಯೇ. ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಜಿದ್ ಖಾನ್ ಎಂಬ ಮುಸ್ಲಿಂ ವ್ಯಕ್ತಿಗೆ ಹಿಂದು ಧರ್ಮವೆಂದರೆ ಎಲ್ಲಿಲ್ಲದ ಸಂತಸ. ತಂದೆ ಮುಸ್ಲಿಮನಾಗಿದ್ದರೂ ತಾಯಿ ಮಾತ್ರ ಹಿಂದು. ಆದರೆ ಇಸ್ಲಾಮಿಗೆ ಮತಾಂತರವಾಗಿದ್ದ ತಾಯಿ ಮನೆಯಲ್ಲಿ ಯಾವ ಹಿಂದು ಧರ್ಮದ ಆಚರಣೆಯನ್ನೂ ಪಾಲಿಸುತ್ತಿರಲಿಲ್ಲ. ಏಕೆಂದರೆ […]

ದೇವರಿಗೂ ಬೆಂಕಿಕಾಟ!

ಸುದ್ದಿಗಳು - 0 Comment
Issue Date : 14.04.2014

ಬಾಂಗ್ಲಾದೇಶದ ಗೌರನದಿ ಉಪಜಿಲ್ಲೆಯ ಅಧುನಾ ಎಂಬ ಹಳ್ಳಿಯಲ್ಲಿ ಹಿಂದು ದೇವಾಲಯದ ಮೇಲೆ ದಾಳಿ ಮಾಡಿದ್ದಲ್ಲದೆ ಇಲ್ಲಿನ ಏಳು ವಿಗ್ರಹಗಳನ್ನು ಭಗ್ನಗೊಳಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಇದು ಜಿಹಾದ್‌ನ ಮತ್ತೊಂದು ರೂಪವೇ ಆಗಿದ್ದು, ಹಿಂದು ದೇವಾಲಯಗಳು ಎಲ್ಲೇ ಕಂಡರೂ ಅವನ್ನು ನಾಶಮಾಡುವಂಥ ಮನಸ್ಥಿತಿ ಇದೀಗ ಅಲ್ಲಿ ಉದ್ಭವವಾಗಿದೆ. ರಾತ್ರಿ ದೇವಾಲಯದ ಪೂಜೆ ಮುಗಿಸಿ ಹೋಗಿದ್ದ ಪೂಜಾರಿ ಬೆಳಗ್ಗೆ ದೇವಾಲಯಕ್ಕೆ ಆಗಮಿಸುವಷ್ಟರಲ್ಲಿ ದೇವಾಲಯದ 7 ವಿಗ್ರಹಗಳು ಭಗ್ನಗೊಂಡಿದ್ದವು. ಅಲ್ಲದೆ ದೇವಾಲಯವೂ ಸುಟ್ಟಂತಾಗಿತ್ತು. ಅಚ್ಚರಿಗೊಂಡ ಪೂಜಾರಿ ದೇವಾಲಯದ ಆಡಳಿತ ಮಂಡಳಿಗೆ ಸುದ್ದಿ […]

ಬೈಕು ಕಳ್ಳರು ಜಿಹಾದಿಗಳಾದ ಬಗೆ!

ಬೈಕು ಕಳ್ಳರು ಜಿಹಾದಿಗಳಾದ ಬಗೆ!

ಸುದ್ದಿಗಳು - 0 Comment
Issue Date : 14.04.2014

‘ನೀವು ಭಾರತದ ಉತ್ತರ ಪ್ರದೇಶಕ್ಕೆ ನೇಪಾಳದ ಮೂಲಕ ತೆರಳಿರಿ. ಅಲ್ಲಿ ನೀವು ಭಾರತೀಯ ಸೇನೆಯನ್ನು ಗುರಿಯಾಗಿಸಬೇಕು. ಅಲ್ಲಿನ ಸ್ಥಳೀಯ ಸ್ನೇಹಿತನೊಬ್ಬ ನಿಮಗೆ ಸಹಾಯ ಮಾಡುತ್ತಾನೆ. ಅದಕ್ಕೆ ನಿಮಗೆ ಎರಡು ಗಂಟೆ ಸಮಯ ಬೇಕಾಗಬಹುದು. ನಂತರ ನೀವು ಅದೇ ದಾರಿಯಲ್ಲಿ ಹಿಂತಿರುಗುವಾಗ ಕೆಲವು ಆಯುಧಗಳನ್ನು ಪಡೆದು ಬನ್ನಿ…’ ಈ ರೀತಿ ಸೂಚನೆ ನೀಡಿದ್ದು ಡೆನಿಯಲ್ ಎಂಬ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಉಗ್ರ. ಈತ ರಿಯಾಜ್ ಭಟ್ಕಳನ ಸಹಚರನೂ ಹೌದು. ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಬಂಧನಕ್ಕೊಳಗಾದ ಇಬ್ಬರು ಪಾಕಿಸ್ಥಾನಿ […]

ಸೂಫಿವಾದದ ಅನುಯಾಯಿಗಳ ಹತ್ಯೆ

ಸುದ್ದಿಗಳು - 0 Comment
Issue Date : 10.04.2014

ಪಾಕಿಸ್ಥಾನದ ಕರಾಚಿಯಲ್ಲಿ ಇತ್ತೀಚೆಗೆ ಕತ್ತನ್ನು ಸೀಳಿ ಹತ್ಯೆ ಮಾಡಲಾದ ಆರು ದೇಹಗಳು ಸಿಕ್ಕಿವೆ. ಈ ದೇಹಗಳನ್ನು ಬಟ್ಟೆಯಿಂದ ಸಂಪೂರ್ಣ ಮುಚ್ಚಲಾಗಿದ್ದು, ಸೂಫಿ ವಾದದ ಅನುಯಾಯಿ ಆಯುಬ್ ಶಾ ಬುಖಾರಿಯವರ ಮನೆಯ ಬಳಿಯೇ ಇವರ ಶವವನ್ನು ಇಡಲಾಗಿದೆ. ಈ ಆರು ಜನರೂ ಸೂಫಿ ವಾದದ ಅನುಯಾಯಿಗಳಾಗಿದ್ದರು ಎಂಬುದೇ ಇವರ ಹತ್ಯೆಗೆ ಕಾರಣ ಎಂಬುದು ಪೊಲೀಸರ ಅನುಮಾನವಾಗಿದೆ. ಈ ಕೃತ್ಯದ ಹಿಂದೆ ಮುಸ್ಲಿಂ ಮೂಲಭೂತವಾದಿಗಳ ಕೈವಾಡವಿರಬಹುದಾದರೂ ಅದು ಅನುಮಾನವಷ್ಟೇ. ನೈಜಕಾರಣಗಳೇನಿದ್ದರೂ ತನಿಖೆಯ ನಂತರ ಹೊರಬರಬೇಕಷ್ಟೇ. ಹತ್ಯೆಗೆ ಕಾರಣರಾದವರ್ಯಾರು ಎಂಬುದು ತಿಳಿಯದಿದ್ದರೂ, […]

ಪಾಕಿಸ್ಥಾನದಲ್ಲಿ ಹಿಂದು ಆಶ್ರಮದ ಮೇಲೆ ದಾಳಿ

ಸುದ್ದಿಗಳು - 0 Comment
Issue Date : 10.04.2014

ಇಲ್ಲಿನ ಸಿಂಧ್ ಪ್ರಾಂತದಲ್ಲಿರುವ ಹಿಂದು ಆಶ್ರಮದ ಮೇಲೆ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ್ದಲ್ಲದೆ, ಆಶ್ರಮವನ್ನು ನಾಶ ಮಾಡಲು ಪ್ರಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಅಷ್ಟೇ ಅಲ್ಲದೆ, ಆಶ್ರಮದಲ್ಲಿದ್ದ ತ್ರಿಶೂಲವನ್ನು ಸಹ ಕದ್ದಿದ್ದಾರೆಂಬುದು ಆಶ್ರಮ ನಿವಾಸಿಗಳ ದೂರು. ಹಿಂದುಗಳು ಬಹುಸಂಖ್ಯೆ ಯಲ್ಲಿರುವ ಈ ಪ್ರದೇಶದಲ್ಲಿನ ಆಶ್ರಮವೊಂದು ಎಲ್ಲ ಹಿಂದುಗಳ ಶ್ರದ್ಧೆಯ ಕೇಂದ್ರ. ಹಿಂದುಗಳ ಒಗ್ಗಟ್ಟನ್ನು ಸಹಿಸದ ಯಾವುದೋ ಕಿಡಿಗೇಡಿಗಳು ಮಾಡಿದ ಕೆಲಸವಿದು ಎಂದು ಅನುಮಾನಿಸಲಾಗಿದೆ. ಈ ಘಟನೆಯನ್ನು ವಿರೋಧಿಸಿ ಸಿಂಧ್ ಪ್ರಾಂತ ಮತ್ತು ಸುತ್ತ ಮುತ್ತಲಿನ ಎಲ್ಲ ಹಿಂದು […]

ಮತ್ತೊಂದು ಹಿಂದು ದೇವಾಲಯಕ್ಕೆ ಬೆಂಕಿ

ಸುದ್ದಿಗಳು - 0 Comment
Issue Date : 10.04.2014

ಪಾಕಿಸ್ಥಾನದ ಹೈದರಾಬಾದಿನಲ್ಲಿ ಹನುಮಂತನ ದೇವಾಲಯವೊಂದಕ್ಕೆ ಮೂವರು ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟ ಘಟನೆ ಇತ್ತೀಚೆಗೆ ನಡೆದಿದೆ. ಸುಮಾರು ಬೆಳಗ್ಗೆ 7 ಗಂಟೆಯ ಸಮಯಕ್ಕೆ ದೇವಾಲಯಕ್ಕೆ ಬಂದ ಮೂವರು ಕಿಡಿಗೇಡಿಗಳಲ್ಲಿ ಒಬ್ಬ ಎರಡು ನಿಮಿಷಗಳ ಕಾಲ ದೇವರನ್ನು ಪ್ರಾರ್ಥಿಸಿದ ನಾಟಕ ಮಾಡಿ ನಂತರ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾನೆಂಬುದು ಪ್ರತ್ಯಕ್ಷದರ್ಶಿಗಳ ಮಾತು.ಬೆಂಕಿ ಹಚ್ಚುವ ಮೊದಲು ಹನುಮಂತನ ವಿಗ್ರಹವನ್ನು ಧ್ವಂಸ ಮಾಡಿದ್ದಲ್ಲದೆ, ಈ ಕೃತ್ಯವನ್ನು ಎಸಗಿದ್ದು ಯಾರೆಂಬುದು ಇಂದಿಗೂ ತಿಳಿದುಬಂದಿಲ್ಲ. ದೇವಸ್ಥಾನದ ಪೂಜೆಮಾಡುತ್ತಿದ್ದ ಐದು ವರ್ಷದ ಬಾಲಕ ದರ್ಶನ್ ಹೇಳುವ ಮಾತು […]

ಒಂಭತ್ತು ವರ್ಷಕ್ಕೇ ಮದುವೆ ಮಾಡಬಹುದು!

ಒಂಭತ್ತು ವರ್ಷಕ್ಕೇ ಮದುವೆ ಮಾಡಬಹುದು!

ಸುದ್ದಿಗಳು - 0 Comment
Issue Date : 17.03.2014

ಇತ್ತೀಚೆಗೆ ಇರಾಕಿನ ಬಾಗ್ದಾದ್‌ನ ಹಲವು ಮಹಿಳೆಯರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಕಾರಣ… ಇಲ್ಲಿನ ಸಚಿವಾಲಯವೇ ಒಂಭತ್ತು ವರ್ಷದ ಹೆಣ್ಣುಮಕ್ಕಳು ವಿವಾಹಕ್ಕೆ ಯೋಗ್ಯರು ಎಂಬ ಹೊಸ ಕಾಯಿದೆಯ ಕರಡೊಂದನ್ನು ಸಂಸತ್ತಿಗೆ ನೀಡಿದ್ದು! ಇದರ ಪ್ರಕಾರ ಹೆಣ್ಣು ಮಕ್ಕಳಿಗೆ ಒಂಭತ್ತು ವರ್ಷ ತುಂಬುತ್ತಿದ್ದಂತೆಯೇ ಅವರನ್ನು ಮದುವೆ ಮಾಡಬಹುದು. ಮತ್ತು ವರನಿಗೆ ವಯಸ್ಸಿನ ಇತಿಮಿತಿಯಿಲ್ಲ! ನಲವತ್ತಾದರೂ ಸರಿಯೇ, ಅರವತ್ತಾದರೂ ಸರಿಯೇ!ಆಟವಾಡುತ್ತಾ ಬಾಲ್ಯ ಕಳೆಯಬೇಕಾದ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಮದುವೆಗೆ ತಳ್ಳಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಈ ಕಾಯಿದೆಯ ವಿರುದ್ಧ […]