ಗುಜರಾತಿನಲ್ಲಿ ಗೋ ರಕ್ಷಣೆಗಾಗಿ ಗೋ ಧಾಮ

ಗುಜರಾತಿನಲ್ಲಿ ಗೋ ರಕ್ಷಣೆಗಾಗಿ ಗೋ ಧಾಮ

ಗ್ರಾಮೀಣ - 0 Comment
Issue Date : 17.12.2013

ಅನಾದಿ ಕಾಲದಿಂದಲೂ ಮಾನವನು ಗೋವುಗಳೊಡನೆ ಸಹಬಾಳ್ವೆ ನಡೆಸಿದ್ದಾನೆ ಮಾತ್ರವಲ್ಲದೇ ಗೋವಿನಿಂದ ಪಡೆಯುವ ಉತ್ಪನ್ನ, ಉಪಯೋಗಗಳನ್ನು ಮನಗಂಡು ಗೋವಿಗೆ ಪೂಜ್ಯನೀಯ ಸ್ಥಾನ ನೀಡಿದ್ದಾನೆ. ಆದರೆ ಇಂದು ನಗರೀಕರಣದ ಪರಿಣಾಮವಾಗಿ ಲಕ್ಷ- ಲಕ್ಷ ಗೋವುಗಳು ಕಾಸಾಯಿಕಾನೆಯನ್ನು ಸೇರುತ್ತಿವೆ. ದುರಂತವೆಂದರೆ ಗೋವಿನ ಹಾಲು ಉತ್ಪನ್ನಗಳನ್ನು ಸವಿಯುವ ನಾವು ನಮ್ಮ ತಾಯಿಯಂತಹ ಗೋವಿನ ಸಂರಕ್ಷಣೆ ಮತ್ತು ಸಂವರ್ಧನೆಯ ಬಗ್ಗೆ ಜಾಗೃತರಾಗಬೇಕು. ಗೋ ಆಧಾರಿತ ಆರ್ಥಿಕತೆ ಉತ್ತೇಜಿಸುವ ಸಲುವಾಗಿ ಗೋವುಗಳಿಗಾಗಿ ಮೀಸಲಿಟ್ಟ ಧಾಮವೊಂದನ್ನು ನಿರ್ಮಿಸಲು ಗುಜರಾತ್ ಸರ್ಕಾರ ಚಿಂತನೆ ನಡೆಸಿದೆ.  ಗಾಂಧೀಜಿ ಅವರ ಜನ್ಮಸ್ಥಳವಾದ […]

ಮಳೆ ಮಾಪನ ಕೇಂದ್ರ

ಗ್ರಾಮೀಣ - 0 Comment
Issue Date : 13.12.2013

ರೈತರಿಗೆ, ಜನಸಾಮಾನ್ಯರಿಗೆ ಗ್ರಾಮಗಳ ಮಟ್ಟದಲ್ಲಿಯೇ ಮಳೆ ಮಾಹಿತಿ ಒದಗಿಸಲು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಮಳೆ ಮಾಪನ ಕೇಂದ್ರ ಅಳವಡಿಸುತ್ತಿದೆ.  ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿ ನೀಡುವ ಮಳೆ ಮಾಪನ ಯಂತ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಕೆಲವು ದಿನಗಳಲ್ಲೇ ರಾಜ್ಯದ ಯಾವುದೇ ಭಾಗದ ಜನ ತಾವಿರುವ ಜಾಗದಲ್ಲಿಯೇ ಕುಳಿತು ತಮ್ಮ ಗ್ರಾಮದ ಮಳೆ ಸ್ಥಿತಿಗತಿ ಕುರಿತು ಮಾಹಿತಿ ಪಡೆಯಬಹುದು. ಹಾವೇರಿ, ಕೊಪ್ಪಳ, ಚಿತ್ರದುರ್ಗ, ಗುಲ್ಬರ್ಗ ಮತ್ತು ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯ ಎಲ್ಲ […]

ಹನಿಹನಿಗೂಡಿದರೆ ಹಳ್ಳ

ಗ್ರಾಮೀಣ - 0 Comment
Issue Date : 03.12.2013

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮುಕ್ತಿ ಹರಿಹರಪುರ ಗ್ರಾಮದಲ್ಲಿ ಕೃಷಿಯನ್ನೇ ಅವಲಂಬಿಸಿರುವ ಹೆಚ್ಚಿನ ಜನ ಸರ್ಕಾರದ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನಗಳಿಗೆ ಆಕರ್ಷಣೆಗೊಳಗಾಗದೆ ಸುತ್ತಲಿನ 25 ಹಳ್ಳಿಗಳು ಒಟ್ಟುಗೂಡಿ ತಮ್ಮ ಶಕ್ತ್ಯಾನುಸಾರ ಸ್ವಯಂ ಗ್ರಾಮೀಣಾಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿರುತ್ತಾರೆ.  ತಾವು ಉಳಿಸಿರುವ ಒಂದು ರೂಪಾಯಿಗಳಿಂದಲೇ ಅಭಿವೃದ್ಧಿ ಕೈಗೊಂಡು, ವಿವಿದೋದ್ದೇಶ ಸಹಕಾರಿ ಸಂಘ ಸ್ಥಾಪಿಸಿ ಯಶಸ್ಸಿನ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಹನಿಹನಿಗೂಡಿದರೆ ಹಳ್ಳ ಎಂಬ ಗಾದೆಯನ್ನು ಸಾಬೀತುಪಡಿಸಿ ತೋರಿಸಿರುವ ಈ ಗ್ರಾಮದ ಜನತೆ ದಿನಂಪ್ರತಿ ತಾವು ದುಡಿದಿದ್ದರಲ್ಲಿ ಒಂದು ರೂಪಾಯಿ ಉಳಿತಾಯದ […]

ಗೋರಕ್ಷಣೆ

ಗ್ರಾಮೀಣ - 0 Comment
Issue Date : 14.11.2013

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಎಂಬ ಪುಟ್ಟ ಗ್ರಾಮದ ಗಂಥಡೆ ಕುಟುಂಬದಲ್ಲಿ ಸ್ವಾತಂತ್ರ್ಯ ಹೋರಟಗಾರರಾದ ರಾಮಚಂದ್ರ ಗಂಥಡೆ ಅವರು ಸ್ವಾತಂತ್ರ್ಯ ಪೂರ್ವದ ಒಂದು ದಿನ ರಸ್ತೆಯಲ್ಲಿ ಓಡಾಡುತ್ತಿದ್ದಾಗ ಕಟುಕನೋರ್ವನು ಒಂದು ಆಕಳನ್ನು ಕಸಾಯಿ ಖಾನೆಗೆ ಒಯ್ಯುತ್ತಿದ್ದುದನ್ನು ಕಂಡರು.  ಇದರಿಂದ ಮನನೊಂದ ರಾಮಚಂದ್ರ ಅವರು ಆ ಆಕಳನ್ನು ಖರೀದಿಸುವ ಮನಸ್ಸು ಮಾಡಿದರು.  ಆಗಿನ ಕಾಲಕ್ಕೆ ಕಟುಕರು ಆಕಳಿಗೆ ಕೇಳಿದ ರೂ.10 ಬೆಲೆ ಜೊತೆ ರೂ. 2 ಸೇರಿಸಿ ಕೊಟ್ಟು ಖರೀದಿಸಿದರು.   ರಾಮಚಂದ್ರ ಅವರ  ಮನೆಯಲ್ಲಿ ಆ ಆಕಳು […]