ವಿಜಯದ ಸಂಕಲ್ಪದ ದಿವಸ  ವಿಜಯದಶಮಿ

ವಿಜಯದ ಸಂಕಲ್ಪದ ದಿವಸ ವಿಜಯದಶಮಿ

ಹಬ್ಬಗಳು - 0 Comment
Issue Date : 25.09.2014

ಭಾರತ ಉತ್ಸವಗಳ ದೇಶ. ಈ ಉತ್ಸವಗಳಿಂದ ಉತ್ಸಾಹ-ಉಲ್ಲಾಸಗಳ ವಾತಾವರಣ ಮೂಡಿ ಬರುತ್ತದೆ. ಕಾಲಕಾಲಕ್ಕೂ ನಡೆಯುವ ಉತ್ಸವಗಳು ಸಮಾಜ ಜೀವನದಲ್ಲಿ ಶ್ರೇಷ್ಠ ಗುಣಗಳ ವಿಕಾಸ ಹಾಗೂ ಸಮತೆ ಮತ್ತು ಸಾಮರಸ್ಯದ ಸಂಸ್ಕಾರಗಳನ್ನು ಮೂಡಿಸುತ್ತವೆ, ಸಮಾಜ ಜೀವನವನ್ನು ಉಲ್ಲಾಸಮಯಗೊಳಿಸುತ್ತವೆ. ಉತ್ಸವಗಳಿಂದ ಮನಸ್ಸು, ಆತ್ಮ ಮತ್ತು ಶರೀರ ಎಲ್ಲವೂ ಉಲ್ಲಾಸಗೊಳ್ಳುತ್ತವೆ. ಉತ್ಸವವನ್ನು ‘ಪರ್ವ‘ ಎಂದೂ ಹೇಳುತ್ತಾರೆ. ‘ಪರ್ವ‘ ಶಬ್ದದ ಅರ್ಥ, ಪೂರ್ಣಗೊಳಿಸುವುದು. ಜೀವನದಲ್ಲಿ ಅಪೂರ್ಣತೆ ಗೋಚರಿಸಿದಲ್ಲಿ ಅದನ್ನು ಪೂರ್ಣಗೊಳಿಸುವುದು ಪರ್ವದ ಉದ್ದೇಶ. ಉತ್ಸವಗಳಲ್ಲಿ ನಮ್ಮ ರಾಷ್ಟ್ರದ ತ್ಯಾಗಿ, ಹುತಾತ್ಮ ಮಹಾಪುರುಷರ ಅನೇಕ […]

ವಿಜಯದಶಮಿ

ಹಬ್ಬಗಳು - 0 Comment
Issue Date : 28.07.2014

 ದಕ್ಷಿಣ ಭಾರತದಲ್ಲಿ  ಹಿಂದೂಗಳು  ಆಚರಿಸುವ  ಹಬ್ಬಗಳಲ್ಲೆಲ್ಲ ದೊಡ್ಡ ಹಬ್ಬ ನವರಾತ್ರಿ. ಇದು ಸಂವತ್ಸರದಲ್ಲೆಲ್ಲ ಬಹು ಪ್ರಶಾಂತವಾದ ಹವೆಯಿಂದ ಕೂಡಿದ ಶರದೃತುವಿನಲ್ಲಿ ಬರುವುದು. ಆ ವೇಳೆಗೆ ಗ್ರೀಷ್ಮ ವರ್ಷಾ ಕಾಲಗಳು  ಕಳೆದು, ಪ್ರಕೃತಿಯು ಆನಂದಮಯವಾಗಿರುವುದು. ವಿಶೇಷವಾದ ಬಿಸಿಲಿನ ಬೇಗೆಯಾಗಲೀ, ಅತಿರೇಕವಾದ ಮಳೆಗಾಳಿಗಳಾಗಲೀ ಇಲ್ಲದೆ  ಹವೆಯು  ತಂಪಾಗಿ ಆಹ್ಲಾದಕರವಾಗಿರುವುದು. ಹೊರಗಿನ ಈ ವಾತಾವರಣದೊಂದಿಗೆ ಸಹ ಮೇಳಗೊಳ್ಳುವಂತೆ ಈ ವೇಳೆಗೆ ಭೂಮಿಯಲ್ಲಿ ಪೈರು ಪಚ್ಚೆಗಳೂ ಬೆಳೆದು ನಿಂತು, ಮನುಷ್ಯನ ಮನಸ್ಸಿಗೂ ಶಾಂತತೆ, ಸಮಾಧಾನ, ಭರವಸೆಗಳನ್ನು  ನೀಡುವಂತಿರುವುದು, ಇಂತಹ ಸುಸಂದರ್ಭದಲ್ಲಿ ಬಂದದೊಗುವ ಹಬ್ಬವು […]

ವಕ್ರತುಂಡ ಮಹಾಕಾಯ ಬಂದ...

ವಕ್ರತುಂಡ ಮಹಾಕಾಯ ಬಂದ…

ಹಬ್ಬಗಳು - 0 Comment
Issue Date : 29.08.2014

ಅಜ್ಞಾತ ಜಾನಪದ ಕವಿಯಿಂದ ಪ್ರಖ್ಯಾತ ಕವಿಗಳವರೆಗೂ, ಬೀಸುಕಲ್ಲಿನೆದುರು ಕೂತ ಹಳ್ಳಿಯ ಹೆಂಗಳೆಯರಿಂದ ಕಾಸು-ಕನಕದ ಕಾರುಬಾರು ನಡೆಸುವವರವರೆಗೂ ಗಣಪತಿಯನ್ನು ನೆನೆಯದವರೇ ಇಲ್ಲ. ವಿನಾಯಕನ ವಂದನೆಗೆ ಇಂಥದೇ ಸಮಯವೆಂದೇನೂ ಇಟ್ಟುಕೊಳ್ಳಲಿಲ್ಲ ನಮ್ಮ ಜನ. ಆತನಿಗೆ ಮನದಲ್ಲೇ ನಮಿಸುವರು ಕೆಲವರಾದರೆ ಮೂರ್ತಿಯೆದುರು ಮುಜುರೆ ಸಲ್ಲಿಸುವವರು ಹಲವರು. ಆತನನ್ನು ‘ಬೆನಕ’ ಎಂದರು. ಅಡಿಕೆ ಬೆಟ್ಟದಲ್ಲಿ ಆತನನ್ನು ಕಂಡರು. ಯಾವುದೇ ಮಂಗಳಕಾರ್ಯದ ಮುನ್ನ ಗಣಪನನ್ನು ಪೂಜಿಸುವ ರೂಢಿ ಬೆಳೆದು ಬಂತು. ಮಹಾವಿಷ್ಣುವಿನದು ದಶಾವತಾರ, ಪರಶಿವನದು ರುದ್ರಾವತಾರವಾದರೆ ……. ಗಣೇಶನದು ಅಗಣಿತ, ಅಸಂಖ್ಯಾತ ಅವತಾರಗಳು. ಪಿಳ್ಳಾರತಿಯಿಂದ […]

ಕೃಷ್ಣ ಜನ್ಮಾಷ್ಟಮಿ

ಹಬ್ಬಗಳು - 0 Comment
Issue Date :

ಭಾರತದಲ್ಲಿ  ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ, ಕಾರಾಗೃಹದಲ್ಲಿ ಕೃಷ್ಣ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.  ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ಅವನನ್ನು ಸೋದರಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯಲಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ, ಯಶೋಧೆ ಅವನನ್ನು ಸಾಕಿ ಬೆಳೆಸಿದ ತಾಯಿ. ಕೃಷ್ಣಾಷ್ಟಮಿಯ ದಿನದಂದು, ಮನೆ […]

ರಕ್ಷಾ ಬಂಧನ

ರಕ್ಷಾ ಬಂಧನ

ಹಬ್ಬಗಳು - 0 Comment
Issue Date : 10.08.2014

ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಉಪಾಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ.  ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ತನ್ನ ಸೋದರನ ಅಭಿವೃದ್ಧಿಗೆ, ನೆಮ್ಮದಿಗೆ ಹಾರೈಸುವ ಅಕ್ಕ- ತಂಗಿಯರು ತಮ್ಮ ಅಣ್ಣತಮ್ಮಂದಿರಿಗೆ ರಾಖಿ ಕಟ್ಟಿ, ಸಿಹಿ ವಿನಿಮಯ ಮಾಡಿಕೊಂಡು, ಉಡುಗೊರೆ ಪಡೆದು ಸಂತಸಪಡುವ  ಹಬ್ಬ  ರಕ್ಷಾ ಬಂಧನ. […]

ನಾಗರ ಪಂಚಮಿ

ನಾಗರ ಪಂಚಮಿ

ಹಬ್ಬಗಳು - 0 Comment
Issue Date : 01.08.2014

ನಾಗರ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು  ಶ‍್ರಾವಣ  ಮಾಸದ ಶುಕ್ಲಪಕ್ಷದ  ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು, ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ  ದೇವಸ್ಥಾನ  ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ. ನಾಗ ಪಂಚಮಿ ಕಥೆ ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ […]

ಶ್ರೀರಾಮನವಮಿ

ಶ್ರೀರಾಮನವಮಿ

ಹಬ್ಬಗಳು - 0 Comment
Issue Date : 08.04.2014

ಇತಿಹಾಸ ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುಷ್ಯ ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.  ಮಹತ್ವ ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ಶ್ರೀರಾಮತತ್ತ್ವವು ಎಂದಿಗಿಂತ 1,000 ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಗೆ ‘ಶ್ರೀರಾಮ ಜಯ ರಾಮ ಜಯ ಜಯ ರಾಮ|’ ನಾಮಜಪ, ಹಾಗೆಯೇ ಶ್ರೀರಾಮನ ಇತರ […]

ಸಂಭ್ರಮ ಸಡಗರದ ಸಂಕ್ರಾಂತಿ

ಸಂಭ್ರಮ ಸಡಗರದ ಸಂಕ್ರಾಂತಿ

ಹಬ್ಬಗಳು - 1 Comment
Issue Date : 14.01.2014

ಕ್ಯಾಲೆಂಡರ್ ಹೊಸ ವರ್ಷದ ಆರಂಭದಲ್ಲಿ ಬರುವ ಸಂಕ್ರಾಂತಿ ಹಿಂದುಗಳಿಗೆಲ್ಲ ಒಂದು ವಿಶಿಷ್ಟವಾದ ಹಬ್ಬ, ಸೂರ್ಯನಿಗೆ ಸಂಬಂಧಪಟ್ಟ ಈ ಹಬ್ಬವು ಸೂರ್ಯನ ಪಥಚಲನೆಯ ಹಾಗೂ ಅವನ ಪರಿವರ್ತನೆಯ ಕಾಲವೂ ಹೌದು.ಸೂರ್ಯನು ಒಂದೊಂದು ತಿಂಗಳು ಒಂದೊಂದು ರಾಶಿ ಪ್ರವೇಶಿಸುತ್ತಾನೆ. ಹಾಗೇ ಪ್ರವೇಶಿಸುವುದನ್ನೇ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆಯುವುದು. ಈ ರೀತಿಯಂತೆ ನಮಗೆ ವರ್ಷಕ್ಕೆ 12 ಸಂಕ್ರಾಂತಿಗಳು. ಆದರೆ ಸೂರ್ಯನು ಮಕರ ರಾಶಿಯಲ್ಲಿ ಸೇರ್ಪಡೆಯಾದಾಗ ಬರುವ ‘ಮಕರ ಸಂಕ್ರಾಂತಿ’ ಮಾತ್ರ ಪ್ರತ್ಯೇಕತೆ ಹೊಂದಲು ಆಗಿನಿಂದಲೇ ‘ಉತ್ತರಾಯಣ ಪುಣ್ಯಕಾಲ’ ಆರಂಭವಾಗುವುದು ಮುಖ್ಯ […]

ವೈಕುಂಠ ಏಕಾದಶಿ

ವೈಕುಂಠ ಏಕಾದಶಿ

ಹಬ್ಬಗಳು - 0 Comment
Issue Date : 11.01.2014

ವೈಕುಂಠ ಏಕಾದಶಿ, ಮುಕ್ಕೋಟಿ ದ್ವಾದಶಿ, ಶುಕ್ಲ ಪಕ್ಷ ಏಕಾದಶಿ ಧರ್ನುಮಾಸದಲ್ಲಿ ಬರುವ ಈ ದಿನ ವಿಷ್ಣುವಿನ ಆರಾಧಕರ ನಂಬಿಕೆಯಂತೆ ವೈಕುಂಠ ದ್ವಾರ ತೆರೆಯುವ ದಿನ ಎಂಬುದು ನಂಬಿಕೆ. ಮಾರ್ಗಶಿರ ಶುಕ್ಲ ಪಕ್ಷದ ಈ ಏಕಾದಶಿ `ಮೋಕ್ಷದ ಏಕಾದಶಿ’ ಎಂದೂ ಹೆಸರಾಗಿದೆ.  ‘ಏಕ’ ಶಬ್ದವು ಒಂದನ್ನು ಸೂಚಿಸುವುದಾದರೆ ‘ದಶ’ ಶಬ್ದವು ಹತ್ತನ್ನು ಸೂಚಿಸುವುದಾಗಿದೆ. ಒಟ್ಟಾರೆ ‘ಏಕಾದಶಿ’ ಶಬ್ದವು ಹನ್ನೊಂದನ್ನು ಸೂಚಿಸುವುದಾಗಿದೆ. ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು […]

ಹನುಮ ಜಯಂತಿ

ಹನುಮ ಜಯಂತಿ

ಧಾರ್ಮಿಕ ; ಹಬ್ಬಗಳು - 0 Comment
Issue Date : 14.12.2013

ಹನುಮ ಜಯಂತಿಯನ್ನು ಭಾರತ ದಾದ್ಯಂತ ವ್ಯಾಪಕವಾಗಿ ಗೌರವಿಸಲಾಗುವ ವಾನರ ದೇವತೆ ಹನುಮಂತನ ಜನ್ಮದ ಸ್ಮರಣಾರ್ಥ ಆಚರಿಸಲಾಗುತ್ತದೆ.  ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ಸ್ಥಿರವಾದ ಭಕ್ತಿಗಾಗಿ ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ, ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ. ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ […]